10 ಗ್ರಾ.ಪಂ.ಗಳಿಗೆ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆ
ಚಿಕ್ಕನಾಯಕನಹಳ್ಳಿ,ಜೂ.24: ತಾಲೂಕಿನ 28 ಗ್ರಾ.ಪಂ.ಗಳ ಪೈಕಿ 10 ಗ್ರಾ.ಪಂಗಳಿಗೆ ಮೊದಲ ದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯಿಗೆ ಚಾಲನೆ ನೀಡಿದೆ.
ಗ್ರಾ.ಪಂ. ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯರುಗಳು ರಾಜೀಸೂತ್ರಕ್ಕೆ ಮೊರೆಹೋಗಿದ್ದು, ಬಹುತೇಕ ಕಡೆ ಜೆ.ಡಿ.ಎಸ್. ಬಿ.ಜೆ.ಪಿ. ಜೆ.ಡಿ.ಯು. ಬೆಂಬಲಿತರಿಗೆ ಅಧಿಕಾರಕ್ಕಾಗಿ ಹೊಂದಾಣಿಕೆ ಅನಿವಾರ್ಯವಾಗಿದೆ.
ಜೆ.ಡಿ.ಎಸ್. ಸ್ವತಂತ್ರವಾಗಿ ಕೆಲವು ಕಡೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದರೆ, ಜೆ.ಡಿ.ಯು ಒಂದು ಕಡೆ ಸ್ವತಂತ್ರವಾಗಿ ಆಯ್ಕೆಯಾಗಿದೆ, ಬಿ.ಜೆ.ಪಿ. ಮಾತ್ರ ಜೆ.ಡಿ.ಎಸ್.ನ ಜೊತೆ ಬಹುತೇಕ ಕಡೆ ಸಹೋದರತೆ ಮೆರೆದಿದೆ.
ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಕುಶಾಲ, ಉಪಾಧ್ಯಕ್ಷರಾಗಿ ಗಂಗಾಧರ್, ಚೌಳಕಟ್ಟೆ ಗ್ರಾ.ಪಂ.ಯಲ್ಲಿ ಅಧ್ಯಕ್ಷರಾಗಿ ಮಂಜುಳ, ಉಪಾಧ್ಯಕ್ಷರಾಗಿ ಸಿ.ಎಂ.ಶಶಿಕಲಾ, ದಸೂಡಿ ಗ್ರಾ.ಪಂ. ಅಧ್ಯಕ್ಷರಾಗಿ ರೇಣುಕಮ್ಮ, ಉಪಾಧ್ಯಕ್ಷರಾಗಿ ಪ್ರಕಾಶ್, ಶೆಟ್ಟೀಕೆರೆ ಗ್ರಾ.ಪಂ. ಅಧ್ಯಕ್ಷ ಶಶಿಧರ್ ಉಪಾಧ್ಯಕ್ಷೆ ರಂಗಮ್ಮ, ದುಗಡಿಹಳ್ಳಿ ವೀಣಾ ಉಪಾಧ್ಯಕ್ಷ ದಯಾನಂದ, ಕೆಂಕೆರೆ ಗ್ರಾ.ಪಂ. ಅಧ್ಯಕ್ಷ ತೋನಿ ಗೌಡಯ್ಯ ಉಪಾಧ್ಯಕ್ಷೆ ನೇತ್ರಾವತಿ, ಬರಕನಾಳ್ ಗ್ರಾ.ಪಂ. ರಮೇಶ್ ಉಪಾಧ್ಯಕ್ಷೆ ಮಂಜುಳ, ತಿಮ್ಲಾಪುರ ಗ್ರಾ.ಪಂ. ಅಧ್ಯಕ್ಷರಾಗಿ ಶ್ರೀದೇವಿ ಉಪಾಧ್ಯಕ್ಷರಾಗಿ ರಾಜಮ್ಮ, ಕೋರಗೆರೆ ಗ್ರಾ.ಪಂ.ಅಧ್ಯಕ್ಷ ಯತೀಶ್ ಉಪಾಧ್ಯಕ್ಷ ಗಂಗಣ್ಣ, ದೊಡ್ಡಬಿದರೆ ಗ್ರಾ.ಪಂ. ಇಂದ್ರಮ್ಮ ಉಪಾಧ್ಯಕ್ಷ ಅರುಣ್ಕುಮಾರ್ ಆಯ್ಕೆಯಾಗಿದ್ದಾರೆ
ಬರಕನಾಳ್ನಲ್ಲಿ ಕೆಲವು ಕಾಲ ಜಡಿ ಮಳೆಯ ನಡುವೆಯೂ ಬಿಸಿ ವಾತಾವರಣ ಉಂಟಾಗಿದ್ದು ಬಿಟ್ಟರೆ ಉಳಿದೆಲ್ಲಾ ಕಡೆ ಚುನಾವಣೆ ಶಾಂತಯುತವಾಗಿ ನಡೆದಿದೆ.
ಜೂನ್ 25ರ ಶುಕ್ರವಾರ(ಇಂದು) 9 ಗ್ರಾ.ಪಂ.ಗಳಿಗೆ ಚುನಾವಣೆ
ಹೊಯ್ಸಳ ಕಟ್ಟೆ ಗ್ರಾ.ಪಂ. ಚುನಾವಣಾಧಿಕಾರಿ ಇ.ಓ. ಡಾ.ವೇದಮೂತರ್ಿ, ಹುಳಿಯಾರು ಗ್ರಾ.ಪಂ. ಚುನಾವಣಾಧಿಕಾರಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಯಳನಡು ಗ್ರಾ.ಪಂ. ತೋಟಗಾರಿಕೆ ಅಧಿಕಾರಿ ಕೃಷ್ಣಪ್ಪ, ದೊಡ್ಡೇಣ್ಣೆಗೆರೆ ಗ್ರಾ.ಪಂ. ಎ.ಇ.ಇ.(ಜಿ.ಪಂ.) ಮಲ್ಲೇಶಯ್ಯ, ತಿಮ್ಮನಹಳ್ಳಿ ಗ್ರಾ.ಪಂ. ಎ.ಇ.ಇ. ಭಾಸ್ಕರಾಚಾರ್ಯ, ಕಂದಿಕೆರೆ ಗ್ರಾ.ಪಂ. ಕೃಷಿ ಅಧಿಕಾರಿ ರಂಗಸ್ವಾಮಿ, ಮತ್ತಿಘಟ್ಟ ಗ್ರಾ.ಪಂ. ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ, ಕೋರಗೆರೆ ಗ್ರಾ.ಪಂ. ಮೀನುಗಾರಿಕೆ ಎ.ಡಿ, ಉಮೇಶ್, ಮುದ್ದೇನಹಳ್ಳಿ ಗ್ರಾ.ಪಂ. ಸಿ.ಡಿ.ಪಿ.ಓ, ಅನೀಸ್ ಖೈಸರ್
ಮರುಮೌಲ್ಯಮಾಪನದಿಂದಾಗಿ ಬಡಕೆಗುಡ್ಲು ಶಾಲೆ ಫಲಿತಾಂಶ ಶೇ.100
ಚಿಕ್ಕನಾಯಕನಹಳ್ಳಿ,ಜು.24: ತಾಲೂಕಿನ ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆಗೆ ಶೇ.100ರ ಫಲಿತಾಂಶ ಲಭಿಸಿದೆ, ಅನುತೀರ್ಣಗೊಂಡಿದ್ದ ವಿದ್ಯಾಥರ್ಿಯೊಬ್ಬರು ಮರು ಮೌಲ್ಯಮಾಪನದಲ್ಲಿ ಉತ್ತೀರ್ಣಗೊಂಡಿದ್ದಾರೆ.
ಬಡಕೆಗುಡ್ಲು ಜಿ.ಎಚ್.ಎಸ್.ನ ಒಟ್ಟು ವಿದ್ಯಾಥರ್ಿಗಳು 22 ಇದ್ದು ಇದರಲ್ಲಿ 21 ವಿದ್ಯಾಥರ್ಿಗಳು ಮೇ ನಲ್ಲಿ ಬಂದ ಫಲಿತಾಂಶದಲ್ಲಿ ಉತ್ತೀರ್ಣಗೊಂಡಿದ್ದರು ಇದರಿಂದಾಗಿ ಶಾಲೆ ಫಲಿತಾಂಶ ಶೇ.96 ಆಗಿತ್ತು, ಅನುತ್ತೀರ್ಣಗೊಂಡಿದ್ದ ಒಬ್ಬಾಕೆ ಮರು ಮೌಲ್ಯಮಾಪನಕ್ಕೆ ಮೊರೆಹೋಗಿದ್ದರು, ಈಗ ಆಕೆಯು ಉತ್ತೀರ್ಣಗೊಂಡಿರುವುದರಿಂದ ಶಾಲೆಯ ಫಲಿತಾಂಶ ಶೇ.100 ಮುಟ್ಟಿದೆ.
ಶಾಲೆಯ ಎಸ್.ಡಿ.ಎಂ.ಸಿ. ಹಾಗೂ ಪೋಷಕರು ಶಾಲೆಯ ಎಚ್.ಎಂ. ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ.
No comments:
Post a Comment