Thursday, November 29, 2012


ವೃತ್ತಿ ರಂಗಭೂಮಿ ಮತ್ತೆ ವೈಭವದತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಿ :  ಲಕ್ಷಣ್ದಾಸ್
ಚಿಕ್ಕನಾಯಕನಹಳ್ಳ,ನ.29 : ರಂಗಭೂಮಿ ಹಾಗೂ ಪೌರಾಣಿಕ ನಾಟಕಗಳಲ್ಲಿ ಬಳಸುತ್ತಿದ್ದ ಪ್ರಾತಿನಿಧಿಕ ಶಬ್ದಗಳೆಲ್ಲವು ಸಿನಿಮಾ ಹಾವಳಿಗೆ ಸಿಲುಕಿ ಅಪಮೌಲ್ಯವಾಗಿದೆ ಎಂದು ರಂಗಭೂಮಿ ಕಲಾವಿದ ಲಕ್ಷಣ್ದಾಸ್ ವಿಷಾದಿಸಿದರು.
ಪಟ್ಟಣದ ರೋಟರಿ ಬಾಲ ಭಾವನದಲ್ಲಿ ರೋಟರಿ ಕ್ಲಬ್ ವತಿಯಿಂದ ರಂಗಕಲೆ ನಡೆದು ಬಂದ ಹಾದಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ರಂಗಗೀತೆಗಳನ್ನು ಹಾಡುವಂತಹ ದಾಸ್ಟ್ಯ ಇರುವಂತಹ ಕಲಾವಿದರು ವಿರಳವಾಗುತ್ತಿದ್ದಾರೆ. ಸಾಹಿತ್ಯ, ಸಂಸ್ಕೃತಿ ಇದ್ದಂತಹ ನಾಟಕದ ಹಾಡುಗಳನ್ನು ಬರೆಯುವವರಿಗೆ ಕಷ್ಠದ ಸ್ಥಿತಿ ನಿಮರ್ಾಣವಾಗಿದೆ ಎಂದು ತಿಳಿಸಿದರು.
ಪ್ರಾರ್ಥನ ಗೀತೆಗಳನ್ನು ಬರೆಯುವವರಿಗೆ ಈಗ ಪ್ರಾತಿನಿದ್ಯವೇ ಇಲ್ಲವಾಗಿದೆ, ಸಿನಿಮಾ ಹಾಡುಗಳನ್ನು ಬರಯುವವರಿಗೆ ಈಗ ಸ್ಥಾನಮಾನಗಳು ದೊರಕುತ್ತಿವೆ ಎಂದರಲ್ಲದೆ ರಾಜ್ಯದಲ್ಲಿ ಇದ್ದ ಎಲ್ಲಾ ರಂಗಭೂಮಿ ನಾಟಕ ಕಂಪನಿಗಳೂ ಸಿನಿಮಾ ಹಾವಳಿಯಿಂದ ಮುಚ್ಚಲ್ಪಟ್ಟಿದೆ, ನಾಟಕ ನೋಡುವವರೇ ಇಲ್ಲದಂತಾಗಿದ್ದಾರೆ ಈಗಲಾದರೂ ಸಕರ್ಾರ ಎಚ್ಚೆತ್ತುಕೊಂಡು ವೃತ್ತಿ ರಂಗಭೂಮಿ ಮತ್ತೆ ವೈಭವದತ್ತ ಎಂಬ ಕಾರ್ಯಕ್ರಮ ಹಮ್ಮಿಕೊಂಡು ರಂಗಭೂಮಿ ಕಲಾವಿದರಿಗೆ  ಇದರ ಮುಂಚೂಣಿ ನೀಡಬೇಕು ಎಂದರು.
  ಸಮಾರಂಭದಲ್ಲಿ ರಂಗಗೀತೆಗಳನ್ನು ಹಾಗೂ ಮೇರು ನಟರು ಹಾಡುತ್ತಿದ್ದ ಹಾಡುಗಳನ್ನು ಅವರ ದಾಟಿಯಲ್ಲೇ ಹಾಡಿ ಸಭಿಕರನ್ನು ರಂಜಿಸಿದರು.
ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಲಕ್ಷಣ್ದಾಸ್ರವರ ನಾಲಿಗೆಯಲ್ಲಿ ಕಲಾಶಾರದೆ ನತರ್ಿಸುತ್ತಿದ್ದಾಳೆ, ಅವರ ರಂಗಕಲೆಯ ಜ್ಞಾನ ಭಂಡಾರ ಅಪಾರವಾಗಿದ್ದು ಇದನ್ನು ಗುರುತಿಸಿ ತುಮಕೂರು ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡುವ ಮೂಲಕ ಅವರ ಕಲೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.
ಸಮಾರಂಭದಲ್ಲಿ ತುಮಕೂರು ಮಂಜು, ಕಾರ್ಯದಶರ್ಿ ಎಂ.ದೇವರಾಜು ಉಪಸ್ಥಿತರಿದ್ದರು.




aPÀÌ£ÁAiÀÄPÀ£ÀºÀ½îAiÀÄ qÁ.CA¨sÉÃqÀÌgï ¥ËæqÀ±Á¯ÉAiÀÄ «zÁåyð vÀAqÀ ªÀÄrPÉÃjAiÀÄ°è £ÀqÀzÀ 20£Éà gÁ¶ÖçÃAiÀÄ ªÀÄPÀ̼À «eÁÕ£À ¸ÀªÀiÁªÉñÀzÀ°è ¨sÁUÀªÀ»¹ ±ÀQÛ C£Ééö¹ §¼À¹ ªÀÄvÀÄÛ G½¹ JA§ ¥ÀæzsÁ£À ²Ã¶ðPÉAiÀÄr ¸ÀgÀ¼À M¯É ±ÀQÛAiÀÄ ¸É¯É JA§ ¸ÀA±ÉÆÃzsÀ£Á ¥Àæ§AzsÀªÀ£ÀÄß ªÀÄAr¹ GvÀÛgÀ ¥ÀæzÉñÀ ªÁgÀuÁ¹AiÀÄ°è £ÀqÉAiÀÄĪÀ gÁµÀÖçªÀÄlÖzÀ ¸ÀªÀiÁªÉñÀPÉÌ DAiÉÄÌAiÀiÁVzÁÝgÉ.
ವೈ.ಎ.ನಾರಾಯಣಸ್ವಾಮಿರವರಿಗೆ ಸನ್ಮಾನ
                                          
ಚಿಕ್ಕನಾಯಕನಹಳ್ಳಿ,ನ.29 : ದೇಶದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಗೆ ಬಂದಾಗ ಮಾತ್ರ ನಗರ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಮಾನತೆ ಬರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಬಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಗಳ ಕಛೇರಿ, ತಾಲ್ಲೂಕು ಪ್ರೌಡಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವೃತ್ತ ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ತಾಲ್ಲೂಕು ಪ್ರೌಡಶಾಲಾ ಶಿಕ್ಷಕರ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಶೇ.70ರಷ್ಟು ಸಾಕ್ಷರತೆಯಿದ್ದು ಇನ್ನು ಶೇ.30ರಷ್ಟು ಅನಕ್ಷರಸ್ಥರಿದ್ದಾರೆ, ಇವರನ್ನು ಸಾಕ್ಷರರನ್ನಾಗಿ ಮಾಡುವ ಜವಬ್ದಾರಿ ಸಕರ್ಾರ ಮತ್ತು ಶಿಕ್ಷಕರ ಮೇಲಿದೆ ಇಂದು ಮಕ್ಕಳು ಕೇಳುವ ಪ್ರಶ್ನೆಗಳಿಗೆ ಶಿಕ್ಷಕರು ಉತ್ತರ ನೀಡಲು ಕ್ಲಿಷ್ಟವಾಗುತ್ತಿದೆ, ಓದುವ ಹವ್ಯಾಸ ಬೆಳೆಸಿಕೊಂಡರೆ ಮಾತ್ರ ಉತ್ತರ ನೀಡಬಹುದು. ರಾಜ್ಯದ ವಾಷರ್ಿಕ ಆಯವ್ಯಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ 15072 ಕೋಟಿ ರೂಪಾಯಿಗಳು ಸಕರ್ಾರ ತೆರೆದಿಡುತ್ತಿದೆ, ನಮ್ಮಲ್ಲಿ ಅಗಾಧ ಶಕ್ತಿ ಸಂಪನ್ಮೂಲ ವಿದ್ವತ್ ಶಿಕ್ಷರಲ್ಲಿದ್ದು ಇದನ್ನು ಮಕ್ಕಳ ಅಭಿವೃದ್ದಿಗೆ ಉಪಯೋಗಿಸಿ ಎಂದ ಅವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಶೇ.100ರಷ್ಟು ಪಲಿತಾಂಶ ಬರುವಂತೆ ಶ್ರಮಿಸಿ ಎಂದರು.
ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಶಿಕ್ಷಕರು ಸಮಾಜವನ್ನು ಉತ್ತಮ ರೀತಿಯಲ್ಲಿ ಕರೆದೊಯ್ಯವುದರಲ್ಲಿ ಮುಂಚೂಣಿ ಪಾತ್ರ ವಹಿಸುತ್ತಾರೆ, ಅದಕ್ಕಾಗಿ ಮಕ್ಕಳ ಹಾಗೂ ಶಿಕ್ಷಕರ ಪಾತ್ರ ಉತ್ತಮವಾಗಿರಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಶಿಕ್ಷಕರು ವಿದ್ಯಾಥರ್ಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು, ಪ್ರಪಂಚ ಬದಲಾವಣೆಯಾಗುತ್ತಿದೆ, ಸಮಾಜಕ್ಕೆ ತಕ್ಕಂತೆ ಬೋಧನೆ ನೀಡಿದರೆ ವಿದ್ಯಾಥರ್ಿಗಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.
ಸಾಹಿತಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ ನಗರ ಪ್ರದೇಶದ ವಿದ್ಯಾಥರ್ಿಗಳಿಗೆ ಸಿಗುತ್ತಿರುವ ಕಂಪ್ಯೂಟರ್ ಶಿಕ್ಷಣವು ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳಿಗೂ ದೊರಕಬೇಕು ಆ ಮೂಲಕ ಶಿಕ್ಷಕರು ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳನ್ನು ಆಧುನಿಕ ಶಿಕ್ಷಣದತ್ತ ಕರೆದೊಯ್ಯಬೇಕು ಎಂದು ತಿಳಿಸಿದ ಅವರು ಅದಕ್ಕಾಗಿ ವಿದ್ಯಾಥರ್ಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳಸಬೇಕು, ರಾಮಾಯಣ, ಮಹಾಭಾರತ, ನೀತಿಕಥೆಗಳನ್ನು ವಿದ್ಯಾಥರ್ಿಗಳಿಗೆ ತಿಳಿಸುವ ಮೂಲಕ ಭಾರತದ ಸಂಸ್ಕೃತಿ ಪರಂಪರೆ ಮನಸ್ಸಿನಲ್ಲಿ ನೆಲೆಯೂರುವಂತೆ ಮಾಡಬೇಕು ಎಂದರು.
ಸಮಾರಂಭದಲ್ಲಿ  ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಜಾನಮ್ಮರಾಮಚಂದ್ರಯ್ಯ, ಜಿ.ಹಾಲು ಒಕ್ಕೂಟ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಯ್ಯ, ತಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾಲ್ಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ನಾಗರಾಜು, ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ತಾ.ಪ್ರಾ.ಶಾ.ಶಿ.ಸಂಘದ ಕಾರ್ಯದಶರ್ಿ ರಾಜಶೇಖರ್ ಉಪಸ್ಥಿತರಿದ್ದರು.


ಸತೀಶ್ ಸಾಸಲು ಜೆ.ಡಿ.ಎಸ್ಗೆ ವಿಧಾಯ, ಕಾಂಗ್ರೆಸ್ಗೆ ಸೇರ್ಪಡೆ
ಚಿಕ್ಕನಾಯಕನಹಳ್ಳಿ,ನ.29 : ಜೆ.ಡಿ.ಎಸ್ ಮುಖಂಡ ಹಾಗೂ ರಾಜ್ಯ ಅಹಿಂದ ಸಂಚಾಲಕ ಸತೀಶ್ಸಾಸಲು ಜೆ.ಡಿ.ಎಸ್ ತೊರೆದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ.
ಶೆಟ್ಟಿಕೆರೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಜೆ.ಡಿ.ಎಸ್ನಿಂದ ಅಭ್ಯಥರ್ಿಯಾಗಿದ್ದ ಸತೀಶ್ರವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಯ ಆದರ್ಶವನ್ನು ಇಟ್ಟುಕೊಂಡಿರುವ ಪಕ್ಷಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಬಸವರಾಜುರವರ ಸಮ್ಮುಖದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇರಿರುವುದಾಗಿ ತಿಳಿಸಿದ್ದಾರೆ.
ಸತೀಶ್ರವರ ಜೊತೆ ತೀರ್ಥಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ ಡಿ.ಕೆ, ಸಾಸಲು ಶಶಿಧರ್, ನಿರುವುಗಲ್ ಬಸವರಾಜು ಗಾಂಧಿನಗರ, ಸೊಂಡೇನಹಳ್ಳಿ ಕೃಷ್ಣಮೂತರ್ಿ, ಮಾಕಳ್ಳಿ ಹೀರೇಗೌಡ, ಎಡೆ ಗೊಲ್ಲರಹಟ್ಟಿ ಹೀರಣ್ಣ, ದೊಡ್ಡಿಹಟ್ಟಿ ರಮೇಶ್, ಗದ್ದಿಗೆರ ಕೊಟ್ರೇಶ್, ದೊಡ್ಡರಾಂಪುರ ಕುಮಾರ್ ಸೇರಿದಂತೆ ಹಲವರು ತಮ್ಮ ಜೊತೆ ಕಾಂಗ್ರೆಸ್ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ. 

56ನೇ ಕನ್ನಡ ರಾಜ್ಯೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ನ.29 : ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಇದೇ 30ರ ಶುಕ್ರವಾರ(ಇಂದು) 56ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತುಮಕೂರು ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಪ್ರತಾಪ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಧ್ವಜಾರೋಹಣ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ರಾಜ ರಾಜೇಶ್ವರಿ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಸಾಹಿತಿ ಎಂ.ವಿ.ನಾಗರಾಜ್ರಾವ್, ಸಿಪಿಐ ಪ್ರಭಾಕರ್, ಪಿ.ಎಸ್.ಐ ರವಿಕುಮಾರ್, ಸು.ಚ.ಬೋ.ಆ.ಚಾ.ಮಾ.ಸಂಘದ ಗೌರವಾಧ್ಯಕ್ಷ ರೇಣುಕಸ್ವಾಮಿ ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಉಪಸ್ಥಿತರಿರುವರು.