ಶಿಲ್ಪಕೆತ್ತನೆ, ಮರಕೆತ್ತನೆ ತರಬೇತಿಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಸೆ.24: ಶಿಲ್ಪಕೆತ್ತನೆ ಮತ್ತು ಮರಕೆತ್ತನೆ ವಿಭಾಗದಲ್ಲಿ ತರಬೇತಿ ನೀಡಲು ಸಪ್ತಗಿರಿ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆ ತಿಳಿಸಿದ್ದಾರೆ.
ನಿರುದ್ಯೋಗ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ನಿರುದ್ಯೋಗದಿಂದ ಪಾರಾಗಿ ಸ್ವಾವಲಂಬನ ಜೀವನ ನಡೆಸಲು ಅನುಕೂಲವಾಗುವಂತೆ ಸಂಸ್ಥೆ ವೃತ್ತಿ ತರಬೇತಿ ನೀಡಲು ಇಚ್ಛಿಸಿದೆ ಮತ್ತು ಹೊಯ್ಸಳ ಶಿಲ್ಪಿಕೇಂದ್ರದ ಶಿಲ್ಪಿ ವಿಶ್ವನಾಥ್, ಇವರಿಂದ ಮರಕೆತ್ತನೆ ವಿಭಾಗದಲ್ಲಿ ತರಬೇತಿ ನೀಡಲು ಮುಂದಾಗಿದ್ದು ಕಲಿಯಲಿಚ್ಚಿಸಿವ ಯುವಕ ಯುವತಿಯರು ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ 9ನೇ ತರಗತಿ ಅಂಕಪಟ್ಟಿಯ ನಾಲ್ಕು ಪ್ರತಿ ಮತ್ತು 7 ಭಾವಚಿತ್ರಗಳೊಂದಿಗೆ ಪೋನ್.ನಂ.9845279517, 8971803395, 9620855028 ನಂಬರ್ಗಳಿಗೆ ಸಂಪಕರ್ಿಸಲು ಕೋರಿದ್ದಾರೆ.
ರೈತರಿಗೆ, ಸ್ವಸಹಾಯ ಸಂಘಗಳಿಗೆ ಕೆ.ಸಿ.ಸಿ.ಅರಿವು ಕಾಯರ್ಾಗಾರ
ಚಿಕ್ಕನಾಯಕನಹಳ್ಳಿ,ಸೆ.24: ಬ್ಯಾಂಕುಗಳು ನೀಡುತ್ತಿರುವ ಸಾಲಸೌಲಭ್ಯ ಪಡೆದು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ರಿಯಾಯಿತಿ ಪಡೆಯಬೇಕೆಂದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಹೇಳಿದರು.
ತಾಲೂಕಿನ ಕಂದಿಕೆರೆ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಶಾಖೆಯ ಕಿಸಾನ್ ಕ್ರೆಡಿಟ್ ಕಾಡರ್್ ಅರಿವು ಮತ್ತು ಸಂಘಕ್ಕೆ ಸಾಲ ಸೌಲಭ್ಯದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರು ಸರಿಯಾಗಿ ಮರುಪಾವತಿ ಮಾಡುತ್ತಾರೋ ಅವರಿಗೆ ಬ್ಯಾಂಕ್ ವಿವಿಧ ಉದ್ದೇಶಗಳಿಗೆ ಎಲ್ಲಾ ತರಹದ ನೆರವು ನೀಡುವುದರಲ್ಲಿ ಸಂದೇಹವಿಲ್ಲ ಎಂದ ಅವರು, ಸ್ವಸಹಾಯ, ಸ್ತ್ರೀ ಶಕ್ತಿ ಸಂಘಗಳು ವ್ಯವಸಾಯದ ಜೊತೆಗೆ ಗುಡಿ ಕೈಗಾರಿಕೆ, ಕುಲ ಕಸುಬಿಗೆ ಸಾಲ ಪಡೆದು ಆಥರ್ಿಕವಾಗಿ ಮುಂದೆ ಬರಬೇಕೆಂದು ಹೇಳಿದರು.
ತಾ.ಪಂ.ಸದಸ್ಯ ಕಮಲಾನಾಯಕ್ ಮಾತನಾಡಿ ಬ್ಯಾಂಕುಗಳು ನೀಡುವ ಸಾಲ ಸೌಲಭ್ಯ ಪಡೆದು ಶೇ.100ರಷ್ಟು ಮರುಪಾವತಿ ಮಾಡಿರುವುದರಿಂದ ಅವರಿಗೆ ಯಾವುದೇ ಆಧಾರವಿಲ್ಲದೆ 5ಲಕ್ಷ ರೂಗಳನ್ನು ಬ್ಯಾಂಕ್ಗಳು ಸಾಲ ನೀಡುತ್ತೀವೆ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ಆರ್.ಎಮ್.ಕುಮಾರಸ್ವಾಮಿ ಕಿಸಾನ್ ಕ್ರೆಡಿಟ್ ಕಾಡ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ವಸಂತ್ಕುಮಾರ್, ಸದಸ್ಯೆ ಉಷಾ, ಸಿ.ಕೆ.ಜಿ.ಬಿ.ಕಂದೀಕೆರೆ ಶಾಖೆಯ ವ್ಯವಸ್ಥಾಪಕ ಆರ್.ಎಂ.ಕುಮಾರಸ್ವಾಮಿ, ಶ್ರೀ ಆಂಜನೇಯ ರೈತಕೂಟದ ಅಧ್ಯಕ್ಷ ಎಲ್.ಎಸ್. ಕುಮಾರಸ್ವಾಮಿ, ಮಹೇಶ್, ದಕ್ಷಿಣಾಮೂತರ್ಿ, ರಮೇಶ್, ಹರೀಶ್, ರಘು ಮುಂತಾದವರು ಉಪಸ್ಥಿತರಿದ್ದರು.
ಚಂದ್ರಕಲಾ ಪ್ರಾಥರ್ಿಸಿ, ರೇಖಾ ಸ್ವಾಗತಿಸಿ ತ್ರಿವೇಣಿ ನಿರೂಪಿಸಿದರು.
ಜಿಲ್ಲಾ ಮಟ್ಟದ ಥ್ರೋಬಾಲ್, ಬ್ಯಾಟ್ಮಿಟನ್ ವಿಜೇತರು
ಚಿಕ್ಕನಾಯಕನಹಳ್ಳಿ,ಸೆ.24: 2010-11ನೇ ಸಾಲಿನ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪೌಢಶಾಲೆಗಳ ಕ್ರೀಡಾಕೂಟದಲ್ಲಿ ವಿವಿಧ ತಾಲೂಕುಗಳ ಶಾಲೆಗಳು ಪ್ರಥಮ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿದೆ.
ಹಿ.ಪ್ರಾ.ಶಾಲೆಗಳ ಬಾಲಕರ ವಿಭಾಗದ ಥ್ರೋಬಾಲ್ನಲ್ಲಿ ತುಮಕೂರು ಪ್ರಥಮ ಸ್ಥಾನ, ಚಿ.ನಾ.ಹಳ್ಳಿ ದ್ವಿತೀಯ ಸ್ಥಾನ. ಹಿ.ಪ್ರಾ.ಶಾಲೆಗಳ ಬಾಲಕಿಯರ ಥ್ರೋಬಾಲ್ನಲ್ಲಿ ತುರುವೇಕೆರೆ ಪ್ರಥಮ ಸ್ಥಾನ, ಚಿ.ನಾ.ಹಳ್ಳಿ ದ್ವಿತೀಯ ಸ್ಥಾನ. ಪ್ರೌಡಶಾಲಾ ಮಟ್ಟದ ಬಾಲಕರ ಥ್ರೋಬಾಲ್ನಲ್ಲಿ ತಿಪಟೂರು ಪ್ರಥಮ ಸ್ಥಾನ, ಗುಬ್ಬಿ ದ್ವಿತೀಯ ಸ್ಥಾನ. ಬಾಲಕಿಯರ ವಿಭಾಗದಲ್ಲಿ ಚಿ.ನಾ.ಹಳ್ಳಿ ಪ್ರಥಮ ಸ್ಥಾನ, ತುರುವೇಕೆರೆ ದ್ವಿತೀಯ ಸ್ಥಾನ, ಬಾಲಕರ ಬಾಲ್ಬ್ಯಾಟ್ಮಿಟನ್ನಲ್ಲಿ ಚಿ.ನಾ.ಹಳ್ಳಿ ಪ್ರಥಮ ಸ್ಥಾನ, ತಿಪಟೂರು ದ್ವಿತೀಯ ಸ್ಥಾನ. ಬಾಲಕಿಯರ ವಿಭಾಗದಲ್ಲಿ ಚಿ.ನಾ.ಹಳ್ಳಿ ಪ್ರಥಮ ಸ್ಥಾನ, ತಿಪಟೂರು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿವೆ.
ನೂತನ ತಾ.ಸ.ಪ್ರಾ.ಶಿ.ಶಿ.ಸಂಘದ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಸೆ.23: ತಾಲೂಕು ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘ(ರಿ)ದ ಉದ್ಘಾಟನೆಯನ್ನು ಅ.3ರ ಭಾನುವಾರ ಬೆಳಿಗ್ಗೆ 10ಕ್ಕೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ಕನರ್ಾಟಕ ರಾಜ್ಯ ಸ.ಪ್ರಾ.ಶಾ.ಶಿ.ಶಿ.ಸಂಘದ ಅಧ್ಯಕ್ಷರಾದ ರಮಾದೇವಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷರಾದ ಬಿ.ಎಲ್.ಬಸವರಾಜು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನರ್ಾಟಕ ರಾಜ್ಯ ಸ.ಪ್ರಾ.ಶಾ.ಶಿ.ಶಿ.ಸಂಘದ ಕಾರ್ಯದಶರ್ಿ ಶಂಕರಮೂತರ್ಿ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ಗೋಪಿನಾಥ್, ಜಿ. ಮು. ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ರಾಜಯ್ಯ, ತಾ.ಸ.ಪ್ರಾ.ಶಾ.ಶಿ.ಶಿ.ಸಂಘದ ಗೌರವಾಧ್ಯಕ್ಷ ಎಂ.ಗಂಗಾಧರಯ್ಯ, ಉಪಾಧ್ಯಕ್ಷರಾದ ಆರ್.ಮಹದೇವಮ್ಮ ಉಪಸ್ಥಿತರಿರುವರು.
ವಿಶೇಷ ಆಹ್ವಾನಿತರಾಗಿ ತಾ.ಪ್ರಾ.ಶಾ.ಶಿ.ಸಂಘದ ಮಾಜಿ ಅಧ್ಯಕ್ಷರುಗಳಾದ ಎನ್.ಪಿ.ಕುಮಾರಸ್ವಾಮಿ, ರುಕ್ಮಾಂಗದ, ಪ್ರೌಢ ಶಾಲಾ ಮು.ಶಿ.ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಗೋವಿಂದರಾಜು, ಟಿ.ರಂಗದಾಸಪ್ಪ, ಮಾದಪ್ಪ ಉಪಸ್ಥಿತರಿರುವರು ಎಂದು ಸಂಘದ ಪ್ರಧಾನ ಕಾರ್ಯದಶರ್ಿ ಬಿ.ಜಿ.ವೆಂಕಟೇಶ್ ತಿಳಿಸಿದ್ದಾರೆ.
ಮೃತ ಗ್ರಾ.ಪಂ.ಸದಸ್ಯರುಗಳ ಕುಟುಂಬಕ್ಕೆ ಸಕರ್ಾರದ ನೆರವಿಗೆ ಮನವಿ
ಚಿಕ್ಕನಾಯಕನಹಳ್ಳಿ,ಸೆ.24: ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಮೂರೇ ತಿಂಗಳಲ್ಲಿ ನಾಲ್ಕು ಜನ ಗ್ರಾಮ ಪಂಚಾಯ್ತಿ ಸದಸ್ಯರುಗಳು ಮುಋತಪಟ್ಟಿದ್ದು ಅವರಿಗೆ ರಾಜ್ಯ ಸಕರ್ಾರ ಇವರ ಕುಟುಂಬಗಳೀಗೆ ತಲಾ ಒಂದು ಲಕ್ಷರೂಗಳನ್ನು ಪರಿಹಾರ ಧನವನ್ನು ನೀಡಿ ಅವರ ಆಥರ್ಿಕ ದುಸ್ಥಿತಿಯಿಂದ ಕಾಪಾಡಬೇಕೆಂದು ಗ್ರಾ.ಪಂ.ಸದಸ್ಯೆ ಬಿ.ಎನ್.ಶಶಿಕಲಾ ಕೋರಿದ್ದಾರೆ.
ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬೆಳಗುಲಿ ಗಾ. ಪ. ರವಿಶಂಕರ್, ಬರಗೂರು ಗ್ರಾ.ಪಂ.ಯ ಯು.ಟಿ ಬಸವರಾಜು, ದೊಡ್ಡರಾಂಪುರ ಗ್ರಾ.ಪಂ.ಯ ಗಿರೀಶ್ ಮತ್ತು ರಾಮನಹಳ್ಳಿ ಗ್ರಾ.ಪಂ. ನಾರಾಯಣ್ ಅಕಾಲಿಕ ಮರಣವನ್ನು ಅಪ್ಪಿದ್ದು ಗ್ರಾಮೀಣ ಪಂಚಾಯತ್ ರಾಜ್ಯ ಸಚಿವರು ಅಧಿವೇಶನದ ವೇಳೆ ಪಂಚಾಯ್ತಿ ಕಾಯ್ದೆಯಡಿ ದೊರಕಬಹುದಾದ ಸೌಲಭ್ಯಗಳನ್ನು ಅಮೈಂಡ್ಮೆಂಟ್ ಮೂಲಕ ಒದಗಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.