Tuesday, July 27, 2010

ಕುಪ್ಪೂರು ಶ್ರೀ ಹುಟ್ಟು ಹಬ್ಬವನ್ನು ತಾಲೂಕಿನ ನೀರಾವರಿ ಹೋರಾಟದ ದಿನವಾಗಿ ಆಚರಣೆ
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಇದೇ ಸಂದರ್ಭದಲ್ಲಿ ತಾಲೂಕಿನ ನೀರಾವರಿ ಹೋರಾಟದ ರೂಪುರೇಷೆಗಳನ್ನು ಚಚರ್ಿಸಲಾಗುವುದು ಎಂದು ರೈತ ಸಂಘದ ಮುಖಂಡ ಸತೀಶ್ ಕೆಂಕೆರೆ ಹಾಗೂ ಡಾ.ಪರಮೇಶ್ ತಿಳಿಸಿದ್ದಾರೆ.
ಕುಪ್ಪೂರು ಶ್ರೀ ಮರುಳುಸಿದ್ದೇಶ್ವರ ಗದ್ದಿಗೆ ಸಂಸ್ಥಾನ ಮಠಾಧ್ಯಕ್ಷರಾ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮಿಗಳ 36ನೇ ಹುಟ್ಟು ಹಬ್ಬವನ್ನು ಇದೇ 29ರ ಗುರುವಾರ ಕುಪ್ಪೂರಿನಲ್ಲಿ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ತಾಲೂಕಿಗೆ ನದಿಪಾತ್ರಗಳಿಂದ ನೀರು ತರುವ ವಿಷಯವಾಗಿ ಚಚರ್ಿಸಲು 63 ಸಂಘಟನೆಗಳು ಭಾಗವಹಿಸಲಿವೆ ಎಂದು ಸತೀಶ್ ತಿಳಿಸಿದರು.
ತಾಲೂಕಿಗೆ ನೀರು ತರುವ ವಿಷಯವಾಗಿ ಹುಳಿಯಾರಿನಲ್ಲಿ 70 ದಿನಗಳ ಸುದೀರ್ಘ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಲ್ಲದೆ, ನೀರಾವರಿ ಸಚಿವರ ಬಳಿಯೂ ನಿಯೋಗ ತೆರಳಿ ಈ ಬಗ್ಗೆ ಸಕರ್ಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು, ಆ ಸಂದರ್ಭದಲ್ಲಿ ಸಚಿವರ ನೀಡಿದ ವಾಗ್ದಾನದಂತೆ ಕೆಲಸವಾಗಿರುವುದಿಲ್ಲ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಆಸಕ್ತಿವಹಿಸಿರುವುದಿಲ್ಲ, ಆದ್ದರಿಂದ ಮುಂದಿನ ನಮ್ಮ ನಡೆಯ ಬಗ್ಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳೊಂದಿಗೆ ಮತ್ತೊಮ್ಮೆ ಚಚರ್ಿಸುವ ಕುಪ್ಪೂರು ಶ್ರೀಗಳ ಹುಟ್ಟು ಹಬ್ಬದ ದಿನದಂದು ಕುಪ್ಪೂರಿನಲ್ಲಿ ಸಭೆ ಕರೆಯಲಾಗಿದೆ ಎಂದು ಸತೀಶ್ ಕೆಂಕೆರೆ ಹಾಗೂ ಡಾ.ಪರಮೇಶ್ವರ ತಿಳಿಸಿದ್ದಾರೆ.
ಶಿಕ್ಷಕರ ಸಂಘದ ಒಗ್ಗಟ್ಟನ್ನು ಹೊಡೆಯಬೇಡಿ ಸಂಘದ ಪದಾಧಿಕಾರಿಗಳ ಮನವಿ
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಕೆಲವು ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಧನೆಗಳನ್ನು ತಿಳಿದರೂ ಸಹ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಶಿಕ್ಷಕರಲ್ಲಿ ತಪ್ಪು ಕಲ್ಪನೆ ಮೂಡಿಸಿ ಸಂಘದ ಬಗ್ಗೆ ಅಪಪ್ರಚಾರ ಮಾಡಿ ಪಯರ್ಾಯ ಸಂಘ ರಚಿಸುತ್ತೇವೆಂದು ಶಿಕ್ಷಕರ ಹಾಗೂ ಸಂಘದ ಒಗ್ಗಟ್ಟನ್ನು ವಿಭಜಿಸಲು ಹೊರಟಿದ್ದಾರೆಂದು.ಪ್ರಾ.ಶಾ.ಶಿ. ಸಂಘದ ತಾಲೂಕು ಅಧ್ಯಕ್ಷ ಎಚ್.ಎಮ್.ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಸಂಘದ ವಿರುದ್ದವಾಗಿ ರಾಜ್ಯಮಟ್ಟದಲ್ಲಿ ಹಲವಾರು ಸಂಘಗಳು ಉದಯವಾಗುತ್ತಿದೆ ಇವೆಲ್ಲಾ ಸೂಯರ್ೊದಯಕ್ಕೆ ಉದಯವಾಗಿ ಸೂಯೂಸ್ತ ಸಮಯಕ್ಕೆ ಅಸ್ತಂಗತವಾಗುತ್ತವೆ ಇದರಿಂದಾಗಿ ಈ ಸಂಘಗಳು ಶಿಕ್ಷಕರ ಪರವಾಗಿ ಹೋರಾಟ ಮಾಡುವಲ್ಲಿ ವಿಫಲವಾಗುತ್ತಿದೆ ಎಂದು ಟೀಕಿಸಿರುವ ಅವರು, ನಮ್ಮ ಸಂಘವು ಚುನಾವಣೆಯ ನಂತರ ಒಂದು ವರ್ಷದಲ್ಲಿ ಪರಿಹಾರ ಭೋಧನೆಯನ್ನು ಶಾಲಾ ಅವಧಿಯಲ್ಲಿಯೇ ಮಾಡುವಂತೆ ಮತ್ತು ಅಕ್ಟೋಬರ್ ರಜೆ ಅವದಿಯು ಕಡಿತವಾಗಿದ್ದನ್ನು ಮೊದಲಿನಂತೆಯೇ ರಜೆ ಅವಧಿಯನ್ನು ನಿಗಧಿ ಪಡಿಸುವಂತೆ ಆದೇಶ ಮಾಡುವಲ್ಲಿ ನಮ್ಮ ಸಂಘ ಯಶಸ್ವಿಯಾಗಿದೆ, ಎಲ್ಲಾ ಶಿಕ್ಷಕರಿಗೂ ತಿಂಗಳ ಮೊದಲನೇ ವಾರದಲ್ಲಿ ವೇತನ ನೀಡಿ ಯಾವುದೇ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದೆ.
ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಶಿಕ್ಷಕರಿಗೆ ನಿವೇಶನ ಕೊಡಿಸುವುದರ ಮೂಲಕ ಪ್ರತಿ ತಾಲೂಕಿನಲ್ಲಿ ಶಿಕ್ಷಕರ ಬಡಾವಣೆ ನಿಮರ್ಿಸುವ ಪ್ರಯತ್ನ ಮಾಡಿದರೂ ಸಹ ಕೆಲವು ಮಂದಿ ಶಿಕ್ಷಕರು ಬೇರೆ ಬೇರೆ ಸಂಘ ಸ್ಥಾಪಿಸುತ್ತೇವೆಂದು ನಮ್ಮ ಸಂಘಕ್ಕೆ ಬೆಂಬಲ ನೀಡಿ ಎಂದು ಸಹಿ ಸಂಗ್ರಹಿಸಿರುವುದರಲ್ಲಿ ನಿರತರಾಗಿರುವುದು ಸಂಘದ ಗಮನಕ್ಕೆ ಬಂದಿದ್ದು ಯಾವುದೇ ರೀತಿಯಲ್ಲಿ ಇಂತಹ ಅನಾಮಧೇಯ ಸಂಘಟನೆಗಳ ಮನವಿಗೆ ಕಿವಿಗೊಡದೆ ಹಾಗೂ ಸಹಿ ಹಾಕಲು ನಿರಾಕರಿಸುವುದರ ಮೂಲಕ ಸಂಘಟನಾ ಶಕ್ತಿಯನ್ನು ಬಲಪಡಿಸಬೇಕೆಂದು ಉಪಾಧ್ಯಕ್ಷ ಎಸ್.ಸಿ.ನಟರಾಜ್, ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ್, ಸಂಘಟನಾ ಕಾರ್ಯದಶರ್ಿ ಶಾಂತಮ್ಮ, ಸಹಕಾರ್ಯದಶರ್ಿ ಎಲ್.ಅನಸೂಯಮ್ಮ ವಿನಂತಿಸಿದ್ದಾರೆ.
ಕೃಷಿ ಹೊಂಡಕ್ಕೆ ಬಿದ್ದು ಮಹಿಳೆ ಸಾವು.
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಗಾಂಧಿನಗರ ಕೈಮರದ ಬಳಿ ಕೃಷಿ ಹೊಂಡಕ್ಕೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಕೋಡಿಪಾಳ್ಯದ ಗಂಗಾಧರಯ್ಯ ಎಂಬುವರಿಗೆ ಸೇರಿದ ಈ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಗೌಡನಕಟ್ಟೆಯ ಗೌರಮ್ಮ(45) ಎಂದು ಗುರುತಿಸಲಾಗಿದೆ, ಪಾಶ್ರ್ವವಾಯು ಪೀಡಿತಳಾದ ಈಕೆ ಮಾನಸಿಕವಾಗಿ ನೊಂದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಹಂದನಕೆರೆ ಪಿ.ಎಸೈ. ಟಿ.ವಿ.ರಾಜು ಪ್ರಕರಣ ದಾಖಲಿಸಿದ್ದಾರೆ.
ಬಿ2ಬಿ ಪಾದಯಾತ್ರೆಗೆ ಬಿ.ಸಿ.ಸಿ. ಪಾದಾರ್ಪಣೆ
ಚಿಕ್ಕನಾಯಕನಹಳ್ಳಿ,ಜು.27: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಬೆಂಗಳೂರು ಬಳ್ಳಾರಿ ಪಾದಯಾತ್ರೆಯಲ್ಲಿ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಭಾಗವಹಿಸುವುದಾಗಿ ಅಧ್ಯಕ್ಷ ಸಿ.ಬಸವರಾಜು ಹೇಳಿಕೆ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆಯ ವಿರುದ್ದ ಸಿ.ಬಿ.ಐ.ಗೆ ವಹಿಸುವಂತೆ ಒತ್ತಾಯಿಸುವುದು ಹಾಗೂ ಬಿ.ಜೆ.ಪಿ.ಸಕರ್ಾರದ ವೈಫಲ್ಯದ ವಿರುದ್ದ ಹಾಗೂ ನಾಡಿನ ರಕ್ಷಣೆಗಾಗಿ ಕೆ.ಪಿ.ಸಿ.ಸಿ.ಆಯೋಜಿಸಿರುವ ಈ ಪಾದಯಾತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ನ ಜನಾಂದೋಲನ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆಯನ್ನು ಒಳಗೊಂಡ ಸಾಮೂಹಿ ನಾಯಕತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ ಯಶಸ್ವಿಗಾಗಿ ಹಳ್ಳಿ ಹಳ್ಳಿಯಿಂದ ಸ್ವಯಂ ಪ್ರೇರಿತರಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ, ಪುರಸಭಾ ಸದಸ್ಯರುಗಳಾದ ಸಿ.ಪಿ.ಮಹೇಶ್, ಬಾಬು ಸಾಹೇಬ್, ಧರಣಿ ಲಕ್ಕಪ್ಪ, ರೇಣುಕ ಗುರುಮೂತರ್ಿ, ಎಚ್.ಬಿ.ಎಸ್.ನಾರಾಯಣಗೌಡ, ಕೆ.ಜಿ.ಕೃಷ್ಣೇಗೌಡ, ಚಿ.ಲಿಂ.ರವಿಕುಮಾರ್, ಶಿವಕುಮಾರಸ್ವಾಮಿ, ನಿಜಾನಂದಮೂತರ್ಿ, ರಾಮಕೃಷ್ಣಯ್ಯ, ಸಿ.ಎಂ.ಬೀರಪ್ಪ, ಸೇರಿದಂತೆ ಹಲವು ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗಹಿಸಿದ್ದರು.


No comments:

Post a Comment