ಬೈಪಾಸ್ ರಸ್ತೆಗೆ ತೋಟದಲ್ಲಿ ಮಾಡುವುದಕ್ಕೆ ರೈತರ
ವಿರೋಧ
ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ರಾಷ್ಟ್ರೀಯ ಹೆದ್ದಾರಿ 150ಎ ಚಾಮರಾಜನಗರ-ಜೇವಗರ್ಿಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ನಿಮರ್ಿಸಲು ಮೇಲನಹಳ್ಳಿ ಬಳಿ ಸವರ್ೆ ಕಾರ್ಯ ನಡೆಸಲಾಯಿತು, ಈ ಸಮಯದಲ್ಲಿ ಆ ಭಾಗದ ರೈತರು ಸವರ್ೆಕಾರ್ಯಕ್ಕೆ ತಡೆಯೊಡ್ಡಿ ಚಿ.ನಾ.ಹಳ್ಳಿ ಪಟ್ಟಣದ ಮುಖಾಂತರವೇ ರಾಷ್ಟ್ರೀಯ ಹೆದ್ದಾರಿಯ ರಸ್ತೆ ನಿಮರ್ಿಸಲು ಆಗ್ರಹಿಸಿದರು.
ಬೆಂಗಳೂರಿನ ಇ.ಐ.ಟಿ ಟೆಕ್ನಾಲಜಿ ಕಂಪನಿಯ ಸವರ್ೆಯರ್ಗಳು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ನಕ್ಷೆ ತಯಾರಿಸಲು 9ಕಿ.ಮೀ ವ್ಯಾಪ್ತಿಯಲ್ಲಿ ಸವರ್ೆ ನಡೆಸಬೇಕು, ಈಗಾಗಲೇ ತಾಲ್ಲೂಕಿನ ತರಬೇನಹಳ್ಳಿ, ಕಾಡೇನಹಳ್ಳಿ, ಕೇದಿಗೆಹಳ್ಳಿ, ರಾಯಪ್ಪನಪಾಳ್ಯ ಹಾಗೂ ಆಲದಕಟ್ಟೆಯ ತಾಲ್ಲೂಕಿನ 8.ಕಿಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ಸವರ್ೆ ನಡೆಸಿದ್ದಾರೆ, ಅದೇ ರೀತಿ ಸೋಮವಾರ ಮೇಲನಹಳ್ಳಿಯ ಗ್ರಾಮದೊಳಗೆ ಸವರ್ೆ ಕಾರ್ಯ ಮಾಡುವಾಗ ಕೆಲವು ರೈತರು ಹಾಗೂ ಗ್ರಾಮಸ್ಥರು ಸವರ್ೆ ಕಾರ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ, ಗ್ರಾಮದೊಳಗಿನ ಮಾರ್ಗವನ್ನು ಬಿಟ್ಟು ಗ್ರಾಮದ ಹೊರಭಾಗದಲ್ಲಿನ ಮಾರ್ಗದಲ್ಲಿ ಮಂಗಳವಾರ ಪೋಲಿಸ್ ಬಂದೋಬಸ್ತ್ನಲ್ಲಿ ಸವರ್ೆ ಕಾರ್ಯ ನಡೆಸಿದರು ಇಲ್ಲಿಯೂ ರೈತರು ಅಡ್ಡಿಪಡಿಸಿದರು. ಪೊಲೀಸರ ನಿಗಾವಣೆಯಲ್ಲಿ ಸವರ್ೆಕಾರ್ಯ ನಡೆಸಿದರು.
ಮೇಲನಹಳ್ಳಿಯ ಗ್ರಾಮದೊಳಗೆ 150ಎ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಹಾದು ಹೋದರೆ ಜಮೀನುಗಳು, ತೋಟಗಳು, ಮನೆಗಳು ಕಳೆದುಕೊಳ್ಳುವ ಭೀತಿಯಲ್ಲಿ ಇರುವುದರಿಂದ ಸವರ್ೆ ಕಾರ್ಯ ಮಾಡಲು ಬಿಡುವುದಿಲ್ಲ ಎಂದು ಸೋಮವಾರ ಆಗ್ರಹಿದ್ದರು. ಮಂಗಳವಾರ ಮೇಲನಹಳ್ಳಿಯ ಬಳಿ ಇರುವ ಮೊರಾಜರ್ಿ ಶಾಲೆಯ ಹಿಂಭಾಗದ ಜಮೀನುಗಳಲ್ಲಿ ಸವರ್ೆ ಕಾರ್ಯ ಮಾಡಲು ಹೋದಾಗ ರೈತರು ವಿರೋಧ ವ್ಯಕ್ತಪಡಿಸಿದರು, ಪೋಲಿಸರ ನೆರವಿನೊಂದಿಗೆ ಸವರ್ೆ ಕಾರ್ಯ ಪ್ರಾರಂಭಿಸಿದರು.
ಒಂದು ವಾರದಿಂದ ಮೇಲನಹಳ್ಳಿ ಬಿಟ್ಟು ಉಳಿದ ಹಳ್ಳಿಗಳ ವ್ಯಾಪ್ತಿಯಲ್ಲಿ ಬರುವ 8.ಕಿ.ಮೀ ಸವರ್ೆ ಕಾರ್ಯ ನಡೆಸಲಾಗಿದೆ, ಮೇಲನಹಳ್ಳಿ ಭಾಗದಲ್ಲಿ ಎರಡು ರೀತಿಯ ಸವರ್ೆಯ ನಕ್ಷೆ ತಯಾರಿಸಿದ್ದು ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎನ್ನುತ್ತಾರೆ ಸವರ್ೆಯರ್ ಪುನಿತ್.
ತೋಟಗಳಲ್ಲಿ ಬೈಪಾಸ್ ರಸ್ತೆ ಮಾಡಲು ಗ್ರಾಮಸ್ಥರ ವಿರೋಧ :
ಗ್ರಾಮಸ್ಥ ರಮೇಶ್ ಮಾತನಾಡಿ, ಚಿಕ್ಕನಾಯಕನಹಳ್ಳಿ ಮೂಲಕ ರಸ್ತೆ ಕಾಮಗಾರಿ ಮಾಡಿದರೆ 2.ಕಿ.ಮೀನಲ್ಲಿ ರಸ್ತೆ ನಿಮರ್ಾಣ ಮಾಡಬಹುದು, ಬಸವನಗುಡಿ, ಕಾಡೇನಹಳ್ಳಿಯ ಮೂಲಕ ಬೈಪಾಸ್ ರಸ್ತೆ ನಿಮರ್ಾಣ ಮಾಡಿದರೆ 9.ಕಿ.ಮೀ ರಸ್ತೆ ಮಾಡಬೇಕಾಗುತ್ತದೆ ಇದರಿಂದ ಸಕರ್ಾರದ ಬೊಕ್ಕಸಕ್ಕೆ ನೂರಾರು ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ ಎಂದರು.
ಮಾರಸಂದ್ರದ ಸಂಗಮೇಶ್ ಮಾತನಾಡಿ, ನನಗೆ ನಾಲ್ಕು ಎಕರೆ ಜಮೀನು ಇದೆ ಇದರಲ್ಲಿ ಸಾವಿರ ಅಡಿಕೆ, 300ತೆಂಗಿನ ಗಿಡಗಳಿವೆ, ಲಕ್ಷಾಂತರ ರೂ ವೆಚ್ಚ ಮಾಡಿ ಕೊಳವೆ ಬಾವಿ ಕೊರೆಸಿದ್ದೇವೆ, ಇದೇ ನಮಗೆ ಜೀವನಕ್ಕೆ ಆಧಾರ, ಇರುವ ಅಲ್ಪಸ್ವಲ್ಪ ಜಮೀನನ್ನು ಸಕರ್ಾರ ವಶಪಡಿಸಿಕೊಂಡರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ, ಅಧಿಕಾರಿಗಳು ಇದೇ ರೀತಿ ಧೋರಣೆ ತಳೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೇಲನಹಳ್ಳಿಯ ದಯಾನಂದ್ ಮಾತನಾಡಿ, ಮೇಲನಹಳ್ಳಿಯ ಮೂಲಕ ಹಾದು ಹೋಗುವ 150ಎ ಬೈಪಾಸ್ ರಸ್ತೆಯಿಂದ ಈ ಭಾಗದಲ್ಲಿನ ಸಾವಿರಾರು ಎಕರೆ ತೆಂಗು, ಅಡಿಕೆ, ಬಾಳೆ, ಬೇವು, ಹುಣಸೇ, ಹಲಸು, ತೇಗ ಮುಂತಾದ ಗಿಡಗಳು ನಾಶವಾಗುತ್ತವೆ, ಇದರಿಂದ ಜೀವನ ನಿರ್ವಹಿಸಲು ತೋಟ, ಜಮೀನುಗಳಿವೆ ಇವುಗಳನ್ನು ಕಳೆದುಕೊಂಡರೆ ನಾವು ಪಟ್ಟಣಕ್ಕೆ ಗುಳೇ ಹೋಗುವ ಸ್ಥಿತಿ ಎದುರಾಗುತ್ತದೆ ಎಂದರು.