Tuesday, June 1, 2010

ಅನೂಹ್ಯ ಸಂಸ್ಥೆಯಿಂದ ಪಿ.ಸಿ.ಹುದ್ದೆಗೆ ಉಚಿತ ತರಬೇತಿ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ಜೂ.01: ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗೆ ಅಜರ್ಿ ಸಲ್ಲಿಸಿರುವ ಅಭ್ಯಥರ್ಿಗಳಿಗೆ ದೇಹದಾಡ್ರ್ಯತೆ ಹಾಗೂ ಲಿಖಿತ ಪರೀಕ್ಷೆಗೆ ಉಚಿತ ತರಬೇತಿಯನ್ನು ಅನೂಹ್ಯ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧಸ್ವಾಮಿ ತಿಳಿಸಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು.
ತರಬೇತಿಯನ್ನು ಪುರುಷ ಮತ್ತು ಮಹಿಳಾ ಅಭ್ಯಥರ್ಿಗಳಿಗೆ ನೀಡಲಿದ್ದು, ಪಾಲ್ಗೊಳ್ಳುವ ಅಭ್ಯಥರ್ಿಗಳು ಜೂನ್ 7ರಒಳಗೆ ಕಾನ್ಸ್ಟೇಬಲ್ ಹುದ್ದೆಗೆ ಸಲ್ಲಿಸಿರುವ ಅಜರ್ಿಯ ಪ್ರತಿಯೊಂದಿಗೆ ನವೋದಯ ಕಾಲೇಜಿನಲ್ಲಿ ಹೆಸರು ನೊಂದಾಯಿಸಬೇಕು ಮತ್ತು ತರಬೇತಿಗೆ ದೈಹಿಕವಾಗಿ, ವೈದ್ಯಕೀಯವಾಗಿ ಸೂಕ್ತವಾದವರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದ ಅವರು, ಆಯ್ಕೆಯಾದವರಿಗೆ 15ದಿನಗಳ ಕಾಲ ತರಬೇತಿ ನೀಡಲಾಗುವುದು, ಈ ತರಬೇತಿಯಲ್ಲಿ 1ಮೈಲಿ ಓಟ, ದೂರಜಿಗಿತ, ಎತ್ತರ ಜಿಗಿತ, ಪುಷ್ಅಪ್, ಪುಲಪ್ಸ್ ಹಾಗೂ ಗುಂಡು ಎಸೆತವನ್ನು ಇಬ್ಬರು ಮಿಲ್ಟ್ರಿ ಅಧಿಕಾರಿಗಳಿಂದ ಉಚಿತವಾಗಿ ಅಭ್ಯಥರ್ಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದರು.
ತರಬೇತಿಯ ಅವಧಿಯಲ್ಲಿ ಮಧ್ಯಾಹ್ನದ ಉಪಹಾರವನ್ನು ಸಂಸ್ಥೆಯಿಂದಲೇ ನೀಡಲಾಗುವುದು, ಅಭ್ಯಥರ್ಿಗಳು ತಮ್ಮ ವಸತಿಯನ್ನು ವ್ಯವಸ್ಥೆಮಾಡಿಕೊಳ್ಳಬೇಕು ಎಂದರು.
ಸಕರ್ಾರ ನಡೆಸುವ ದೇಹದಾಡ್ರ್ಯತೆ ತರಬೇತಿಯಲ್ಲಿ ಆಯ್ಕೆಯಾದವರಿಗೆ ಲಿಖಿತ ಪರೀಕ್ಷೆಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ ಎಂದರು, ಅನೂಹ್ಯ ಟ್ರಸ್ಟ್ ವತಿಯಿಂದ ಖಾಸಗಿ ಭದ್ರತಾ ಸಿಬ್ಬಂದಿಗಳ ನೇಮಕಾತಿ ಏಜೆನ್ಸಿಯನ್ನು ತಾಲೂಕಿನಲ್ಲಿ ತೆರೆದು ಅದರಿಂದ ಗ್ರಾಮೀಣ ಯುವಕರಿಗೆ ಉದ್ಯೋಗದ ಭದ್ರತೆಯನ್ನು ಒದಗಿಸುವುದಾಗಿ ತಿಳಿಸಿದರು. ಈ ಸಂಸ್ಥೆಯಿಂದ 4500 ಕಾಲೇಜುಗಳಿಗೆ ಪರಿಸರ ವಾತಾವರಣದ ಅಭಿವೃದ್ದಿಗೆ ಸಹಾಯವನ್ನು ನೀಡುವುದು ಮತ್ತು ಕಾಲೇಜಿನ ಕ್ರೀಡೆ, ಸಂಸ್ಕೃತಿಗಳಿಗೆ ಸಹಾಯನೀಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಅನೂಹ್ಯ ಟ್ರಸ್ಟ್ ದೋಷ ಮುಕ್ತ: ಅನೂಹ್ಯ ಟ್ರಸ್ಟ್ ಆಲದಕಟ್ಟೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಅನೂಹ್ಯ ರಕ್ಷಣಾ ಮತ್ತು ಸಹಾಯಕ ಸೇವೆಗಳ ನೇಮಕಾತಿ ಪೂರ್ವ ತರಬೇತಿ ಮತ್ತು ಅಧ್ಯಯನ ಸಂಸ್ಥೆಯ ವಿರುದ್ದ ಸಲ್ಲಿಸಲಾಗಿದ್ದ ಅಜರ್ಿಯನ್ನು ಕನರ್ಾಟಕ ರಾಜ್ಯದ ಉಚ್ಚ ನ್ಯಾಯಾಲಯವು ತಿರಸ್ಕರಿಸಿದ್ದು ಸದ್ಯದಲ್ಲೇ ತರಬೇತಿ ಕೇಂದ್ರದ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮ್ಯಾನೇಜಿಂಗ್ ಟ್ರಸ್ಟೀ ಎಚ್.ಕೆ.ಬಾಲಸೂರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅನೂಹ್ಯ ಟ್ರಸ್ಟೀ ಮ್ಯಾನೇಜಿಂಗ್ ಟ್ರಸ್ಟೀ ಹೆಚ್.ಕೆ ಬಾಲಸೂರಿ, ಎಸ್.ಎ.ನಭಿ, ಉಪಸ್ಥಿತರಿದ್ದರು.

No comments:

Post a Comment