ಬನಶಂಕರಿ ದೇವಿಗೆ ವೀರಮಕ್ಕಳಿಂದ ವೀರಗಾರಿಕೆ ಪೂಜೆ ಸಲ್ಲಿಕೆ
ಚಿಕ್ಕನಾಯಕನಹಳ್ಳಿ,ಜೂ.26 : ಬನಶಂಕರಿ ದೇವಿಗೆ ವೀರಗಾರಿಕೆ ಸಮೇತ ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಪಟ್ಟಣದ ದೇವಾಂಗ ಬೀದಿಯಲ್ಲಿರುವ ಬನಶಂಕರಿ ದೇವಾಲಯದಲ್ಲಿ ಮೇ 9ರಂದು ಆರಂಭವಾದ ವೀರಗಾರಿಕೆ ಕಲಿಕೆಯು 48ದಿನಗಳ ಕಾಲ ನಡೆಯಿತು, ಕೊನೆಯ ದಿನವಾದ ಭಾನುವಾರ ನಡೆದ ವೀರಗಾರಿಕೆ ಎಲ್ಲರ ಮನಸೂರೆಗೊಂಡಿತು.
ಒಂದು ಮಂಡಲ ಕಾಲ ವೀರಗಾರಿಕೆಯನ್ನು ವೀರಮಕ್ಕಳು ಅಭ್ಯಾಸ ಮಾಡುತ್ತಿದ್ದರು, ಪ್ರತಿ ದಿನ ಮುಂಜಾನೆ 4.30ಕ್ಕೆ ಆರಂಭವಾಗುತ್ತಿದ್ದ ವೀರಗಾರಿಕೆ ಕಲಿಕೆಯು 6.30ರವರೆಗೆ ನಡೆಯುತ್ತಿತ್ತು,
ವೀರಗಾರಿಕೆ ಕಲಿತ ವೀರಮಕ್ಕಳು ಕೊನೆಯ ದಿವಸ ಗಂಗಾಪೂಜೆ ನಡೆಸಿ ದೇವಿಯನ್ನು ಉತ್ಸವದ ಮೂಲಕ ದೇವಾಲಯಕ್ಕೆ ಕರೆತಂದರು. ನಂತರ ದೇವಿಯನ್ನು ಹೊತ್ತ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದೇವಾಲಯದಲ್ಲಿ ಬನಶಂಕರಿ ದೇವಿಗೆ ವೀರಮಕ್ಕಳು ತಾವು ಕಲಿತ ವೀರಗಾರಿಕೆಯ ವಿದ್ಯೆಯನ್ನು ಬನಶಂಕರಿ ದೇವಿಗೆ ಅಪರ್ಿಸಿದರು. ದೇವಿಯ ರಥೋತ್ಸವವನ್ನು ಪ್ರಮುಖ ಬೀದಿಗಳಲ್ಲಿ ಎಳೆದು ದೇವಾಲಯಕ್ಕೆ ಪುನಃ ಕರೆತಂದರು. ನಂತರ ಬನಶಂಕರಿ ದೇವಿಗೆ ಎಲ್ಲಾ ರೀತಿಯ ಫಲಹಾರ ಸೇರಿದ ದೊಡ್ಡೆಡೆ ಸೇವೆ ಸಲ್ಲಿಸಿ ಆಗಮಿಸಿದ್ದ ಭಕ್ತರಿಗೆ ಫಲಹಾರ ವಿತರಿಸಲಾಯಿತು.
ವೀರ ಯೋಧರ ಸ್ಮಾರಕ ನಿಮರ್ಾಣ ಮಾಡಲು ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಜೂನ್26 : ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಮಂಗಳವಾರ ಸಂಜೆ 5.30ಕ್ಕೆ ಭಾರತೀಯ ವೀರ ಯೋಧರ(ಅಮರ್ ಜವಾನ್) ಸ್ಮಾರಕ ನಿಮರ್ಾಣ ಮಾಡಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಸಭೆಗೆ ಕಾರ್ಯನಿರತ ಯೋಧರು, ನಿವೃತ್ತ ಯೋಧರು, ಮತ್ತು ಆಸಕ್ತ ಸಾರ್ವಜನಿಕರು ಆಗಮಿಸಲು ಕೋರಿದ್ದು ತಮ್ಮ ಸಲಹೆ ಸೂಚನೆಯನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಮಿಲಿಟರಿ ಶಿವಣ್ಣ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೋ ಸಂಖ್ಯೆ. 9945617727, 9141672370, ಸಂಪಕರ್ಿಸಲು ಕೋರಿದೆ.
ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಒಳಪಡಿ
ಚಿಕ್ಕನಾಯಕನಹಳ್ಳಿ,ಜೂ.26 : ಮುಂಗಾರು ಹಂಗಾಮಿನ ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಹೋಬಳಿವಾರು ಬೆಳೆಗಳನ್ನು ನಿರ್ಧರಿಸಲಾಗಿದ್ದು ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿದರ್ೇಶಕ ಹೊನ್ನದಾಸೇಗೌಡ ತಿಳಿಸಿದ್ದಾರೆ.
ಯೋಜನೆಗೆ ಒಳಪಡುವ ಹೋಬಳಿವಾರು ಬೆಳೆಗಳ ವಿವರ ಕೆಳಕಂಡಂತಿದೆ.
ಕಸಬಾಹೋಬಳಿ : ಮಳೆಯಾಶ್ರಿತ ಜೋಳ, ರಾಗಿ, ಹುರುಳಿ, ಹೆಸರು, ಅರಳು ಮತ್ತು ಅವರೆ
ಹಂದನಕೆರೆ : ಮಳೆಯಾಶ್ರಿತ ಜೋಳ, ರಾಗಿ, ಸಾವೆ, ಹುರುಳಿ, ಹೆಸರು, ಅರಳು ಮತ್ತು ಅವರೆ ಮತ್ತು ಹಲಸುಂದೆ.
ಹುಳಿಯಾರು : ಮಳೆಯಾಶ್ರಿತ ಜೋಳ, ರಾಗಿ, ಹುರುಳಿ, ಹೆಸರು, ಅರಳು, ನವಣೆ, ಸಜ್ಜೆ, ಅವರೆ ಹಾಗೂ ನೀರಾವರಿ ರಾಗಿ
ಕಂದಿಕೆರೆ : ಮಳೆಯಾಶ್ರಿತ ಜೋಳ, ರಾಗಿ, ಹುರುಳಿ, ಹೆಸರು, ಅರಳು ಮತ್ತು ಅವರೆ.
ಶೆಟ್ಟಿಕೆರೆ : ಮಳೆಯಾಶ್ರಿತ ಜೋಳ, ಸಾವೆ, ರಾಗಿ, ಹುರುಳಿ, ಹೆಸರು, ಅರಳು ಮತ್ತು ಅವರೆ.
ರೈತರು ಪಾವತಿಸಬೇಕಾಗಿರುವ ಕಂತಿನ ವಿವರ(ಹೆಕ್ಟೇರ್ಗೆ) : ಜೋಳ-248.ರೂ, ರಾಗಿ-336.ರೂ, ಸಜ್ಜೆ-216.ರೂ, ನವಣೆ-168.ರೂ, ಸಾವೆ-160.ರೂ, ತೊಗರಿ-328.ರೂ, ಹೆಸರು.232.ರೂ, ಹುರುಳಿ-152., ಹರಳು-200, ಅವರೆ-216, ಹಲಸಂದೆ-216, ಈರುಳ್ಳಿ-1420, ಟಮೊಟೊ-2260, ಕೆಂಪುಮೆಣಸಿನಕಾಯಿ-1440 ಆಗಿದೆ. ಕಂತು ಪಾವತಿಸುವ ಕೊನೆಯ ದಿನ ಜುಲೈ.30.