ಚಿಕ್ಕನಾಯಕನಹಳ್ಳಿ,ಏ.08: ತಾಲೂಕಿನ ಕೋಡಗಲ್ ಬಸವೇಶ್ವರ ದೇವರ ದೇವಸ್ಥಾನದ ದಾರಿಗೆ ಪುರಸಭೆಯವರು ಅಡ್ಡಲಾಗಿ ಕಾಂಪೌಂಡ್ ನಿಮರ್ಿಸುತ್ತಿದ್ದಾರೆಂದು ಖಂಡಿಸಿ ತಾಲೂಕು ಕಛೇರಿ ಮುಂದೆ ದೇವಸ್ಥಾನದ ಭಕ್ತರು ಧರಣಿ ನಡೆಸಿದರು.ನೂರಾರು ವರ್ಷಗಳಿಂದ ಭಕ್ತಾಧಿಗಳು ಓಡಾಡುತ್ತಿದ್ದ ರಸ್ತೆಗೆ ಪುರಸಭೆಯವರು ಪಟ್ಟಣದ ಕಸವನ್ನು ತಂದು ಹಾಕುತ್ತಿರುವುದರಿಂದ ದೇವಾಲಯಕ್ಕೆ ಹೋಗುವ ರಸ್ತೆ ಪೂರ್ಣ ಮುಚ್ಚಿ ಹೋಗುವ ಸಂಬಂವವಿರುವುದರಿಂದ ಈ ಕೂಡಲೇ ಈ ಪ್ರದೇಶನ್ನು ಕಸದಿಂದ ತೆರವುಗೊಳಿಸುವುದು ಸೇರಿದಂತೆ ರಸ್ತೆ ಒತ್ತುವರಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ರಸ್ತೆಗೆ ಅಡ್ಡಲಾಗಿ ಕಟ್ಟುತ್ತಿರುವ ಕಾಂಪೋಸ್ಟ್ ಗೋಡೆ ಕಾಮಗಾರಿಯನ್ನು ನಿಲ್ಲಿಸಿ ದಾರಿ ಖುಲ್ಲಾ ಮಾಡಿಸುವಂತೆ ಭಕ್ತಾದಿಗಳು ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್, ಪುರಸಭೆ ಮುಖ್ಯಾದಿಕಾರಿಗೆ ಈಗಾಗಲೆ ಅಜರ್ಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲವೆಂದ ನಾಗೇಶಯ್ಯ ಧರಣಿಯ ನಂತರೂವು ಈ ಕಾಮಗಾರಿಯನ್ನು ನಿಲ್ಲಿಸದಿದ್ದರೆ ಮುಂದೆ ನಮ್ಮ ಹೋರಾಟದ ಸರೂಪವನ್ನು ಬದಲಾಯಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಸ್ವತಂತ್ರ ಹೋರಾಟಗಾರರಾದ ಸಿ.ಎನ್.ನಾಗೇಶಯ್ಯ, ಎಸ್.ಮರುಡಯ್ಯ, ಕಾಂಗ್ರೆಸ್ ಮುಖಂಡ ಕಾಯಿ ನಾರಾಯಣಸ್ವಾಮಿ, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸಿ.ಎನ್.ವಿಜಯಕುಮಾರ್, ಪ್ರತಿಭಟನಾಕಾರರು ಶಿರಸ್ತೆದಾರ್ ಕೆ.ವಿ.ಕುಮಾರ್ ರವರಿಗೆ ಮನವಿ ಅಪರ್ಿಸಿದರು.
ಯಲ್ಲಮ್ಮನ ಜಾತ್ರೆ ಅಂಗವಾಗಿ ನಾಟಕ
ಚಿಕ್ಕನಾಯಕನಹಳ್ಳಿ,ಏ.8: ಗ್ರಾಮ ದೇವತೆ ರೇಣುಕ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಕುರುಕ್ಷೇತ್ರ ನಾಟಕವನ್ನು ಇದೇ 9ರ ರಾತ್ರಿ 8.30ಕ್ಕೆ ದೇವಾಲಯದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ರೇಣುಕ ಯಲ್ಲಮ್ಮ ದೇವಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ನಾಟಕವನ್ನು ಹಮ್ಮಿಕೊಂಡಿದೆ. ಸಂಗೀತ ನಿದರ್ೇಶಕ ಸಿ.ಎಸ್.ಗಂಗಾಧರ್ ರವರ ನಿದರ್ೇಶನ, ಶಿವಣ್ಣನವರ ಮಾರ್ಗದರ್ಶನದಲ್ಲಿ ನಡೆಯಲಿದೆ, ಭಾವನಹಳ್ಳಿ ಶ್ರೀನಿವಾಸಯ್ಯ, ಭಾವನಹಳ್ಳಿ ಧನುಶ್ಕುಮಾರ್, ಗೊಡೇಕೆರೆ ಶಿವಾಚಾರ್, ಬ್ಯಾಲದಕೆರೆ ಕುಮಾರಸ್ವಾಮಿ ಸೇರಿದಂತೆ ಹಲವು ಪಾತ್ರಧಾರಿಗಳು ನಟಿಸಲಿದ್ದಾರೆ.
ಶಾಸಕ ಸಿ.ಬಿ.ಸುರೇಶ್ಬಾಬು, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ.ರವಿಪ್ರಸಾದ್ ಭಾಗವಹಿಸಲಿದ್ದಾರೆ ಎಂದು ರೇಣುಕ ಯಲ್ಲಮ್ಮ ದೇವಾಲಯದ ಗೌಡರಾದ ಸಿ.ಬಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
No comments:
Post a Comment