Saturday, July 9, 2016



ದಿ.ರೇವಣ್ಣನವರ ಹಾಗೂ ಕೆ.ಬಸವಯ್ಯನವರ 10ನೇ ವರ್ಷದ ವಾಷಿಕೋತ್ಸವ 
ಚಿಕ್ಕನಾಯಕನಹಳ್ಳಿ,ಜು.09 : ದಿ.ರೇವಣ್ಣನವರು ನಿಸ್ವಾರ್ಥ ಸೇವೆಗೆ ಹೆಸರಾಗಿದ್ದರು, ಜಾತಿ ಬೇದ ಮರೆತು ತಮ್ಮ ಬಳಿ ಸಹಾಯಕ್ಕಾಗಿ ಬಂದವರೆಲ್ಲರಿಗೂ ಶಿಕ್ಷಣದ ನೆರವು ನೀಡಿ, ಸಕರ್ಾರಿ ಕೆಲಸ ದೊರಕಿಸಿ, ಸಮಾಜದ ಉತ್ತಮ ವ್ಯಕ್ತಿಗಳಾಗುವಂತೆ ಮಾಡಿದರು ಎಂದು ತುಮಕೂರು ಶ್ರೀದೇವಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಿ.ಎಂ.ಗುರುಮೂತರ್ಿ ಹೇಳಿದರು.
ಪಟ್ಟಣದ ಕಂಬಳಿ ಸೊಸೈಟಿ ಮುಂಭಾಗದಲ್ಲಿ ಸ್ಥಾಪಿಸಿರುವ ದಿವಂಗತ ನಿವೃತ್ತ ಅಪರ ಕೃಷಿ ನಿದರ್ೇಶಕರಾಗಿದ್ದ ಸಿ.ಎಂ.ರೇವಣ್ಣ ಹಾಗೂ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಕೆ.ಬಸವಯ್ಯನವರ ಪುತ್ಥಳಿ ಪ್ರತಿಷ್ಠಾಪನೆಯ 10ನೇ ವರ್ಷದ ಪೂಜಾ ಕಾರ್ಯಕ್ರಮ ಹಾಗೂ ಕನಕ ಭವನದಲ್ಲಿ ನಡೆದ ವಾಷರ್ಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
   ಪುತ್ಥಳಿ ಅನಾವರಣ ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಬಡವಿದ್ಯಾಥರ್ಿಗಳ ಶಿಕ್ಷಣಕ್ಕೆ ನೆರವು ನೀಡಿದ ಮಹಾನ್ ವ್ಯಕ್ತಿ ರೇವಣ್ಣ. ಸುಮಾರು 300ಕ್ಕೂ ಹೆಚ್ಚು ಜನರಿಗೆ ಸಕರ್ಾರಿ ಕೆಲಸ ದೊರಕುವಂತೆ ಮಾಡಿ, ಸಮಾಜದ ಏಳಿಗೆಗೆ ಶ್ರಮಿಸಿದವರು. ಅವರು ಹಾಕಿಕೊಟ್ಟ ದಾರಿಯಲ್ಲಿ ಕೆಲಸ ಮಾಡಿದವರು ಇಂದು ಸಮಾಜದ ಬಡ ವಿದ್ಯಾಥರ್ಿಗಳ ಶೈಕ್ಷಣಿಕ ಅಭಿವೃದ್ದಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಪುತ್ಥಳಿ ಅನಾವರಣ ಸಮಿತಿ ಗೌರವಾಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್ ಮಾತನಾಡಿ, ರೇವಣ್ಣನವರ ಹಾಗೂ ಬಸವಯ್ಯ ಅವರ ನೆನಪಿಗಾಗಿ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಹಾಗೂ ಸೇವಾ ಸಮಿತಿ ರಚಿಸಿಕೊಂಡು ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿರುವುದು, ಬಡವಿದ್ಯಾಥರ್ಿಗಳಿಗೆ ನೋಟ್ಬುಕ್, ಕನ್ನಡ ಇಂಗ್ಲಿಷ್ ನಿಘಂಟನ್ನು ನೀಡುತ್ತಿರುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನೋಟ್ಬುಕ್ ವಿತರಿಸಲಾಯಿತು. ಪುತ್ಥಳಿ ಅನಾವಾರಣ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಾಗೂ ನಿವೃತ್ತ ಸಹಾಯಕ ಕೃಷಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. 
ಸಮಿತಿ ಅಧ್ಯಕ್ಷ ದೊರೆಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಂಟಿ ಕೃಷಿ ನಿದರ್ೇಶಕ ಪಿ.ಮೋಹನ್, ಪತ್ರಿಕೋದ್ಯಮಿ ಸಿ.ಜಿ.ಮುದ್ದುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪಟ್ಟಣದಲ್ಲಿ ಸ್ವಚ್ಛತೆಗೆ ಪುರಸಭೆ ಮುಂದಾಗುವರೇ ? 
ಚಿಕ್ಕನಾಯಕನಹಳ್ಳಿ,ಜು.09 : ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಬರುವ ಬಸ್ನಿಲ್ದಾಣ ನೆಹರು ವೃತ್ತ ದೇವಾಂಗ ಬೀದಿ ಸೇರಿದಂತೆ ಪಟ್ಟಣದ 23 ವಾಡರ್್ಗಳಲ್ಲಿ ಕಸದ ರಾಶಿಯೇ ಹರಡಿದ್ದು ಇದರಿಂದ ಪಟ್ಟಣದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಪಟ್ಟಣದ  ಹೊಸ ಬಸ್ ನಿಲ್ದಾಣದ ಸುತ್ತಮುತ್ತಲ ಹೂವಿನ ಅಂಗಡಿಗಳು ಕಾಫಿ, ಟೀ, ಬಾಳೆ ಹಣ್ಣಿನ ಅಂಗಡಿಗಳಲ್ಲಿ ಬರುವ ತ್ಯಾಜ್ಯ ರಸ್ತೆ ಬದಿ ಚೆಲ್ಲಾಡುತ್ತಿದ್ದರೂ ಪುರಸಭೆ ತಲೆ ಕೆಡಿಸಿಕೊಂಡಿಲ್ಲ,  ಹೊಸ ಬಸ್ನಿಲ್ದಾಣದ ಹೈಮಾಸ್ಟ್ ಲೈಟ್ ಬಳಿ ಇಟ್ಟಿರುವ ಕಂಟೇನರ್ಗೆ ಕಸ ಹಾಕದೇ ಅಂಗಡಿ ಮಾಲೀಕರುಗಳು ಕಸವನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದರಿಂದ ಈ ಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಿದೆ.
 ಖಾಸಗಿ ಬಸ್ ನಿಲ್ದಾಣದಲ್ಲಿರುವ ಚರಂಡಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದೆ, ಅಕ್ಕಪಕ್ಕದ ಪೆಟ್ಟಿಗೆ ಅಂಗಡಿಯವರು ಟೀ, ಕಾಫಿ, ಲೋಟಗಳನ್ನು ಚರಂಡಿಯಲ್ಲಿ ಹಾಕುತ್ತಿರುವುದರಿಂದ ಚರಂಡಿ ಘನತ್ಯಾಜ್ಯದಿಂದ ತುಂಬಿಕೊಂಡು ದುನರ್ಾತ ಬೀರುತ್ತಿದೆ. ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆ ನೀರು ಚರಂಡಿಯಲ್ಲಿ ನಿಂತು, ತ್ಯಾಜ್ಯ ಕೊಳೆಯುತ್ತಿದೆ. ಕೆಲವರು ಚರಂಡಿಯ ಮೇಲೆ ಹಾಕಿರುವ ಹಾಸು ಕಲ್ಲುಗಳನ್ನು ಅಪಹರಣವಾಗಿದ್ದು ಪಾದಚಾರಿಗಳು ತೀವ್ರ  ತೊಂದರೆ ಅನುಭವಿಸುತ್ತಿದ್ದಾರೆ.
 ಪಾದಾಚಾರಿಗಳು ನಡೆದು ಹೋಗುವಾಗ ಚರಂಡಿಯಲ್ಲಿ ಬಿದ್ದು ಕೈಕಾಲು ಮುರಿದು ಆಸ್ಪತ್ರೆ ಸೇರಿರುವ ಉದಾಹರಣೆಗಳೂ ಇವೆ. ಪುರಸಭೆ ಅಧಿಕಾರಿಗಳು, ಸದಸ್ಯರು ಚರಂಡಿಗಳಲ್ಲಿ ಹಾಕಿರುವ ತ್ಯಾಜ್ಯವನ್ನು ತೆಗೆದು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮಕೈಗೊಳ್ಳಬೇಕು ಹಾಗೂ ಕಳುವಾಗಿರುವ ಚಪ್ಪಡಿಗಳನ್ನು ಹಾಕಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಧರ್ಮಸ್ಥಳ ಸಂಸ್ಥೆಯ ಒಕ್ಕೂಟ ಪದಗ್ರಹ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜು.09 : ಧರ್ಮಸ್ಥಳ ಸಂಸ್ಥೆ ರೈತರಲ್ಲಿನ ಜ್ಞಾನವನ್ನು ಗುರುತಿಸಿಕೊಳ್ಳಲು ಹಾಗೂ ಕೌಶಲ್ಯಗಳನ್ನು ವೃದ್ದಿಸಿಕೊಳ್ಳಲು  ಹಲವು ರೀತಿಯಲ್ಲಿ ಸಹಕಾರ ನೀಡುತ್ತಿದೆ. ಸಂಸ್ಥೆಯ ನೆರವು ಬಳಸಿಕೊಂಡು ಆಥರ್ಿಕ ಪ್ರಗತಿ ಸಾಧಿಸಿಕೊಳ್ಳಿ ಎಂದು ಮಾಜಿ ತಾ.ಪಂ.ಅಧ್ಯಕ್ಷ ಹೆಚ್.ಆರ್.ಶಶಿಧರ್ ಹೇಳಿದರು.
ತಾಲ್ಲೂಕಿನ ಸಿದ್ದರಾಮನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ಶನಿವಾರ ನಡೆದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ದುಗಡಿಹಳ್ಳಿ ಮತ್ತು ಹೆಸರಹಳ್ಳಿ ಕಾರ್ಯಕ್ಷೇತ್ರಗಳ ನೂತನ ಒಕ್ಕೂಟ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ವತಿಯಿಂದ ಸಾಲ ಸೌಲಭ್ಯಗಳು ಸುಲಭವಾಗಿ ದೊರೆಯುತ್ತವೆ. ಆದರೆ ಸಾಲ ಪಡೆದವರು ಕೃಷಿ ಕೆಲಸಗಳಿಗೆ ಹಣ ಹೂಡಿದರೆ ಆಥರ್ಿಕವಾಗಿ ಲಾಭ ಪಡೆಯಬಹುದು ಎಂದರು.
ತಾ.ಪಂ.ಸದಸ್ಯೆ ಶೈಲಾ ಮಾತನಾಡಿ, ಯುವಕರು ಸಂಸ್ಕೃತಿ ಮರೆಯಬಾರದು. ದೇಶದ ಕಲೆ, ಸಾಂಸ್ಕೃತಿಯನ್ನು ಯುವಪೀಳಿಗೆ ಬೆಳೆಸಿ ಮುಂದೆ ಬರುವಂತಹ ಜನಾಂಗಕ್ಕೆ ಮಾದರಿಯಾಗಿ ನೀಡಬೇಕು. ಮಹಿಳೆಯರು ಅಭಿವೃದ್ಧಿ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಮಾತನಾಡಿ, ಗ್ರಾಮಗಳ ಕಲ್ಯಾಣ ರೈತರ ಅಭ್ಯೂದಯದಿಂದ ಮಾತ್ರ ಸಾಧ್ಯ ಎಂಬ ಆಶಯವನ್ನಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ರಾಜಶೇಖರ್, ಸಾವಿತ್ರಮ್ಮ, ಶಿಕ್ಷಕ ಶ್ಯಾಮಸುಂದರ್ ಮತ್ತಿತರರು ಉಪಸ್ಥಿತರಿದ್ದರು.



ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯಥರ್ಿಯಾಗಿ ಸ್ಪಧರ್ಿಸುವೆ ಟಿ.ದಾಸೇಗೌಡ 

ಚಿಕ್ಕನಾಯಕನಹಳ್ಳಿ,ಜು.09 : ಸಕರ್ಾರ ಶಿಕ್ಷಕರನ್ನು ಜೀತದಾಳುಗಳಂತೆ ಕಾಣುತ್ತಿದೆ, ಘನತೆಯ ವೇತನ ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡದೆ ಶಿಕ್ಷಕ ಸಮುದಾಯವನ್ನು ವಂಚಿಸುತ್ತಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಪಕ್ಷೇತರವಾಗಿ ಸ್ಪಧರ್ಿಸಿರುವ ಟಿ.ದಾಸೇಗೌಡ ಆರೋಪಿಸಿದರು.
  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ಕುಮಾರ್ ನಾಯಕ್ ವರದಿಯನ್ನು ಯಥಾವತ್ ಅನುಷ್ಠಾನಗೊಳಿಸಿ ವೇತನ ತಾರತಮ್ಯ ನಿವಾರಿಸಬೇಕು. ಹೊಸ ಪಿಂಚಣಿ ನೀತಿಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಬೇಕು. ಶಾಲೆ, ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭತರ್ಿ ಮಾಡಬೇಕು ಎಂದು ಒತ್ತಾಯಿಸಿದರು.
    ಅನುದಾನ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಆರೋಗ್ಯ ವಿಮೆ ವಿಸ್ತರಣೆ, ಅರೆಕಾಲಿಕ ಉಪನ್ಯಾಸಕರುಗಳ ಖಾಯಮಾತಿ, ಅನುದಾನ ರಹಿತ ಶಾಲೆ ಶಿಕ್ಷಕರುಗಳಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಸಂಬಳ ಹಾಗೂ ಸೇವಾ ಭದ್ರತೆ ಒದಗಿಸುವುದು, ಮಹಿಳಾ ಸಿಬ್ಬಂದಿಗೆ ವಿಶೇಷ ರಜೆ ಹಾಗೂ ಶಾಲೆಗಳ ಉನ್ನತೀಕರಣ ತಮ್ಮ ಗುರಿ ಎಂದರು.
  ಗೋಷ್ಠಿಯಲ್ಲಿ ಪಟೇಲ್ ಗರುಡೇಗೌಡ ಅಧ್ಯಯನ ಕೇಂದ್ರದ ಸಂಯೋಜಕ ಜಿ.ಶಾಂತರಾಜು, ಎಸ್.ಎಂ.ಎಸ್, ಕಾಲೇಜ್ ಪ್ರಿನ್ಸಿಪಾಲ್ ಸ್ವಾಮಿಗೌಡ ಉಪಸ್ಥಿತರಿದ್ದರು.



Friday, July 8, 2016

ಅಣೆಕಟ್ಟೆಗೆ ಆರೋಗ್ಯ ಸಚಿವ ರಮೇಶ್ಕುಮಾರ್ ಭೇಟಿ, ಚಿಕನ್ಗುನ್ಯಾ ಬಗ್ಗೆ ಪರಿಶೀಲನೆ
ಚಿಕ್ಕನಾಯಕನಹಳ್ಳಿ08: ಥೂ...ತ್ತೇರಿ ಹೋಡೆದುಬಿಡ್ತಿನಿ, ಎಲ್ಲಾ ತಿಳಿದುಕೊಂಡೆ ಬಂದಿದ್ದೇನೆ. ಮೂನ್ನೂರು ಜನ ಖಾಯಿಲೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ನೀವು ಮುವಾತ್ತಾರು ಜನ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಿರಾ. ಏನ್ ಅವತಾರ ನಿಮ್ದು ಬಹಿರಂಗವಾಗಿ ಈ ರೀತಿ ಸುಳ್ಳು ಹೇಳಿದರೆ ಜನ ಕಾಪಾಳಕ್ಕೆ ಭಾರಿಸಿದರೆ ಗತಿ ಏನು ಎಂದು ಆರೋಗ್ಯ ಸಚಿವ ರಮೇಶ್ಕುಮಾರ್ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಅಣೇಕಟ್ಟೆ ಗ್ರಾಮದ ಚಿಕೂನ್ಗುನ್ಯಾ ರೋಗಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ದಿಢೀರ್ಭೇಟಿ ನೀಡಿ ಪರೀಶಿಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿ,  ಸುಳ್ಳು ಹೇಳಿದರೆ ಸಸ್ಪೆಂಡ್ ಆಗ್ತಿರಾ. ಸುಳ್ಳು ಹೇಳಿದರೆ ಒಂದು ತಪ್ಪು ನಿರಾಕರಿಸಿದರೆ ಇನ್ನೊಂದು ತಪ್ಪುಮಾಡಿದಂತಾಗುತ್ತದೆ  ಎಚ್ಚರವಿರಲಿ ಎಂದು ಗದರಿದರು.
ನೀವು ಅಧಿಕಾರಿಗಳು ನಮಗೆ ಸುಳ್ಳು ಮಾಹಿತಿ ನೀಡಿ ಸಕರ್ಾರವನ್ನು ಕತ್ತಲಲ್ಲಿಟ್ಟಿದ್ದೀರಿ.  ನಿಮ್ಮ ವರದಿಗಳನ್ನು ಇಟ್ಟುಕೊಂಡು ಮುಂದಿನ ವಿಧಾನಸಭೆಯಲ್ಲಿ ನಾನು ಯಾವರೀತಿ ಮಾತನಾಡಲಿ,  ನಮಗೆ ತಪ್ಪು ಮಾಹಿತಿಗಳನ್ನು ನೀಡಿ ನಮ್ಮ ಬಾಯಲ್ಲಿ ಸುಳ್ಳು ಹೇಳಿಸುತ್ತೀರಿ. ಮನುಷ್ಯನಿಗೆ ಹೃದಯವಿರಬೇಕು ಕೇವಲ ಮನುಷ್ಯನಂತೆ ಕಂಡರೆ ಸಾಲದು. ಜನರು ನಮ್ಮನ್ನು ಆರಿಸಿ ಕಳುಹಿಸಿದ್ದು ಅವರ ಸೇವೆ ಮಾಡಲು ನೀವು ಕೇವಲ ಓದಿನಿಂದ ಅಧಿಕಾರ ಪಡೆದಿದ್ದು, ನಾವು ಜನರ ಕಷ್ಟ ನಷ್ಟಗಳನ್ನು ಕಂಡು ನೋಡಿ ತಿಳಿದು ಅವರಿಂದ ಆರಿಸಿ ಬಂದಿರುತ್ತೇವೆ. ಇದುವರೆವಿಗೂ ನಿಮಗೆ ಏನು ಖಾಯಿಲೆ ಎಂದು ದೃಢಪಡಿಸಿಕೊಳ್ಳಲು ಸಾಧ್ಯವಿಲ್ಲ 9 ಜನ ಮಲೆರಿಯಾ ಪೀಡಿತರಿದ್ದಾರೆ ಎಂದು ಹೇಳುತ್ತೀದ್ದಿರಿ, ಉಳಿದ 293ಜನರಿಗೆ ಬಂದಿರುವ ಖಾಯಿಲೆ ಯಾವುದು ಎಂಬುದರ ಬಗ್ಗೆ ಪರೀಕ್ಷೇ ನಡೆಸಿದ್ದಾರಾ ಎಂದ ಅವರು ಜನರಿಗೆ ಯಾವ ಖಾಯಿಲೆ ಎಂದು ತಿಳಿಯದೇ ಏನು ಚಿಕಿತ್ಸೆ ನೀಡುತ್ತಿದ್ದೀರಿ ಎಂದು ಪ್ರೇಶ್ನಿಸಿದರು.
ಗ್ರಾಮದ ಸ್ವಚ್ಛತೆಯ ಬಗ್ಗೆ ತಕ್ಷಣ ಕ್ರಮವಹಿಸಿ ಫಾಗಿಂಗ್ ಹಾಗೂ ರಕ್ತಪರೀಕ್ಷೆ, ನೀರಿನ ಪರೀಕ್ಷೆಯನ್ನು ತುತರ್ಾಗಿ ಮಾಡಿ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳಿ ಒಂದು ತಿಂಗಳಾದರೂ ಪರವಾಗಿಲ್ಲ, ಸಮಸ್ಯೆ ಬಗೆಹರಿಸಿಯೇ ವೈದ್ಯರ ತಂಡ ಗ್ರಾಮವನ್ನು ತೊರೆಯಬೇಕು ಎಂದು ತಾಕಿತು ಮಾಡಿದರು. ಯಾವುದೇ ತಾರತಮ್ಯಮಾಡದೇ ಬಂದ ಎಲ್ಲರಿಗೂ ಇಲ್ಲವೇ ಅವರ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡಬೇಕು ಸಕರ್ಾರದ ವತಿಯಿಂದ ಯಾವುದೇ ಸವಲತ್ತು ಬೇಕಾದರೂ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ರಾಜ್ಯ ಸಾಂಕ್ರಾಮಿಕ ರೋಗಗಳ ನಿಗಾವಣೆ ನಿದರ್ೇಶಕಿ ಡಾ|| ಲೋಲಾಪಾಟೀಲ್ ಇವರ ನಿದರ್ೇಶನದ ನಂತರ ಸ್ಥಳಕ್ಕೇ ಭೇಟಿ ನೀಡಿದ್ದೀರಿ,  ನಿಘಂಟನ್ನು ನೋಡಿ ಸವರ್ೇಲೆನ್ಸ್ ಎಂಬ ಪದಕ್ಕೆ ಅರ್ಥ ತಿಳಿದುಕೊಂಡು ಕೆಲಸ ಮಾಡಿ ಸಮಸ್ಯೆ ಮಾಧ್ಯಮದಲ್ಲಿ ಬಿತ್ತರಗೊಂಡ ನಂತರ ಸ್ಥಳಕ್ಕೆ ಭೇಟಿ ನೀಡಿರುವ ನೀವು ಈ ಬಗ್ಗೆ ಯಾವುದೇ ರೀತಿಯ ವರದಿಯನ್ನು ಸಂಗ್ರಹಿಸಿಲ್ಲ ಯಾಕೆ  ಇದರಿಂದ ನಿಮ್ಮ ಬೇಜಾವಾಬ್ದಾರಿ ಎಷ್ಟು ಎಂಬುದು ತಿಳಿಯುತ್ತದೆ ಎಂದರು.
ಜನಸಾಮಾನ್ಯರಿಗೆ ಇದು ಚಿಕೂನ್ಗುನ್ಯ ಎಂದು ಗೊತ್ತು, ನೀವು ಮಾತ್ರ ಪರೀಕ್ಷೆಯನ್ನೇ ನಡೆಸದೇ ಶಂಕಿತ ಖಾಯಿಲೆ ಎಂದು ಹೇಳುತ್ತಿದ್ದೀರಿ ನಿಮಗೆ ಈ ಖಾಯಿಲೆ ಬಂದಿದ್ದರೆ ತಿಳಿಯುತ್ತಿತ್ತು. ಜನರನ್ನು ನಿಮ್ಮ ಕುಟುಂಬದವರಂತೆ ಕಂಡು ಸಮಸ್ಯಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಜನರ ಋಣ ತೀರಿಸಿ ಎಂದರು.
ಊರು ಕಾಯುವವನು ಬಂದೂಬಸ್ತ್ ಮಾಡಿದ್ದರೆ ದನ ನುಗ್ಗುತ್ತಿರಲಿಲ್ಲ,  ಆಶಾ ಕಾರ್ಯಕರ್ತರಿಂದ ಹಿಡಿದು ಜಿಲ್ಲಾ ಆರೋಗ್ಯಾಧಿಕಾರಿಗಳ ವರೆಗೆ ಎಲ್ಲಾ ಹಂತದ ಅಧಿಕಾರಿಗಳೂ ವರದಿಯನ್ನು ನೀಡದೇ ದೊಡ್ಡತಪ್ಪು ಮಾಡಿದ್ದೀರಿ ಇದರ ಪರಿಣಾಮ ಮುಂದೆ ನೋಡುತ್ತಿರಿ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಗ್ರಾ,ಪಂ.ಅಧ್ಯಕ್ಷ ಚಿಕ್ಕೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಲಾ, ಡಿಎಸ್ಒ ಡಾ||ಪುರುಷೋತ್ತಮ್, ಎನ್ವಿಬಿಡಿಸಿಪಿ ಯ ಡಾ||ವೀಣಾ, ತಾಲ್ಲೂಕು ವೈದ್ಯಾಧೀಕಾರಿ ಡಾ||ಶಿವಕುಮಾರ್, ಇಒ ಕೃಷ್ಣಮೂತರ್ಿ, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ತಿಮ್ಮಯ್ಯ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.


ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಎಚ್ಚರವಹಿಸಿ : ಪುರಸಭೆ ಸಭೆಯಲ್ಲಿ ಚಚರ್ೆ
ಚಿಕ್ಕನಾಯಕನಹಳ್ಳಿ,ಜು.08: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ವಹಿಸಬೇಕಾದ ಎಚ್ಚರ, ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ನಿಗಧಿಗೆ ಸಂಬಂಧಿಸಿದ ತೀಮರ್ಾನ, ಮುಸ್ಲಿಂ ಸಮುದಾಯದವರಿಗೆ ನೀಡುತ್ತಿರುವಂತೆ ನಮಗೂ ಪುರಸಭಾ ನಿವೇಶನಗಳನ್ನು ನೀಡುವಂತೆ ವಿವಿಧ ಸಮಾಜದವರು ನೀಡಿರುವ  ಅಜರ್ಿಯ ಮೇಲೆ ಚಚರ್ೆ, ಪುರಸಭಾ ಆಸ್ತಿಗಳಿಗೆ ತಂತಿಬೇಲಿ ಹಾಕುವುದು  ಸೇರಿದಂತೆ ಒಟ್ಟು ಎಂಟು ಪ್ರಮುಖ ವಿಷಯಗಳ ಮೇಲೆ ಪುರಪಿತೃಗಳು ನಿರ್ಣಯ ಕೈಗೊಂಡಿದ್ದಾರೆ.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿನ ಜನರು ಚಿಕನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ,  ಪಟ್ಟಣದಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿದ್ದು ಮುನ್ನೇಚ್ಚರಿಕೆಯಾಗಿ ಕಸ, ಕೊಳಚೆ ನೀರು ನಿಲ್ಲದಂತೆ ಸ್ವಚ್ಛತೆಯನ್ನು ಕಾಪಾಡಬೇಕು, ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಚರಂಡಿಗಳಲ್ಲಿ ನೀರು ನಿಲ್ಲದಂತೆ ಹಾಗೂ ಮನೆಗಳ ಸುತ್ತುಮುತ್ತ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿದರು ಹಾಗೂ ಬಿದ್ದಿರುವ ಹಳೆಮನೆಗಳಿಗೆ ಹೊಸದಾಗಿ ಕಟ್ಟಲು ಲೈಸೆನ್ಸ್ ನೀಡದ ಬಗ್ಗೆ ಸದಸ್ಯ ಸಿ.ಡಿ.ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ಸದಸ್ಯೆ ರೇಣುಕಮ್ಮ ಮಾತನಾಡಿ, ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ, ಪಟ್ಟಣದಲ್ಲಿ ಸಮರ್ಪಕವಾಗಿ ನೀರು ಬೀಡುತ್ತಿಲ್ಲ ಎಂದರಲ್ಲದೆ  ಪಟ್ಟಣದಲ್ಲಿ ಬೋರೆವೆಲ್ಗಳು ಎಷ್ಟು ಕೆಟ್ಟು ನಿಂತಿವೆ ಎಂದು ತಿಳಿಸಿಲ್ಲ ಹಾಗೂ 577 ಪೈಪ್ ಲೆಂತ್ಗಳ ಬಗ್ಗೆ ದಾಖಲೆ ನೀಡಿಲ್ಲ ಎಂದು ಆರೋಪಿಸಿದರು. 
  ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಮಾತನಾಡಿ, ಪಟ್ಟಣದಲ್ಲಿ ಬಡವರು ನಿವೇಶನಕ್ಕಾಗಿ ಅಜರ್ಿ ಹಾಕಿದ್ದರೂ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ನಿವೇಶನಗಳನ್ನು ನೀಡಿಲ್ಲ ಎಂದ ಅವರು, ಮೊದಲು ಲೈಸೆನ್ಸ್ ಗೊಂದಲ ನಿವಾರಿಸಿ  ಹಾಗೂ ವಾಡರ್್ಗಳಲ್ಲಿ ಸರಿಯಾಗಿ ನೀರು ಸರಬರಾಜು ಮಾಡಬೇಕೆಂದು ಹೇಳಿದರು.
ಪುರಸಭಾ ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿ, ಡೆಂಗ್ಯೂ ಜ್ವರದ ಬಗ್ಗೆ ಅಧಿಕಾರಿಗಳೊಂದಿಗೆ ಚಚರ್ಿಸಿ ಮುನ್ನೇಚ್ಚರಿಕೆ ವಹಿಸಲಾಗುವುದು, ಇನ್ನು ಮುಂದೆ ಬೋರ್ವೆಲ್ಗಳ ವಿವರ ಹಾಗೂ ಹೊಸದಾಗಿ ಕೊರಿಸಿದ ಬೋರ್ವೆಲ್ಗೆ ಎಷ್ಟು ವೆಚ್ಚವಾಯಿತು, ಮಾಸಿಕ ಜಮಾ ಖಚರ್ುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರಲ್ಲದೆ,  ಪುರಸಭಾ ಆಡಳಿತದಲ್ಲಿ ಲೋಪ ದೋಷಗಳೂ ಆಗದಂತೆ ಎಚ್ಚರವಹಿಸುತ್ತಿದ್ದೇನೆ ಎಂದರು. ಪಟ್ಟಣದಲ್ಲಿ 61ಬೋರೆವೆಲ್ಗಳಿದ್ದು 32 ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರಲ್ಲದೆ, ಹೊಸ ಬೋರ್ವೆಲ್ಗಳಿಗೆ ಮೋಟರ್ ಅಳವಡಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ಮನೆ ಕಟ್ಟಲು ಅಗತ್ಯವಿರವ  ಲೈಸೆನ್ಸ್ ಸಮಸ್ಯೆಯನ್ನು ಮೇಲಾಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಹಾಗೂ ಪ್ರತಿ ವಾಡರ್್ಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಅರಿತು ಬಗೆಹರಿಸುತ್ತೇನೆ ಎಂದರು. ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ ಏನೇ ಸಮಸ್ಯೆ ಇದ್ದರೂ ಅಧಿಕಾರಿ ಹಾಗೂ ಸದಸ್ಯರ ಮುಖಾಂತರ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷರು ಸಿ.ಟಿ.ದಯಾನಂದ್, ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ರೇಣುಕಮ್ಮ, ಪುಷ್ಪ.ಟಿ.ರಾಮಯ್ಯ, ರೂಪ, ನೇತ್ರಾವತಿ, ಧರಣಿ.ಬಿ.ಲಕ್ಕಪ್ಪ, ಪ್ರೇಮದೇವರಾಜು, ಗೀತಾರಮೇಶ್, ಸಿ.ಎಸ್.ರಮೇಶ್, ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಎಂ.ಕೆ.ರವಿಚಂದ್ರ, ಸಿ.ಆರ್.ತಿಮ್ಮಪ್ಪ, ರಾಜಶೇಖರ್, ಪುರಸಭಾಮುಖ್ಯಾಧಿಕಾರಿ ಶ್ರೀಕಾಂತ್ ಉಪಸ್ಥಿತರಿದ್ದರು. 






Thursday, July 7, 2016



ಅಣೆಕಟ್ಟೆಯಲ್ಲಿ ಶಂಕಿತ ಚಿಕನ್ಗುನ್ಯಾ 
ಚಿಕ್ಕನಾಯಕನಹಳ್ಳಿ,ಜು.6: ತಾಲ್ಲೂಕಿನ ಅಣೇಕಟ್ಟೆ ಗ್ರಾಮದಲ್ಲಿ ಅಂಗನವಾಡಿ ಓದುವ ಮಗುವಿನಿಂದ ಹಿಡಿದು ಮುದುಕರವರೆಗೆ ವಿವಿಧ ವಯೋಮಾನದವರು ಕಾಯಿಲೆಗೆ ತುತ್ತಾಗಿದ್ದಾರೆ. ಊರಿಗೆ ಊರೇ ಶಂಕಿತ ಚಿಕೂನ್ಗುನ್ಯ ಕಾಯಿಲೆಯಿಂದ ಬಳಲುತ್ತಿದೆ. ಗ್ರಾಮದಲ್ಲಿ ಚಟುವಟಿಕೆಗಳು ಸ್ಥಬ್ಧವಾಗಿದ್ದು, ಜನರು ಕಾಯಿಲೆಯಿಂದ ಬಳಲುತ್ತಿದ್ದಾರೆ.
    180 ಕುಟುಂಬ,550 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಚಿಕೂನ್ಗುನ್ಯದಿಂದ ನರಳುತ್ತಿದ್ದಾರೆ. 100ಕ್ಕೂ ಹೆಚ್ಚು ಮನೆಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಕಾಯಿಲೆಗೆ ತುತ್ತಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲೂ ಯಾರೂ ಇಲ್ಲದಂತಾಗಿದೆ. ಕೆಲವರು ಪರ ಊರಿನ ನೆಂಟರ ಮನೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಪಟ್ಟಣಗಳಲ್ಲಿ ಇರುವ ಗ್ರಾಮದವರನ್ನು ಊರಿಗೆ ಬಾರದಂತೆ ದೂರವಾಣಿ ಮೂಲಕ ತಿಳಿಸುತ್ತಿದ್ದಾರೆ.
   ಗ್ರಾಮಸ್ಥ ಮಲ್ಲಿಕಾಜರ್ುನಯ್ಯ ಮಾತನಾಡಿ ಕಳೆದ ಎರಡು ತಿಂಗಳಿಂದ ಕಾಯಿಲೆ ಉಲ್ಬಣಿಸುತ್ತಿದ್ದು ಒಬ್ಬರಿಂದೊಬ್ಬರಿಗೆ ಹರಡುತ್ತಿದೆ. ಕುಪ್ಪೂರು ಹಾಗೂ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗಳಿಗೆ ಎಷ್ಟು ಬಾರಿ ಎಡತಾಕಿದ್ದರೂ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಹಲವಾರು ಬಾರಿ ರಕ್ತದ ಮಾದರಿಯನ್ನು ಆಸ್ಪತ್ರೆಯ ಸಿಬ್ಬಂದಿ ತೆಗೆದುಕೊಂಡಿದ್ದಾರೆ ಹೊರತು ಯಾವ ಕಾಯಿಲೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಕೆಲವರು ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಎಂಟರಿಂದ ಹತ್ತುಸಾವಿರ ಹಣ ಖಚರ್ುಮಾಡಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಗಳ ಧಾಖಲೆಗಳ ಪ್ರಕಾರ ಚಿಕೂನ್ಗುನ್ಯಾ ಎಂಬುದು ದೃಢಪಟ್ಟಿದೆ ಎಂದು ವಿವರಿಸಿದರು.
ರೋಗದಿಂದ ಬಳಲುತ್ತಿರುವ ಗ್ರಾಮದ ತಾಯವ್ವ ಮಾತನಾಡಿ, ಒಮ್ಮೆ ಜ್ವರ ಬಂದರೆ ಚೇತರಿಸಿಕೊಳ್ಳಲು ತಿಂಗಳುಗಳು ಹಿಡಿಯುತ್ತವೆ. ತೀವ್ರ ಕೀಲುನೋವು ಕಾಣಿಸಿಕೊಂಡಿದ್ದು ವಾರಾನುಗಟ್ಟಲೆ ಹಾಸಿಗೆಯ ಮೇಲೆ ಮಲಗುವಂತಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ಗ್ರಾಮದಲ್ಲಿ ಸಂಪೂರ್ಣವಾಗಿ ನಿಂತುಹೊದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಚಿಕಿತ್ಸಾಶಿಬಿರ ಏರ್ಪಡಿಸ ಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಮಟ್ಟದ ಅಧಿಕಾರಿಗಳ ಭೇಟಿ:ಗ್ರಾಮಸ್ಥರು ದೂರವಾಣಿ ಕರೆಮಾಡಿ ಪರಿಸ್ಥಿತಿಯನ್ನು ವಿವರಿಸಿದ ಹಿನ್ನೇಲೆಯಲ್ಲಿ ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಕಚೇರಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ತಾಲ್ಲೂಕು ಹಂತದ ಆರೋಗ್ಯಾಧಿಕಾರಿಗಳು ಬುಧವಾರ ಗ್ರಾಮಕ್ಕೆ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಜಿಲ್ಲಾ ತಂಡದಲ್ಲಿ ಹಿರಿಯ ಅಧಿಕಾರಿಗಳಾದ ರಾಮಚಂದ್ರಪ್ಪ ಹಾಗೂ ಚಂದ್ರಪ್ಪ ಇದ್ದರು.
ಕೋಟ್-1
'ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಡೆಂಗೆ ಪ್ರಕರಣಗಳು ವರದಿಯಾಗಿದ್ದರಿಂದ ಪಟ್ಟಣದ ಸಮೀಕ್ಷೆಗೆ ಬಂದಿದ್ದಾಗ ಗ್ರಾಮಸ್ಥರು ಕರೆಮಾಡಿ ಪರಿಸ್ಥಿತಿ ಬಗ್ಗೆ ವಿವರಿಸಿದರು.ಆ ಹಿನ್ನೆಲೆಯಲ್ಲಿ ಜಿಲ್ಲಾ ತಂಡ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ.'
            -- ಚಂದ್ರಪ್ಪ.ಹಿರಿಯ ಅಧಿಕಾರಿ,ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಛೇರಿ,ತುಮಕೂರು.
ಕೋಟ್-2
'ಗ್ರಾಮಸ್ಥರು ಹೇಳುವ ಲಕ್ಷಣಗಳನ್ನು ಆಧರಿಸಿ ಚಿಕೂನ್ಗುನ್ಯ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ, ವೈದ್ಯಕೀಯವಾಗಿ ದೃಢಪಟ್ಟಿಲ್ಲ.'
ಡಾ. ಶಿವಕುಮಾರ್. ತಾಲ್ಲೂಕು ವೈದ್ಯಾಧಿಕಾರಿ ಚಿಕ್ಕನಾಯಕನಹಳ್ಳಿ.
ಕೋಟ್-3
'2 ತಿಂಗಳಿನಿಂದ ಗ್ರಾಮದ ಜನ ಸಾಂಕ್ರಾಮಿಕ ರೂಗದಿಂದ ಬನಳಲುತ್ತಿದ್ದಾರೆ ಆದರೂ ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯ್ತಿ ತಲೆ ಕೆಡಿಸಿಕೊಳ್ಳುತ್ತಿಲ್ಲ.ಸಕರ್ಾರಿ ವೈದ್ಯರು ಕಾಯಿಲೆ ಇಂತಹದ್ದೇ ಎಂದು ಸ್ಪಷ್ಟವಾಗಿ ಹೇಳುತ್ತಿಲ್ಲ, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ.'
                                -ಕುಮಾರಯ್ಯ,ಗ್ರಾಮಸ್ಥ. 

ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ 
ಚಿಕ್ಕನಾಯಕನಹಳ್ಳಿ,ಜು.07 : ತಾಲ್ಲೂಕಿನ ಅಣೇಕಟ್ಟೆ ಗ್ರಾಮದಲ್ಲಿ ಶಂಕಿತ ಚಿಕೂನ್ಗುನ್ಯ ಕಾಯಿಲೆ ಕಳೆದ ಒಂದೂವರೆ ತಿಂಗಳಿನಿಂದ ಉಲ್ಬಣಗೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳದ ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಗುರುವಾರ ಪ್ರಕಟವಾಗಿದ್ದ ವರದಿ ಆಧರಿಸಿ ಅಣೇಕಟ್ಟೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.    ಕಳೆದ ಒಂದುವರೆ ತಿಂಗಳಿನಿಂದ ನಿರಂತರ ಜ್ವರ, ಕೈ ಕಾಲು, ಕೀಲು ನೋವಿನಿಂದ ಊರಿನ ಜನ ಬಳಲುತ್ತಿದ್ದಾರೆ. ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭೇಟಿಯ ಸಂದರ್ಭದಲ್ಲೂ 70 ರಿಂದ 80 ರೋಗಿಗಳು ಕಂಡು ಬಂದಿದ್ದಾರೆ. ಕೆಲ ರೋಗಿಗಳನ್ನು ಪರ ಊರುಗಳ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂಬುದು ಗ್ರಾಮಸ್ಥರಿಂದ ತಿಳಿದು ಬಂದಿದೆ, ಆದರೂ ಪ್ರಾಥಮಿಕ ವರದಿ ತಯಾರಿಸದೆ ಏನು ಮಾಡುತ್ತಿದ್ದೀರಿ ಎಂದು ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಹಾಗೂ ಅವರ ಸಿಬ್ಬಂದಿಯನ್ನು ಪ್ರಶ್ನಿಸಿದರು. ವೈದ್ಯಾಧಿಕಾರಿ ಉತ್ತರ ನೀಡಲು ತಡಬಡಾಯಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಸ್ಥಳದಲ್ಲಿದ್ದ ತಾ.ವೈದ್ಯಾಧಿಕಾರಿಗಳಿಗೆ ಗ್ರಾಮದಲ್ಲಿ ಇರುವ 868 ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ. ಪೂರ್ಣ ಮಾಹಿತಿ ನೀಡಿ ಸೂಚನೆ ನೀಡಿದರು.
ಗ್ರಾಮಸ್ಥ ವಿಶ್ವನಾಥ್ ಮಾತನಾಡಿ, ಕಳೆದ ಅರವತ್ತು ದಿನಗಳಿಂದ ಕಾಯಿಲೆ ನಿರಂತರವಾಗಿ ವ್ಯಾಪಿಸುತ್ತಿದೆ. ಈಗಾಗಲೆ ರೋಗ ಹರಡುವ ಸೊಳ್ಳೆಗಳ ಜೀವನ ಚಕ್ರ 2ನೇ ಸುತ್ತಿಗೆ ಪ್ರವೇಶ ಆಗಿದ್ದು ಮುಂದಿನ 20 ದಿನಗಳಲ್ಲಿ ಕಾಯಿಲೆಯ ತೀವ್ರತೆ ಹೆಚ್ಚಾಗಲಿದ್ದು, ಸುತ್ತಮುತ್ತಲಿನ ಹಳ್ಳಿಗಳಿಗೆ ಹಬ್ಬುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ತೀವ್ರತೆಯನ್ನು ಮನವರಿಕೆ ಮಾಡಿಕೊಟ್ಟರು.
   ತಕ್ಷಣ ಕ್ರಮಕ್ಕೆ ಮುಂದಾಗಿ; ನಾಳೆಯಿಂದ ಗ್ರಾಮದಲ್ಲಿ ತಾತ್ಕಾಲಿಕ ಕ್ಲಿನಿಕ್ ಪ್ರಾರಂಭಿಸಿ. ಕುಪ್ಪೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ಹಾಕಿ, ಊರಿನಲ್ಲಿರುವ ಸಿಸ್ಟನ್ಗಳು ಹಾಗೂ ಚರಂಡಿ ಸ್ವಚ್ಛಗೊಳಿಸಿ, ಸ್ವಚ್ಛತೆ ಕುರಿತು ಗ್ರಾಮದಲ್ಲಿ ಜಾಗೃತಿ ಮೂಡಿಸಲು ಆದೇಶ ಹೊರಡಿಸಿ ಎಂದು ತಹಶಿಲ್ದಾರ್ ಆರ್.ಗಂಗೇಶ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು,  ಸಮಸ್ಯೆ ಇಷ್ಟು ತೀವ್ರವಾಗಿದ್ದರೂ ಇಲಾಖೆ ಸಮಸ್ಯೆಯನ್ನು ಸಕರ್ಾರದ ಗಮನಕ್ಕೆ ತಂದಿಲ್ಲ, ಎಲ್ಲವನ್ನೂ ಕುಲಂಕುಶವಾಗಿ ಪರಿಶೀಲಿಸಲಾಗುವುದು. ಹೇಳಿದರು.
    ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭ: ಸೋಕು ಪೀಡಿತ ಗ್ರಾಮ ಅಣೇಕಟ್ಟೆಯಲ್ಲಿ ಗುರುವಾರದಿಂದಲೇ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭವಾಗಿದ್ದು ವೈದ್ಯರ ದಂಡು ಗ್ರಾಮದಲ್ಲಿ ಬೀಡು ಬಿಟ್ಟಿದೆ.
ಗೈರು ಹಾಜರಿ: ಗ್ರಾಮದ ಆಶಾ ಕಾರ್ಯಕತರ್ೆ, ಕುಪ್ಪೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಗೈರು ಹಾಜರಾಗಿದ್ದಕ್ಕೆ ಜಿಲ್ಲಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು.  
ಜಿಲ್ಲಾಧಿಕಾರಿ ಭೇಟಿ ವೇಳೆ ಡಿ.ಎಚ್.ಓ. ಡಾ.ಎನ್.ಶಶಿಕಲಾ,  ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ, ತಾಲ್ಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ಆರ್.ಗಂಗೇಶ್, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು. 

ರಂಜಾನ್ ಆಚರಣೆಗೆ ಸಾಮೂಹಿಕ ಪ್ರಾರ್ಥನೆ
 
ಚಿಕ್ಕನಾಯಕನಹಳ್ಳಿ,ಜು.07 : ರಂಜಾನ್ ಹಬ್ಬ ಆಚರಣೆಯಿಂದ ಬಡವ ಬಲ್ಲಿದ ಎಂಬ ಅಂತರ ಅಳಿದು ಪರಸ್ಪರ ಸ್ನೇಹದ ಬೆಸುಗೆಯಾಗಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ, ಮುಸ್ಲಿಂ ಜನಾಂಗದ ಪವಿತ್ರ ಕುರಾನ್ ಅವತರಿಸಿದ ಮಾಸವಿದು. ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಹೆಚ್ಚು ಸತ್ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳುತ್ತಾರೆ,  ದಾನಧರ್ಮದಂತಹ ಪುಣ್ಯ ಆಚರಣೆಯಲ್ಲಿ ತೊಡಗುತ್ತಾರೆ, ಧರ್ಮಕ್ಕೆ ಅನುಗುಣವಾಗಿ ದೇವರನ್ನು ಪ್ರಾಥರ್ಿಸುತ್ತಾರೆ ಎಂದರು.
ಪಟ್ಟಣದಲ್ಲಿರುವ ಐದು ಮಸೀದಿಗಳಾದ ಜಾಮಿಯಾ, ನೂರಾನಿ, ಮದೀನ, ಬಲಾಲ, ಅಸ್ಸಾ ಮಸೀದಿಗಳಿಗೆ ತೆರಳಿ ಅಲ್ಲಾನ ಅನುಯಾಯಿಗಳು ಅಲ್ಲಿ ಪ್ರಾರ್ಥನೆ ನೆರವೇರಿಸಿದರು. ನಂತರ ಆಯಾ ಮಸೀದಿಗಳಿಂದ ಹೊರಟ ಸಮೂಹ, ಒಟ್ಟಾಗಿ ಈದ್ಗ ಮೈದಾನಕ್ಕೆ ತೆರಳಿದರು. ಒಟ್ಟಾಗಿ ಸೇರಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರ ಈದ್ ಮುಬಾರಕ್ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುತುವಲ್ಲಿಗಳಾದ ಮಹಬೂಬ್ ಅಲಂ,  ಜಹಿರ್ಅಹಮದ್, ಅನ್ಸರ್ಪಾಷ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಸದಸ್ಯರಾದ  ಎಂ.ಕೆ.ರವಿಚಂದ್ರ, ಸಿ.ಡಿ.ಚಂದ್ರಶೇಖರ್, ಸಿ.ಎಂ.ರಂಗಸ್ವಾಮಿ, ಮಹಮದ್ಖಲಂದರ್, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಸದಸ್ಯ ಸಿ.ಎಸ್.ನಟರಾಜು, ಪುರಸಭಾ ಆಶ್ರಯ ಸಮಿತಿ ಸದಸ್ಯರಾದ ಸಿ.ಬಸವರಾಜು ಬಾಬುಸಾಹೇಬ್, ಮತ್ತಿತರರು ಉಪಸ್ಥಿತರಿದ್ದರು.

                     ಪರಿಸರ ಉಳಿಸಿ : ಶಾಸಕ ಸಿ.ಬಿ.ಸುರೇಶ್ಬಾಬು 
ಚಿಕ್ಕನಾಯಕನಹಳ್ಳಿ,ಜು.07 : ಪರಿಸರದ ವೈಪರಿತ್ಯ ತಡೆಯಲು ಹಾಗೂ ಭೂಮಿಯ ಮೇಲೆ ಹಸಿರು ಹೊದಿಕೆ ಹೆಚ್ಚಿಸಲು ಜನತೆ ತಮ್ಮ ತೋಟ ಹಾಗೂ ಜಮೀನುಗಳಲ್ಲಿ ಸಸಿಗಳನ್ನು ನೆಡುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಸಸಿ ನೆಡುವ ಮೂಲಕ ಕೋಟಿ ವೃಕ್ಷ ಅಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಿಡಮರಗಳ ನಾಶದಿಂದ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಮರಗಳನ್ನು ಕಡಿಯುವುದರಿಂದ ಮಳೆ ಕಡಿಮೆಯಾಗುತ್ತಿದೆ ಆದ್ದರಿಂದ ಜನತೆ ಸಸಿಗಳನ್ನು ಹಾಕಿ ಪೋಷಿಸಿಕೊಂಡು ಹೋಗುವಂತೆ ಹೇಳಿದರು.
ವಲಯ ಅರಣ್ಯಾಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ ಪರಿಸರ ಸಮತೋಲನದಿಂದ ಕೂಡಿರಬೇಕಾದರೆ ಭೂಮಿಯ ಮೇಲೆ ಶೇ.33% ಅರಣ್ಯವಿರಬೇಕು, ಮನುಷ್ಯ ವಿವಿಧ ಅಭಿವೃದ್ದಿ ಕಾರ್ಯಗಳ ಹೆಸರಿನಲ್ಲಿ ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾನೆ ಈಗ ಶೇ21%  ರಷ್ಟು ಮಾತ್ರ ಅರಣ್ಯವಿದ್ದು ಇದನ್ನು ಹೆಚ್ಚಿಸಲು ಶೇ 33%ರಷ್ಟು ಅರಣ್ಯ ಬೆಳೆಸಲು ಕೋಟಿ ವೃಕ್ಷ ಅಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಒಂದು ಮರ ತನ್ನ ಜೀವಿತಾವಧಿಯಲ್ಲಿ ಪರಿಸರಕ್ಕೆ 15.70 ಲಕ್ಷದಷ್ಟು ಬೆಲೆಯ ಉತ್ಪನ್ನಗಳನ್ನು ಪರಿಸರಕ್ಕೆ ನೀಡುತ್ತದೆ ಅದರೆ ಮನುಷ್ಯ ಕೆಲವೇ ಸಾವಿರಕ್ಕೆ ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾನೆ ಎಂದರು. ಕೋಟಿ ವೃಕ್ಷ ಅಂದೋಲನದ ಅಡಿಯಲ್ಲಿ ರೈತರಿಗೆ ಅರಣ್ಯ ಇಲಾಖಾ ವತಿಯಿಂದ ರಿಯಾಯ್ತಿ ದರದಲ್ಲಿ ಸಸಿಗಳನ್ನು ನೀಡುತ್ತಿದ್ದು ರೈತರು ತೋಟಗಳಲ್ಲಿ ಹಾಕಿಸಿ ಬೆಳೆಸಿದರೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಒಂದು ಸಸಿಗೆ ಪ್ರಥಮ ವರ್ಷ ಹತ್ತು ರೂಪಾಯಿ ಎರಡನೇ ವರ್ಷ 15ರೂ 3 ನೇ ವರ್ಷ 20ರೂ ಸಹಾಯ ಧನ ನೀಡಲಾಗುತ್ತಿದೆ ಇದರ ಉಪಯೋಗವನ್ನು ರೈತರು ಪಡೆಯುವಂತೆ ಮನವಿ ಮಾಡಿದರು.
ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಪುರಸಭಾ ಸದಸ್ಯರಾದ ಎಮ್.ಕೆ.ರವಿಚಂದ್ರ, ಸಿ.ಡಿ ಚಂದ್ರಶೇಖರ್, ಹೆಚ್,ಬಿ,ಪ್ರಕಾಶ್, ಅಶೋಕ್, ಸಿ.ಎಸ್.ರಮೇಶ್, ರಾಜಶೇಖರ್, ಮಹಮದ್ ಖಲಂದರ್, ಸಿ.ಕೆ.ಕೃಷ್ಣಮೂತರ್ಿ, ಜೆ.ಡಿ.ಎಸ್ ಮುಖಂಡ ಸಿ.ಎಸ್.ನಟರಾಜ್ ಉಪಸ್ಥಿತರಿದ್ದರು.



Wednesday, July 6, 2016



ವನಮಹೋತ್ಸವ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜು.06 : ಪಟ್ಟಣ, ಗ್ರಾಮ, ಹಳ್ಳಿಗಳಲ್ಲಿ ಮತ್ತಿತರ ರಸ್ತೆ ಬದಿ, ಊರಿನೊಳಗೆ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸಿದರೆ ನೆರಳಿನ ಜೊತೆಗೆ ಉತ್ತಮವಾದ ಮಳೆ, ಬೆಳೆ ಲಭಿಸಲಿದೆ ಎಂದು ತಾ.ಪಂ.ಸದಸ್ಯೆ ಶೈಲಾಶಶಿಧರ್ ಹೇಳಿದರು.
ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸರವಿದ್ದರೆ ಉತ್ತಮವಾದ ಗಾಳಿ, ನೀರು, ಬೆಳಕು ದೊರಕುತ್ತದೆ, ಗಿಡ-ಮರಗಳನ್ನು ಬೆಳೆಸುವುದು ಇಲಾಖೆಯ ಜವಬ್ದಾರಿ ಮಾತ್ರವಲ್ಲ ಜಗತ್ತಿನ ಪ್ರತಿಯೊಬ್ಬರ ಕರ್ತವ್ಯ, ಶಾಲೆಗಳಲ್ಲಿ ಈಗಿನಿಂದಲೇ ಸಸಿಗಳನ್ನು ಬೆಳೆಸುವ ಅದರಿಂದ ಆಗುವ ಅನುಕೂಲಗಳು ತಿಳಿದರೆ ಪರಿಸರ ಉಳಿಸಲು ಅವರಲ್ಲಿ ಉತ್ತಮ ಪ್ರೇರೇಪಣೆ ದೊರಕಿದಂತಾಗುತ್ತದೆ ಎಂದ ಅವರು, ರೈತ ದೇಶದ ಬೆನ್ನೆಲುಬು ಅವರಿಲ್ಲದೆ ದೇಶಕ್ಕೆ ಅನ್ನ ನೀಡುವವೇ ಇಲ್ಲವಾಗುತ್ತಾರೆ, ರೈತರು ಒಂದೇ ಬೆಳೆ ಬೆಳೆಯುವುದರ ಬದಲು ಮಿಶ್ರ ಬೆಳೆ ಬೆಳೆಯಿರಿ, ಈಗಾಗಲೇ ತೆಂಗಿನ ಮರಗಳಿಗೆ ನುಸಿರೋಗ, ರಸ ಸೋರುವ ರೋಗ ಬರುತ್ತಿದೆ ಈ ಬಗ್ಗೆ ರೈತರು ವಿಜ್ಞಾನಿಗಳು, ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಮರಗಳನ್ನು ಉಳಿಸಿಕೊಳ್ಳಲು ಮುಂದಾಗಿ ಎಂದು ಸಲಹೆ ನೀಡಿದರು.
ಅರಣ್ಯ ಇಲಾಖಾಧಿಕಾರಿ ತಾರಕೇಶ್ವರಿ ಮಾತನಾಡಿ, ಜೀವ ಸಂಕುಲಕ್ಕೆ ಆಸರೆಯಾಗಿರುವ ಭೂಮಿ ಮಾನವನ ದುರಾಸೆಯಿಂದ ಜೈವಿಕ ಹಾಗೂ ಅಜೈವಿಕ ಘಟಕಗಳಲ್ಲಿ ಸಮತೋಲನೆ ತಪ್ಪಿ ಹೋಗುತ್ತಿದೆ, ಪರಿಸರ ವಿನಾಶದ ಅಂಚಿನಲ್ಲಿ ತಲುಪುತ್ತಿದೆ ರೈತರ ಬೆನ್ನೆಲುಬು ಎರೆಹುಳು ಮಣ್ಣಿನಲ್ಲಿ ಕಣ್ಮರೆಯಾಗಿದ್ದು ನಾವೆಲ್ಲರೂ ಜಾಗೃತರಾಗಿ ಅದಕ್ಕೆ ಗಿಡಮರಗಳ ಬೆಳೆಸಿ, ಸಂರಕ್ಷಿಸಿ ಹೊಸ ಕಾಡುಗಳನ್ನು ನಿಮರ್ಾಣ ಮಾಡಿ ನೀರು, ಗಾಳಿ, ಆಹಾರವನ್ನು ಶುದ್ದೀಕರಿಸಬೇಕು ಎಂದರು.
ಕಸಾಪ ಅಧ್ಯಕ್ಷೆ ಹಾಗೂ ಪರಿಸರ ತಜ್ಞೆ ಎನ್.ಇಂದಿರಮ್ಮ, ಗ್ರಾ.ಪಂ.ಅಧ್ಯಕ್ಷೆ ಲೋಕಮ್ಮ, ಮುಖ್ಯಶಿಕ್ಷಕ ಮೂಡಲಯ್ಯ ಮತ್ತಿತರರು ಭಾಗವಹಿಸಿದ್ದರು.

ಸಾಸಲು ಗ್ರಾಮದಲ್ಲಿ ನೂತನ ರೈತ ಸಂಘ
 
ಚಿಕ್ಕನಾಯಕನಹಳ್ಳಿ,ಜು.07 : ಪ್ರಧಾನಮಂತ್ರಿ ನರೇಂದ್ರಮೋದಿಯವರು ವಿದೇಶಗಳಿಂದ ಬಂಡವಾಳ ಹೂಡಿಕೆಗೆ ಒತ್ತು ಕೊಡುತ್ತಾರೆಯೇ ಹೊರತು ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದಶರ್ಿ ಕೆಂಕೆರೆ ಸತೀಶ್ ಆರೋಪಿಸಿದರು.
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ನೂತನ ರೈತ ಸಂಘದ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಸ್ವತಂತ್ರ್ಯ ಬಂದಾಗಿನಿಂದಲೂ ಎಲ್ಲಾ ಸಕರ್ಾರಗಳು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಾ ಬಂದಿದ್ದಾರೆಯೇ ಹೊರತು ರೈತರ ಬಗ್ಗೆ ಕಾಳಜಿ ಇಲ್ಲ, ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ, ರೈತರು ವಕ್ಕಲುತನದ ಬೆಲೆ, ಕೂಲಿನಾಲಿಗಳು ಹೆಚ್ಚಾದರೂ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ, ಸಿದ್ದರಾಮಯ್ಯನವರ ಸಕರ್ಾರ 3ವರ್ಷ ಕಳೆದರೂ ಸ್ವತಹ ಮುಖ್ಯಮಂತ್ರಿಗಳು ರೈತರಾದರೂ ರೈತರ ಬಗ್ಗೆ ಕಾಳಜಿ ಇಲ್ಲ, ಹೇಮಾವತಿ ನಾಲೆಯಿಂದ ತಾಲ್ಲೂಕಿಗೆ ನೀರು ಹರಿಸಲು 102 ಕೋಟಿ ರೂಪಾಯಿಗಳು ಬಿಡುಗಡೆಯಾದರೂ ಅಧಿಕಾರಿಗಳ, ರಾಜಕಾರಣಿಗಳ ನಿರ್ಲಕ್ಷದಿಂದ ಕಾಮಗಾರಿ ಕುಂಠಿತವಾಗಿದೆ ಎಂದರಲ್ಲದೆ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದೆ, ಇದರ ವಿರುದ್ದ ರಾಜ್ಯಾದ್ಯಂತ ಬಂದ್ ಮಾಡಿದರೂ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಷಾಧಿಸಿದರು.
ಜಿಲ್ಲಾಧ್ಯಕ್ಷ ತಿಮ್ಲಾಪುರ ಶಂಕರಪ್ಪ ಮಾತನಾಡಿ, ಮಳೆ ಇಲ್ಲ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ, ಹೇಮಾವತಿ ನಾಲಾ ಕಾಮಗಾರಿ ಕುಂಠಿತಗೊಂಡಿದ್ದು ಇದರಿಂದ ತಾಲ್ಲೂಕಿನ ಜನ ನಗರಗಳಿಗೆ ಗುಳೇ ಹೋಗುತ್ತಿದ್ದಾರೆ ಆದ್ದರಿಂದ ಸಕರ್ಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗಧಿಪಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಲೋಕಣ್ಣ ಬಂಡಿಮನೆ, ದಭ್ಭೆಘಟ್ಟ ಜಗದಿಶ್,  ಮಲ್ಲಿಕಾಜರ್ುನಯ್ಯ, ಹೊನ್ನೇಬಾಗಗಿ ಉಮೇಶ್, ಸಾಸಲು ರೈತ ಸಂಘದ ಅಧ್ಯಕ್ಷ ಮರುಳಸ್ವಾಮಿ, ಪ್ರಕಾಶ್, ಕಾರ್ಯದಶರ್ಿ ಶಿವಾನಂದಯ್ಯ, ನಾಗರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಶನಿವಾರ ರೋಟರಿ ಕ್ಲಬ್ ಕಾರ್ಯಕ್ರಮ
  
ಚಿಕ್ಕನಾಯಕನಹಳ್ಳಿ,ಜು.06 : 41ನೇ ವರ್ಷದ ರೋಟರಿ ಸಂಭ್ರಮ ಮತ್ತು 41ನೇ ಪದವಿ ಪ್ರಧಾನ ಸಮಾರಂಭವನ್ನು ಜುಲೈ 9ರ ಶನಿವಾರ ಸಂಜೆ 6.40ಕ್ಕೆ ನಡೆಯಲಿದೆ ಎಂದು ನೂತನ ಅಧ್ಯಕ್ಷ  ದೇವರಾಜು(ಅನು) ತಿಳಿಸಿದರು.
ಪಟ್ಟಣದ ರೋಟರಿ ಕನ್ವೆಷನ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಚಿತ್ರದುರ್ಗದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ 3190ರ ಗವರ್ನರ್ ಪಿಡಿಜಿ ಎಂ.ಎನ್.ಸುರೇಶ್ ಪದವಿ ಪ್ರಧಾನ, ಹೊಸ ಸದಸ್ಯರ ಸೇರ್ಪಡೆ ಮಾಡಲಿದ್ದಾರೆ. ಹಿರೇಮಗಳೂರು ಕಣ್ಣನ್ ಶುಭಾಂಸನೆ ನುಡಿಯಲಿದ್ದು ಜಿಲ್ಲಾ 3190ರ ಜೋನಲ್ ಗವರ್ನರ್ ಹೆಚ್.ವಿ.ವೀರೇಶ್ ನಾಯಕ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ರೊ.ಜಿಲ್ಲಾ ಯೂತ್ ಸವರ್ಿಸ್ ಡೈರೆಕ್ಟರ್ ಸಿ.ಎಸ್.ಪ್ರದೀಪ್ಕುಮಾರ್, ಅಸಿಸ್ಟೆಂಟ್ ಗವರ್ನರ್ ಎ.ನಟರಾಜು ವಿವಿಧ ಸೇವಾಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.
ರೋಟರಿ ಜಿಲ್ಲಾ 9190ರ ಹೆಚ್.ಆರ್.ಶ್ರೀನಾಥ್ಬಾಬು ಎಂ.ವಿ.ನಾಗರಾಜ್ರಾವ್ ಅವರ ಆತಂಕದ ಕ್ಷಣಗಳು ಕಾದಂಬರಿ ಬಿಡುಗಡೆ ಮಾಡಲಿದ್ದು ರೋಟರಿ ಎಜುಕೇಷನ್ ಟ್ರಸ್ಟ್ನ ಡಾ.ಸಿ.ಎಂ.ಸುರೇಶ್ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ 2015-16ನೇ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಪಟ್ಟಣದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಹಾಗೂ ತಾಲ್ಲೂಕಿನಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರೊಟೇರಿಯನ್ಗಳಾದ ಕೆ.ಪ್ರಕಾಶ್, ಎಂ.ವಿ.ನಾಗರಾಜ್ರಾವ್, ಪ್ರಸನ್ನ, ಜಯದೇವ್, ಎಮ್.ಎಲ್.ಮಲ್ಲಿಕಾಜರ್ುನಯ್ಯ, ಮಿಲ್ಟ್ರೀಶಿವಣ್ಣ, ದಾನಪ್ಪ, ಕೆ.ಆರ್.ಚನ್ನಬಸವಯ್ಯ, ಉಪಸ್ಥಿತರಿರುವರು.


ಚಿ.ನಾ.ಹಳ್ಳಿ: ಜು.15 ರಿಂದ 17 ರವರೆಗೆ  ಏಕಾದಶಿ ಜಾತ್ರೆಯೊಂದಿಗೆ  ಸಾಂಸ್ಕೃತಿಕ ಹಬ್ಬ.
ಚಿಕ್ಕನಾಯಕನಹಳ್ಳಿ,ಜು.06 : ಪಟ್ಟಣದಲ್ಲಿ ಆಷಾಡ ಮಾಸದಲ್ಲಿ ನಡೆಯುವ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜುಲೈ 5ರಂದು ಪಟ ಹಾಕುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ಇದೇ 23ರವರೆಗೆ ವಿವಿಧ ಧಾಮರ್ಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ಆಷಾಡ ಮಾಸದಲ್ಲಿ ನಡೆಯುವ ಹಳೆಯೂರು ಆಂಜನೇಯಸ್ವಾಮಿ ಜಾತ್ರೆಗೆ ನೂತನ ವಧುವರರು ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿಯೇ ಪ್ರಸಿದ್ದಿ ಪಡೆದಿರುವ ಆಂಜನೇಯಸ್ವಾಮಿ ಮಾತ್ರೆಗೆ ಜುಲೈ 5ರಿಂದ ಪ್ರಾರಂಭವಾಗುವ ಉತ್ಸವ ರಾತ್ರಿ ಹಾಗೂ ಬೆಳಗ್ಗೆ ನಡೆಯಲಿದೆ. 15ರಂದು ಕೆಂಚರಾಯಸ್ವಾಮಿ ಮಣೇವು, ಬಿರುದಾವಳಿ ಲಾಂಚನಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ, 16ರಂದು ಬ್ರಹ್ಮರಥೋತ್ಸವ, 17ರಂದು ರಥೋತ್ಸವ ಬೆಳಗ್ಗೆ ಹಾಗೂ ಸಂಜೆ ಜೋಗಿಹಳ್ಳಿ ಭಕ್ತ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ 16ರಂದು ನವದಂಪತಿಗಳ ಸ್ಪಧರ್ೆ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ನಡೆಯಲಿದ್ದು,  ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯನ್ನು ದಿವ್ಯಜ್ಯೋತಿ ಕಲಾ ಸಂಘದವರು ಹಮ್ಮಿಕೊಂಡಿದ್ದಾರೆ.  ಅನ್ನಪೂಣೇಶ್ವರಿ ಕಲಾಸಂಘದ ಹಾಗೂ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗದ ವತಿಯಿಂದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಕನ್ನಡ ಸಂಘದ ವೇದಿಕೆಯಲ್ಲಿ ನಡಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಜೇತ ತಂಡಗಳಿಗೆ ಸೀನಿಯರ್ ಗ್ರೂಪ್ ಪ್ರಥಮ ಬಹುಮಾನ 70ಸಾವಿರ, ದ್ವಿತಿಯ ಬಹುಮಾನ 30ಸಾವಿರ, ತೃತಿಯ ಬಹುಮಾನ 15ಸಾವಿರ ರೂಪಾಯಿಗಳು. ಪ್ರವೇಶ ದರ 1500ರೂ ಜೂನಿಯರ್ ಗ್ರೂಪ್. ; ಪ್ರಥಮ ಬಹುಮಾನ 20.000 ಸಾವಿರ ರೂಪಾಯಿಗಳು ದ್ವೀತೀಯ ಬಹುಮಾನ 10.000ಸಾವಿರ ರೂಪಾಯಿ ತ್ಥತೀಯ 5.000ಸಾವಿರ ರೂಪಾಯಿ ಪ್ರವೇಶ ದರ 500 ರೂಪಾಯಿ,ಜೂನಿಯರ್ ಸೋಲೋ: ಪ್ರಥಮ ಬಹುಮಾನ 5.000ರೂ, ದ್ವೀತೀಯ 3.000ರೂ, ತೃತೀಯ ಬಹುಮಾನ 2.000ರೂ ಪ್ರವೇಶ ದರ 200ರೂಪಾಯಿಗಳು, ಸೀನಿಯರ್ ಸೋಲೋ; ಪ್ರಥಮ ಬಹುಮಾನ 5.000ರೂ, ದ್ವೀತೀಯ 3000 ರೂ, ತೃತೀಯ ಬಹುಮಾನ 2000ರೂಪಾಯಿಗಳು ಮಧ್ಯಾಹ್ನ 3 ಗಂಟೆಗೆ ಕನ್ನಡ ಸಂಘದ ಸಾಂಸ್ಕೃತಿಕ ವೇದಿಕೆಯಿಂದ ನಗೆ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕುಂಚಾಕುರ ಕಲಾ ಸಂಘದ ವತಿಯಿಂದ ಕಲ್ಪವೃಕ್ಷ ಕೋ ಆಪರೇಟಿವ್ ಸಭಾಂಗಣದಲ್ಲಿ ಸಮೂಹ ಚಿತ್ರಕಲಾ ಹಾಗೂ ಚಿತ್ರಕಲಾ ಪ್ರದರ್ಶನ ಮಾರಾಟ 16 ಮತ್ತು 17 ರಂದು ನಡೆಯಲಿದೆ. ಜಾತ್ರಯ ಪ್ರಯುಕ್ತ ನಗೆಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.  17ರಂದು ತಾಲ್ಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ.




.



Tuesday, July 5, 2016


ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮದಿನೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.05 : ಗ್ರಾಮ ಭಾರತದಲ್ಲಿ ಜಾತಿ ಜಾಡ್ಯ ಇನ್ನೂ ಜೀವಂತವಾಗಿದೆ. ಹಿರಿಯರು ಮಕ್ಕಳಲ್ಲಿ ಮಕ್ಕಳಲ್ಲಿ ಜಾತಿ ತಾರತಮ್ಯದ ಭಾವನೆಗಳು ಬೆಳೆಯುಲು ಕಾರಣರಾಗುತ್ತಿದ್ದಾರೆ ಎಂದು ಪ್ರೊ.ಬಿ.ಕೃಷ್ಣಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ದೊರೈರಾಜು ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಮಂಗಳವಾರ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮದಿನೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪನವರ ಜೊತೆಯಲ್ಲಿ ಯುವಕರು, ಶಿಕ್ಷಕರು, ಪ್ರಜ್ಞಾವಂತರು ಒಟ್ಟಾಗಿ ಜಾತಿ ವ್ಯವಸ್ಥೆಯನ್ನು ಬದಲಿಸಲು ಪ್ರಯತ್ನಿಸಿದರು ಎಂದರು.
ದಲಿತ ಸಂಘರ್ಷ ಸಮಿತಿ ಒಂದು ಜಾತಿಗೆ ಸೀಮಿತವಾದುದಲ್ಲ. ಬಡವರ, ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ಮಾಡಲು ಇರುವ ವೇದಿಕೆ ಎಂದರು.
ವಿದ್ಯಾಥರ್ಿಗಳು ಪಠ್ಯ ಪುಸ್ತಕದ ಜೊತೆ ವಿಜ್ಞಾನ, ಸಾಹಿತ್ಯ, ಓದಿಕೊಂಡು ಜಾತೀಯತೆ ಹಾಗೂ ಅಸ್ಪೃಶ್ಯತೆ ವಿರುದ್ದ ಹೋರಾಡಲು ಮುಂದಾಗಬೇಕು.ಮಾನವೀಯ ಸಮಾಜ ಕಟ್ಟುವ ಕೆಲಸ ವಿದ್ಯಾಥರ್ಿಗಳಿಂದ ಆಗಬೇಕು ಎಂದರು.
ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ನವರು ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದವರಲ್ಲೊಬ್ಬರು ಅವರ ಆಶಾಭಾವನೆಯನ್ನು ವಿದ್ಯಾಥರ್ಿಗಳು ಪ್ರೊ.ಬಿ.ಕೃಷ್ಣಪ್ಪ ಕೆಚ್ಚು ಹಾಗೂ ಸೂಕ್ಷ್ಮ ಪ್ರಜೆಯನ್ನು ಮೈಗೂಡಿಸಿಕೊಳ್ಳುವುದು ಅವಶ್ಯಕ ಎಂದರು.
ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪನವರ ಸಂಘಟನಾ ಚಾತುರ್ಯ ಬಡವರ, ದೌರ್ಜನ್ಯಕ್ಕೊಳಗಾದವರ ಪರವಾಗಿ ಕೆಲಸ ಮಾಡಲು ಹಲವರಿಗೆ ಸ್ಪೂತರ್ಿಯಾಯಿತು. ದಲಿತ ಸಂಘರ್ಷ ಸಮಿತಿಗೆ ಕೃಷ್ಣಪ್ಪನವರ ನಂತರ ಸರಿಯಾದ ನಾಯಕತ್ವ ಇಲ್ಲವಾಗಿದೆ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ,ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂರವರು, ಅಂಬೇಡ್ಕರ್ರವರು ತಂದಂತಹ ಕಾಯಿದೆಗಳನ್ನು ಸಕರ್ಾರ ಯತಾವತ್ತಾಗಿ ಜಾರಿಗೆ ತರಲು ಶ್ರಮಿಸಿದರು.ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟ ಜಗಜೀವನ್ರಾಂ ಅವರಿಗೆ ಸ್ಪೂತರ್ಿಯಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನೋತ್ಸವದ ಅಂಗವಾಗಿ 78 ಬಡ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ  ವಿತರಿಸಲಾಯಿತು. ಕಂಟಲಗೆರೆ ಗುರುಪ್ರಸಾದ್ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ತಿಮ್ಮಯ್ಯ, ಅಂಬೇಡ್ಕರ್ ಪ್ರೌಢಶಾಲೆಯ ಕಾರ್ಯದಶರ್ಿ ಗೋ.ನಿ.ವಸಂತ್ಕುಮಾರ್, ದಸಂಸ ಸಂಚಾಲಕ ಸಿ.ಎಸ್.ಲಿಂಗದೇವರು, ಆರ್.ಗೋವಿಂದಯ್ಯ, ಬೇವಿನಹಳ್ಳಿ ಚನ್ನಬಸವಯ್ಯ, ಬಿ.ಇ.ಓ ಕೃಷ್ಣಮೂತರ್ಿ, ತಾ.ಪಂ.ಇ.ಓ ಕೃಷ್ಣಮೂತರ್ಿ, ಸಬ್ಇನ್ಸ್ಪೆಕ್ಟರ್ ವಿಜಯ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


 ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಚಾಲಕ ಸಾವ
ಚಿಕ್ಕನಾಯಕನಹಳ್ಳಿ,ಜು.05  : ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಚಾಲಕ ಸಾವನ್ನಪಿರುವ ಘಟನೆ ತಾಲ್ಲೂಕಿನ  ಶೆಟ್ಟಿಕೆರೆ ಹೋಬಳಿ ಚುಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
 ಮಧುಸೂದನ್ (49) ಮೃತ ದುದರ್ೈವಿ. ಮಂಗಳವಾರ ಬೆಳಗ್ಗೆ 7.45ರ ಸಮಯದಲ್ಲಿ ಕೆ.ಎ35 ಟಿ 5833 ಟ್ರ್ಯಾಕ್ಟರ್ನ ಮುಂಭಾಗದ ಚಕ್ರ ಪಂಚರ್ ಆಗಿದ್ದ ಪರಿಣಾಮ ಪಂಚರ್ ಹಾಕಿಸಲು ಚಿಕ್ಕನಾಯಕನಹಳ್ಳಿಗೆ ತರುವಾಗ ವಾಹನದ ಮುಂಭಾಗದ ಚಕ್ರ ನಿಯಂತ್ರಣಕ್ಕೆ ಇರಲಿ ಎಂದು ಘಟ್ಟ ಕಟ್ಟಿಕೊಂಡು ಬರುವಾಗ ಟ್ರ್ಯಾಕ್ಟರ್ನ ಇಂಜನ್ ಇರುವ ಮುಂಬದಿಯ ಚಕ್ರದ ಅಕ್ಸಲ್  ತುಂಡಾಗಿದೆ. ಈ ಸಂದರ್ಭದಲ್ಲಿ ಕೆರೆಯ ಏರಿಯ ಮೇಲೆ ಬರುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣವಿಲ್ಲದೆ ಆಯತಪ್ಪಿ ಕೆರೆಯ ಕೋಡಿ ಭಾಗದ ಅಂಗಳಕ್ಕೆ ಮುಗುಚಿ ಮದುಸೂದನ್ ಮೇಲೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಚಿ.ನಾ.ಹಳ್ಳಿ ಠಾಣೆಯ ಪಿ.ಎಸ್.ಐ ವಿಜಯ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ವಲ್ಪ ಮಳೆಬಿದ್ದರೂ ಸಂಚಾರ ಅಸಾಧ್ಯ



ಚಿಕ್ಕನಾಯಕನಹಳ್ಳಿ,ಜು.05 : ತಾಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳೂ ಹದಗೆಟ್ಟಿದ್ದು ಸ್ವಲ್ಪ ಮಳೆಬಿದ್ದರೂ ಸಂಚಾರ ಅಸಾಧ್ಯ ಎನ್ನುವಂತಾಗಿದೆ.
    1000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಕಛೇರಿ, ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿ ಹಾಗೂ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಾರ್ಯನಿರ್ವಹಿಸುತ್ತಿವೆ . ಮುಖ್ಯ ರಸ್ತೆಯಿಂದ 7 ಕಿಮೀ ದೂರದಲ್ಲಿ ಇರುವ ಗ್ರಾಮದಲ್ಲಿ ಇಷ್ಟೆಲ್ಲಾ ಸವಲತ್ತುಗಳು ಇದ್ದರೂ ಸಂಪರ್ಕ ರಸ್ತೆ ಸರಿಯಿಲ್ಲದೆ ಗ್ರಾಮಸ್ಥರು, ವಿದ್ಯಾಥರ್ಿಗಳು ಪರದಾಡುವಂತಾಗಿದೆ.   ಊರಿಗೆ ಸಂಪರ್ಕ ಕಲ್ಪಿಸಲು ಎರಡು ರಸ್ತೆಗಳು ಇದ್ದೂ ಇರಡೂ ರಸ್ತೆಗಳೂ ಡಾಂಬರ್ ಕಂಡಿಲ್ಲ. ಮಣ್ಣಿನ ರಸ್ತೆಗಳ ತುಂಬ ಗುಂಡಿಗಳು ಇದ್ದು ಸ್ವಲ್ಪ ಮಳೆ ಬಂದರೂ ಕೆಸರುಗದ್ದೆಯಂತಾಗುತ್ತವೆ. ಸಂತೆ ಹಾಗೂ ಪರ ಊರುಗಳಿಗೆ ಹೋಗುವ ಜನ ಅವಳಗೆರೆವರೆಗೆ ಹದಗೆಟ್ಟ ರಸ್ತೆಯಲ್ಲಿ ಸಾಗಿ ಮುಖ್ಯ ರಸ್ತೆಗೆ ತಲುಪಬೇಕು ಅಥವಾ ಪಾಪನಕೋಣದ ವರೆಗೆ ಸಾಗಿ ಭೈಲಪ್ಪನಮಠ-ಶಿಶುವಾಳ ರಸ್ತೆಗೆ ಬಂದು ವಾಹನಗಳನ್ನು ಇಡಿಯಬೇಕು, ಎರಡೂ ರಸ್ತೆಗಳು ಹದಗೆಟ್ಟಿರುವುದರಿಂದ ಸಂಚಾರ ದುಸ್ತರವಾಗಿದೆ ಎಂದು ಗ್ರಾಮಸ್ಥರು ಗೋಳು ತೋಡಿಕೊಳ್ಳುತ್ತಾರೆ.
  ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಕೋಟ್ಯಾಂತರ ರೂಪಾಯಿಯನ್ನು ರಸ್ತೆಗಳ ಅಭೀವೃದ್ಧಿಗೆ ವ್ಯಯ ಮಾಡುತ್ತಿವೆ. ಆದರೂ ಈ ಹದಗೆಟ್ಟ ರಸ್ತೆಗಳು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.


Thursday, June 30, 2016



ದಿವ್ಯಜ್ಯೋತಿ ಹವ್ಯಾಸಿ ಸಂಘಕ್ಕೆ ನೆರವಾದವರಿಗೆ ಅಭಿನಂದನೆ

ಚಿಕ್ಕನಾಯಕನಹಳ್ಳಿ, : ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ ನವದಂಪತಿಗಳ ಸ್ಪಧರ್ೆ ಏರ್ಪಡಿಸಿ 25ನೇ ವರ್ಷಕ್ಕೆ ದಾಪುಗಾಲು ಇಡುತ್ತಿರುವ ಹಿನ್ನಲೆಯಲ್ಲಿ ಸಂಘಕ್ಕೆ ಸಹಕಾರ ನೀಡಿ ಪ್ರೋತ್ಸಾಹಿಸಿದ ದಾನಿಗಳನ್ನು ಸನ್ಮಾನಿಸಿಲಾಯಿತು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ ಏರ್ಪಡಿಸಿದ್ದ ಗೌರವಾರ್ಪಣ ಕಾರ್ಯಕ್ರಮದಲ್ಲಿ 1991ರಿಂದ ನವದಂಪತಿಗಳ ಸ್ಪಧರ್ೆ ಹಾಗೂ ಬಾಳೆ ಹಣ್ಣು ಎಸೆಯುವ ಸ್ಪಧರ್ೆಗೆ ಸಹಕಾರ ನೀಡಿದವರಿಗೆ ಸನ್ಮಾನಿಸಿ ಮುಂದೆಯೂ ಇದೇ ರೀತಿ ಸಹಕಾರ ನೀಡುವಂತೆ ಕೋರಲಾಯಿತು.
ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, 1983ರಲ್ಲಿ ರಾಜ್ಯಮಟ್ಟದ ನಾಟಕೋತ್ಸವ ಮೂಲಕ ಆರಂಭವಾದ ದಿವ್ಯಜ್ಯೋತಿ ಕಲಾಸಂಘವು,  ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತಿತ್ತು.  ನಚಿತರದ ದಿನಗಳಲ್ಲಿ  ಆಷಾಡ ಮಾಸದಲ್ಲಿ ಪಟ್ಟಣದ  ಹಳೆಯೂರು ಆಂಜನೇಯಸ್ವಾಮಿ ಜಾತ್ರೆಗೆ ನವದಂಪತಿಗಳು ಬರುತ್ತಿದ್ದರಿಂದ ಸಂಘ 1991 ರಿಂದ  ಏಕಾದಶಿ ಜಾತ್ರೆಯ ಸಮಯದಲ್ಲಿ ನವದಂಪತಿಗಳ ಸ್ಪಧರ್ೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ, ಜಾತ್ರೆಯ ವೇಳೆ ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯಕ್ರಮ ಬಿಟ್ಟರೆ ಬೇರೆ ಯಾವುದೇ ಕಾರ್ಯಕ್ರಮಗಳಿರಲಿಲ್ಲ, ನಮ್ಮ ಸಂಘದ ಮೂಲಕ ಹಮ್ಮಿಕೊಂಡ ನವದಂತಿಗಳ ಸ್ಪಧರ್ೆ ಹಾಗೂ ಬಾಳೆಹಣ್ಣು ಎಸೆಯುವ ಸ್ಪಧರ್ೆ ಜನರಲ್ಲಿ ಆಕರ್ಷಣೆಯವಾಗಿ ಮೂಡಿಬಂದಿತು, ಇತ್ತೀಚಿನ ವರ್ಷಗಳಲ್ಲಿ ಅಂತರ್ಜಾತಿ ವಿವಾಹಿತರು ಹಾಗೂ ವಿಕಲಚೇತನರ ವಿವಾಹಿತರನ್ನು, ಸಮಾಜ ಸೇವಕರು, ಪ್ರತಿಭಾನ್ವಿತ ವಿದ್ಯಾಥರ್ಿಗಳನ್ನು ಅಭಿನಂದಿಸುತ್ತಾ ಬರುತ್ತಿದ್ದು ಸಾರ್ವಜನಿಕರು ಈ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಮಾತನಾಡಿದರು. ಸಂಘದ ಸಿ.ಹೆಚ್.ಪ್ರಕಾಶ್, ಸಿದ್ದು.ಜಿ.ಕೆರೆ, ಸಂತೋಷ್ವಿಷ್ಣುಭವನ್, ಸಿ.ಹೆಚ್.ಗಂಗಾಧರ್, ನಿರೂಪ್ರಾವತ್, ಸಿ.ಬಿ.ಲೋಕೇಶ್, ಶಂಕರ್, ಸಿ.ಟಿ.ರಂಗನಾಥ್, ಆನಂದ, ಮುದ್ದು, ಸಿದ್ದರಾಮಣ್ಣ, ರವಿಕುಮಾರ್, ಮತ್ತಿತರರು ಉಪಸ್ಥಿತರಿದ್ದರು.







Tuesday, June 28, 2016


 ಅಂಗನವಾಡಿ ಕಾರ್ಯಕರ್ತ ಹಾಗೂ ಸಹಾಯಕಿ ಹುದ್ದೆಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಜೂ.28 : ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಾರ್ಯಕತರ್ೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ ಎಂದು ಪ್ರಭಾರ ಸಿ.ಡಿ.ಪಿ.ಓ. ಪರಮೇಶ್ವರಪ್ಪ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕತೆ ಹುದ್ದೆ : ಬೆಳಗುಲಿ ಪಂಚಾಯಿತಿಯ ಬೆಳಗುಲಿಹೊಸಹಟ್ಟಿ ಗ್ರಾಮದ ಅಂಗನವಾಡಿಗೆ ಹಾಗೂ ಶೆಟ್ಟಿಕೆರೆ ಪಂಚಾಯಿತಿಯ ಮಾಕಳ್ಳಿ ಗ್ರಾಮದ ಅಂಗನವಾಡಿಗೆ ಸಾಮಾನ್ಯ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಿದೆ.
ಅಂಗನವಾಡಿ ಸಹಾಯಕಿ ಹುದ್ದೆ : ಕೆಂಕೆರೆ ಪಂಚಾಯಿತಿಯ ಕೆಂಕೆರೆಗೊಲ್ಲರಹಟ್ಟಿ ಗ್ರಾಮದ ಅಂಗನವಾಡಿ ಗ್ರಾಮ, ಬೆಳಗುಲಿ ಪಂಚಾಯಿತಿಯ ಗೂಬೆಹಳ್ಳಿ ಗ್ರಾಮದ ಅಂಗನವಾಡಿ, ಶೆಟ್ಟಿಕೆರೆ ಪಂಚಾಯಿತಿಯ ಹೊಸಪಾಳ್ಯ ಗ್ರಾಮ, ದೊಡ್ಡೆಣ್ಣೆಗೆರೆ ಪಂಚಾಯಿತಿಯ ಚಿಕ್ಕ ಎಣ್ಣೆಗೆರೆ ಗ್ರಾಮದ ಅಂಗನವಾಡಿಗಳಿಗೆ ಸಾಮಾನ್ಯ ಅಭ್ಯಥರ್ಿಗಳಿಂದ ಹಾಗೂ ದೊಡ್ಡಬಿದರೆ ಪಂಚಾಯಿತಿಯ ಬೈರಾಪುರತಾಂಡ್ಯದ ಅಂಗನವಾಡಿಗೆ ಎಸ್.ಸಿ ಅಭ್ಯಥರ್ಿಯಿಂದ ಅಜರ್ಿ ಆಹ್ವಾನಿಸಲಾಗಿದೆ.
 ಆಸಕ್ತ ಅಭ್ಯಥರ್ಿಗಳು ಜುಲೈ 23ರ ಸಂಜೆ 5.30ರೊಳಗೆ ಚಿ.ನಾ.ಹಳ್ಳಿಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ತಲುಪುವಂತೆ ಸಲ್ಲಿಸುವುದು ಹೆಚ್ಚಿನ ವಿವರಗಳಿಗಾಗಿ ಕಛೇರಿಯನ್ನು ಸಂಪಕರ್ಿಸುವಂತೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, June 27, 2016



ಸೇವಾದಳ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜೂ.27 : ಭಾರತ ಸೇವಾದಳ ತನ್ನದೇ ಆದ ಪ್ರತ್ಯೇಕ ಸ್ಥಾನಮಾನ ಹೊಂದಿದ್ದು ಈ ಸಂಸ್ಥೆ ಮೂಲಕ ಶಿಸ್ತು, ಸ್ವಚ್ಛತೆ, ಸೇವೆಯ ಮೂಲಕ ಯುವಕರನ್ನು ಸಂಘಟಿಸುತ್ತಿದೆ ಎಂದು ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸೀಮೆಎಣ್ಣೆ ಕೃಷ್ಣಯ್ಯ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿಯ ಬಿ.ಆರ್.ಸಿ ಸಭಾಂಗಣದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶಿಕ್ಷಕಿಯರಿಗೆ ಮಿಲಾಪ್ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ತನ್ನ ಸ್ವಯಂ ಸೇವೆಯ ಮೂಲಕ ತನ್ನದೇ ಆದ ವ್ಯಕ್ತತ್ವ ಹೊಂದಿಕೊಂಡಿದೆ, ಭಾರತ ಇರೋವರೆಗೂ ಸೇವಾದಳ ಸ್ಥಿರವಾಗಿರುತ್ತದೆ, ಶಿಸ್ತು ಸ್ವಚ್ಛತೆ ಸೇವೆಯ ಮೂಲಕ ಯುವಕರನ್ನು ಬಡಿದೆಬ್ಬಿಸುವ ಕೇಂದ್ರ ಈಗಾಗಲೇ ಬೆಳಗಾವಿ ಭಾಗದಲ್ಲಿ ಆರೋಗ್ಯ ಧಾಮ ಸ್ಥಾಪಿಸಿ ಸಾರ್ವಜನಿಕರಿಗೆ ಉಚಿತ ಸೇವೆ ನೀಡುತ್ತಿದೆ ಸೇವಾದಳ ಬಲಿಷ್ಠವಾಗಿ ಬೆಳೆಯಲು ಶಿಕ್ಷಕರು ಹೆಚ್ಚು ಉತ್ಸಕರಾಗಬೇಕು, ಸಕರ್ಾರಗಳು ಒತ್ತು ನೀಡಬೇಕು ಎಂದರು.
ಜಿಲ್ಲಾ ಸಂಘಟಕ ಪ್ರಸನ್ನ ಮಾತನಾಡಿ, ಒಂದೇ ಮಾತರಂ ಗೀತೆ ಬರೆದ ಬಂಕೀಮ ಚಂದ್ರ ಚಟಜರ್ಿ ಅವರ ಹುಟ್ಟು ಹಬ್ಬವಿದ್ದು ಅವರ ಗೀತೆಯ ಸಾರಾಂಶದಂತೆ ಭಾರತ ಸೇವಾದಳ ಸರ್ವಧರ್ಮಗಳನ್ನು ಏಕತೆಯಿಂದ ನೋಡುವ ಏಕೈಕ ಸಂಸ್ಥೆಯಾಗಿದೆ, ಈ ಸಂಸ್ಥೆ ಹುಟ್ಟಲು ಕಾರಣರಾದ ಮಹಾತ್ಮ ಗಾಂಧಿಯವರ ವ್ಯಕ್ತಿಯ ಮಹತ್ವಗಳನ್ನು ವಿದೇಶಿಯರಿಂದ ತಿಳಿಯುವಂತೆ ಆಗಬಾರದು ಪ್ರಪಂಚದ ಯಾವುದೇ ಮಹಾನ್ ವ್ಯಕ್ತಿ ಸತ್ತರೂ ಪರಸ್ಪರ ದೇಶಗಳ ತನ್ನ ರಾಷ್ಟ್ರದ್ವಜಗಳನ್ನು ಅರ್ಧಕ್ಕೆ ಹಾರಿಸಲು ಮೀನಾಮೇಷ ಎಣಿಸುತ್ತವೆ, ಹೀಗಿರುವಾಗ ಭಾರತದ ರಾಷ್ಟ್ರಪಿತ ಸಾವನ್ನಪಿದ ಸಂದರ್ಭದಲ್ಲಿ 166 ರಾಷ್ಟ್ರಗಳು ಸಾಮೂಹಿಕವಾಗಿ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ  ಹಾರಿಸುವಂತಹವರ ವಿಷಯವನ್ನು ವಿದೇಶಿಯರಿಂದ ಕಲಿಯುವುದು ಬೇಡ ಗಾಂಧಿಜಿಯವರ ಆದರ್ಶಗಳಿಗೆ ಅವರ ಉದ್ದೇಶಗಳಿಗೆ ಮಹತ್ವವನ್ನು ನೀಡಿ ಗೌರವಿಸಬೇಕು ಎಂದರು.
ತಾಲ್ಲೂಕು ಶಾಖೆ ಅಧ್ಯಕ್ಷ ಈಶ್ವರಪ್ಪ ಮಾತನಾಡಿ, ಭಾರತ ಸೇವಾದಳ ಸೇರಿದರೆ ರಾಷ್ಟ್ರ ಪ್ರೇಮ ಹೆಚ್ಚು ಬೆಳೆಯಲು ಸಾಧ್ಯವಾಗುತ್ತದೆ, ಪ್ರತಿನಿತ್ಯ ರಾಷ್ಟ್ರಧ್ವಜಗಳನ್ನು ಗ್ರಾಮ ಪಂಚಾಯಿತಿಗಳ ಕಛೇರಿಯಲ್ಲಿ ಹಾರಿಸುವುದರಿಂದ ಸರಿಯಾದ ನಿರ್ವಹಣೆ ಇಲ್ಲದೆ ತ್ರಿವರ್ಣ ಬಣ್ಣಗಳು ಬಿಸಿಲಿನಿಂದಾಗಿ ಒಂದೇ ಕಲ್ಲರ್ ಆಗಿದ್ದು ರಾಷ್ಟ್ರದ್ವಜಕ್ಕೆ ಪಂಚಾಯಿತಿಗಳು ಮಾಡುತ್ತಿರುವ ಅಪಮಾನ ಹೇಳತೀರದಾಗಿದೆ ಎಂದು ವಿಷಾಧಿಸಿದ ಅವರು, ರಾಷ್ಟ್ರಧ್ವಜದ ಆರೋಹಣಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ಕೂಡ ಅತ್ಯಗತ್ಯವಾಗಿದೆ, ರಾಷ್ಟ್ರೀಯ ಹಬ್ಬಕ್ಕಾಗಿ ರಾಷ್ಟ್ರದ್ವಜ ಹಾರಿಸಬೇಕಾದರೆ ಹಾವು ಕಂಡು ಹೆದರಿದಂತೆ ದೂರ ಹೋಗುತ್ತಾರೆ ಶಿಕ್ಷಕರು, ಹೀಗಾಗಿ ಶಿಕ್ಷಕರಿಗೆ ತರಬೇತಿ ನೀಡುವಂತೆ ಕೋರಿದರು. 
ಈ ಸಂದರ್ಭದಲ್ಲಿ ಶಿಕ್ಷಣ ಸಮನ್ವಯಾಧಿಕಾರಿ ನಾಗರಾಜು.ಕೆ.ಎನ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್, ಚಿ.ನಿ.ಪುರುಪೋತ್ತಮ್ ಉಪಸ್ಥಿತರಿದ್ದರು. ಬನಶಂಕರಯ್ಯ ಸ್ವಾಗಿತಿಸಿ ನಿರೂಪಿಸಿದರು.

ರೈತರ ಬಂದ್ಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ 
ಚಿಕ್ಕನಾಯಕನಹಳ್ಳಿ,ಜೂ.27 : ವಿದೇಶಿ ಅಡಿಕೆ, ತೆಂಗು ಆಮದು ನಿರ್ಬಂಧಿಸಿ ರಾಜ್ಯ ರೈತ ಸಂಘ ಹಾಗೂ ಕನ್ನಡ ಪರ ವಿವಿಧ ಸಂಘಟನೆ ಜೂನ್ 27ರಂದು ಕರೆ ನೀಡಿದ್ದ ಬಂದ್ಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈತರ ವಿವಿಧ ಬೇಡಿಕೆಯ ಈಡೇರಿಕೆಗಾಗಿ ಬಂದ್ ಕರೆ ನೀಡಲಾಗಿತ್ತು, ಬಂದ್ ಯಶಸ್ವಿಗೊಳಿಸಲು  ರೈತರು ನಾಗರೀಕರು ಸಹಕರಿಸಬೇಕೆಂದು ರೈತ ಸಂಘ ಮಾಡಿದ ಮನವಿಗೆ ತಾಲ್ಲೂಕು ವಕೀಲರ ಸಂಘ ಕೋಟರ್್ ಕಲಾಪದಿಂದ ಹಿಂದೆ ಸರಿದು ಬೆಂಬಲಿಸಿತು. 
ಕೇಂದ್ರ ಸಕರ್ಾರ ವಿದೇಶಿ ವ್ಯಾಪಾರದಲ್ಲಿ ಅಡಿಕೆ ತೆಂಗು ತಡೆದು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಅಮದು ಸುಂಕದ ದರವನ್ನು ಹೆಚ್ಚಿಸುದ್ದರೂ ಆಮದು ಆಗುವ ವಿದೇಶೀ ಅಡಿಕೆ ತೆಂಗಿಗೆ ಬೆಲೆ ಕುಸಿತದ ಬೀತಿ ಇಲ್ಲವಾಗಿದೆ ಈ ಹಿನ್ನೆಲೆಯಲ್ಲಿ ಕರೆದಿದ್ದ ಬಂದ್ಗೆ ಸಹಮತ ದೊರೆಕಿದೆ , ಸೋಮವಾರ ಸಂತೆ ಹಾಗೂ ಎ.ಪಿ.ಎಮ್.ಸಿ ಆವರಣದಲ್ಲಿ ನಡೆಯುವ ಕುರಿ ವ್ಯಾಪಾರ ಅಂಗಡಿ ಮುಂಗ್ಗಟ್ಟು ಎಂದಿನಂತೆ ನಡೆಯಿತು. ಯಾವುದೇ ಸಂಘಟನೆಗಳಾಗಲಿ ರೈತ ಪರ ಸುಂಘಟನೆಗಳಾಗಲಿ ಮನವಿ ನೀಡುವುದಾಗಲಿ ಮೆರವಣಿಗೆ ಮಾಡುವುದಾಗಲಿ ನಡೆಯಲಿಲ್ಲ. ಹುಳಿಯಾರು ಮಾರ್ಗವಾಗಿ ಖಾಸಗಿ ಬಸ್ಸಿನ ಸಂಚಾರ ಸ್ಥಗಿತಗೊಂಡಿದ್ದು ಉಳಿದಂತೆ ಎಲ್ಲ ಮಾರ್ಗಗಳ ಸಂಚಾರ ಸಕರ್ಾರಿ ಬಸ್ ಸಂಚರ ಕೂಡ ಎಂದಿನಂತೆ ಕೂಡಿತ್ತು. ಶಾಲಾ ಕಾಲೇಜುಗಳು ಎಂದಿನಂತೆ ನಡೆದವು.
ತಾಲ್ಲೂಕಿನ ವಕೀಲರ ಸಂಘದ ಅಧ್ಯಕ್ಷ ಸೋಮಶೇಖರಯ್ಯ ಮಾತನಾಡಿ, 1984ರಲ್ಲಿ ತೆಂಗು ಬೆಳೆಗೆ ಆರು ಸಾವಿರ ನಿಗಧಿಯಾಗಿತ್ತು, ಕಳೆದ 30ವರ್ಷಗಳು ಕಳೆದರೂ ಅದೇ ಬೆಲೆ ಚಾಲ್ತಿಯಲ್ಲಿದೆ, ರೈತರು ಬೆಳೆದ ಬೆಳೆಗೆ ಯಾವುದೇ ಬೆಂಬಲಿತ ಬೆಲೆಯಾಗಲಿ ಸಕರ್ಾರ ನೀಡದಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದಂತಾಗಿದೆ ಈಗಾಗಿ ಕೇಂದ್ರ ಸಕರ್ಾರ ಮಧ್ಯೆ ಪ್ರವೇಶಿಸಿ ದೇಶದ ರೈತರಿಗೆ ರೈತರ ಸಂಕಷ್ಟವನ್ನು ಪರಿಹರಿಸುವಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು ಎಂದರು.
ವಕೀಲರ ಸಂಘದ ಕಾರ್ಯದಶರ್ಿ ಕೆ.ಎಂ.ಷಡಕ್ಷರಿ ಮಾತನಾಡಿ, ಜನಪ್ರತಿನಿಧಿಗಳು ಅವರ ಅಧಿಕಾರ ದಾಹದಿಂದ ಇಂತಹ ಸಚಿವ ಸ್ಥಾನವೇ ಬೇಕು ಎಂದು ಹೋರಾಡುವ ಅವರು ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಅವನು ಕೃಷಿಯನ್ನೇ ಬಿಡುವ ಹಂತದಲ್ಲಿದ್ದಾನೆ, ಇಂತಹ ರೈತರ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು ಹೀಗಾಗಿ ವಕೀಲರ ಸಂಘ ಕೂಡ ರೈತರ ಹೋರಾಟಕ್ಕೆ ಬೆಂಬಲಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರಾದ ಡಿ.ಎ.ಸ್ವಾಮಿ, ಜಯಣ್ಣ, ಹೆಚ್.ಎಸ್.ಜ್ಞಾನಮೂತರ್ಿ, ಶಿವಾನಂದ್, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಬೆನಕನಕಟ್ಟೆ ಗ್ರಾಮದಲ್ಲಿ ಅನೈರ್ಮಲ್ಯ 
ಚಿಕ್ಕನಾಯಕನಹಳ್ಳಿ,ಜೂ.27 : ಗ್ರಾಮದಲ್ಲಿ ಅನೈರ್ಮಲ್ಯ ಹೆಚ್ಚಾಗಿದ್ದು,ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ತಾಲ್ಲೂಕಿನ ಬೆನಕನಕಟ್ಟೆ ಗ್ರಾಮಸ್ಥರು ದೂರಿದ್ದಾರೆ.
    ಕಳೆದ ಆರು ತಿಂಗಳಿನಿಂದ ಅನೈರ್ಮಲ್ಯ ಅಧಿಕವಾಗುತ್ತಿದೆ. ಆಂಜನೇಯಸ್ವಾಮಿ ದೇವಾಲಯದ ಮುಂದಿನ ರಸ್ತೆಯಲ್ಲಿ ಕೊಳಚೆ ನಿರಂತರವಾಗಿ ಹರಿಯುತ್ತಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.ಅಲ್ಲದೆ ನೂತನ ದೇವಸ್ಥಾನದ ನಿಮರ್ಾಣ ಕಾರ್ಯಕ್ಕೂ ಅನೈರ್ಮಲ್ಯ ತೊಡಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಟೇಲ್ ಬೀದಿಯಿಂದ ದೇವಸ್ಥಾನದ ಮುಂಭಾಗದವರೆವಿಗೂ ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ದೇವಸ್ಥಾನದ ಮುಂಭಾಗವೇ ಚರಂಡಿಯ ನೀರೆಲ್ಲಾ ಶೇಖರಣೆಯಾಗಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಅನೈರ್ಮಲ್ಯ ಹೆಚ್ಚಾಗಿ ಮಲೇರಿಯಾ, ಚಿಕೂನ್ಗುನ್ಯಾ ದಂತಹ ರೋಗಗಳು ಉಲ್ಭಣಿಸುತ್ತಿವೆ ಎಂದು ದೂರಿದ್ದಾರೆ. 
  ನಿಮಿಷಾಂಬ ಮಹಿಳಾ ಸ್ತ್ರೀಶಕ್ತಿ ಸಂಘದ ಪ್ರತಿನಿಧಿ ವೀಣಾ ಮಾತನಾಡಿ,ಮಳೆಗಾಲ ಆರತಂಭವಾಗಿದ್ದು ಗ್ರಾಮದ ಅನೈರ್ಮಲ್ಯದಿಂದ ಮಕ್ಕಳೂ ಹಾಗೂ ಮುದುಕರ ಆರೋಗ್ಯದ ಮೇಲೆ ತೀವ್ರ ಪ್ರತೀಕೂಲ ಪರಿಣಾಮ ಉಂಟಾಗುತ್ತಿದೆ. ಚುನಾವಣೆ ಸಮಯದಲ್ಲಿ ಗಂಟೆಗೊಮ್ಮೆ ಬರುವ ರಾಜಕಾರಣಿಗಳು ಎಷ್ಟು ಮನವಿ ಮಾಡಿದರೂ ಇತ್ತ ತಿರುಗಿ ನೋಡುತ್ತಿಲ್ಲ. ಅಧಿಕಾರಿಗಳನ್ನು ಗದರಿಸಿ ಕೆಲಸ ಮಾಡಿಸುವ ಇಚ್ಚಾಶಕ್ತಿ ಪ್ರದಶರ್ಿಸುತ್ತಿಲ್ಲ ಎಂದು ದೂರಿದರು.
  ಗ್ರಾಮಸ್ಥ ದೇವರಾಜ್ ಮಾತನಾಡಿ, ಈಗಾಗಲೆ ಈಗಾಗಲೆ 15ಮಂದಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವಂತೆ ಕಳೆದ ಮೂರು ತಿಂಗಳುಗಳಿಂದ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಅನೈರ್ಮಲ್ಯದಿಂದ ಯಾವುದೇ ಸಾವು ನೋವುಗಳು ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪರಮೇಶ್, ನಿಜಲಿಂಗಪ್ಪ, ನರಸಿಂಹಮೂತರ್ಿ, ಆದಶರ್್, ತಿಮ್ಮಕ್ಕ, ಶೈಲ, ಶಶಿಧರ್, ರೇಣುಕಮ್ಮ, ಮಂಜುಳ, ರಂಗಪುಟ್ಟಣ್ಣ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳ ಮನೆ ಶಾಲೆಯಲ್ಲಿ ಕಾರ್ಯಕ್ರಮ 
  ಚಿಕ್ಕನಾಯಕನಹಳ್ಳಿ,ಜೂ.27: ಮಕ್ಕಳ ಮನೆ ಕನ್ನಡ ಶಾಲೆಗಳನ್ನು ಉಳಿಸುವ ದೂರಗಾಮಿ ಉದ್ದೇಶವನ್ನು ಇಟ್ಟುಕೊಂಡು ಪ್ರಾರಂಭವಾಗುತ್ತಿದೆ ಇದರ ಯಶಸ್ಸಿಗೆ ಶಿಕ್ಷಕರು ಹಾಗೂ ಸೇವಾ ಮನೋಭಾವನೆ ಇರುವ ಯುವ ಸಮೂಹ ಕೈಜೋಡಿಸಬೇಕು ಎಂದು ತಾ.ಕ.ಸಾ.ಪ. ಅಧ್ಯಕ್ಷೆ ಎನ್.ಇಂದಿರಮ್ಮ ಮನವಿ ಮಾಡಿದರು.
ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಮಕ್ಕಳ ಮನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮುದಾಯದ ಸಹಭಾಗಿತ್ವದಲ್ಲಿ ಗುಣಾತ್ಮಕ ಶಿಕ್ಷಣವನ್ನು ಉಚಿತವಾಗಿ ನೀಡುವ ಆಶಯದಿಂದ ತಾಲ್ಲೂಕಿನಲ್ಲಿ ಮಕ್ಕಳ ಮನೆ ಪ್ರಾರಂಭವಾಗಿವೆ. ಪೋಷಕರು, ಸಾರ್ವಜನಿಕರು ಹಾಗೂ ಹಳೆಯ ವಿದ್ಯಾಥರ್ಿಗಳು ಈ ವಿನೂತನ ಯೋಜನೆಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಮಕ್ಕಳ ಮನೆಗಳನ್ನು ನಿರಂತರವಾಗಿ ಲವಲವಿಕೆಯಿಂದ ಮುನ್ನಡೆಸಲು ಹಲವು ಮನಸ್ಸುಗಳು ಮುಂದೆ ಬರುತ್ತಿದ್ದು, ಸಾರ್ವಜನಿಕರಿಂದ ಸಿಗುತ್ತಿರುವ ಪ್ರೋತ್ಸಾಹ ಸಂಘಟಕರಲ್ಲಿ ಉತ್ಸಾಹ ಮೂಡಿಸುತ್ತಿದೆ ಎಂದರು.
ಸುವರ್ಣ ಚೇತನ ಸಂಘಟನೆಯ ಅಧ್ಯಕ್ಷ  ರಾಮಕೃಷ್ಣಪ್ಪ ಮಾತನಾಡಿ, ಖಾಸಗಿ ಶಾಲೆಗಳಲ್ಲಿನ ಡೊನೇಷನ್ ವ್ಯವಸ್ಥೆ ಸಂವಿಧಾನದ ಆಶಯಕ್ಕೆ ವಿರುದ್ದವಾದವು ಎಲ್ಲರಿಗೂ ಉಚಿತ ಹಾಗೂ ಸಮಾನ ಶಿಕ್ಷಣ ಕೊಡುವುದು ಸಕರ್ಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಸಿ.ಆರ್.ಪಿ ಸುರೇಶ್ಕೆಂಬಾಳ್ ಮಾತನಾಡಿ, ಮಕ್ಕಳ ಮನೆ ವಿನೂತನ ಯೋಜನೆಯಾಗಿದ್ದು ಇದನ್ನು ಯಶಸ್ವಿಯಾಗಿಸುವ ಜವಬ್ದಾರಿ ಎಲ್ಲರದ್ದೂ ಆಗಿದೆ ಇಲಾಖೆಯ ವತಿಯಿಂದ ಯಾವುದೇ ಆದೇಶ ಇಲ್ಲದಿದ್ದರೂ ಈಗಾಗಲೇ ಮೌಖಿಕ ಸಮ್ಮತಿ ದೊರೆತಿದೆ, ಈ ಯೋಜನೆಯ ಯಶಸ್ವಿಗೆ ತನ್ನ ಕಾರ್ಯ ಮಿತಿಯೊಳಗಡೆ ಇಲಾಖೆಯು ಸಹಕರಿಸಲಿದೆ ಎಂದರು.
ಸೃಜನ ಅಧ್ಯಕ್ಷೆ ಎಲ್.ಜಯಮ್ಮ ಮಾತನಾಡಿ, ಸಕರ್ಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ತಪ್ಪು ಅಭಿಪ್ರಾಯ ಸಾರ್ವಜನಿಕರಲ್ಲಿದೆ, ಸಕರ್ಾರಿ ಶಾಲೆಗಳಲ್ಲಿ ಉತ್ತಮ ತರಬೇತುದಾರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ, ಒಳ್ಳೆಯ ಮೂಲಭೂತ ಸವಲತ್ತುಗಳು ಹಾಗೂ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಶೂ , ಪಾಠೋಪಕರಣಗಳನ್ನು ಒದಗಿಸಲಾಗುತ್ತಿದೆ ಇದರೊಟ್ಟಿಗೆ ಸಾರ್ವಜನಿಕರು ಕೈಜೋಡಿಸಿದರೆ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಸಕರ್ಾರಿ ಶಾಲೆಗಳನ್ನು ಅಭಿವೃದ್ದಿಗೊಳಿಸಬಹುದು ಎಂದರು.
ಮುದ್ದೇನಹಳ್ಳಿ ಸಕರ್ಾರಿ ಶಾಲೆಯ ಶಿಕ್ಷಕ ಈಶ್ವರಪ್ಪ ಮಾತನಾಡಿ, ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚು ಇರುವುದರಿಂದ ಸಹಜವಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ, ತರಗತಿಗೊಬ್ಬ ಶಿಕ್ಷಕರನ್ನು ಸಮುದಾಯದ ಸಹಭಾಗಿತ್ವದಲ್ಲಿ ಒದಗಿಸಲು ಸಾಧ್ಯವಾದರೆ ಸಕರ್ಾರಿ ಶಾಲೆಗಳು ಮರುಜೀವ ಪಡೆದುಕೊಳ್ಳುತ್ತವೆ ಎಂದ ಅವರು ಕಳೆದ ಬಾರಿ ತಾಲ್ಲೂಕಿನಿಂದ 318ಮಕ್ಕಳು ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ ಇದರಲ್ಲಿ 290ಕ್ಕೂ ಹೆಚ್ಚು ಮಕ್ಕಳು ಸಕರ್ಾರಿ ಶಾಲೆಯಲ್ಲಿಯೇ ಓದಿದವರು ಎಂಬುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಸಂಘಟನಾ ಕಾರ್ಯದಶರ್ಿ ನಾಗಕುಮಾರ್ಚೌಕಿಮಠ್, ನಗರ ಘಟಕದ ಅಧ್ಯಕ್ಷ ಧನಂಜಯಮೂತರ್ಿ, ಶೆಟ್ಟಿಕೆರೆ ಹೋಬಳಿ ಘಟಕದ ಅಧ್ಯಕ್ಷ ಅಶ್ವತ್ಥ್, ಯುವರಾಜ್, ಶಿವಕುಮಾರ್, ಮುಖ್ಯೋಪಾಧ್ಯಾಯಿನಿ ರಾಮಕ್ಕ, ಶಿಕ್ಷಕರಾದ ಪುಟ್ಟಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕರಾದ ಸಿ.ಟಿ.ರೇಖಾ ಸ್ವಾಗತಿಸಿದರು. ಜಯಮ್ಮ ನಿರೂಪಿಸಿ ವಂದಿಸಿದರು.





Sunday, June 26, 2016


ಬನಶಂಕರಿ ದೇವಿಗೆ ವೀರಮಕ್ಕಳಿಂದ ವೀರಗಾರಿಕೆ ಪೂಜೆ ಸಲ್ಲಿಕೆ
ಚಿಕ್ಕನಾಯಕನಹಳ್ಳಿ,ಜೂ.26 : ಬನಶಂಕರಿ ದೇವಿಗೆ ವೀರಗಾರಿಕೆ ಸಮೇತ ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಪಟ್ಟಣದ ದೇವಾಂಗ ಬೀದಿಯಲ್ಲಿರುವ ಬನಶಂಕರಿ ದೇವಾಲಯದಲ್ಲಿ ಮೇ 9ರಂದು ಆರಂಭವಾದ ವೀರಗಾರಿಕೆ ಕಲಿಕೆಯು 48ದಿನಗಳ ಕಾಲ ನಡೆಯಿತು, ಕೊನೆಯ ದಿನವಾದ ಭಾನುವಾರ ನಡೆದ ವೀರಗಾರಿಕೆ ಎಲ್ಲರ ಮನಸೂರೆಗೊಂಡಿತು.
ಒಂದು ಮಂಡಲ ಕಾಲ ವೀರಗಾರಿಕೆಯನ್ನು ವೀರಮಕ್ಕಳು ಅಭ್ಯಾಸ ಮಾಡುತ್ತಿದ್ದರು, ಪ್ರತಿ ದಿನ ಮುಂಜಾನೆ 4.30ಕ್ಕೆ ಆರಂಭವಾಗುತ್ತಿದ್ದ ವೀರಗಾರಿಕೆ ಕಲಿಕೆಯು 6.30ರವರೆಗೆ ನಡೆಯುತ್ತಿತ್ತು, 
ವೀರಗಾರಿಕೆ ಕಲಿತ ವೀರಮಕ್ಕಳು ಕೊನೆಯ ದಿವಸ ಗಂಗಾಪೂಜೆ ನಡೆಸಿ ದೇವಿಯನ್ನು ಉತ್ಸವದ ಮೂಲಕ ದೇವಾಲಯಕ್ಕೆ ಕರೆತಂದರು. ನಂತರ ದೇವಿಯನ್ನು ಹೊತ್ತ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದೇವಾಲಯದಲ್ಲಿ ಬನಶಂಕರಿ ದೇವಿಗೆ ವೀರಮಕ್ಕಳು ತಾವು ಕಲಿತ ವೀರಗಾರಿಕೆಯ ವಿದ್ಯೆಯನ್ನು ಬನಶಂಕರಿ ದೇವಿಗೆ ಅಪರ್ಿಸಿದರು. ದೇವಿಯ ರಥೋತ್ಸವವನ್ನು ಪ್ರಮುಖ ಬೀದಿಗಳಲ್ಲಿ ಎಳೆದು ದೇವಾಲಯಕ್ಕೆ ಪುನಃ ಕರೆತಂದರು. ನಂತರ ಬನಶಂಕರಿ ದೇವಿಗೆ ಎಲ್ಲಾ ರೀತಿಯ ಫಲಹಾರ ಸೇರಿದ ದೊಡ್ಡೆಡೆ ಸೇವೆ ಸಲ್ಲಿಸಿ ಆಗಮಿಸಿದ್ದ ಭಕ್ತರಿಗೆ ಫಲಹಾರ ವಿತರಿಸಲಾಯಿತು.

ವೀರ ಯೋಧರ ಸ್ಮಾರಕ ನಿಮರ್ಾಣ ಮಾಡಲು ಪೂರ್ವಭಾವಿ ಸಭೆ 
ಚಿಕ್ಕನಾಯಕನಹಳ್ಳಿ,ಜೂನ್26 : ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಮಂಗಳವಾರ ಸಂಜೆ 5.30ಕ್ಕೆ ಭಾರತೀಯ ವೀರ ಯೋಧರ(ಅಮರ್ ಜವಾನ್) ಸ್ಮಾರಕ ನಿಮರ್ಾಣ ಮಾಡಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಸಭೆಗೆ ಕಾರ್ಯನಿರತ ಯೋಧರು, ನಿವೃತ್ತ ಯೋಧರು, ಮತ್ತು ಆಸಕ್ತ ಸಾರ್ವಜನಿಕರು ಆಗಮಿಸಲು ಕೋರಿದ್ದು ತಮ್ಮ ಸಲಹೆ ಸೂಚನೆಯನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಮಿಲಿಟರಿ ಶಿವಣ್ಣ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೋ ಸಂಖ್ಯೆ. 9945617727, 9141672370, ಸಂಪಕರ್ಿಸಲು ಕೋರಿದೆ.

ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಒಳಪಡಿ 
ಚಿಕ್ಕನಾಯಕನಹಳ್ಳಿ,ಜೂ.26 : ಮುಂಗಾರು ಹಂಗಾಮಿನ ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಹೋಬಳಿವಾರು ಬೆಳೆಗಳನ್ನು ನಿರ್ಧರಿಸಲಾಗಿದ್ದು ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿದರ್ೇಶಕ ಹೊನ್ನದಾಸೇಗೌಡ ತಿಳಿಸಿದ್ದಾರೆ.
ಯೋಜನೆಗೆ ಒಳಪಡುವ ಹೋಬಳಿವಾರು ಬೆಳೆಗಳ ವಿವರ ಕೆಳಕಂಡಂತಿದೆ.
ಕಸಬಾಹೋಬಳಿ : ಮಳೆಯಾಶ್ರಿತ ಜೋಳ, ರಾಗಿ, ಹುರುಳಿ, ಹೆಸರು, ಅರಳು ಮತ್ತು ಅವರೆ
ಹಂದನಕೆರೆ : ಮಳೆಯಾಶ್ರಿತ ಜೋಳ, ರಾಗಿ, ಸಾವೆ, ಹುರುಳಿ, ಹೆಸರು, ಅರಳು ಮತ್ತು ಅವರೆ ಮತ್ತು ಹಲಸುಂದೆ.
ಹುಳಿಯಾರು : ಮಳೆಯಾಶ್ರಿತ ಜೋಳ, ರಾಗಿ, ಹುರುಳಿ, ಹೆಸರು, ಅರಳು, ನವಣೆ, ಸಜ್ಜೆ, ಅವರೆ ಹಾಗೂ ನೀರಾವರಿ ರಾಗಿ
ಕಂದಿಕೆರೆ : ಮಳೆಯಾಶ್ರಿತ ಜೋಳ, ರಾಗಿ, ಹುರುಳಿ, ಹೆಸರು, ಅರಳು ಮತ್ತು ಅವರೆ.
ಶೆಟ್ಟಿಕೆರೆ : ಮಳೆಯಾಶ್ರಿತ ಜೋಳ, ಸಾವೆ, ರಾಗಿ, ಹುರುಳಿ, ಹೆಸರು, ಅರಳು ಮತ್ತು ಅವರೆ.
ರೈತರು ಪಾವತಿಸಬೇಕಾಗಿರುವ ಕಂತಿನ ವಿವರ(ಹೆಕ್ಟೇರ್ಗೆ) : ಜೋಳ-248.ರೂ, ರಾಗಿ-336.ರೂ, ಸಜ್ಜೆ-216.ರೂ, ನವಣೆ-168.ರೂ, ಸಾವೆ-160.ರೂ, ತೊಗರಿ-328.ರೂ, ಹೆಸರು.232.ರೂ, ಹುರುಳಿ-152., ಹರಳು-200, ಅವರೆ-216, ಹಲಸಂದೆ-216, ಈರುಳ್ಳಿ-1420, ಟಮೊಟೊ-2260, ಕೆಂಪುಮೆಣಸಿನಕಾಯಿ-1440 ಆಗಿದೆ. ಕಂತು ಪಾವತಿಸುವ ಕೊನೆಯ ದಿನ ಜುಲೈ.30.


Saturday, June 25, 2016

ಶೆಟ್ಟಿಕೆರೆ ಆಸ್ಪತ್ರೆಗೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಭೇಟಿ
ಚಿಕ್ಕನಾಯಕನಹಳ್ಳಿ,ಜೂ.25 : ಶೆಟ್ಟಿಕೆರೆ ಸಕರ್ಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಸರಿಯಾಗಿ ಬರದೇ ಇರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನಲೆಯಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕು ವೈದ್ಯಾಧಿಕಾರಿಗಳು ಶೆಟ್ಟಿಕೆರೆ ಆಸ್ಪತ್ರೆಗೆ ಆಗ್ಗಾಗ್ಗೆ ಭೇಟಿ ನೀಡಿ ಪರಿಶೀಲಿಸುವಂತೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ರವರಿಗೆ ಸೂಚಿಸಿದ ಅವರು, ತಾಲ್ಲೂಕಿನ ಎಲ್ಲಾ ಸಕರ್ಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಆಸ್ಪತ್ರೆಯ ಸ್ವಚ್ಛತೆ, ವೈದ್ಯರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಾರೋ, ಇಲ್ಲವೋ ಎಂಬುವುದರ ಬಗ್ಗೆ ಗಮನ ಹರಿಸಿ ಹಾಗೂ ಸಿಬ್ಬಂದಿಗಳ ಪರಿಶೀಲನೆ ನಡೆಸಬೇಕು ಎಂದರು.
ಶೆಟ್ಟಿಕೆರೆ ಗ್ರಾಮಸ್ಥ ನರಸಿಂಹಮೂತರ್ಿ ಮಾತನಾಡಿ, ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಯೊಂದು ಪರೀಕ್ಷೆಗೂ ಹಣ ಕೇಳುತ್ತಾರೆ,  ಆರೋಗ್ಯ ರಕ್ಷಾ ಸಮಿತಿ ಇದ್ದರೂ  ಇದುವರೆಗೂ ಸಭೆಯನ್ನು ಕರೆಯದೆ ನಿರ್ಲಕ್ಷಿಸಿದ್ದಾರೆ ಇದರಿಂದ ಆರೋಗ್ಯ ರಕ್ಷಾ ಸಮಿತಿಯ ಮಾತನ್ನು ಯಾವ ಸಿಬ್ಬಂದಿ ಕೇಳುತ್ತಿಲ್ಲ ಎಂದು ಆರೋಪಿಸಿದರು. 
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಆಸ್ಪತ್ರೆ ಸಾರ್ವಜನಿಕರ ಸ್ವತ್ತು,  ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಪ್ರಮಾಣಿಕವಾಗಿ ಕರ್ತವ್ಯ ನೀಡಬೇಕು ಇದರಿಂದ ರೋಗಿಗಳಿಗೆ ವಿಶ್ವಾಸ ಮೂಡುತ್ತದೆ ಎಂದ ಅವರು, ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ ಅಧಿಕಾರಿಗಳು ಬೇರೆ ಕಡೆ ವರ್ಗವಾದಗ ಆ ಭಾಗದ ಗ್ರಾಮದ ಜನರು ಅದೇ ಅಧಿಕಾರಿಯೇ ಬೇಕು ಎಂದು ಅನೇಕ ಬಾರಿ ನನ್ನಲ್ಲಿ ಕೇಳಿಕೊಂಡಿದ್ದಾರೆ. ಈ ರೀತಿಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಮನಸ್ಸಿಲ್ಲಿರಬೇಕು, ಅದಕ್ಕಾಗಿ ಉತ್ತಮವಾದ ಅಭಿವೃದ್ದಿ ಕೆಲಸಗಳನ್ನು ಸ್ಥಳದಲ್ಲಿದ್ದು ಮಾಡುವಂತೆ ವೈದ್ಯಾಧಿಕಾರಿಗೆ ಸೂಚಿಸಿದ ಅವರು, ಆಸ್ಪತ್ರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು. ಆಸ್ಪತ್ರೆಯಲ್ಲೂ ಯಾವುದಾದರೂ ಕುಂದು ಕೊರತೆಗಳಿದ್ದಲ್ಲಿ ಸಂಸದರು, ಶಾಸಕರಿಗೆ, ಗ್ರಾಮ ಪಂಚಾಯಿತಿಯ ತಾಲ್ಲೂಕು ಪಂಚಾಯಿತಿಯ ಗಮನಕ್ಕೆ ತಂದರೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಬಿಇಓ ಕೃಷ್ಣಮೂತರ್ಿ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ, ಗ್ರಾ.ಪಂ.ಸದಸ್ಯ ದಯಾನಂದ್, ಮಾಜಿ ಗ್ರಾ.ಪಂ.ಅಧ್ಯಕ್ಷ ಶಶಿಧರ್, ಮಂಜುನಾಥ್, ಜಗದೀಶ್ಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.

ಮಲ್ಲಿಗೆರೆ ಮಾರ್ಗಕ್ಕೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ಗೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ 
ಚಿಕ್ಕನಾಯಕನಹಳ್ಳಿ,ಜೂ.25 : ತಾಲ್ಲೂಕಿನ ಮಲ್ಲಿಗೆರೆ ಮಾರ್ಗವಾಗಿ ಸಂಚರಿಸಲು ತಿಪಟೂರು ಕೆ.ಎಸ್.ಆರ್.ಟಿ.ಸಿ ಘಟಕದಿಂದ ನೀಡಿರುವ ನೂತನ ಕೆ.ಎಸ್.ಆರ್.ಟಿ.ಸಿ ಬಸ್ಗೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ ನೀಡಿದರು.
  ತಿಪಟೂರು ಘಟಕದ ಕೆ.ಎಸ್.ಆರ್.ಟಿ.ಸಿ ಘಟಕದಿಂದ ಚಿ.ನಾ.ಹಳ್ಳಿ ತಾಲ್ಲೂಕಿನ ಮಲ್ಲಿಗೆರೆ  ದವನದಹೊಸಹಳ್ಳಿ, ಕಾಮಲಾಪುರ, ಮತಿಘಟ್ಟ ಮೂಲಕ ಬರಗೂರು, ಬೈಲಪ್ಪನಮಠದ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಗೆ ತಲುಪಿ ಇಲ್ಲಿಂದ ತಿಪಟೂರಿಗೆ ತೆರಳುವುದು, ಇದೇ ರೀತಿ ದಿನಕ್ಕೆ  ನಾಲ್ಕು ಬಾರಿ ಈ ಮಾರ್ಗಗಳಲ್ಲಿ ಬಸ್ ಸಂಚಾರದಿಂದ ತಿಪಟೂರು, ಚಿ.ನಾ.ಹಳ್ಳಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ, ಮಲ್ಲಿಗೆರೆ ಗ್ರಾ.ಪಂ.ಅಧ್ಯಕ್ಷೆ ಕರಿಯಮ್ಮ, ಉಪಾಧ್ಯಕ್ಷ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
ಎರಡು ಬಾರಿ ಉದ್ಘಾಟನೆ: ಶಾಸಕ ಸಿ.ಬಿ.ಸುರೇಶ್ಬಾಬು ಗುರುವಾರ ಬೆಳಗ್ಗೆ ತಾಲ್ಲೂಕಿನ ಮಲ್ಲಿಗೆರೆ ಕರಿಯಮ್ಮ ದೇವತೆಗೆ ಪೂಜೆ ಸಲ್ಲಿಸಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರೆ, ಮಧ್ಯಾನ್ಹ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತ್ತೊಮ್ಮೆ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಸಾರ್ವಜನಿಕರು ಉಬ್ಬೇರಿಸುವಂತೆ ಮಾಡಿದರು.

ಹೈಮಾಸ್ಟ್ ದೀಪ ಸರಿಪಡಿಸಲು ಮುಂದಾದ ಪುರಸಭೆ 
ಚಿಕ್ಕನಾಯಕನಹಳ್ಳಿ,ಜೂ.25 : ಮಾಧ್ಯಮಗಳ ಬಿತ್ತರವಾದ ವರದಿಯಿಂದ ಎಚ್ಚೆತ್ತ ಪುರಸಭೆ ಪಟ್ಟಣದ ನೆಹರು ವೃತ್ತದಲ್ಲಿರುವ ಹೈಮಾಸ್ಟ್ ದೀಪದ ರಿಪೇರಿಗೆ ಮುಂದಾಗಿದೆ.
ಕಳೆದ ಮೂರು ತಿಂಗಳಿನಿಂದ ಪಟ್ಟಣದ ಹೃದಯ ಭಾಗವಾದ ನೆಹರು ವೃತ್ತದಲ್ಲಿ ಹೈಮಾಸ್ಟ್ ದೀಪವಿದ್ದರೂ ಬೆಳಗದೆ ರಾತ್ರಿ ವೇಳೆ ಕತ್ತಲು ಆವರಿಸುತ್ತಿತ್ತು, ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಹಿನ್ನಲೆಯಲ್ಲಿ ಪುರಸಭಾ ಅಧಿಕಾರಿಗಳು ಶನಿವಾರ ಹೈಮಾಸ್ಟ್ ದೀಪದ ದುರಸ್ತಿಗೆ ಚಾಲನೆ ನೀಡಿದ್ದಾರೆ. ಇದರಂತೆ ಬಿ.ಹೆಚ್.ರಸ್ತೆಯ ಉದ್ದಕ್ಕೂ 25ಕ್ಕೂ ಹೆಚ್ಚು ವಿದ್ಯುತ್ ದೀಪಗಳು ದುರಸ್ತಿಯಲ್ಲಿವೆ, ಈ ಎಲ್ಲಾ ದೀಪಗಳನ್ನು ಸರಿಪಡಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜುಲೈ ತಿಂಗಳ 15ರಿಂದ ಆರಂಭವಾಗುವ ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಮೂರು ದಿನಗಳು ನಡೆಯಲಿದ್ದು  ರಾಜ್ಯದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ ತೊಂದರೆಯಾಗದಂತೆ ಪಟ್ಟಣದ ಎಲ್ಲಾ ಬೀದಿದೀಪಗಳನ್ನು ದುರಸ್ತಿಗೊಳಿಸಬೇಕು ಹಾಗೂ ನೀರಿನ ಸಮಸ್ಯೆ ತಲೆದೋರಿದಂತೆ ಪುರಸಭೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 
ಸವಿತಾ ಸಮಾಜದ ಅಧ್ಯಕ್ಷರಾಗಿ ಸುಪ್ರೀಂ ಸುಬ್ರಹ್ಮಣ್ಯ
 ಅವಿರೋಧವಾಗಿ ಆಯ್ಕೆಯಾಗಿದ್ದಾರೆ.



Friday, June 24, 2016


ಜಮೀನು  ವಶಪಡಿಸಿಕೊಂಡು ನಿವೇಶನ ನೀಡಿ : ಸಿಬಿಎಸ್
ಚಿಕ್ಕನಾಯಕನಹಳ್ಳಿ : ಪಟ್ಟಣದ ಜನತೆಗೆ ಆಶ್ರಯ ಸಮಿತಿವತಿಯಿಂದ ಉಚಿತವಾಗಿ ನೀಡುವವ  ನಿವೇಶನ ವಿಚಾರದಲ್ಲಿ ದಾರಿಯ ಸಂಬಂಧವಾಗಿ ಆಗಿರುವ ತೊಂದರೆಯನ್ನು ನಿವಾರಿಸಲು ಅಗತ್ಯವಿರುವ ಜಮೀನನ್ನು ಕಾನೂನು ಪ್ರಕಾರ ವಶಪಡಿಸಿಕೊಂಡು ಜನತೆಗೆ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಾವನಹಳ್ಳಿ ಬಳಿ ನಿವೇಶನಗಳನ್ನು ಪುರಸಭಾ ವತಿಯಿಂದ ವಿಂಗಡಿಸಿದ್ದು ಹಲವು ಕಾರಣಗಳಿಂದ ನಿವೇಶನ ನೀಡಲು ಸಾಧ್ಯವಾಗಿಲ್ಲ, ನಿವೇಶನಕ್ಕೆ ಹೋಗಲು ಸರಿಯಾದ ರಸ್ತೆ ಸಂಪರ್ಕ ಇಲ್ಲದ ಕಾರಣ ನಿವೇಶನದ ಮಧ್ಯೆ ಇರುವ ಜಮೀನುಗಳನ್ನು ಕಾನೂನು ಪ್ರಕಾರ ವಶಪಡಿಸಿಕೊಂಡು ನಿವೇಶನ ನೀಡಲು ಶಾಸಕರು ಸೂಚಿಸಿದರು.
 ಈಗಾಗಲೇ ಜಮೀನು ಮಾಲೀಕರಿಗೆ ಹಲವಾರು ಬಾರಿ ಸಂಧಾನದ ಮೂಲಕ ನಿವೇಶನ ಮಧ್ಯೆ ಬರುವ ಜಮೀನಿನ ಮಾಲೀಕರು ಈಗಾಗಲೇ ಪುರಸಭೆಗೆ ಕರಾರು ಒಪ್ಪಂದ ಮಾಡಿಕೊಟ್ಟಿದ್ದರೂ ಇದುವರೆಗೆ ಜಮೀನು ಬಿಟ್ಟುಕೊಟ್ಟಿಲ್ಲದ ಕಾರಣ ನಿವೇಶನಕ್ಕೆ ಹೋಗಲು ದಾರಿ ಇಲ್ಲದ ಪ್ರಯುಕ್ತ ನಿವೇಶನವನ್ನು ನೀಡಲು ತೊಂದರೆಯಾಗಿದ್ದು ಇದಕ್ಕೆ ಅಧಿಕಾರಿಗಳು ಶೀಘ್ರವೇ ಕಾನೂನು ಪ್ರಕಾರ ಜಮೀನು ವಶಪಡಿಸಿಕೊಳ್ಳುವಂತೆ ಸಲಹೆ ನೀಡಿದ ಅವರು ಕೇದಿಗೆಹಳ್ಳಿ ಸಮೀಪವಿರುವ ಸಕರ್ಾರಿ ಜಮೀನನ್ನು ಸವರ್ೆ ಮಾಡಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ವಿಂಗಡಣೆ ಮಾಡಿ ನಿವೇಶನ ನೀಡಲು ಸೂಚಿಸಿದರು. 
ಇಂಜನಿಯರ್ ಯೋಗಾನಂದ್ಬಾಬು ಮಾತನಾಡಿ, ಬಾವನಹಳ್ಳಿ ಸಮೀಪ 271 ನಿವೇಶನಗಳಿವೆ ಹಾಗೆಯೇ ಕೇದಿಗೆಹಳ್ಳಿ ಸಮೀಪವಿರುವ ಸಕರ್ಾರಿ ಜಮೀನನ್ನು ಸವರ್ೆ ಮಾಡಿಸಿ ನಂತರ ಸಭೆಗೆ ತಿಳಿಸಲಾಗುವುದು ಎಂದರು. 
ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿ, 2015-16ನೇ ಸಾಲಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ನಗರ ವಸತಿ ಯೋಜನೆಯಡಿ ಮನೆ ನಿಮರ್ಿಸಿಕೊಳ್ಳಲು ಪರಿಶಿಷ್ಠ ಜಾತಿ, ಪಂಗಡದಿಂದ 50ಜನರಿಗೆ ಮಂಜೂರು ಮಾಡಲಾಗಿದೆ, 75 ಮಂದಿ ಪ.ಜಾ, ಪ.ಪಂ ದವರಿಗೆ ಮನೆ ಕಟ್ಟಲು ಅವಕಾಶವಿದ್ದು ಪಟ್ಟಣ ತೊರೆದು ಬೇರೆ ಊರುಗಳಿಗೆ ವಲಸೆ ಹೋಗಿದ್ದು ಈಗ 50ಜನಕ್ಕೆ ಮನೆ ನಿಮರ್ಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಪಟ್ಟಣ ಆಶ್ರಯ ಸಮಿತಿ ಸದಸ್ಯ ಸಿ.ಬಸವರಾಜು ಮಾತನಾಡಿ, ಪಟ್ಟಣದ ಜನತೆಗೆ ನಿವೇಶನ ನೀಡಲು ಹಲವು ಬಾರಿ ಸಭೆ ನಡೆಸಿ ಜಮೀನು ಮಾಲೀಕರಿಗೆ ನೋಟಿಸ್ ನೀಡಿದ್ದರೂ ಬಿಟ್ಟುಕೊಡದೆ ಇರುವುದರಿಂದ ನಿವೇಶನ ಇಲ್ಲದ ಬಡವರಿಗೆ ಶೀಘ್ರ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯನಂದ್, ಪಟ್ಟಣ ಆಶ್ರಯ ಸಮಿತಿ ಸದಸ್ಯ ಶಿವಕುಮಾರ್, ಬಾಬುಸಾಹೇಬ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

ಸಾಲ ಕಟ್ಟಲು ಎರಡು ವರ್ಷ ಕಾಲಾವಕಾಶ ನೀಡಿ 
ಚಿಕ್ಕನಾಯಕನಹಳ್ಳಿ,ಜೂ.24 : ಬ್ಯಾಂಕನಿಂದ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ಬಂದಿರುವ ತಗಾದೆ ನೋಟಿಸ್ಗಳನ್ನು ವಾಪಸ್ ಪಡೆಯುವಂತೆ  ರೈತ ಸಂಘದವರು  ಪಟ್ಟಣದ ಬ್ಯಾಂಕ್ಗಳಿಗೆ ತೆರಳಿ ಬರಗಾಲವಿರುವುದರಿಂದ ಸಾಲ ಕಟ್ಟಲು ತೊಂದರೆಯಾಗುತ್ತಿದ್ದು ಸಾಲ ಮರುಪಾವತಿ ಮಾಡಲು ಎರಡು ವರ್ಷ ಕಾಲಾವಕಾಶ ನೀಡುವಂತೆ ಬ್ಯಾಂಕ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಪಟ್ಟಣದಲ್ಲಿರುವ ಎಸ್.ಬಿ.ಎಂ ಹಾಗೂ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ಗಳಿಗೆ ರೈತ ಸಂಘಟನೆ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತೆರಳಿ ಬ್ಯಾಂಕ್ ಅಧಿಕಾರಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ರೈತ ಸಂಘಟನೆಯ ಮುಖಂಡ ಕೆಂಕೆರೆ ಸತೀಶ್ ಮಾತನಾಡಿ, ಕಳೆದ ವರ್ಷ, ಈ ವರ್ಷ ಎರಡೂ ವರ್ಷಗಳಿಂದ ಬರಗಾಲ ಎದುರಾಗಿದೆ, ರೈತರಿಗೆ ಉತ್ತಮ ಬೆಳೆಯಾಗದೆ ಆಥರ್ಿಕವಾಗಿ ಸಂಕಷ್ಠಕ್ಕೆ ಸಿಲುಕಿದ್ದಾರೆ, ಬ್ಯಾಂಕಿನಿಂದ ಪಡೆದಿದ್ದ ಸಾಲಕ್ಕೆ ಹೆದರಿ ಮರುಪಾವತಿ ಮಾಡಲಾಗದೆ ವಿಷ ಕುಡಿಯುವ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ತಮ್ಮ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿ ಸಾಲ ಮರುಪಾವತಿ ಮಾಡಲು ಕಾಲಾವಕಾಶ ನೀಡುವಂತೆ ಕೋರಿಕೊಂಡರು.
ಎಸ್ಬಿಎಂ ಬ್ಯಾಂಕ್ನ ಪ್ರಭಾರ ಮ್ಯಾನೇಜರ್ ಭಾರ್ಗವ್ ದಾಸ್ ಮಾತನಾಡಿ,  ರೈತರು ಇರುವುದರಿಂದ ಬ್ಯಾಂಕ್ಗಳಿರುವುದು, ರೈತರಿಗೆ ಬಂದಿರುವ ನೋಟಿಸ್ಗಳು ಬ್ಯಾಂಕಿನಿಂದ ಬಂದಂತಹವುಗಳಲ್ಲ ಅದು ನ್ಯಾಯಾಲಯದಿಂದ ಬಂದಿರುವುದಾಗಿದೆ, ನಿಮ್ಮ ಸಮಸ್ಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಪದಾಧಿಕಾರಿಗಳಾದ ದಬ್ಬೆಘಟ್ಟ ಜಗದೀಶ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜು ಚಿ.ನಾ.ಹಳ್ಳಿ ವಸತಿ 

ನಿಲಯಕ್ಕೆ ಭೇಟಿ 
ಚಿಕ್ಕನಾಯಕನಹಳ್ಳಿ,ಜೂ.24: ಜಿಲ್ಲಾಧಿಕಾರಿ ಕೆ.ಪಿ ಮೋಹನ್ರಾಜ್ ಪಟ್ಟಣದ ಹಿಂದುಳಿದ ವರ್ಗಗಳ ಬಾಲಕ ಹಾಗೂ ಬಾಲಕಿಯರ ಮೇಟ್ರಿಕ್ ಪೂರ್ವ ಹಾಗೂ ನಂತರ ವಸತಿ ನಿಲಯಗಳಿಗೆ ಧಿಡೀರಿ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಹೊನ್ನೇಬಾಗಿ ಬಳಿ ಇರುವ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಮಾರ್ಗಮಧ್ಯೆ ಇರುವ ವಿದ್ಯಾಥರ್ಿನಿಯರ ಹಾಗೂ ವಿದ್ಯಾಥರ್ಿಗಳ ಹಾಸ್ಟೇಲ್ಗಳಿಗೆ ಭೇಟಿ ನೀಡಿ,  ಬಾಲಕಿಯರ ಹಾಸ್ಟೆಲ್ಗಳ ಬಗ್ಗೆ ಮೆಚ್ಚಿಗೆ ವ್ಯಕ್ತ ಪಡಿಸಿ ಹಾಸ್ಟೆಲ್ಗಳ ಕೊಠಡಿಗಳನ್ನು  ಪರೀಶೀಲಿಸಿದರು,  ನಂತರ ಹಾಸ್ಟೆಲ್ನಲ್ಲಿರುವ ಶುದ್ದ ಕುಡಿಯುವ ನೀರಿನ್ನು ಸ್ವತಃ ಅವರೇ ಕುಡಿದು ಪರಿಶೀಲಿಸಿ,  ಓವರ್ಹೆಡ್ ಟ್ಯಾಂಕ್ನ್ನು ತಿಂಗಳಿಗೆ ಎಷ್ಟು ಬಾರಿ ಸ್ವಚ್ಛಗೊಳಿಸುತ್ತೀರಿ ಎಂದು ವಾಡರ್್ನ್ಗೆ ಪ್ರಶ್ನಿಸಿದರು. ತಿಂಗಳಿಗೆ ಎರಡು ಬಾರಿ ಸ್ವಚ್ಛಗೊಳಿಸುವುದಾಗಿ ತಿಳಿಸಿದರು. ನಂತರ ಹಾಸ್ಟೆಲ್ ವಿದ್ಯಾಥರ್ಿನಿಯರ ಜೊತೆಯಲ್ಲಿ ಮಾತನಾಡಿ ವಸತಿ ನಿಲಯದಲ್ಲಿ ಯಾವುದಾದರೂ ಕುಂದು  ಕೊರತೆಗಳ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದರು  ನಂತರ ಜಿಲ್ಲಾಧಿಕಾರಿಗಳು ವಿದ್ಯಾಥರ್ಿನಿಯರ ಜೊತೆಯಲ್ಲಿ ಊಟ ಮಾಡಿ ನಂತರ ಮಕ್ಕಳಿಗೆ ಇದೇ ರೀತಿಯಲ್ಲಿ ಉತ್ತಮ ಆಹಾರ ನೀಡುವಂತೆ ವಾಡರ್್ನ್ ಜ್ಯೋತಿಯವರಿಗೆ ಸಲಹೆ ನೀಡಿದರು.
ಹಾಸ್ಟೆಲ್ ವಿದ್ಯಾಥರ್ಿನಿಯರಿಗೆ ತಮ್ಮ ಸಮಸ್ಯೆ ಏನಾದರೂ ಇದೆಯೇ ಎಂದು ಪ್ರಶ್ನಿಸಿದ ನಂತರ ವಿದ್ಯಾಥರ್ಿನಿಯರು ಡೈನಿಂಗ್ ಟೇಬಲ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ .ಉತ್ತರಿಸಿದ ಜಿಲ್ಲಾಧಿಕಾರಿಗಳು ಹಾಸಿಗೆ, ದಿಂಬಿನ ಕವರ್ಗಳು, ಹಾಗೂ ಸೊಳ್ಳೆಪರದೆ ಹಾಗೂ ಡೈನಿಂಗ್ ಟೇಬಲ್ ನೀಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.


Thursday, June 23, 2016




ಚಿ.ನಾ.ಹಳ್ಳಿ ಗಣಿಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ
ಚಿಕ್ಕನಾಯಕನಹಳ್ಳಿ,ಜೂ.23 : ತಾಲ್ಲೂಕಿನ ಗಣಿಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
 ತಾಲ್ಲೂಕಿನಲ್ಲಿ ಸ್ಥಗಿತವಾಗಿರುವ ಗಣಿಗಾರಿಕೆಯನ್ನು  ಪುನರಾರಂಭಿಸಲು ಹಾಗೂ ಗಣಿಗಾರಿಕೆ ಪ್ರದೇಶಗಳ ಸ್ಥಿತಿಗತಿಯ ಸೂಕ್ತ ಮಾಹಿತಿಯನ್ನು ಆರು ವಾರಗಳೊಳಗೆ ನೀಡುವಂತೆ  ಸವರ್ೋಚ್ಛ ನ್ಯಾಯಾಲಯ ಗಡುವು ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.
   ತಾಲ್ಲೂಕಿನ ಗಣಿಬಾದಿತ ಪ್ರದೇಶವಾದ ಗೊಲ್ಲರಹಟ್ಟಿ, ಹೊನ್ನೆಬಾಗಿ, ಬುಳ್ಳೇನಹಳ್ಳಿ, ಯರೆಕಟ್ಟೆ ರೆಡ್ಹಿಲ್ಸ್ ಭಾಗಗಳಿಗೆ ಬೇಟಿ ನೀಡಿಪರಿಶೀಲಿಸಿದರು. ಶೀಘ್ರ ವರದಿ ತಯಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಶೆಟ್ಟಿಕೆರೆ ಶಾಲೆಗೆ ಸಂಸದ ಭೇಟಿ 
ಚಿಕ್ಕನಾಯಕನಹಳ್ಳಿ,ಜೂ.23 : ತಾಲ್ಲೂಕಿನ ಶೆಟ್ಟಿಕೆರೆಯ ಸಕರ್ಾರಿ ಪ್ರಾಥಮಿಕ ಪಾಠಶಾಲಾ ಬಳಿ ಇರುವ ಮೊಬೈಲ್ ಟವರ್ನಿಂದ ಶಾಲಾ ಮಕ್ಕಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಗುರುವಾರ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿಎಸ್ಎನ್ಎಲ್ ಹಾಗೂ ಟ್ರಾಯ್ ಅಧಿಕಾರಿಗಳ ಸಭೆ ಕರೆದು ತರಂಗಾಂತರಗಳ ಪರಿಣಾಮದ ಬಗ್ಗೆ ಚಚರ್ಿಸಿ ಟವರ್ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವುದು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು. 
ಬಿಎಸ್ಎನ್ಎಲ್, ಏರ್ಟೆಲ್, ವೋಡಾಪೋನ್ ಕಂಪನಿಗಳಿಗೆ ಸಂಪರ್ಕ ಸೇವೆ ಒದಗಿಸುತ್ತಿರುವ ಟವರ್ ಶಾಲೆಯ ಬಳಿಯಿದೆ. ಐವರ್ ಹೊರಹಾಕುತ್ತಿರುವ ಅಪಾಯಕಾರಿ ತರಂಗಾಂತರಗಳಿಂದಾಗಿ  ಶಾಲಾ ಮಕ್ಕಳಿಗೆ ತಲೆನೋವು  ಶುರುವಾಗಿದೆ ಎಂದು ಮಕ್ಕಳು, ಪೋಷಕರು, ಸಾರ್ವಜನಿಕರು ದೂರಿದ್ದರು.
ದೂರುದಾರ ಶಶಿಧರ್ ಮಾತನಾಡಿ, ಶೆಟ್ಟಿಕೆರೆ ಶಾಲೆ ಬಳಿಯಲ್ಲಿ ಟವರ್ ನಿಮರ್ಾಣ ಮಾಡಿರುವುದರಿಂದ ಸುತ್ತಮುತ್ತಲಿನ ಜನರಿಗೆ, ಶಾಲಾ ಮಕ್ಕಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ತಿಪಟೂರು ಉಪವಿಭಾಗಾಧಿಕಾರಿ ಗ್ರಾಮ ಪಂಚಾಯ್ತಿ, ಆರೋಗ್ಯ ಇಲಾಖೆಯವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ, ವೈದ್ಯಾಧಿಕಾರಿ ಶಿವಕುಮಾರ್, ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ಸರ್ಕಲ್ನಲ್ಲಿ ಬೆಳಗದ ಹೈಮಾಸ್ಕ್ ದೀಪ 
ಚಿಕ್ಕನಾಯಕನಹಳ್ಳಿ,ಜ.23 : ಪಟ್ಟಣದ ಹಲವು ಬಡಾವಣೆಗಳಲಿ ಹಗಲೆಲ್ಲಾ ಬೀದಿ ದೀಪಗಳು ಉರಿಯುತ್ತವೆ ಆದರೆ ಪಟ್ಟಣದ ಹೃದಯ ಭಾಗವಾದ ನೆಹರು ಸರ್ಕಲ್ ನಲ್ಲಿ ಇರುವ ಹೈಮಾಸ್ಕ್ ದೀಪ ಸೇರಿದಂತೆ ತಾಲ್ಲೂಕು ಕಛೇರಿಯಿಂದ ಹುಳಿಯಾರು ಗೇಟ್ ವರೆಗಿನ 30ಕ್ಕೂ ಹೆಚ್ಚು ಬೀದಿ ದೀಪಗಳು ರಾತ್ರಿಯೂ ಉರಿಯುವುದಿಲ್ಲ.
ನೆಹರು ಸರ್ಕಲ್ನ ಹೈಮಾಸ್ಕ್ ದೀಪ 3ತಿಂಗಳ ಹಿಂದೆಯೇ ಕೆಟ್ಟು ಹೋಗಿದ್ದು ಪಟ್ಟಣದ ಹೃದಯಭಾಗ ಕತ್ತಲಲ್ಲಿ ಮುಳುಗುವಂತಾಗಿದೆ. ರಾತ್ರಿ 11ರ ವರೆಗೂ ಸರ್ಕಲ್ನಲ್ಲಿ ಜನ ಸಂದಣೆ ಅಧಿಕವಾಗಿದ್ದು ಕತ್ತಲೆಯ ಕಾರಣಕ್ಕೆ ಹಲವು ಅಪಘಾತಗಳು ಸಂಭವಿಸುತ್ತಿವೆ. ಹಲವು ಅಪರಾಧ ಚಟುವಟಿಕೆಗಳೂ ನಡೆಯುತ್ತಿವೆ. ಇದೇ ಸ್ಥಿತಿ ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜ್, ತಾಲ್ಲೂಕು ಕ್ರೀಡಾಂಗಣ, ತಾಲ್ಲೂಕು ಪಂಚಾಯ್ತಿ ಹಿಂಭಾಗ, ಡಿವಿಪಿ ಶಾಲೆ ಆವರಣ, ತಾಲ್ಲೂಕು ಕಛೇರಿ, ತಾಲ್ಲೂಕು ಪಂಚಾಯ್ತಿ ಎದುರು, ಶೆಟ್ಟಿಕೆರೆ ಗೇಟ್ನಲ್ಲಿಯೂ ಬೀದಿ ದೀಪಗಳು ಕಾರ್ಯನಿರ್ವಹಿಸದೆ ಕತ್ತಲು ಆವರಿಸಿದೆ. 
ನೆಹರು ಸರ್ಕಲ್ ಮೂಲಕ ಚಾಮರಾಜನಗರ ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ರಾತ್ರಯಾದರೆ ಭಾರಿ ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ರಾತ್ರಿಯಿಡೀ ಹೊಸದುರ್ಗ-ಬೆಂಗಳೂರಿಗೆ ಈ ಮಾರ್ಗವಾಗಿ ಸಕರ್ಾರಿ ಹಾಗೂ ಖಾಸಗಿ ಬಸ್ಸುಗಳು ಸಂಚರಿಸುತ್ತವೆ. ರಾತ್ರಿ ಸಂಚರಿಸುವ ಪ್ರಯಾಣಿಕರಿಗೆ ಸರ್ಕಲ್ನಲ್ಲಿ ಬೆಳಕು ಇಲ್ಲದೆ ತೀವ್ರ ತೊಂದರೆಯಾಗುತ್ತಿದೆ ಎಂದು  ಪಾಂಡುರಂಗಯ್ಯ ಹೇಳಿದರು.
  ಸರ್ಕಲ್ ಮೂಲಕ ನೂರಾರು ವಾಹನಗಳು ಸಂಚರಿಸುತ್ತವೆ. ಈ ಭಾಗದಿಂದ ನಾಲ್ಕು ದಿಕ್ಕಿಗೆ ರಸ್ತೆಯಿದ್ದು ತಿರುವು ಇದೆ. ಕತ್ತಲಾದರೆ ವಿದ್ಯುತ್ನ ಬೆಳಕಿಲ್ಲದೆ ಅಪಘಾತಗಳಾಗುವ ಸಂಭವವಿದೆ ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಬೀದಿ ದೀಪ ನಿರ್ವಹಣೆಗೆ ಟೆಂಡರ್ ಕರೆದಿಲ್ಲ. ಟೆಂಡರ್ ಕರೆದ ನಂತರ ಹೈಮಾಸ್ಕ್ ಲೈಟ್ ಸರಿ ಮಾಡುತ್ತಾರೆ ಎಂದು ಉತ್ತರಿಸುತ್ತಾರೆ. ಕೂಡಲೇ ಹೈಮಾಸ್ಕ್ ದೀಪ ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
  ಮತ್ತೊಂದೆಡೆ ಜೋಗಿಹಳ್ಳಿ, ಅಂಬೇಡ್ಕರ್ ನಗರ, ನಾಯಕರ ಬೀದಿ ಸೇರಿದಂತೆ ಹಲವು ಕಡೆ ವಿದ್ಯುತ್ ದೀಪಗಳು ಹಗಲಿನಲ್ಲೂ ಉರಿಯುತ್ತವೆ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಪುರಸಭೆ ತಲೆ ಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಅವೈಜ್ಞಾನಿಕ ರಸ್ತೆಗೆ ನಾಗರೀಕರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜೂ.23 : ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅವೈಜ್ಞಾನಿಕವಾಗಿ ಮಣ್ಣು ಹಾಕುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿ ಗುರುವಾರ ನಾಗರಿಕರು ಕಾಮಗಾರಿ ಸ್ಥಳಕ್ಕೆ ತೆರಳಿ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಗೌರಸಾಗರ ಗೇಟ್ ಬಳಿ ನಡೆದಿದೆ.
   ಚಾಮರಾಜನಗರ-ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ಮೂಲಕ ಹಾದು ಹೋಗಿದ್ದು ಕಿಬ್ಬನಹಳ್ಳಿ ಕ್ರಾಸ್ನಿಂದ ಹುಳಿಯಾರುವರೆಗೆ 35 ಕಿಮೀ ರಸ್ತೆ ದುರಸ್ಥಿಕಾರ್ಯ ನಡೆಯುತ್ತಿದೆ. ಈಗಾಗಲೆ ಕಾಮಗಾರಿ ಕಡೆ ಹಂತ ತಲುಪಿದೆ. ರಸ್ತೆಗೆ ಡಾಂಬಾರ್ ಹಾಕಲಾಗಿದ್ದು ಎರಡೂ ಬದಿಗೆ ಗ್ರಾವೆಲ್ ಹಾಕುವ ಕಾರ್ಯ ಪ್ರಗತಿಯಲ್ಲಿದ್ದು ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ದೂರಿದ್ದಾರೆ.
 ತಾಲ್ಲೂಕಿನ ಅವಳಗೆರೆ, ದೇವರಹಳ್ಳಿ, ಭೈರಾಪುರ, ಅವಳಗೆರೆ ಗೊಲ್ಲರಹಟ್ಟಿ, ಅವಳಗೆರೆ ಭೋವಿ ಕಾಲೋನಿ ಕೆಲ ಗ್ರಾಮಸ್ಥರು ಧಾವಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಬರುವ ವರೆಗೆ ಕಾಮಗಾರಿ ಮುಂದುವರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
    ಅವಳಗೆರೆ ಕಾಂತರಾಜು ಮಾತನಾಡಿ, ರಸ್ತೆ ಬದಿಗೆ, ಪಕ್ಕದ ಚೌಳು ಮಣ್ಣನ್ನು ಜೆಸಿಪಿ ಯಂತ್ರ ಬಳಸಿ ಹಾಕಲಾಗುತ್ತಿದೆ. ಪಕ್ಕದ ಜಂಗಲ್ ತೆಗೆಯುತ್ತಿಲ್ಲ. ಜಲ್ಲಿಕಲ್ಲ ಬಳಸಿ ಗ್ರಾವೆಲ್ ತಯಾರಿಸಿ ರಸ್ತೆಗಿಂತ ಎರಡು ಅಡಿ ಎತ್ತರಕ್ಕೆ ಗ್ರಾವೆಲ್ ಮಿಶ್ರಿತ ಮಣ್ಣು ಹಾಕಬೇಕೆಂಬ ನಿಯಮವಿದೆ, ಗುತ್ತಿಗೆದಾರರು ಯಾವುದೇ ನಿಯಮವನ್ನು ಪಾಲಿಸದೆ ಕಾಟಾಚಾರಕ್ಕೆ ಮಣ್ಣು ಹಾಕಿಸುತ್ತಿದ್ದಾರೆ. ಸಂಬಂದಪಟ್ಟ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಗುಣಮಟ್ಟವನ್ನು ಪರೀಕ್ಷಿಸುತ್ತಿಲ್ಲ. ಇದರಿಂದ ಮಳೆಗಾಲದಲ್ಲಿ ರಸ್ತೆ ಕೊಚ್ಚಿ ಹೋಗುವ ಸಂಭವವಿದೆ, ಅಲ್ಲದೆ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದರು.
  ದೇವರಹಳ್ಳಿ ನಾಗರಾಜು ಮಾತನಾಡಿ, ರಸ್ತೆ ಬದಿಗೆ ಮಣ್ಣು ಹಾಕಲು ಲಕ್ಷಾಂತರ ರೂಪಾಯಿ ಹಣ ಮೀಸಲಿಡಲಾಗಿದೆ. ಬೆಂಗಳೂರಿನ ಗುತ್ತಿಗೆದಾರ ಸೂರ್ಯಪ್ರಕಾಶ್ ಎಂಬುವರು ಕಾಮಗಾರಿ ಹೊಣೆ ಹೊತ್ತಿದ್ದು ಒಂದು ಬಾರಿಯೂ ಸ್ಥಳಕ್ಕೆ ಬಂದಿಲ್ಲ. ಬದಲಿಗೆ ರಾತ್ರಿ ಹಾಗೂ ಸಂಜೆ ವೇಳೆ ಜೆಸಿಬಿ ಯಂತ್ರಗಳನ್ನು ಬಿಟ್ಟು ಕಳ್ಳತನದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಇದರಿಂದ ಕೊಟ್ಯಾಂತರ ರೂಪಾಯಿ ಹಣ ಮಣ್ಣು ಪಾಲಾಗುತ್ತಿದೆ ಎಂದು ಆರೋಪಿಸಿದರು.
  ಪ್ರತಿಭಟನೆಯಲ್ಲಿ ನಾಗರಿಕರಾದ ಶ್ರೀನಿವಾಸ್, ಶಿವಣ್ಣ, ಸ್ವಾಮಿ, ರಾಮಯ್ಯ, ಗುರುಶಾಂತಪ್ಪ, ಕೃಷ್ಣಮೂತರ್ಿ ಮುಂತಾದವರು ಉಪಸ್ಥಿತರಿದ್ದರು.