ಮಧುಮೇಹ ನಿವಾರಣೆಗೆ ಆರ್ಕ ಬೆಳೆ ರಾಮಬಾಣ: ಡಾ.ಖಾದರ್
ಚಿಕ್ಕನಾಯಕನಹಳ್ಳಿ,ಜ.20 : ರೋಗ ನಿವಾರಕ, ಮಧುಮೇಹ ನಿವಾರಣೆಗೆ ರಾಮಬಾಣವಾಗಿರುವ ಆರ್ಕ ಬೆಳೆಗೆ ನಗರ ಪ್ರದೇಶಗಳಲ್ಲಿ ಒಳ್ಳೆಯ ಬೇಡಿಕೆ ಕೇಳಿಬರುತ್ತಿದೆ, ಕೆಲವು ನಗರ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಈ ಬೆಳೆಗೆ ಮುಂದಿನ ಹತ್ತು ವರ್ಷದಲ್ಲಿ ಉತ್ತಮ ಬೆಲೆ ಸಿಗಲಿದ್ದು ರೈತರು ಆರ್ಕ ಬೆಳೆಯನ್ನು ಹೆಚ್ಚು ಬೆಳೆಯಬೇಕು ಎಂದು ವಿಜ್ಞಾನಿ ಡಾ.ಖಾದರ್ ತಿಳಿಸಿದರು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ನಡೆದ ಸಿರಿಧಾನ್ಯ ಮಹತ್ವದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಆರ್ಕ ಬೆಳೆಯು ರೋಗ ನಿವಾರಣೆ ಮಾಡುವ ಬೆಳೆ, ಈ ಬೆಳೆಯನ್ನು ಜೀವಿಯು ತನ್ನ ದೇಹದಲ್ಲಿ ಹೆಚ್ಚಾಗುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತ ಎಂದರು.
ಹಲವು ಟಿ.ವಿ ಮಾಧ್ಯಮಗಳು ಜಾಹಿರಾತುಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತವೆ ಆದರೆ ಈ ಜಾಹಿರಾತುಗಳು ಕೇವಲ ಕಂಪನಿಗಳ ಅಭಿವೃದ್ದಿಗಾಗಿಯೇ ಹೊರತು ಜೀವಿಯ ಆರೋಗ್ಯ ವೃದ್ದಿಸುವುದಕ್ಕಾಗಿಯಲ್ಲ ಎಂದು ತಿಳಿಸಿದರು.
ಬೇಕರಿ ಅಂಗಡಿಗಳು ನಗರದಿಂದ ಹಳ್ಳಿಗಳಿಗೂ ಬಂದಿವೆ, ಈ ಉತ್ಪನ್ನಗಳು ಹೆಚ್ಚು ವೈರಾಣು, ಬ್ಯಾಕ್ಟೀರಿಯಗಳನ್ನು ಹೊಂದಿರುತ್ತವೆ ಇದರಿಂದ ಆರೋಗ್ಯ ಹದಗೆಟ್ಟು ಹಳ್ಳಿಯ ಮಕ್ಕಳು ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ ಎಂದರು..
ಆರ್ಕ ಬೆಳೆಗೆ ಕಿರುಧಾನ್ಯ ಎಂಬ ಪದವನ್ನು ಕರೆಯುವುದನ್ನು ಬಿಟ್ಟು ಅದಕ್ಕೆ ಸಿರಿಧಾನ್ಯ ಎಂಬ ಪದ ಬಳಸಿದರೆ ಆರ್ಕ ಬೆಳೆಗೆ ನೀಡುವ ಮಹತ್ವ ಹೆಚ್ಚುತ್ತದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ಯತಿರಾಜು, ಕಾರ್ಯದಶರ್ಿ ರಾಮಕೃಷ್ಣಪ್ಪ, ಪ್ರಾಂಶುಪಾಲರಾದ ಎನ್.ಇಂದಿರಮ್ಮ, ರಘುಗೋಪಾಲನಹಳ್ಳಿ, ಚಂದ್ರಶೇಖರ್ಬಾಳೆ, ಆರ್ಕ ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಎಮ್.ಬಸವರಾಜು, ಜಗದೀಶ್ವರ್ ಸೇರಿದಂತೆ ಆರ್ಕ ಬೆಳೆಗಾರರ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವಿ.ಎಸ್.ಎಸ್.ಎನ್.ಗಳು ಡಿ.ಸಿ.ಸಿ.ಬ್ಯಾಂಕ್ಗೆ ಠೇವಣಿ ಸಂಗ್ರಹಿಸಲು ಮುಂದಾಗಬೇಕು:
ಚಿಕ್ಕನಾಯಕನಹಳ್ಳಿ,ಜ.21 : ರೈತರು, ಸಂಘ ಸಂಸ್ಥೆಗಳು ಡಿಸಿಸಿ ಬ್ಯಾಂಕ್ನ್ನು ಕೇವಲ ಸಾಲ ಕೊಡುವ ಸಂಸ್ಥೆಯನ್ನಾಗಿಸಿಕೊಳ್ಳದೆ ಠೇವಣಿಯನ್ನು ನಮ್ಮ ಬ್ಯಾಂಕಿನಲ್ಲಿ ಇಡುವಂತೆ ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಕರೆ ನೀಡಿದರು.
ತಾಲ್ಲೂಕಿನ ಶೆಟ್ಟಿಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣನವರ ನಿದರ್ೇಶನದಂತೆ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ 32ಲಕ್ಷದ 25ಸಾವಿರ ರೂ ಸಾಲವನ್ನು ಇಂದು ವಿತರಿಸಲಾಗಿದೆ. ಸಂಘದ 216ಸದಸ್ಯರಿಗೆ ಈ ಸೌಲಭ್ಯ ದೊರಕಲಿದೆ ಎಂದರು.
ರೈತರು ಹಾಗೂ ಸಂಘ ಸಂಸ್ಥೆಗಳವರು, ತಮ್ಮ ಸಂಸ್ಥೆ ಅಭಿವೃದ್ದಿ ದೃಷ್ಠಿಯಿಂದ ಸಾಲ ಪಡೆದುಕೊಳ್ಳುವ ಜೊತೆಗೆ ಠೇವಣಿಯನ್ನು ಸಂಗ್ರಹಿಸಬೇಕು, ನೀವು ಇಡುವ ಠೇವಣಿಯಿಂದಲೇ ಬ್ಯಾಂಕ್ ಸಾಲ ವಿತರಿಸುತ್ತಿದೆ ಎಂದರಲ್ಲದೆ ಸಾಲ ವಿತರಣೆಯನ್ನು ವಿಸ್ತರಿಸುವ ದೃಷ್ಠಿಯಿಂದ ಚಿನ್ನಾಭರಣಗಳ ಸಾಲ, ಅಡಕೆ ಅಡಮಾನ ಸಾಲವನ್ನು ನೀಡಲು ಸಂಘಗಳಿಗೆ ತಿಳಿಸುತ್ತಿದ್ದು ಈ ರೀತಿಯ ಸಾಲವನ್ನು ಡಿಸಿಸಿ ಬ್ಯಾಂಕ್ನಿಂದ ಸಾಲ ಪಡೆದ ಹಲವು ಸಂಘಗಳು ನೀಡುತ್ತಿವೆ ಎಂದರು.
ಶೆಟ್ಟೀಕೆರೆ ಪ್ರಾಥಮಕ ಸಹಕಾರ ಸಂಘಕ್ಕೆ ಈಗ ನೀಡುತ್ತಿರುವ ಸಾಲದ ಜೊತೆಗೆ ಜೂನ್ ತಿಂಗಳಿನಲ್ಲಿ ಇನ್ನಷ್ಟು ಸಾಲ ನೀಡುವ ಹಾಗೂ ಸಂಘಕ್ಕೆ ಸೇಫ್ ಲಾಕರ್ ನೀಡುವುದಾಗಿ ಭರವಸೆ ನೀಡಿದರು.
ಶೆಟ್ಟಿಕೆರೆ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ ನಮ್ಮ ಸಂಘಕ್ಕೆ ಈ ಹಿಂದೆ 18ಲಕ್ಷ ರೂ ನೀಡಿದ್ದ ಸಾಲದ ನಂತರ ರಾಜ್ಕುಮಾರ್ ರವರ ಸಹಾಯದಿಂದ 32ಲಕ್ಷ 25ಸಾವಿರ ರೂ ದೊರಕಿರುವುದು ಸಂಘಕ್ಕೆ ಹೆಗ್ಗಳಿಕೆ ಎಂದರು.
ರಾಮನಹಳ್ಳಿ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಆರ್.ಕೇಶವಮೂತರ್ಿ ಮಾತನಾಡಿ ಡಿಸಿಸಿ ಬ್ಯಾಂಕ್ ವತಿಯಿಂದ ಇಡೀ ತಾಲ್ಲೂಕಿನಲ್ಲಿ ನೀಡಿರುವ 11ಕೋಟಿ ರೂ ನಷ್ಟು ಸಾಲ ಮನ್ನವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬ್ಯಾಂಕ್ನ ನಿದರ್ೇಶಕರಾದ ನಾಗರಾಜು, ರಾಜಣ್ಣ, ಭೈರೇಶ್, ಎಂ.ಎನ್.ನಾಗರಾಜು, ಕಮಲಮ್ಮ ಸೇರಿದಂತೆ ಹಲವರಿದ್ದರು.
ರೋಟರಿ ಸಂಸ್ಥೆ, ಆಟೋ ಚಾಲಕರ ಸಂಘದ ವತಿಯಿಂದ ನಾಳೆ ವಿವಿಧ ಕಾರ್ಯಕ್ರಮಗಳು
ಚಿಕ್ಕನಾಯಕನಹಳ್ಳಿ,ಜ.21 : ಸುಭಾಷ್ ಚಂದ್ರಭೋಸ್ ಜನ್ಮದಿನಾಚರಣೆ, ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ವಿಕಲಚೇತನರ ದಿನಚಾರಣೆ ಸಮಾರಂಭವನ್ನು ಇದೇ 23ರ ಬುಧವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಮತ್ತು ರೋಟರಿ ಕ್ಲಬ್ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ವಿ.ಪ್ರತಾಪ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಬೆಂಗಳೂರಿನ ಸಿಪಿಐ ಸಿ.ಆರ್.ರವೀಶ್ ಹಾಗೂ ಚಿ.ನಾ.ಹಳ್ಳಿ ಸಿಪಿಐ ಕೆ.ಪ್ರಭಾಕರ್ ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಲಿದ್ದು ರೋಟರಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್, ಬಿ.ಇ.ಓ ಸಾ.ಚಿ.ನಾಗೇಶ್ ಆಟೋ ಚಾಲಕರಿಗೆ ಸನ್ಮಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎನ್.ಆರ್.ಉಮೇಶ್ಚಂದ್ರ, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ರೋಟರಿ ಕಲ್ಬ್ ಕಾರ್ಯದಶರ್ಿ ಎಂ.ದೇವರಾಜು, ಆರಕ್ಷಕ ಉಪನಿರೀಕ್ಷಕ ಬಿ.ಟಿ.ಗೋವಿಂದ್, ವೈದ್ಯಾಧಿಕಾರಿ ಡಾ.ಶಿವಕುಮಾರ್, ಕನ್ನಡ ಸಂಘ ವೇದಿಕೆಯ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಹಾಗೂ ತಾಲ್ಲೂಕಿನ ಸಮಸ್ತ ಆಟೋ ಚಾಲಕರು ಮತ್ತು ಸಂಘದ ಅಧ್ಯಕ್ಷ , ಪದಾಧಿಕಾರಿಗಳು ಉಪಸ್ಥಿತರಿರುವರು.