ಆಶಾ ಕಾರ್ಯಕರ್ತರನ್ನು ಸಕರ್ಾರಿ ನೌಕರರೆಂದು ಪರಿಗಣಿಸಲು ಒತ್ತಾಯ
ಚಿಕ್ಕನಾಯಕನಹಳ್ಳಿ,ಜೂ.18: ಆಶಾ ಕಾರ್ಯಕರ್ತರ ಸೇವೆಗೆ ತಕ್ಕಂತೆ ಪ್ರೋತ್ಸಾಹ ಧನ ನೀಡುವುದು ತುಂಬಾ ಕಡಿಮೆಯಾಗಿದ್ದು ಅದನ್ನು ಕೊಡಲು ಸಹ ವಿಳಂಬಾಗುತ್ತಿದೆ ಮತ್ತು ಆಶಾ ಕಾರ್ಯಕತೆರ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯವು ನಿಲ್ಲಬೇಕು ಎಂದು ರಾಜ್ಯ ಆಶಾ ಕಾರ್ಯಕರ್ತರ ನಾಯಕ ಕಾಂ.ಎನ್.ಶಿವಣ್ಣ ಒತ್ತಾಯಿಸಿದರು.
ಪಟ್ಟಣದ ಸಿವಿಲ್ ಬಸ್ನಿಲ್ದಾಣದಿಂದ ತಾಲೂಕು ಕಛೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮಾತನಾಡಿದ ಅವರು, ಆಶಾ ಕಾರ್ಯಕತರ್ೆಯರು ತೀರ ಬಡತನದಿಂದ ಬಂದಿರುವ ಕುಟುಂಬದವರಾಗಿದ್ದು ಅಬಲೆಯರನ್ನು ಸಬಲೆಯರನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿರುವ ಸಕರ್ಾರ, ಆರೋಗ್ಯ ಇಲಾಖೆಯಲ್ಲಿ ದುಡಿಯುತ್ತಿರುವವರಿಗೆ ಏಕೆ ಇನ್ನೂ ಬೇಡಿಕೆಗಳನ್ನು ಈಡೇರಿಸಿಲ್ಲ, ಈಗಾಗಲೇ ಕಾರ್ಯಕತರ್ೆಯರು ಹಲವು ಬೇಡಿಕೆಗಳನ್ನು ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಗುಲಾಂನಬಿ ಅಜಾದ್ರವರಿಗೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವಾಗಿಲ್ಲ, ರಾಜ್ಯದ ಆರೋಗ್ಯ ಸಚಿವ ಶ್ರೀ ರಾಮಲು ಗಣಿಗಾರಿಕೆಯ ಕಡೆ ಗಮನ ಹರಿಸುತ್ತಾರೆ ಹೊರೆತು, ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕತರ್ೆಯರ ಬೇಡಿಕೆಗಳನ್ನು ಈಡೇರಿಸಲು ಏಕೆ ವಿಳಂಬ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು. ಆಶಾ ಕಾರ್ಯಕತರ್ೆಯರನ್ನು ಪೂರ್ಣ ಕಾಲದ ಸಕರ್ಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ಆಸ್ಪತ್ರೆಗಳಿಗೆ ಹೋಗಿ ಬರಲು ಸಾರಿಗೆ ವೆಚ್ಚವನ್ನು ಮುಂಗಡವಾಗಿ ಕೊಡಬೇಕು, ಮತ್ತು ತುತರ್ುಸೇವೆಯೂ ಸೇರಿದಂತೆ ಅಗತ್ಯ ತರಬೇತಿಯ ನೀಡಿ, ಭವಿಷ್ಯ ನಿಧಿ, ಪಿಂಚಣಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಆಶಾ ಕಾರ್ಯಕತರ್ೆಯರನ್ನು ಒಳಪಡಿಸಬೇಕು ಎಂದರು. ಹಳ್ಳಿಯಿಂದ ಬರುವ ಗಭರ್ಿಣಿ ಸ್ತ್ರೀಯರಿಗೆ ಹೆರಿಗೆಯನ್ನು ತಾಲೂಕು ಕೇಂದ್ರದಲ್ಲಿಯೇ ಮಾಡಬೇಕು ಮತ್ತು ದೇಶಾದ್ಯಂತ ಜನನಿ ಸುರಕ್ಷಾ ಯೋಜನೆಯನ್ನು ಜಾರಿ ಮಾಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎ.ಐ.ಟಿ.ಯು.ಸಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಿರೀಶ್, ಆಶಾ ಕಾರ್ಯಕತರ್ೆಯರ ಸ್ಥಳೀಯ ಅಧ್ಯಕ್ಷೆ ಲೋಲಾಕ್ಷಮ್ಮ, ಕಾರ್ಯದಶರ್ಿ ರಾಜಮ್ಮ, ಪ್ರಧಾನ ಕಾರ್ಯದಶರ್ಿ ಯೋಗೇಶ್ ಉಪಸ್ಥಿತರಿದ್ದರು.
ಕೃಷಿಕ ಸಮಾಜದ ಸಭೆಗೆ 18 ಇಲಾಖೆಗಳ ಅಧಿಕಾರಿಗಳು ಬರುವುದು ಕಡ್ಡಾಯ
ಚಿಕ್ಕನಾಯಕನಹಳ್ಳಿ,ಜೂ.18: ತಾಲೂಕು ಕೃಷಿಕ ಸಮಾಜದ ವ್ಯಾಪ್ತಿಗೆ ಶಿಕ್ಷಣ, ಕಂದಾಯ, ಅರಣ್ಯ, ಕೃಷಿ ಸೇರಿದಂತೆ 18 ಇಲಾಖೆಗಳ ಒಳಪಟ್ಟಿದ್ದು ಇಲಾಖೆಯ ಅಧಿಕಾರಿಗಳು ಸಭೆಗಳಿಗೆ ಹಾಜರಿದ್ದು ಮಾಹಿತಿ ನೀಡುವಂತೆ ನೋಡಿಕೊಳ್ಳಲು ಸಹಾಯಕ ಕೃಷಿ ನಿದರ್ೇಶಕರಿಗೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಹೆಚ್.ದೊಡ್ಡೆಗೌಡರು ಸೂಚನೆ ನೀಡಿದರು.
ಸಹಾಯಕ ಕೃಷಿ ನಿದರ್ೇಶಕರ ಕಛೇರಿಯಲ್ಲಿ ನಡೆದ ಕೃಷಿಕ ಸಮಾಜದ ಸಭೆಯಲ್ಲಿ ಮಾತನಾಡಿದರು.
ಕೃಷಿಕ ಸಮಾಜದ ಸಭೆಗೆ ಅಧಿಕಾರಿಗಳು ಆಗಮಿಸದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಭೆಗಳಿಗೆ ಕಡ್ಡಾಯವಾಗಿ ಆಗಮಿಸುವುದರ ಜೊತೆಗೆ ಇಲಾಖೆ ವತಿಯಿಂದ ಸಂಪೂರ್ಣ ಮಾಹಿತಿ ತರಬೇಕೆಂದರು.
ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ನಾಗರಾಜು ಮಾತನಾಡಿ ತಾಲೂಕಿನಲ್ಲಿ ಗೊಬ್ಬರ ದರದಲ್ಲಿ ಏರುಪೇರಾಗುತ್ತಿದ್ದು ರೈತರಿಗೆ ಹೆಚ್ಚಿನ ಹೊರೆ ಬೀಳುತ್ತಿರುವ ಬಗ್ಗೆ ಗಮನ ಸೆಳೆದರು.
ತಾಲೂಕು ಕೃಷಿಕ ಸಮಾಜದ ಕಾರ್ಯದಶರ್ಿ ಆರ್.ಸಿ.ಮಹೇಶ್ ಮಾತನಾಡಿ ಕೃಷಿ ಸಹಾಯಕರು ಗ್ರಾಮಗಳಿಗೆ ಭೇಟಿ ನೀಡುವಲ್ಲಿ ವಿಳಂಬವಾಗುತ್ತಿದ್ದು ರೈತರಿಗೆ ಮಾಹಿತಿ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಬಿ.ಕೆ.ನಾಗಣ್ಣ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಲ್.ನಟರಾಜು, ನಿದರ್ೇಶಕರಾದ ಮಲ್ಲಿಕಾಜರ್ುನಯ್ಯ, ನಿಜಾನಂದಮೂತರ್ಿ, ಶಂಕರಪ್ಪ, ಅಶ್ವತ್ನಾರಾಯಣ ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿದರ್ೇಶಕ ಬಿ.ಎನ್.ರಂಗಸ್ವಾಮಿ ಸ್ವಾಗತಿಸಿ, ಮೋಹನ್ಕುಮಾರ್ ನಿರೂಪಿಸಿ ವಂದಿಸಿದರು.
No comments:
Post a Comment