ಮತಪೆಟ್ಟಿಗೆಗಳಿದ್ದ ಭದ್ರತಾಕೊಠಡಿಗೆ ನಿಯೋಜನೆಗೊಂಡಿದ್ದ ಎ.ಎಸೈ.ಸಾವು
ಚಿಕ್ಕನಾಯಕನಹಳ್ಳಿ,ಮೇ.9: ಮತಪೆಟ್ಟಿಗೆ ಇಟ್ಟಿದ್ದ ಭದ್ರತಾ ಕೊಠಡಿಯನ್ನು ಕಾಯಲು ನಿಯೋಜಿಸಿದ್ದ ಹುಳಿಯಾರು ಎ.ಎಸೈ. ಈರಮರಿಯಪ್ಪ(55) ಕರ್ತವ್ಯ ನಿರ್ವಹಿಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ತಾಲೂಕಿನ ಗ್ರಾ.ಪಂ. ಚುನಾವಣೆಯ ಮತಪೆಟ್ಟಿಗೆಯನ್ನು ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಈಡಲಾಗಿತ್ತು, ಇದರ ಭದ್ರತಾ ವ್ಯವಸ್ಥೆಗಾಗಿ ಹುಳಿಯಾರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹುಳಿಯಾರಿನ ಎಸೈ.ಪಾವತಮ್ಮ ಹಾಗೂ ಎ.ಎಸೈ.ಈರಮರಿಯಪ್ಪನವರು ಭಾನುವಾರ ಭದ್ರತಾ ಕೊಠಡಿಯಲ್ಲಿದ್ದರು, ಬೆಳಗಿನ 9ರ ಸುಮಾರಿಗೆ ಈರಮರಿಯಪ್ಪನವರು ಹೃದಯಾಘಾತದಿಂದ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ನೀಡುವ ಮೊದಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಡಿ.ವೈ.ಎಸ್.ಪಿ. ಶಿವರುದ್ರಸ್ವಾಮಿ, ವೃತ್ತ ನಿರೀಕ್ಷಕ ಪಿ.ರವಿಪ್ರಸಾದ್ ಆಸ್ಪತ್ರೆಗೆ ಆಗಮಿಸಿ ಕಳೆ ಬರಹವನ್ನು ಈರ ಮರಿಯಪ್ಪನವರ ಸ್ವಂತಃ ಸ್ಥಳವಾದ ಶಿರಾ ತಾಲೂಕಿನ ರತ್ನಸಂದ್ರಕ್ಕೆ ಕಳುಹಿಸಿದರು. ಇವರು ಇಲಾಖೆಯಲ್ಲಿ 33 ವರ್ಷ ಸೇವೆಸಲ್ಲಿಸಿದ್ದರು. ಪತ್ನಿ, ಮಕ್ಕಳು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.
ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷರಿಗೆ ಮಾತೃ ವಿಯೋಗ
ಚಿಕ್ಕನಾಯಕನಹಳ್ಳಿ,ಮೇ.9: ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ, ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಿ.ಟಿ.ವರದರಾಜು ರವರ ತಾಯಿ ನಾಗಮ್ಮ(72) ಸಾವನ್ನಪಿದ್ದಾರೆ.
ತಾಲೂಕು ದೇವಾಂಗ ಸಂಘದ ಮಾಜಿ ಅಧ್ಯಕ್ಷರಾದ ಕೆ.ಟಿ.ತಿಮ್ಮರಾಯಪ್ಪನವರ ಪತ್ನಿ ನಾಗಮ್ಮನವರು ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ.
ಇವರಿಗೆ ನಾಲ್ಕು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ನಾಲ್ಕು ಗಂಡು ಮಕ್ಕಳಲ್ಲಿ ಸಿ.ಟಿ.ವರದರಾಜು ಹಿರಿಯ ಮಗನಾದರೆ, ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿರುವ ಸಿ.ಟಿ.ಕೋದಂಡರಾಮಯ್ಯ, ಬಾದಮಿ ಬನಶಂಕರಿ ಹಾಡರ್್ವೇರ್ನ ಮಾಲೀಕ ಸಿ.ಟಿ.ಪಾಂಡುರಾಜ್ ಹಾಗೂ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ರೈಸ್ ಮೀಲನ ಮಾಲೀಕ ಸಿ.ಟಿ.ಜಗಧೀಶ್ ಸೇರಿದಂತೆ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ತಾಲೂಕು ದೇವಾಂಗ ಸಂಘ, ಪಟ್ಟಣದ ಬಯಲಾಟ ಕಲಾವಿದರ ಸಂಘವೂ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ದರ್ಶನ ಪಡೆದರು.
ಬಹುತೇಕ ಶಾಂತ ಸ್ಥಿತಿ: ಶೇ.85 ರಷ್ಟು ಮತದಾನ
ಚಿಕ್ಕನಾಯಕನಹಳ್ಳಿ,ಮೇ.9: ತಾಲೂಕಿನ ಗ್ರಾಮ ಪಂಚಾಯ್ತಿ ಮತದಾನದ ಸಂದರ್ಭದಲ್ಲಿ ಸಣ್ಣ ಪುಟ್ಟ ಗಲಾಟೆಗಳು, ಲಘು ಲಾಠಿ ಪ್ರಹಾರ, ಮತ ಕೇಂದ್ರ ಒಂದರಲ್ಲಿ ಬ್ಯಾಲೇಟ್ ಪೇಪರ್ ಹರಿದು ಹಾಕಿರುವುದು ಬಿಟ್ಟರೆ ಬಹುತೇಕ ಶಾಂತವಾಗಿ ನಡೆದಿದೆ. ತಾಲೂಕಿನಲ್ಲಿ ಒಟ್ಟು ಶೇ.85 ಮತದಾನ ನಡೆದಿದೆ.
ತಾಲೂಕಿನ 28 ಗ್ರಾ.ಪಂ.ಗಳಲ್ಲಿ 484 ಸ್ಥಾನಗಳಿಗೆ 1527 ಅಬ್ಯಾಥರ್ಿಗಳು ಅದೃಷ್ಟ ಪರೀಕ್ಷೆಗೆ ಒಡ್ಡಿದ್ದ ಈ ಚುನಾವಣೆ, ಬಹುತೇಕ ಗ್ರಾಮೀಣ ಜನರ ಕುತೂಹಲಕ್ಕೆ ಕಾರಣವಾಗಿದೆ. ಬೆಳಗಿನಿಂದಲೇ ಚುರುಕುಗೊಂಡಿದ್ದ ಇಲ್ಲಿನ ಮತದಾರರು ಮಧ್ಯಾಹ್ನ 12ರವೇಳೆಗೆ ಶೇ.60ರಷ್ಟು ಮತದಾನವನ್ನು ಪೂರ್ಣಗೊಳಿಸಿದ್ದರು.
ಪತ್ರಿಕೆ ತಾಲೂಕಿನ ಹಲವು ಮತಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದ ಹಲವು ವಿಷಯಗಳ ಪೈಕಿ ಕಾತ್ರಿಕೆಹಾಳ್ನಲ್ಲಿ ಮತದಾರರ ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಸಹಿ ಹಾಕಿಸಿತ್ತಾ ಕೂತರೆ ತಡೆವಾಗುತ್ತದೆ ಎಂಬ ನಿಲುವಿನಿಂದ ಅಲ್ಲಿನ ಪಿ.ಆರ್.ಓ. ಮತದಾರರ ಹೆಬ್ಬೆಟ್ಟಿನ ಗುರ್ತನ್ನು ಹಾಕಿಸಿಕೊಳ್ಳುತ್ತಿದ್ದರು, ರಾಮನಹಳ್ಳಿಯಲ್ಲಿ ಸುವರ್ಣಮ್ಮ ಎಂಬ ವಯೋವೃದ್ದಿಯನ್ನು ಮತಕೇಂದ್ರಕ್ಕೆ ಕರೆದುಕೊಂಡು ಬಂದ ಫಾಲಾಕ್ಷಯ್ಯ ಎಂಬವರು, ಪಿ.ಆರ್.ಓ ಜೊತೆ ಅನುಚಿತವಾಗಿ ವತರ್ಿಸಿ, ವಾಗ್ವಾದಕ್ಕೆ ಇಳಿದ ಸಂದರ್ಭದಲ್ಲಿ ಮತಪತ್ರವನ್ನೇ ಹರಿದು ಹಾಕಿರುವ ಘಟನೆ ವರದಿಯಾಗಿದೆ, ತಿಮ್ಮನಹಳ್ಳಿಯ ಬ್ಲಾಕ್ ಎರಡರಲ್ಲಿ ಮತಗಟ್ಟೆ ಅಧಿಕಾರಿಗಳು ಮಧ್ಯಾಹ್ನ ಊಟಕ್ಕಾಗಿ ಮತಕೇಂದ್ರದ ಬಾಗಿಲು ಮುಚ್ಚಿ ಊಟ ಮುಗಿಸಿಕೊಂಡ ನಂತರ ಮತದಾನದ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ತಿಮ್ಮನಹಳ್ಳಿಯ ಬ್ಲಾಕ್ 1 ಮತ್ತು 2 ಮತ ಕೇಂದ್ರವಿದ್ದ ಸ.ಮಾ.ಹಿ.ಪ್ರಾ.ಶಾಲೆಯ ಒಳಗೆ ಗುಂಪೊಂದು ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಜನರನ್ನು ಚದುರಿಸಲು ಲಘುಲಾಠಿ ಪ್ರಹಾರ ನಡೆಸಿದ್ದಾರೆ, ಹಾಲುಗೊಣ, ಗೌರಸಾಗರ, ಮುದ್ದೇನಹಳ್ಳಿ, ಬಂಗಾರಗೆರೆ,ಮೇಲನಹಳ್ಳಿ, ಅಣೇಕಟ್ಟೆ, ಅರಳೀಕೆರೆ, ದಿಬ್ಬದಹಳ್ಳಿಗಳಲ್ಲಿ ಮತದಾರ ಸಂಖ್ಯೆ ಹೆಚ್ಚಿದ್ದರಿಂದ ಕೆಲ ಸಮಯ ಗೊಂದಲವೇರ್ಪಟಿದ್ದು ಬಿಟ್ಟರೆ ಬಹುತೇಕ ಶಾಂತವಾಗಿ ಮತದಾನ ನಡೆದಿದೆ.
ಕಾತ್ರಿಕೆಹಾಳ್ನ ನಾಗಯ್ಯನ ಸಾವಿಗೆ ಕಾರಣವೇನು ?: ಕಾತ್ರೆಕೆಹಾಳ್ನ ನಾಯಕರ ನಾಗಯ್ಯ ಚುನಾವಣೆಯ ಮದ್ಯ ಕುಡಿದು ಬಾಯಿ, ಮೂಗಿನಲ್ಲಿ ರಕ್ತಕಾರಿಕೊಂಡು ಸಾವನ್ನಪ್ಪಿದ್ದಾನೆ, ಮೃತ ದೇಹವನ್ನು ಸುಡಲಾಗಿದೆ. ಇದರಿಂದ ಇಲ್ಲಿನ ಕೆಲವು ಜನರು ನಕಲಿ ಮದ್ಯದಿಂದ ನಾಗಯ್ಯ ಸಾವನ್ನಪ್ಪಿದ್ದಾನೆ ಎಂದರೆ, ಇನ್ನೂ ಕೆಲವು ಜನ ಆತ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ ಎನ್ನುತ್ತಾರೆ. ಸರಿಯಾದ ಕಾರಣ ತಿಳಿಯಬೇಕಾಗಿದ್ದರೆ ಶವ ಪರೀಕ್ಷೆ ಮಾಡಿಸಿದ್ದರೆ ಸ್ಪಷ್ಟ ಕಾರಣ ತಿಳಿಯುವುದು ಆದರೆ ಹಾಗಾಗದೆ ಶವಕ್ಕೆ ಅಗ್ನಿ ಸ್ಪರ್ಶ ಮಾಡಿದ್ದರಿಂದ ಈ ಸಾವು ಚಚರ್ೆಗೆ ಗ್ರಾಸವಾಗಿದೆ.
ಬಿ.ಸಿ.ಎಂ. ವಸತಿ ನಿಲಯಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.08: ತಾಲೂಕಿನಲ್ಲಿರುವ ಬಿ.ಸಿ.ಎಂ ವಿದ್ಯಾಥರ್ಿ ನಿಲಯಗಳಿಗೆ 2010-11ನೇ ಸಾಲಿನ ಪ್ರವೇಶಕ್ಕಾಗಿ ಆಸಕ್ತಿಯುಳ್ಳ ವಿದ್ಯಾಥರ್ಿಗಳಿಂದ ಅಜರ್ಿಯನ್ನು ಆಹ್ವಾನಿಸಲಾಗಿದೆ ಎಂದು ಪ್ರಭಾರ ತಾಲೂಕು ಕಾರ್ಯನಿರ್ವಹಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ಟೌನ್, ಹುಳಿಯಾರು, ತಿಮ್ಮನಹಳ್ಳಿ, ಕಂದಿಕೆರೆ, ಹೊಯ್ಸಳಕಟ್ಟೆ, ಬೆಳುಗುಲಿ ಮೆಟ್ರಿಕ್ ಪೂರ್ವ ಬಾಲಕರ ಅನುದಾನಿತ ವಿದ್ಯಾಥರ್ಿ ನಿಲಯಗಳಲ್ಲಿ ಅಜರ್ಿಗಳನ್ನು ಆಹ್ವಾನಿಸಿದ್ದು ಅಜರ್ಿಯನ್ನು ಸಂಬಂದಿಸಿದ ವಿದ್ಯಾಥರ್ಿ ನಿಲಯದ ಮೇಲ್ವಿಚಾರಕರುಗಳಿಂದ ಪಡೆದು ಜೂನ್ 10ರ ಸಂಜೆ 5ಗಂಟೆಯೊಳಗೆ ಮೇಲ್ವಿಚಾರಕರುಗಳಿಗೆ ಸಲ್ಲಿಸುವುದು.
ಅಜರ್ಿಸಲ್ಲಿಸುವವರು ಸಕರ್ಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ 5ರಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಮಾತ್ರ ಈ ಪ್ರವೇಶ ಕಲ್ಪಿಸಲಾಗಿದ್ದು ಉಚಿತ ಊಟ, ಸಮವಸ್ತ್ರ, ಲೇಖನ ಸಾಮಗ್ರಿ, ಹಾಸಿಗೆಹೊದಿಕೆ, ನುರಿತ ಅಧ್ಯಾಪಕರಿಂದ ಟ್ಯೂಶನ್ ನೀಡಲಾಗುವುದು ಮತ್ತು ಅನುದಾನಿತ ವಿದ್ಯಾಥರ್ಿನಿಲಯಗಳಲ್ಲಿ ಉಚಿತ ಊಟ, ವಸತಿ ಮಾತ್ರ ನೀಡಲಾಗುತ್ತದೆ. ಮತ್ತು ಸೇರ ಬಯಸುವ ವಿದ್ಯಾಥರ್ಿಗಳು ತಮ್ಮ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರವರ್ಗ 11ಎ, 11ಬಿ, 111ಎ, 111ಬಿ ಗುಂಪಿಗೆ ಸೇರಿದ ವಿದ್ಯಾಥರ್ಿಗಳಿಗೆ ವಾಷರ್ಿಕ ರೂ 15000ಸಾವಿರ ಆದಾಯ ಮಿತಿ ಇದ್ದು ಪ್ರವರ್ಗ1 ಹಾಗೂ ಪರಿಶಿಷ್ಠ ಜಾತಿ, ಪಂಗಡದ ವಿದ್ಯಾಥರ್ಿಗಳಿಗೆ ಆದಾಯ ಮಿತಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.
No comments:
Post a Comment