ಚಿಕ್ಕನಾಯಕನಹಳ್ಳಿ,ಏ.2: ಪಟ್ಟಣದಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಕಳಪೆಗುಣಮಟ್ಟದ್ದಾಗಿದೆ ಎಂದು ವಿರೋಧ ಪಕ್ಷದ ಸದಸ್ಯರುಗಳಾದ ಬಾಬು ಸಾಹೇಬ್, ರೇಣುಕ ಗುರುಮೂತರ್ಿ ಹಾಗೂ ಧರಣಿ ಲಕ್ಕಪ್ಪ ಆರೋಪಿಸಿದರು.
ಪಟ್ಟಣದ ಪುರಸಭಾ ಕಾಯರ್ಾಲಯದಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿರೋಧ ಪಕ್ಷದವರು ಆಡಳಿತ ಪಕ್ಷದ ರೀತಿ ನೀತಿಗಳ ಬಗ್ಗೆ ಆಪೇಕ್ಷ ವ್ಯಕ್ತಪಡಿಸಿದರು.
2006-07ರಲ್ಲಿ ನೀಡಿದ ಕಾಮಗಾರಿಗಳು 2009-10ನೇ ಸಾಲಿನಲ್ಲಿ ಪೂರ್ಣಗೊಳ್ಳುತ್ತಿವೆ, ಮತ್ತು ಪುರಸಭೆಯಲ್ಲಿ ಕೊಂಡಿರುವ ವಿದ್ಯುತ್ ಉಪಕರಣಗಳು ಸೇರಿದಂತೆ ಯಂತ್ರೋಪಕರಣಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಆರೋಪಿಸಿದ ವಿರೋಧ ಪಕ್ಷದ ಸದಸ್ಯರು, ಮುಖ್ಯಾಧಿಕಾರಿಗಳು ಈ ಬಗ್ಗೆ ಗಮನ ನೀಡಿ ಸಾರ್ವಜನಿಕರ ಹಣ ಪೋಲಾಗದಂತೆ ನೋಡಿಕೊಳ್ಳಬೇಕೆಂದರು.
ಆಡಳಿತ ನಡೆಸುತ್ತಿರುವವರೆಲ್ಲಾ ಅವರವರ ಸ್ವಾರ್ಥಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ, ಪಟ್ಟಣದ ಕಸ ವಿಲೇವಾರಿಗೆ ತರಿಸಿರುವ ಹೊಸ ಜೆ.ಸಿ.ಬಿಯು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಹದಿಮೂರು ಲಕ್ಷದಷ್ಟು ದುಬಾರಿ ಹಣಕೊಟ್ಟು ತಂದಹ ಯಂತ್ರೋಪಕರಣ ತಂದ ಒಂದು ದಿನದಲ್ಲೇ ಕೆಟ್ಟಿದೆ ಎಂದರೆ ಅದು ಏನ್ನೆಷ್ಟು ಕಳಪೆ ಮಟ್ಟದ್ದಾಗಿರುಬಹುದು ಎಂದು ಆಕ್ಷೇಪಿಸಿದ ಬಾಬು ಸಾಹೇಬ್, ಈ ಯಂತ್ರ ಖರೀದಿಯಿಂದಾಗಿ ನಮ್ಮ ಪುರಸಭೆ ಸಾರ್ವಜನಿಕರಿಂದ ನಗೆಗೀಡಾಗಿದೆ ಎಂದರು.
ಇಡೀ ಪಟ್ಟಣವನ್ನೇಲ್ಲಾ ಸ್ವಚ್ಚಗೊಳಿಸುವ ಜನರಿಗೆ ತಮ್ಮ ಕೇರಿಯಲ್ಲೇ ಶೌಚಾಲಯವಿಲ್ಲದೆ, ಬಯಲನ್ನೇ ಶೌಚಾಲಯವನ್ನಾಗಿಸಿಕೊಂಡಿದ್ದಾರೆ ಎಂಬ ಲಕ್ಷ್ಮಯ್ಯನ ಆರೋಪಕ್ಕೆ, ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಉತ್ತರ ನೀಡುತ್ತಾ ಹರಿಜನ ಕಾಲೋನಿಗಳಲ್ಲಿ ಶೌಚಾಲಯ ನಿಮರ್ಿಸಲೆಂದೇ 5ಲಕ್ಷದ 80ಸಾವಿರ ರೂಗಳನ್ನು ಮೀಸಲಿಟ್ಟಿದ್ದು, ಕಾಲೋನಿಯಲ್ಲಿ ಸ್ವಂತಃ ಜಾಗ ಹೊಂದಿರುವರು ಶೌಚಾಲಯ ಕಟ್ಟಿಸಿಕೊಳ್ಳುವುದಾದರೆ ಪ್ರತಿ ಒಂದು ಮನೆಗೆ 10ಸಾವಿರದಂತೆ ಪುರಸಭೆ ವತಿಯಿಂದ ಹಣವನ್ನು ನೀಡುವುದಾಗಿ ತಿಳಿಸಿದರು ಹಾಗೂ ಕಾಲೋನಿಯಲ್ಲಿ ಪುರಸಭೆಯ ಜಾಗವಿದ್ದರೆ ಅಲ್ಲಿ ಸಾರ್ವಜನಿಕ ಶೌಚಾಲಯ ನಿಮರ್ಿಸುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ವಿದ್ಯುತ್ ಅಡಚಣೆಯಿಂದಾಗಿ ನೀರು ಸರಬರಾಜಿಗೆ ತೊಂದರೆಯಾಗಿದ್ದು, ಒಂದೇ ವಾರದಲ್ಲಿ 7 ಮೋಟರ್ಗಳು ಸುಟ್ಟು ಹೋಗಿರುವುದರಿಂದ ನೀರು ಸರಬರಾಜಿಗೆ ತೊಂದರೆಯಾಗುತ್ತಿದೆ ಎಂದ ಅಧ್ಯಕ್ಷರು, ಕಳೆದ 2ವರ್ಷದಿಂದ ಲೈಟ್ಕಂಬಗಳು ಡ್ಯಾಮೇಜ್ ಆಗಿದ್ದು ಅದನ್ನು ಸರಿಪಡಿಸಲು ತಿಳಿಸಿದರೂ ಸಹ ಆ ಬಗ್ಗೆ ಬೆಸ್ಕಾಂನವರು ಗಮನ ನೀಡಿಲ್ಲ, ದಬ್ಬೇಘಟ್ಟದಲ್ಲಿ ಟಿ.ಸಿ.ಕೆಟ್ಟುಹೋಗಿದ್ದು ಅದನ್ನು ತುತರ್ಾಗಿ ಸರಿಪಡಿಸಲು ಸಭೆಗೆ ಆಗಮಿಸಿದ್ದ ಬೆಸ್ಕಾಂ ಅಧಿಕಾರಿ ಜಯಶಂಕರ್ರವರಿಗೆ ಸೂಚಿಸಿದರು.
ಪಟ್ಟಣದ ಸ್ವಚ್ಛತೆಯೂ ಸೇರಿದಂತೆ ಹಲವು ಕಾರ್ಯಗಳಿಗೆ ಅಗತ್ಯವಿರುವ 2 ಟ್ರ್ಯಾಕ್ಟರ್ ಹಾಗೂ ಶೌಚಾಲಯ ಸ್ವಚ್ಚಗೊಳಿಸುವ ಯಂತ್ರ ಮತ್ತು ನಿರಾಶ್ರಿತರಿಗೆ ಜಮೀನನ್ನು ವಿತರಿಸುವುದರ ಬಗ್ಗೆ ಚಚರ್ಿಸಲು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ನಿಯೋಗದಲ್ಲಿ ತೆರಳುವುದಾಗಿ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ರುಕ್ಮಿಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಸೇರಿದಂತೆ ಪುರಸಭಾ ಸದಸ್ಯರು, ಮುಖ್ಯಾಧಿಕಾರಿ ಪಿ.ಸಿದ್ದಮೂತರ್ಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಾಸಲಿನಲ್ಲಿ ಜನಸ್ಪಂದನ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಏ.2: ತಾಲೂಕಿನ ಸಾಸಲು ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಇದೇ 3ರ ಶನಿವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಸಾಸಲು ಗ್ರಾಮದ ಸಕರ್ಾರಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಬೇಕೆಂದು ಕೋರಿ ಕೊಂಡಿರುವ ತಹಶೀಲ್ದಾರ್ ರವರು, ಈ ಭಾಗದ ಗ್ರಾಮಸ್ಥರು ತಮ್ಮ ಕುಂದುಕೊರತೆಗಳ ಬಗ್ಗೆ ಅಜರ್ಿ ನೀಡುವ ಮೂಲಕ ತಿಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ತೀರ್ಥರಾಮೇಶ್ವರನ ರಥೋತ್ಸವ
ಚಿಕ್ಕನಾಯಕನಹಳ್ಳಿ,ಏ.2: ಪುಣ್ಯ ಕ್ಷೇತ್ರ ಶೀ ತೀರ್ಥರಾಮೇಶ್ವರ ಸ್ವಾಮಿಯವರ ರಥೋತ್ಸವವು ಯರೇಕಟ್ಟೆ ವಜ್ರ ಪುಣ್ಯಕ್ಷೇತ್ರದಲ್ಲಿ ಇದೇ 4ರ ಭಾನುವಾರ ದಿಂದ 9ರ ಶುಕ್ರವಾರದವರೆಗೆ ವೈಭವಯುತವಾಗಿ ನಡೆಯಲಿದೆ ಎಂದು ಕನ್ವೀನರ್ ಟಿ.ಎಂ.ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಏ.4ರಂದು ಧ್ವಜಾರೋಹಣ, ಗಂಗಾಪೂಜೆ, ಕುಂಭಾಬಿಷೇಕ, ಹೋಮ ಕಾರ್ಯಕ್ರಮಗಳು ನಡೆಯಲಿದ್ದು, 5ರಂದು ನವಗ್ರಹ ಪೂಜೆ, ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಏರ್ಪಡಿಸಲಾಗಿದೆ, 6ರಂದು ತೀರ್ಥರಾಮೇಶ್ವರನ ಪಲ್ಲಕ್ಕಿ ಉತ್ಸವ ತೀರ್ಥಪುರಕ್ಕೆ ಆಗಮನ, 7ರಂದು ಗ್ರಾಮ ಶಾಂತಿಗಾಗಿ ನವಗ್ರಹ ಪೂಜೆ ಹಾಗೂ ಪುಷ್ಪ ಮಂಟಪದ ಉತ್ಸವ, 8ರಂದು ಸ್ವಾಮಿಯವರನ್ನು ಯರೇಕಟ್ಟೆ ಗ್ರಾಮಕ್ಕೆ ಪುಷ್ಪ ಮಂಟಪದಲ್ಲಿ ಕರೆತರುವುದು, 9ರಂದು ದೊಡ್ಡರಾಂಪುರದಲ್ಲಿ ಸ್ವಾಮಿಯವರ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
No comments:
Post a Comment