ಚಿಕ್ಕನಾಯಕನಹಳ್ಳಿ,ಏ.26: ಲಿಂಗಾಯಿತ ಉಪಜಾತಿಗಳಾದ ಸಾದರ ಪಂಗಡಗಳನ್ನು ಹಿಂದುಳಿದ 2ಎ ಪ್ರಮಾಣ ಪತ್ರ ಕೊಟ್ಟಿರುವುದು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರ ಮೊಟಕುಗೊಳಿಸಿರುವುದನ್ನು ವಿರೋಧಿಸಿ ತುಮಕೂರಿನಲ್ಲಿ ಇದೇ 28ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಹಿಂದಾ ರಾಜ್ಯ ಸಂಚಾಲಕ ಚಿ.ಲಿಂ.ರವಿಕುಮಾರ್ ಕೋರಿದ್ದಾರೆ.
ಗ್ರಾಮ ಪಂಚಾಯ್ತಿ ಚುನಾವಣಾ ಹಿನ್ನೆಲೆಯಲ್ಲಿ ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹಿಂದುಳಿದ 2ಎ ಪ್ರಮಾಣ ಪತ್ರ ಕೊಡುವ ಮೂಲಕ ಮೀಸಲಾತಿ ಖೋಟಾವನ್ನು ದುರುಪಯೋಗ ಪಡಿಸಕೊಳ್ಳಲಾಗುತ್ತಿದೆ ಎಂದಿರುವ ಅವರು, ಅದೇ ರೀತಿ ಜಾತಿವಾರು ಜನಗಣತಿಯಂತಹ ಮಹತ್ವದ ಕೆಲಸವನ್ನು ಕೈಗೆತ್ತಿಕೊಳ್ಳಲು ಇಚ್ಚಾಶಕ್ತಿಯನ್ನು ತೋರಿಸುವಲ್ಲಿ ಹಿಂದೇಟು ಹಾಕುತ್ತಿರುವ ಬಿ.ಜೆ.ಪಿ.ಸಕರ್ಾರ, ಈಗ ಹಿಂದುಳಿದ ಆಯೋಗದ ಅಧಿಕಾರವನ್ನು ಮೊಟಕು ಗೊಳಿಸುವ ಆದೇಶವನ್ನು ಹೊರಡಿಸುವ ಮೂಲಕ ಹಿಂದುಳಿದ ವರ್ಗಗಳ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ, ಈ ಎಲ್ಲಾ ಅಂಶವನ್ನು ಖಂಡಿಸಿ ಹಾಗೂ ಸಕರ್ಾರಕ್ಕೆ ತನ್ನ ತಪ್ಪನ್ನು ಅರಿವು ಮಾಡಿಕೊಡುವ ಸಲುವಾಗಿ ಇದೇ 28ರ ಬುಧವಾರ ಬೆಳಿಗ್ಗೆ 11ಕ್ಕೆ ಪ್ರತಿಭಟನಾ ಮೆರವಣಿಗೆಯು ತುಮಕೂರಿನ ಟೌನ್ಹಾಲ್ ವೃತ್ತದಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಛೇರಿ ತಲುಪಲಿದ್ದು ಅಲ್ಲಿ ಧರಣಿ ನಡೆಸಲಾಗುವುದು ಆದ್ದರಿಂದ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಚಿ.ಲಿಂ.ರವಿಕುಮಾರ್ ಕೋರಿದ್ದಾರೆ.
No comments:
Post a Comment