ಚಿಕ್ಕನಾಯಕನಹಳ್ಳಿ,ಏ.24: ತಾಲೂಕಿಗೆ ಹೇಮಾವತಿ ನಾಲೆಯಿಂದ ನೀರು ಬಿಡಬಾರದೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುವ ಮೂಲಕ ಜಿಲ್ಲೆಯ ಮೂರು ಜನ ಬಿ.ಜೆ.ಪಿ.ಶಾಸಕರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆಂದು ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಈ ಸಂದರ್ಭದಲ್ಲಿ, ಜಿಲ್ಲೆಯ ಮೂವರು ಬಿ.ಜೆ.ಪಿ.ಶಾಸಕರುಗಳು ಹಾಗೂ ಒಬ್ಬ ಸಚಿವರೂ ಸೇರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಚಿಕ್ಕನಾಯಕನಹಳ್ಳಿಗೆ ಹೇಮಾವತಿಯಿಂದ ನೀರು ಕೊಡಬೇಡಿ ಎಂದು ಒತ್ತಾಯಿಸುತ್ತಿರುವುದಲ್ಲದೆ, ನೀರು ಬಿಟ್ಟರೆ ರಕ್ತ ಪಾತವಾಗುವ ಸಂಭವವಿರುತ್ತದೆ ಎಂದು ಪತ್ರದ ಮೂಲಕ ಮುಖ್ಯಮಂತ್ರಿಗಳಿಗೆ ಭಯದ ವಾತಾವರಣವನ್ನು ಸೃಷ್ಠಿಸಲು ಬಿ.ಜೆ.ಪಿ.ಯ ಶಾಸಕರೇ ಹೊರಟಿದ್ದಾರೆ ಎಂದು ಆರೋಪಿಸಿದ ಸೀಮೆಣ್ಣೆ ಕೃಷ್ಣಯ್ಯ, ಜನರಲ್ಲಿ ಸೌಹರ್ದತೆಯನ್ನು ಹುಟ್ಟು ಹಾಕಬೇಕಾದವರೆ ಈ ರೀತಿ ಪತ್ರ ಬರೆದಿರುವುದು ಸರಿಯಲ್ಲ ಎಂದಿದ್ದಾರೆ.
ಹೇಮಾವತಿ ನೀರನ್ನು ತಾಲೂಕಿಗೆ ಹರಿಸುವುದಾಗಿ ತಾಲೂಕಿನ 42 ಸಂಘಟನೆಗಳು ತಿಂಗಳಾದ್ಯಂತ ಹುಳಿಯಾರಿನಲ್ಲಿ ನಡೆಸಿದ ಅಹೋರಾತ್ರಿ ಪ್ರತಿಭಟನೆಗಳು ನಡೆದಿವೆ, ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಜಿಲ್ಲಾ ಮಂತ್ರಿಗಳೇ ಆಶ್ವಾಸನೆ ನೀಡಿ ತಾಲೂಕಿಗೆ ನೀರು ಹರಿಸುವುದಾಗಿ ಹೇಳಿಕೆ ನೀಡಿದ್ದಾರೆ, ಅವೆಲ್ಲವನ್ನೂ ಕಡೆಗಣಿಸಿ ಈಗ ಈ ಶಾಸಕರುಗಳು ಸಿ.ಎಂ.ರವರಿಗೆ ಚಿಕ್ಕನಾಯಕನಹಳ್ಳಿಗೆ ನೀರು ಕೊಡಬೇಡಿ ಎಂದು ಪತ್ರ ಬರೆಯುವ ಅವಶ್ಯಕತೆ ಇದೆಯೇ ಎಂದರು.
ಈ ಎಲ್ಲಾ ಪತ್ರ ವ್ಯವಹಾರಗಳನ್ನು ನೋಡಿದರೆ, ಕೇಂದ್ರ ಸಕರ್ಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸುವ ಬಿ.ಜೆ.ಪಿ. ಪಕ್ಷದವರು ಚಿಕ್ಕನಾಯಕನಹಳ್ಳಿಗೆ ಹೇಮಾವತಿ ನೀರು ಹರಿಸುವ ವಿಷಯದಲ್ಲಿ ಅನುಸರಿಸುತ್ತಿರುವ ನೀತಿ ಯಾವುದು ಎಂದು ಪ್ರಶ್ನಿಸಿದ ಕೃಷ್ಣಯ್ಯ, ತಾಲೂಕಿಗೆ ನೀರು ಹರಿಸುವ ವಿಷಯದಲ್ಲಿ ಈ ಸಕರ್ಾರ ಮಲತಾಯಿ ಧೋರಣೆ ಅನುಸರಿಸಿದರೆ ನಮ್ಮ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದರು. ನಮ್ಮ ತಾಲೂಕಿಗೂ ಹೇಮಾವತಿ ನಾಲೆಯಿಂದ ನೀರು ಹರಿಸಲೇಬೇಕು ಎಂದು ಒತ್ತಾಯಿಸಿದರು.
ಪಟ್ಟಣದಲ್ಲಿ ಇತ್ತೀಚಿಗೆ ವಿದ್ಯುತ್ ಅಸಮಪರ್ಕತೆ ಹಾಗೂ ನೀರು ಸರಬರಾಜಿನಲ್ಲಿನ ಅವ್ಯವಸ್ಥೆಯಿಂದ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆ ಉಲ್ಬಣಗೊಳ್ಳವ ಮೊದಲೇ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲು ಪುರಸಭೆಯವರು ಜನರೇಟರ್ನ್ನು ಖರೀದಿಸಬೇಕು, ಹಾಗೆಯೇ ನೀರು ಸರಬರಾಜಿನ ಜವಬ್ದಾರಿ ಹೊತ್ತವರ ಬಳಿ ಸರಿಯಾಗಿ ಕೆಲಸ ತೆಗೆದುಕೊಳ್ಳುತ್ತಿಲ್ಲ ಎಂದಿರುವ ಕೃಷ್ಣಯ್ಯ, ಈ ಬಗ್ಗೆ ಪುರಸಭೆಯವರು ಬೇಜವಬ್ದಾರಿಯಿಂದ ನಡೆದುಕೊಳ್ಳಬಾರದು ಎಂದರು.
ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಚರಂಡಿ ನಿಮರ್ಾಣಕ್ಕೆ ಮುಂದಾಗಿದ್ದು, ಅಕ್ರಮ ಒತ್ತುವರಿಯನ್ನು ತೆರವುಗೊಳಿಸುತ್ತಿರುವುದು ಸ್ವಾಗತಾರ್ಹ, ಈ ರೀತಿ ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಯಾವುದೇ ಮುಲಾಜಿಗೂ ಒಳಗಾಗದೆ, ಯಾರ್ಯಾರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಆ ಎಲ್ಲಾ ಜಾಗವನ್ನು ತೆರವುಗೊಳಿಸಬೇಕು ಎಂದ ಅವರು, ತಾರತಮ್ಯ ನೀತಿ ಅನುಸರಿಸಬಾರದು ಎಂದು ಪುರಸಭಾ ಅಧ್ಯಕ್ಷರನ್ನು ಕೃಷ್ಣಯ್ಯ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು, ಕಿಬ್ಬನಹಳ್ಳಿ ಮಹಾಲಿಂಗಯ್ಯ, ನಗರ ಘಟಕದ ಅಧ್ಯಕ್ಷ ಕೆ.ಜಿ.ಕೃಷ್ಣೇಗೌಡ, ಪರಿಶಿಷ್ಟ ಜಾತಿ ಘಟಕದ ಶಿವಕುಮಾರ್, ಸೇವಾದಳದ ಅಧ್ಯಕ್ಷ ಕಾಯಿ ನಾರಾಯಣಸ್ವಾಮಿ, ಸಿ.ಜಿ.ಚಂದ್ರಶೇಖರ್, ಮಲ್ಲೇಶ್ ಉಪಸ್ಥಿತರಿದ್ದರು.
No comments:
Post a Comment