Thursday, July 14, 2011




ಜೂಜುಕೋರರ ಬಂಧನ: ಬಾಜಿಕಟಿದ್ದ್ಟ ಹಣ ವಶ
ಚಿಕ್ಕನಾಯಕನಹಳ್ಳಿ,ಜು.14: ಪಟ್ಟಣದ ಎಸ್.ಎಲ್.ಎನ್. ಚಿತ್ರ ಮಂದಿರದ ಬಳಿ ಜೂಜಾಡುತ್ತಿದ್ದ ಎಂಟು ಮಂದಿಯನ್ನು ಬಂಧಿಸಿದ್ದು, ಬಾಜಿಕಟ್ಟಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿ.ಎಚ್.ರಸ್ತೆಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಚಿತ್ರಮಂದಿರದ ಬಳಿ ಜೂಜಾಡುತ್ತಿದ್ದ ಗೌತಮ್, ನಿಂಗರಾಜು, ರವಿ,ಪರಮೇಶ್, ಗವಿರಂಗ, ಗೋಪಿ, ಜಯಕುಮಾರ್, ಪರಮೇಶ್ ಎಂಬುವರನ್ನು ಬಂಧಿಸಿದ ಪೋಲೀಸರು, ಬಾಜಿಕಟ್ಟಿದ ಹಣವಾದ ಆರು ಸಾವಿರ ರೂಗಳನ್ನು ಸುಬಧರ್ಿಗೆ ತೆಗೆದುಕೊಂಡಿದ್ದಾರೆ.
ಸಿ.ಪಿ.ಐ.ಪ್ರಭಾಕರ್, ಪಿ.ಎಸೈ.ಚಿದಾನಂದಮೂತರ್ಿ ಜೂಜುಕೋರರ ಮೇಲೆ ದಾಳಿ ನಡೆಸಿದ್ದಾರೆ.
ಏಕಾದಶಿ ಜಾತ್ರೆಯಲ್ಲಿ ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆದ ವೀರರು
ಚಿಕ್ಕನಾಯಕನಹಳ್ಳಿ,ಜು.14 : ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದವರು ಹಮ್ಮಿಕೊಂಡಿದ್ದ
ತೇರಿಗೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯಲ್ಲಿ 105ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು.
ತೇರಿಗೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯಲ್ಲಿ ವಿಜೇತರಾದವರೆಂದರೆ ಕ್ಷೇತ್ರಪಾಲ್ ದಿಬ್ಬದಹಳ್ಳಿ ಪ್ರಥಮ ಸ್ಥಾನ, ಸಿ.ಎನ್.ರಾಮ್ ಪ್ರಸಾದ್ ಚಿ.ನಾ.ಹಳ್ಳಿ ದ್ವಿತೀಯ ಸ್ಥಾನ, ಆಂಜನೇಯ ನೆಲಮಂಗಲ ತೃತೀಯ ಸ್ಥಾನ, ಪಾಂಡುರಂಗಯ್ಯ ಕೆ.ಬಿ.ಕ್ರಾಸ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಸಮಾಧಾನಕರ ಬಹುಮಾನ ಪಡೆದವರೆಂದರೆ ಲೋಕೇಶ್ ಹುಳಿಯಾರು, ನಾರಾಯಣ್ರಾವ್ ಗೋಡೆಕೆರೆ, ಬಸವರಾಜು ಚಿ.ನಾ.ಹಳ್ಳಿ, ಮಲ್ಲಿಕಾಜರ್ುನ ಕೆ.ಬಿ.ಕ್ರಾಸ್, ಮಂಜುನಾಥ್ ಚಿ.ನಾ.ಹಳ್ಳಿ, ಸಿ.ಮೂತರ್ಿ ಬಾಣಸಂದ್ರ ಬಹುಮಾನ ಪಡೆದಿದ್ದಾರೆ.
ನವದಂಪತಿಗಳ ಸ್ಪಧರ್ೆ : ಅಂತರ್ ಜಾತಿ ವಿವಾಹ ವಿಜೇತರು: ಮೋಹನ್ ರಾಜು ಪವಿತ್ರ ಚಿಕ್ಕಮಗಳೂರು, ಅದೃಷ್ಠ ದಂಪತಿಗಳಾದ ಕುಮಾರಸ್ವಾಮಿ ಲಕ್ಷ್ಮೀ ಬಹುಮಾನ ಪಡೆದರು.