Sunday, July 11, 2010



ಹೊನ್ನಮ್ಮನ ಹತ್ಯೆ: ತನಿಖೆ ಕೈಗೆತ್ತಿಕೊಳ್ಳುವಂತೆ ಗೃಹ ಸಚಿವರಿಗೆ ಮನವಿ.ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಜು.11 ತಾಲೂಕಿನ ಗೋಪಾಲಪುರದಲ್ಲಿ ನಡೆದ ಹೊನ್ನಮ್ಮನ ಹತ್ಯಾ ಪ್ರಕರಣಕ್ಕೆ ಜೆ.ಡಿ.ಎಸ್ ಪಕ್ಷದ ಬೆಂಬಲವಿದೆ ಎಂಬ ವಿಷಯ ಶುದ್ದ ಸುಳ್ಳು ಮತ್ತು ಈ ಕೃತ್ಯದಲ್ಲಿ ಯಾವ ಪಕ್ಷದ ಕಾರ್ಯಕರ್ತರು ಕಾರಣರಾದರೂ ಸರಿ ಅವರಿಗೆ ಶಿಕ್ಷೆ ಆಗಬೇಕೆಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹಸಚಿವ ಡಾ.ವಿ.ಎಸ್.ಆಚಾರ್ಯರವರೊಂದಿಗೆ ಮಾತನಾಡಿದ್ದು ತನಿಖೆಯಾಗಲು ಕ್ರಮಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಹೊನ್ನಮ್ಮನಿಗೂ ಹಾಗೂ ಗ್ರಾಮಸ್ಥರಿಗೂ ಹಲವು ವರ್ಷಗಳಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿದ್ದರೂ ಈ ರೀತಿಯ ವಿಕೋಪಕ್ಕೆ ಹೋಗಿರಲಿಲ್ಲ, ಈ ಪ್ರಕರಣ ಕೊಲೆಯ ಹಂತದವರೆಗೆ ಹೋಗಿರುವುದು ದುರದೃಷ್ಟಕರ, ಚರಂಡಿ ಕಾಮಗಾರಿಗೆಂದು ಗೋಪಾಲಪುರಕ್ಕೆ ಚನ್ನರಾಯಪಟ್ಟಣದವರು ಬಂದಾಗ ಅಲ್ಲಿ ಆಗಾಗ್ಗೆ ಹೊನ್ನಮ್ಮನೊಂದಿಗೆ ಜಗಳ ನಡೆಯುತ್ತಿತ್ತು. ಮೊನ್ನೆ ಆದ ಈ ಕೃತ್ಯಕ್ಕೆ ಚನ್ನರಾಯಪಟ್ಟಣದವರು ಪ್ರೇರಣೆ ನೀಡಿದ್ದು, ಈ ಕೃತ್ಯದಲ್ಲಿ ಯಾವುದೇ ರಾಜಕೀಯ ಷಡ್ಯಂತ್ರವಿಲ್ಲ ಮತ್ತು ಈ ಕೃತ್ಯಕ್ಕೆ ಮುನ್ಸೂಚನೆ ಇದ್ದರೂ ಹಂದನಕೆರೆ ಪೋಲಿಸ್ ಸಿಬ್ಬಂದಿಯ ಬೇಜಾವಬ್ದಾರಿತನದಿಂದ ಹತ್ಯೆ ನಡೆದಿದೆ, ಹಂದನಕೆರೆ ಪೋಲಿಸರೇ ಇದಕ್ಕೆ ಮೂಲ ಕಾರಣರಾಗಿದ್ದು, ಈ ಘಟನೆ ಹಲವರ ದುರುದ್ದೇಶದಿಂದ ನಡೆದಿದೆಯೆ ಹೊರತು ಒಳಸಂಚಿನಿಂದ ಅಲ್ಲವೆಂದರು.
ಜಿ.ಪಂ. ಅಧ್ಯಕ್ಷರ ಆಯ್ಕೆ ಪೂರ್ವ ತಯಾರಿ ಹಾಗೂ ಸದನದಲ್ಲಿ ಭಾಗವಹಿಸಿದ್ದರಿಂದ ತಕ್ಷಣಕ್ಕೆ ಹೊನ್ನಮ್ಮನ ಹತ್ಯಾ ಸ್ಥಳಕ್ಕೆ ಆಗಮಿಸಲು ಆಗಲಿಲ್ಲ, ಕೃತ್ಯದ ನಂತರ ದಿನ ವಿಧಾನಸಭೆಯಲ್ಲಿ ವಿಷಯವನ್ನು ಮಂಡಿಸಿ ಒಂದು ಲಕ್ಷರೂ ಮೊತ್ತದ ಚೆಕ್ಕನ್ನು ಮತ್ತು 3ತಿಂಗಳಿಗೆ ಆಗುವ ಆಹಾರ ದಾಸ್ತಾನನ್ನು ಅವರ ಕುಟುಂಬಕ್ಕೆ ನೀಡಿರುವುದಲ್ಲದೆ, ಮಗನಾದ ಮಂಜುನಾಥನಿಗೆ ತಕ್ಷಣಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೆ ನೇಮಿಸಲು ಸೂಚಿಸಿದ್ದೇನೆ ಎಂದರು. ಗ್ರಾಮದಲ್ಲಿ ಡಿ.ಸಿ. ಮತ್ತು ಎಸ್.ಪಿ.ಯವರ ನೇತೃತ್ವದಲ್ಲಿ ಶಾಂತಿಸಭೆ ನಡೆಸುವಂತೆ ತಿಳಿಸಿದ್ದೇನೆಂದರು.
ಗೋಷ್ಟಿಯಲ್ಲಿ ಹೊನ್ನಮ್ಮನ ಮಗ ಮಂಜುನಾಥ್, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯ ಎಂ.ಎನ್.ಸುರೇಶ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಯದ್ ಮುನೀರ್ ಉಪಸ್ಥಿತರಿದ್ದರು.
ಮಹಿಳಾ ಸಬಲೀಕರಣಕ್ಕಾಗಿ ಸ್ತ್ರೀಸಂಘಗಳಿಗೆ ಹೆಚ್ಚಿನ ಸಾಲ: ಕೆ.ಎನ್.ಆರ್.
ಚಿಕ್ಕನಾಯಕನಹಳ್ಳಿ,ಜು.11: ಬ್ಯಾಂಕ್ಗಳಿಂದ ಸಾಲಸೌಲಭ್ಯ ಪಡೆದವರು ಕೃಷಿಯ ಜೊತೆಗೆ ಹೈನುಗಾರಿಕೆ, ಗುಡಿಕೈಗಾರಿಕೆಯಂತಹ ಉಪಕಸುಬುಗಳನ್ನು ಅವಲಂಬಿಸಿದರೆ ನಷ್ಟ ಅನುಭವಿಸದೆ ಲಾಭ ಪಡೆದು ಸಾಲ ಮರುಪಾವತಿ ಮಾಡಬಹುದು ಎಂದು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ದೊಡ್ಡೆಣ್ಣೆಗೆರೆ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಡೆದ ವಿವಿಧ ಯೋಜನೆ ಅಡಿಯಲ್ಲಿ ಸಾಲಸೌಲಭ್ಯ ವಿತರಣಾ ಕಾರ್ಯಕ್ರದ ಉದ್ಘಾಟಸಿ ಮಾತನಾಡಿದ ಅವರು, ಸಾಲ ಪಡೆದವರು ಸಾಲವನ್ನು ಮರುಪಾವತಿ ಮಾಡಿದರೆ ಮತ್ತೆ ಅವರಿಗೆ ಸಾಲವನ್ನು ನೀಡುವುದು ಎಂದರಲ್ಲದೆ, ಮರುಪಾವತಿ ಹಣದಿಂದ ಸಾಲ ಪಡೆಯದವರಿಗೆ ಸಾಲ ನೀಡಿ ಅವರನ್ನು ಆಥರ್ಿಕವಾಗಿ ಸುಧಾರಿಸಬಹುದಾಗಿದೆ ಎಂದರು. ಸಾಲ ಮರುಪಾವತಿ ಮಾಡದೆ ಸಾಲ ಮನ್ನಾ ಆಗುತ್ತದೆಂದು ನಿರೀಕ್ಷಿಸಿದರೆ ಬಡ್ಡಿ ಹೆಚ್ಚಾಗಿ ತೊಂದರೆ ಒಳಪಡುತ್ತೀರ ಎಂದ ಅವರು, ಮಹಿಳೆಯರ ಸ್ವಸಹಾಯ ಸಂಘಗಳಿಗೆ ಇನ್ನೂ ಹೆಚ್ಚಿನ ರೀತಿಯ ಸಾಲವನ್ನು ನೀಡಿ ಅವರನ್ನು ಆಥರ್ಿಕವಾಗಿ ಸಬಲೀಕರಿಸಿ ಹಲವು ಕ್ಷೇತ್ರಗಳಿಗೆ ಅವರನ್ನು ತೊಡಗಿಸಬೇಕಾಗಿದೆ ಎಂದರು, ಇದಕ್ಕಾಗಿ ಚುನಾಯಿತ ಪ್ರತಿನಿಧಿಗಳು ಗ್ರಾಮಗಳ ಏಳಿಗೆಯ ಕುರಿತು ಹೆಚ್ಚು ಗಮನ ಹರಿಸಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಿಲ್ಲದ ಗ್ರಾಮಗಳಿಗೆ ಗ್ರಾಮೀಣ ಬ್ಯಾಂಕ್ಗಳು ಸ್ವಸಹಾಯ ಸಂಘಕ್ಕೆ ಮತ್ತು ರೈತರಿಗೆ ಹಲವು ರೀತಿಯ ಸಾಲಸೌಲಭ್ಯಗಳನ್ನು ನೀಡಿ ಗ್ರಾಮಗಳ ಆಥರ್ಿಕತೆಯನ್ನು ಹೆಚ್ಚಿಸಬೇಕು ಇದಕ್ಕಾಗಿ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಕೃಷಿ ಪತ್ತಿನ ಸಹಕಾರ ಸಂಘಗಳ ಕಟ್ಟಡದ ಕಾಮಗಾರಿಗೆ ಅರ್ಧಭಾಗದಷ್ಟು ಹಣವನ್ನು ನೀಡಲಿದೆ ಎಂದು ಹೇಳಿದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಈ ಸೊಸೈಟಿಗೆ 14 ಹಳ್ಳಿಗಳು ಸೇರಿದ್ದು ಎಲ್ಲಾ ರೀತಿಯ ಸಾಲ ಸೌಲಭ್ಯ ವಿತರಿಸಲು ಮುಂದಾಗಿದೆ ಎಂದ ಅವರು ಸಾಲಗಾರರು ಸಾಲವನ್ನು ಮರುಪಾವತಿ ಮಾಡಿದರೆ ಇನ್ನೊಬ್ಬರಿಗೆ ನೀಡಲು ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಡಿ.ಸಿ.ಸಿ ಬ್ಯಾಂಕ್ನಿಂದ ರಾಜಣ್ಣನವರನ್ನು ಬಿಟ್ಟರೆ ಜಿಲ್ಲೆಯ ಗಡಿಭಾಗಕ್ಕೆ ಆಗಮಿಸಿ ಯಾರೂ ಸಹ ಸಾಲಸೌಲಭ್ಯ ವಿತರಿಸಿಲ್ಲ ಮತ್ತು ಬ್ಯಾಂಕ್ಗಳಿಂದ ಸಾಲ ಪಡೆಯುವವರು ಹಣ ದುರುಪಯೋಗ ಮಾಡುವ ಬದಲು ಉದ್ಯೋಗ ರಚಿಸಿಕೊಂಡು ಅವರ ಜೀವನಮಟ್ಟ ಸುಧಾರಿಸಿಕೊಳ್ಳಬೇಕು ಎಂದರಲ್ಲದೆ, ಸಾಲ ನೀಡಿದ ಗ್ರಾಮಗಳನ್ನು ರೈತರ ಕೇಂದ್ರವನ್ನಾಗಿ ಮಾಡಬೇಕೆಂದು ರಾಜಣ್ಣನವರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ದೊಡ್ಡೆಣ್ಣೆಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂತರಾಜ್ಅರಸ್, ನಿದರ್ೇಶಕರುಗಳಾದ ಸುಗಂಧರಾಜ್, ಲೋಕೇಶ್, ನಾಗಣ್ಣ, ಗ್ರಾ.ಪಂ.ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷರಾದ ಚಂದ್ರಶೇಖರ್, ದೊಡ್ಡಣ್ಣ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಡಿ.ಶಿವಕುಮಾರ್ ಸ್ವಾಗತಿಸಿ, ಚಿಕ್ಕಣ್ಣ ನಿರೂಪಿಸಿ, ಎಸ್.ಆರ್.ರಂಗಸ್ವಾಮಿ ವಂದಿಸಿದರು.






No comments:

Post a Comment