Sunday, June 20, 2010

ಗ್ರಾ.ಪಂ. ಉಪಾಧ್ಯಕ್ಷನಾಗಬೇಕಿದ್ದ ಗಿರೀಶನ ಸಾವು
ಚಿಕ್ಕನಾಯಕನಹಳ್ಳಿ,ಜೂ.20: ಸಿಂಗದಹಳ್ಳಿಯ ಕ್ಷೇತ್ರದ ಸದಸ್ಯ ಗಿರೀಶ್(28) ಹೃದಾಯಘಾತದಿಂದ ನಿಧನರಾಗಿದ್ದಾರೆಂದು ವರದಿಯಾಗಿದೆ.
ತೀರ್ಥಪುರ ಗ್ರಾ.ಪಂ. ಉಪಾಧ್ಯಕ್ಷನಾಗಬೇಕಿದ್ದ ಗಿರೀಶ್, ಈ ಪಂಚಾಯಿತಿಯಿಂದ ಗೆದ್ದ ಸದಸ್ಯರಲ್ಲಿ ಒಂದು ಗುಂಪಿನೊಂದಿಗೆ ಪ್ರವಾಸಕ್ಕೆ ಹೊರಟಿರುವುದಾಗಿ ರಾತ್ರಿ ಮನೆಗೆ ತಿಳಿಸಿದ್ದ. ದೊಡ್ಡರಾಂಪುರ ಗೊಲ್ಲರಹಟ್ಟಿಯಲ್ಲಿ ತಂಗಿದ್ದು ಬೆಳಗ್ಗೆ ಬಾಹಿರ್ದಸೆಗೆಂದು ಹೊರಟಾಗ ಗೊಲ್ಲರಹಟ್ಟಿಯಲ್ಲಿ ಸಾವನ್ನಪ್ಪಿದ್ದಾನೆ,
ಜೆ.ಡಿ.ಎಸ್. ಗುಪಿನೊಂದಿಗೆ ಗುರುತಿಸಿಕೊಂಡಿದ್ದ ಗಿರೀಶ್ ಉಪಾಧ್ಯಕ್ಷನಾಗುವ ಎಲ್ಲಾ ಅವಕಾಶವನ್ನು ಹೊಂದಿದ್ದು, ಈತನೇ ಉಪಾಧ್ಯಕ್ಷ ಎಂಬ ಮಾತು ಕೇಳಿ ಬರುತ್ತಿತ್ತು. ಈತ ವಾಸವಾಗಿದ್ದು ಸಿಂಗದಹಳ್ಳಿಯಲ್ಲಿ ಆದರೆ ಸಾವನ್ನಪ್ಪಿರುವುದು ದೊಡ್ಡರಾಂಪುರ ಗೊಲ್ಲರಹಟ್ಟಿಯಲ್ಲಿ ಈಗಾಗಿ ಈತನ ಸಾವಿನ ಸುತ್ತ ಹಲವು ಅನುಮಾನಗಳು ಉದ್ಭವವಾಗಿದ್ದು ಪೋಲೀಸರು ಈ ಪ್ರಕರಣವನ್ನು ಅಸಹಜ ಸಾವೆಂದು ಪರಿಗಣಿಸಿ ವೈದ್ಯರಿಂದ ಶವ ಪರೀಕ್ಷೆ ನಡೆಸಿದ್ದಾರೆ.

ವಿದ್ಯುತ್ ತಂತಿಯಿಂದ ಆಗಿರುವ ತೊಂದರೆ ತಪ್ಪಿಸಿ, ನಿರಾಳವಾಗಿ ಬದುಕಲು ಬಿಡಿ
ಚಿಕ್ಕನಾಯಕನಹಳ್ಳಿ,ಜೂ.20: ಅನಗತ್ಯದ ಕಡೆ ವಿದ್ಯುತ್ ಕಂಬಗಳನ್ನು ನೆಟ್ಟು ತಂತಿ ಎಳೆದಿದ್ದು ಈ ತಂತಿಯಲ್ಲಿ ಅರಿಯುವ ವಿದ್ಯುತ್ಗೆ ಮರಗಳ ಕೊಂಬೆ ತಗುಲಿ ಬೆಂಕಿಯ ಕಿಡಿ ಪದೇ ಪದೇ ಬರುತ್ತಿರುವುದಲ್ಲದೆ, ಈ ಸ್ಥಳದಲ್ಲಿ ವಿದ್ಯುತ್ ಅವಗಡಗಳು ಸಂಭವಿಸುತ್ತಿದ್ದು ಇಲ್ಲಿನ ಸುಮಾರು 20 ಕುಟುಂಬಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ತರಬೇನಹಳ್ಳಿ ಗ್ರಾಮಸ್ಥರು ದೂರಿದ್ದಾರೆ.
ತಾಲೂಕಿನ ತರಬೇನಹಳ್ಳಿಯಲ್ಲಿನ ಶಂಕರಪ್ಪ ಎಂಬುವರ ಮನೆಯ ಮುಂದೆ ಹತ್ತು ವರ್ಷಗಳ ಹಿಂದೆ ಬೋರ್ ವೆಲ್ ಒಂದಕ್ಕೆ ವಿದ್ಯುತ್ ಸಂಪರ್ಕಕೊಡುವ ಉದ್ದೇಶದಿಂದ ವಿದ್ಯುತ್ ಕಂಬಗಳನ್ನು ನೆಡಲಾಗಿದ್ದು, ಈಗ ಆ ಬೋರ್ವೆಲ್ ನಲ್ಲಿ ನೀರು ಇಲ್ಲದ ಕಾರಣ ಕಳೆದ ಐದಾರು ವರ್ಷಗಳಿಂದ ಆ ಬೋರ್ವೆಲ್ನ್ನು ಮುಚ್ಚಲಾಗಿತ್ತು, ಆಗಿನಿಂದಲೂ ಇಲ್ಲಿದ್ದ ಟಿ.ಸಿ. ಮರಗಿಡಗಳಿಂದ ಆವೃತ್ತವಾಗಿ, ಇಲ್ಲಿಂದ ಹೋದ ತಂತಿಯ ಮಾರ್ಗದಲ್ಲೂ ಗಿಡ ಮರಗಳು ಬೆಳೆದು ನಿಂತಿವೆ, ಈ ಲೈನ್ ಅವಶ್ಯಕತೆಯೇ ಇಲ್ಲದಂತಾಗಿದೆ, ಹಾಗಾಗಿ ಈ ಲೈನ್ ತೆಗೆಯುವಂತೆ ಹಲವು ಬಾರಿ ಬೆಸ್ಕಾಂನವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರುವ ಅನ್ನೂಪೂರ್ಣಮ್ಮ, ನಮಗೆ ರಾತ್ರಿ ಸಂದರ್ಭದಲ್ಲಿ ಈಚೆ ಬರುವುದಕ್ಕೆ ಹೆದರಿಕೆ ಯಾಗುತ್ತದೆ ಎನ್ನುತ್ತಾ ಮೊನ್ನೆ ರಾತ್ರಿ ಸುಮಾರು 2ಗಂಟೆ ಸಮಯದಲ್ಲಿ ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗುಲಿ ಬೆಂಕಿ ಕಿಡಿಗಳು ಬಂದವು, ಅಲ್ಲದೆ ಸೈರನ್ ತರ ಶಬ್ದವೂ ಬಂತು ಈ ಬಗ್ಗೆ ಬೆಸ್ಕಾಂನವರಿಗೆ ದೂರು ನೀಡಿದರೆ ಅವರು ಘಟನೆ ನಡೆದ ಮೂರು ದಿನ ಕಳೆದನಂತರ ಬಂದು ಕಂಬದಲ್ಲಿ ಪಿಂಗಾಣಿಯ ಬಟ್ಟಲಿನಂತಹ ವಸ್ತುವೊಂದನ್ನು ಹಾಕಿ ಹೋದರೆ ವಿನಃ ಆ ಲೈನ್ನ ವಿದ್ಯುತ್ನ್ನು ಸ್ಥಗಿತಗೊಳಿಸಲಿಲ್ಲ ತಕ್ಷಣವೇ ನಮಗೆ ಈ ಕಿರಿಕಿರಿಯಿಂದ ತಪ್ಪಿಸಿ, ಭಯದ ವಾತಾವರಣವನ್ನು ದೂರ ಮಾಡಿ ನಿರಾಳವಾದ ಬದುಕನ್ನು ನಡೆಸುವಂತೆ ಕಲ್ಪಿಸಿಕೊಡುವಂತೆ ಬೆಸ್ಕಾಂನ ಅಧಿಕಾರಿಗಳನ್ನು ತರಬೇನಹಳ್ಳಿಯ 20 ಕುಟುಂಬಗಳು ಕೋರಿಕೊಂಡಿವೆ.
ವಿದ್ಯುತ್ ತಂತಿ ಕದಿಯಲು ಹೋಗಿ ಸಾವು
ಚಿಕ್ಕನಾಯಕನಹಳ್ಳಿ,ಜು.20: ವಿದ್ಯುತ್ ತಂತಿ ಕದಿಯಲು ಹೋದ ವ್ಯಕ್ತಿಯೊಬ್ಬ ಕಂಬದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ತಿಮ್ಮನಹಳ್ಳಿಯ ಬಳಿ ನಡೆದಿದೆ.
ತಿಮ್ಮನಹಳ್ಳಿಯಿಂದ ಗಂಟೇನಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ವಿದ್ಯುತ್ ಕಂಬಗಳಿಗೆ ಹಾಕಿದ್ದ ವಿದ್ಯುತ್ ತಂತಿಯನ್ನು ಬಿಚ್ಚಲು ಹೋಗಿ ಕಂಬದ ಮೇಲಿಂದ ಬಿದ್ದು ತೀವ್ರವಾಗಿ ಪೆಟ್ಟು ತಿಂದ ಕೃಷ್ಣಪ್ಪ ಎಂಬಾತ ಸಾವನ್ನಪ್ಪಿದ್ದಾನೆ.
ಗುಬ್ಬಿ ತಾಲೂಕು ಹಾಗಲ್ವಾಡಿ ಹೋಬಳಿಯ ಕುರಿಹಳ್ಳಿಯವನಾದ ಈತ ವಿದ್ಯುತ್ ತಂತಿ ಕದಿಯುವ ಕೆಲಸವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು ಈ ಸಲುವಾಗಿ ದಂಡನೆಗೂ ಒಳಗಾಗಿದ್ದೆನೆಂದು ಪೊಲೀಸ್ ಮೂಲಗಳು ತಿಳಿಸಿವೆ.

No comments:

Post a Comment