Friday, April 11, 2014

ಮನುಷ್ಯತ್ವ ಇಲ್ಲದ ಮೋದಿ, ಭ್ರಷ್ಟಾಚಾರಕ್ಕೆ ಹೆಸರಾಗಿರುವ ಬಿಜೆಪಿ 


 ಚಿಕ್ಕನಾಯಕನಹಳ್ಳಿ,ಏ.10: ರಾಷ್ಟ್ರ ಮಟ್ಟದಲ್ಲಿ  ಮನುಷ್ಯತ್ವ ಇಲ್ಲದ ಮೋದಿ, ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಹೆಸರಾಗಿರುವ  ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ ನಂತವರ ನೇತೃತ್ವದಲ್ಲಿ  ಅನಾಚಾರ, ದೂರಾಚರಗಳಿಗೆ ಪ್ರಸಿದ್ದರಾಗಿರುವ ಹಾಲಪ್ಪ, ಲಕ್ಷ್ಮಣಸವದಿ, ಸಿ.ಸಿ.ಪಾಟೀಲ, ರೇಣುಕಾಚಾರ್ಯರಂತಹವರೇ ತುಂಬಿರುವ ಕೋಮುವಾದಿ ಬಿ.ಜೆ.ಪಿ. ಒಂದಡೆಯಾದರೆ, ಜೆ.ಡಿ.ಎಸ್.ನಲ್ಲಿ ದೇವೇಗೌಡ, ಕುಮಾರಸ್ವಾಮಿ ಮೇಲೆ ವಿಶ್ವಾಸವನ್ನು ಕಳೆದುಕೊಂಡಿರುವ ನಾಯಕರೇ ತುಂಬಿರುವ ಪಕ್ಷ, ಇವರೆಡನ್ನೂ ಧಿಕ್ಕರಿಸಿ.  ರೈತರ, ಬಡವರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್. ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಎಸ್.ಪಿ.ಮುದ್ದಹನುಮೇಗೌಡರ ಪರ ಸಿ.ಎಂ.ಸಿದ್ದರಾಮಯ್ಯ ಪ್ರಚಾರ ಭಾಷಣ ಮಾಡಿದರು. ಕೋಮುವಾದವನ್ನೇ ಅಜಂಡಾ ಮಾಡಿಕೊಂಡಿರುವ ಬಿ.ಜೆ.ಪಿ, ಈಗ ಹೊರಡಿಸಿರುವ ತನ್ನ ಪ್ರಣಾಳಿಕೆಯಲ್ಲಿ  ಹಿಂದೆ ಜನಸಂಘ ಹೊರಡಿಸುತ್ತಿದ್ದ ಅಂಶಗಳನ್ನೇ  ಪುನರ್ ಮುದ್ರಣ ಮಾಡಿಸಿದಂತಿದೆ ಎಂದು ಸಿದ್ದರಾಮಯ್ಯ ವ್ಯಂಗವಾಡಿದರು.
ಮೋದಿಗೆ ಮತ ನೀಡಿದರೆ ಗುಜರಾತಿನಲ್ಲಿ 2002ರಲ್ಲಿ ನಡೆದ ಕೋಮು ದಳ್ಳುರಿ ಇಡೀ ರಾಷ್ಟ್ರದಲ್ಲಿ ಆರಂಭಗೊಳ್ಳುತ್ತದೆ, ಅಲ್ಲಿ ಅಷ್ಟು ನರಮೇದ ಆದ್ರೂ ಪಶ್ವಿತಾಪ ಪಡದ ಮೋದಿ ಈ ದೇಶದ ಪ್ರಧಾನಿ ಆಗಬಾರದು ಎಂದರಲ್ಲದೆ, ರಾಷ್ಟ್ರದಲ್ಲಿರುವ 82 ಕೋಟಿ ಮತದಾರರು ದೇಶದ ಭವಿಷ್ಯವನ್ನು ನಿಧರ್ಾರಿಸುವಾಗ ಈ ಅಂಶಗಳನ್ನು ಗಮನದಲ್ಲಿಡಬೇಕು ಎಂದರು.
ಕಾಂಗ್ರೆಸ್ ಪಕ್ಷದ ರಕ್ತದಲ್ಲಿ ಭ್ರಷ್ಟಾಚಾರ ಇದೆ ಎಂದು ಮೈಸೂರಿನಲ್ಲಿ ಮೋದಿ ಹೇಳುವಾಗ ಪಕ್ಕದಲ್ಲೇ ಭ್ರಷ್ಟಚಾರದ ಸಲುವಾಗಿ ಜೈಲಿಗೆ ಹೋದ ಯಡಿಯೂರಪ್ಪ, 14 ಸಾವಿರ ಕೋಟಿ ರೂಗಳ ಹಗರಣದ ಆರೋಪ ಹೊತ್ತಿರುವ ಅನಂತಕುಮಾರ್ ಪಕ್ಕದಲ್ಲೇ ಕುಳಿತ್ತಿದ್ದರೂ ಮೋದಿಯ ಕಣ್ಣಿಗೆ ಕಾಣಲಿಲ್ಲವೆ ಎಂದು ಪ್ರಶ್ನಿಸಿದರು.
ಕನರ್ಾಟಕವನ್ನು ರಾಷ್ಟ್ರದಲ್ಲೇ ನಂ.1 ರಾಜ್ಯವನ್ನಾಗಿ ಮಾಡುವ ಕನಸು ನನ್ನದು ಅದನ್ನು ನನಸಾಗಿಸಲು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದರು, ಗ್ರಾಮಾಂತರ ಪ್ರದೇಶದಲ್ಲಿ ಎಷ್ಟು ಕುಟುಂಬಗಳು ತುತ್ತು ]ಅನ್ನಕ್ಕಾಗಿ ಕಾಯುತ್ತಿದ್ದ ದಿನಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ ಅದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ತಂದೆ, ಮಕ್ಕಳ ಅಪೌಷ್ಠಕತೆ ನಿವಾರಿಸಲು ಹಾಲು ವಿತರಣೆ ಮಾಡಿದೆ, ಅಹಿಂದ ವರ್ಗದವರು ವಿವಿಧ ನಿಗಮ ಮಂಡಳಿಗಳಲ್ಲಿ ತೆಗೆದುಕೊಂಡ ಸಾಲ ಮನ್ನ ಮಾಡಿದ್ದರಿಂದ ಇದರ ಉಪಯೋಗವನ್ನು 10 ಲಕ್ಷ ಜನ ಪಡೆದುಕೊಂಡರು, ರೈತರಿಗೆ ಬಡ್ಡಿ ರಹಿತ 3 ಲಕ್ಷ ರೂಗಳ ಸಾಲವನ್ನು ವಿತರಿಸುವ ಯೋಜನೆ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದರು.
ತುಮಕೂರು ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಅಬ್ಯಾಥರ್ಿಗೆ ಮತ ನೀಡಿದರೆ ಅದು ಬಿ.ಜೆ.ಪಿ. ಅಬ್ಯಾಥರ್ಿಯ ಗೆಲುವಿಗೆ ಸಹಕರಿಸಿದಂತೆ ಆದ್ದರಿಂದ ಜಿಲ್ಲೆಯ ಜನರು ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಎಸ್.ಪಿ.ಮುದ್ದು ಹನುಮೇಗೌಡರಿಗೆ ಮತನೀಡಿ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಿ, ಯಾವುದೇ ಗಾಳಿ ಸುದ್ದಿಗೆ ಕಿವಿಕೊಡದೆ ರಾಜ್ಯ ಸಕರ್ಾರವನ್ನು ಮುಂದೆ ನಾಲ್ಕು ವರ್ಷಗಳ ಕಾಲ ಸುಭದ್ರವಾಗಿ ಮುನ್ನಡೆಸುವ ಅವಕಾಶವನ್ನು ಕಲ್ಪಿಸಿಕೊಡುವಂತೆ ಕೋರಿದರು.
ರಾಜ್ಯವನ್ನು ರೋಗಮುಕ್ತ, ಗುಡಿಸಲು ಮುಕ್ತ, ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಐದು ವರ್ಷ ಪೂರ್ಣ ಪ್ರಮಾಣದಲ್ಲಿ ಸಕರ್ಾರವನ್ನು ನಡೆಸುವಂತೆ ರಾಜ್ಯದ ಜನತೆ ಆಶೀರ್ವದಿಸಬೇಕು ಎಂದರು.
ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ರಾಷ್ಟ್ರಕ್ಕೆ ಶಿಕ್ಷಣ ಕಾಯಿದೆ, ಉದ್ಯೋಗ ಕಾಯಿದೆ, ಮಾಹಿತಿ ಹಕ್ಕು ಕಾಯಿದೆಯಂತಹ ಜನೋಪಯೋಗಿ ಅಸ್ತ್ರಗಳನ್ನು ಜನತೆ ನೀಡಿರುವ ಸಕರ್ಾರ, 96 ಕೋಟಿ ಜನತೆಯ ಕೈಗೆ ಮೊಬೈಲ್ ಕೊಡಿಸುವಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದರು.
  ಸಿದ್ದರಾಮಯ್ಯನವರ ನೇತೃತ್ವದ ಸಕರ್ಾರ ಕೈಗಾರಿಕಾ ಕ್ಷೇತ್ರದಲ್ಲಿ ರಾಷ್ಟ್ರಕ್ಕೆ ಎರಡನೇ ಸ್ಥಾನಕ್ಕೆ ತಂದಿದ್ದಾರೆ ಎಂದರಲ್ಲದೆ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ ಎಂದರು.
ಬಹಿರಂಗ ಸಭೆಯಲ್ಲಿ ಜಿಲ್ಲಾ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಚಿಕ್ಕನಾಯಕನಹಳ್ಳಿಯ ಇತಿಹಾಸದಲ್ಲಿ 1978ರಲ್ಲಿ ಇಂದಿರಾಗಾಂಧಿ ಪಟ್ಟಣಕ್ಕೆ ಬಂದಾಗ ಸೇರಿದಷ್ಟೇ ಜನಸ್ತೋಮ ಇಂದು ಸಿದ್ದರಾಮಯ್ಯ ಪಟ್ಟಣಕ್ಕೆ ಬಂದಾಗಲೂ ಸೇರಿರುವುದು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆ  ಸಿಕ್ಕಿರುವ ಬೆಂಬಲ ಎಂದರು. 
  ಸಭೆಯಲ್ಲಿ ಅಬ್ಯಾಥರ್ಿ ಎಸ್.ಪಿ.ಮುದ್ದುಹನುಮೇಗೌಡ, ಹಿರಿಯ ಕಾಂಗ್ರೆಸ್ ಮುಖಂಡರಾದ ಎಂ.ವಿ.ರಾಜಶೇಖರನ್, ನಟ ಶಶಿಕುಮಾರ್, ಎಂ.ಆರ್.ಸೀತಾರಾಂ ಮಾತನಾಡಿದರು. ಷಫಿ ಅಹಮದ್, ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಜೇಂದ್ರ, ಸಾಸಲು ಸತೀಶ್, ಸಿ.ಬಸವರಾಜು, ಸೀಮೆಣ್ಣೆ ಕೃಷ್ಣಯ್ಯ, ಬಿ.ಲಕ್ಕಪ್ಪ, ಭಕ್ತರಾಮೇಗೌಡ, ಎಚ್.ಬಿ.ನಾರಾಯಣಗೌಡ, ಸಿ.ಕೆ.ಗುರುಸಿದ್ದಯ್ಯ, ಎ.ಪಿ.ಎಂ.ಸಿ.ಸದಸ್ಯ ಯಳನಡು ಸಿದ್ದರಾಮಯ್ಯ, ಪುರಸಭಾ ಸದಸ್ಯರುಗಳಾದ ಸಿ.ಪಿ.ಮಹೇಶ್, ರೇಣುಕಮ್ಮ ಗುರುಮೂತರ್ಿ,  ಧರಣಿ ಲಕ್ಕಪ್ಪ, ಸಾದರಹಳ್ಳಿ ಮಲ್ಲಿಕಾರ್ಜನಯ್ಯ, ಸಿ.ಎಲ್.ರವಿಕುಮಾರ್, ಕೆ.ಜಿ.ಕೃಷ್ಣೇಗೌಡ,  ಬಾಬು ಸಾಹೇಬ್, ತೀರ್ಥಪುರ ವಾಸು,ಘನ್ನಿಸಾಬ್, ಮಹಮದ್ ಪೀರ್ಸಾಬ್, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ ಸೇರಿದಂತೆ ಹಲವರಿದ್ದರು.

Wednesday, April 9, 2014



ಶ್ರೀ ರಾಮನವಮಿ ಅಂಗವಾಗಿ ಏಳು ದಿನಗಳ ಕಾಲ ಭಜನಾ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಏ.09 : ಪಟ್ಟಣದ ಬನಶಂಕರಿ ದೇವಾಲಯದಲ್ಲಿ ರಾಮನವಮಿಯ ಅಂಗವಾಗಿ ಶ್ರೀ ರಾಮನ ಛಾಯಾಚಿತ್ರ ಪ್ರತಿಷ್ಠಾಪಿಸಿ, ಪೂಜೆ, ನವಗ್ರಹ ಸ್ಥಾಪನೆ, ಹೋಮ, ಹವನದೊಂದಿಗೆ ಪ್ರತಿದಿನ ವಿಶೇಷ ಪೂಜೆ ಹಾಗೂ ಏಳು ದಿನಗಳ ಕಾಲ ಅಖಂಡ ಶ್ರೀ ರಾಮ ಭಜನೆ ನಡೆಯಲಿದೆ.
ಶ್ರೀ ರಾಮ ಸಪ್ತಾಹ ಸಮಿತಿ ವತಿಯಿಂದ ಪ್ರತಿ ವರ್ಷ ಶ್ರೀ ರಾಮನವಮಿಯಂದು ಆರಂಭವಾಗುವ ಶ್ರೀ ರಾಮ ಭಜನೆ ಏಳುದಿನಗಳ ಕಾಲ ನಡೆಯುತ್ತಿದೆ, ಆರಂಭ ದಿನದಂದು ಪಾನಕ, ಫಲಹಾರ ನೀಡಲಾಯಿತು. ಭಜನೆಯು ಏಪ್ರಿಲ್ 14ರವರೆಗೆ ನಡೆಯಲಿದ್ದು, ಬನಶಂಕರಿ ದೇವಾಲಯದ ಮುಂಭಾಗದಲ್ಲಿ ಹಾಕಿರುವ ವಿದ್ಯುದ್ದೀಪ ಮತ್ತು ಅಲಂಕೃತವಾದ ಭವ್ಯ ಚಪ್ಪರ ಹಾಕಲಾಗಿದ್ದು ಅಖಂಡ ಭಜನೆ ಮಾಡುವ ಭಕ್ತರಿಗೆ ಪ್ರತಿನಿತ್ಯ ಅನ್ನಸಂತರ್ಪಣೆ ಸೇವೆ ನಡೆಯುತ್ತದೆ.
ಭಜನಾ ಕಾರ್ಯಕ್ರಮದ ಭಕ್ತರಾದ ಸಿ.ಜಿ.ದಯಾನಂದ್ ಮಾತನಾಡಿ 1944ರಿಂದಲೂ ಶ್ರೀ ರಾಮನವಮಿ ಆಚರಿಸಿಕೊಂಡು ಬರುತ್ತಿದ್ದು 70ವರ್ಷಗಳಿಂದಲೂ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುತ್ತಿದೆ,  ಭಜನೆಯಲ್ಲಿ ನಿತ್ಯ ಐವತ್ತಕ್ಕೂ ಹೆಚ್ಚು ಜನ ಶ್ರೀ ರಾಮನ ಭಜನೆ ಪಾಲ್ಗೊಳ್ಳುತ್ತಿದ್ದಾರೆ. ಈ  ಏಳು ದಿನಗಳ ಭಜನಾ ಕಾರ್ಯಕ್ರಮದ ನಂತರ ಶ್ರೀರಾಮ ದೇವರ ಮತ್ತು ಚೌಡೇಶ್ವರಿ ಹಾಗೂ ಬನಶಂಕರಿ ಅಮ್ಮನವರ ಉತ್ಸವದೊಂದಿಗೆ ಓಕುಳಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಾಂಗ ಸಂಘದ ನಿದರ್ೇಶಕ ಸಿ.ವಿ.ಪ್ರಕಾಶ್, ಶಿಕ್ಷಕ ಚಿ.ನಿ.ಪುರುಷೋತ್ತಮ್, ಶ್ರೀ ರಾಮ ಸಪ್ತಾಯ ಸಮಿತಿ ಕಾರ್ಯಕಾರಿ ಮಂಡಳಿಯ ಕೆ.ಎಂ.ಕುಮಾರ್, ರಂಗನಾಥ್, ಮಲ್ಲಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಟ್ಟಣದ ಧಮರ್ಾವರ ಬೀದಿಯ ಶ್ರೀ ರಾಮ ಮಂದಿರ ದೇವಾಲಯ ಹಾಗೂ ಹಳೆಯೂರು ಆಂಜನೇಯಸ್ವಾಮಿ ದೇವಸ್ಥಾನ, ಹಳ್ಳಿಕಾರರ ಬೀದಿಯ ಶ್ರೀ ರಾಮ ಭಜನಾ ಮಂದಿರ, ಮಹಾಲಕ್ಷ್ಮಿ ಬಡಾವಣೆಯ ಶ್ರೀ ಆಂಜನೇಯಸ್ವಾಮಿ, ಜೋಗಿಹಳ್ಳಿ ಶ್ರೀ ಆದಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಶ್ರೀ ರಾಮನವಮಿ ಅಂಗವಾಗಿ ಪಾನಕ ಫಲಹಾರ ವಿತರಿಸಲಾಯಿತು.



ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ
ಚಿಕ್ಕನಾಯಕನಹಳ್ಳಿ : ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ ಎಂದು ಸ್ವೀಪ್ ಸಮಿತಿಯ ಸದಸ್ಯರಾದ ನಟರಾಜ್ ತಿಳಿಸಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಇಲಾಖಾ ಸಭಾಂಗಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಮತ ಚಲಾಯಿಸುವ ಬಗ್ಗೆ ಮತದಾರರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಶೇ 50ರಿಂದ 60 ರಷ್ಟು ಮತದಾನವಾಗುತ್ತಿದೆ, ವಿಧಾನಸಭೆ, ಜಿ.ಪಂ, ತಾ.ಪಂ ಹಾಗೂ ಸ್ಥಳೀಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗುತ್ತಿದೆ ಎಂಬ ವರದಿಯ ಆಧಾರದ ಮೇಲೆ ಮತದಾರರಲ್ಲಿ ಜಾಗೃತಿ ಮೂಡಿಸಿ ಮತದಾರರು ಮತಗಟ್ಟೆಯ ಕಡೆ ಬಂದು ಮತ ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು ಎಂದರಲ್ಲದೆ ಅಂಗನವಾಡಿ ಕಾರ್ಯಕರ್ತರು ಯಾವುದೇ ಪಕ್ಷ, ಅಭ್ಯಥರ್ಿಯ ಪರವಾಗಿ ಕೆಲಸ ಮಾಡದೆ ಜಾಗೃತಿಯಿಂದ ಇರಬೇಕು, ಅಂಗನವಾಡಿ ಕೇಂದ್ರಗಳಲ್ಲಿ 1ಸಾವಿರದಿಂದ 2 ಸಾವಿರ ಜನಸಂಖ್ಯೆಯ ಮತದಾರರು ಇರುವುದರಿಂದ ಇವರಲ್ಲಿ ಕೆಲವರು ಮತದಾನದ ಬಗ್ಗೆ ತಿರಸ್ಕಾರ ಭಾವನೆ ಇರುವುದರಿಂದ ಅವರಲ್ಲಿ ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಪ್ರಜಾಪ್ರಭುತ್ವದ ಬಗ್ಗೆ ತಿಳುವಳಿಕೆಯನ್ನು ನೀಡಿ ಆಯಾ ಅಂಗನವಾಡಿ ಕೇಂದ್ರಗಳಲ್ಲಿ ಬೀದಿನಾಟಕ ಹಾಗೂ ರಂಗೋಲಿ ಸ್ಪಧರ್ೆಯಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿ ಎಂದು  ಸಲಹೆ ನೀಡಿದರು.
ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ ಮತದಾರರು ತಾವು ಯಾರಿಗೂ ಮತ ಹಾಕಬಾರದೆಂಬ  ಅಭಿಪ್ರಾಯ ಹೊಂದಿರುತ್ತಾರೆ, ಅಂತಹವರು ಮತ ಯಂತ್ರಗಳ ನೋಟಾ ಎಂಬ ಬಟನ್ ಒತ್ತುವುದರಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದರು. 
ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ, ಮಹದೇವಮ್ಮ, ಲಕ್ಷ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.

Tuesday, April 8, 2014

ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ : ಮಾಳವಿಕ ಅವಿನಾಶ್

ಚಿಕ್ಕನಾಯಕನಹಳ್ಳಿ,ಏ.07 : ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಅನುಕೂಲವಾಗುವಂತಹ  ಅಡುಗೆ ಅನಿಲ, ಶೌಚಾಲಯ ಬಳಕೆ, ವಿದ್ಯುತ್, ನೀರು, ಶಾಲಾ ಮಟ್ಟದಲ್ಲಿಯೇ ಮಹಿಳೆಯರಿಗೆ ತಮ್ಮ ಆತ್ಮ ರಕ್ಷಣೆಗೆ ತರಬೇತಿ, ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುವವರಿಗೆ ವಿಶೇಷ ಯೋಜನೆ ಸೇರಿದಂತೆ ಇನ್ನಿತರ ಹಲವು ಜನಪರ ಕಾರ್ಯಕ್ರಮಗಳಿಗೆ  ವಿಶೇಷ ಆದ್ಯತೆ ನೀಡಿದೆ ಎಂದು ಕಿರುತರೆ ಚಿತ್ರನಟಿ ಮಾಳವಿಕ ಅವಿನಾಶ್ ಹೇಳಿದರು. 
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಬಿಜೆಪಿ ಮಹಿಳೆಯರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬದುಕು ಜಟಕಾಬಂಡಿ ಕಾರ್ಯಕ್ರಮದ ಮೂಲಕ ಹಲವು ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ, ಅದೇ ರೀತಿ ದೇಶಾದ್ಯಂತ ಮಹಿಳೆಯರ ಸಮಸ್ಯೆ ನಿವಾರಿಸಲು ನರೇಂದ್ರಮೋದಿ ಗುಜರಾತ್ನಲ್ಲಿ ಜಾರಿಗೆ ತಂದಿರುವ 'ಬೇಟಿಬಚಾವ್ ನಾರಿಅದಾಲತ್' ಕಾರ್ಯಕ್ರಮ, ಮಹಿಳೆಯರ ಸಮಸ್ಯೆಯನ್ನು ತಾಲ್ಲೂಕು ಮಟ್ಟದಲ್ಲಿ ಬಗೆಹರಿಸುವ ಕಾರ್ಯಕ್ರಮವನ್ನು ರಾಷ್ಟ್ರಾದ್ಯಂತ ಜಾರಿಗೆ ತರಲು ನರೇಂದ್ರಮೋದಿ ದೇಶದಲ್ಲಿ ಪ್ರಧಾನಿಯಾಗಬೇಕು, ಹೆಣ್ಣು ಮಕ್ಕಳ ಭ್ರೂಣ ಹತ್ಯೆ, ಅತ್ಯಾಚಾರ ಪ್ರಕರಣ ಹಾಗೂ ರಾಷ್ಟ್ರಾದ್ಯಂತ ಇರುವ ಭ್ರಷ್ಠಾಚಾರವನ್ನು ತೊಲಗಿಸಲು ಬಿಜೆಪಿ ಸಕರ್ಾರದ ನರೇಂದ್ರಮೋದಿ ಪ್ರಧಾನಮಂತ್ರಿಯಾಗಲೇ ಬೇಕು ಎಂದರಲ್ಲದೆ ಎಲ್ಲಾ ಜನಾಂಗಕ್ಕೂ ಅನುಕೂಲವಾಗುವಂತಹ ಭಾಗ್ಯಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಸಕರ್ಾರ ರಾಜ್ಯದಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರೆಂದು ನಮ್ಮಗಳ ಮಧ್ಯೆ ಭೇದ ತರುತ್ತಿದ್ದಾರೆ ಎಂದರು.
ದೆಹಲಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರವಾದರೂ ಪ್ರದಾನಮಂತ್ರಿ ಮನಮೋಹನಸಿಂಗ್ ಮಾತನಾಡದೆ ಮೌನಮೋಹನಸಿಂಗ್ ರೀತಿಯಿದ್ದರು ಅಲ್ಲದೆ ರಾಜ್ಯದಲ್ಲಿ ಇದೇ ಪ್ರಕರಣ ಮುಂದುವರೆದಾಗ ರಾಜ್ಯದ ಮುಖ್ಯಮಂತ್ರಿಯೂ ಮೌನ ವಹಿಸಿದ್ದರು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಹೆಣ್ಣುಮಕ್ಕಳ ರಕ್ಷಣೆಗಾಗಿ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲು ಕೇಂದ್ರದಲ್ಲಿ ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬರಬೇಕಿದೆ ಎಂದರು.
ಬಿ.ಜೆ.ಪಿ.ಯಾ ಸೋಷಿಯಲ್ ಮೀಡಿಯಾ ವಕ್ತಾರೆ ಲತಾ ಭಾರಧ್ವಾಜ್ ಮಾತನಾಡಿ, ರಾಜ್ಯದಲ್ಲಿ 236 ಲಕ್ಷ ಮಹಿಳಾ ಮತದಾರರಿದ್ದಾರೆ, ಇಷ್ಟು ಜನ ಸಂಖ್ಯೆ ಇರುವ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಶೇ33% ರಷ್ಟು ನೀಡುತ್ತಿದ್ದೇವೆ ಎಂದು ಮೋದಿ, ಮಹಿಳಾ ದಿನಾಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಹೆಣ್ಣು ಮಕ್ಕಳಿಗೆ ಬಿಜೆಪಿ ಪಕ್ಷ ಹೆಚ್ಚು ಗೌರವ ನೀಡುತ್ತದೆ, ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಹೆಣ್ಣುಮಕ್ಕಳ ಅಭಿವೃದ್ದಿಗೆ ಶ್ರಮಿಸಿದೆ, ಶೇ 50%ರಷ್ಟು ಮೀಸಲಾತಿ ನೀಡಿದೆ, ಹೆಣ್ಣು ಮಕ್ಕಳು ತಮ್ಮ ಗ್ರಾಮದ ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಪ್ರಚಾರ ಮಾಡಿ ಅಭ್ಯಥರ್ಿ ಜಿ.ಎಸ್.ಬಸವರಾಜು ಗೆಲುವಿಗೆ ಶ್ರಮಿಸಿ ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ ತಮ್ಮ ರಾಜಕೀಯ ಜೀವನದಲ್ಲಿ ಅತ್ಯಂತ ಬದ್ಧತೆಯ ಸಂಸತ್ ಪಟುಗಳಾಗಿ ಅಟಲ್ ಬಿಹಾರಿ ವಾಜಪೇಯಿ ಎಲ್.ಕೆ.ಅಡ್ವಾಣಿಯವಂತಹವರ ಜೊತೆಯಲ್ಲಿ ಕೆಲಸ ಮಾಡಿದ್ದೇನೆ, ಯುಪಿಯ ಸಕರ್ಾರದಲ್ಲಿ 7.5ಲಕ್ಷ ಕೋಟಿ ರೂ ಹಗರಣ ನಡೆದಿದ್ದರೂ ನಮ್ಮ ಪ್ರಧಾನಮಂತ್ರಿಗಳು ಚಕಾರವೆತ್ತುತ್ತಿಲ್ಲ 2ಜಿ ಹಗರಣ 2.75ಲಕ್ಷ ಕೋಟಿ, ಕಲ್ಲಿದ್ದಲೂ ಹಗರಣ 1.75 ಲಕ್ಷ ಕೋಟಿ 25ಸಾವಿರ, ಕಾಮನ್ವೆಲ್ತ್ ಹಗರಣದಲ್ಲಿ ಮಂತ್ರಿಗಳು,ಅಧಿಕಾರಿಗಳು ಭಾಗಿಯಾಗಿರುತ್ತಾರೆ ಇದರಿಂದ ಕೆಲವರು ಕೇಂದ್ರ ಮಂತ್ರಿಗಳು ಜೈಲಿಗೂ ಹೋಗಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ದೇಶ ರಕ್ಷಣೆಗೆ ಬಿಜೆಪಿ ಬದ್ಧವಾಗಿದ್ದು ಪಾಕಿಸ್ತಾನ ನಮ್ಮ ದೇಶದ ಮೇಲೆ ನಿರಂತರ ದಾಳಿ ನಡೆಸಿ ನಮ್ಮ ಸೈನಿಕರ ಹತ್ಯೆ ಮಾಡುತ್ತಿದ್ದರೂ ಇದರ ಬಗ್ಗೆ ಪ್ರಧಾನಮಂತ್ರಿಗಳಾಗಲಿ, ಗೃಹ ಸಚಿವರಾಗಲಿ ನಮ್ಮ ಸೈನಿಕರಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಿಲ್ಲ ಎಂದು ವಿಷಾಧಿಸಿದ ಅವರು, ನೀರಾವರಿ ಸಲುವಾಗಿ ನಡೆಸುತ್ತಿರುವ ಹೋರಾಟದಲ್ಲಿ ಜಿ.ಎಸ್.ಬಸವರಾಜು, ಕಂದಿಕೆರೆ, ಹಂದನಕೆರೆಗಳಿಗೆ ನೀರು ತರಲು ಶ್ರಮಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಪ್ರೇಮಾಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕವಿತಾಕಿರಣ್ಕುಮಾರ್, ಕಾರ್ಯದಶರ್ಿ ನಾಗರತ್ನಮ್ಮ, ತಾಲ್ಲೂಕು ಅಧ್ಯಕ್ಷೆ ಮಾಲಾ, ರಾಜ್ಯ ಪ್ರಧಾನ ಕಾರ್ಯದಶರ್ಿ ನಂದೀಶ್,  ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ತಾ.ಪಂ.ಅಧ್ಯಕ್ಷ ಕೆಂಕೆರೆ ನವೀನ್, ಸದಸ್ಯ ಸೀತಾರಾಮಯ್ಯ, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಮುಖಂಡರುಗಳಾದ ಮಿಲ್ಟ್ರಿಶಿವಣ್ಣ, ಶ್ರೀನಿವಾಸಮೂತರ್ಿ, ಬುಳ್ಳೇನಹಳ್ಳಿ ಶಿವಪ್ರಕಾಶ್ ಮುಂತಾದವರಿದ್ದರು.


ರಾಜ್ಯದಲ್ಲಿ ಬಿಜೆಪಿ ಸಕರ್ಾರ ಬಡವರ ಪರ ಕೆಲಸ ಮಾಡಲಿಲ್ಲ : ಎಂ.ಡಿ.ಲಕ್ಷ್ಮೀನಾರಾಯಣ್

ಚಿಕ್ಕನಾಯಕನಹಳ್ಳಿ,ಏ.07 : ರಾಜ್ಯದಲ್ಲಿ ಬಿಜೆಪಿ ಸಕರ್ಾರ ಆಡಳಿತ ನಡೆಸಿದಾಗ ಬಡವರ ಪರ ಕೆಲಸ ಮಾಡಲಿಲ್ಲ ಆದರೆ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಸಕರ್ಾರ, ಜಾತಿಯತೆಯಲ್ಲಿ ಸಮಾನತೆ ತೋರಿಸುತ್ತಾ ಬಡವರ ಪರವಾಗಿ ಆಡಳಿತ ನಡೆಸುತ್ತಿದೆ, 1ರೂಗೆ 1ಕೆಜಿ ಅಕ್ಕಿಯ ಅನ್ನಭಾಗ್ಯ ಯೋಜನೆ, ಕ್ಷೀರಭಾಗ್ಯ ಯೋಜನೆ ಸೇರಿದಂತೆ ನೇಕಾರರ ಸಮುದಾಯಕ್ಕೆ ವಿಶೇಷವಾಗಿ ಮೀಸಲು ಕಾರ್ಯಕ್ರಮಗಳು ಹಾಗೂ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗುತ್ತಿದೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿದರು.
ಪಟ್ಟಣದ ಬನಶಂಕರಿ ಪ್ರಾರ್ಥನ ಮಂದಿರದಲ್ಲಿ ದೇವಾಂಗ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸೇರುವುದಕ್ಕೂ ಮುನ್ನ ಯಡಿಯೂರಪ್ಪನವರಿಗೆ 30ದಿನದೊಳಗೆ 15ಪ್ರಶ್ನೆಗೆ ಉತ್ತರ ನೀಡುವಂತೆ ತಿಳಿಸಿದ್ದೆನು ಆದರೆ ಅವರು ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲವಾದ್ದರಿಂದ  ಹಾಗೂ ಕಾಂಗ್ರೆಸ್ ಪಕ್ಷ ಬಡವರ ಪರ ಕೆಲಸ ಮಾಡುತ್ತಿರುವ ತತ್ವ ಆದರ್ಶಗಳನ್ನು ನಂಬಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದಾಗಿ ಹೇಳಿದರಲ್ಲದೆ, ರಾಜ್ಯದಲ್ಲಿ ನರೇಂದ್ರಮೋದಿಯ ಹವಾ ಎದ್ದಿರುವುದು ಕೃತಕವಾಗಿದ್ದು ಬಿಜೆಪಿ ಪಕ್ಷ ವೈಟ್ಕಾಲರ್ ಪಕ್ಷವಾಗಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ, ಮುಖಂಡರುಗಳಾದ ಸಿ.ಬಸವರಾಜು, ಚಂದ್ರಶೇಖರ್, ಕೆ.ಜಿ.ಕೃಷ್ಣೆಗೌಡ, ಸಿ.ಎಂ.ಬೀರಲಿಂಗಯ್ಯ, ಸಿ.ಕೆ.ಘನ್ನಿಸಾಬ್, ರೇವಣ್ಣ ಒಡೆಯರ್ ಮುಂತಾದವರು ಉಪಸ್ಥಿತರಿದ್ದರು.

Saturday, April 5, 2014


 ನನ್ನ ರಾಜಕೀಯ ಶಕ್ತಿ ಕುಂದಿಲ್ಲ : ಜೆ.ಸಿ.ಮಾಧುಸ್ವಾಮಿ 
ಚಿಕ್ಕನಾಯಕನಹಳ್ಳಿ,ಏ.05 : ಇನ್ನೂ ನನ್ನ ರಾಜಕೀಯ ಶಕ್ತಿ ಕುಂದಿಲ್ಲ, ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈಗಾಗಲೆ ಶಕ್ತಿಯಾಗಿ ಬೆಳೆದಿದ್ದೇವೆ, ವಿಧಾನಸಭೆ ಚುನಾವಣೆಯಲ್ಲಿ 50ಸಾವಿರಕ್ಕೂ ಹೆಚ್ಚು ಮತ ಪಡೆದು ಗುಂಪಾಗಿ ಬೆಳೆದಿದ್ದೇವೆ, ಈ ಮೂಲಕ ಕಾರ್ಯಕರ್ತರ ಹಿತವನ್ನು ಕಾಯುವುದಾಗಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಮಾಜಿ ಶಾಸಕ ಜೆ.ಸಿ.ಎಂ ಅಭಿಮಾನಿಗಳ ಬಳಗ ಸಭೆಯಲ್ಲಿ ಮಾತನಾಡಿ ಅನಿವಾರ್ಯ ಕಾರಣದಿಂದ ಹಾಗೂ ಕಾರ್ಯಕರ್ತರ ಹಿತದೃಷ್ಠಿಯಿಂದ ಬಿಜೆಪಿಗೆ ಸೇರುವುದು ಅನಿವಾರ್ಯವಾಗಿದೆ, ಒಮ್ಮೆ ಕಾಂಗ್ರೆಸ್ಗೆ ಹೋಗಬೇಕೆಂಬ ತೀಮರ್ಾನ ತೆಗೆದುಕೊಂಡಿದ್ದು ಕೆಲವು ಕಾಂಗ್ರೆಸ್ ನಾಯಕರು ಅಡಚಣೆ ಮಾಡಿದುದರಿಂದ ಕಾಂಗ್ರೆಸ್ಗೆ ಹೋಗಲಿಲ್ಲ, ನಂತರ ಸಂಸದ ಅನಂತ್ಕುಮಾರ್ ಹಾಗೂ ಜಗದೀಶ್ ಶೆಟ್ಟರ್ ದೂರವಾಣಿಯ ಮುಖಾಂತರ ಸಂಪಕರ್ಿಸಿದರು, ಆಕಸ್ಮಿಕವಾಗಿ ಸಿದ್ದಗಂಗಾ ಮಠಾಧೀಶ್ವರರಾದ ಡಾ.ಶಿವಕುಮಾರಸ್ವಾಮಿಗಳ ಹುಟ್ಟುಹಬ್ಬಕ್ಕೆ ಶುಭ ಕೋರಲು ಹೋದಾಗ ಆಕಸ್ಮಿಕವಾಗಿ ಭೇಟಿಯಾದೆವು, ಆಗ ರಾಜಕೀಯದ ಬಗ್ಗೆ ಚಚರ್ೆ ನಡೆದು 5ನೇ ತಾರೀಖಿನವರೆಗೆ ಸಮಯ ನೀಡಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀಮರ್ಾನ ತೆಗೆದುಕೊಳ್ಳುವುದಾಗಿ ಹೇಳಿದ ನಂತರ ಇಂದು ಕಾರ್ಯಕರ್ತರೊಂದಿಗೆ ಸಭೆಯಲ್ಲಿ ತೀಮರ್ಾನ ಕೈಗೊಳ್ಳುತ್ತೇನೆ, ಕಾರ್ಯಕರ್ತರ ಅಭಿಪಾಯದಂತೆ ಬಿಜೆಪಿ ಪಕ್ಷ ಸೇರುತ್ತೇನೆ ಎಂದು ಹೇಳಿದರು.
 ನನ್ನನ್ನು ಪಕ್ಷಾಂತರಿ ಎಂದು ಕರೆಯಬೇಡಿ ಎಂದ ಅವರು ಕೆಜೆಪಿಗೆ ಹೋಗಬೇಕಾದರೆ ಕಾರ್ಯಕರ್ತರ ಅಭಿಪ್ರಾಯ ಪಡೆದೇ ನಾನು ಯಡಿಯೂರಪ್ಪನವರ ಸಮ್ಮುಖದಲ್ಲಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾದೆನು, ಅದೇ ರೀತಿ ಈಗಲೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಬಿಜೆಪಿಗೆ ಸೇರುತ್ತಿದ್ದೇನೆ ಕಾರ್ಯಕರ್ತರು ಬಿಜೆಪಿ ಸದಸ್ಯತ್ವ ಪಡೆದು ರಾತ್ರಿ ಹಗಲು ಬಿಜೆಪಿ ಅಭ್ಯಥರ್ಿ ಜಿ.ಎಸ್.ಬಸವರಾಜುರವರಿಗೆ ಕೆಲಸ ಮಾಡಿ ಅತಿ ಹೆಚ್ಚು ಮತವನ್ನು ಬಸವರಾಜುರವರಿಗೆ ಹಾಕಿಸಿ ನಮ್ಮ ಶಕ್ತಿಯನ್ನು ತೋರಿಸಿ ಎಂದ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿ ಯಾವುದೇ ಷರತ್ತುಗಳಿಲ್ಲದೆ ಎಲ್ಲರೂ ಬಿಜೆಪಿಗೆ ಸೇರಿ ಎಂದು ಕರೆ ನೀಡಿದರು.
ದೇಶದ ಬದಲಾವಣೆಯ ಗಾಳಿ ಬೀಸುತ್ತಿರುವುದರಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ದಿ ಕಾರ್ಯಗಳ ರೀತಿಯಲ್ಲಿ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ನಾವೆಲ್ಲರೂ ನರೇಂದ್ರ ಮೋದಿಯವರಿಗೆ ಬೆಂಬಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ನಾವೆಲ್ಲರೂ ಬಿಜೆಪಿಗೆ ಹೋಗುತ್ತಿರುವುದರಿಂದ ಮೂಲಕಾರ್ಯಕರ್ತರಿಗೆ ಸ್ವಲ್ಪ ಇರುಸು ಮುರುಸುವಾಗುವುದರಲ್ಲಿ ಅನುಮಾನವಿಲ್ಲ ಆದ್ದರಿಂದ ಅವರ ಜೊತೆಗೂಡಿ ಏನೇ ಬಿನ್ನಾಭಿಪ್ರಾಯವಿದ್ದರೂ ಬದಿಗೊತ್ತಿ ಬಿಜೆಪಿ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಮಾಜಿ ಶಾಸಕ ಜೆಸಿಎಂ ಅಭಿಮಾನಿಗಳ ಸಭೆಗೆ ಬಿಜೆಪಿ ಲೋಕಸಭಾ ಅಭ್ಯಥರ್ಿ ಜಿ.ಎಸ್.ಬಸವರಾಜು ಬೇಟಿ ನೀಡಿದರು. ತಮ್ಮನ್ನು ಬೆಂಬಲಿಸುವಂತೆ ಕೋರಿದರು. 
ಸಭೆಯಲ್ಲಿ ಜಿ.ಪಂ.ಸದಸ್ಯ ಲೋಹಿತಬಾಯಿ, ಜಿಲ್ಲಾ ಹಾಲು ಒಕ್ಕೂಟದ ನಿದರ್ೇಶಕ ಶಿವನಂಜಪ್ಪ ಹಳೆಮನೆ, ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಉಪಾಧ್ಯಕ್ಷ ಹೊಸಳ್ಳಿ ಜಯಣ್ಣ, ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್, ನಿರಂಜನಮೂತರ್ಿ, ಲತಾಕೇಶವಮೂತರ್ಿ,  ಎ.ಪಿ.ಎಂ.ಸಿ ಅಧ್ಯಕ್ಷ ಶಿವರಾಜ್, ಕೆ.ಜಿ.ಪಿ ಅಧ್ಯಕ್ಷ ಹೆಚ್.ಎಂ.ಸುರೇಂದ್ರಯ್ಯ, ಜಿ.ಪಂ.ಮಾಜಿ ಸದಸ್ಯ ಶಿವರಾಂ, ಯಳನಡು ಮಲ್ಲಿಕಾಜರ್ುನಯ್ಯ,  ಮತ್ತಿತರರು ಉಪಸ್ಥಿತರಿದ್ದರು.


ತುಮಕೂರು ಲೋಕಸಭಾ ಚುನಾವಣಾ ವೀಕ್ಷಕ ನಾನಿವಾಲಿ ತಾಲ್ಲೂಕಿಗೆ ಭೇಟಿ
ಚಿಕ್ಕನಾಯಕನಹಳ್ಳಿ,ಏ.05: ಶನಿವಾರ ತುಮಕೂರು ಲೋಕಸಭಾ ಚುನಾವಣಾ ವೀಕ್ಷಕ ನಾನಿವಾಲಿ ತಾಲ್ಲೂಕಿಗೆ ಭೇಟಿ ನೀಡಿ ಹಾಲುಗೊಣ, ಜೆ.ಸಿ.ಪುರ, ತರಬೇನಹಳ್ಳಿ, ಮತಿಘಟ್ಟ ಹಾಗೂ ಪಟ್ಟಣದ ಸಕರ್ಾರಿ ಸ್ವತಂತ್ರ ಪೂರ್ವ ಕಾಲೇಜಿನಲ್ಲಿದ್ದ ಮೆಸ್ಟರಿಂಗ್ ಹಾಗೂ ಡಿಮೆಸ್ಟಂಗ್ ಸ್ಥಳ ಹಾಗೂ ಮತಪೆಟ್ಟಿಗೆ ಭದ್ರತಾ ಕೊಠಡಿಯನ್ನು ಪರಿಶೀಲಿಸಿದರು.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ರೂಟ್ಮ್ಯಾಪ್ ಹಾಗೂ ಸೆಕ್ಟರ್ ಮ್ಯಾಪ್ ವೀಕ್ಷಿಸಿದರು. ನಂತರ ಚುನಾವಣಾ ಇ.ವಿ.ಎಮ್ ತರಬೇತಿ ಸ್ಥಳಕ್ಕೆ ತೆರಳಿ ಅಧಿಕಾರಿಗಳು ಉತ್ತಮ ತರಬೇತಿಯನ್ನು ಪಡೆದು ಚುನಾವಣೆಯನ್ನು ಶಾಂತಿಯುತ ಮತದಾನ ನಡೆಯುವಂತೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದರು.
ಪೋಲಿಸರು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಘಟ್ಟೆಗಳಿಗೆ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನೇಮಕ ಮಾಡಿ ಮತದಾನ ಶಾಂತಿಯುತವಾಗಿ ನಡೆಸಲು ಬೇಕಾದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಚುನಾವಣಾ ವೀಕ್ಷಕ ಇ.ಪ್ರಕಾಶ್, ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ಕೃಷ್ಣನಾಯ್ಕ್, ಸಿಡಿಪಿಓ ಅನೀಸ್ಖೈಸರ್ ಮತ್ತಿತರರು ಉಪಸ್ಥಿತರಿದ್ದರು. 

ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಿ : ಗೋವಿಂದರಾಜು
ಚಿಕ್ಕನಾಯಕನಹಳ್ಳಿ,ಏ.05 : ಗ್ರಾ.ಪಂ. ಪಿಡಿಓಗಳು ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಳದಲ್ಲಿದ್ದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಸಲಹೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ತರಬೇತಿ ಸಭಾಂಗಣದಲ್ಲಿ ಪಿಡಿಓ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯದಶರ್ಿಗಳ ಸಭೆಯಲ್ಲಿ ಮಾತನಾಡಿ ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ 15.5 ಕೋಟಿ ಬಿಡುಗಡೆಯಾಗಿದ್ದು ತಾಲ್ಲೂಕಿಗೆ 3ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಎಲ್ಲೆಲ್ಲಿ ಬೋರ್ವೆಲ್ಗಳ ಅವಶ್ಯಕತೆ ಇದೆಯೋ ಅಲ್ಲಿ ಮಾತ್ರ ಹೊಸ ಕೊಳವೆ ಬಾವಿಗಳನ್ನು ಕೊರೆಸಿ ಎಂದು ಸಲಹೆ ನೀಡಿದ ಅವರು ಹಳೆ ಕೊಳವೆ ಬಾವಿಗಳನ್ನು ರೀಬೋರ್ ಮಾಡಿಸಿ ಇದರಿಂದ ಹಣ ಉಳಿತಾಯವಾಗುವುದು. ಪಿಡಿಓಗಳು ವಾಟರ್ಮನ್ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಸಬಹುದು, ಪ್ರತಿ ಸೋಮವಾರ ವಾಟರ್ಮನ್ಗಳ ಸಭೆ ಕರೆದು ಮಾಹಿತಿ ಪಡೆದು, ಹಳ್ಳಿಗಳಲ್ಲಿ 5ರಿಂದ 6ಗಂಟೆ ವಿದ್ಯುತ್ ಇರುವುದರಿಂದ ಅಷ್ಟರೊಳಗೆ ಸಿಸ್ಟನ್ಗಳನ್ನು ತುಂಬಿಸಿದರೆ ಮಾತ್ರ ನೀರಿನ್ನು ಸರಬರಾಜು ಮಾಡಲು ಸಾಧ್ಯ, ಕೆಲವು ಕಡೆ ನೀರು ಪೋಲಾದರೂ ಯಾರೂ ಗಮನ ಹರಿಸುವುದಿಲ್ಲ ಆದ್ದರಿಂದ ವಾಟರ್ಮನ್ಗಳು ಹಾಗೂ ಕಾರ್ಯದಶರ್ಿಗಳು ಗಮನ ಹರಿಸಿ ಎಂದರು. ಪಿಡಿಓಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳನ್ನು ಪ್ರವಾಸ ಮಾಡಿದರೆ ಮಾತ್ರ ನೀರಿನ ಸಮಸ್ಯೆ ತಿಳಿದುಕೊಂಡು ಸಮಸ್ಯೆ ಬಗೆಹರಿಸಲು ಪರಿಹಾರ ಕಂಡುಕೊಳ್ಳಬಹುದು ಎಂದರು.
ಚುನಾವಣೆ ಇರುವುದರಿಂದ ಪಿಡಿಓಗಳು, ಕಾರ್ಯದಶರ್ಿಗಳು ಎಚ್ಚರದಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು, ಬೀದಿ ನಾಟಕದಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು, ಜಿಲ್ಲೆಯಲ್ಲಿ 49ಸಾವಿರ ಹೊಸ ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.  
ಪಿಡಿಓಗಳು ಗ್ರಾಮ ಪಂಚಾಯ್ತಿ ಹಣದಲ್ಲಿ ಕುಡಿಯುವ ನೀರಿಗೆ ಮಾತ್ರ ಉಪಯೋಗಿಸಿ ರಸ್ತೆ, ಮಣ್ಣು ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಡಿ ಎಂದು ಸಲಹೆ ನೀಡಿದರು, ಕಳೆದ ವರ್ಷ ಅತಿ ಕಡಿಮೆ ಮತದಾನವಾಗಿರುವ ಸ್ಥಳಗಳಲ್ಲಿ ಮತದಾನದ ಬಗೆಗಿನ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಿ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ, ಜಿ.ಪಂ. ಎಇಇ ಮಲ್ಲಿಕಾಜರ್ುನ್ ಹಾಗೂ ಪಿಡಿಓಗಳು ಹಾಗೂ ಕಾರ್ಯದಶರ್ಿಗಳು ಉಪಸ್ಥಿತರಿದ್ದರು.

Friday, April 4, 2014


ಅಧಿಕಾರಿಗಳ ನಿರ್ಲಕ್ಷ್ಯ: ಹಸಿವು, ನೀರಡಿಕೆಯಿಂದ ಪ್ರಾಣ ಬಿಟ್ಟ ಚಿರತೆ.
ಚಿಕ್ಕನಾಯಕನಹಳ್ಳಿ,ಏ.04  : ಅರಣ್ಯ ಇಲಾಖಾ ಅಧಿಕಾರಿಗಳ ನಿರ್ಲಕ್ಷತನದಿಂದ 4ವರ್ಷದ ಚಿರತೆ ಆಹಾರ ಮತ್ತು ಕುಡಿಯಲು ನೀರಿಲ್ಲದೆ ಒತ್ತಡದಿಂದ ಹೃದಯಾಘಾತವಾಗಿ  ಸಾವನಪ್ಪಿದೆ.  
ಬುಧವಾರ ರಾತ್ರಿ ಹೊನ್ನೆಬಾಗಿ ಗೊಲ್ಲರಹಳ್ಳಿ ಬಳಿ ತೋಟಕ್ಕೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಬಂದಿದ್ದ ಚಿರತೆ ತೋಟದಲ್ಲಿ ಹಂದಿ ಹಿಡಿಯಲು ಹಾಕಿದ್ದ ತಂತಿ ಉರುಳಿಗೆ ಸಿಲುಕಿ, ಉರುಳನ್ನು ಬಿಡಿಸಿಕೊಳ್ಳಲಾಗದೆ ಒದ್ದಾಡಿ ಹಸಿವು ಬಾಯಾರಿಕೆಯಿಂದ ಚಿರತೆ ಸಾವನ್ನಪ್ಪಿದೆ.
ಮರಣೋತ್ತರ ಪರೀಕ್ಷೆಯ ನಂತರ ಈ ವಿಷಯವನ್ನು  ವೈದ್ಯರು ದೃಢೀಕರಣ ಪಡಿಸಿದ್ದಾರೆ. ಶವಪರೀಕ್ಷೆಯ ನಂತರ ಚಿರತೆಯನ್ನು ಅರಣ್ಯ ಇಲಾಖೆ ಕಛೇರಿಯ ಹಿಂಭಾಗದಲ್ಲಿ ದಹನ ಮಾಡಲಾಯಿತು. 
ರೈತ ಪಳನಿಸ್ವಾಮಿಯ ಜಮೀನನಲ್ಲಿ ಉರುಳಿಗೆ ಸಿಲುಕಿಕೊಂಡ ಚಿರತೆ ಸಾವನ್ನಪ್ಪಿದ ಹಿನ್ನಲೆಯಲ್ಲಿ ರೈತನ ಮೇಲೆ ಅಧಿಕಾರಿಗಳು ಕೇಸು ದಾಖಲಿಸಲು ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ ಎಂಬ ಮಾಹಿತಿ ಗ್ರಾಮಸ್ಥರಲ್ಲಿ ವ್ಯಕ್ತವಾಗುತ್ತಿದೆ.. 
ಗುರುವಾರ ಬೆಳಿಗ್ಗೆ  ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರೂ, ಅವರು ಶೀಘ್ರ ಕಾರ್ಯಪ್ರವೃತ್ತರಾಗಿ ಚಿರತೆಯನ್ನು ಉರುಳಿನಿಂದ ಬಿಡಿಸಿ ಶುಶ್ರೂಷೆ ಮಾಡದೆ ಚಿರತೆಯ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾಗಿದೆ. 
 ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜನರನ್ನು ನಿಯಂತ್ರಿಸಿದ್ದರು ಆದರೆ ಗುರುವಾರ ರಾತ್ರಿ 7.30ರ ಸುಮಾರಿನಲ್ಲಿ ಚಿರತೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎನ್ನಲಾಗಿದೆ. 
ಚಿ.ನಾ.ಹಳ್ಳಿ ವಲಯ ಅರಣ್ಯ ಅಧಿಕಾರಿ ಮಾರುತಿ ಮಾತನಾಡಿ,  ಚಿರತೆಯನ್ನು ಬೋನಿಗೆ ಹಾಕಲು ಬೆಂಗಳೂರಿನ ಬೆನ್ನೇರುಘಟ್ಟದ ವನ್ಯ ಪ್ರಾಣಿ ತಜ್ಞರಿಗೆ ದೂರವಣಿ ಮುಖಾಂತರ ಮಾಹಿತಿ ನೀಡಲಾಗಿತ್ತು ಆದರೆ ಅವರು ಸ್ಥಳಕ್ಕೆ ಆಗಮಿಸುವುದರೊಳಗೆ ಚಿರತೆ ಹೃದಯಾಘಾತದಿಂದ ಸಾವನ್ನಪ್ಪಿದೆ, ಬನ್ನೇರುಘಟ್ಟದ ಚೇತನ್, ತುಮಕೂರಿನಿಂದ ಎಸಿಎಫ್ ಅಮರ್ನಾಥ್, ತಿಪಟೂರಿನ ಇ,ಎಫ್ ನಾಗೇಂದ್ರರಾವ್ ಹಾಗೂ ಸಿಬ್ಬಂದಿ ಆಗಮಿಸಿದರೂ ಏನೂ ಪ್ರಯೋಜನವಾಗಲಿಲ್ಲ. 
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಗುಡ್ಡಗಾಡು ಪ್ರದೇಶದ ಜನರು ಪ್ರಾಣಿಗಳನ್ನು ಬೇಟೆಯಾಡಲು ತಂತಿ ಮುಖಾಂತರ ಉರುಳನ್ನು ಹಾಕಿ ಮೊಲ, ನವಿಲು, ಹಂದಿಗಳಂತಹ ಪ್ರಾಣಿಗಳನ್ನು ಹಿಡಿಯಲು ಹಾಕುವ ಉರುಳಿಗೆ ಚಿರತೆ, ಹುಲಿ ಹಾಗೂ ಇತರೆ ಪ್ರಾಣಿಗಳು ಸಿಲುಕಿ ಕಾಡು ಪ್ರಾಣಿಗಳು ನಾಶವಾಗುತ್ತಿದೆ, ಇದರ ಬಗ್ಗೆ ಅರಣ್ಯ ಇಲಾಖೆಯವರು ಸೂಕ್ತ ಮಾಹಿತಿ ಕೊಡುವ ಮೂಲಕ ಅವರಿಗೆ ಜಾಗೃತಿ ಮೂಡಿಸಬೇಕೆಂದರು.


 ವಿಶ್ವಕರ್ಮ ಜನಾಂಗದ ಅಭಿವೃದ್ದಿಗಾಗಿ
ಚಿಕ್ಕನಾಯಕನಹಳ್ಳಿ,ಏ.04 : ವಿಶ್ವಕರ್ಮ ಜನಾಂಗದ ಅಭಿವೃದ್ದಿಗಾಗಿ ಬೆಂಗಳೂರಿನಲ್ಲಿ ಎರಡು ಎಕರೆ ಜಮೀನನ್ನು ತೆಗೆದುಕೊಂಡಿದ್ದು ಇದರಲ್ಲಿ ವಿಶ್ವಕರ್ಮ ಜನಾಂಗದ ಮಕ್ಕಳಿಗೆ ವಿದ್ಯಾಥರ್ಿನಿಲಯ ಸ್ಥಾಪಿಸಿ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ವಿಶ್ವಕರ್ಮ ರಾಜ್ಯಾಧ್ಯಕ್ಷ ಬಿ.ಉಮೇಶ್ ತಿಳಿಸಿದರು.
ಪಟ್ಟಣದ ಕಾಳಿಕಾಂಬ ದೇವಾಲಯದಲ್ಲಿ ವಿಶ್ವಕರ್ಮ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯಾಧ್ಯಕ್ಷನಾಗಿ 4ವರ್ಷದ ಅವಧಿಯಲ್ಲಿ ಜನಾಂಗದ ಅಭಿವೃದ್ದಿಗಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಲಾಗಿದೆ ರಾಜ್ಯಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ನನ್ನನ್ನು ಬೆಳೆಸಿದ ಜನಾಂಗದವರಿಗೆ ಕೃತಜ್ಞತೆ ಸಲ್ಲಿಸಿದ ಅವರು ತುಮಕೂರು ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯಥರ್ಿ ಎ.ಕೃಷ್ಣಪ್ಪರವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ತಾಲ್ಲೂಕಿನಲ್ಲಿ ಸಣ್ಣ ಪುಟ್ಟ ಜನಾಂಗಗಳು ರಾಜಕೀಯ ಪ್ರಾತಿನಿಧ್ಯ ಪಡೆದು ಮುಂದೆ ಬರುವಂತೆ ಸಲಹೆ ನೀಡಿದ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ವಿಶ್ವಕರ್ಮ ಜನಾಂಗದ ಅಭಿವೃದ್ದಿಗೆ ಹೆಚ್ಚಿನದಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಜನಾಂಗದ ಗೋಪಾಲಾಚಾರ್, ದೇವರಾಜು, ಸಿ.ಯತಿರಾಜು ಉಪಸ್ಥಿತರಿದ್ದರು 

Thursday, April 3, 2014



ಕುಡಿಯುವ ನೀರಿಗಾಗಿ ಸಾಲ್ಕಟ್ಟೆ ಗ್ರಾಮಸ್ಥರಿಂದ ಮುದ್ದೇನಹಳ್ಳಿ ಗ್ರಾ.ಪಂ.ಕಛೇರಿ ಮುಂದೆ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಏ.03 : ತಾಲ್ಲೂಕಿನ ಸಾಲ್ಕಟ್ಟೆ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಆಗ್ರಹಿಸಿ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿಯ ಮುಂದೆ ಧರಣಿ ಹಾಗೂ ಪ್ರತಿಭಟಿನೆ ನಡೆಸಿದರು.
ಮುದ್ದೇನಹಳ್ಳಿ  ಗ್ರಾಮ ಪಂಚಾಯಿತಿಗೆ ಪಿಡಿಓರವರನ್ನು ತರಾಟೆಗೆ ತೆಗೆದುಕೊಂಡ ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀರಂಗಯ್ಯ,  ನೀರಿನ ಸಮಸ್ಯೆಯನ್ನು ನಿವಾರಿಸುವಂತೆ ಒತ್ತಾಯಿಸಿ ಅನೇಕ ಬಾರಿ ಗ್ರಾ.ಪಂ.ಅಧ್ಯಕ್ಷರಿಗೆ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೂ ಮನವಿ ಮಾಡಿದರೂ, ಏನು ಪ್ರಯೋಜನವಾಗಿಲ್ಲ, ಇದಕ್ಕೆ ಅಧಿಕಾರಿಗಳು ಸಾಲ್ಕಟ್ಟೆ ಕಾಲೋನಿಗೆ ಭೇಟಿ ನೀಡಿ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ, ಆದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಇಂದು ಗ್ರಾ.ಪಂ ಮುಂದೆ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.
ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳು ಸೇರಿದ್ದು, ಬಹುತೇಕ ಎಲ್ಲಾ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಗ್ರಾ.ಪಂ.ಅಧ್ಯಕ್ಷರು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಲು ಆಗ್ರಹಿಸಿದರು. 
ಸಾಲ್ಕಟ್ಟೆ ಶ್ರೀನಿವಾಸ್ ಮಾತನಾಡಿ ಕಳದ  ಎರಡು ತಿಂಗಳಿನಿಂದಲೂ ಸಾಲ್ಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಜನರು ತೋಟಗಳಿಗೆ ಹೋಗಿ ನೀರು ತರಬೇಕಾಗಿದೆ, ಅಧ್ಯಕ್ಷರ ಗಮನಕ್ಕೆ ತಂದರೂ ಅವರು ಗ್ರಾಮಸ್ಥರ ಅಳಿಲಿಗೆ ಸ್ಪಂದಿಸುತ್ತಿಲ್ಲ ಎಂದರಲ್ಲದೆ,  ಇದು ಮೂರನೇ ಬಾರಿ ಪ್ರತಿಭಟನೆ ಮಾಡುತ್ತಿದ್ದೇವೆ, ಕೂಡಲೇ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದರು.
ಮುದ್ದೇನಹಳ್ಳಿ ಗ್ರಾ.ಪಂ.ಸದಸ್ಯ ಸ್ವಾಮಿ ಮಾತನಾಡಿ, ಮುದ್ದೇನಹಳ್ಳಿ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಗಮನಕ್ಕೆ ಹಲವು ಬಾರಿ ತಂದರೂ ಯಾವ ಪ್ರಯೋಜನವೂ ಆಗಿಲ್ಲದಿರುವುದರಿಂದ ಜನರು ಗ್ರಾ.ಪಂ.ಗೆ ಮುತ್ತಿಗೆ ಹಾಕಿದ್ದಾರೆ, ಪಿಡಿಓರವರು ನೀರಿನ ಸಮಸ್ಯೆಯನ್ನು ಸಂಜೆಯೊಳಗೆ ಬಗೆಹರಿಸುವುದಾಗಿ ತಿಳಿಸಿರುವುದರಿಂದ ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಸಾಲ್ಕಟ್ಟೆ ವಾಸಿಗಳಾದ ನರಸಿಂಹಮೂತರ್ಿ, ಬಸವರಾಜ್, ಕೃಷ್ಣಯ್ಯ, ಈಶ್ವರಯ್ಯ, ನಟರಾಜು ರಾಮಯ್ಯ, ರಮೇಶ್ ಹಾಗೂ ಗ್ರಾಮಸ್ಥರು ಸೇರಿದಂತೆ ಹಲವರು ಹಾಜರಿದ್ದರು.

ಹರಿಜನ ಕಾಲೋನಿಯ ಮಹಿಳೆಯರಿಂದು ಖಾಲಿ ಕೊಡ ಹಿಡಿದು ತಾ.ಪಂ.ಕಛೇರಿಗೆ ಮುತ್ತಿಗೆ
ಚಿಕ್ಕನಾಯಕನಹಳ್ಳಿ,ಏ.03 : ತಾಲ್ಲೂಕಿನ ಕಂದಿಕೆರೆಯ ಹರಿಜನ ಕಾಲೋನಿಯ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಆಗ್ರಹಿಸಿ ತಾಲ್ಲೂಕು ಪಂಚಾಯ್ತಿಗೆ ಮುತ್ತಿಗೆ ಹಾಕಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.
20ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸಮಸ್ಯೆ ಬಗ್ಗೆ ಅಧ್ಯಕ್ಷರು, ಕಾರ್ಯದಶರ್ಿ, ಪಿಡಿಓರವರಿಗೆ ತಿಳಿಸಿದರೂ ಯಾರೂ ಕೂಡ ಸ್ಪಂದಿಸುತ್ತಿಲ್ಲ  ಎಂದು ಗ್ರಾಮಸ್ಥರು ದೂರಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ಈ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಬೇರೆ ಬೇರೆಯವರ ತೋಟಗಳಿಗೆ ತೆರಳಿ ನೀರಿಗಾಗಿ ಮಾಲೀಕರಲ್ಲಿ ಬೇಡುತ್ತಿದ್ದಾರೆ, ಅಧ್ಯಕ್ಷರು ಶೀಘ್ರ ಸಮಸ್ಯೆ ನಿವಾರಿಸಬೇಕು ಎಂದರಲ್ಲದೆ  ಪಿಡಿಓರವರು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮಸ್ಥ ಕೃಷ್ಣಮೂತರ್ಿ ಮಾತನಾಡಿ ಕಳೆದ ಕೆಲ ತಿಂಗಳ ಹಿಂದ ಆಗಮಿಸಿದ್ದ ಸಚಿವ ಟಿ.ಬಿ.ಜಯಚಂದ್ರರವರಲ್ಲಿ ನೀರಿನ ಸಮಸ್ಯೆ ಬಗ್ಗೆ ಮನವಿ ಮಾಡಿದ್ದರಿಂದ ಎರಡು ದಿನ ಮಾತ್ರ ಗ್ರಾಮಕ್ಕೆ ನೀರನ್ನು ಕೊಡಲಾಯಿತು, ಆದರೆ ಈಗ ಮತ್ತೆ ಅದೇ ರೀತಿ ನೀರಿನ ಸಮಸ್ಯೆ ಎದುರಾಗಿದೆ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ ಎಂದರು.
ಪ್ರತಿಭಟನೆಯಲ್ಲಿ ಗ್ರಾ.ಪಂ.ಸದಸ್ಯೆ ಸುಜಾತ, ಗ್ರಾಮಸ್ಥರಾದ ಹನುಮಂತಯ್ಯ, ಶಾಂತಕುಮಾರಿ, ಲಲಿತಮ್ಮ, ಲಕ್ಷ್ಮಿದೇವಮ್ಮ, ಸಾವಿತ್ರಮ್ಮ, ದೊಡ್ಡಮ್ಮ, ಗೌರಮ್ಮ, ರಂಗಲಕ್ಷ್ಮಮ್ಮ, ನೇತ್ರಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಉರುಳಿಗೆ ಬಿದ್ದ ಚಿರತೆ: ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸಿದ್ದತೆ

ಚಿಕ್ಕನಾಯಕನಹಳ್ಳಿ,ಏ.03 : ತಾಲೂಕಿನ ಹೊನ್ನೇಬಾಗಿ ಗೊಲ್ಲರಹಳ್ಳಿಯ ಬಳಿ ಹಂದಿ ಹಿಡಿಯಲೆಂದು ಹಾಕಿದ್ದ ಉರುಳಿಗೆ ಚಿರತೆ ಸಿಕ್ಕಿಬಿದ್ದಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.
ಈ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಜನರನ್ನು ನಿಯಂತ್ರಿಸಿದರು. ಈ ಸಂದರ್ಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಪಿ.ಎಸ್.ಐ ಮಹಾಲಕ್ಷ್ಮಮ್ಮ , ಹಸುಗೆ ಹಾಕುವ ಉರುಳಿಗೆ ಚಿರತೆ ಸಿಲುಕಿದೆ, ಸ್ಥಳೀಯ ಜನರಿಗೆ ಗಾಬರಿಯಾಗಬಾರದೆಂದು ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಲಾಗಿದೆ ನಂತರ ಚಿರತೆಯನ್ನು ವನ್ಯ ಜೀವಿ ಸುರಕ್ಷತಾ ಧಾಮಕ್ಕೆ  ಕಳುಹಿಸಲಾಗುವುದು ಎಂದು ತಿಳಿಸಿದರು.
ಚಿ.ನಾ.ಹಳ್ಳಿ ವಲಯ ಅರಣ್ಯ ಅಧಿಕಾರಿ ಮಾರುತಿ ಮಾತನಾಡಿ,  ಚಿರತೆಯನ್ನು ಬೋನಿಗೆ ಹಾಕಲು ಬೆಂಗಳೂರಿನ ಬೆನ್ನೇರುಘಟ್ಟದ ವನ್ಯ ಪ್ರಾಣಿ ತಜ್ಞರು ಸ್ಥಳಕ್ಕೆ ಆಗಮಿಸಲಿದ್ದಾರೆ, ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ಅದನ್ನು ಕೊಳ್ಳೇಗಾಲದ ವನ್ಯ ಜೀವಿ ಅರಣ್ಯಕ್ಕೆ ಕಳುಹಿಸಲಿದ್ದೇವೆ. ಚಿರತೆ ರೇಡಿಯಲ್ ಕಾಲರ್ ಹಾಕಿ ನಂತರ ಅಲ್ಲಿರುವ ಪಾಕರ್್ಗಿ ಬಿಡಲಾಗುವುದು ಎಂದರು.
ರೈತ ಸಂಘದ ಮುಖಂಡ ಜಗದೀಶ್ ಮಾತನಾಡಿ ಮೊನ್ನೆ ರಾತ್ರಿ ದೊಡ್ಡರಾಂಪುರದ ಬಳಿ ಹಸುಗಳನ್ನು ಚಿರತೆ ತಿಂದಿರುವ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯ ರೈತರು ಮಾಹಿತಿ ನೀಡಿದ್ದರು, ಕಾಡಿನಲ್ಲಿ ಆಹಾರವಿಲ್ಲದೆ ನಾಡಿಗೆ ಚಿರತೆ ಬಂದಿದೆ. ಅರಣ್ಯ ಇಲಾಖೆಯವರು ಚಿರತೆಯನ್ನು ಸುರಕ್ಷಿತವಾಗಿ ಕಾಪಾಡಲು ಸಲಹೆ ನೀಡಿದರು.

Saturday, March 29, 2014





ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ ತೋಟಕ್ಕೆ ಹರಡಿ ಇಪ್ಪತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಮರಗಿಡಗಳಿಗೆ ಹಾನಿ

ಚಿಕ್ಕನಾಯಕನಹಳ್ಳಿ,ಮಾ.28: ತಾಲೂಕಿನ ಹನುಮಂತನಹಳ್ಳಿಯ ಬಳಿ ಸುಮಾರು ಏಳುವರೆ ಎಕರೆ ತೆಂಗು ಮತ್ತು ಅಡಿಕೆಯ ತೋಟ ಬೆಂಕಿಗಾಹುತಿಯಾಗಿ ಇಪ್ಪತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಫಸಲು ಭರಿತ ಮರಗಳಿಗೆ ಹಾನಿಯಾಗಿದೆ.
ಕಂದಿಕೆರೆ ಹೋಬಳಿ ಹನುಮಂತನಹಳ್ಳಿಯ ಗುಡ್ಡದ ಸಾಲಿಗೆ  ಕಿಡಿಗೇಡಿಗಳು ಇಟ್ಟಿ ಬೆಂಕಿಯಿಂದಾಗಿ  ಸುತ್ತಲಿದ್ದ ಒಣಗಿದ ಹುಲ್ಲು ಪೊದೆಯಲ್ಲಿ ಕಾಣಿಸಿಕೊಂಡ ಬೆಂಕಿ, ಗಾಳಿ ಬೀಸಿದ್ದರಿಂದ ಶರವೇಗದಲ್ಲಿ ತೋಟದ ಸುತ್ತಾ ಆವರಿಸಿಕೊಂಡಿದೆ, ಅಷ್ಟರಲ್ಲಿ ತೋಟದ ಮಾಲೀಕರುಗಳಾದ  ಚಂದ್ರಶೇಖರ್, ನಾಗರಾಜಯ್ಯ ಎಂಬ ಸಹೋದರರು ಬೆಂಕಿ ತೋಟಕ್ಕೆ ತಾಗದಂತೆ ತಡೆಯಲು ಪ್ರಯತ್ನಿಸಿದರಾದರೂ ಕಾಡ್ಗಿಚ್ಚಿನಂತೆ ಹಬ್ಬಿದ ಪರಿಣಾಮ,   ಏಳುವರೆ ಎಕರೆ ಪ್ರದೇಶದಲ್ಲಿದ್ದ ಸುಮಾರು ಒಂದು ನೂರು ಪ್ರಯಾದ ತೆಂಗಿನ ಮರಗಳು, ಎಂಟು ನೂರು ಫಲಭರಿತ ಅಡಿಕೆ ಮರಗಳು, ಒಂದು ನೂರಕ್ಕೂ ಅಧಿಕ ಗೊನೆ ಭರಿತ ಬಾಳೆ, ಎಂಟು  ಮಾವಿನ ಮರಗಳು, ನಲವತ್ತಕ್ಕೂ ಅಧಿಕ ತ್ಯಾಗದ ಮರಗಳು, ಸುಮಾರು ಇನ್ನೂರು ತೆಂಗಿನ ಒಟ್ಲು, ಎರಡು ಸಾವಿರಕ್ಕು ಅಧಿಕ ಅಡಿಕೆ ಒಟ್ಲು, ಆರು ಲಾರಿ ಲೋಡು ರಾಗಿ ಹುಲ್ಲಿನ ಬಣವೆ, ಎರಡು ಸ್ಟಾಟ್ರು, ಪೈಪು, ಕೇಬಲ್, ಡ್ರಿಪ್ ವೈರು ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ಥಿಗೆ ನಷ್ಟವಾಗಿದೆ.
ಮಧ್ಯಾಹ್ನ ಒಂದು ಗಂಟೆಗೆ ಕಾಣಿಸಿಕೊಂಡ ಬೆಂಕಿ  ಬೃಹದಾಕಾರವಾಗಿ ಹರಡಿದೆ,  ಬೆಂಕಿಯ ಕೆನ್ನಾಲಿಗೆ ಸಂಜೆ ಐದರವರೆಗೂ ಒಂದೆ ಸಮನೆ ತನ್ನ ಪ್ರತಾಪವನ್ನು ತೋರಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಹಾಗೂ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಹರ ಸಾಹಸ ಪಟ್ಟಿದ್ದಾರೆ.
ಸ್ಥಳಕ್ಕೆ ಕಂದಾಯ ತನಿಖಾಧಿಕಾರಿ ಹನುಮಂತನಾಯ್ಕ್, ಗ್ರಾಮಲೆಖ್ಖಿಗ ಇ.ದೀಪಕ್, ಡಿ.ಸಿ.ಸಿ.ಬ್ಯಾಂಕ್ನ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಭೇಟಿ ನೀಡಿದ್ದರು.


ಕ್ಷೇತ್ರದ ಹೊರಗಿನವರಿಗೆ, ಕಣ್ಮರೆಯಾದವರಿಗೆ  ನಾನು ಉತ್ತರ ಕೊಡಬೇಕಿಲ್ಲ: ಜಿ.ಎಸ್.ಬಿ.

ಚಿಕ್ಕನಾಯಕನಹಳ್ಳಿ,ಮಾ.29 : ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ ಕೇಂದ್ರ ಸಕರ್ಾರದಿಂದ ಹೆಚ್ಚು ಯೋಜನೆಗಳನ್ನು ತಂದಿದ್ದು, ಈ ಬಗ್ಗೆ ಜ್ಞಾನವಿಲ್ಲದವರು, ಐದು ತಿಂಗಳ ಕಾಲ ಯಾರ ಕೈಗೂ ಸಿಗದೆ ಕಣ್ಮರೆಯಾದವರು, ಈ ಕ್ಷೇತ್ರಕ್ಕೆ ಹೊರಗಿನಿಂದ ಬಂದು ಇಲ್ಲಿಯ ಸ್ಥಿತಿಗತಿ ತಿಳಿಯದೇ ಮಾತನಾಡುವ ಎದುರಾಳಿಗಳಿಗೆ ನಾನು ಉತ್ತರ ಕೊಡಬೇಕಾಗಿಲ್ಲ ಎಂದು ಬಿ.ಜೆ.ಪಿ. ಅಬ್ಯಾಥರ್ಿ ಜಿ.ಎಸ್.ಬಸವರಾಜು ಕಿಡಿಕಾರಿದರು.
ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ನಡೆಸಿದ ನಂತರ ಪ್ರಚಾರಕ್ಕೆಂದು ಹೊರಟವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಾನು ಏನು ನನ್ನ ಕೆಲಸದ ವೈಖರಿಯ ಬಗ್ಗೆ ಈ ಕ್ಷೇತ್ರದ ಜನರಿಗೆ ಅರಿವಿದೆ, ಅವರು ನನ್ನ ಕೈ ಹಿಡಿದು ಇಲ್ಲಿಯವರೆಗೆ ನಡೆಸಿದ್ದಾರೆ ಆದ್ದರಿಂದಲೇ ಗುಬ್ಬಿ ತಾಲೂಕಿಗೆ ಹೆಲಿಕ್ಯಾಪ್ಟರ್ ಉತ್ಪಾದನಾ ಕಾಖರ್ಾನೆಯನ್ನು ತರುವಲ್ಲಿ ನಾನು ಶ್ರಮಸಿದ್ದು,  ಜಿಲ್ಲೆಗೆ ರೈಲ್ವೇ ಯೋಜನೆಯನ್ನು ಜಾರಿಗೆ ತರುವಲ್ಲಿ ನನ್ನ ಪಾತ್ರ ಏನು ಎಂಬುದು ತಿಳಿದಿದೆ,  ಬೆಂಗಳೂರು-ಹೊನ್ನಾವರ ರಸ್ತೆ (ಬಿ.ಎಚ್.ರಸ್ತೆ)ಯನ್ನು ಚತುಷ್ಪಥ ರಸ್ತೆಯ ಯೋಜನೆಯಲ್ಲಿನ ಹೋರಾಟ, ಬೀದರ್-ಚಾಮರಾಜನಗರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವತರ್ಿಸಲು ವಹಿಸಿದ ಕಾಳಜಿ, ಎತ್ತಿನಹೊಳೆ ಶಂಕುಸ್ಥಾಪನೆಯಲ್ಲಿನ ಶ್ರಮ ಇವೆಲ್ಲವೂ ಕಣ್ಣಮುಂದೆ ಇದೇ,  ಇಷ್ಟೆಲ್ಲಾ ಈ ಕ್ಷೇತ್ರದಲ್ಲಿದ್ದವರಿಗೆ, ಇಲ್ಲಿ ಸದಾ ಓಡಾಡುವರಿಗೆ ಕಾಣುತ್ತದೆ ಎಲ್ಲಿಂದಲೋ ಬಂದವರಿಗೆ ಈ ಬಗ್ಗೆ ತಿಳಿಯಲು ಹೇಗೆ ಸಾಧ್ಯವೆಂದು ವ್ಯಂಗವಾಡಿದರು.
ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ ಪಕ್ಕದ ಕ್ಷೇತ್ರ ಶಾಸಕರೊಬ್ಬರು ಬಾಯಿಗೆ ಬಂದರೀತಿಯಲ್ಲಿ ಮಾತನಾಡಿದ್ದಾರೆ, ಅವರಿಗೆ ಅವರಾಡಿರುವ ಮಾತಿನಲ್ಲಿ ವಿಶ್ವಾಸವಿದ್ದರೆ, ಬಹಿರಂಗ ಚಚರ್ೆಗೆ ಬರಲಿ,  ನನ್ನ ಸಾಧನೆ ಏನು ಎಂದು ದಾಖಲೆ ಸಮೇತ ತೋರಿಸುತ್ತೇನೆ, ಆಗುವ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದ ಅವರಿಂದ ನಾನು ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಹೇಳಿಸಿಕೊಳ್ಳಬೇಕಿಲ್ಲ. ಮನೆಯಲ್ಲಿ ಕುಳಿತು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮಾಡುತ್ತಾ, ಸ್ಥಳೀಯ ಜನರಿಗೆ ಭೂಮಿ ಕೊಡಬೇಡಿ ಎಂದು ಹೇಳಿಕೊಡುವ ಆ ವ್ಯಕ್ತಿಗೆ ಹೆಲಿಕ್ಯಾಪ್ಟರ್ ಉತ್ಪಾದನಾ ಕಾಖರ್ಾನೆಯ ಬಗ್ಗೆ ಏನು ಗೊತ್ತು, ಅಲ್ಲಿಯ ಅಧಿಕಾರ ವರ್ಗದವರ ಹೆಸರೂ ಗೊತ್ತಿಲ್ಲದ ಅವರು ಮೊದಲು ಈ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಪಡೆದುಕೊಳ್ಳಲಿ ಆನಂತರ ಚಚರ್ೆಗೆ ಬರಲಿ ಎಂದರು. 
ಸಂಸದನಾಗಿ ಕೇಂದ್ರ ಸಕರ್ಾರದಿಂದ ರಾಜ್ಯದಲ್ಲಿ ಅತಿ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ, ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗಾಗಿ (ಓಒಚ) ರಾಷ್ಟ್ರೀಯ ಹೂಡಿಕೆ ಉತ್ಪಾದನಾ ವಲಯ  ಎಂಬ ಯೋಜನೆಯಲ್ಲಿ ತುಮಕೂರಿಗೆ ಒಂದು ಲಕ್ಷ ಕೋಟಿ ಹಣವನ್ನು ತರಲಾಗಿದ್ದು ಅದರಲ್ಲಿ ಚಿ.ನಾ.ಹಳ್ಳಿ, ಮಧುಗಿರಿ, ಶಿರಾ, ತಿಪಟೂರು, ಗುಬ್ಬಿ ತಾಲ್ಲೂಕುಗಳೂ ಸೇರಿವೆ ಎಂದರು.
ತಾಲ್ಲೂಕಿನಲ್ಲಿ ಭೀಕರ ಜಲಕ್ಷಾಮ ಉಂಟಾಗಿದ್ದು ಹೇಮಾವತಿ ನೀರಿನ ಯೋಜನೆಯ ಕಾಮಗಾರಿ ಡಿಸಂಬರ್ ವೇಳೆಗೆ ಮುಗಿಸಲು ನಿದರ್ೇಶನವಿದೆ ಎಂದರು.  ಅಲ್ಲದೆ ಹಿರಿಯೂರು, ಹುಳಿಯಾರು, ಚಿ.ನಾ.ಹಳ್ಳಿ ಕಿಬ್ಬನಹಳ್ಳಿ, ತುರುವೇಕೆರೆ, ಮರಳೂರು ಮೂಲಕ ರೈಲ್ವೆ ಯೋಜನೆಯೂ ಬಜೆಟ್ನಲ್ಲಿ ಜಾರಿಯಾಗಿದೆ ಹಾಗೂ ಚಿ.ನಾ.ಹಳ್ಳಿ ಹಾಸನದವರೆಗೆ ಶೆಟ್ಟಿಕೆರೆ ಮಾರ್ಗವಾಗಿ ಉತ್ತಮ ರಸ್ತೆ ನಿಮರ್ಾಣಕ್ಕೆ ಯೋಜನೆ ರೂಪಿಸಿದ್ದು ತಾಂತ್ರಿಕ ಕಾರಣದಿಂದ ಆ ಯೋಜನೆಗೆ ಹಿನ್ನಡೆಯಾಗಿದೆ ಎಂದರು.  
ಗೋಷ್ಠಿಯಲ್ಲಿ ಎಚ್.ರಾಮಾಂಜನೇಯ, ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಉಪಸ್ಥಿತರಿದ್ದರು.

Tuesday, March 18, 2014

ಪಕ್ಷದೊಳಗಿನ ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಮಾಧ್ಯಮದ ಮುಂದೆ ಹೋಗದಂತೆ ಮುಖಂಡರಿಗೆ ಸಲಹೆ

ಚಿಕ್ಕನಾಯಕನಹಳ್ಳಿ,ಮಾ.18 : ಬ್ಲಾಕ್ ಕಾಂಗ್ರೆಸ್ಸಿನಲ್ಲಿರುವ ಭಿನ್ನಮತವನ್ನು ಶಮನಗೊಳಿಸಲು ಮಂಗಳವಾರ ತಾಲ್ಲೂಕಿಗೆ ಲೋಕಸಭಾ ಅಭ್ಯಥರ್ಿ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ಮುಖಂಡರುಗಳ ಮನೆಗೆ ಭೇಟಿ ನೀಡಿದರು.
  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೇ 26ರ ನಂತರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು, ನಮ್ಮಲ್ಲಿ ಏನೇ ಭಿನ್ನಮತವಿದ್ದರೂ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಮಾಧ್ಯಮಗಳಿಗೆ ಹೋಗಬಾರದು, ಇದರಿಂದ ಪಕ್ಷದ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಆದ್ದರಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು. 
 ಮಾಜಿ ಶಾಸಕ ಬಿ.ಲಕ್ಕಪ್ಪ, ಸೀಮೆಎಣ್ಣೆ ಕೃಷ್ಣಯ್ಯ, ಹೆಚ್.ಬಿ.ಎಸ್.ನಾರಾಯಣಗೌಡರ ಹಾಗೂ ಪುರಸಭಾ ಸದಸ್ಯರಾದ ಸಿ.ಪಿ.ಮಹೇಶ್, ರೇಣುಕಾಗುರುಮುತರ್ಿ, ಹುಳಿಯಾರಿನ ಧನುಷ್ ರಂಗನಾಥ್ ಮನೆಗೆ ಭೇಟಿ ನೀಡಿ ಪಕ್ಷದ ಗೆಲುವಿಗೆ ಶ್ರಮಿಸಲು ಕೋರಿರುವುದಾಗಿ ತಿಳಿಸಿದರು.. 
ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯಥರ್ಿ ಎಸ್.ಪಿ.ಮುದ್ದಹನುಮೇಗೌಡ ಇದುವರೆಗೂ ತಾಲ್ಲೂಕಿನಲ್ಲಿ ಇದ್ದ ಭಿನ್ನಮತ ಶಮನವಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಈಗಾಗಲೇ ತಾಲ್ಲೂಕಿನಲ್ಲಿ ಕಾಂಗ್ರೆಸ್ಗೆ ವಿವಿಧ ಪಕ್ಷಗಳಿಂದ ಕಾರ್ಯಕರ್ತರು ಬರಲು ಉತ್ಸಾಹಕರಾಗಿದ್ದು ಶೀಘ್ರದಲ್ಲಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಬರಮಾಡಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ತೀರ್ಥಪುರದ ವಾಸು, ರಾಮಕೃಷ್ಣಯ್ಯ, ಕೆ.ಜಿ.ಕೃಷ್ಣೆಗೌಡ, ಘನ್ನಿಸಾಬ್, ಕಿಬ್ಬನಹಳ್ಳಿ ಮಹಾಲಿಂಗಪ್ಪ, ಶಿವಣ್ಣ, ಚಿಕ್ಕಸ್ವಾಮಿ, ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.

Saturday, November 2, 2013


ಕನ್ನಡವನ್ನು ಉಳಿಸಿ ಬೆಳೆಸೋಣ : ಶಾಸಕ ಸಿ.ಬಿ.ಸುರೇಶ್ಬಾಬು
ಚಿಕ್ಕನಾಯಕನಹಳ್ಳಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಹಶೀಲ್ದಾರ್ ಕಾಮಾಕ್ಷಮ್ಮ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾಧ್ಯಕ್ಷೆ ಗೀತಾರಮೇಶ್, ತಾ.ಪಂ.ಉಪಾಧ್ಯಕ್ಷ ರಮೇಶ್ಕುಮಾರ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಕಸಾಪ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,ನ.01 : ನಮ್ಮ ಆಚಾರ, ವಿಚಾರದೊಂದಿಗೆ ಕನ್ನಡವನ್ನು ಉಳಿಸಿ ಬೆಳೆಸೋಣ, ನಾಡಿನ ನೆಲ, ಜಲದ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡು ಮುನ್ನೆಡೆಯೋಣ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
    ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ನೆಲ, ಜಲಗಳಿಗಾಗಿ ಅವಿರತವಾಗಿ ದುಡಿದವರೆಲ್ಲರನ್ನು ಸ್ಮರಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ತಹಶೀಲ್ದಾರ್ ಕಾಮಾಕ್ಷಮ್ಮ ಮಾತನಾಡಿ ಹೆಸರಾಗಲಿ ಕನರ್ಾಟಕ, ಉಸಿರಾಗಲಿ ಕನ್ನಡ ಎಂಬ ಕವಿವಾಣಿ ಸದಾ ಎಲ್ಲರ ಜಾಗೃತ ಅರಿವಾಗಿರಲಿ, ಈ ನೆಲದಲ್ಲಿ ಕನ್ನಡ ವಿಜೃಂಭಿಸಲಿ, ಕನ್ನಡ ಆಡಳಿತದಲ್ಲಿ ಸದಾ ಕನ್ನಡ ಮೆರೆಯಲಿ, ಕನ್ನಡ ನಾಡು ನುಡಿಗಾಗಿ ದುಡಿದ, ದುಡಿಯುತ್ತಿರುವ ತಾಲ್ಲೂಕಿನ ಮಹಾನ್ ಚೇತನಗಳು ಎಲ್ಲರಿಗೂ ಆದರ್ಶವಾಗಿರಲಿ, ಮಕ್ಕಳೇ ಚೆನ್ನಾಗಿ ಕನ್ನಡ ಓದಿ, ಕನ್ನಡ ಬರೆಯಿರಿ, ಕನ್ನಡ ಕಲಿಯಿರಿ, ಕನ್ನಡ ಪುಸ್ತಕ ಪ್ರೇಮ ನಿಮ್ಮದಾಗಿರಲಿ ಎಂದ ಅವರು ಕನ್ನಡದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಆ ಮೂಲಕ ಕನ್ನಡ ತಾಯಿ ಸೇವೆ ಮಾಡಿ ಸಾರ್ಥಕವಾಗೋಣ ಎಂದರು.
    ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿದರು,     ಸಮಾರಂಭದಲ್ಲಿ ಹಾಮರ್ೋನಿಯಂ ಕಲಾವಿದ ಶಂಕರಲಿಂಗಪ್ಪ , ಬಾಲ ಪ್ರತಿಭೆ ಟಿ.ಜಿ.ಪ್ರಶಾಂತ್ರವರನ್ನು ಸನ್ಮಾನಿಸಲಾಯಿತು.
    ಶಾಲಾ ಮಕ್ಕಳು ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ವಿವಿಧ ಸ್ಥಬ್ಧಚಿತ್ರಗಳ ವೇಷಭೂಷಣದಲ್ಲಿ ಪಾಲ್ಗೊಂಡಿದ್ದರು.
    ಈ ಸಂದರ್ಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್, ಪುರಸಭಾಧ್ಯಕ್ಷೆ ಗೀತಾರಮೇಶ್, ತಾ.ಪಂ.ಉಪಾಧ್ಯಕ್ಷ ರಮೇಶ್ಕುಮಾರ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಕಸಾಪ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಪೌರಾಣಿಕ ನಾಟಕಗಳ ರಂಗದೃಶ್ಯಾವಳಿಯಲ್ಲಿ ಪಟ್ಟಣದ ಕಾಳಮ್ಮನಗುಡಿ ಶಾಲಾ ಮಕ್ಕಳಿಂದ ನಾಟಕ ನಡೆಯಿತು. ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಗಂಗಾಧರಯ್ಯ, ಸಿದ್ದು ಜಿ.ಕೆರೆ, ಶಾಲೆಯಶಿಕ್ಷಕರುಗಳಾದ ಜಯಮ್ಮ, ಸಿ.ಟಿ.ರೇಖಾ ಉಪಸ್ಥಿತರಿದ್ದರು.
 

ಶೀರ್ಷಿಕೆ ಸೇರಿಸಿಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಬಸ್ ಏಜೆಂಟ್ ಗಂಗಾಧರ್ರಾವ್ ಎಮ್.ಎಮ್.ನಾಯಕನ ಪಾತ್ರವೇಷಧಾರಿಯಾಗಿದ್ದರು. ಶಾಸಕ ಸಿ.ಬಿ.ಸುರೇಶ್ಬಾಬು, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಪುರಸಭಾ ಸದಸ್ಯರಾದ ಅಶೋಕ್, ರವಿಚಂದ್ರ, ಮಹಮದ್ ಖಲಂದರ್, ಕೆ.ಜಿ.ಕೃಷ್ಣೆಗೌಡ ಭಾಗವಹಿಸಿದ್ದರು.

ಚಿಕ್ಕನಾಯಕನಹಳ್ಳಿ ಪಟ್ಟಣದ  ಆಟೋಚಾಲಕರು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.

 

ಚಿಕ್ಕನಾಯಕನಹಳ್ಳಿಯ ಗ್ರಾಮೀಣ ಪ್ರತಿಭೆ ಹರೀಶ್ ರಾಷ್ಟ್ರೀಯ ಖೋ-ಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಇವರನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಸಿ.ಎಸ್.ಪ್ರದೀಪ್ಕುಮಾರ್, ಪಾಲ್ ಹ್ಯಾರಿಸ್ ಫೆಲೋ ರೋ.ಎಂ.ವಿ.ನಾಗರಾಜ್ ರಾವ್, ಕಾರ್ಯದಶರ್ಿ ಡಾ.ಪ್ರಶಾಂತ್ಕುಮಾರ್ ಶೆಟ್ಟಿ, ತಾ.ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂತರ್ಿ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿಯ ಡಿವಿಪಿ ಶಾಲೆಯಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಬಿ.ಇ.ಓ ಸಾ.ಚಿ.ನಾಗೇಶ್, ಡಿವಿಪಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು ಪಾಲ್ಗೊಂಡಿದ್ದರು.
ಚಿಕ್ಕನಾಯಕನಹಳ್ಳಿ,ನ.01 : ದೇಶದಲ್ಲೇ ತೃತೀಯ ಸ್ಥಾನ ಹೊಂದಿರುವ ಕನ್ನಡ ಭಾಷೆಯನ್ನು ಆಚರಿಸುವುದರ ಜೊತೆಗೆ ಉಳಿಸಿ, ಬೆಳೆಸುವುದು ಕನ್ನಡಾಭಿಮಾನಿಗಳ ಕರ್ತವ್ಯ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
    ಪಟ್ಟಣದ ಡಿವಿಪಿ ಶಾಲೆಯಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಕನ್ನಡ ಭಾಷೆ ಎಲ್ಲಾ ಎಲ್ಲಾ ಭಾಷೆಗಳಿಗಿಂತ ಉತ್ತಮ ಹಾಗೂ ನಮಗೆ ಹೆಮ್ಮೆಯ ಕನ್ನಡ ಭಾಷೆ ಎಂದರು.
    ಸಮಾರಂಭದಲ್ಲಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಪಿ.ಚಂದ್ರಶೇಖರಶೆಟ್ಟರು ಉಪಸ್ಥಿತರಿದ್ದರು.

Friday, September 13, 2013


ಅಕ್ರಮವಾಗಿ ಪಡಿತರ ಚೀಟಿಯನ್ನು ಪಡೆದಿದ್ದರೆ ತನಿಖೆಯಿಂದ ರದ್ದಾಗಲಿದೆತ; ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ
ಚಿಕ್ಕನಾಯಕನಹಳ್ಳಿ,ಸೆ.12 : ಸಕರ್ಾರ ಬಿಪಿಎಲ್ ಮಾನದಂಡಗಳನ್ನು ಪರಿಷ್ಕರಿಸಿ ಜಾರಿಗೆ ತಂದಿರುವ ಹೊಸ ವ್ಯವಸ್ಥೆಯಲ್ಲಿ ಸಕರ್ಾರಿ ನೌಕರರು, ಮೂರು ಎಕ್ಟೇರ್ ಭೂಮಿ ಹೊಂದಿರುವವರು, ಕಾರು, 100 ಸಿ.ಸಿ.ಮೇಲ್ಪಟ್ಟ ದ್ವಿಚಕ್ರ ವಾಹನ ಹೊಂದಿರುವವರು, ಪ್ರತಿ ತಿಂಗಳು 450ಕ್ಕೂ ಹೆಚ್ಚು ವಿದ್ಯುತ್ ಬಿಲ್ ಪಾವತಿಸುತ್ತಿರುವವರು ಅಕ್ರಮವಾಗಿ ಪಡಿತರ ಚೀಟಿಯನ್ನು ಪಡೆದಿದ್ದರೆ ತನಿಖೆಯಿಂದ ರದ್ದಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದ ಸಕರ್ಾರಿ ಕಾರ್ಯಕ್ರಮಗಳ ಹಾಗೂ ಯೋಜನೆಗಳ ಅನುಷ್ಠಾನದ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
 ತಾಲ್ಲೂಕಿನಲ್ಲಿ ಮಧ್ಯವತರ್ಿಗಳು ಹಣ ಪಡೆದು ಅಧಿಕಾರಿಗಳೊಂದಿಗೆ ಶಾಮೀಲಾಗಿ ಅಕ್ರಮವಾಗಿ ಪಡಿತರ ಚೀಟಿ ನೀಡುತ್ತಿರುವ ದೂರಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. 
2011ರ ಜನಗಣತಿಯ ಪ್ರಕಾರ ತಾಲ್ಲೂಕಿಲ್ಲಿ 52612 ಕುಟುಂಬಗಳಿವೆ. ಅಂತ್ಯೋದಯ ಕಾಡರ್್ಗಳು ಪಟ್ಟಣದಲ್ಲಿ 123, ಗ್ರಾಮೀಣ ಪ್ರದೇಶದಲ್ಲಿ 3863ಕಾಡರ್್ಗಳು. ಪಟ್ಟಣದಲ್ಲಿ ಬಿಪಿಎಲ್ ಕಾಡರ್್ದಾರರು 3251 ಗ್ರಾಮೀಣ ಪ್ರದೇಶದಲ್ಲಿ 35091 ಕಾಡರ್್, ಪಟ್ಟಣದಲ್ಲಿ ಎ.ಪಿ.ಎಲ್ ಕಾಡರ್್ 444 ಗ್ರಾಮೀಣ ಪ್ರದೇಶದಲ್ಲಿ 9559 ಕಾಡರ್್ದಾರರಿದ್ದಾರೆ. ಒಟ್ಟು 52313 ಪಡಿತರ ಚೀಟಿಗಳಿವೆ ಎಂದು ತಿಳಿಸಿದರು. 
ಜಿಲ್ಲೆಗೆ 9.82 ಕೋಟಿರೂ ಕುಡಿಯುವ ನೀರಿನ ಯೋಜನೆಗೆ ಮಂಜೂರಾಗಿದ್ದು ಜಿಲ್ಲೆಯ 4ನೇ ಹಂತ ಕಾಮಗಾರಿಗೆ ಸಕರ್ಾರ ಅನುಮತಿ ನೀಡಿದೆ, ತಾಲ್ಲೂಕಿನಲ್ಲಿ ಹಿಂದೆ ಕೊರೆದ ಕೊಳವೆ ಬಾವಿಗಳಿಗೆ ಮೋಟಾರು ಪಂಪ್ ಅಳವಡಿಸಲು ಮೊದಲನೆ ಹಂತವಾಗಿ 5ಕೋಟಿ ರೂ ಬಿಡುಗಡೆಯಾಗಿದೆ, ತುಮಕೂರು, ಮಧುಗಿರಿ, ಉಪವಿಭಾಗಕ್ಕೆ ತಲಾ 2.5ಕೋಟಿ ರೂ ಬಿಡುಗಡೆಯಾಗಿದೆ ಎಂದರು.
. ತಾಲ್ಲೂಕಿನಲ್ಲಿ ಮಳೆ, ಬೆಳೆ ಬಗ್ಗೆ ಅಧಿಕಾರಿಗಳ ಮಾಹಿತಿ ಪಡೆದು ಸೆಪ್ಟಂಬರ್ ವಾಡಿಕೆ ಮಳೆ ಬಿತ್ತನೆ ಸ್ಥಿತಿಗತಿ, ಕುಡಿಯುವ ನೀರು, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಅನುಷ್ಠಾನದ ಬಗ್ಗೆ ಅಧಿಕಾರಿಗಳೊಂದಿಗೆ ಚಚರ್ೆ ನಡೆಸಿ ವರದಿಯನ್ನು ಅಧಿಕಾರಿಗಳು ನೀಡಿದ್ದಾರೆ, ಅಧಿಕಾರಿಗಳು ತಾಲ್ಲೂಕಿನಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ತಾಲ್ಲೂಕಿನಲ್ಲಿ ಇತ್ತಿಚೆಗೆ ಸುರಿದ ಉತ್ತಮ ಮಳೆಯಿಂದ ಜಾನುವಾರುಗಳಿಗೆ ಮೇವಿನ ಕೊರತೆ ಬರುವುದಿಲ್ಲ ಎಂದರು.
ರಾಜ್ಯದಲ್ಲಿ ಏಕರೂಪ ಸೀಮೆಎಣ್ಣೆ ಬೆಲೆಯನ್ನು ಸಕರ್ಾರ ಜಾರಿಗೆ ತಂದಿದ್ದು ಜಿಲ್ಲೆಯಲ್ಲಿ 16.20 ಬೆಲೆ ನಿಗದಿ ಪಡಿಸಲಾಗಿದೆ. ಪ್ರತಿ ಕಾಡರ್್ ಹೊಂದಿರುವವರು 1ಯುನಿಟ್ಗೆ 10 ಕೆ.ಜಿ ಅಕ್ಕಿಯ ಬದಲು 9.ಕೆ.ಜಿ.ಅಕ್ಕಿ 1ಕೆ.ಜಿ.ಗೋದಿ 2ಯುನಿಟ್ಗೆ 20ಕೆಜಿ ಅಕ್ಕಿ ಬದಲು 18ಕೆ.ಜಿ ಅಕ್ಕಿ, 2ಕೆ.ಜಿ ಗೋದಿ, 3ಯುನಿಟ್ಗೆ 30ಕೆ.ಜಿ.ಅಕ್ಕಿಯ ಬದಲು 27ಕೆ.ಜಿ.ಅಕ್ಕಿ 3ಕೆ.ಜಿ.ಗೋಧಿ ನೀಡಲಾಗುವುದು. ಗೋದಿಗೆ ಕೆ.ಜಿಗೆ ಒಂದು ರೂಪಾಯಿಯಂತೆ ನಿಗಧಿಪಡಿಸಲಾಗಿದೆ.
ಪುರಸಭೆಯ ಹತ್ತಿರವಿರುವ ಆಯುಷ್ ಆಸ್ಪತ್ರೆಗೆ ಸೇರಿದ ಒಂದು ಕಟ್ಟಡವನ್ನು ಕೆಲವು ಖಾಸಗಿ ಪಟ್ಟಭದ್ರ ವ್ಯಕ್ತಿಗಳು ಸ್ವಾಧೀನಕ್ಕೆ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿನ ಮೇಲೆ ತಾ.ವೈದ್ಯಾಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಇದರ ಬಗ್ಗೆ ಪರಿಶೀಲಿಸಿ ಸಕರ್ಾರಿ ಆಸ್ತಿಯ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳು ತಾ.ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಉಪವಿಭಾಗಾಧಿಕಾರಿ ಬಿ.ಸಿಂಧು, ತಹಶೀಲ್ದಾರ್ ಕಾಮಾಕ್ಷಮ್ಮ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ಪುರಸಭೆಗೆ ಜೆಡಿಎಸ್ನ ಗೀತಾರಮೇಶ್ ಅಧ್ಯಕ್ಷರಾಗಿ, ಕೆಜೆಪಿಯ ನೇತ್ರಾವತಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ.
ಚಿಕ್ಕನಾಯಕನಹಳ್ಳಿ,ಸೆ.12 : ಚಿಕ್ಕನಾಯಕನಹಳ್ಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಗೀತಾರಮೇಶ್, ಉಪಾಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾದರು.
ಸಕರ್ಾರದ ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡಕ್ಕೆ ಮಹಿಳೆಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ 20ನೇ ವಾಡರ್್ನ ಗೀತಾರಮೇಶ್, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ 4ನೇ ವಾಡರ್್ನ ನೇತ್ರಾವತಿ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಪುರಸಭಾ ಸದಸ್ಯರಲ್ಲಿ ಪರಿಶಿಷ್ಠ ಪಂಗಡದ ಮಹಿಳಾ ಸದಸ್ಯರು ಕೆಜೆಪಿಯಿಂದ ಆಯ್ಕೆಯಾದ ನೇತ್ರಾವತಿ ಬಿಟ್ಟರೆ ಬೇರೆ ಯಾರೂ ಆಯ್ಕೆಯಾಗಿರಲಿಲ್ಲ, ಆ ಕಾರಣದಿಂದ ಉಪಾಧ್ಯಕ್ಷ ಸ್ಥಾನ ಪುರಸಭೆಯಲ್ಲಿ ಕೆಜೆಪಿಯು 2ಸ್ಥಾನ ಪಡೆದಿದ್ದರೂ ನೇತ್ರಾವತಿರವರಿಗೆ ಒಲಿದಿದೆ.
ಅಧ್ಯಕ್ಷ ಸ್ಥಾನ ಜೆಡಿಎಸ್ನ ಗೀತಾರಮೇಶ್ಗೆ ಒಲಿದು ಬಂದಿದ್ದು 18ಸದಸ್ಯರ ಬಲವಿರುವ ಪಕ್ಷದಲ್ಲಿ ಒಮ್ಮತದಿಂದ ತೀಮರ್ಾನಿಸಿ ಉಳಿದ ಸದಸ್ಯರಾರು ನಾಮಪತ್ರ ಸಲ್ಲಿಸದೇ ಇರುವುದರಿಂದ ಅಧ್ಯಕ್ಷ ಸ್ಥಾನವನ್ನು ಗೀತಾರಮೇಶ್ ಅಲಂಕರಿಸಿದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗೀತಾರಮೇಶ್-ನೇತ್ರಾವತಿ ಇಬ್ಬರನ್ನು ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕರಿಯಾಗಿದ್ದ ತಹಶೀಲ್ದಾರ್ ಕಾಮಾಕ್ಷಮ್ಮರವರು ನೂತನ ಅಧ್ಯಕ್ಷರಾಗಿ ಗೀತಾರಮೇಶ್, ಉಪಾಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಒಟ್ಟು 23ಸದಸ್ಯರ ಬಲವಿರುವ ಪುರಸಭೆಯಲ್ಲಿ ಜೆಡಿಎಸ್ 18 ಸ್ಥಾನ, ಕೆಜೆಪಿ 2 ಸ್ಥಾನ, ಕಾಂಗ್ರೆಸ್ 3 ಸ್ಥಾನ ಹೊಂದಿದ್ದರೆ ಬಿಜೆಪಿ ಯಾವುದೇ ಸ್ಥಾನಗಳಿಸಿರಲಿಲ್ಲ.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಶಾಸಕ ಸಿ.ಬಿ.ಸುರೇಶ್ಬಾಬು ಅಭಿನಂದಿಸಿದರು. ಜೆಡಿಎಸ್ ಮತ್ತು ಕೆಜೆಪಿ ಕಾರ್ಯಕರ್ತರು ನೆಹರು ಸರ್ಕಲ್ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಸುತ್ತಲಿನ ಪರಿಸರದಲ್ಲಿ ಬದುಕಲು ನೆರೆಹೊರೆಯವರ ಹೊಂದಾಣಿಕೆ
ಚಿಕ್ಕನಾಯಕನಹಳ್ಳಿ,ಸೆ.12 :   ಮನುಷ್ಯ ತನ್ನ ಸುತ್ತಲಿನ ಪರಿಸರದಲ್ಲಿ ಬದುಕಲು ನೆರೆಹೊರೆಯವರ ಹೊಂದಾಣಿಕೆ ಜೊತೆಗೆ ಕತ್ತಲನ್ನು ಬಡಿದೊಡಿಸುವ ದೀಪಗಳನ್ನು ಹಚ್ಚುವ ಮನಸ್ಸುಗಳನ್ನು ಬೆಳೆಸಬೇಕು ಎಂದು ಉಪನ್ಯಾಸಕ ಹೆಚ್.ಎನ್.ಪ್ರಕಾಶ್ ಹೇಳಿದರು.
  ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸದ್ಬಾವನಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾಥರ್ಿಗಳನ್ನು ಕುರಿತು ಮಾತನಾಡಿದರು. 
ಜಾತಿ, ಮತ, ಧರ್ಮಗಳನ್ನು ಮೀರಿ ರಾಷ್ಟೀಯ ಭಾವೈಕ್ಯತೆಯನ್ನು ರೂಡಿಸಿಕೊಳ್ಳುವ ಮನೋಧರ್ಮ ನಮ್ಮಲ್ಲಿ ಮೈಗೂಡಬೇಕು. ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಮಗು, ತಾಯಿಯಂತಹ ಸದ್ಭಾವನೆ ಬೆಳೆಯಬೇಕು. ಎನ್.ಎಸ್.ಎಸ್. ವಿದ್ಯಾಥರ್ಿಗಳು ಒಳ್ಳೆಯ ವಿಚಾರಗಳ ಕಡೆ ಹೊರಾಡುವ ಶಕ್ತಿ ಬೆಳೆಸಿಕೊಂಡು ಸಮಾಜ ಸೇವೆಗೆ ಸಿದ್ದಾರಾಗಬೇಕು. ಇಂದಿನ ಯುವ ಸಮೂಹದ ಶಕ್ತಿ ಅಣುಬಾಂಬ್ಗಿಂತ ಹೆಚ್ಚು ಪ್ರಬಲವಾಗಿದ್ದು ಎಲ್ಲರೂ ಒಂದು ಮನಸ್ಸಿನಿಂದ ಒಗ್ಗೂಡಿ ಸಹೋದರತ್ವ ಭಾವನೆ ಮೂಡಿ ಜೊತೆಯಾಗಿ ಉತ್ತಮ ಸಮಾಜದ ನಿಮರ್ಾಣಕ್ಕೆ ಭದ್ರ ಅಡಿಪಾಯವಾಗಬೇಕು ಎಂದು ಹೇಳಿದರು.
        ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೋ|| ಸಿ.ಚನ್ನಬಸಪ್ಪ ಮಾತನಾಡಿ ವಿದ್ಯಾಥರ್ಿಗಳಲ್ಲಿ ಸತ್ಚಾರಿತ್ಯ ಸತ್ಭಾವನೆ ಮೂಡಿ ಭಾಷೆ-ಧರ್ಮಗಳ ನಡುವೆ ಅಂತರ ಮೂಡದೆ ಏಕತೆಯಿಂದ ಸಮಗ್ರತೆಗೆ ದುಡಿಯಬೇಕು. ಭಾರತ ಸ್ವಾತಂತ್ಯ ಹೋರಾಟದಲ್ಲಿನ ಅನೇಕ ನಾಯಕರು ಮತೀಯ ಭಾವನೆ ದೂರಮಾಡಿಕೊಂಡು ನಿಸ್ವಾರ್ಥವಾಗಿ ದುಡಿದಿದ್ದರ ಫಲವೇ ಸ್ವಾತಂತ್ಯ ಎಂದು ಹೇಳಿದ ಅವರು ದೇಶದ ಬೆಳೆವಣಿಗೆಗೆ ರಾಷ್ಟಿಯ ಭಾವೈಕ್ಯತೆ ಸಹಕಾರಿಯಾಗುತ್ತದೆಂದು ತಿಳಿಸಿದರು.
       ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಪ್ರೋ|| ಎಸ್.ಎಲ್.ಶಿವಕುಮಾರಸ್ವಾಮಿ. ಪ್ರೋ|| ಹೆಚ್.ಎಸ್.ಶಿವಯೋಗಿ. ಡಿ.ಎಸ್.ಲೋಕೇಶ್. ಉಮೇಶ್, ಸಿದ್ದೇಗೌಡ  ಉಪಸ್ಥಿತರಿದ್ದರು. 
ಕನ್ನಡ ಉಪನ್ಯಾಸಕರಾದ ರವಿಕುಮಾರ್ ಸದ್ಬಾವನಾ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು. 

ಎ.ಕೃಷ್ಣಪ್ಪನವರಿಗೆ ರಾಜ್ಯ ಜೆ.ಡಿ.ಎಸ್ ಅಧ್ಯಕ್ಷ ಸ್ಥಾನ ನೀಡಿರುವುದು ಸ್ವಾಗತಾರ್ಹ
ಚಿಕ್ಕನಾಯಕನಹಳ್ಳಿ : ಹಿಂದುಳಿದ ವರ್ಗಗಳ ಯಾದವ ಸಮಾಜದ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪನವರಿಗೆ ರಾಜ್ಯ ಜೆ.ಡಿ.ಎಸ್ ಅಧ್ಯಕ್ಷ ಸ್ಥಾನ ನೀಡಿರುವುದು ಸ್ವಾಗತಾರ್ಹ ಎಂದು ತಾಲ್ಲೂಕು ಯಾದವ ಸಮಾಜದ ಸಂಘಟನಾ ಕಾರ್ಯದಶರ್ಿ ಲಿಂಗರಾಜು ಹೇಳಿದರು.
ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗದ ಮಾಜಿ ಮುಖ್ಯಮಂತ್ರಿಗಳಾದ ಎ.ಕೃಷ್ಣಪ್ಪನವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದು ಹಿಂದುಳಿದ ವರ್ಗದ ಯಾದವ ಸಮಾಜವನ್ನು ಗುರುತಿಸದೇ ಅನ್ಯಾಯ ಮಾಡಿದ್ದು  ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಎ.ಕೃಷ್ಣಪ್ಪನವರನ್ನು ಗುರುತಿಸಿ ಅಧ್ಯಕ್ಷರನ್ನಾಗಿ ಮಾಡಿರುವುದು ಯಾದವ ಸಮಾಜ ಸ್ವಾಗತಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಬಿ.ಕೆ.ಜಯಣ್ಣ, ಟಿ.ಆರ್.ಓಬಣ್ಣರಾಜು, ಶಿವಾನಂದ, ರಾಮಣ್ಣ, ಹೆಚ್.ಸಿ.ರಾಮಣ್ಣ, ವೀರಣ್ಣ, ಕ್ಯಾತಪ್ಪ, ರವಿ ಮತ್ತಿತರರು ಹಾಜರಿದ್ದರು.

: ತುಮಕೂರು ಜಿಲ್ಲೆ ಬಿ.ಎಸ್.ಪಿ ರಾಜ್ಯ ಮುಖಂಡರಾದ ಪ್ರವಾಸ
ಚಿಕ್ಕನಾಯಕನಹಳ್ಳಿ,ಸೆ.13 : ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ತುರುವೇಕೆರೆ ತಾಲ್ಲೂಕುಗಳಿಗೆ ಬಿ.ಎಸ್.ಪಿ ರಾಜ್ಯ ಮುಖಂಡರಾದ ಆರ್.ಮುನಿಯಪ್ಪ, ಕ್ಯಾಪ್ಟನ್ ಸೋಮಶೇಖರ್, ನಾರಾಯಣರಾಜು ಪ್ರವಾಸ ಮಾಡಲಿದ್ದಾರೆ.
ಚಿಕ್ಕನಾಯಕನಹಳ್ಳಿಗೆ ಸೆಪ್ಟಂಬರ್ 18ರ ಬುಧವಾರ ಬೆಳಗ್ಗೆ 11ಕ್ಕೆ ಬಿ.ಎಸ್.ಪಿ ಕಛೇರಿಯಲ್ಲಿ, ತಿಪಟೂರಿಗೆ 19ರ ಗುರುವಾರ ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರದ ಬಳಿ, ಗುಬ್ಬಿಗೆ 20ರ ಶುಕ್ರವಾರ ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರದಲ್ಲಿ, ತುರುವೇಕೆರೆಗೆ 21ರ ಶನಿವಾರ ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರದ ಬಳಿ ಸಭೆ ನಡೆಸಲಿದ್ದಾರೆ.
ಇವರ ಜೊತೆ ಇನ್ನಿತರ ಮುಖಂಡರುಗಳು ಪ್ರವಾಸ ಮಾಡಿ ತಾಲ್ಲೂಕು ಸಮಿತಿಗಳನ್ನು ಪುನರ್ ರಚಿಸಲಿದ್ದಾರೆ, ಆದುದರಿಂದ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರು ಈ ಸಭೆಗೆ ಆಗಮಿಸುವಂತೆ ಸಂಚಾಲಕ ಪ್ರಸನ್ನಕುಮಾರ್ ಕೋರಿದ್ದಾರೆ.
ಜೋಗಿಹಳ್ಳಿ ಗ್ರಾಮದವರಿಗೂ ದಿನಕೂಲಿ ಕೆಲಸವನ್ನು ನೀಡುವಂತೆ ಜೋಗಿಹಳ್ಳಿ ಗ್ರಾಮಸ್ಥರು ಒತ್ತಾಯಿ
ಚಿಕ್ಕನಾಯಕನಹಳ್ಳಿ,ಸೆ.11 : ತಾಲ್ಲೂಕಿನ ಹೊನ್ನೆಬಾಗಿ ಗ್ರಾಮ ಸರಹದ್ದಿನಲ್ಲಿರುವ ಗಣಿಗಾರಿಕೆಯಲ್ಲಿ ಜೋಗಿಹಳ್ಳಿ ಗ್ರಾಮದವರಿಗೂ ದಿನಕೂಲಿ ಕೆಲಸವನ್ನು ನೀಡುವಂತೆ ಜೋಗಿಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 
  ಚಿಕ್ಕನಾಯಕನಹಳ್ಳಿ ತಾಲೂಕಿನ ಹೋನ್ನೆಬಾಗಿ ಸುತ್ತಮುತ್ತಲ ಗಣಿಗಾರಿಕೆ ನಡೆಯುವಾಗ ಜೋಗಿಹಳ್ಳಿ ಗ್ರಾಮದ 200 ಕ್ಕೂ ಹೆಚ್ಚು ಕೂಲಿಕಾಮರ್ಿಕರು ಗಣಿಯಲ್ಲಿ ಕಾಮರ್ಿಕರಾಗಿ ಕೆಲಸ ಮಾಡುತ್ತಿದ್ದು ಈಗ ಗಣಿಗಾರಿಕೆ ನಿಂತು ಹೋಗಿ ಮಳೆ ಬೆಳೆ ಕೂಲಿ ಇಲ್ಲದೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.
   ಈಗಾಗಲೇ ಗಣಿಪ್ರದೇಶದಲ್ಲಿ ಲಕ್ಷಾಂತರ ಟನ್ ಕಬ್ಬಿಣದ ಅದಿರು ದಾಸ್ತಾನು ಇದ್ದು ಸಕರ್ಾರ ದಾಸ್ತಾನು ಇರುವ ಅದಿರನ್ನು ಈ ಟೆಂಡರ್ ಮೂಲಕ ಹರಾಜು ಮಾಡಿದ್ದು, ಇದರಿಂದ ನಿತ್ಯ ಗಣಿ ಪ್ರದೇಶದಿಂದ ನೂರಾರು ಲಾರಿಗಳು ಕಬ್ಬಿಣದ ಅದಿರನ್ನು  ಬಳ್ಳಾರಿ, ಸೊಂಡೂರು ಸೇರಿದಂತೆ ರಾಜ್ಯದ ಹಾಗೂ ಹೊರರಾಜ್ಯಗಳಿಗೆ  ರವಾನಿಯಾಗುತ್ತಿದ.ೆ ಲಾರಿಗಳಲ್ಲಿ ಕಬ್ಬಿಣದ ಅಧಿರು ತುಂಬಿದ ನಂತರ ಕಬ್ಬಿಣದ ಅದಿರನ್ನು ಮಟ್ಟ ಮಾಡುವ ಕೆಲಸವನ್ನು ಬುಳ್ಳೇನಹಳ್ಳಿ ಹೊನ್ನೆಬಾಗಿ ಕೂಲಿ ಕಾಮರ್ಿಕರೇ ಮಟ್ಟ ಮಾಡುತಿದ್ದಾರೆ, ಅದೇ ರೀತಿ ಜೋಗಿಹಳ್ಳಿ ಗ್ರಾಮಸ್ಥರಿಗೂ ವಾರದಲ್ಲಿ 2 ದಿನ  ಕೆಲಸ ನೀಡುವಂತೆ ಸಣ್ಣಕರಿಯಪ್ಪ, ರಮೇಶ್, ಶಂಕರ್, ದೊಡ್ಡಲಿಂಗಪ್ಪ, ನಂಜಪ್ಪ, ದೊಡ್ಡಯ್ಯ, ಪುಟ್ಟಯ್ಯ, ಜೆ.ಎನ್.ಜಗದೀಶ್, ಪರಮೇಶ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ ಉಪಸ್ಥಿತರಿದ್ದರು

ಕಾನೂನು ಸಾಕ್ಷರತಾ ಶಿಬಿರ
ಚಿಕ್ಕನಾಯಕನಹಳ್ಳಿ,ಸೆ.13 : ಕಾನೂನು ಸಾಕ್ಷರತಾ ರಥಯಾತ್ರೆ ಮತ್ತು ಸಂಚಾರಿ ಜನತಾ ನ್ಯಾಯಾಲಯಗಳ ಪ್ರಯೋಜನಗಳ ಕಾನೂನು ಸಾಕ್ಷರತಾ ಶಿಬಿರವು ಇದೇ 16ರ ಸೋಮವಾರದಿಂದ 18ರ ಬುಧವಾರದವೆರೆಗೆ ತಾಲ್ಲೂಕಿನಾದ್ಯಂತ ನಡೆಯಲಿದೆ.
16ರ ಸೋಮಾವರದಂದು ಮೊದಲನೆ ಅಧಿವೇಶನದ ಕಾನೂನು ಸಾಕ್ಷರತಾ ರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ಚಿ.ನಾ.ಹಳ್ಳಿ ನ್ಯಾಯಾಲಯದ ಆವರಣದಲ್ಲಿ ಬೆಳಗ್ಗೆ 10ಕ್ಕೆ ನಡೆಯಲಿದ್ದು ಪ್ರಧಾನ ಸಿವಿಲ್ ನ್ಯಾಯಾಧೀಸರಾದ ಕೆ.ನಿರ್ಮಲ ಉದ್ಘಾಟನೆ ನೆರವೇರಿಸಲಿದ್ದು ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲ ಜಿ.ಚನ್ನಬಸಪ್ಪ ಮಧ್ಯಸ್ಥಿಕೆ ಮತ್ತು ಕಾನೂನು, ಎಂ.ಮಹಾಲಿಂಗಯ್ಯ ಮಹಿಳೆ ಮತ್ತು ಕಾನೂನು ಬಗ್ಗೆ ಮಾತನಾಡಲಿದ್ದಾರೆ.
16ರಂದು ಎರಡನೇ ಅಧಿವೇಶನ ಕಾತ್ರಿಕೆಹಾಲ್ ಸಕರ್ಾರಿ ಪ್ರೌಡಶಾಲೆಯಲ್ಲಿ ಮಧ್ಯಾಹ್ನ 1ಕ್ಕೆ ನಡೆಯಲಿದ್ದು ಶಾಲೆಯ ಮುಖ್ಯೋಪಾಧ್ಯಾಯ ರೇಣುಕಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಸಹಾಯಕ ಸಕರ್ಾರಿ ಅಭಿಯೋಜಕ ರವಿಚಂದ್ರ ಆರ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಕೆ.ಎಸ್.ಚಂದ್ರಶೇಖರಯ್ಯ ಮಕ್ಕಳ ಹಕ್ಕುಗಳು, ವೈ.ಜಿ.ಲೋಕೇಶ್ವರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಮಾತನಾಡಲಿದ್ದಾರೆ.
16ರಂದು ಮಧ್ಯಾಹ್ನ 3ಕ್ಕೆ ಮೂರನೇ ಅಧಿವೇಶನ ತೀರ್ಥಪುರ ಗ್ರಾಮ ಪಂಚಾಯ್ತಿ ಕಾಯರ್ಾಲಯದಲ್ಲಿ ನಡೆಯಲಿದ್ದು ತೀರ್ಥಪುರ ಗ್ರಾ.ಪಂ.ಅಧ್ಯಕ್ಷ ಪದ್ಮಮ್ಮ ಲಿಂಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಎಂ.ಎನ್.ಶೇಖರಯ್ಯ ಮಹಿಳಾ ದೌರ್ಜನ್ಯ ತಡೆ ಕಾಯಿದೆ, ಬಿ.ಎಂ.ಮೋಹನ್ಕುಮಾರ್ ಮೋಟಾರು ವಾಹನ ಅಪಘಾತ ಪರಿಹಾರ ಕಾಯಿದೆ ಬಗ್ಗೆ ಮಾತನಾಡಲಿದ್ದಾರೆ.
17ರ ಮಂಗಳವಾರ ಹುಳಿಯಾರಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ 10ಕ್ಕೆ ಮೊದಲ ಅಧಿವೇಶನ ನಡೆಯಲಿದ್ದು ಕಾಲೇಜಿನ ಪ್ರಾಂಶುಪಾಲ ಮುರುಗೇಶಪ್ಪ ಅಧ್ಯಕ್ಷತೆ ವಹಿಸಲಿದ್ದು ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಎನ್.ವೀಣಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಎ.ಮಂಜುನಾಥ್ ರ್ಯಾಗಿಂಗ್ ತಡೆ ಕಾಯಿದೆ, ಹೆಚ್.ಹನುಮಂತಯ್ಯ ಸೈಬರ್ ಅಪರಾಧಗಳು ಮತ್ತು ಕಾನೂನು ಬಗ್ಗೆ ಮಾತನಾಡಲಿರುವರು.
ಎರಡನೇ ಅಧಿವೇಶನವು 17ರ ಮಧ್ಯಾಹ್ನ 1ಕ್ಕೆ ಯಳನಡುವಿನ ಸಕರ್ಾರಿ ಪ್ರೌಡಶಾಲೆಯಲ್ಲಿ ನಡೆಯಲಿದ್ದು ಮುಖ್ಯೋಪಾಧ್ಯಾಯ ನಾಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಕೆ.ಸಿ.ವಿಶ್ವನಾಥ ಮಕ್ಕಳ ಹಕ್ಕುಗಳು, ಜಿ.ದಿಲೀಪ್ ಜನನ ಮರಣ ನೊಂದಣಿ ಕಾಯಿದೆ ಬಗ್ಗೆ ಮಾತನಾಡುವರು. ಮೂರನೇ ಅಧಿವೇಶನ 17ರ ಮಧ್ಯಾಹ್ನ 3ಕ್ಕೆ ಬೋರನಕಣಿವೆಯ ಸಕರ್ಾರಿ ಪ್ರೌಡಶಾಲೆಯಲ್ಲಿ ನಡೆಯಲಿದ್ದು ಮುಖ್ಯೋಪಾಧ್ಯಾಯರಾದ ಮಂಜಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ವೈ.ಜಿ.ಲೋಕೇಶ್ವರ ಜನನ ಮತ್ತು ಮರಣ ನೊಂದಣಿ ಕಾಯಿದೆ, ಎಂ.ಶಿವಾನಂದ ಬಾಲ ಕಾಮರ್ಿಕರ ಕಾಯಿದೆ ಬಗ್ಗೆ ಮಾತನಾಡಲಿರುವರು.
18ರ ಬುಧವಾರ ಮೊದಲನೆ ಅಧಿವೇಶನವು ಗೋಡೆಕೆರೆ ಸಕರ್ಾರಿ ಪ.ಪೂ.ಕಾಜೇಜು, ಪ್ರೌಡಶಾಲೆ ಆವರಣದಲ್ಲಿ ಬೆಳಗ್ಗೆ 10ಕ್ಕೆ ನಡೆಯಲಿದ್ದು ಪ್ರಾಂಶುಪಾಲ ಡಿ.ಟಿ.ಪಾಂಡುರಂಗ ಅಧ್ಯಕ್ಷತೆ ವಹಿಸಲಿದ್ದು ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಬಿ.ಎಂ.ಮೋಹನ್ಕುಮಾರ್ ಮೋಟಾರು ವಾಹನ ಕಾಯಿದೆ ಬಗ್ಗೆ ವೈ.ಜಿ.ಲೋಕೇಶ್ವರ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಮಾತನಾಡಲಿರುವರು.
ಎರಡನೇ ಅಧಿವೇಶನ ಸಾಸಲು ಸಕರ್ಾರಿ ಪ್ರೌಡಶಾಲೆಯಲ್ಲಿ ಮಧ್ಯಾಹ್ನ 12ಕ್ಕೆ ನಡೆಯಲಿದ್ದು ಮುಖ್ಯೋಪಾಧ್ಯಾಯ ಸಂತೋಷ್.ಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಹೆಚ್.ಎಸ್.ಜ್ಞಾನಮೂತರ್ಿ ಅಪ್ರಾಪ್ತ ವಯಸ್ಕರ ಆಸ್ತಿ ಹಕ್ಕುಗಳು, ವೈ.ಜಿ.ಲೋಕೇಶ್ವರ ಬಾಲ ಕಾಮರ್ಿಕ ಕಾಯಿದೆ ಬಗ್ಗೆ ಮಾತನಾಡಲಿರುವರು. 18ರ ಮಧ್ಯಾಹ್ನ 3ಕ್ಕೆ ಶೆಟ್ಟಿಕೆರೆ ಗ್ರಾಮ ಪಂಚಾಯ್ತಿ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಗ್ರಾ.ಪಂ.ಅಧ್ಯಕ್ಷತೆ ದಾಕ್ಷಾಯಿಣಿರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಜಿ.ಪರಮೇಶ್ವರಯ್ಯ ಮಹಿಳಾ ದೌರ್ಜನ್ಯ ತಡೆ ಕಾಯಿದೆ, ಹೆಚ್.ಎಸ್.ಜ್ಞಾನಮೂತರ್ಿ ಮಹಿಳೆಯರ ಆಸ್ತಿಯ ಹಕ್ಕುಗಳು ಬಗ್ಗೆ ಮಾತನಾಡಲಿದ್ದಾರೆ.





ಸಲಪರು ಜಾತಿಗೆ ಸರ್ಪ ವಕ್ಕಲಿಗ ಎಂದು ಸಟರ್ಿಫಿಕೇಟ್ ನೀಡುವಂತೆ ಒತ್ತಾಯ.
ಚಿಕ್ಕನಾಯಕನಹಳ್ಳಿ,ಸೆ.11: ಸಲಪರು ಜಾತಿಗೆ  ಸರ್ಪ ವಕ್ಕಲಿಗ ಎಂದು ದಾಖಲೆ ನೀಡುವಂತೆ ಪಟೇಲ್ ಗರುಡೇಗೌಡ ಅಧ್ಯಯನ ಕೇಂದ್ರದ ಸಂಯೋಜಕ ಜಿ.ಶಾಂತರಾಜು ಆಗ್ರಹಿಸಿದ್ದಾರೆ.
ಒಕ್ಕಲಿಗ ಜಾತಿಯಲ್ಲಿ 114 ಒಳಪಂಗಡಗಳಿದ್ದು ಅದರಲ್ಲಿ ಸರ್ಪವಕ್ಕಲಿಗ ಒಂದು ಉಪ ಪಂಗಡವಾಗಿದೆ,  ಸರಕಾರಿ  ಗೆಜೆಟ್ನಲ್ಲಿ ದಾಖಲೆಯಲ್ಲಿದೆ, ಆದರೆ ನಾಡ ಭಾಷೆಯಲ್ಲಿ ಸಲಪರು ಎಂದು ಕರೆಯುತ್ತಾರೆ, ಸಲಪರು ಎಂದು ದಾಖಲೆ ಮಾಡಿದರೆ ಪ್ರವರ್ಗ1 ಕ್ಕೆ ಸೇರುತ್ತದೆ, ಇಲ್ಲಿ ಹಿಂದಿನಿಂದಲೂ ಬಾಯಿ ಮಾತಿನಲ್ಲಿರುವ  ಸಲಪರು ಸರಕಾರಿ ದಾಖಲೆಯಲ್ಲಿ ಸರ್ಪವಕ್ಕಲಿಗ (3ಎ) ಎಂದು ದಾಖಲೆ ಮಾಡುತ್ತಿದ್ದಾರೆ, ಆದರೆ ಇತ್ತೀಚೆಗೆ ಕೆಲವರು ಸರಕಾರಿ ಸವಲತ್ತು ದೊರೆಯುತ್ತದೆ ಎಂದು ಪ್ರವರ್ಗ1(ಸಲಪರು) ಎಂದು ನಮೂದಿಸಿ ಅತಂತ್ರ ಸ್ಥಿತಿ ಉಂಟಾಗಿದೆ, ಶಾಲಾ ದಾಖಲಾತಿ ಸಲಪರು ಎಂದು ಅಪ್ಪ-ಅಮ್ಮನ ಜಾತಿ ಸರ್ಪವಕ್ಕಲಿಗ ಎಂದು ಇರುವುದರಿಂದ ಅಧಿಕಾರಿವರ್ಗದವರಿಗೂ ಸಹ ಗೊಂದಲ ಉಂಟಾಗಿ ಜಾತಿ ಮತ್ತು ಆದಾಯ ದೃಡೀಕರಣ ಪತ್ರ ಕೊಡಲು ಸಾಧ್ಯವಾಗುತ್ತಿಲ್ಲ, ಅದು ಉಲ್ಲಂಘನೆಯಾಗುತ್ತದೆ,  ಒಂದು ಪಕ್ಷ ಸಲಪರು ಎಂದು ಸಟರ್ಿಫಿಕೇಟ್ ತೆಗೆದುಕೊಂಡರೆ ಮುಂದೆ ಸಿಂಧುವಾಗುವುದಿಲ್ಲ. ಜನಾಂಗದ ಮಕ್ಕಳಿಗೆ ತೊಂದರೆಯಾಗುತ್ತದೆ. ಸಕರ್ಾರಿ ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕೆ ಸೇರಲು ಅವಕಾಶ ವಂಚಿತರಾಗುತ್ತಾರೆ ಎಂದು ತಿಳಿಸಿದ್ದಾರೆ.




Thursday, July 18, 2013

ಮಕಡೆ ಮಲಗಿದ ಮುಂಗಾರು: ತಿನ್ನೋಕಿಲ್ಲ ಬೇಳೆಕಾಳು
(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಜು.17 : ಮನ್ಲಿದ್ದ ಇಸೊವೋಸೊ ಹೆಸರುಕಾಳ್ನ ತಂದು ಹೊಲಕ್ಕೆ ಚೆಲ್ಲುದ್ವಿ, ಗಿಡ ಒಂದ ಹಂತಕ್ಕೆ ಬೆಳ್ದು ಗರ್ಭಕಟ್ಟೋಟೈಂಗೆ ಮೊಡಗರ್ಭಕಟ್ಲಿಲ್ಲ ಮಳೆಸುರಸ್ಲಿಲ್ಲ, ಉತ್ತಿದಷ್ಟು ಕಾಳೂ ಕೈ ಸೇರ್ಲಿಲ್ಲ, ದನಗಳಾದ್ರೂ ತಿನ್ನಲಿ ಅಂತ ಕೊಳ್ಳುರಿ ಬಿಚ್ಚಿ, ಕೈ ಚೆಲ್ಲಿ ಕುಂತಿವ್ನಿ. ಹೆಸರುಕಾಳಿನ್ ಕಥೆ ಹಿಂಗಾತು, ರಾಗಿ ಕಾಳಿನ್ ಕಥೆ ಹೆಂಗೋ... ಅನ್ನೊ ಯೋಚ್ನೆ ನನ್ನದು. ನಮ್ಮ ಬದುಕು ಒಂಥರಾ ಬ್ಯಾಸಾಯ ಮನೆ ಮಕ್ಳೆಲ್ಲಾ ಸಾಯ ಅನ್ನಂಗೆ ಆಗೋಗೈತೆ, ರಾಗಿನೂ ಕೈ ಕೊಟ್ರೆ ಸಿದ್ರಾಮಯ್ಯ ಕೊಟ್ಟಿರೊ ಅನ್ನ ಉಂಡ್ಕೊಂಡು ಜೀವ ಹಿಡ್ಕೊ ಬೇಕಾಗೈತೆ ಅಂತಾರೆ, ಗುಡ್ಡದ ಹಟ್ಟಿ ಬಡ ರೈತ ಚಿತ್ತಪ್ಪ.
ತಾಲ್ಲೂಕಿನಲ್ಲಿ ಮುಂಗಾರು ಮಕಾಡೆ ಮಲಗಿದೆ, ಸಣ್ಣಹಿಡುವಳಿದಾರರು ಮುಂಗಾರಿನ ಕನಸು ಬಿಟ್ಟು ಎಷ್ಟೋ ದಿನಗಳಾಗಿವೆ. ಮುಂಗಾರಿನ ಬೆಳೆಗಳಾದ ಹೆಸರು, ತೊಗರಿ, ಉದ್ದು, ಹಲಸಂದೆ ಬೆಳೆಗಳು ಹಾಳಾಗಿವೆ. ಅಲ್ಲೋ ಇಲ್ಲೋ ಒಂದಷ್ಟು ಕಡೆ ಹಾಕಿರುವ ಎಳ್ಳು ಗಣೇಶನ ಹಬ್ಬದ ಎಳ್ಳುಂಡೆಗೆ ಸಿಗಬಹುದು.
ತಾಲ್ಲೂಕಿನಾದ್ಯಂತ ಸುಮಾರು 12675 ಎಕರೆ ಪ್ರದೇಶಕ್ಕೆ ಹೆಸರುಕಾಳು ಬಿತ್ತಿದ್ದಾರೆ, ತೋಗರಿ 3050, ಹಲಸಂದೆಯನ್ನು 1125 ಎಕರೆಗೆ, ಉದ್ದನ್ನು 550  ಎಕರೆ ಎಳ್ಳು 225 ಎಕರೆಯಲ್ಲಿದೆ. ಹಂದನಕೆರೆಯಲ್ಲಿ 1600, ಹುಳಿಯಾರಿನಲ್ಲಿ 1515 ಎಕರೆಯಲ್ಲಿ  ಹೆಸರು ಬಿತ್ತಿದ್ದರೆ, ಹುಳಿಯಾರಿನಲ್ಲಿ ಒಂದು ಸಾವಿರ ಎಕೆರೆಯಲ್ಲಿ ತೊಗರಿ ಬಿತ್ತಿದ್ದಾರೆ.
ಏಪ್ರಿಲ್ನಿಂದಲೇ ಆರಂಭವಾಗುವ ಮುಂಗಾರು ತಡವಾಗಿ ಆರಂಭವಾಯಿತು. ಈ ಬಾರಿ ಭರಣಿ ಮಳೆ ಕೈ ಕೊಟ್ಟಿದ್ದರಿಂದ ಹಲವರು ಹೆಸರನ್ನು ಭಿತ್ತಿದ್ದು ಕೃತಿಕಾ ಮಳೆಗೆ ಅಂದರೆ ಮೇ ಕೊನೆಯಲ್ಲಿ, 90 ದಿವಸದ ಬೆಳೆಯಾದ ಹೆಸರು, ಈ ಹೊತ್ತಿಗಾಗಲೇ ಕಾಳು ತುಂಬಿದ ಗೊಂಚಲುಗಳ ಗಿಡದಲ್ಲಿ ಅಷಾಡದ ಗಾಳಿಗೆ ತೊನೆದಾಡುತ್ತಿರಬೇಕಾಗಿತ್ತು, ಆದರೆ ಮಳೆ ಕೈ ಕೊಟ್ಟಿದ್ದರಿಂದ ಕಾಳು ತುಂಬುವುದಿರಲಿ ಗರ್ಭನೆ ಕಟ್ಟಲಿಲ್ಲವಾದ್ದರಿಂದ ಹೊಲದ ತುಂಬಾ ಬರಿ 'ಸ್ಯಾದ್ರ'ನೇ ತುಂಬಕೊಂಡಿದೆ.
 ಇನ್ನು ಉದ್ದಿನ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಹಲಸಂದೆ 4ತಿಂಗಳ ಬೆಳೆಯಾದ್ದರಿಂದ ಒಂದಿಷ್ಟು ನೆಚ್ಚಿಕೊಳ್ಳಬಹುದು, ಮುಂದಿನ ಮಳೆಗಳು ಹನಿಯದಿದ್ದರೆ ಇದಕ್ಕೂ ಅದೇ ಗತಿ, ಆದರೆ ತೋಟಗಳಲ್ಲಿ ಹಾಕಿರುವವರು ಮತ್ತು ಕಾಲಕಾಲಕ್ಕೆ ನೀರು ಕಟ್ಟಿರುವವರಿಗೆ ಕಾಳು ಸಿಗುತ್ತದೆ, ಬಡ ರೈತನ ಪಾಡು ಮಾತ್ರ ತುಸು ಕಷ್ಟವೇ, ಕಾರಣ ಕಳೆದ ಬಾರಿ ಮಳೆ ಇಲ್ಲದೆ ಬರ ದಲ್ಲಿ ನರಳಿದ ರೈತನಿಗೆ ಈ ಬಾರಿ ಮುಂಗಾರು ಕೈ ಕೊಟ್ಟಿರುವುದರಿಂದ ಮನೆಯಲ್ಲಿ ತಿನ್ನಲಿಕ್ಕೆಂದು ಇಟ್ಟುಕೊಳ್ಳಲು ಬೇಳೆ ಕಾಳುಗಳು ಇಲ್ಲವಾಗಿವೆ. 
ರಾಗಿ ಸೇರಿದಂತೆ ಸಿರಿ ಧಾನ್ಯಗಳ ಗತಿ ಏನು?: ಜುಲೈ ಆರಂಭದಿಂದ ಆಗಸ್ಟ್ 15ರವರೆಗೆ ರಾಗಿ, ಸಾವೆ, ನವಣೆ ಹಾರಕ ಬೆಳೆಗಳಿಗೆ ಸುಸಂದರ್ಭ, ರಾಗಿಯ ವಿವಿಧ ತಳಿಗಳಾದ ಇಂಡಾಫ್-5, ಇಂಡಾಫ್-8, ಜಿಪಿಯು-28, ಪಿಆರ್-202 ಭಿತ್ತನೆ ಮಾಡಲು ಅವಕಾಶವಿದೆ. ಒಟ್ಲು ಮಾಡಿ ಸಸಿ ಹಾಕುವವರಿಗೆ ಈಗಾಗಲೇ ಕಾಲ ಮೀರಿ ಹೋಗಿದೆ. ಮೃಗಶಿರಾ ಮಳೆ ಬಾರದಿರುವುದರಿಂದ ರಾಗಿ ಒಟ್ಲು ಒಣಗಿ ಹೋಗಿದೆ, ಇನ್ನೇನಿದ್ದರೂ ಸಡ್ಡೆರಾಗಿ ಅಂದರೆ ನೇರವಾಗಿ ರಾಗಿಯನ್ನು ಸಾಲು ಗುಣಿಯಲ್ಲಿ ಹಾಕುವವರೆಗೆ ಮಾತ್ರ ಅವಕಾಶವಿದೆ. ಪುನರ್ವಸು, ಪುಷ್ಯ, ಮಗ್ಗೆಮಳೆ ನೆಲಮುಟ್ಟದೆ ಮುಗಿಲಲ್ಲೇ ನಿಂತರೆ ಈ ಬಾರಿಯೂ ಬರ ಬಿದ್ದಂಗೆ ಸರಿ...,  ಓ ಪ್ರಕೃತಿಯೇ ಮುನಿಯಬೇಡ, ಮಳೆ ರಾಯನೇ ಹಾಗೆ ಮಾಡಬೇಡ ಧರೆಗಳಿದು ದಣಿದಿರುವ ಜೀವಗಳಿಗೆ ತಂಪನೆರೆಯಪ್ಪ.

ಹಳೆಯೂರು ಆಂಜನೇಯಸ್ವಾಮಿ ಜಾತ್ರೆಯ ಪ್ರಯುಕ್ತ ವಿವಿಧ ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ.
  • 19ರಂದು ಚಿತ್ರಕಲಾ ಪ್ರದರ್ಶನ, 
  • 20ರಂದು ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ, ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ.
  • 21 ರಂದು ನವದಂಪತಿಗಳ ಸ್ಪಧರ್ೆ, ಕುಸ್ತಿ ಪಂದ್ಯಾವಳಿ, ಸಂಪೂರ್ಣ ರಾಮಾಯಣ ನಾಟಕ. 

ಚಿಕ್ಕನಾಯಕನಹಳ್ಳಿ,ಜು.17: ಪಟ್ಟಣದ ಹಳೆಯೂರು ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾ ರಥೋತ್ಸವ ಇದೇ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು ಪ್ರತಿವರ್ಷದಂತೆ ಈ ವರ್ಷವು ಸಂಘಸಂಸ್ಥೆಗಳು ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿವೆ.  
ಜುಲೈ 19ರ ಶುಕ್ರವಾರ ಬೆಳ್ಳಿಪಲ್ಲಕ್ಕಿ ಉತ್ಸವ, 20ರಂದು ಬ್ರಹ್ಮರಥೋತ್ಸವ, 21ರಂದು ರಥೋತ್ಸವ ನಡೆಯಲಿದೆ. 
ವಾಣಿ ಚಿತ್ರಕಲಾ ಕಾಲೇಜಿನಲ್ಲಿ 19ರಿಂದ 21ರವರೆಗೆ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಪ್ರಾತ್ಯಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಖ್ಯಾತ ಕಲಾವಿದ ಪ್ರಭು ಹರಸೂರು ಪ್ರದರ್ಶನದ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. 
ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ: 20ರಂದು ಅನ್ನಪೂಣರ್ೇಶ್ವರಿ ಕಲಾ ಸಂಘ ಹಾಗೂ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು 10.30ಕ್ಕೆ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ. 
ಡ್ಯಾನ್ಸ್ ಡ್ಯಾನ್ಸ್ ಸೀನಿಯರ್ ಗ್ರೂಪ್ಗೆ ಪ್ರವೇಶ ದರ.500ರೂ, ಗೆಲುವು ಪಡೆದವರಿಗೆ, ಪ್ರಥಮ ಬಹುಮಾನ 30ಸಾವಿರ, ದ್ವಿತೀಯ ಬಹುಮಾನ15ಸಾವಿರ, ತೃತಿಯ ಬಹುಮಾನ 7ಸಾವಿರ, 
ಜ್ಯೂನಿಯರ್ ಗ್ರೂಪ್ ಪ್ರವೇಶ ದರ 300ರೂ, ಪ್ರಥಮ ಬಹುಮಾನ 10ಸಾವಿರ ರೂ, ದ್ವಿತೀಯ ಬಹುಮಾನ 5ಸಾವಿರ, ತೃತಿಯ ಬಹುಮಾನ 3ಸಾವಿರ, ಜ್ಯೂನಿಯ್ ಸಿಂಗಲ್ ಪ್ರವೇಶ ದರ 100ರೂ ಪ್ರಥಮ ಬಹುಮಾನ 1500ರೂ, ದ್ವಿತೀಯ 1ಸಾವಿರ, ತೃತಿಯ 750, ಜ್ಯೂನಿಯರ್ ಕಪಲ್ ಪ್ರವೇಶ ದರ 150ರೂ  ಪ್ರಥಮ ಬಹುಮಾನ 2ಸಾವಿರ, ದ್ವಿತೀಯ 1ಸಾವಿರ, ತೃತಿಯ 750, ಸೀನಿಯರ್ ಕಪಲ್ ಪ್ರವೇಶ ದರ ರೂ 200, ಪ್ರಥಮ ಬಹುಮಾನ 3ಸಾವಿರ, ದ್ವಿತೀಯ 2ಸಾವಿರ, ತೃತಿಯ 1ಸಾವಿರ ರೂ ಹಾಗೂ ಆಕರ್ಷಕ ಟ್ರೋಪಿ ನೀಡಲಾಗುವುದು. ಕಾರ್ಯಕ್ರಮದ ನೇರ ಪ್ರಸಾರ ಅಮೋಘ ಚಾನಲ್ನಲ್ಲಿ ಪ್ರಸಾರಗೊಳ್ಳುವುದು ಹೆಚ್ಚಿನ ವಿವರಗಳಿಗಾಗಿ 9900399920, 9980163152 ನಂ.ಗೆ ಸಂಪಕರ್ಿಸಬಹುದು.
ನವದಂಪತಿಗಳ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ 20ನೇ ವರ್ಷದ ರಾಜ್ಯ ಮಟ್ಟದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಹಾಗೂ 22ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನ ಹಮ್ಮಿಕೊಂಡಿದೆ.
20ರ ಶನಿವಾರ ಮಧ್ಯಾಹ್ನ 3ಕ್ಕೆ ಪುರಸಭಾ ಕಾಯರ್ಾಲಯದ ಮುಂಭಾಗ ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಇದೆ.
21ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನು 21ರ ಭಾನುವಾರ ಮಧ್ಯಾಹ್ನ 3ಕ್ಕೆ ಕೋಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು, ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದೇ ಸಂಜೆ 8ಕ್ಕೆ ನವದಂಪತಿಗಳ ಹಾಗೂ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಬಹುಮಾನ ವಿತರಣೆ ಮಾಡಲಿದ್ದು, ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ ಅಮೋಘ ಕೇಬಲ್ ನೆಟ್ವಕರ್್ನಲ್ಲಿ ಪ್ರಸಾರಗೊಳ್ಳಲಿದೆ.
ಕುಸ್ತಿ ಸ್ಪಧರ್ೆ: 21ರ ಭಾನುವಾರ ಪಟ್ಟಣದ ವ್ಯಾಯಾಮ ಶಾಲೆಗಳು ತಾಲೂಕು ಕ್ರೀಡಾಂಗಣದಲ್ಲಿ ಕುಸ್ತಿ ಸ್ಪಧರ್ೆಯನ್ನು ಏರ್ಪಡಿಸಿದೆ, ಸಂಜೆ ಮಿತ್ರಕಲಾ ಸಂಘದ ವತಿಯಿಂದ  13ನೇ ವರ್ಷದ ಸಂಪೂರ್ಣ ರಾಮಾಯಣ ನಾಟಕವನ್ನು ಹಳೆಯೂರು ಶ್ರೀ ಆಂಜನೇಯಸ್ವಾಮಿ ಗುಡಿ ಬೀದಿ(ಹೂವಾಡಿಗರ ಬೀದಿ)ಯಲ್ಲಿ ನಾಟಕ ನಡೆಯಲಿದೆ.

  1. ಚುನಾವಣೆಯಲ್ಲಿ ಸ್ಪಧರ್ಿಸಿ ಲೆಕ್ಕ ಕೊಡದ ಅಬ್ಯಾಥರ್ಿಗಳ ಹೆಸರು ಪ್ರಕಟ.

                 ಚಿಕ್ಕನಾಯಕನಹಳ್ಳಿ,ಜು.17 : ಕಳೆದ ವಿಧಾನಸಭೆಯಲ್ಲಿ ಜೆಡಿಯುವಿನಿಂದ ಸ್ಪಧರ್ಿಸಿದ್ದ ಪ್ರಕಾಶ್ ಹಾಗೂ ಪುರಸಭೆ ಚುನಾವಣೆಯಲ್ಲಿ ಸ್ಪಧರ್ಿಸಿದ್ದ 20ನೇ ವಾಡರ್್ನ ಶಕುಂತಲಮ್ಮ, 4ನೇ ವಾಡರ್್ನ ಶೈಲಜ, 14ನೇ ವಾಡರ್್ನಿಂದ ಬಾಬುಸಾಹೇಬ್ರವರು ಇದುವರೆವಿಗೂ ತಮ್ಮ ಚುನಾವಣಾ ವೆಚ್ಚದ ಲೆಕ್ಕಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿರುವುದಿಲ್ಲ, ಇವರು ತಮ್ಮ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ನೀಡದಿದ್ದರೆ ಮುಂದಿನ ಚುನಾವಣೆಗೆ ಸ್ಪಧರ್ಿಸಲು ಅವಕಾಶವಿರುವುದಿಲ್ಲ ಎಂದು ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದ ಒಂದು ತಿಂಗಳ ನಂತರ ಎಲ್ಲಾ ಅಭ್ಯಥರ್ಿಗಳು ತಮ್ಮ ಚುನಾವಣಾ ವೆಚ್ಚದ ಮಾಹಿತಿ ನೀಡಬೇಕು, ತಾಲ್ಲೂಕಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪಧರ್ಿಸಿದ್ದ 11ಅಭ್ಯಥರ್ಿಗಳ ಪೈಕಿ ಪ್ರಕಾಶ್ರವರು ಹಾಗೂ ಪುರಸಭೆಯ 72 ಅಭ್ಯಥರ್ಿಗಳ ಪೈಕಿ ಶಕುಂತಲಮ್ಮ, ಶೈಲಜ, ಬಾಬುಸಾಹೇಬ್ರವರಿಗೆ ಈಗಾಗಲೇ ಒಂದು ಬಾರಿ ರಿಜಿಸ್ಟಾರ್ ನೋಟಿಸ್ ಹಾಗೂ ಮೊದ್ದಾಂ ನೋಟೀಸ್ ನೀಡಿದ್ದರೂ ಇದುವರೆವಿಗೂ ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ ಈ ಬಗ್ಗೆ ಚುನಾವಣಾ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಭಾರತ ಚುನಾವಣಾ ಆಯೋಗದ ಪ್ರಕಾರ 300ಕ್ಕೂ ಹೆಚ್ಚು ಜನರಿದ್ದು ಮತಗಟ್ಟೆಯಿಂದ ಅವರು 2.ಕಿ.ಮೀಯಿಂದ ದೂರವಿದ್ದರೆ ಆ ಪ್ರದೇಶದಲ್ಲಿ ಮತಗಟ್ಟೆ ಆರಂಭಿಸುವುದಾಗಿ ಸೂಚನೆಯಿದೆ. ತಾಲ್ಲೂಕಿನಲ್ಲಿ ಅಂತಹ ಪ್ರದೇಶ ಯಾವುದೂ ಇಲ್ಲವೆಂದು ತಿಳಿಸಿದರು. ತಾಲ್ಲೂಕಿನಲ್ಲಿ ತೆರವಾಗಿರುವ ತೀರ್ಥಪುರ, ದೊಡ್ಡ ಎಣ್ಣೆಗೆರೆ, ಕುಪ್ಪೂರು, ದಸೂಡಿ, ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಆಗಸ್ಟ್ 4ರಂದು ಚುನಾವಣೆ ನಡೆಯಲಿದೆ. ಆಗಸ್ಟ್ 7ರಂದು ಬುಧವಾರ 8ಕ್ಕೆ ಮತ ಎಣಿಕೆ ನಡೆಯಲಿದೆ.
ಈ ಸಂದರ್ಭದಲ್ಲಿ ಚುನಾವಣಾ ಶಿರಸ್ತಾರ್ ಎಲ್.ಎಸ್.ಶಿವಶಂಕರ್  ಉಪಸ್ಥಿತರಿದ್ದರು.



Monday, July 15, 2013

 ಹಾಸ್ಯದೊಂದಿಗೆ ಜೀವನ ದರ್ಶನದ ಮಾಡಿಸುವ ತಾಕತ್ತು ತೇಜಸ್ವಿ ಬರಹಗಳಲ್ಲಿದೆ: 
  • ಈ ಧಾಟಿಯ ಬರಹ ವಿಶ್ವದಲ್ಲಿ ಮೂವರಿಗೆ ಮಾತ್ರ ಧಕ್ಕಿದೆ, ಅದರಲ್ಲಿ ತೇಜಸ್ವಿ ಒಬ್ಬರು.
  • ತೇಜಸ್ವಿಯವರ 'ಕಾಡು ಮತ್ತು ಕ್ರೌರ್ಯ' ಪ್ರಿಂಟ್ಗೆ ಸಿದ್ದವಾಗಿರುವ ಕೃತಿ
  • ಮಾನಸ ಗಂಗೋತ್ರಿ ಆವರಣ ಸ್ಮಶಾನವಾಗಬಾರದೆಂದು ಅಣ್ಣನ ಕಳೆಬರವನ್ನು  ಕುಪ್ಪಳಿಗೆ ತಂದ ಪೂಚಂತೇ.

ಚಿಕ್ಕನಾಯಕನಹಳ್ಳಿ,ಜು.15 : ಪೂಚಂತೇಯವರು ತಮ್ಮ ಬರವಣಿಗೆಯಲ್ಲಿ ಹಾಸ್ಯದೊಂದಿಗೆ ಜೀವನ  ದುಃಖವನ್ನು ಬಿಂಬಿಸುತ್ತಿದ್ದ ರೀತಿಯ ಮನೋಜ್ಞವಾಗಿದೆ ಇಂತಹ  ಬರವಣಿಗೆ ವಿಶ್ವದ ಮೂವರು ಉತ್ತಮ ಬರಹಗಾರರಲ್ಲಿ ಪೂರ್ಣಚಂದ್ರ  ತೇಜಸ್ವಿಯವರು ಒಬ್ಬರು ಎಂದು ಅಂತರ ರಾಷ್ಟ್ರೀಯ ಕಲಾವಿದ ಡಾ.ಕೆ.ಟಿ.ಶಿವಪ್ರಸಾದ್ ತಿಳಿಸಿದರು.
ಪಟ್ಟಣದ ನವೋದಯ ಕಾಲೇಜಿನ ಆವರಣದಲ್ಲಿ ನಡೆದ ಯುಜಿಸಿ ಪ್ರಾಯೋಜಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದ ಆಶಯ ಭಾಷಣದಲ್ಲಿ ಭಾಗವಹಿಸಿ ಮಾತನಾಡಿದರು. ಇಂತಹ ಬರಹದ ಧಾಟಿ ವಿಶ್ವದ ಮೂವರು ಉತ್ತಮ ಬರಹಗಾರರಾದ ಬೋರೆಸ್, ಮಾಕರ್್ವೇಸ್, ತೇಜಸ್ವಿಯವರಿಗೆ ಧಕ್ಕಿತ್ತು ಎಂದ ಅವರು, ಕಲಾ ಮೀಮಾಂಸೆಯೊಂದಿಗೆ ಬರವಣಿಗೆ ಆರಂಭಿಸಿದ ಅವರು. ಪರಿಸರದ ಪೋಟೋಗ್ರಾಪ್ಗೆ ಹೆಚ್ಚು ಒತ್ತು ನೀಡಿದವರು, ತಮ್ಮ ಪರಿಸರದ ಜೊತೆಗೆ ವೈಜ್ಞಾನಿಕ, ವೈಚಾರಿಕ ಜ್ಞಾನದಲ್ಲೂ ತಮ್ಮನ್ನು ತಾವು ಅನ್ವೇಷಿಸಿಕೊಳ್ಳುತ್ತಾ ತಾನು ಕಂಡು ಕೊಂಡ ಸತ್ಯಗಳಿಗೆ ಅಕ್ಷರದ ರೂಪವನ್ನು ಕೊಟ್ಟವರು ಎಂದರು. 
ತೇಜಸ್ವಿಯವರು ಬರೆಯುತ್ತಿದ್ದ ಪುಸ್ತಕಗಳಲ್ಲಿ ಆರಂಭ ಯಾವುದು, ಕೊನೆ ಯಾವುದು ಎಂಬುದೇ ತಿಳಿಯುತ್ತಿರಲಿಲ್ಲ ಆದರೂ ಅವರ ಪುಸ್ತಕಗಳಲ್ಲಿ ಯುವ ಪೀಳಿಗೆ ಅರಿಯಬೇಕಿರುವ ಅಂಶ ಹೆಚ್ಚಿದೆ. ತೇಜಸ್ವಿಯವರ ಬರಹಗಳು ಐ.ಟಿ.ಬಿ.ಟಿಯಿಂದ ಹಿಡಿದು ಇಂದಿನ ಯುವಕರವರೆಗೆ ಎಲ್ಲರೂ ಸುಲಭವಾಗಿ ಓದುವಂತೆ ಮಾಡುತ್ತಿದ್ದ ಲೇಖಕರಾಗಿದ್ದ ಅವರು, ತನ್ನ ಕಥೆಗಳಿಗೆ  ಪತ್ರಿಕೆಯ ವರದಿಗಾರಿಕೆಯ ತಂತ್ರದ ಟೆಚ್ ನೀಡುವ ಮೂಲಕ ಬರವಣಿಗೆಗೆ ಹೊಸ ರೂಪವನ್ನು ಕೊಡಲು ಪ್ರಯತ್ನಿಸುತ್ತಿದ್ದರು ಅದು  ಅವರ ಬರೆದ ಅದರೆ ಇನ್ನೂ ಪ್ರಿಂಟ್ ಆಗಿಲ್ಲದ  ಕೃತಿಯಾದ  ಕಾಡು ಮತ್ತು ಕ್ರೌರ್ಯ ದಲ್ಲಿ ಕಂಡು ಬರುತ್ತದೆ,  ಈ ಪುಸ್ತಕವನ್ನು  ಶಿಷ್ಯಂದಿರು ಪ್ರಿಂಟ್ ಮಾಡಿಸಲು ತಯಾರಿ ನಡೆಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಹಾಗೂ ನವೋದಯ ವಿದ್ಯಾ ಸಂಸ್ಥೆ ಅಧ್ಯಕ್ಷ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಒಂದು ಕಾಲದಲ್ಲಿ ನಾನು ಕೂಡ ತೇಜಸ್ವಿಯವರ ಅಭಿಮಾನಿ, ತೇಜಸ್ವಿಯವರು ಕೃಷಿಗಿಂತ ಹೆಚ್ಚಾಗಿ ಪ್ರಕೃತಿ ಇಷ್ಟಪಡುತ್ತಿದ್ದ ಒಬ್ಬ ಶಿಸ್ತಿನ ಮನುಷ್ಯ, ನೇರ ಮಾತುಗಾರಿಕೆ ಹೊಂದಿದ್ದ ಅವರು ಪಟ್ಟಣದಲ್ಲಿ ಬೆಳೆದು ಹಳ್ಳಿಗಾಡಿನ ಜೀವನವನ್ನು ಅರಸಿ ಬಂದವರು. ಅವರು ಕೃಷಿಗಿಂತ ಹೆಚ್ಚಾಗಿ ಪ್ರಕೃತಿ ಅನ್ವೇಷಣಾಕಾರರಾಗಿ ಹೆಸರು ಪಡೆದವರು, ತೇಜಸ್ವಿ ತಮ್ಮ ತಂದೆ ಕುವೆಂಪು ರವರ ಕಳೆಬರವನ್ನು ಮೈಸೂರನ ಗಂಗೋತ್ರಿಯಲ್ಲಿ ಸಮಾಧಿ ಮಾಡಲು ಒಪ್ಪಲಿಲ್ಲ ಕಾರಣ ಅಲ್ಲಿದ್ದ ಒಂದು ವರ್ಗ ಕನ್ನಡ ಅಧ್ಯಯನ ಕೇಂದ್ರದ ಆವರಣವನ್ನು ಸ್ಮಶಾನ ಮಾಡಲು ಹೊರಟ್ಟಿತ್ತು ಅದನ್ನು ತಪ್ಪಿಸುವ ಸಲುವಾಗಿ ಅಣ್ಣನ ಸಮಾಧಿಯನ್ನು ಕುಪ್ಪಳಿ ಮಾಡಲಾಯಿತು ಎಂಬ ಸತ್ಯವನ್ನು ತೇಜಸ್ವಿ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಜೆ.ಸಿ.ಎಂ. ತಿಳಿಸಿದರು. 
ತೇಜಸ್ವಿಯವರು  ಏಕೆ ಪುಸ್ತಕ ಬರೆಯುತ್ತಾರೆ ಎಂಬ  ಪ್ರಶ್ನೆಗೆ ಅವರ ಕೊಟ್ಟ ಉತ್ತರವೆಂದರೆ  ಮುಂದಿನ ಪೀಳಿಗೆ ಹುಡುಕಾಟದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ಪುಸ್ತಕಗಳನ್ನು ಬರೆಯುತ್ತಿರುವುದಾಗಿ ತಿಳಿಸಿದ್ದಾರು  ಎಂದರಲ್ಲದೆ, ಅರಣ್ಯ ಸರಹದ್ದಿನ ಕಡೆ  ಆಗುತ್ತಿದ್ದ ವಿಚಾರಗಳನ್ನು ತೇಜಸ್ವಿಯವರಿಗಿಂತ ಉತ್ತಮವಾಗಿ ಬರೆಯುತ್ತಿದ್ದ ಬರಹಗಾರರು ಇರಲಿಲ್ಲ ಅಂತಹ ಅದ್ವಿತೀಯತೆ ಅವರಲ್ಲಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನವೋದಯ ವಿದ್ಯಾ ಸಂಸ್ಥೆ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಮಾತನಾಡಿ ರನ್ನ, ಜನ್ನ, ಪೊನ್ನ, ರಾಘವಾಂಕರಂತಹ ಕವಿಗಳು ಬಹಳ ಹಿಂದಿನ ತಲೆಮಾರಿನವರು, ಅ.ನ.ಕೃ, ಕುವೆಂಪು, ದ.ರಾ.ಬೇಂದ್ರೆರವರು 1960ರ ತಲೆಮಾರಿನವರು, ಈಗಿನ ತಲೆಮಾರಿನಗೆ ಯು.ಆರ್.ಅನಂತಮೂತರ್ಿ, ಚಂದ್ರಶೇಖರ ಕಂಬಾರ, ಪೂರ್ಣಚಂದ್ರ ತೇಜಸ್ವಿ ಹಾಗೂ ಇತರ ಸಾಹಿತ್ಯಾಸಕ್ತರು ಈಗಿನ ತಲೆಮಾರಿಗೆ ಸರಿ ಹೊಂದಿದವರು. ತೇಜಸ್ವಿಯವರು 1930ರಲ್ಲಿ ಕುವೆಂಪುರವರ ಮೊದಲನೆ ಮಗನಾಗಿ ಜನಿಸಿದರೂ ಎಲ್ಲೂ ತಾನು ಕುವೆಂಪುರವರ ಮಗ ಎಂದು ಹೇಳಿಕೊಳ್ಳದೇ ತೇಜಸ್ವಿಯಾಗಿಯೇ ಗುರುತಿಸಿಕೊಂಡವರು. ಕೃಷಿಕರಾಗಿ ಪ್ರಕೃತಿ ಸಂಪತ್ತನ್ನು ಪ್ರೀತಿಸುತ್ತಾ ತಮ್ಮ ಅಧ್ಯಯನ ಮಾಡಿಕೊಳ್ಳುತ್ತಿದ್ದರು. ತೇಜಸ್ವಿಯವರು ಪ್ರತಿಯೊಂದು ವಿಷಯವನ್ನು ಸ್ವಾಭಿಮಾನಿಯಾಗಿ ತೆಗೆದುಕೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ,  ನಿವೃತ್ತ ಪಾಂಶುಪಾಲ ಕೆ.ಸಿ.ಬಸಪ್ಪ, ಪ್ರಾಂಶುಪಾಲ ಪ್ರೊ.ಬಿ.ಎಸ್.ಬಸವಲಿಂಗಯ್ಯ, ಉಪಸ್ಥಿತರಿದ್ದರು. ಸಮಾರಂಭದಲ್ಲಿ ಲಾವಣ್ಯ ಪ್ರಾಥರ್ಿಸಿದರೆ, ತಯ್ಯೂಬ್ ನಿರೂಪಿಸಿ, ಉಪನ್ಯಾಸಕ ಸಿ.ರವಿಕುಮಾರ್ ವಂದಿಸಿದರು.

ಚಿ.ನಾ.ಹಳ್ಳಿ ರೊಟರಿ ಸೇವೆ ಶ್ಲಾಘನೀಯ: ಕವಿತಾ ಕೃಷ್ಣ
             

ಚಿಕ್ಕನಾಯಕನಹಳ್ಳಿ,ಜು.15 : ರೋಟರಿಯ ಸೇವೆ ಕಸದ ಪೊರಕೆಯಂತಿರಬೇಕು, ತನ್ನ ಸುತ್ತಮುತ್ತಲಿನ ಕೊಳೆಯನ್ನು ಶುಚಿಗೊಳಿಸಲು ಪೊರಕೆಯ ಪ್ರತಿ ಕಡ್ಡಿಯಂತೆ ರೋಟರಿಯನ್ಗಳು ಒಂದಾಗಿ ತಾಲ್ಲೂಕಿನ ಸಮಸ್ಯೆಗಳನ್ನು  ಖುಷಿಯಿಂದ ಸ್ವೀಕರಿಸಿ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಹೇಳಿದರು.
ಪಟ್ಟಣದ ಕಲ್ಪಕವೃಕ್ಷ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 2013-14ನೇ ಸಾಲಿನ ರೋಟರಿ ನೂತನ ಪದಾಧಿಕಾರಿಗಳ 38ನೇ ಪದವಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರೋಟರಿಯ ಸೇವೆಯು ಎಲ್ಲಾ ಕಡೆಯುಲ್ಲೂ ಉತ್ತಮವಾಗಿದೆ, ಸಬಲರು ರೋಟರಿಯೊಂದಿಗೆ ತೊಡಗಿಸಿಕೊಂಡು ಆಥರ್ಿಕವಾಗಿ ಹಿಂದುಳಿದಿರುವ ಹಾಗೂ ಸಮಾಜದ ಸಮಸ್ಯೆಗಳನ್ನು ನಿವಾರಿಸಿ ಜನರ ಜೀವನವನ್ನು ಉತ್ತಮಗೊಳಿಸುವಂತೆ ರೋಟರಿಯನ್ಗಳಿಗೆ ಕರೆ ನೀಡಿದರು. 
 ಚಿಕ್ಕನಾಯಕನಹಳ್ಳಿಯಲ್ಲಿ ರೋಟರಿ ಸಂಸ್ಥೆ ಹಾಗೂ ಸೃಜನ ಸಂಘಟನೆ ಸಮಾಜದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರಲ್ಲದೆ, ಸೇವೆಗಾಗಿ ಹಲವರು ದುಡಿದಿದ್ದಾರೆ ಅದರಮತೆ  ಸ್ವಾಮಿ ವಿವೇಕಾನಂದರು ಚಿಕಾಗೋ ಸೇರಿದಂತೆ ಹಲವು ದೇಶಗಳಲ್ಲಿ ನಡೆಸಿದ ಉಪನ್ಯಾಸ ಕಾರ್ಯಕ್ರಮಗಳಲ್ಲೂ ಸೇವೆಯ ಮಹತ್ವ ತಿಳಿ ಹೇಳಿದ್ದರು, ಮಾತನ್ನು ಮುತ್ತಾಗಿ ಬೆಳೆಸುತ್ತಿದ್ದ ವಿವೇಕಾನಂದರಂತೆ ರೋಟರಿಯಲ್ಲಿನ ಸದಸ್ಯರು ನಡೆದರೆ ರೋಟರಿ ಸಂಸ್ಥೆ  ಉತ್ತಮ ರೀತಿಯಲ್ಲಿ ಅಭಿವೃದ್ದಿಯಾಗುತ್ತದೆ ಎಂದರಲ್ಲದೆ ಸಂಸ್ಥೆಯ ಸೇವಾ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.
ರೋಟರಿ ಸಂಸ್ಥೆಯ ಜಿಲ್ಲಾ ನಾಮಿನಿ ಗವರ್ನರ್ ರೊ.ಕೆ.ಪಿ.ನಾಗೇಶ್ ಮಾತನಾಡಿ, ರೋಟರಿ ಸಂಸ್ಥೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಸಂಸ್ಥೆ, ವಿವಿಧ ಸಮಾಜ ಸೇವೆಗಳ ಜೊತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ವಿವಿಧ ಆರೋಗ್ಯ ತಪಾಸಣಾ ಶಿಬಿರ, ಕುಡಿಯುವ ನೀರು ಪೂರೈಕೆ, ವಿದ್ಯಾಥರ್ಿಗಳಿಗೆ ಉತ್ತೇಜನ ನೀಡುವಂತಹ ಸನ್ಮಾನ ಕಾರ್ಯಕ್ರಮ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ, ಅಲ್ಲದೆ ರೋಟರಿಯ ಸದಸ್ಯತ್ವ ಪಡೆಯಲು ಹಲವರು ಮುಂದೆ ಬಂದಿದ್ದಾರೆ ಎಂದರಲ್ಲದೆ ರೋಟರಿಯಲ್ಲಿ ಯಾವ ಕುಲವೂ ಇಲ್ಲ ಎಲ್ಲಾ ಕುಲದ ವ್ಯಕ್ತಿಗಳು ಇಲ್ಲಿ ಸಮಾನರು ಎಂದರು. 
ಸಾಹಿತಿ ಸಿ.ಕೆ.ಪರುಶುರಾಮಯ್ಯ ಮಾತನಾಡಿ, ಇತ್ತೀಚೆಗೆ ರೋಟರಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಹೆಚ್ಚು ಪ್ರಶಂಶನೀಯವಾಗಿವೆ,  ಸ್ವಯಂ ಸೇವೆಯ ಮನೋಭಾವದ ರೋಟರಿ ಸಂಸ್ಥೆಯಿಂದ ತಾಲ್ಲೂಕಿನ ಹಲವು ಸಮಸ್ಯೆಗಳು ನಿವಾರಣೆಯಾಗಲಿ ಎಂದು ಹಾರೈಸಿದರು.
  ನೂತನ ರೋಟರಿ ಅಧ್ಯಕ್ಷ ಸಿ.ಎಸ್.ಪ್ರದೀಪ್ಕುಮಾರ್ ಮಾತನಾಡಿ ಎಲ್ಲಾ ರೋಟರಿಯನ್ಗಳು ಸಹಕಾರ ನೀಡುವ ಮೂಲಕ ಕ್ಲಬ್ನ  ಶಕ್ತಿಯಾಗಿ, ಆ ಮೂಲಕ ನಾವೆಲ್ಲರೂ ಸೇರಿ ರೋಟರಿ ಮೂಲಕ ಹಲವು ಸೇವೆಯನ್ನು ನಿರ್ವಹಿಸೋಣ ಎಂದರಲ್ಲದೆ ಸಂಸ್ಥೆಗೆ ನೂತನವಾಗಿ 13ಮಂದಿ ನೂತನವಾಗಿ ಸೇರ್ಪಡೆಯಾಗಿದ್ದಾರೆ ಈ ಮೂಲಕ ರೋಟರಿ ಸಂಸ್ಥೆ 38 ಸದಸ್ಯರಿಂದ 50ರ ಗಡಿ ದಾಟಿ 51ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು. 
ಜಿಲ್ಲಾ ರೋಟರಿಯನ್ ನವೀನ್ ಮಾತನಾಡಿ ರೋಟರಿ ಹಿಂದೆ ನಡೆಯುತ್ತಿದ್ದಕ್ಕಿಂತ ಈಗನ ದಾರಿ ಬದಲಾಗಿ ಎಲ್ಲಡೆಯಲ್ಲೂ ಉತ್ತಮ ಸೇವೆ ನೀಡುತ್ತಿದೆ, ರೋಟರಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಇತರರಿಗೆ ಸಹಾಯ ಮಾಡುತ್ತಿದ್ದೇವೆ. ಚಿ.ನಾ.ಹಳ್ಳಿ ರೋಟರಿ ಸಂಸ್ಥೆ ತಾಲ್ಲೂಕಿನಲ್ಲಿ ಉತ್ತಮ ಸೇವೆ ಮಾಡಿದ್ದು ಬಡವರಿಗೆ ಸಹಾಯ ಮಾಡುತ್ತಿದೆ, ಅಲ್ಲದೆ ಇಲ್ಲಿನ ಇನ್ನರ್ವೀಲ್ ಕ್ಲಬ್ ಕೂಡ ಬಲಿಷ್ಟವಾಗಿದ್ದು ರೋಟರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ರೋಟರಿಯ ನಾಯಕ ಪತ್ರಿಕೆ ಹಾಗೂ ಎಂ.ಹರೀಶ್ ರೂಪಿಸಿರುವ ರೋಟರಿಯ ಕ್ಲಬ್ ನೂತನ ವೆಬ್ಸೈಟ್ ಲೋಕಾರ್ಪಣೆ ಮಾಡಲಾಯಿತು.. ಸಮಾರಂಭದಲ್ಲಿ ಕನ್ನಡದ ಕೋಟ್ಯಾಧಿಪತಿ ಸ್ಪಧರ್ೆಯಲ್ಲಿ ಭಾಗವಹಿಸಿದ್ದ  ಸಿ.ಎಸ್.ಬೀರಪ್ಪ, ಪ್ರತಿಭಾನ್ವಿತ ಕ್ರೀಡಾಪಟು ಅನುಷಾ ಎಸ್.ಶೆಟ್ಟಿ, ಪ್ರತಿಭಾನ್ವಿತ ವಿದ್ಯಾಥರ್ಿಗಳಾದ ಟಿ.ಎನ್.ಪಲ್ಲವಿ, ಆರ್.ಮಧುಸೂಧನ್ರವರನ್ನು ಸನ್ಮಾನಿಸಲಾಯಿತು. 
2013-14ನೇ ಸಾಲಿಗೆ ನೂತನವಾಗಿ ರೋಟರಿ ಅಧ್ಯಕ್ಷರಾಗಿ ಸಿ.ಎಸ್.ಪ್ರದೀಪ್ಕುಮಾರ್, ಕಾರ್ಯದಶರ್ಿಯಾಗಿ ಡಾ.ಜಿ.ಪ್ರಶಾಂತ್ಕುಮಾರ್ಶೆಟ್ಟಿಕ ಪದವಿ ಸ್ವೀಕರಿಸಿದರು.
ಸಮಾರಂಭದಲ್ಲಿ  ಕೆ.ಸಿ.ಡಿ.ಎ.ನಿದರ್ೇಶಕ ದಿಲೀಪ್ಕುಮಾರ್ ಷಾ, ಅಸಿಸ್ಟೆಂಟ್ ಗವರ್ನರ್ ರೊ.ಜಯರಾಂ, ಎಚ್.ಆರ್.ಶ್ರೀನಾಥ್ಬಾಬು, 2013-13ನೇ ಸಾಲಿನ ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಎಂ.ದೇವರಾಜು, ರೋಟರಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಮ್.ಸುರೇಶ್, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ತೇಜಾವತಿ ನರೇಂದ್ರಬಾಬು, ಜಿಲ್ಲಾ ಗವರ್ನರ್ ಬಿಳಿಗೆರೆ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.