ಹಂದಿ ಹಿಡಿಯಲು ಜಗಳ : ಪೋಲಿಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿ
ಹೆಚ್1 ಎನ್1 ಕಾಯಿಲೆ ಹರಡುತ್ತಿರುವುದರ ಹಿನ್ನಲೆಯಲಿ ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಹಂದಿ ಹಿಡಿಯುವ ಕಾಯರ್ಾಚರಣೆ ನಡೆಸುತ್ತಿದೆ, ಇದರಿಂದ ಕುಪಿತಗೊಂಡಿರುವ ಹಂದಿ ಸಾಕಿರುವ ಜನರು ಆಕ್ರೋಶಗೊಂಡಿದ್ದು, ಈ ಸಿಟ್ಟು ಇಂದು ಬುಗಿಲೆದ್ದು, ಹಂದಿ ಹಿಡಿಯುವವರ ಕೈ ಕಚ್ಚಿದರು.
ಇದರಿಂದ ಕುಪಿತಗೊಂಡ ಹಂದಿ ಹಿಡಿಯುವವರು, ಪುರಸಭೆಯ ಅಧ್ಯಕ್ಷರಾದಿಯಾಗಿ, ಸದಸ್ಯರು, ಸಿಬ್ಬಂದಿ ಒಂದಡೆಯಾದರೆ ಹಂದಿ ಸಾಕಿರುವವರು, ಅವರ ಬೆಂಬಲಿಗರು ಪೊಲೀಸ್ ಠಾಣೆಯ ಎದುರೇ ವಾಗ್ವಾದಕ್ಕೆ ಬಿದ್ದರು.
ಈ ಸಂದರ್ಭದಲ್ಲಿ ಹಂದಿ ಸಾಕಿರುವ ಮಹಿಳೆಯರು ಮಾತನಾಡಿ, ಹಂದಿ ಹಿಡಿಯಲು ಬಂದ ಕೆಲವರು ಕುಡಿದು ಬಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿದರೆ.
ಪುರಸಭಾಧ್ಯಕ್ಷೆ ರೇಣುಕಮ್ಮ ಮಾತನಾಡಿ, ಸಾರ್ವಜನಿಕರು ಹಂದಿಗಳನ್ನು ಹಿಡಿದು ಆರೋಗ್ಯ ಕಾಪಾಡುವಂತೆ ಹಲವು ಬಾರಿ ನಮಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಹಂದಿ ಹಿಡಿಯಲು ಕ್ರಮ ಕೈಗೊಳ್ಳಲಾಯಿತು, ಈ ಸಂಬಂಧ ಹಂದಿ ಸಾಕಿರುವವರಿಗೆ ಹಂದಿಗಳನ್ನು ಬೇರೆ ಕಡೆ ಸಾಗಿಸಿ ಎಂದು ಎರಡು ತಿಂಗಳ ಹಿಂದೆಯೇ ನೋಟಿಸ್ ನೀಡಿದ್ದೆವು ಅದರಂತೆ ಹಂದಿ ಹಿಡಿಯುವವರು ಹಂದಿಗಳನ್ನು ತರಿಸುವುದಿಲ್ಲ, ಊರಿನ ಒಳಗಡೆಯೂ ಬಿಡುವುದಿಲ್ಲ ಎಂದಿದ್ದರು ಆದರೂ ಮತ್ತೆ ಮತ್ತೆ ಹಂದಿಗಳು ಪಟ್ಟಣದೊಳಗೆ ಸಂಚರಿಸಿದರಿಂದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು, ಇದರಿಂದ ಮೂರನೇ ಬಾರಿಗೆ ಪಟ್ಟಣದಲ್ಲಿ ಹಂದಿ ಹಿಡಿಯುವ ಕಾಯರ್ಾಚರಣೆ ಕೈಗೊಳ್ಳಲಾಯಿತು ಈ ಸಂದರ್ಭದಲ್ಲಿ ಹಂದಿ ಹಿಡಿಯುವವರ ಮೇಲೆ ದಾಳಿ ನೆಡಯಿತು, ಹಂದಿ ಹಿಡಿಯುವವರು ಎಲ್ಲಿಯವರೆಗೂ ಹಂದಿಗಳನ್ನು ತರುತ್ತಾರೆ ಅಲ್ಲಿಯವರೆಗೂ ಹಂದಿಗಳನ್ನು ಹಿಡಿಸುತ್ತಲೇ ಇರುತ್ತೇವೆ ಎಂದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರುಗಳಾದ ಸಿ.ಎಂ.ರಂಗಸ್ವಾಮಿ, ಮಲ್ಲೇಶಯ್ಯ ಪುರಸಭಾ ಅಧ್ಯಕ್ಷರ ಬೆಂಬಲಕ್ಕೆ ನಿಂತರು.
ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಮಾತನಾಡಿ, ಹಂದಿ ಸಾಕಾಣಿಕೆ ಮಾಡಲು ಪುರಸಭೆ ವತಿಯಿಂದ ಅನುಮತಿ ಪಡೆಯಿರಿ ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ, ಪುರಸಭೆ ಆರೋಗ್ಯ ನಿರೀಕ್ಷಕರಿಂದಲೂ ಸಟರ್ಿಫಿಕೇಟ್ ಪಡೆದು ನಿಮ್ಮಗಳ ಕೆಲಸ ಮಾಡಿಕೊಳ್ಳಿ ಅದನ್ನು ಬಿಟ್ಟು ಹಠ ಸಾಧನೆಗಾಗಿ ಕಾನೂನನ್ನು ಉಲ್ಲಂಘನೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಸಿಬಿಐ ಅಧಿಕಾರಿ ಡಿ.ಕೆ.ರವಿ ನಿಧನಕ್ಕೆ ಶ್ರದ್ದಾಂಜಲಿ
ಚಿಕ್ಕನಾಯಕನಹಳ್ಳಿ,ಮಾ.19 : ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿರವರ ಅನುಮಾನಾಸ್ಪದ ಸಾವು ಸಿ.ಬಿ.ಐ ತನಿಖೆಯಿಂದ ಮಾತ್ರ ಹೊರಬೀಳಲಿದೆ ಎಂದು ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯ ಬಳಿ ಪ್ರಗತಿ ಸ್ಟುಡಿಯೋ ಆವರಣದಲ್ಲಿ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿರವರ ನಿಧನಕ್ಕೆ ಶ್ರದ್ದಾಂಜಲಿ ಅಪರ್ಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸೇವೆ ಸಲ್ಲಿಸುವ ಮೂಲಕ ಉತ್ತಮ ಅಧಿಕಾರಿಯಾಗಿದ್ದರು ಆದರೆ ಇವರಿಗೆ ಭೂಮಾಫಿಯ ಹಾಗೂ ರಾಜಕಾರಣಿಗಳ ಹಿತಕಾಯಲು ಇವರು ವಿರೋಧಿಸಿದ್ದಕ್ಕೆ ಇಂತಹ ಕೃತ್ಯ ನಡೆದಿದೆ, ಇವರ ಅನುಮಾನಾಸ್ಪದ ಸಾವು ರಾಜ್ಯದ ಆರು ಕೋಟಿ ಜನರಿಗೂ ದಿಗ್ಬ್ರಾಂತಿಯನ್ನು ಉಂಟು ಮಾಡಿದೆ, ಸಕರ್ಾರ ಇವರ ಸಾವಿನ ಸತ್ಯಾಸತ್ಯತೆ ಹೊರಬರಬೇಕಾದರೆ ಕೂಡಲೇ ಸಿಬಿಐಗೆ ವಹಿಸಿ ಸಾಮಾಜಿಕ ನ್ಯಾಯ ಕೊಡುವಲ್ಲಿ ಮುಂದಾಗಬೇಕು ಎಂದರು.
ಮಾಜಿ ಪುರಸಭಾ ಸದಸ್ಯ ರೇಣುಕಮೂತರ್ಿ ಮಾತನಾಡಿ, ಡಿ.ಕೆ.ರವಿರವರು ಕೋಲಾರದಿಂದ ಬೆಂಗಳೂರಿಗೆ ತೆರಿಗೆ ಇಲಾಖೆ ಜಂಟಿ ಆಯುಕ್ತರಾಗಿ ಬಂದ ನಂತರ ತೆರಿಗೆ ವಂಚಿಸುತ್ತಿದ್ದ 67 ಬಂಗಾರದ ಅಂಗಡಿ, ಸಿನಿಮಾ ಮಂದಿರಗಳ ದಾಳಿ ಸೇರಿದಂತೆ ಕೋಟ್ಯಾಂತರ ತೆರಿಗೆ ಹಣವನ್ನು ಸಕರ್ಾರಕ್ಕೆ ಕೊಡಿಸುವಲ್ಲಿ ಮುಂದಾದ ಇವರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಈ ಬಗ್ಗೆ ಸಕರ್ಾರ ಸಿ.ಬಿ.ಐಗೆ ಒಪ್ಪಿಸುವ ಮೂಲಕ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯ ಸತ್ಯಾಸತ್ಯತೆಗೆ ಮುಂದಾಗಬೇಕು, ಮುಂದಿನ ದಿನಗಳಲ್ಲಿ ಇಂತಹ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ರಕ್ಷಣೆ ಸಕರ್ಾರ ಹಾಗೂ ನಮ್ಮೆಲ್ಲರ ಜವಬ್ದಾರಿ ಎಂದರು.