Wednesday, June 30, 2010

ವಿದ್ಯಾಥರ್ಿ ವೇತನಾ ವಿತರಣಾ ಮತ್ತು ಸನ್ಮಾನ ಸಮಾರಂಭ
ಚಿಕ್ಕನಾಯಕನಹಳ್ಳಿ,ಜೂ.30: ಹೊಂಬಾಳಮ್ಮ ದೇವಾಲಯ ವಿಶ್ವಸ್ಥ ಸಮಿತಿ ವತಿಯಿಂದ ವಿದ್ಯಾಥರ್ಿ ವೇತನ ವಿತರಣಾ ಮತ್ತು ಸನ್ಮಾನ ಸಮಾರಂಭವನ್ನು ಜುಲೈ 3ಶನಿವಾರ ಬೆಳಿಗ್ಗೆ 10-30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದು ಸಮಾರಂಭದಲ್ಲಿ ವಿರೇಶಾನಂದ ಸರಸ್ವತಿ ಸ್ವಾಮಿ ಆಶೀರ್ವಚನ ನೀಡಲಿದ್ದು ಉದ್ಘಾಟನೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಹೊಂಬಾಳಮ್ಮ ದೇವಾಲಯ ವಿಶ್ವಸ್ಥ ಸಮಿತಿಯ ಅಧ್ಯಕ್ಷ ಸಿ.ಎಸ್.ಬಸಪ್ಪಭಾಗವತ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಡಿ.ಎಸ್.ಸೂರ್ಯನಾರಾಯಣ, ಶಿರಾ ಪ್ರೆಸಿಡೆನ್ಸಿ ಪಬ್ಲಿಕ್ ಸ್ಕೂಲ್ ಛೇರಮನ್ ಎಂ.ಚಿದಾನಂದ, ಬಿ.ಬಿ.ಎಂ.ಪಿ ಕಂದಾಯಧಿಕಾರಿ ಅವಿನಾಶ್ಬಾಬು, ತಾಲೂಕು ದೇವಾಂಗ ಸಂಘದ ಅಧ್ಯಕ್ಷ ಎಸ್.ಶಂಕರಪ್ಪ, ಸಾಹಿತಿ ಆರ್.ಬಸವರಾಜು, ಕುರುಬರ ಶ್ರೇಣಿ ಶಾಲೆ ಹಿರಿಯ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಜಿ.ರಂಗಯ್ಯ, ಪುರಸಭಾ ಸದಸ್ಯ ಸಿ.ಟಿ.ವರದರಾಜು, ಸಿ.ಕೆ.ಕೃಷ್ಣಮೂತರ್ಿ, ಈಶ್ವರ್ ಭಾಗವತ್ ಉಪಸ್ಥಿತರಿದ್ದು ಸಮಾರಂಭದಲ್ಲಿ ನಿವೃತ್ತ ಲೇಡಿಸ್ ಸೋಷಿಯಲ್ ಎಜುಕೇಶನ್ ಆರ್ಗನೈಜರ್ ಎನ್.ಗಂಗಾದೇವಿ, ಇನ್ನರ್ವೀಲ್ ಮಾಜಿ ಅಧ್ಯಕ್ಷೆ ಪುಷ್ಪವಾಸುದೇವ್, ಶಿಕ್ಷಕ ಎನ್.ಲಕ್ಷ್ಮೀನಾರಾಯಣ, ಬನಶಂಕರಿ ದೇವಸ್ಥಾನ ಅರ್ಚಕ ಮಹೇಶ್, ಯಕ್ಷಗಾನ ಕಲಾವಿದ ಸಿ.ಎ.ಕುಮಾರಸ್ವಾಮಿಯವರಿಗೆ ಸನ್ಮಾನಿಸಲಿದ್ದು ನಯನ, ರಾಘವೇಂದ್ರ, ಭಾನುಪ್ರಕಾಶ್ರವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಿರುವರು.

ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಮಟ್ಟದ ಸಮ್ಮೇಳನ
ಚಿಕ್ಕನಾಯಕನಹಳ್ಳಿ,ಜೂ.30: ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಮಟ್ಟದ ಪ್ರಥಮ ಸಮ್ಮೇಳನ ಹಾಗೂ ಉದ್ಘಾಟನಾ ಸಮಾರಂಭವನ್ನು ಇದೇ ಜುಲೈ 3ರ ಶನಿವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಮಧ್ಯಾಹ್ನ 2ಕ್ಕೆ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಸಂಘದ ನಾಮಫಲಕ ಅನಾವರಣಗೊಳಿಸಿದ್ದಾರೆ.
ತಾ.ವೀ.ನೌ.ಕ್ಷೇ,ಸಂಘದ ಅಧ್ಯಕ್ಷ ಟಿ.ಜಯಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ನಿವೃತ್ತ ಕನ್ನಡ ಪ್ರಾಧ್ಯಾಪಕ ಹೆಚ್.ವಿ.ವೀರಭದ್ರಯ್ಯ ಭಾಷಣ ಮಂಡಿಸಲಿದ್ದು ನೊಳಂಬ ವೀರಶೈವ ಸಮಾಜದ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಇ.ಓ ಡಾ.ವಿ.ವೇದಮೂತರ್ಿ, ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ, ಸಮನ್ವಯಾಧಿಕಾರಿ ಹೆಚ್.ಎಸ್.ಸಿದ್ದರಾಜು, ಪ್ರಾಂಶುಪಾಲರಾದ ಕೆ.ಸಿ.ಬಸಪ್ಪ, ಎ.ಎನ್.ವಿಶ್ವೇಶ್ವರಯ್ಯ, ಶಿವಕುಮಾರ್, ಉಪನಿರೀಕ್ಷಕ ಎಸ್.ವಿ.ಶಿವಕುಮಾರ್ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ರಾ.ವೀ.ಲಿಂ.ನೌ.ನೌ.ಕ್ಷೇ ಸಂಘದ ರಾಜಾಧ್ಯಕ್ಷ ಬಸವಲಿಂಗಯ್ಯ, ಗೌರವಾಧ್ಯಕ್ಷ ಎಸ್.ಬಿ.ಶಶಿಧರ್, ಕಾರ್ಯದಶರ್ಿ ಬಿ.ನಿರಂಜನ್, ತಾಲೂಕು ಗೌರವಾಧ್ಯಕ್ಷ ಆರ್.ಎಂ.ಶೇಖರಯ್ಯ, ಜಿಲ್ಲಾ ಕಾರ್ಯದಶರ್ಿ ಎಂ.ಬಿ.ಶಿವಶಂಕರಪ್ಪ, ಪ್ರಧಾನ ಕಾರ್ಯದಶರ್ಿ ಬಾಲಚಂದ್ರ ಉಪಸ್ಥಿತರಿರುವರು.

ಹಿಂದಿ ಸಾಹಿತ್ಯ ಮತ್ತು 14 ಪುಸ್ತಕಗಳ ಅನಾವರಣ ಸಮಾರಭ
ಚಿಕ್ಕನಾಯಕನಹಳ್ಳಿ,ಜೂ.30: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹೇಮಂತ ಸಾಹಿತ್ಯ ವತಿಯಿಂದ ಎಂ.ವಿ.ನಾಗರಾಜರಾವ್ ಅವರ ಹಿಂದಿ ಸಾಹಿತ್ಯ ಚರಿತ್ರೆ ಮತ್ತು ಇತರ 14 ಪುಸ್ತಕಗಳ ಅನಾವರಣ ಸಮಾರಂಭವನ್ನು ಇದೇ ಜುಲೈ 3ರ ಶನಿವಾರ ಬೆಳಿಗ್ಗೆ 11ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೋಟರಿ ಭಾಲಭವನದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ವಿಶ್ರಾಂತ ಕುಲಪತಿ ಡಾ.ದೇ.ಜವರೇಗೌಡ ಕೃತಿ ಅನಾವರಣಗೊಳಿಸಲಿದ್ದಾರೆ.
ಸಮಾರಂಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ ಕೃತಿ ಪರಿಚಯ ಮಾಡಲಿದ್ದು ಲೇಖಕ ನಾ.ದಯಾನಂದ್ ಮತ್ತು ಸಾಹಿತಿ ಆರ್.ಬಸವರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಲೇಖಕ ಎಂ.ವಿ.ನಾಗರಾಜ್ರಾವ್ ಉಪಸ್ಥಿತರಿರುವರು.
ಸಮಾರಂಭದಲ್ಲಿ ಹಿಂದಿ ಸಾಹಿತ್ಯ ಚರಿತ್ರೆ, ಪುರಾಣ ಪ್ರಸಿದ್ದ 101 ಕಥೆಗಳು, ಏಕಾಂಕ ನಾಟಕ, ಆಹುತಿ, ವಿಶ್ವಬಾಹು ಪರುಶುರಾಮ, ಕಂಪನ, ನಾಲ್ಕನೆಯ ಆಯಾಮ, ವಿಶ್ವವಿಖ್ಯಾತ ಲೇಖಕರ ಕಥೆಗಳು, ಜಗತ್ತಿನ ಪ್ರಸಿದ್ದ ಜನಪದ ಕಥೆಗಳು, ಸಂಶೋಧನೆಗಳು, ನೂಪುರ, ಶೃಂಗಾರಶಯ್ಯೆ, ಸಂಭವ, ಕಪ್ಪು ಗುಲಾಬಿ, ವಿಶ್ವವಿಖ್ಯಾತ ಲೇಖಕರ ಆರು ಕಾದಂಬರಿಯ 14 ಪುಸ್ತಕಗಳನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ರೋಟರಿಯಲ್ಲಿ ಸೇವೆ ಸಲ್ಲಿಸಿರುವ ಮಾಜಿ ಅಧ್ಯಕ್ಷರಾದ ಮಾ.ಚಿ.ಕೈಲಾಸನಾಥ್, ಎಸ್.ಶ್ರೀನಿವಾಸಮೂತರ್ಿ, ಡಿ.ಎಸ್.ಶ್ಯಾಮಸುಂದರ್, ಎಚ್.ಎಸ್.ಶಿವಲಿಂಗಯ್ಯ, ಜಿ.ಗೋವಿಂದರಾಜ್, ಎಸ್.ಎ.ನಭಿ, ಡಾ.ಸಿ.ಎಂ.ಸುರೇಶ್, ಎಂ.ಎಲ್.ಮಲ್ಲಿಕಾಜರ್ುನಯ್ಯ, ಸಿ.ಎನ್.ಮರುಳರಾಧ್ಯ, ಸಿ.ಎಂ.ಶಂಕರಮೂತರ್ಿ, ಎಂ.ಎನ್.ಗಂಗಾಧರ್, ಸಿ.ಎಲ್.ಜಯದೇವ್, ಡಾ.ಜಿ.ಪ್ರಶಾಂತಕುಮಾರಶೆಟ್ಟಿ, ಕೆ.ವಿ.ಕುಮಾರ್, ಎನ್.ಶ್ರೀಕಂಠಯ್ಯರವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ, ಮತ್ತು ಹೇಮಂತ ಸಾಹಿತ್ಯ ಪ್ರಕಾಶಕ ಎಂ.ವೆಂಕಟೇಶ್ ತಿಳಿಸಿದ್ದಾರೆ.


No comments:

Post a Comment