ಚಿಕ್ಕನಾಯಕನಹಳ್ಳಿ,ಏ.11; ದೇಶದ ಮುಂದಿನ ಯೋಜನೆಗಳನ್ನು ರೂಪಿಸಿಲು ಜನಗಣತಿ ಪ್ರಮುಖ ಆಧಾರವಾಗಿದ್ದು ಆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವ ಜವಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2010-11ನೇ ಸಾಲಿನ ಜನಗಣತಿ ಕಾರ್ಯಕ್ರಮದ ತರಬೇತಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇಶದ ಅಂಕಿ ಸಂಖ್ಯೆಗಳನ್ನು ಕ್ರೂಢೀಕರಿಸುವ ಈ ಕಾರ್ಯದಲ್ಲಿ ಜನ ಸಾಮಾನ್ಯರು ನಿಖರವಾದ ಮಾಹಿತಿಯನ್ನು ನೀಡುವ ಮೂಲಕ ಗಣತಿದಾರರಿಗೆ ಸಹಕರಿಸಬೇಕು, ಹಾಗೆಯೇ ಗಣತಿದಾರರು ಜನ ಸಾಮಾನ್ಯರೊಂದಿಗೆ ಸೌಜನ್ಯದಿಂದ ವತರ್ಿಸುವ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಣತಿ ಕಾರ್ಯವನ್ನು ಯಶಸ್ವಿಯಾಗುವಂತೆ ಮಾಡಬೇಕು ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ, 10ವರ್ಷಕ್ಕೊಮ್ಮೆ ನಡೆಯುವ ಜನಗಣತಿಗೆ ಶಿಕ್ಷಕರು ಶ್ರದ್ದೆಯಿಂದ, ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಿ ಗಣತಿ ದಾಖಲಾತಿಗೆ ಸರಿಯಾದ ಮಾಹಿತಿ ತುಂಬಬೇಕೆಂದರು. ಜನಗಣತಿ ಶಾಸನ ಬದ್ದವಾಗಿದ್ದು, ಕಾರ್ಯ ನಿರ್ವಹಿಸುವ ಶಿಕ್ಷಕರು ಮನೆಗಳಿಗೆ ತೆರಳಿ ವಿಷಯ ಸಂಗ್ರಹಿಸುವಾಗ ಜನರೊಂದಿಗೆ ಅನುಚಿತವಾಗಿ ವತರ್ಿಸದೆ, ಕುಶಲತೆಯಿಂದ ಜನರೊಂದಿಗೆ ಮಾತನಾಡಿ, ಸಂಯಮದಿಂದ ಮಾಹಿತಿ ತಿಳಿದುಕೊಳ್ಳಬೇಕು ಎಂದರು.
ಸಕರ್ಾರ ಜನಗಣತಿಗಾಗಿ ನೇಮಕ ಮಾಡಿರುವ ಶಿಕ್ಷಕರಿಗೆ 8ರಿಂದ 10ಸಾವಿರ ಸಂಭಾವನೆ ನೀಡಿದ್ದು ಕಾನೂನಿನ ರಕ್ಷಣೆ ಒದಗಿಸಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ ಶಿಕ್ಷಕರು ತಾವು ಕೈಗೊಳ್ಳುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬ ಕಾರಣದಿಂದ ಶಿಕ್ಷಣ ಇಲಾಖೆಯನ್ನು ಸಂಪೂರ್ಣವಾಗಿ ಈ ಕೆಲಸಕ್ಕೆ ತೊಡಗಿಸಿಕೊಂಡಿದ್ದು ನಮ್ಮ ಸಮರ್ಥವೇನೆಂಬುದನ್ನು ನಾವು ಕೈಗೆತ್ತಿಕೊಂಡಿರುವ ಈ ಜನಗಣತಿ ಕಾರ್ಯದ ಮೂಲಕ ಮತ್ತೊಮ್ಮೆ ಸಾಬೀತು ಮಾಡಬೇಕು ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಶಿರಸ್ತೆದಾರ್ ಕೆ.ವಿ.ಕುಮಾರ್ ಉಪಸ್ಥಿತರಿದ್ದರು.
No comments:
Post a Comment