Monday, November 29, 2010



ಕಸಬ್ನನ್ನು ಶೀಘ್ರ ಗಲ್ಲಿಗೇರಿಸಿ ಎಬಿವಿಪಿ ಒತ್ತಾಯ
ಚಿಕ್ಕನಾಯಕನಹಳ್ಳಿ,ನ,29: ಮುಂಬೈ ಬಾಂಬ್ ಸ್ಪೋಟ ನಡೆದು ಎರಡು ವರ್ಷ ಕಳೆದರೂ ಉಗ್ರ ಕಸಬ್ಗೆ ಗಲ್ಲು ಶಿಕ್ಷೆ ನೀಡದಿರುವುದಕ್ಕೆ ವ್ಯವಸ್ಥೆಯ ವಿರುದ್ದ ಬೇಸರ ವ್ಯಕ್ತಪಡಿಸಿರುವ ಅಭಾವಿಪ ತಾಲೂಕು ಘಟಕ ಕಸಬ್ನನ್ನು ಶೀಘ್ರ ಗಲ್ಲಿಗೇರಿಸುವಂತೆ ಆಗ್ರಹಿಸಿದೆ.
ಪಟ್ಟಣದ ನೆಹರು ಸರ್ಕಲ್ನಲ್ಲಿ ನಡೆದ ಮುಂಬೈ ಬಾಂಬ್ ಸ್ಪೋಟದ ಕರಾಳ ದಿನದ ನೆನಪು ಮತ್ತು ವೀರ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ನೂರಾರು ದೀಪಗಳನ್ನು ಹಚ್ಚಿ ಮೌನ ಆಚರಣೆಯ ಮೂಲಕ ಅಭಾವಿಪ ಕಾರ್ಯಕರ್ತರು ವೀರರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಈ ಕರಾಳ ದಿನ ಮತ್ತೆ ಮರುಕಳಿಸಬಾರದೆಂಬ ಉದ್ದೇಶದಿಂದ ಮತ್ತು ಭಯೋತ್ಪಾದನೆಯನ್ನು ದೇಶಾದ್ಯಂತ ಹತ್ತಿಕ್ಕಲು ಯುವಶಕ್ತಿ ಮುಂದಾಗಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಮುಖಂಡರಾದ ಸಿ.ಡಿ.ಚಂದ್ರಶೇಖರ್, ಮಿಲ್ಟ್ರಿಶಿವಣ್ಣ ಮಾತನಾಡಿ ಉಗ್ರ ಕಸಬ್ಗೆ ಗಲ್ಲು ಶಿಕ್ಷೆ ನೀಡುವುದಕ್ಕೆ ಮತ್ತು ದೇಶದ ಸೈನಿಕರ ಸೌಕರ್ಯದ ಕೊರತೆಯ ಬಗ್ಗೆ ವಿಷಾದಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಎ.ಬಿ.ವಿ.ಪಿ ಹಿರಿಯ ಕಾರ್ಯಕರ್ತ ರಾಕೇಶ್, ರಕ್ಷಣಾ ವೇದಿಕೆ ಅಧ್ಯಕ್ಷ ಗುರುಮೂತರ್ಿ, ಎಸ್.ಐ ಶಿವಕುಮಾರ್, ಎ.ಬಿ.ವಿ.ಪಿ ಕಾರ್ಯಕರ್ತರಾದ ಮನು, ದಿಲೀಪ್, ರವಿ. ಮಧು, ದರ್ಶನ್, ನಂದನ್, ಜಗದೀಶ್, ನವೀನ್ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು

ಹಾಲಿನ ಬೆಲೆ ಹೆಚ್ಚಳಕ್ಕೆ ಗ್ರಾಹಕರು ಸ್ಪಂದಿಸಿ: ಹಳೇಮನೆ
ಚಿಕ್ಕನಾಯಕನಹಳ್ಳಿ,ನ.29: ಹಾಲು ಉತ್ಪಾದಕರ ಮನೆಬಾಗಿಲಿಗೆ ಕೆ.ಎಂ.ಎಫ್ ನೀಡುವ ಸವಲತ್ತುಗಳನ್ನು ಸಂಘಗಳ ಮೂಲಕ ಕೊಂಡೊಯ್ಯುವ ಕೆಲಸಕ್ಕೆ ನಮ್ಮ ತಂಡ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ಜಿಲ್ಲಾ ಹಾಲೂ ಒಕ್ಕೂಟದ ಅಧ್ಯಕ್ಷರಾಗಿ ಎರಡನೇಬಾರಿಗೆ ಆಯ್ಕೆಯಾದ ತಮಗೆ ಅಭಿಮಾನಿಗಳು ಹಾಗೂ ಹಿತೈಷಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮೊದಲ ಬಾರಿ ಅಧ್ಯಕ್ಷನಾಗಿದ್ದಾಗ ಕೇವಲ 470 ಸಂಘಗಳು ಇದ್ದವು ಇದನ್ನು ಅರಿತು ಸಂಘಗಳನ್ನು ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಹೆಚ್ಚು ಸಂಘಗಳನ್ನು ಸ್ಥಾಪಿಸಲು ಗುರಿಯನ್ನು ಹೊಂದಲಾಯಿತು ಎಂದರು.
ಈಗ ಜಿಲ್ಲೆಯಲ್ಲಿ 856 ಸಂಘಗಳಾಗಿವೆ, ಈ ಎಲ್ಲಾ ಸಂಘಗಳು ಲಾಭದಲ್ಲಿ ನಡೆಯುತ್ತಿದ್ದು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಘಗಳಿಗೆ ಒತ್ತು ನೀಡುತ್ತೇನೆ ಎಂದ ಅವರು ಜಿಲ್ಲೆಯಲ್ಲಿ ಕೇವಲ 3ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 5ಲಕ್ಷ ಲೀಟರ್ ಹಾಲನ್ನು ಹೊಂದಲು ತೀಮರ್ಾನಿಸಿಲಾಗಿದೆ, ಇದಕ್ಕಾಗಿ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದರು. ಹಾಲಿನ ಉತ್ಪಾದನೆಯಿಂದ ಉತ್ಪಾದಕರಿಗೆ ಆಗುತ್ತಿರುವ ಲಾಭ ನಷ್ಟಗಳ ಅರಿವು ಜನರಿಗೆ ತಿಳಿದಿದ್ದು ಹಾಲಿನ ಬೆಲೆಯಲ್ಲಿ ಆಗುವ ಏರುಪೇರುಗಳಿಗೆ ಜನರು ಸಹಕರಿಸಬೇಕು ಎಂದರು.
ರಾಜ್ಯದಲ್ಲೇ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಪ್ರಥಮವಾಗಿ ನಂದಿನಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಿದ್ದು ಪ್ರತಿಯೊಬ್ಬರು ಸಹಕರಿಸಿ ಬೆಂಬಲಿಸಿದರೆ ಹೆಚ್ಚಿನ ಸಂಘದ ಅಸ್ಥಿತ್ವಕ್ಕೆ ಪ್ರಾಮುಖ್ಯತೆ ನೀಡುತ್ತೇನೆ ಎಂದರು.
ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಿ.ಅಶೋಕ್ ಮಾತನಾಡಿ ಹಾಲು ಒಕ್ಕೂಟವು 300ಕೋಟಿ ಲಾಭದಿಂದ ರೈತರಿಗೆ ಹಲವಾರು ಯೋಜನೆ ತಂದಿದ್ದು ಆಥರ್ಿಕವಾಗಿ ಸಹಕಾರಿಯಾಗಿದೆ ಮತ್ತು ಹಾಲಿನ ಹೆಚ್ಚಿನ ಉತ್ಪಾದನೆಗೆ ರೈತರಿಗೆ ಪಶುವೈದ್ಯ ಸೇವೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಂ.ಹಾ.ಉ, ಉಪಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ತು.ಹಾ.ಒ. ಮಾಜಿ ಅಧ್ಯಕ್ಷ ಚಂದ್ರಶೇಖರ್, ಹಾ.ಒ. ಉಪ ವ್ಯವಸ್ಥಾಪಕ ನಿಜಲಿಂಗಪ್ಪ, ನಿದರ್ೇಶಕ ತ್ರಯಂಬಕ, ಸುಭ್ರಾಯ್ಭಟ್, ಮಹೇಂದ್ರ, ಜಿ.ರಾಜು, ಸೋಮರಾಜ್, ಬಸಪ್ಪ, ಯರಗುಂಟಪ್ಪ, ಬುದ್ದಿಪ್ರಸಾದ್ ಉಪಸ್ಥಿತರಿದ್ದರು.
ಅಪಘಾತ ಒಬ್ಬನ ಸಾವು
ಚಿಕ್ಕನಾಯಕನಹಳ್ಳಿ,ನ.29: ರಸ್ತೆ ಅಪಘಾತದಲ್ಲಿ ಜಾಣೇಹಾರ್ನ ತಿಮ್ಮಯ್ಯ(55) ಎಂಬಾತ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಲಾರಿಯ ಚಕ್ರಕ್ಕೆ ಸಿಕ್ಕಿ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ ತಿಮ್ಮಯ್ಯ ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳದಿದ್ದಾನೆ. ಪ್ರಕರಣವನ್ನು ಚಿ.ನಾ.ಹಳ್ಳಿ ಪೊಲೀಸರು ದಾಖಲಿಸಿದ್ದಾರೆ.





Sunday, November 28, 2010



ವಿಜ್ಞಾನ ಸಮಾವೇಶದಲ್ಲಿ ಚಿ.ನಾ.ಹಳ್ಳಿಗೆ ಸಿಂಹಪಾಲ
ಚಿಕ್ಕನಾಯಕನಹಳ್ಳಿ,ನ.28: 18ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ನಡೆದ ಭೂ ಸಂಪನ್ಮೂಲ ಸಮೃದ್ದಿಗಾಗಿ ಬಳಸಿ ಭವಿಷ್ಯಕ್ಕಾಗಿ ಉಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕಿನ 6ತಂಡಗಳು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದ್ದಾರೆ ಎಂದು ತಾ.ವಿ.ಕೇಂದ್ರ ಕಾರ್ಯದಶರ್ಿ ಎಂ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಗ್ರಾಮೀಣ ಕಿರಿಯರ ವಿಭಾಗದಲ್ಲಿ ಚಿಕ್ಕಬಿದರೆ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕುಮಾರಿ ಆಶಾ ತಂಡ, ದಿವ್ಯಪ್ರಭ ಶಾಲೆಯ ದೀಪರಾಜಕುಮಾರ್ ತಂಡ, ನವೋದಯ ಶಾಲೆಯ ಸಿ.ಎಮ್.ಜಯಂತ್ ತಂಡ, ಅಂಭೇಡ್ಕರ್ ಪ್ರೌಡಶಾಲೆಯ ಹೆಚ್.ಎನ್.ಕಾವ್ಯ ತಂಡ, ರೋಟರಿ ಪ್ರೌಡಶಾಲೆಯ ಕುಮಾರಿ ಭವ್ಯ ತಂಡ, ಜೆ.ಸಿ.ಪುರ ಮೊರಾಜರ್ಿ ಶಾಲೆಯ ರಂಗಸ್ವಾಮಿ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಇವರನ್ನೆಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್. ಜಿಲ್ಲಾ ವಿಜ್ಞಾನ ಕೇಂದ್ರ ಕಾರ್ಯದಶರ್ಿ ರಾಮಕೃಷ್ಣ, ತಾಲೂಕು ವಿಜ್ಞಾನ ಕೇಂದ್ರ ಅಧಕ್ಷ್ಷೆ ಎನ್.ಇಂದಿರಮ್ಮ, ಕಾರ್ಯದಶರ್ಿ ಎಂ.ಎಸ್.ಈಶ್ವರಪ್ಪ ಅಭಿನಂದಿಸಿದ್ದಾರೆ.


ಮಹಿಳೆಯರಿಗೆ ವಿಪುಲ ಅವಕಾಶವಿದೆ ಬಳಸಿಕೊಳ್ಳಲು ಮುಂದೆ ಬನ್ನಿ
ಚಿಕ್ಕನಾಯಕನಹಳ್ಳಿನ.28: ಮಹಿಳೆಯರು ವಿದ್ಯಾವಂತರಾಗಿ ಎಲ್ಲಾ ರಂಗಗಳಲ್ಲಿಯೂ ಪ್ರವೇಶಿಸಿ ಜನರ ಕಷ್ಟ ಸುಖಗಳಿಗೆ ಬಾಗಿಯಾಗಿ ಆಥರ್ಿಕವಾಗಿ ಸಬಲರಾಗಬೇಕು ಎಂದು ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಭಸವಯ್ಯ ಕರೆ ನೀಡಿದರು.
ಪಟ್ಟಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಿಳೆಯರು ಸಂಘಟಿತರಾಗಿ ಸಕರ್ಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮ ಇರುವಿಕೆಯನ್ನು ಸಾದರ ಪಡಿಸಿ ಪುರಷರಿಗೆ ಸರಿಸಮನಾಗಿ ಬದುಕುವಂತೆ ತಿಳಿಸಿದ ಅವರ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ರಚನೆಯಾಗಿ ಇಂದು ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ಸಮಾರಂಭಗಳಿಗೆ ಹಾಜರಾಗಿ ಸಮಾಜದ ಹಲವು ವಿಷಯಗಳ ಬಗ್ಗೆ ಚಚರ್ಿಸಿ ಅನ್ಯೂನ್ಯತೆಯಿಂದ ಬಾಳಿ ಸಬಲರಾಗುವಂತೆ ಮತ್ತು ಮಹಿಳೆಯರು ಸ್ವಸಹಾಯ ಸಂಘಗಳಿಗೆ ನೆರವಾಗುವಂತೆ ಬ್ಯಾಂಕಿನ ವ್ಯವಹಾರವನ್ನು ತಿಳಿದುಕೊಂಡು ಆಥರ್ಿಕವಾಗಿ ತಮ್ಮನ್ನು ತಾವು ಕಾಪಾಡಿಕೊಳ್ಳಲು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಮಾತನಾಡಿ ಮಹಿಳೆಯರು ತಮ್ಮ ಹಕ್ಕು ಮತ್ತು ರಕ್ಷಣೆಗಾಗಿ ಸಂಘಟಿತರಾಗಲು ಹೋರಾಟ ಕೆಲವೊಮ್ಮೆ ಅನಿವಾರ್ಯವಾಗಬಹುದು ಅಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯರು ಸಂಘಟಿತರಾಗಿ ಕೀಳರಿಮೆ ತೊರೆದು ಸಮಾಜದಲ್ಲಿ ಆಥರ್ಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲೀಕರಣ ಹೊಂದಬೇಕಾಗುತ್ತದೆ ಎಂದ ಅವರು ಮಹಿಳೆ ಮತ್ತು ಪುರುಷರ ಅನುಪಾತದಲಿ ವ್ಯತ್ಯಾಸದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದು ಮೂಢನಂಬಿಕೆ, ಸ್ತ್ರೀ ಬ್ರೂಣ ಹತ್ಯೆ, ಬಾಲ್ಯ ವಿವಾಹ, ಹೆಣ್ಣುಮಕ್ಕಳ ಶಾಲೆ ಬಿಡುವಿಕೆ, ಇಂತಹ ಸಾಮಾಜಿಕ ಪಿಡುಗು ನಿವಾರಣೆಗಾಗಿ ಮಹಿಳೆಯರು ಹೋರಾಟಕ್ಕೆ ಮುಂದಾಗಬೇಕು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರ್ವತಯ್ಯ ಮಾತನಾಡಿ ತೊಟ್ಟಿಲು ತೂಗುವ ಕೈಗಳು ದೇಶವನ್ನು ಆಳಿದರೆ ಮಾಜಿ ಪ್ರಧಾನಿ ಇಂಧಿರಾಗಾಂಧಿಯಂತೆ ದಿಟ್ಟ ಹೆಜ್ಜೆಗಳನ್ನು ಇಟ್ಟು ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಾರೆ, ಮತ್ತು ಇಂಧಿರಗಾಂಧಿಯವರ 20 ಅಂಶಗಳ ಕಾರ್ಯಕ್ರಮದಲ್ಲಿ ಸಮಗ್ರ ಶಿಶು ಅಭಿವೃದ್ದಿ ಯೋಜನೆಯು ಒಂದಾಗಿದ್ದು ಮಹಿಳೆಯರು ಅಧಿಕಾರ ಹಿಡಿದರೆ ಸ್ವಾರ್ಥಕ್ಕಾಗಿ ಶ್ರಮಿಸದೆ ಇಂದಿರಾಗಾಂಧಿಯವರಂತೆ ದೇಶದ ಒಳಿತಿಗಾಗಿ ಶ್ರಮಿಸುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ತುಳಸಿ ಪ್ರಾಥರ್ಿಸಿದರೆ ನಾಗರತ್ನ ಸ್ವಾಗತಿಸಿ, ಮಹದೇವಮ್ಮ ವಂದಿಸಿದರು.
29ರಂದು ಗೋಡೆಕೆರೆ ಲಕ್ಷ ದಿಪೋತ್ಸವ
ಚಿಕ್ಕನಾಯಕನಹಳ್ಳಿ,ನ.28: ಗುರುಸಿದ್ದರಾಮೇಶ್ವರ ಸ್ವಾಮಿಯವರ ಕಾತರ್ಿಕ ಮಾಸದ ಲಕ್ಷದೀಪೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮವನ್ನು ಇದೇ 29ರ ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಗೋಡೆಕೆರಯಲ್ಲಿ ಹಮ್ಮಿಕೊಂಡಿದ್ದು ಮೃಂತ್ಯುಂಜಯ ದೇಶೀಕೇಂದ್ರ ಸ್ವಾಮಿ ಮತ್ತು ಸಿದ್ದರಾಮದೇಶೀಕೇಂದ್ರ ಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಕುಶಾಲ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಬಿ.ಜೆ.ಪಿ ಮುಖಂಡ ಅರುಣ್ಸೋಮಣ್ಣ, ಮಾಜಿ ಗ್ರಾ.ಪಂ.ಅಧ್ಯಕ್ಷ ಪಂಚಾಕ್ಷರಿ, ಟೂಡಾ ಆಯುಕ್ತ ಎನ್.ಆರ್.ಆದರ್ಶಕುಮಾರ್, ಜಿ. ಪಂ. ಯೋಜನಾಧಿಕಾರಿ ಜಿ.ಎಂ.ಸಿದ್ದರಾಮಣ್ಣ ಜಿ.ಪಂ.ಸದಸ್ಯೆ ಸುಶೀಲ ಸುರೇಂದ್ರಯ್ಯ ಉಪಸ್ಥಿತರಿರುವರು.

ದೇಶದ ಅಭಿವೃದ್ದಿಗೆ ಪ್ರತಿಯೊಬ್ಬರೂ ಸೇವೆ ಸಲ್ಲಿಸಬೇಕು: ಎಂ.ವಿ.ಎನ್
ಚಿಕ್ಕನಾಯಕನಹಳ್ಳಿ,ನ.26: ಸಂಸ್ಥೆಗಳ ಮುಖ್ಯವಾದ ಕೆಲಸ ಸೇವೆ, ಸಂಸ್ಥೆಗಳ ಸೇವೆಯಿಂದ ದೇಶದ ಹೆಮ್ಮೆ ಮತ್ತು ಕೀತರ್ಿಯನ್ನು ಬೆಳಗಿಸಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಪಟ್ಟಣದ ಬಿ.ಸಿ.ಎಂ ಹಾಸ್ಟಲ್ನಲ್ಲಿ ಬಿ.ಸಿ.ಎಂ ಮತ್ತು ಇನ್ನರ್ವೀಲ್ ಕ್ಲಬ್ವತಿಯಿಂದ ನಡೆದ ಉಚಿತ ಬೆಡ್ಶೀಟ್ ಮತ್ತು ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲವರಿಗೆ ಹುಟ್ಟಿನಿಂದಲೇ ಸೇವೆಯ ಗುಣ ಆವರಿಸಿರುತ್ತದೆ ಅಂತವರು ಸೇವೆಯ ಮಹತ್ವವನ್ನು ಇತರರಿಗೆ ತಿಳಿಸಿ ಅವರನ್ನು ಸೇವೆಯ ಕಡೆ ವಾಲುವಂತೆ ನೋಡಿಕೊಳ್ಳಬೇಕು ಮತ್ತು ಶ್ರದ್ದೆಯಿಂದ ಸೇವೆ ಸಲ್ಲಿಸಿ ಉತ್ತಮ ಪ್ರಜೆಗಳಾಗಲು ಕರೆ ನೀಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸೇವೆ ಸಲ್ಲಿಸುವ ರೀತಿ ಮಹತ್ವದ್ದು ಆದರೆ ಸೇವೆಗೆ ತಕ್ಕಂತೆ ಪ್ರತಿಫಲ ದೊರಕಿದಾಗ ಸೇವೆ ಸಲ್ಲಿಸುವವರು ಮುಂದೆ ಬರುತ್ತಾರೆ, ಅದೇ ರೀತಿ ಹಾಸ್ಟಲ್ಗೆ ಇನ್ನರ್ವೀಲ್ ಕ್ಲಬ್ ವತಿಯಿಂದ ನೀಡಿರುವ ಕೊಡುಗೆ ಸಾರ್ಥಕವಾಗಲು ವಿದ್ಯಾಥರ್ಿನಿಯರೆಲ್ಲ ಉತ್ತಮ ಅಂಕಗಳನ್ನು ತೆಗೆದು ಒಳ್ಳೆಯ ಕೆಲಸಗಳನ್ನು ಪಡೆದು ಈ ಸಮಾಜ ಸೇವೆ ಸಲ್ಲಿಸಬೇಕು ಎಂದರು.
ಜಿಲ್ಲಾ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಸಮುದಾಯದ ಸಹಭಾಗಿತ್ವವಿದ್ದರೆ ಪ್ರತಿಯೊಬ್ಬರಿಗೂ ಸಹಾಯವಾಗಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಅದಕ್ಕಾಗಿ ಶ್ರದ್ದೆಯಿಂದ ಉತ್ತಮ ಜ್ಞಾನ ಪಡೆದು ಶೈಕ್ಷಣಿಕವಾಗಿ ಹಾಗೂ ಸಮಾಜಿವಕಾಗಿ ಸಮಾಜವನ್ನು ಅಭಿವೃದ್ದಿಪಡಿಸಬೇಕು ಎಂದರು.
ಸಮಾರಂಭದಲ್ಲಿ ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್, ಕಾರ್ಯದಶರ್ಿ ತೇಜಾವತಿ ನರೇಂದ್ರ, ತಾ.ಪಂ.ಸದಸ್ಯ ಸಿ.ಡಿ.ರುದ್ರೇಶ್, ವನಮೂಲ ಭೂಮ್ಕರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಭಾನಾಮತಿ ನಿರೂಪಿಸಿದರೆ ದೇವರಾಜಪ್ಪ ವಂದಿಸಿದರು.





Friday, November 26, 2010



ದುರ್ಬಲ ಹಾಗೂ ತುಳಿತಕ್ಕೊಳಗಾದವರು ಕಾನೂನಿನ ನೆರವು ಪಡೆದು ಅನ್ಯಾಯದ ವಿರುದ್ದ ಧ್ವನಿ ಎತ್ತುವಂತಾಗಬೇಕು: ಡಿ.ಜೆ.
ಚಿಕ್ಕನಾಯಕನಹಳ್ಳಿ.ನ.26: ಕಾನೂನಿನ ಅಜ್ಞಾನ ಕ್ಷಮಾರ್ಹವಾದುದಲ್ಲ, ಇದರ ವಿರುದ್ದ ನಾವು ಸಮರೋಪಾದಿಯಲ್ಲ್ಲಿ ಹೋರಾಟ ಕೈಗೊಳ್ಳಬೇಕು ಅದಕ್ಕಾಗ್ತಿ ಅನಕ್ಷರಸ್ಥರನ್ನು ಅಂಧಕಾರದಿಂದ ಬೆಳಕಿನಡೆಗೆ ಸಾಗಿಸುವ ಒಂದು ಸಾಧನವೇ ಕಾನೂನು ದಿನಾಚರಣೆ ಎಂದು ಜಿಲ್ಲಾ ನ್ಯಾಯಾಧಿಶರಾದ ಜೆ.ವಿ.ಅಂಗಡಿ ಹಿರೇಮಠ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿರುವ ಬಿ.ಆರ್.ಸಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾನೂನಿನ ಅರಿವಿಲ್ಲದವರಿಗೆ ಅದರ ಅರಿವು ಅವಶ್ಯಕವಾಗಿದ್ದು ಸಮಾಜದ ದರ್ಬಲ ವರ್ಗದವರಿಗೆ ನ್ಯಾಯದ ಬಾಗಿಲು ಮುಕ್ತವಾಗಿ ತೆರೆಯಲು ಮತ್ತು ಭಾರತದ ಎಲ್ಲಾ ನಾಗರೀಕರಿಗೂ ನ್ಯಾಯ, ಸ್ವಾತಂತ್ರ್ಯದ ಸಮಾನತೆಯನ್ನು ನೀಡಲು ಕಾನೂನಿನ ಅರಿವು ಮುಖ್ಯವಾಗಿದ್ದು ಯಾವುದೇ ಶುಲ್ಕವಿಲ್ಲದೆ ಮುಫತ್ತಾಗಿ ನ್ಯಾಯ ಪಡೆಯುವಂತಾಗಬೇಕು ಎಂಬ ದೃಷ್ಠಿಯಿಂದ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾನೂನು ಸಾಕ್ಷರತೆ ಸಾಧಿಸುವುದು ಸುಲಭದ ಮಾತಾಗಿರದೆ ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗ ಈ ಮೂರು ಅಂಗಗಳು ಪೂರಕವಾಗಿ ಕಾರ್ಯ ನಿರ್ವಹಿಸುವುದು ಅವಶ್ಯಕವಾದುದು ಎಂದರು. ಜನರಿಗೆ ಕಾನೂನಿನ ಅರಿವು ಮೂಡಿಸುವುದರ ಜೊತೆಗೆ ಅವರ ಹಕ್ಕುಗಳನ್ನು ತಿಳಿಸಬೇಕು, ಕಾನೂನಿನ ಮೂಲಕ ತಮಗೆ ಬೇಕಾದ ಸೌಲಭ್ಯವನ್ನು ಪಡೆಯುಂತಹ ಶಕ್ತಿಯನ್ನೊದಗಿಸುವುದು ಈ ಕಾರ್ಯಕ್ರಮದ ಪ್ರಥಮ ಹೆಜ್ಜೆ, ನಮ್ಮ ಸಮಾಜವು ಹತ್ತು ಹಲವು ವರ್ಗಗಳನ್ನೊಳಗೊಂಡಿದ್ದು ಅವರ ಹಕ್ಕುಗಳು ದಿನನಿತ್ಯ ಚ್ಯುತಿಗೊಳ್ಳುತ್ತಿದ್ದರೂ ಅನಕ್ಷರಸ್ಥರು ಮತ್ತು ದುರ್ಬಲ ವರ್ಗದವರು ಅದರ ವಿರುದ್ದ ದನಿಯೆತ್ತುವುದಿಲ್ಲ ಎಂದು ವಿಷಾದಿಸಿದ ಅವರು, ಸಮಾಜದ ದುರ್ಬಲ ಹಾಗೂ ತುಳಿತಕ್ಕೊಳಗಾಗಿರರುವ ಜನರಲ್ಲಿ ಕಾನೂನಿನ ಅರಿವು ಮೂಡಿಸುವ ವಿಶಾಲವಾದ ಧ್ಯೇಯವನ್ನೊಳಗೊಂಡಿದ್ದು ಆ ಮೂಲಕ ಸಮಾಜದಲ್ಲಿ ಅವರ ಸ್ಥಾನ, ಹಕ್ಕುಗಳನ್ನು ಪಡೆದು ಸಮಜದಲ್ಲಿ ಕಾನೂನಿನ ಅರಿವು ಮೂಡಿಸಿ ನ್ಯಾಯ ಒದಗಿಸಿಸುವ ಉದ್ದೇಶವನ್ನು ಹೊಂದಿದೆ ಎಂದರು.
ಸಮಾರಂಭದಲ್ಲಿ ನ್ಯಾಯಾಧೀಶರುಗಳಾದ ಜಿ.ಎಂ.ಶೀನಪ್ಪ, ಎನ್.ಶೀಲಾ, ಎ.ಜಿ.ಶಿಲ್ಪ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ವಕೀಲರಾದ ಹೆಚ್.ಎಸ್.ಜ್ಞಾನಮೂತರ್ಿ, ಮಹಲಿಂಗಯ್ಯ, ಜಿ.ಎಸ್.ಚನ್ನಬಸಪ್ಪ, ಸಿ,ಕೆ.ಸೀತಾರಾಮಯ್ಯ, ಸಿ.ಪಿ.ಐ ರವಿಪ್ರಸಾದ್, ಸಹಾಯಕ ಸಕರ್ಾರಿ ಅಭಿಯೋಜಕ ಆರ್.ಟಿ.ಆಶಾ, ಎ.ಪಿ.ಡಿ.ಪಿ.ಒ ಪರಮೇಶ್ವರಪ್ಪ, ಸುಮಂಗಲ ಹಿರೇಮಠ್ ಉಪಸ್ಥಿತರಿದ್ದರು.

Thursday, November 25, 2010




ಅಕ್ಕಮಹಾದೇವಿ ಸಂಘದ ಭವನದ ನಿಮರ್ಾಣ ಸಹಾಯರ್ಥ 'ಮಕ್ಮಲ್ ಟೋಪಿ' ನಾಟಕ
ಚಿಕ್ಕನಾಯಕನಹಳ್ಳಿ,ನ.25: ಅಕ್ಕಮಹಾದೇವಿ ಮಹಿಳಾ ಸಮಾಜದ ಸಮುದಾಯ ಭವನ ಕಟ್ಟಡದ ಸಹಾಯಾರ್ಥವಾಗಿ ಮಕ್ಮಲ್ ಟೋಪಿ ಎಂಬ ಹಾಸ್ಯಬರಿತ ನಾಟಕ ಪ್ರದರ್ಶನವನ್ನು ಡಿಸೆಂಬರ್ 5ರ ಭಾನುವಾರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ ಎಂದು ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ತಿಳಿಸಿದರು.
ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಸ್ಯರತ್ನಕರ ಡಾ.ಮಾಸ್ಟರ್ ಹಿರಣ್ಣಯ್ಯ ಮತ್ತು ಬಾಬು ಹಿರಣ್ಣಯ್ಯ ಮಿತ್ರ ಮಂಡಳಿಯವರ ಸಹಾಯದೊಂದಿಗೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಾಟಕ ಹಮ್ಮಿಕೊಂಡಿದ್ದು ಸಂಘ ಸ್ಥಾಪನೆಯಾಗಿ 10ವರ್ಷವಾಗಿದ್ದು ಅದರ ನೆನಪಿಗಾಗಿ ಮತ್ತು ಸಮುದಾಯ ಭವನ ಕಟ್ಟಲು ಕಟ್ಟಡದ ಸಹಾಯಾರ್ಥವಾಗಿ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜನಸಾಮಾನ್ಯರ ಸ್ಥಿತಿಗತಿಗಳನ್ನು ಆಧರಿಸಿ ಈ ನಾಟಕ ಏರ್ಪಡಿಸಿದ್ದು ನಾಟಕದ ಪ್ರವೇಶ ದರ 100ರೂ ಎಂದು ತಿಳಿಸಿದ್ದಾರೆ.
ಗೋಷ್ಟಿಯಲ್ಲಿ ಸಂಘದ ಕಾರ್ಯದಶರ್ಿ ಭಾರತಿ ನಟರಾಜು, ವೀಣಾಶಂಕರ್. ಪುಷ್ಪ, ಯಶೋಧ, ಅಹಲ್ಯ ಉಪಸ್ಥಿತರಿದ್ದರು.

ನೀರಾವರಿಗೆ ಹೋರಾಟಕ್ಕೆ ತಡ ಮಾಡಿದರೆ, ಈ ಪ್ರದೇಶ ಮರುಭೂಮಿಯಾಗುತ್ತದೆ: ಪರಮಶಿವಯ್ಯ
ಚಿಕ್ಕನಾಯಕನಹಳ್ಳಿ,ನ.25: ಪ್ರತಿ ಜೀವಕ್ಕೂ ಜೀವಿಸಲು ಬೇಕಾದ ನೀರಾವರಿಗೆ ಸಕರ್ಾರ ಅಷ್ಟಾಗಿ ಗಮನ ನೀಡುತ್ತಿಲ್ಲ, ನನ್ನ ಉಸಿರುರುವವರಗೆ ನೀರಾವರಿಗಾಗಿ ನಿರಂತರವಾಗಿ ಶ್ರಮಿಸುತ್ತೇನೆ ಎಂದು ನೀರಾವರಿ ತಜ್ಞ ಪರಮಶಿವಯ್ಯ ಹೇಳಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ನಡೆದ ಅಹೆಡ್ ಸಂಸ್ಥೆಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು 1ಕೋಟಿ ಹೆಕ್ಟೇರ್ಗೆ ನೀರಿನ ಅವಶ್ಯಕತೆ ಇದ್ದು, ಈಗ ಕೇವಲ 25ಲಕ್ಷ ಎಕ್ಟೇರ್ಗೆ ಮಾತ್ರ ನೀರಾವರಿ ಬಿಡುಗಡೆಯಾಗಿದೆ ಇದರಿಂದ ರೈತರಿಗೆ ತುಂಬ ತೊಂದರೆಯಾಗಿ ಮುಂದೊಂದು ದಿನ ಈ ಪ್ರದೇಶ ಮರುಭೂಮಿಯಾಗುತ್ತದೆ ಎಂದ ಅವರು, ಜನಸಾಮಾನ್ಯರು ಕೇವಲ ಸಭೆ, ಸಮಾರಂಬಗಳಿಗೆ ಮಾತ್ರ ಬಂದು ಭಾಷಣಗಳಿಗೆ ಚಪ್ಪಾಳೆ ತಟ್ಟುತ್ತಾ ತಮ್ಮ ಕೆಲಸವನ್ನು ಮರೆತಿದ್ದಾರೆ ಇದರಿಂದ ಅವರ ಜೀವನೋಪಾಯಕ್ಕೆ ತೊಂದರೆ ಉಂಟಾಗಿದ್ದು, ಜೀವಿಸಲು ಬೇಕಾಗಿರುವ ನೀರಿಗಾಗಿ ಹೋರಾಟದ ಅಗತ್ಯವಾಗಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಪಿ.ರವಿಪ್ರಸಾದ್ ಮಾತನಾಡಿ ಪ್ರತಿಯೊಂದು ಸಂಘ ಸಂಸ್ಥೆಗಳು ತಮ್ಮ ಸೇವೆಯಲ್ಲಿ ಕೆಲಸ ನಿರ್ವಹಿಸುವಾಗ ಪಾರದರ್ಶಕತೆ ಮುಖ್ಯವಾಗಿದ್ದು ಸಂಘ ಸಂಸ್ಥೆಗಳ ಉದ್ದೇಶ ಉತ್ತಮ ಕಾರ್ಯ ನಿರ್ವಹಿಸಿ ರಾಷ್ಟ್ರದ ಸೇವೆಗಾಗಿ ಯುವಕರು ಮುಂದೆ ಬರಬೇಕು ಎಂದರು.
ಅಹೆಡ್ ಸಂಸ್ಥೆಯ ಅಧ್ಯಕ್ಷ ಸಿದ್ದರಾಮೇಗೌಡ ಮಾತನಾಡಿ ಹಳ್ಳಿಗಾಡಿನ ಜನರಿಗೆ ಉತ್ತಮ ಸವಲತ್ತು ನೀಡುವ ದೂರದೃಷ್ಟಿ ಉದ್ದೇಶ ನಮ್ಮ ಸಂಸ್ಥೆ ಹೊಂದಿದೆ, ನಮ್ಮ ಸಂಸ್ಥೆಯ ಉತ್ತಮ ಕೆಲಸಕ್ಕಾಗಿ ಸಹಕರಿಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಎಸ್.ಬಿ.ಎಂ. ಶಾಖೆ ವ್ಯವಸ್ಥಾಪಕ ಶಂಕರ್, ಪರಮೇಶ್ವರಪ್ಪ, ಪದ್ಮ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪ್ರಭುಸ್ವಾಮಿ ಸ್ವಾಗತಿಸಿ ವಂದಿಸಿದರು.





ಚಿಕ್ಕನಾಯಕನಹಳ್ಳಿ,ನ.25: ಅಕ್ಕಮಹಾದೇವಿ ಮಹಿಳಾ ಸಮಾಜದ ವತಿಯಿಂದ ಮಕ್ಮಲ್ ಟೋಪಿ ಎಂಬ ಹಾಸ್ಯಬರಿತ ನಾಟಕ ಪ್ರದರ್ಶನವನ್ನು ಡಿಸೆಂಬರ್ 5ರ ಭಾನುವಾರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ ಎಂದು ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ತಿಳಿಸಿದರು.
ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಾಸ್ಯರತ್ನಕರ ಡಾ.ಮಾಸ್ಟರ್ ಹಿರಣ್ಣಯ್ಯ ಮತ್ತು ಬಾಬು ಹಿರಣ್ಣಯ್ಯ ಮಿತ್ರ ಮಂಡಳಿಯಿಂವರ ಸಹಾಯದೊಂದಿಗೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಾಟಕ ಹಮ್ಮಿಕೊಂಡಿದ್ದು ಸಂಘ ಸ್ಥಾಪನೆಯಾಗಿ 10ವರ್ಷವಾಗಿದ್ದು ಅದರ ನೆನಪಿಗಾಗಿ ಮತ್ತು ಸಮುದಾಯ ಭವನ ಕಟ್ಟಲು ಕಟ್ಟಡದ ಸಹಾಯಾರ್ಥವಾಗಿ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜನಸಾಮಾನ್ಯರ ಸ್ಥಿತಿಗತಿಗಳನ್ನು ಆಧರಿಸಿ ಈ ನಾಟಕ ಏರ್ಪಡಿಸಿದ್ದು ನಾಟಕದ ಪ್ರವೇಶದರ 100ರೂ ಎಂದು ತಿಳಿಸಿದ್ದಾರೆ.
ಗೋಷ್ಟಿಯಲ್ಲಿ ಸಂಘದ ಕಾರ್ಯದಶರ್ಿ ಭಾರತಿ ನಟರಾಜು, ವೀಣಾಶಂಕರ್. ಪುಷ್ಪ, ಯಶೋಧ, ಅಹಲ್ಯ ಉಪಸ್ಥಿತರಿದ್ದರು.

ರಾಗಿ ರಾಮಾಯಣದ ಮೂಲಕ ಸಾಮಾಜಿಕ ನ್ಯಾಯವನ್ನು ಕಟ್ಟಿಕೊಟ್ಟವರು ಕನಕ ದಾಸರು: ಪ್ರೊ.ಎಸ್.ಜಿ.ಎಸ್.
ಚಿಕ್ಕನಾಯಕನಹಳ್ಳಿ,ನ.25: ಭೋಗಕ್ಕೆ ಬೆನ್ನು ತಿರುಗಿಸಿ ಬಡತನದ ಕಡೆ ಮುಖ ಮಾಡಿದ ಕನಕ ದಾಸರ ಪ್ರಜ್ಞೆಯನ್ನು ಅರಿಯುವ ಮೂಲಕ ಜಯಂತೋತ್ಸವವನ್ನು ಆಚರಿಸಬೇಕೆಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ ಹಾಗೂ ಕನಕ ಯುವಕ ಸಂಘ ಸಂಯುಕ್ತವಾಗಿ ಆಚರಿಸಿದ 523ನೇ ಕನಕ ಜಯಂತೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶ್ರೀಮಂತಿಕೆಯ ಸಂಭ್ರಮಾಚರಣೆಯನ್ನು ಬದಿಗಿಟ್ಟು ಸಂಕಟದಲ್ಲಿರುವ ಜನರಿಗೆ ಬೆಂಬಲವಾಗಿ ನಿಂತ ಕನಕದಾಸರು, ರಾಮಧಾನ್ಯ ಚರಿತೆಯ ಮೂಲಕ ಶ್ರೀಮಂತ ಹಾಗೂ ಬಡವರ ಮಧ್ಯೆದಲ್ಲಿನ ಗಟ್ಟಿತನವನ್ನು ಪ್ರದಶರ್ಿಸಿದ್ದಾರೆ. ಆ ಕಾರಣಕ್ಕಾಗಿಯೇ ರಾಮಧಾನ್ಯ ಚರಿತೆಯನ್ನು ರಾಗಿ ರಾಮಯಣ ಎನ್ನುತ್ತಾರೆ ಎಂದರು.
ಜನರಲ್ಲಿ ಸಾಮಾಜಿಕ ನ್ಯಾಯವನ್ನು ತಮ್ಮ ಸಾಹಿತ್ಯದ ಮೂಲಕ ಜಾಗೃತಿಯನ್ನು ಉಂಟು ಮಾಡಿದ ಹೋರಾಟಗಾರ, ಅವರ ಆಶಯಗಳನ್ನು ಈಡೇರಿಸುವಲ್ಲಿ ಹಿಂದುಳಿದವರೆಲ್ಲಾ ಎಲ್ಲರೂ ಒಂದಾಗಬೇಕೆಂದರು. ಇಂದಿಗೂ ಸಾಮಾಜಿಕ ನ್ಯಾಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿದ್ದು, ಹಾವನೂರು ವರದಿಯಲ್ಲಿ ಗುರುತಿಸದೆ ನೂರಾರು ಜಾತಿಗಳು ಮೀಸಲಾತಿಯಿಂದ ವಂಚಿತವಾಗುತ್ತಿವೆ. 1931ರಲ್ಲಿ ಜಾತಿಗಣತಿ ನಡೆದಿದ್ದು ಬಿಟ್ಟರೆ ಇಲ್ಲಿಯವರೆಗೂ ಜಾತಿ ಗಣತಿ ನಡೆದಿಲ್ಲವೆಂದರು.
ಇಂದಿನ ವ್ಯವಸ್ಥೆ ಒಳಗೆ ಪ್ರಜಾಪ್ರಭುತ್ವ ನೈತಿಕ ಅಧಃಪತನವಾಗುತ್ತಿದ್ದು, ವೈಯಕ್ತಿಕ ಕಾರಣಗಳಿಗಾಗಿ ಜಾತಿ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಹಿಂದುಳಿದ ಜಾತಿಗಳನ್ನು ಒಟ್ಟುಗೂಡಿಸಿಕೊಂಡು ಕರೆದುಕೊಂಡು ಹೋಗುವ ಜವಬ್ದಾರಿ ಹಿರಿಯಣ್ಣನಂತಿರುವ ಕುರುಬ ಜನಾಂಗ ತನ್ನ ಹೊಣೆಗಾರಿಕೆಯನ್ನು ಅರಿಯಬೇಕು, ಸಣ್ಣಪುಟ್ಟ ಜಾತಿಗಳನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಂಡು ಅವರಿಗೆ ಸಾಮಾಜಿಕ ನ್ಯಾಯವನ್ನು ಒದಿಗಿಸಕೊಡಬೇಕೆಂದರು.
ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಜಾತಿ ವಿನಾಶಕ್ಕೆ ನಾಂದಿ ಹಾಡಬೇಕಾಗಿರುವ ಈ ಸಂದರ್ಭದಲ್ಲಿ ಇದರ ಹೊಣೆಗಾರಿಕೆಯನ್ನು ವಹಿಸಕೊಳ್ಳುವವರು ಯಾರೆಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು.
ಸಮಾರಂಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಪ್ರಸ್ಥಾವಿಕವಾಗಿ ಮಾತನಾಡಿ ಕನಕದಾಸರು ತಮ್ಮ ಕೀರ್ಥನೆಗಳಿಂದ ಅಷ್ಟೇ ಅಲ್ಲ ಒಡಪುಗಳ ಮೂಲಕ ಅಂದಿನ ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಟ್ಟ ಶ್ರೇಷ್ಠ ಸಂತ ಅವರನ್ನು ಸಾರ್ವಜನಿಕವಾಗಿ ಸ್ಮರಿಸಿಕೊಳ್ಳುವಂತಹ ಕಾರ್ಯವನ್ನು ಸಕರ್ಾರ ಮಾಡಿದ್ದು ಕನಕ ದಾಸರ ಆಶಯಗಳಿಗೆ ಕೊಟ್ಟ ಗೌರವ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಆಡಳಿತದ ವತಿಯಿಂದ ಸಾಹಿತಿ ಎಂ.ವಿ.ನಾಗರಾಜ್ ರಾವ್, ಶಿಕ್ಷಕ ಹಾಗೂ ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ, ಶಿಲ್ಪಿ ವಿಶ್ವನಾಥ್, ದಲಿತ ಮಹಿಳೆ ರುಕ್ಮಿಣಮ್ಮನವರನ್ನು ಸನ್ಮಾನಿಸಲಾಯಿತು, ಕನಕ ಯುವಕ ಸಂಘ ಗವಿರಂಗಯ್ಯ, ರೇವಣ್ಣ ಒಡೆಯರ್, ಗವಿಸಿದ್ದಯ್ಯ, ರತ್ನಕಂಬಳಿ ನೇಕಾರ ಬಸವರಾಜು ರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿದರು.
ಸಮಾರಂಭದಲ್ಲಿ ಕಮಲ ಬಸವರಾಜು ಪ್ರಾಥರ್ಿಸಿದರೆ, ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರು, ಕೆಂಬಾಳ್ ರಮೇಶ್ ನಿರೂಪಿಸಿದರು, ಉಪನ್ಯಾಸಕ ಕಣ್ಣಯ್ಯ ಕನಕ ವಿದ್ಯಾಭಿವೃದ್ದಿ ನಿಧಿಯ ವರದಿ ನೀಡಿದರು, ಸುಮುಖ ಮಹಿಳಾ ಭಜನಾ ಮಂಡಳಿಯವರು ಸಾಮೂಹಿಕ ಗೀತೆ ಹಾಡಿದರೆ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ವಂದಿಸಿದರು.


Tuesday, November 23, 2010





ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಗಮನ ಬಿಟ್ಟು ಸಕರ್ಾರ ಉರುಳಿಸುವ ದೃಷ್ಟಿಯಲ್ಲಿರುವ ಶಾಸಕರು
ಚಿಕ್ಕನಾಯಕನಹಳ್ಳಿ,ನ.23: ಪ್ರಜಾಪ್ರಭುತ್ವ ವ್ಯವಸ್ಥೆಯ ಜನಾಂದೋಲನ ನೀತಿಯ ವಿರುದ್ದ ಶಾಸಕರು ತಮ್ಮ ಕರ್ತವ್ಯ ಮರೆತು ಬಿಜೆಪಿ ಸಕರ್ಾರ ಉರುಳಿಸುವ ದೃಷ್ಟಿಯಿಂದ ನಿರಂತರವಾಗಿ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಶಿವಪ್ರಸಾದ್ ಹೇಳಿದರು.
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ಏರ್ಪಡಿಸಿದ್ದ ಸ್ಪಂದನ ಜನಸ್ಪಶರ್ಿ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು 40 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬಂದು ಪ್ರತಿ ಗ್ರಾಮಗಳಲ್ಲಿ ಹಲವು ಜನಪರ ಕಾರ್ಯಗಳನ್ನು ಏರ್ಪಡಿಸಿ ಶೇಕಡ 80ರಷ್ಟು ಯೋಜನೆಗಳನ್ನು ಮನೆ ಬಾಗಿಲಿಗೆ ಬರುವಂತೆ ಮಾಡಿದ್ದಾರೆ, ಈ ಸಾಧನೆಗಳನ್ನೆಲ್ಲಾ ವಿರೋದ ಪಕ್ಷದವರು ಮರೆತು ಸಕರ್ಾರ ಉರುಳಿಸಿ ಹಿಂಬಾಗಿಲಿನಿಂದ ಬರುವ ಪ್ರಯತ್ನ ನಡೆಸುತ್ತಿದ್ದಾರೆ., ಇಂತಹ ಗುಂಪಿನೊಂದಿಗೆ ಕೈ ಜೋಡಿಸಿರುವ ಶಾಸಕರು ಕ್ಷೇತ್ರದಲ್ಲಿ ಹರಾಜಕತೆ ಉಂಟು ಮಾಡಿ ಜನಸಾಮಾನ್ಯರ ಸಮಸೈಯನ್ನು ಅತಿರೇಕಕ್ಕೆ ಎಡೆಮಾಡಿಕೊಟ್ಟಿದ್ದಾರೆ, ಇದರಿಂದ ತಾಲೂಕು ಬಿಜೆಪಿ ಘಟಕ ಪ್ರತಿವಾರ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡು ಸಂಕಷ್ಟ ಜನರ ನೆರವಿಗೆ ಬಂರಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಂಕರಪ್ಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗೋಡೆಕೆರೆ ಜಗದೀಶ್ ಸ್ವಾಗತಿಸಿದರೆ ಸುರೇಶ್ಹಳೇಮನೆ ನಿರೂಪಿಸಿ, ಕವಿತಾಕಿರಣ್ಕುಮಾರ್ ವಂದಿಸಿದರು.

ಕನಕದಾಸರ ಜಯೋತ್ಯೋತ್ಸವ ಆಚರಣೆ
ಚಿಕ್ಕನಾಯಕನಹಳ್ಳಿ,ನ.23: ಕಲಿ, ಸಂತ, ಕೀರ್ತನಕಾರ, ಸಮಾಜ ಸೇವಕ, ಕವಿ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 24ರ ಬುಧವಾರ ಮಧ್ಯಾಹ್ನ 12ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ವಿಶೇಷ ಉಪನ್ಯಾಸ ನೀಡಲಿದ್ದು ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಸಾಧಕರಿಗೆ ಸನ್ಮಾನಿಸಲಿದ್ದು ಪುರಸಭಾಧ್ಯಕ್ಷ ಸಿ.ಜಿ.ರಾಜಣ್ಣ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯರಾದ ಎ.ಎಚ್.ಶಿವಯೋಗಿಸ್ವಾಮಿ, ಎಂ.ಆರ್.ಹುಲಿನಾಯ್ಕರ್, ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಇ.ಓ ದಯಾನಂದ್, ಸಿ.ಪಿ.ಐ ರವಿಪ್ರಸಾದ್, ಬಿ.ಇ.ಓ ಸಾ.ಚಿ.ನಾಗೇಶ್, ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ, ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ರಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ ಉಪಸ್ಥಿತರಿರುವರು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.

ಉಚಿತ ಬೆಡ್ಶೀಟ್ ಹಾಗೂ ಪುಸ್ತಕ ಕೊಡುಗೆ ಸಮಾರಂಭ
ಚಿಕ್ಕನಾಯಕನಹಳ್ಳಿ.ನ.23: ಉಚಿತ ಬೆಡ್ಶೀಟ್ ವಿತರಣೆ ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮವನ್ನು ಇದೇ 25ರ ಗುರುವಾರ ಮಧ್ಯಾಹ್ನ 12.45ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಇನ್ನರ್ವೀಲ್ ಕ್ಲಬ್ ಹಾಗೂ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಏರ್ಪಡಿಸಿದ್ದು ಬಿ.ಸಿ.ಎಂ. ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾಥರ್ಿ ನಿಲಯದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ 319ರ ಇನ್ನರ್ವೀಲ್ ಚೇರ್ಮನ್ ರೇಣು ಅಯ್ಯರ್ ವಿದ್ಯಾಥರ್ಿನಿಯರಿಗೆ ಬೆಡ್ಶೀಟ್ ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ಇ.ಓ ಎನ್.ಎಂ ದಯಾನಂದ್, ಉಪಸ್ಥಿತರಿರುವರು.


Sunday, November 21, 2010



ಶಾಸಕರುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಸಿ.ಎಂ.ರವರಿಗೆ, ಶಾಸಕರ ಬೆಲೆ ಏನು ಎಂಬುದನ್ನು ತೋರಿಸಲು ಹೋಗಿದ್ದೆವು: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ನ.21: ನಮ್ಮ ಪತ್ರಗಳಿಗೆ ಮಾನ್ಯತೆ ನೀಡದ ಮುಖ್ಯಮಂತ್ರಿಗಳು, ನಮ್ಮ ಕ್ಷೇತ್ರಗಳಿಗೆ ನೀಡುವ ಅನುದಾನ ನೀಡುವಲ್ಲಿ ಅನುಸರಿಸುತ್ತಿದ್ದ ತಾರತಮ್ಯ ನೀತಿ ಹಾಗೂ ಅತಿಯಾದ ಸ್ವಜನ ಪಕ್ಷಪಾತದಿಂದ ರೋಸಿ ಹೋಗಿದ್ದೇವೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರಿಗೆ ಯಾವುದೇ ಮಾನ್ಯತೆಯನ್ನು ನೀಡದೆ ನಮ್ಮನ್ನೆಲ್ಲಾ ನಿರ್ಲಕ್ಷಿಸುವ ಜೊತೆಗೆ ವಿಧಾನ ಸಭಾ ಕ್ಷೇತ್ರಗಳಿಗೆ ನೀಡುವ ಅನುದಾನವನ್ನು ಸಮರ್ಪಕವಾಗಿ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಈ ಸಕರ್ಾರ, ರಾಜ್ಯದ ಅಭಿವೃದ್ದಿಯನ್ನು ಕಡೆಗಣಿಸಿ ಸ್ವಹಿತಾಸಕ್ತಿಗೋಸ್ಕರ ಸಾಕಷ್ಟು ಅವ್ಯವಹಾರಗಳನ್ನು ಮಾಡುತ್ತಿರುವು ರಾಜ್ಯ ಮಟ್ಟದ ಬಿ.ಜೆ.ಪಿ. ನಾಯಕರು, ಹಗರಣಗಳ ಸರಮಾಲೆಯಲ್ಲಿ ಸುತ್ತಿಕೊಂಡಿದ್ದಾರೆ, ಈ ಹಗರಣಗಳನ್ನು ನಮ್ಮ ಜೆ.ಡಿ.ಎಸ್. ಬಯಲೆಗೆಳೆಯುತ್ತಿರುವ ಭರಾಟೆಗೆ ಬಿ.ಜೆ.ಪಿ. ನಾಯಕರು ಧೂಳಿಪಟವಾಗಿತ್ತಿದ್ದಾರೆ. ಇದರ ಹೊಡೆತವನ್ನು ತಾಳಲಾರದೆ ಆ ಪಕ್ಷದ ನಾಯಕರು ದಿಕ್ಕುತೋಚದೆ ಪರದಾಡುತ್ತಿದ್ದಾರೆ ಎಂದರಲ್ಲದೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸಿ.ಎಂ.ರವರು ತಕ್ಷಣ ಕೆಳಗಿಳಿಯಬೇಕೆಂದರು.
ಪಕ್ಕದ ಮಹಾರಾಷ್ಟ್ರದಲ್ಲಿನ ರೀತಿಯಲ್ಲಿಯೇ ಇಲ್ಲಿಯೂ ನಡೆಯಬೇಕು, ಹಗರಣಗಳ ಬಗ್ಗೆ ಮೇಲ್ಮಟ್ಟದಲ್ಲಿ ನೀತಿಪಾಠ ಮಾಡುವ ಬಿ.ಜೆ.ಪಿ.ನಾಯಕರಿಗೆ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಹಗರಣಗಳ ಬಗ್ಗೆ ಮಾಹಿತಿ ಇಲ್ಲವೆ ? ಎಂದು ಪ್ರಶ್ನಿಸಿದರಲ್ಲದೆ, ಕಾಂಗ್ರೆಸ್ಗೆ ಒಂದು ನೀತಿ ಬಿ.ಜೆ.ಪಿ.ಗೆ ಒಂದು ನೀತಿಯಾ ಎಂದರು.
ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿಯವರು ಬಿ.ಜೆ.ಪಿ.ನಾಯಕರ ಹಗರಣಗಳನ್ನು ಬಯಲು ಮಾಡಲು ಸಮಿತಿಯೊಂದನ್ನು ರಚಿಸಿದ್ದು ಆ ಸಮಿತಿಯಲ್ಲಿದ್ದ ನನಗೆ, ನಮ್ಮ ನಾಯಕರು ವಹಿಸಿದ್ದ ಜವಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಕ್ಷೇತ್ರಕ್ಕೆ ಬರುವುದು ತಡವಾದರೂ ಪ್ರತಿ ದಿವಸ ಕ್ಷೇತ್ರದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಸದಾ ಮಾಹಿತಿ ಪಡೆಯುತ್ತಿದ್ದೆ ಎಂದರು.
ಬೋರನಕಣಿವೆ ಜಲಾಶಯದ ಗೇಟ್ ದುರಸ್ತಿ ಸಲುವಾಗಿ ಲಕ್ಕವಳ್ಳಿಯಿಂದ ಇಂಜಿನಿಯರ್ರವರನ್ನು ಕರೆಸಿ ಅದರ ದುರಸ್ಥೆಗೆ ಮುಂದಾಗಿರುವುದಲ್ಲದೆ, ತಾಲೂಕಿನ ಕೆರೆಗಳಲ್ಲಿನ ಏರಿಗಳನ್ನು ಸರಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಅದನ್ನು ಸರಿ ಪಡಿಸಲು ಅಧಿಕಾರಿಗಳು ಕೇಳುವ ಅನುದಾನವನ್ನು ನೀಡಲು ಸಕರ್ಾರದ ಕೈಯಲ್ಲಿ ಸಾಧ್ಯವಾಗುತ್ತಿಲ್ಲ, ಇದರಿಂದ ಸಾಕಷ್ಟು ಅನಾನುಕೂಲಗಳಾಗುತ್ತಿದೆ ಎಂದರು.
ಸಕರ್ಾರ ತಾಲೂಕಿಗೆ ಯಾವ ರೀತಿಯ ಹಣವನ್ನು ಬಿಡುಗಡೆ ಮಾಡದ ಪರಿಣಾಮ, ತಾಲೂಕಿನಲ್ಲಿ ಆಗುತ್ತಿರುವ ಅತಿವೃಷ್ಟಿಗೆ ತಾಲೂಕು ಆಡಳಿತದಿಂದ ಸಹಕಾರ ನೀಡಲಾಗುತ್ತಿಲ್ಲ ಎಂದರು.
ಸ್ಥಳೀಯ ಬಿ.ಜೆ.ಪಿ. ತಾಲೂಕು ಕಛೇರಿ ಆವರಣದಲ್ಲಿ ನಡೆಸಲು ಉದ್ದೇಶಿಸಿರುವ ಸ್ಪಂದನ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಯಿಸಿದ ಶಾಸಕರು, ಈ ರೀತಿಯ ಕಾರ್ಯಕ್ರಮಕ್ಕೆ ನಿಯಮಾವಳಿಗಳಲ್ಲಿ ಅವಕಾಶವಿಲ್ಲವೆಂದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಪುರಸಭಾ ಅಧ್ಯಕ್ಷ ಸಿ.ಜಿ.ರಾಜಣ್ಣ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಜಿ.ಪಂ.ಸದಸ್ಯ ರಘುನಾಥ್, ತಾ.ಪಂ.ಸದಸ್ಯ ಕೆ.ಟಿ.ಗೋವಿಂದಪ್ಪ, ಪುರಸಭಾ ಸದಸ್ಯರುಗಳಾದ ದೊರೆಮುದ್ದಯ್ಯ, ರವಿ, ಎಂ.ಎನ್.ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Saturday, November 20, 2010


ಕನಕ ದಾಸರ ಜಯಂತ್ಯೋತ್ಸವದಂದು ವಿವಿಧ ರೀತಿಯ ಮೆರವಣಿಗೆ, ವೇಷಗಾರಿಕೆ
ಚಿಕ್ಕನಾಯಕನಹಳ್ಳಿ,ನ.20: ತಾಲೂಕು ಮಟ್ಟದ ಭಕ್ತ ಕನಕ ದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇದೇ 24ರ ಬುಧವಾರ ಮಧ್ಯಾಹ್ನ 12-30ಕ್ಕೆ ಸಮಾರಂಭವನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಅಂದು ಬೆಳಗ್ಗೆ 9ಗಂಟೆಗೆ ನಡೆಯುವ ವೈಭವದ ಉತ್ಸವವು ನಡೆಯಲಿದ್ದು ಉತ್ಸವದ ಜೊತೆಗೆ ಮಹಿಳಾ ವೀರಗಾಸೆ ಕುಣಿತ, ಯುವಕರ ತಂಡದ ದೊಳ್ಳು ಕುಣಿತ, ಕೋಲಾಟ ಕುಣಿತ, ಗಾರುಡಿಗನ ಕುಣಿತ, ನಾಸಿಕ್ ಡೋಲು ವಾದ್ಯ, ಪಾಳೇಗಾರರ ವೇಷ, ಪಟ ಕುಣಿತ, ಕನಕದಾಸರ ವೇಷಗಾರಿಕೆ ಮತ್ತು ಸ್ಥಬ್ದ ಚಿತ್ರಗಳೊಂದಿಗೆ ವೇದಿಕೆಯವರೆವಿಗೂ ಉತ್ಸವ ಹಮ್ಮಿಕೊಳ್ಳಲಾಗಿದೆ.


ಮಾಧ್ಯಮದಂತೆ ಕೆಲಸ ನಿರ್ವಹಿಸುವ ಬ್ಯಾಂಕ್ ಶಾಖೆಗಳು
ಚಿಕ್ಕನಾಯಕನಹಳ್ಳಿ,ನ.20: ಬ್ಯಾಂಕ್ ಒಂದು ಮಾಧ್ಯಮವಿದ್ದಂತೆ ಕೆಲಸ ನಿರ್ವಹಿಸಿ ಎಲ್ಲರಿಗೂ ಸಮನಾಗಿ ಸೌಲಭ್ಯಗಳನ್ನು ನೀಡುವ ಒಂದು ಸಹಾಯ ಕೇಂದ್ರ ಎಂದು ಬ್ಯಾಂಕ್ ಇನ್ಸ್ಪೆಕ್ಟರ್ ಸತೀಶ್ ಹೇಳಿದರು.
ಪಟ್ಟಣದ ಕೆನರ ಬ್ಯಾಂಕ್ ಆವರಣದಲ್ಲಿ ನಡೆದ ಪೌಂಡರ್ಸ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೋಷಕರು ಉಳಿತಾಯ ಮಾಡುವುದರಲ್ಲದೇ ಮಕ್ಕಳಿಗೂ ಉಳಿತಾಯದ ಬಗ್ಗೆ ತಿಳಿಸಬೇಕು ಅದಕ್ಕಾಗಿ ಬ್ಯಾಂಕ್ಗಳ ಖಾತೆಗಳನ್ನು ತೆರೆಯಿಸಿ ಮಕ್ಕಳೇ ಹಣವನ್ನು ಸಂದಾಯಿಸಲು ತಿಳಿಸಬೇಕು ಎಂದ ಅವರು ಮಕ್ಕಳಿಗಾಗಿ ಶಿಕ್ಷಣ ಸಾಲವನ್ನು ಬ್ಯಾಂಕ್ ನೀಡಲಿದ್ದು ಅದನ್ನು ಉಪಯೋಗಿಸಿಕೊಳ್ಳಲು ತಿಳಿಸಿದರು.
ಬ್ಯಾಂಕ್ ಇನ್ಸ್ಪೆಕ್ಟರ್ ಈರಣ್ಣನಾಯಕ ಮಾತನಾಡಿ ಮಕ್ಕಳ ಖಾತೆಗಳನ್ನು ಅವರ ಪಿ.ಯು.ಸಿ ವಿದ್ಯಾಭ್ಯಾಸ ಮುಗಿಯುವವರೆಗೂ ಅವರು ಪಡೆದಿರುವ ಲೋನ್ ಹಣದಲ್ಲಿ ಮಕ್ಕಳು ಹಣ ಬಿಡುಗಡೆ ಮಾಡಲು ಅರ್ಹರಲ್ಲ ಅದಕ್ಕಾಗಿ ಪಿಯುಸಿ ವಿದ್ಯಾಭ್ಯಾಸ ಮುಗಿಯಬೇಕು ಎಂದರು.
ಸಮಾರಂಭದಲ್ಲಿ ಮ್ಯಾನೇಜರ್ ನಾಗರಾಜ್ ಉಪಸ್ಥಿತರಿದ್ದರು

ಕಾಮ ಕ್ರೋದ ಗೆಲ್ಲುವ ಶಕ್ತಿ ಸಾಹಿತ್ಯಕ್ಕಿದೆ
ಚಿಕ್ಕನಾಯಕನಹಳ್ಳಿ,ನ.20: ಸಜ್ಜನರ ಸಂಘ ಮತ್ತು ಸಾಹಿತ್ಯದ ವ್ಯಾಸಾಂಗವು ಜೀವನದಲ್ಲಿ ಸಿಗುವ ಉತ್ತಮ ಮೌಲ್ಯ, ಈ ಎರಡೂ ಕಾಮ, ಕ್ರೋದ, ಮತ್ಸರಗಳನ್ನು ತೊರೆಯುವ ಒಂದು ಸಿಹಿ ಸಾಧನ ಎಂದು ಸಾಹಿತಿ ಆರ್.ಬಸವರಾಜು ಹೇಳಿದರು.
ಪಟ್ಟಣದ ತೀ.ನಂ.ಶ್ರೀ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಂಥಾಲಯಕ್ಕೆ ಬರುವ ಓದುಗರು ಕೇವಲ ಪತ್ರಿಕೆಗಳನ್ನು ಮಾತ್ರ ಓದದೆ ಸಾಹಿತ್ಯದ ಪುಸ್ತಕವನ್ನು ಓದಿ ಅದರಲ್ಲಿನ ಸಿಹಿಯನ್ನು ಅರಿತು ಜ್ಞಾನವೆಂಬ ಜ್ಯೋತಿ ಬೆಳಗಿಸಬೇಕು, ಅಲ್ಲದೆ ಜ್ಞಾನ ಮತ್ತು ವ್ಯಕ್ತಿಯ ಕ್ರಿಯೆಗಳು ಸಂಗಮವಾದಾಗ ವ್ಯಕ್ತಿತ್ವ ವಿಕಸನವಾಗಿ ಜೀವನದ ಮೌಲ್ಯ ಬೆಳಕಿಗೆ ಆಗಮಿಸಿ ಜ್ಞಾನವು ಶಾಶ್ವತವಾಗಿ ಉಳಿಯುತ್ತದೆ ಎಂದ ಅವರು ಸಾಹಿತ್ಯವನ್ನು ಬೆಳಸಿಕೊಂಡವರು ನೀತಿ ನಿಯಮದ ಜೊತೆಗೆ ತನ್ನದೇ ಆದ ಆದರ್ಶಗಳನ್ನು ಪಾಲಿಸುವಲ್ಲಿ ಮಗ್ನರಾಗಿ ಸಾಹಿತ್ಯದ ನವರಸ ಸಂಗಮವನ್ನು ಎಲ್ಲೆಡೆ ಹರಿಸಬೇಕು ಎಂದರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ 30 ವರ್ಷಗಳ ಹಿಂದೆ ಸ್ಥಾಪಿತವಾದ ಗ್ರಂಥಾಲಯ ಇಂದು ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಜ್ಞಾನವನ್ನು ನೀಡುತ್ತಿದೆ, ವಿಶ್ವೇಶ್ವರಯ್ಯನಂತಹ ಮಹಾನ್ ವ್ಯಕ್ತಿಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಜ್ಞಾನವಿದ್ದರೆ ನಾವೂ ಮಣ್ಣಾದ ಮೇಲೂ ಜ್ಞಾನ ಬಳಕೆಗೆ ಬರುತ್ತದೆ ಎಂದು ಸಾರಿದವರು ಅವರು ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮಾತನಾಡಿ ಗ್ರಂಥಾಲಯವು ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯಕ ಇಲ್ಲಿ ಎಲ್ಲಾ ರೀತಿಯ ಪುಸ್ತಕ ಭಂಡಾರಗಳು ದೊರೆಯುವುದರಿಂದ ವಿದ್ಯಾಥರ್ಿಗಳಿಗೆ ಸ್ಮಧರ್ಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಉಪಯೋಗವಾಗುವುದರಿಂದ ಗ್ರಂಥಾಲಯಕ್ಕೆ ಉತ್ತಮ ಪುಸ್ತಕಗಳು ಲಭ್ಯವಾಗಬೇಕು ಎಂದರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಜಿ.ರಂಗಯ್ಯ, ಗ್ರಂಥಾಲಯ ಸಹಾಯಕ ಬಸವರಾಜು ಉಪಸ್ಥಿತರಿದ್ದರು.


Wednesday, November 17, 2010





ವಿದ್ಯಾಥರ್ಿ ವೇತನಕ್ಕಾಗಿ ಎಬಿವಿಪಿ ಹೋರಾಟ
ಚಿಕ್ಕನಾಯಕನಹಳ್ಳಿ,ನ,17:
ಡಿ.ಇಡಿ ಮುಗಿಸಿಕೊಂಡು ಪದವಿ ಓದುತ್ತಿರುವ ಪರಿಶಿಷ್ಟ ಜಾತಿ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ಮಂಜೂರು ಮಾಡಬೇಕು ಎಂದು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ತಹಶೀಲ್ದಾರ್ರವರಿಗೆ ಮನವಿ ಪತ್ರವನ್ನು ಸಲ್ಲಿಸಿತು.
ಮನವಿ ಪತ್ರ ನೀಡಿ ಮಾತನಾಡಿದ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್ ಡಿಗ್ರಿ ಓದುತ್ತಿರುವ ವಿದ್ಯಾಥರ್ಿಗಳಿಗೆ ಹಾಸ್ಟಲ್ ಸೌಲಭ್ಯವನ್ನು ರದ್ದುಗೊಳಿಸಿದ್ದು, ವಿದ್ಯಾಥರ್ಿ ವೇತನವನ್ನು ಮಂಜೂರ ಮಾಡುವುದಿಲ್ಲವೆಂದು ಆದೇಶ ನೀಡಿರುವುದು ಖಂಡನೀಯವಾಗಿದ್ದು ಪರಿಶಿಷ್ಟ ಜಾತಿ ವಿದ್ಯಾಥರ್ಿಗಳ ವಿದ್ಯಾ ಅಭ್ಯಾಸಕ್ಕೆ ಒತ್ತು ನೀಡಬೇಕಾದ ಸಕರ್ಾರ ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದ ಅವರು ಡಿ.ಇಡಿ ಮುಗಿಸಿದವರಿಗೆ ಪ[ದವಿತರಗತಿಗೆ ಪ್ರವೇಶ ನೀಡಿ ವಿದ್ಯಾಥರ್ಿ ವೇತನವನ್ನು ತಡೆಹಿಡಿದಿರುವುದು ಕೊಟ್ಟು ಡಿಡೀರ್ ಅಂತ ಹಾಸ್ಟಲ್ನಿಂದ ಹೊರ ಹಾಕುತ್ತಿರುವುದು ನ್ಯಾಯಸಮ್ಮತವಾಗಿಲ್ಲ ಮತ್ತು ಡಿಗ್ರಿ ವಿದ್ಯಾಥರ್ಿಗಳಿಗೆ ಮುಂದಿನ ತಿಂಗಳು ಸೆಮಿಷ್ಟರ್ ಪರೀಕ್ಷೆಯಿದ್ದು ದೂರದ ಊರುಗಳಿಂದ ಓದಲು ಬಂದಿರುವ ವಿದ್ಯಾಥರ್ಿಗಳಿಗೆ ತೊಂದರೆಯಾಗಿರುವುದನ್ನು ಅಧಿಕಾರಿಗಳು ಸರಿಪಡಿಸಿಕೊಡಬೇಕು ಇಲ್ಲದಿದ್ದರೆ ಎ.ಬಿ.ವಿ.ಪಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮನವಿ ಪತ್ರದ ಹೇಳಿದ್ದಾರೆ.
ಈ ಸಂದರ್ಬದಲ್ಲಿ ನಗರ ಕಾರ್ಯದಶರ್ಿ ಮನೋಹರ್, ಸಹ ಕಾರ್ಯದಶರ್ಿ ದಿಲೀಪ್ ಮತ್ತು ಕಾರ್ಯಕರ್ತರುಗಳಾದ ಜಗದೀಶ್, ರವಿ, ದರ್ಶನ್ ಉಪಸ್ಥಿತರಿದ್ದರು.

ಯವುಳ್ಳ ಧರ್ಮಕ್ಕೆ ಜಯ ಶತಸಿದ್ದ
ಚಿಕ್ಕನಾಯಕನಹಳ್ಳಿ,ನ,17: ಧರ್ಮದ ಭಾವನೆ ಬಹಳ ಸೂಕ್ಷ್ಮ, ಧರ್ಮವು ವ್ಯಕ್ತಿ ಮತ್ತು ಸಮಾಜದ ನಡುವೆ ಇರುವ ಮಾನವೀಯ ಮೌಲ್ಯ, ಅಲ್ಲದೆ ದಯವೇ ಧರ್ಮದ ಮೂಲವಾಗಿರುವಾಗ ಧರ್ಮಕ್ಕೆ ಎಂದಿಗೂ ಜಯವಿರುತ್ತದೆ ಎಂದು ತಮ್ಮಡಿಹಳ್ಳಿ ವಿರಕ್ತಮಠ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಹೇಳಿದರು.
ಪಟ್ಟಣದ ಬನಶಂಕರಿ ಬಡಾವಣೆಯಲ್ಲಿ ನಡೆದ ಪಂಚಮುಖಿ ಗಣಪತಿ ದೇವಾಯಲದ ಪ್ರತಿಷ್ಠಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಧರ್ಮಕ್ಕೆ ಎಂದು ಸಾವಿಲ್ಲ. ದೊಡ್ಡ ದೊಡ್ಡ ಸಾಮ್ರಾಜ್ಯಗಳು ಮಣ್ಣಿನಲ್ಲಿ ಹೂತು ಹೋದರೂ ಅವರ ಧರ್ಮವನ್ನು ಇಂದಿಗೂ ಪಾಲಿಸುತ್ತಿದ್ದಾರೆ, ಧರ್ಮವನ್ನು ವೇದಿಕೆ ಮುಖಾಂತರ ಎಂದೂ ಬೆಳೆಯದೇ ಅನುಷ್ಟಾನದ ಮುಖಾಂತರ ಬೆಳೆಸಿದಾಗ ಧರ್ಮದ ಅರ್ಥ ಎಲ್ಲರಿಗೂ ತಿಳಿಯುತ್ತದೆ ಎಂದ ಅವರು ಸ್ವಾರ್ಥ, ಅಹಂಕಾರ ತೊರೆದಾಗ ಮಾತ್ರ ಧರ್ಮದ ವೈಶಿಷ್ಟ್ಯ ತಿಳಿದು ಗೆಲುವು ಸಂಪಾದಿಸುತ್ತಾರೆ ಎಂದು ಹೇಳಿದರು.
ಬನಶಂಕರಿ ನಾಗರೀಕ ಬಳಗದ ಅಧ್ಯಕ್ಷ ಸಿ.ಟಿ.ವರದರಾಜು ಮಾತನಾಡಿ ಚೋಳರ ಕಾಲದಲ್ಲಿ ಕಟ್ಟುತ್ತಿದ್ದ ಪಂಚಮುಖಿ ದೇವಸ್ಥಾನ ಈಗ ಕಟ್ಟಿರುವುದು ಬನಶಂಕರಿ ನಾಗರೀಕರ ಬಳಗದ 17ವರ್ಷಗಳ ಕನಸು ಈಡೇರಿದಂತಾಗಿದೆ, ದೇವಸ್ಥಾನ ಕಟ್ಟುವುದಕ್ಕೋಸ್ಕರ ಭಕ್ತಾಧಿಗಳಿಂದ ಮತ್ತು ಆಥರ್ಿಕ ವ್ಯವಾಹರಗಳ ಮೂಲಕ ಸಂಗ್ರಹಿಸಿದ ಹಣದಲ್ಲಿ ದೇವಸ್ಥಾನ ಕಟ್ಟಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ರಾಜಣ್ಣ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಪುರಸಭಾ ಸದಸ್ಯರುಗಳಾದ ಸಿ.ಕೆ.ಕೃಷ್ಣಮೂತರ್ಿ, ಈಶ್ವರ್ಭಾಗವತ್, ರುಕ್ಮಿಣಮ್ಮ, ಲಕ್ಷ್ಮಯ್ಯ, ಬಿಜೆಪಿ ಮುಖಂಡ ಮೈಸೂರಪ್ಪ, ಶೇಷಪ್ಪ, ಅನ್ವರ್ಪಾಷ ಉಪಸ್ಥಿತರಿದ್ದರು.


ಪರಂಪರಾ ತಾಣಗಳನ್ನು ರಕ್ಷಿಸುವ ಮೂಲಕ ಪರಂಪರೆಯನ್ನು ಉಳಿಸಿ
ಚಿಕ್ಕನಾಯಕನಹಳ್ಳಿ,ನ.14: ಹಿರಿಯರು ಮಾಡಿ ಬಿಟ್ಟಿರುವ ಪರಂಪರಾ ತಾಣಗಳನ್ನು ಇಂದಿನ ಯುವಕರು ರಕ್ಷಿಸಿ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಮೀಸಲಿಡಬೇಕು ಎಂದು ಪರಂಪರಾಕೂಟದ ಜಿಲ್ಲಾ ಸಂಚಾಲಕ ಡಾ. ಡಿ.ಎನ್.ಯೋಗಿಶ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಪರಂಪರಾ ಕೂಟದ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಹಿರಿಕರು ರೂಢಿಸಿಕೊಂಡು ಬಂದಿರುವ ಎಲ್ಲಾ ರೀತಿಯ ಪರಂಪರೆಯನ್ನು ರಕ್ಷಿಸುವ ಮಹತ್ತರ ಕಾರ್ಯಕ್ರಮವನ್ನು ಪರಂಪರಾಕೂಟ ಹಮ್ಮಿಕೊಂಡಿದ್ದು ಪರಂಪರಾ ತಾಣಗಳ ಸಂರಕ್ಷಿಸುವುದರಲ್ಲಿ ಕಾಲೇಜು ವಿದ್ಯಾಥರ್ಿಗಳ ಪಾತ್ರ ಬಹು ಮುಖ್ಯ ಎಂದ ಅವರು, ನಮ್ಮ ತಾಲೂಕಿನ ಪ್ರಮುಖ ಪರಂಪರಾ ತಾಣಗಳಾದ ಶುಕ್ರವಾರದ ಬಾಗಿಲು, ನೀರುಬಾಗಿಲು, ವೆಂಕಟರಮಣ ದೇವಸ್ಥಾನ, ಪ್ರಸನ್ನರಾಮೇಶ್ವರ ದೇವಾಲಯ, ಶೆಟ್ಟಿಕೆರೆಯ ಯೋಗ ಮಾಧವರಾಯ ದೇವಾಲಯಗಳು ಈ ಭಾಗದ ಪರಂಪರಾಕೂಟದ ತಾಣಗಳಾಗಿವೆ, ಇವುಗಳನ್ನು ಯಾವ ರೀತಿಯಲ್ಲಿ ರಕ್ಷಿಸಬೇಕು ಎಂಬುದನ್ನು ವಿವರವಾಗಿ ತಿಳಿಸಿದರು.
ಪ್ರಾಧ್ಯಾಪಕ ಡಿ.ಎನ್.ಈರಪ್ಪನಾಯಕ ಮಾತನಾಡಿ ನಮ್ಮ ಸಂಸ್ಕೃತಿಯ ಪರಂಪರಾ ತಾಣಗಳ ಬಗ್ಗೆ ವಿದೇಶೀಯರಿಗೆ ಇರುವಷ್ಟು ಗೌರವ ಭಾವನೆಗಳು ನಮ್ಮ ಭಾರತೀಯರಲ್ಲಿ ಇಲ್ಲ ಎಂದು ವಿಷಾದಿಸಿದರು.
ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಮಾತನಾಡಿ ಕನ್ನಡಿಗರು ತಮ್ಮ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳಸಿಕೊಂಡು ಕನ್ನಡ ಭಾಷೆ ಮತ್ತು ನಮ್ಮ ಸಂಸ್ಕೃತಿಯನ್ನು ಎಲ್ಲೆಡೆ ಹರಡಬೇಕು ಎಂದರು.
ಸಮಾರಂಭದಲ್ಲಿ ಪ್ರಾಧ್ಯಾಪಕ ಟಿ.ವಿ.ರವೀಂದ್ರಶರ್ಮ, ಪರಂಪರಾ ಕೂಟದ ಸಂಚಾಲಕ ಸಿ.ಜಿ.ಸುರೇಶ್, ಉಪನ್ಯಾಸಕ ಸಿ.ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.
ಸಮಾರಂಬದಲ್ಲಿ ಅಶ್ವಿನಿ ಅಣ್ಣಪ್ಪ ಪ್ರಾಥರ್ಿಸಿದರೆ ಜಿ.ಸುಧಾ ಸ್ವಾಗತಿಸಿ, ಪ್ರತಿಭಾ ನಿರೂಪಿಸಿದರು.


ಶಾಸಕರ ಅನುಪಸ್ಥಿತಿಯ ವಿರುದ್ದ ವಿನೂತನ ಪ್ರತಿಭಟನೆ: ತಾ.ಬಿ.ಜೆ.ಪಿ.
ಚಿಕ್ಕನಾಯಕನಹಳ್ಳಿ,ನ.17: ತಾಲೂಕಿನಲ್ಲಿ ಹೆಚ್ಚು ಮಳೆಯಾಗಿ ಹಲವು ಮನೆಗಳು ಬಿದ್ದರೂ ತಾಲೂಕಿನಲ್ಲಿರುವ ಹಲವು ಕೆರೆಗಳ ಏರಿ ಹೊಡೆದಿವೆ, ಬೋರನಕಣಿವೆ ಜಲಾಶಯದ ಗೇಟ್ ಮುರಿದು ನೀರು ಪೊಲಾಗುತ್ತಿದ್ದರೂ ಆ ಬಗ್ಗೆ ಗಮನ ಹರಿಸದೆ ಹಾಗೂ ಕ್ಷೇತ್ರದ ಜನತೆಯ ಸಮಸ್ಯೆಗಳ ಬಗ್ಗೆ ನಿಗಾವಹಿಸದೇ ಕ್ಷೇತ್ರದಿಂದ 2ತಿಂಗಳುಗಳಿಂದ ದೂರವಿರುವುದನ್ನು ವಿರೋಧಿಸಿ ತಾಲೂಕಿನ ಅಭಿವೃದ್ದಿಗಾಗಿ ಬಿಜೆಪಿ ಘಟಕ ಇದೇ 22ರ ಸೋಮವಾರ ಜನರಿಂದ ಅಹವಾಲು ಪಡೆಯುವ 'ಸ್ಪಂದನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಶಿವಣ್ಣ ಮಿಲ್ಟ್ರಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಶಾಸಕರ ಅನುಪಸ್ಥಿತಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಬಿ.ಜೆ.ಪಿ. ಈ ರೀತಿಯ ಹೊರಾಟವನ್ನು ಹಮ್ಮಿಕೊಂಡಿದ್ದು ಈ ಹೋರಾಟಕ್ಕೆ ರಾಜ್ಯ ಉಪಾಧ್ಯಕ್ಷ ಅಶ್ವಥ್ನಾರಯಣ್ ಮತ್ತು ಜಿಲ್ಲಾಧ್ಯಕ್ಷ ಶಿವಪ್ರಸಾದ್ ಆಗಮಿಸುವರು ಎಂದರು.
ತಾಲೂಕು ಬಿ.ಜೆ.ಪಿ ಕಾರ್ಯದಶರ್ಿ ಸುರೇಶ್ ಹಳೇಮನೆ ಮಾತನಾಡಿ, ತಾಲೂಕಿನ ಆಡಳಿತ ಕಡೆ ಜವಾಬ್ದಾರಿ ಇಲ್ಲದೆ ಮತ್ತು ಜನರ ಸಮಸ್ಯೆಗಳನ್ನು ಕೇಳದೆ ತಾಲೂಕಿನಿಂದ ಕಣ್ಮರೆಯಾಗಿರುವ ಶಾಸಕ ಸಿ.ಬಿ.ಸುರೇಶ್ಬಾಬು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ತಾಲೂಕಿನಲ್ಲಿ ನಡೆಯುತ್ತಿರುವ ದುರಾಡಳಿತದ ವಿರುದ್ದ ಈ ಹಿಂದೆ ಪತ್ರಿಕಾಗೋಷ್ಟಿಯನ್ನು ಕರೆದು, ಪತ್ರಿಕೆ ಮೂಲಕ ಶಾಸಕರಿಗೆ ತಿಳಿಸಿದರೂ ಯಾವ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಭಾಗವಹಿಸಿದೆ ತಾಲ್ಲೂಕನ್ನು ಕಡೆಗಣಿಸುತ್ತಿದ್ದಾರೆ ಇದರಿಂದ ತಾಲೂಕಿನ ಜನತೆಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದರು. ಈ ಸಮಸ್ಯೆ ಬಗೆಹರಿಸಲು ತಾಲೂಕು ಬಿಜೆಪಿ ಘಟಕ ತಾಲೂಕು ಕಛೇರಿ ಆವರಣದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಪ್ರತಿ ಸೋಮವಾರ 'ಸ್ಪಂದನ' ಎಂಬ ಕಾರ್ಯಕ್ರಮ ಹಮ್ಮಿಕೊಂಡು ಜನರ ಅಹವಾಲುಗಳನ್ನು ಸ್ವೀಕರಿಸಿ ಸಂಬಂದಪಟ್ಟ ಇಲಾಖೆಗೆ ಕಳುಹಿಸಲಾಗುವುದು ಎಂದರು. ಈ ರೀತಿಯ ಪ್ರತಿಭಟನೆ ಶಾಸಕರ ಅನುಪಸ್ಥಿತಿಯನ್ನು ಎಚ್ಚರಿಸಿದಂತಾಗುತ್ತದೆ ಬಿಜೆಪಿ ಘಟಕ ಈ ಮುಖಾಂತರ ತಾಲೂಕಿನ ಅಭಿವೃದ್ದಿಗಾಗಿ ಹೋರಾಟ ಮಾಡುತ್ತಿದೆ ಎಂದರು.
ಈ ಗೋಷ್ಟಿಯಲ್ಲಿ ಜೆ.ಸಿಪುರ ಘಟಕ ಬಿಜೆಪಿ ಮುಖಂಡ ಸುಂದರ್, ಪರಮೇಶ್ ಉಪಸ್ಥಿತರಿದ್ದರು.


ಈ ಭೂಮಿ ಇರುವವರೆಗೂ ಕನಕನ ಸಾಹಿತ್ಯ ಉಳಿಯುವಂತೆ ಮಾಡಬೇಕು
ಚಿಕ್ಕನಾಯಕನಹಳ್ಳಿ,ನ.17: ಕನಕದಾಸರ ಸಾಹಿತ್ಯವನ್ನು ಮಕ್ಕಳಿಗೆ ತಿಳಿಸಲು ಈ ಸ್ಪಧರ್ೆಗಳನ್ನು ಏರ್ಪಡಿಸಿ ಅದರ ಮೂಲಕ ಹೊಸ ಪ್ರತಿಭೆಗಳನ್ನು ಹೊರತರುತ್ತಿರುವ ಕನಕ ಯುವಕ ಸಂಘದವರ ಕಾರ್ಯ
ಶ್ಲಾಘನೀಯವದದ್ದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.
ಪಟ್ಟಣದ ಶ್ರೀ ರೇವಣ ಸಿದ್ದೇಶ್ವರ ಕಂಬಳಿ ಸೊಸೈಟಿ ಆವರಣದಲ್ಲಿ ನಡೆದ ಕನಕದಾಸರ ಚಿತ್ರಕಲಾ ಮತ್ತು ಕನಕ ಕೀರ್ತನಾ ಗಾಯನ ಸ್ಪಧರ್ೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಜಯಂತ್ಯೋತ್ಸವ ಸಕರ್ಾರಿ ಕಾರ್ಯಕ್ರಮವಾದ್ದರಿಂದ ಜಯಂತಿಯಂದು ತಾಲೂಕು ಕಛೇರಿಯಿಂದ ಕನಕದಾಸರ ಭಾವಚಿತ್ರದೊಂದಿಗೆ ವಿಜೃಂಭಣೆಯ ಮೆರವಣಿ ಏರ್ಪಡಿಸಲಾಗೆ ಎಂದ ಅವರು ಕನಕದಾಸರ ಜಯಂತಿಯನ್ನು ಆಚರಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದರು.
ಸಂಪಾದಕ ಎಚ್.ಎಸ್.ರಾಮಣ್ಣ ಮಾತನಾಡಿ ಪ್ರತಿಯೊಬ್ಬರೂ ಹೇಗೆ ಭೂಮಿಯನ್ನು ದೇವರಂತೆ ಕಂಡು ಪೂಜಿಸುತ್ತಾರೋ ಹಾಗೆ ಈ ಭೂಮಿ ಇರುವವರೆಗೂ ಕನಕದಾಸರ ಸಾಹಿತ್ಯವನ್ನು ಜನರು ಅರ್ಥಮಾಡಿಕೊಂಡು ಅವರ ತತ್ವವನ್ನು ಪಾಲಿಸಬೇಕು ಎಂದರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮಕ್ಕಳಿಗಾಗಿ ಕೀರ್ತನೆ ಮತ್ತು ಚಿತ್ರಕಲಾ ಸ್ಪಧರ್ೆಯನ್ನು ಏರ್ಪಡಿಸಿದ್ದು ಕನಕದಾಸರ ಜೀವನ ಮತ್ತು ಅವರ ಸಾಹಿತ್ಯವನ್ನು ಈಗಿನ ಮಕ್ಕಳಿಗೆ ಈ ಸ್ಪಧರ್ೆಗಳ ಮೂಲಕ ತಿಳಿಸಿ ಮಕ್ಕಳ ಮುಖಾಂತರ ಎಲ್ಲರಿಗೂ ಅವರ ಗಾಯನಗಳನ್ನು ಹರಿದಾಡುವಂತೆ ಮತ್ತು ದಾಸರ ಜಯಂತಿಯನ್ನು ಸಾಹಿತ್ಯದ ಮೂಲಕ ಆಚರಿಸಲು ತಿಳಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ರಾಜಣ್ಣ, ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಕನರ್ಾಟಕ ರಕ್ಷಣಾ ವೇದಿಕೆ ಸಂಘದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗಿರೀಶ್ ಸ್ವಾಗತಿಸಿದರೆ ಗಂಗಾಧರ್ ವಂದಿಸಿದರು.


Saturday, November 13, 2010


ಮಕ್ಕಳ ದಿನಾಚರಣೆಯ ಈ ದಿನ, ಬೀದಿ ಮಕ್ಕಳ ಬಗ್ಗೆಯೂ ಆಲೋಚಿಸಿ.
ಚಿಕ್ಕನಾಯಕನಹಳ್ಳಿ : ತುತ್ತು ಅನ್ನಕ್ಕಾಗಿ ಹೊಟ್ಟೆ ತುಂಬಿಸಿಕೊಳ್ಳವ ಹಂಬಲದಿಂದ ಶಾಲೆ ಬಿಟ್ಟು ಸಾಕು ಪ್ರಾಣಿ, ಮತ್ತು ನಿಜರ್ೀವ ವಸ್ತುಗಳನ್ನು ಉಪಯೋಗಿಸಿಕೊಂಡು ತಮ್ಮ ಚಿಕ್ಕ ಪುಟ್ಟ ಪ್ರತಿಭೆಗಳನ್ನು ಬಳಸಿ, ಊರೂರು ಅಲೆದು ಹಣ ಸಂಪಾದಿಸಿ ಜೀವನವನ್ನು ಕಳೆಯುವ ಸಾವಿರಾರು ಮಕ್ಕಳಿಗೆ ಇನ್ನೂ ಸಹ ಮಕ್ಕಳ ದಿನಾಚರಣೆ ಕಾಣುವ ಸೌಭಾಗ್ಯವಿಲ್ಲ.
ದಿ.ಮಾಜಿ ಪ್ರದಾನಿ ಜವಹಾರ್ಲಾಲ್ ನೆಹರು ರವರ ಜನ್ಮ ದಿನಾಚರಣೆಯನ್ನು ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಭವ್ಯ ಭಾರತದ ಸತ್ ಪ್ರಜೆಗಳನ್ನು ರೂಪಿಸಲು ಹೊರಟಿರುವ ಸಕರ್ಾರ, ಶಾಲೆಗೆ ಮಕ್ಕಳನ್ನು ಕರೆತರಲು ಪ್ರಾಥಮಿಕ ಮತ್ತು ಪ್ರೌಡಶಾಲೆಗಳಿಗೆ ಮಧ್ಯ್ಯಾಹ್ನದ ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಪ್ರೌಡಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದರೂ, ಬಡತನದಿಂದ ಹಾಗೂ ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳು ಶಾಲೆ ಬಿಟ್ಟು ಚಿಕ್ಕ ವಯಸಿನಲ್ಲೇ ಬೀದಿ ಬೀದಿ ಅಲೆದು ದುಡಿಮೆಗೆ ಇಳಿಯುವ ಪ್ರವೃತ್ತಿ ತಪ್ಪಿಲ್ಲ.
ಇಂದು ಬಡತನದ ಹಿನ್ನೆಲೆ ಇರುವ ಕುಟುಂಬಗಳ ಮಕ್ಕಳು ತಾತ್ಕಾಲಿಕವಾಗಿ ಉದರ ಪೊಷಣೆ ಮಾಡಿಕೊಳ್ಳಲು ಬೀದಿಗಿಳಿದು ಚಿಕ್ಕಾಸು ದುಡಿಯುವ ಆಲೋಚನೆಯನ್ನು ಮಾಡುವುದು ಒಂದು ಕಡೆಯಾದರೆ, ಇನ್ನು ಕೆಲವು ಮಕ್ಕಳು ಮಾಂಸಖಂಡಗಳು ಬಲಿಯುವ ಮೊದಲೇ ಹಲವು ಕಾಖರ್ಾನೆ, ಅಂಗಡಿಗಳಲ್ಲಿ ದುಡಿಯುವ ಅನಿವಾರ್ಯತೆಗಳು ಎದುರಾಗಿದೆ. ಇದರಿಂದಾಗಿ ಬಡವರ ಮಕ್ಕಳನ್ನು ಕರೆದು ಕೆಲಸ ನೀಡುವ ಸಾಹುಕಾರರು, ಕಡಿಮೆ ಸಂಬಳಕ್ಕೆ ಎಲ್ಲಾ ಕೆಲಸವನ್ನು ಮಾಡಿಸಿಕೊಳ್ಳುವುದರ ಜೊತೆಗೆ ದೈಹಿಕ ಹಿಂಸೆಯನ್ನು ನೀಡುವ ಕೀಳು ಮನೋಭಾವ ಇನ್ನೂ ಹೋಗಿಲ್ಲ. ಬಾಲಕಾಮರ್ಿಕ ನಿಷೇಧ ಕಾಯಿದೆ ಇವರನ್ನು ಏನು ಮಾಡಲಾಗಿಲ್ಲ.
ವಿದ್ಯಾಬ್ಯಾಸ ಮಾಡಿದರೆ ಸಕರ್ಾರಿ ನೌಕರಿಯೇ ಸಿಗಬೇಕು ಎಂಬ ಆಲೋಚನೆ ದೂರವಾಗಿ, ಸಮಾಜಕ್ಕೆ ಮಾರಕವಾಗದಂತಹ ಯಾವುದೇ ಕ್ಷೇತ್ರವಾದರೂ ಸರಿಯೇ ಬದುಕು ರೂಪಿಸಿಕೊಳ್ಳುವಂತಹ ಶಿಕ್ಷಣವನ್ನು ಪಡೆಯುವುದು ಮುಖ್ಯ ಎಂಬುದನ್ನು ಮನಗಾಣದ ಹಲವರು, ಬಾಲ್ಯದಲ್ಲೇ ಮಕ್ಕಳಿಗೆ ಕಾಸಿನ ರುಚಿ ತೋರಿಸಿ ಬುದ್ದಿ ಬರುವ ಮೊದಲೇ ದುಡಿಮೆಗೆ ಇಳಿಸಿ, ಇದರಿಂದ ನಿನ್ನ ಜೀವನಕ್ಕೆ ಒಂದು ದಾರಿಯಾಗುತ್ತದೆ ಹೋಗು ಎಂಬ ಭ್ರಮೆಯನ್ನು ತುಂಬುವ ಬೇಜವಬ್ದಾರಿ ತಂದೆ-ತಾಯಿಗಳು ತಮ್ಮ ನಿಲುವನ್ನ ಮಕ್ಕಳಿಗೆ ತುಂಬವುದರ ಮೂಲಕ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಲು ಮುಂದಾಗುತ್ತಾರೆ, ಇಂತಹ ಕೆಟ್ಟ ನಿಲುವುಗಳನ್ನು ಬಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದು ಶಿಕ್ಷಣ ಆಸಕ್ತರ ಆಲೋಚನೆಯಾಗಿದೆ. ಇದು ಅವರದಷ್ಟೇ ಅಭಿಪ್ರಾಯವಲ್ಲ ದೇಶಪ್ರೇಮಿಗಳೆಲ್ಲರ ನಿಧರ್ಾರ.
ಇಷ್ಟೇ ಅಲ್ಲದೆ ಜೀವನವೆಂದರೇನು ಎಂದು ತಿಳಿಯದ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ಕ್ರಿಯೆಗಳು ಮಕ್ಕಳ ಮೇಲೆ ಬಹಳ ಅಗಾಧವಾಗಿ ಪರಿಣಾಮ ಬೀರುತ್ತಿದ್ದು ಇದರಿಂದ ಕೊಲೆ, ಕಳ್ಳತನದಂತಹ ಪ್ರಕರಣಗಳು ಹೆಚ್ಚಾದಾಗ ಮಕ್ಕಳು ಭೂಗತಲೋಕ ಕಡೆ ತಿರುಗಿ ಪಾತಕಲೋಕದ ದಿಗ್ಗಜರಾಗಿ ರಾಷ್ಟ್ರಗಳನ್ನು ನಡುಗಿಸಿದಾಗ ಇದೇ ಸಕರ್ಾರ ಅವರನ್ನು ಹಿಡಿಯಲು ಅಥವಾ ಶೂಟೌಟ್ ಮಾಡಲು ಲಕ್ಷಾಂತರ ರೂಗಳನ್ನು ಖಚರ್ು ಮಾಡುವುದರ ಜೊತೆಗೆ ಎಷ್ಟೋ ಜೀವಗಳು ಕಾಣದಂತೆ ಮಾಯವಾಗಿ ಬಿಡುತ್ತವೆ.
ಕನಿಷ್ಠ ಮಕ್ಕಳಿಗೆ ಸರಿ ತಪ್ಪುಗಳನ್ನು ನಿರ್ಣಯಿಸುವಷ್ಟು ಲೋಕ ಜ್ಞಾನವನ್ನು ಕಲಿಸುವ ಕೆಲಸ ಬಾಲ್ಯದಲ್ಲಾಗದಿದ್ದರೆ ಇನ್ನೆಂದೂ ಆಗುವುದಿಲ್ಲ, ಅಂತಹ ಪೋಷಕರಿಂದ ನಿರೀಕ್ಷೆ ಮಾಡುವುದು ತಪ್ಪು.
ಹಣವುಳ್ಳವರು ತಮ್ಮ ಮಕಳ ಭವಿಷ್ಯವನ್ನು ಉಜ್ವಲವಾಗಿಸಲು ಯೋಚಿಸಿದರೆ, ತಮ್ಮ ಹೊಟ್ಟೆ ಪಾಡಿಗಾಗಿ ಹಾಗೂ ಚಟಗಳನ್ನು ತೀರಿಸಿಕೊಳ್ಳಲು ತಮ್ಮ ಮಕ್ಕಳನ್ನು ಬೀದಿಗೆ ಬಿಟ್ಟು ಕುಡಿತದ ಅಮಲಿನಲ್ಲಿ ಮಕ್ಕಳ ಜೀವನವನ್ನು ಹೊಸಿಕಿ ಹಾಕುವ ಪೋಷಕರಿಗೆ ಏನನ್ನ ಬೇಕು, ಭಾರತ ಮಾತೆ ನೀನೇ ಹೇಳು.........

..ಎ.ಪಿ.ಎಲ್. ಪಡಿತರದಾರರಿಗೆ ಕಡಿಮೆ ದರದಲ್ಲಿ ಅಕ್ಕಿ,ಗೋಧಿ
ಚಿಕ್ಕನಾಯಕನಹಳ್ಳಿ,ನ.12: ನವಂಬರ್ ತಿಂಗಳಿಗೆ ತಾಲೂಕಿನ ಭಾವಚಿತ್ರ ಸೆರೆಹಿಡಿದ ಎಎವೈ, ಬಿಪಿಎಲ್, ಎಪಿಎಲ್, ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸಲು ಅಕ್ಕಿ, ಗೋಧಿ, ಸಕ್ಕರೆ ಹಂಚಿಕೆ ನೀಡಿಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಅಂತ್ಯೋದಯ ಕಾಡರ್ುದಾರರಿಗೆ ಕಾಡರ್್1ಕ್ಕೆ 3ರೂನಂತೆ 29ಕೆ.ಜಿ ಅಕ್ಕಿ, 2ರೂನಂತೆ 6 ಕೆ.ಜಿಗೋಧಿ, 13-5ನಂತೆ 1 .ಕೆ.ಜಿ ಸಕ್ಕರೆ, ಅಕ್ಷಯ ಮತ್ತು ನೆಮ್ಮದಿದಾರ ಕಾಡರ್ುದಾರರಿಗೆ ಯುನಿಟ್ ಪದ್ದತಿಯಂತೆ ಅಕ್ಕಿ1 ಕೆ.ಜಿಗೆ 3ರೂ, ಗೋದಿ 1 ಕೆ.ಜಿಗೆ 3ರೂನಂತೆ ಸಕ್ಕರೆ 1 ಕೆ.ಜಿಗೆ 13.50ನಂತೆ ಮತ್ತು ಎಪಿಎಲ್ ಪಡಿತರದಾರರಿಗೆ ಕಾಡರ್್1ಕ್ಕೆ 9.40ರೂನಂತೆ 9.50ಕೆ.ಜಿ ಅಕ್ಕಿ, 7.20ರೂನಂತೆ 2.5ಕೆ.ಜಿ.ಗೋಧಿ ಮತ್ತು ಸಕ್ಕರೆ ಹಂಚಿಕೆ ಇರುವುದಿಲ್ಲವೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡಿಮೆ ದರದಲ್ಲಿ ಅಕಿ ಗೋದಿ: ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಸಗಟು ಮಳಿಗೆಗಳ ಮೂಲಕ ರಾಜ್ಯದ ಎಲ್ಲಾ ವರ್ಗಗಳ ಜನರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದ್ದು ಎಪಿಎಲ್ ಪಡಿತರದಾರರು ಇದರ ಸದುಪಯೋಗಪಡಿಸಿಕೊಳ್ಳಲು ತಹಶೀಲ್ದಾರ್ ಟಿ.ಸಿ.ಕಾಂತರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸಕರ್ಾರಿ ನೌಕರರು, ಸಾರ್ವಜನಿಕ ಉದ್ದಿಮೆಗಳ ನೌಕರರು, ಪೌರಾಡಳಿತ ಸಂಸ್ಥೆಯ ಹಾಗೂ ಖಾಸಗಿ ಅನುದಾನಿ, ಅನುದಾನರಹಿತ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ಸೈನಿಕ, ಅರೆಸೈನಿಕ ಪಡೆಯ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ, ಗ್ರಾಮೀಣ ಭಾಗದ ಎಪಿಎಲ್ ಪಡಿತರ ಚೀಟಿದಾರರು, ಸ್ವಾತಂತ್ರ ಹೋರಾಟಗಾರರು, ಅಧಿಕೃತ ಪತ್ರಕರ್ತರು, ಕಲಾವಿದರು, ಕ್ರೀಡಾಪಟುಗಳು ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಅಂಗವಿಕಲರು, ತಮ್ಮ ಎಪಿಎಲ್ ಪಡಿತರ ಚೀಟಿ ಅಥವಾ ವೃತ್ತಿ ಸಂಬಂದಿತ ಸಂಸ್ಥೆಯ ಮುಖ್ಯಸ್ಥರು ನೀಡಲಾದ ಭಾವಚಿತ್ರ ಸಹಿತ ಗುರುತಿನ ಚೀಟಿಯ ದೃಡೀಕೃತ ಪ್ರತಿಯನ್ನು ನೀಡಿ ಪ್ರತೀ ಕೆ.ಜಿ ಅಕ್ಕಿಗೆ 13ರೂನಂತೆ ಗರಿಷ್ಟ 50ಕೆ.ಜಿ ಮತ್ತು ಪ್ರತೀ ಕೆ.ಜಿ.ಗೋಧಿಗೆ 9.50ರೂನಂತೆ ಗರಿಷ್ಟ 50ಕೆ.ಜಿ.ಯನ್ನು ಕನರ್ಾಟಕ ಆಹಾರ ನಾಗರೀಕ ಸರಬರಾಜು ನಿಗಮ ಸಗಟು ಮಳಿಗೆ ಗೋದಾಮಿನಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ನ.14: ತಾಲೂಕು ಮಟ್ಟದ ಟಿ.ಎಲ್.ಎಂ. ಹಾಗೂ ಮೆಟ್ರಿಕ್ ಮೇಳ

ಚಿಕ್ಕನಾಯಕನಹಳ್ಳಿ,ನ.12: ತಾಲೂಕು ಮಟ್ಟದ ಟಿ.ಎಲ್.ಎಂ ಮತ್ತು ಮೆಟ್ರಿಕ್ ಮೇಳವನ್ನು ಇದೇ 14ರ ಭಾನುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಪುರಸಭಾಧ್ಯಕ್ಷ ರಾಜಣ್ಣ ಮೆಟ್ರಿಕ್ ಮೇಳದ ಉದ್ಘಾಟನೆ ನೆರವೇರಿಸಲಿದ್ದಾರೆ.
ಡಯಟ್ ಪ್ರಾಂಶುಪಾಲ ಪ್ರಭಾಕರ್ ಟಿ.ಎಲ್.ಎಂ ಉದ್ಘಾಟನೆ ನೆರವೇರಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ ದಯಾನಂದ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಿ.ಆರ್.ತಿಮ್ಮರಾಜು, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರೌ.ಶಾ.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.





Wednesday, November 10, 2010



ಮಕ್ಕಳ ಪ್ರತಿಭೆ ಹೊರಹೊಮ್ಮಲು ಶಿಕ್ಷಕರ ಪಾತ್ರ ಮಹತ್ವವಾದದ್ದು
ಚಿಕ್ಕನಾಯಕನಹಳ್ಳಿ,ನ.10: ಮಕ್ಕಳ ಪ್ರತಿಭೆ ಹೊರಹೊಮ್ಮವಂತೆ ಹಾಗೂ ವ್ಯವಹಾರದ ಜ್ಞಾನ ತಿಳಿಯುವಂತೆ ಶಿಕ್ಷಕರು ಉತ್ತಮ ತರಬೇತಿಯನ್ನು ನೀಡಿ ಮಕ್ಕಳ ಭವಿಷ್ಯಕ್ಕೆ ದಾರಿಯಾಗಬೇಕು, ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಹೇಳಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ಭಾಷಾ ವಿಜ್ಞಾನ ಗಣಿತ ಮೇಳ ಹಾಗೂ ಮಕ್ಕಳ ಸಂತೆಯ ವಿಚಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಸಂತೆ ಮೇಳದಿಂದ ಮಕ್ಕಳು ಗಣಿತಾಭ್ಯಾಸ ಕಲಿತು ಮುಂದೆ ಅವರು ನಿರ್ವಹಿಸುವ ವ್ಯವಹಾರಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಲಿದೆ ಎಂದರು.
ತುಮಕೂರು ಡಿ.ಡಿ.ಪಿ.ಐ ಕಚೇರಿಯ ಶಿಕ್ಷಣಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ ಉತ್ತಮ ವಿದ್ಯಾಭ್ಯಾವನ್ನು ಮಾಡುವ ಮೂಲಕ ಸೃಜನಶೀಲರಾಗಬೇಕು. ಕೆಲ ಮಕ್ಕಳಿಗೆ ಬರೀ ಓದುವದು ಮಾತ್ರ ತಿಳಿದಿದ್ದು ವ್ಯವಹಾರದ ಜ್ಞಾನವಿರುವುದಿಲ್ಲ ಅಂತಹ ಮಕ್ಕಳಿಗೆ ವ್ಯವಹಾರದ ಕಲಿಕೆಗಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದ ಅವರು ಪ್ರತಿಯೊಬ್ಬ ವಿದ್ಯಾಥರ್ಿಯು ಸಾಂಸ್ಕೃತಿಕ, ವಿಜ್ಞಾನ, ಗಣಿತ, ಕಲೆಯ ಎಲ್ಲ ವಿಚಾರದಲ್ಲೂ ಮುಂದಿರಬೇಕು ಎಂದರು.
ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳು ವಿದ್ಯಾಬ್ಯಾಸದಿಂದ ಲೋಕದ ಆಗು ಹೋಗುಗಳನ್ನು ತಿಳಿದುಕೊಂಡು ವ್ಯವಹಾರ ಕಲಿಯಬೇಕು ಮತ್ತು ತಮ್ಮ ಬುದ್ದಿಶಕ್ತಿಯಿಂದ ವ್ಯವಹಾರದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಒಳ್ಳೆಯ ವಿಚಾರದಲ್ಲಿ ಸ್ಪೂತರ್ಿ ತುಂಬಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ವಿವಿದ ಶಾಲೆಗಳಿಂದ ಬಂದಿರುವ ಮಕ್ಕಳಿಗೆ ಇಂತಹ ಸಂತೆ ಕಾರ್ಯಕ್ರಮದಿಂದ ಪರಸ್ಪರ ಪರಿಚಯಿಸಿಕೊಂಡು ವಿದ್ಯಾಭ್ಯಾಸಕ್ಕೆ ಮತ್ತು ವ್ಯವಹಾರಕ್ಕೆ ವೇದಿಕೆಯಾಗುತ್ತದೆ ಮತ್ತು ಪೋಷಕರು ತಮ್ಮ ಮನೆಗಳಲ್ಲಿ ಕೆಲವೊಂದು ವಸ್ತುಗಳನ್ನು ತರಿಸಿಕೊಳ್ಳುವ ಮೂಲಕ ಮಕ್ಕಳಿಗೆ ವ್ಯವಹಾರದ ಜ್ಞಾನವನ್ನು ಕಲಿಸಬಹುದು ಎಂದ ಅವರು ವ್ಯವಹಾರದಲ್ಲಿ ಮೇಲು ಮತ್ತು ಕೀಳರಿಮೆ ಇರದೆ ಎಲ್ಲರೂ ಒಂದೇ ರೀತಿಯ ಕೆಲಸ ಮಾಡುವುದರಿಂದ ಉತ್ತಮ ಭಾವನೆಯನ್ನು ಹೊಂದಬೇಕು ಎಂದರು.
ಮಕ್ಕಳ ಸಂತೆಯಲ್ಲಿ ಕಸಬಾ ಹೋಬಳಿಯ 35 ಶಾಲಾ ಮಕ್ಕಳು ಭಾಗವಹಿಸಿದ್ದರು.
ಸಮಾರಮಂಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ತಿಮ್ಮರಾಜು, ಬಿ.ಆರ್.ಸಿ ಸುಧಾಕರ. ರಾ.ಪ್ರಾ.ಶಿ.ಸಂ ಉಪಾಧ್ಯಕ್ಷೆ ಶೋಭಬಸವರಾಜ, ಪತ್ರಕರ್ತ ಸಿ.ಬಿ.ಲೋಕೇಶ್, ಸಿ.ಆರ್.ಪಿ ಶಶಿಕಲ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿವಕುಮಾರ್ ಸ್ವಾಗತಿಸಿದರೆ ವಿಶ್ವೇಶ್ವರಯ್ಯ ನಿರೂಪಿಸಿ, ಸಿ.ಕೆ.ಪಾಂಡುರಂಗಯ್ಯ ವಂದಿಸಿದರು.


Tuesday, November 9, 2010

ಪರಂಪರಾಕೂಟ ಮತ್ತು ಕನ್ನಡ ರಾಜ್ಯೋತ್ಸವದ ಉದ್ಘಾಟನೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ನ.09: ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಪರಂಪರಾಕೂಟದ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇದೇ 11ರ ಗುರುವಾರ ಮಧ್ಯಾಹ್ನ 1 ಗಂಟೆಗೆ ಏರ್ಪಡಿಸಲಾಗಿದೆ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಸಿ.ಜಿ.ಸುರೇಶ್ ತಿಳಿಸಿದ್ದಾರೆ.
ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ಪರಂಪರಾಕೂಟದ ಜಿಲ್ಲಾ ಸಂಚಾಲಕ ಡಾ.ಡಿ.ಎನ್.ಯೋಗಿಶ್ ಉದ್ಘಾಟನೆ ನೆರವೇರಿಸಲಿದ್ದು, ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಇತಿಹಾಸ ಸಹ ಪ್ರಾಧ್ಯಾಪಕರಾದ ಈರಪ್ಪನಾಯಕ ಡಿ.ಎನ್, ರವೀಂದ್ರವರ್ಮ, ಪರಂಪರಾಕೂಟದ ಸಂಚಾಲಕ ಸಿ.ಜಿ.ಸುರೇಶ್ ಉಪಸ್ಥಿತರಿರುವರು.

Monday, November 8, 2010

Saturday, November 6, 2010





ತಾಲೂಕು ಬಂಜಾರ ಸಂಘದ ಅಧ್ಯಕ್ಷರಾಗಿ ಜಿ.ರಘುನಾಥ್ರ
ಚಿಕ್ಕನಾಯಕನಹಳ್ಳಿ,ನ.04: ತಾಲೂಕು ಬಂಜಾರ ಸಂಘದ ಅಧ್ಯಕ್ಷರಾಗಿ ಜಿ.ರಘುನಾಥ್ರವರು ಆಯ್ಕೆಯಾಗಿದ್ದಾರೆ.
ಸಂಘದ ಗೌರವಾಧ್ಯಕ್ಷರಾಗಿ ಬಿ.ಸಿ.ನಾಗರಾಜಪ್ಪ, ಪ್ರಧಾನ ಕಾರ್ಯದಶರ್ಿಯಾಗಿ ರಾಮಚಂದ್ರನಾಯ್ಕ, ಖಜಾಂಚಿಯಾಗಿ ಮೂತರ್ಿನಾಯ್ಕ, ಉಪಾಧ್ಯಕ್ಷರಾಗಿ ಮೋತಿನಾಯ್ಕ, ನಾಗರಾಜನಾಯ್ಕ, ಕುಮಾರನಾಯ್ಕ, ಉಮ್ಲನಾಯ್ಕ, ಕರಿಯಾನಾಯ್ಕ, ಪುಟ್ಟೀಬಾಯಿ ಮತ್ತು ಸಂಘಟನಾ ಕಾರ್ಯದಶರ್ಿಯಾಗಿ ಜನಾರ್ಧನನಾಯ್ಕ, ಶಶಿಧರನಾಯ್ಕ, ಲಕ್ಮೀನರಸಿಂಹಸ್ವಾಮಿ, ಜಗದೀಶನಾಯ್ಕ, ಜಂಟಿ ಕಾರ್ಯದಶರ್ಿಯಾಗಿ ರಾಮಕೃಷ್ಣನಾಯ್ಕ, ರಮೇಶನಾಯ್ಕ, ವೇದಮೂತರ್ಿನಾಯ್ಕ ಹಾಗೂ ಕಾನೂನು ಸಲಹೆಗಾರರಾಗಿ ಚಿಕ್ಕಣ್ಣ, ಶಂಕರ್ನಾಯ್ಕ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಪ್ರಕಟಣೆಯಲ್ಲಿ ತಿಳಿ

ಕನಕ ಜಯಂತಿ: ಪೂರ್ವ ಭಾವಿ ಸಭೆ
ಚಿಕ್ಕನಾಯಕನಹಳ್ಳಿ,ನ.06: ತಾಲೂಕು ಮಟ್ಟದ ಭಕ್ತ ಕನಕದಾಸರ ಜಯಂತೋತ್ಸವ ಆಚರಣೆಗಾಗಿ ಇದೇ 7ರ ಭಾನುವಾರ ಬೆಳಿಗ್ಗೆ 11ಕ್ಕೆ ಕನಕ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ ತಿಳಿಸಿದ್ದಾರೆ.
ಇದೇ 24ರಂದು ಆಚರಿಸುವ ಕನಕ ದಾಸರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದ್ದು, ತಾಲೂಕಿನ ಎಲ್ಲಾ ಗುರು ಮಠಗಳ ಗುರುಗಳು, ಗೌಡರು, ಬಳಗ ಬಂಡಾರಿಗಳು, ಕನಕ ಸಂಘಗಳ ಎಲ್ಲಾ ಪದಾಧಿಕಾರಿಗಳು, ನೌಕರ ಬಂಧುಗಳು, ರಾಜಕೀಯ ಮುಖಂಡರುಗಳು, ಸ್ಥಳೀಯ ಸಂಸ್ಥೆಗಳ ಎಲ್ಲಾ ಬಂಧುಗಳು, ಯುವಕ ಮಿತ್ರರು ಹಾಗೂ ಸಮಾಜದ ಬಂಧುಗಳು ಆಗಮಿಸಿ ತಮ್ಮೆಗಳೆಲ್ಲರ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.



ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್.ಬಿ.ಶಿವನಂಜಪ್ಪನವರಿಗೆ ಅಭಿನಂದನಾ ಸಮಾರಂಭ

ಚಿಕ್ಕನಾಯಕನಹಳ್ಳಿ,ನ.06: ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಬಿ.ಶಿವನಂಜಪ್ಪ ಹಳೇಮನೆರವರಿಗೆ ಅಭಿನಂದನಾ ಸಮಾರಂಭವನ್ನು ಪಟ್ಟಣದ ಡಿ.ಸಿ.ಸಿ ಬ್ಯಾಂಕ್ ಕಟ್ಟಡದ ಮೇಲೆ ಇದೇ 8ರ ಸೋಮವಾರ ಏರ್ಪಡಿಲಾಗಿದೆ.
ಸಮಾರಂಭವನ್ನು ಮಧ್ಯಾಹ್ನ 12ಗಂಟೆಗೆ ಏರ್ಪಡಿಸಿದ್ದು ನಂ.ಹಾ.ಉ.ಪ.ಸ.ಸಂ. ಉಪಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ ಅಧ್ಯಕ್ಷತೆ ವಹಿಸಲಿದ್ದು ವಿಶೇಷ ಆಹ್ವಾನಿತರಾಗಿ ರಾಜ್ಯ ಹಾಲು ಮಹಾಮಂಡಳಿ ನಿದರ್ೇಶಕ ಹೆಚ್.ಕೆ.ರೇಣುಕಪ್ರಸಾದ್, ಮುಖ್ಯ ಅತಿಥಿಗಳಾಗಿ ತುಮಕೂರು ಹಾಲು ಒಕ್ಕೂಟ ವ್ಯವಸ್ಥಾಪಕ ಡಿ.ಅಶೋಕ್, ಉಪ ವ್ಯವಸ್ಥಾಪಕ ಡಾ.ಸುಬ್ರಯಭಟ್, ಪಶುವೈಧ್ಯ ರಾಜು, ವಿಸ್ತರಣಾಧಿಕಾರಿಗಳಾದ ಎನ್.ಬಸಪ್ಪ, ಎ.ಪಿ.ಯರಗುಂಟಪ್ಪ ಮತ್ತು ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಕಾರ್ಯದಶರ್ಿ ಮತ್ತು ಸದಸ್ಯರುಗಳು ಉಪಸ್ಥಿತರಿರುವರು.

Wednesday, November 3, 2010

ಶಿಕ್ಷಕರ ಜೇಷ್ಟತಾ ಪಟ್ಟಿ ಪ್ರಕಟಚಿಕ್ಕನಾಯಕನಹಳ್ಳ.
ನ.01: ಪದವಿ, ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವಿಷಯವಾರು ಜೇಷ್ಟತಾ ಪಟ್ಟಿಯನ್ನು ಸೂಚನ ಫಲಕದಲ್ಲಿ ಪ್ರಕಟಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಿಕ್ಷಕರ ವಿಷಯವಾರು ಜೇಷ್ಟತಾ ಪಟ್ಟಿಯನ್ನು ಅನುಬಂಧ 1ರಲ್ಲಿ ವಿವಿಧ ಕಾರಣಗಳಿಂದ ಕೈ ಬಿಟ್ಟಿರಿವುದರಿಂದ ಅನುಬಂಧ 2ರಲ್ಲಿ ಪ್ರಕಟಿಸಲಾಗಿದೆ ಎಂದಿರುವ ಅವರು, ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರು ಪದವಿ, ತತ್ಸಮಾನ ಮತ್ತು ಬಿ.ಇಡಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಗ್ರೇಡ್-2ರ ವೃಂದಕ್ಕೆ ಬಡ್ತಿ ನೀಡಲು 2010ರ ಜನವರಿ 1ರಂದು ಸೂಚನಾ ಫಲಕದಲ್ಲಿ ಪ್ರಕಟಿಸಿದೆ ಈ ಪಟ್ಟಿಯಲ್ಲಿ ಕೈಬಿಟ್ಟರುವವರಿಂದ ಅಥವಾ ಇನ್ಯಾವುದೇ ಕಾರಣಗಳಿದ್ದರೆ 2010ರ ನವಂಬರ್ 11ರವರಗೆ ಆಕ್ಷೇಪಗಳನ್ನು ಆಹ್ವಾನಿಸಲಾಗಿದ್ದು, ಆಕ್ಷೇಪನೆಗಳನ್ನು ಸಲ್ಲಿಸಬಯಸುವ ಶಿಕ್ಷಕರು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಪತ್ರಾಂಕಿತ ವ್ಯವಸ್ಥಾಪಕರಿಗೆ ಸಲ್ಲಿಸಲು ತಿಳಿಸಿದ್ದು ನಂತರ ಬಂದ ಯಾವುದೇ ಆಕ್ಷೇಪನೆಗಳನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲಾ ಭಾಷಿಕರು ಕನ್ನಡ ಗೌರವಿಸಬೇಕು
ಚಿಕ್ಕನಾಯಕನಹಳ್ಳಿ.ನ.01: ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿ, ವಾಸ್ತುಶಿಲ್ಪ ಹಾಗೂ ಆಡಳಿತ ಕ್ಷೇತ್ರದಲ್ಲಿ ವಿಶಿಷ್ಟತೆಯ ಮೆರುಗನ್ನು ಹೊಂದಿರುವ ಕನ್ನಡಭಾಷೆಯನ್ನು, ಕನ್ನಡಭಿಮಾನಿಗಳಷ್ಟೇ ಅಲ್ಲದೆ ಈ ನಾಡಿನ ಎಲ್ಲಾ ಭಾಷಿಕರು ಕನ್ನಡ ಭಾಷೆಯನ್ನು ಕಲಿತು ರಾಜ್ಯೋತ್ಸವವನ್ನು ಆಚರಿಸಿ ಕನ್ನಡಕ್ಕೆಗೌರವ ಸಲ್ಲಿಸಬೇಕು ಎಂದುತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಆದಿಕವಿ ಪಂಪ, ರನ್ನ, ಜನ್ನರಂತ ರತ್ನತ್ರಯರು ಕನ್ನಡಕ್ಕೆ ವಿಶಿಷ್ಟ ಸ್ಥಾನ ನೀಡಿ ಕನ್ನಡ ಭಾಷೆಯನ್ನು ರಾಷ್ಟ್ರಾದ್ಯಂತ ಬೆಳಗಿಸಿದ್ದಾರೆ. ಕನರ್ಾಟಕವನ್ನು ಆಳಿದ ಕದಂಬರು, ಗಂಗರು, ವಿಜಯನಗರದ ಅರಸರು, ಬಿಜಾಪರದ ಸುಲ್ತಾನರು ಇವರೆಲ್ಲರೂ ಕನ್ನಡ ಕವಿಗಳಿಗೆ ಆಶ್ರಯ ನೀಡಿ ಕನ್ನಡ ಭಾಷಾ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಮತ್ತು ಕನ್ನಡಕ್ಕೆ 7ಜ್ಞಾನಪೀಠ ಪ್ರಶಸ್ತಿಗಳು ದೊರಕಿರುವುದು, ಕನ್ನಡಕ್ಕೆ ಶಾಸ್ತೀಯ ಸ್ಥಾನಮಾನ ಲಭ್ಯವಾಗಿರುವುದು ಕನ್ನಡವು ಸುಸಂಸಕೃತ ಜೀವನ ದರ್ಶನವಾಗಿದೆ ಎಂದ ಅವರು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡ ನಾಡಿನ ಕೀತರ್ಿ ಪತಾಕೆಯನ್ನು ಹಾರಿಸಿದರ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು ಕನ್ನಡ ಅಭಿಮಾನ ಕೇವಲ ಆಚರಿಸುವುದಷ್ಠೇ ಆಗಿರದೆ ಹಬ್ಬದಂತೆ ಮನೆಮಂದಿಯಲ್ಲ ಪಾಲ್ಗೊಂಡು ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡಬೇಕು ಎಂದರು.ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಮಾತನಾಡಿ ಹಲವಾರು ಅಂಗಡಿ ಕಛೇರಿಗಳಲ್ಲಿ ಕನ್ನಡ ನಾಮಫಲಕವು ರಾರಾಜಿಸಬೇಕು ಆದರೆ ಕನರ್ಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರೆ ಇಲ್ಲದಂತಾಗಿದ್ದು ಕನ್ನಡಕ್ಕೆ ಹೆಚ್ಚು ಒತ್ತು ಕೊಟ್ಟಿ ಕನ್ನಡಿಗರಿಗೆ ಹೆಚ್ಚು ಉದ್ಯೋಗವಕಾಶ ಕಲ್ಪಿಸಬೇಕು ಎಂದರು.ಕಲಾವಿದ ಕೃಷ್ಣಚಾರ್, ಗೋಕಾಕ್ ಚಳವಳಿ ಹೋರಾಟಗಾರ ನಾಗರಾಜ್, ಕನ್ನಡ ಸಂಘದ ಸೀಮೆಣ್ಣೆ ಕೃಷ್ಣಯ್ಯ, ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ರಾಜಣ್ಣ, ಮಾಜಿ ಶಾಸಕ ಬಿ.ಲಕ್ಕಪ್ಪ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಪುರಸಭಾ ಸದಸ್ಯ ಸಿ.ಬಸವರಾಜು, ಸಿ.ಎಸ್.ರಮೇಶ್, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಇ.ಓ ದಯಾನಂದ್, ಸಿ.ಪಿ.ಐ ರವಿಪ್ರಸಾದ್
ಉಪಸ್ಥಿತರಿದ್ದರು.ಸ್ವಾತಿಯಿಂದಾಗಿ 'ಸುವರ್ಣಮುಖಿ' ಮೈದುಂಬಿ ಹರಿಯುತ್ತಿದ್ದಾಳೆಸಿ.ಗುರುಮೂತರ್ಿ ಕೊಟಿಗೆಮನೆಚಿಕ್ಕನಾಯಕನಹಳ್ಳಿ.ಅ.3: ಸ್ವಾತಿ ಮಳೆಯ ಭರಾಟೆಯಿಂದ ತಾಲೂಕಿನ ಸುವರ್ಣಮುಖಿ ನದಿ ಮೈದುಂಬಿ ಬೋರನಕಣಿವೆಯ ಕಡೆ ನಾಗಲೋಟದಲ್ಲಿ ಓಡುತ್ತಿದ್ದಾಳೆ. ಸೋಮವಾರ ಸಂಜೆ 6.30ರಿಂದ ಆರಂಭಗೊಂಡ ಸ್ವಾತಿ ಮಳೆ ಮಂಗಳವಾರ ಬೆಳಗ್ಗೆ 10ರವರೆಗೆ ಒಂದೇ ಸಮನೆ ಬಂದಿದ್ದರಿಂದ ತಾಲೂಕಿನಲ್ಲಿ ಒಟ್ಟಾರೆ 75 ಕೆರೆಗಳ ಪೈಕಿ ಆರು ಕೆರೆಗಳನ್ನು ಬಿಟ್ಟು ಉಳಿದೆಲ್ಲಾ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಚಿ.ನಾ.ಹಳ್ಳಿ ಕೆರೆ ಈಗ್ಗೆ 25 ವರ್ಷಗಳ ಹಿಂದೆ ಕೋಡಿ ಬಿದ್ದಿತ್ತು, ಈಗ ಸೋಮವಾರ ಬಿದ್ದ ಮಳೆಯಿಂದಾಗಿ ಮತ್ತೆ ಕೋಡಿ ಯಿಂದ ನೀರು ಹೊರಗೆ ಹೋಗುತ್ತಿದ್ದು, ಜನರು ನೀರಿನಲ್ಲಿ ಹರ್ಷದ್ಘೋರಗಳಿಂದ ಕುಣಿದು ಕುಪ್ಪುಳಿಸುತ್ತಿದ್ದಾರೆ.ತಾಲೂಕಿನಲ್ಲಿರುವ 33 ದೊಡ್ಡಕೆರೆಗಳ ಪೈಕಿ ನವಿಲೆ, ಪಂಕಜನಹಳ್ಳಿ, ಮಾದಿಹಳ್ಳಿ, ಚಿಕ್ಕಬೆಳವಾಡಿ ಕೆರೆಗಳಿಗೆ ಇನ್ನೂ ನೀರಿನ ಅರಿವು ಅಗತ್ಯವಿದೆ, ನಾಗತಿಕೆರೆ, ಮುದ್ದೇನಹಳ್ಳಿ ಗ್ರಾಮದ ಮುಂದಿನ ಕೆರೆ ಕೋಡಿ ಬಿದ್ದಿದೆ ಆದರೆ ಹಿಂದಿನ ಕೆರೆಗೆ ಇನ್ನೂ ನೀರು ಬೇಕಾಗಿದೆ.ಉಳಿದಂತೆ ತಾಲೂಕಿನ ಪ್ರಮುಖ ಕೆರೆಗಳಾದ ಮೇಲನಹಳ್ಳಿ, ಸಿಂಗದಹಳ್ಳಿ, ದುರ್ಗದ ಕೆರೆ, ಕಂದಿಕೆರೆ ಹಿರೇಹಳ್ಳಿ ಕೆರೆ, ಪೆಮ್ಮಲದೇವರಹಳ್ಳಿ ಹೊಸಕೆರೆ, ಹಂದನಕೆರೆ, ಶೆಟ್ಟೀಕೆರೆ ಕೆರೆಗಳು ತುಂಬಿ ಹರಿಯುತ್ತಿದೆ. ಇದಲ್ಲದೆ, ಶೆಟ್ಟೀಕೆರೆ ಹೋಬಳಿ, ಕಂದಿಕೆರೆ ಹೋಬಳಿ, ಹಂದನಕೆರೆ ಹೋಬಳಿ ಹಾಗೂ ಕಸಬಾ ಕೆರೆಯ ಶೇ.95 ಹಳ್ಳಿಗಳು ಕೋಡಿ ಬಿದ್ದಿರುವುದು ರೈತರ ಮುಖದಲ್ಲಿ ಹರ್ಷವನ್ನು ತಂದಿದೆ. ತೆಂಗು ಹಾಗೂ ಅಡಿಕೆ ತೋಟಗಳಲ್ಲಿ ನೀರು ಮೊಳಕಾಲಿನ ವರೆಗೆ ನಿಂತಿರುವುದರಿಂದ ವಿದ್ಯುತ್ ಅಭಾವದ ಕಾಲದಲ್ಲಿ ಈ ಬೇಸಿಗೆಯನ್ನು ನಿಶ್ಚಿತೆಯಿಂದ ಕಳೆಯ ಬಹುದೆಂಬ ಸಮಾಧಾನ ಹಲವರಲ್ಲಿ ಮೂಡಿದೆ.ಮುಂಗಡೆ ಹಾಕಿರುವ ರಾಗಿ ಬೆಳೆ ತೆನೆ ಕೂಡಿದ್ದು ತಿನ್ನುವಂತೆ ಕಾಳು ಮೂಡಿದ್ದವು ಈಗ ಈ ಸಸಿಗಳು ನೆಲೆಕಚ್ಚಿರುವುದರಿಂದ ಸ್ವಲ್ಪ ತೊಂದರೆಯಾಗಿದ್ದರೂ ಹಿಗ್ಗಡೆ ಹಾಕಿರುವವರಿಗೆ ತೆನೆ ಗರ್ಭಕಟ್ಟುವ ಸಮಯಕ್ಕೆ ಸರಿಯಾಗಿ ಬಂದಿದೆ ಎಂಬ ಅಭಿಪ್ರಾಯವನ್ನು ಅನ್ನದಾತ ವ್ಯಕ್ತ ಪಡಿಸುತ್ತಿದ್ದಾನೆ. (ಪುಟ 2ಕ್ಕೆ)ಮಳೆಯಿಂದಾದ ಅನಾಹುತ:ಬರಗೂರು ಗ್ರಾ.ಪಂ.ಯ ಹೊಸಕೆರೆಯಲ್ಲಿ ಮನೆಗೋಡೆ ಕುಸಿದು ಬಿದ್ದು ಪೂಜಾರಿ ಉಡಸಲಯ್ಯ(45) ಎಂಬಾತ ಸಾವನ್ನಪ್ಪಿದ್ದು, ತಾಲೂಕಿನ 23 ಮನೆಗಳ ಗೋಡೆಗಳು ಕುಸಿದಿವೆ. ಇದರಲ್ಲಿ ನಾಲ್ಕು ಮನೆಗಳು ಸಂಪೂರ್ಣ ಕುಸಿದಿದ್ದು, ಉಳಿದ 19 ಮನಗಳ ಗೋಡೆಗಳು ಭಾಗಶಃ ಕುಸಿದಿವೆ. ಇದರಲ್ಲಿ ಮರನಡುವಿನ್ಲಲಿ 2ಮನೆ, ಗಾಣಧಾಳುವಿನಲ್ಲಿ 2, ಸಾದರಹಳ್ಳಿಯಲ್ಲಿ 2, ಸಾದರಹಳ್ಳಿ ಗೊಲ್ಲರಹಟ್ಟಿಯಲ್ಲಿ 2, ದೊಡ್ಡರಾಂಪುರ 2, ಕಂದಿಕೆರೆಯಲ್ಲಿ 1 ಹಂದನಕೆರೆ ಹೋಬಳಿಯಲ್ಲಿ 6, ಕಸಬಾದಲ್ಲಿ 6 ಮನೆಗಳ ಗೋಡೆಗಳು ಕುಸಿದಿವೆ. ತಾಲೂಕಿನಲ್ಲಿ ಒಟ್ಟಾರೆ 10 ಲಕ್ಷ ರೂಗಳಷ್ಟು ಆಸ್ತಿಪಾಸ್ಥಿಗೆ ಹನಿಯಾಗಿರುವುದು ವರದಿಯಾಗಿದೆ.ತಾಲೂಕಿನ ಅಧಿಕಾರಿಗಳು ಎಚ್ಚೆತ್ತ ಪರಿಣಾಮ ಬರಗೂರಿನ ಕೆರೆ ಏರಿಯ ಒಡಕಿನಿಂದ ಆಗುತ್ತಿದ್ದ ಅನಾಹುತ ತಪ್ಪಿದಂತಾಗಿದೆ.ತಾಲೂಕಿನ 7ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆ ಪ್ರಮಾಣ;ಚಿ.ನಾ.ಹಳ್ಳಿ 116 ಮಿ.ಮೀ., ಬೋರನಕಣಿವೆ 115 ಮಿ.ಮೀ, ಹುಳಿಯಾರು 83 ಮಿ.ಮೀ, ಶೆಟ್ಟೀಕೆರೆ 67 ಮಿ.ಮೀ, ದೊಡ್ಡೆಣ್ಣೆಗೆರೆ 60 ಮಿ.ಮೀ, ಸಿಂಗದಹಳ್ಳಿ 35 ಮಿ.ಮೀ, ಮತ್ತಿಘಟ್ಟ 10 ಮಿ.ಮೀ ಮಳೆಯಾಗಿದೆ ಎಂದು ದಾಖಲಾಗಿದೆ.ಕೆರೆಗೆ ಬಾಗಿನ: ಚಿ.ನಾ.ಹಳ್ಳಿ ಕೆರೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಬಾಗಿನ ಅಪರ್ಿಸುವ ಕಾರ್ಯಕ್ರಮವನ್ನು ಇದೇ 4ರ ಗುರುವಾರ ಬೆಳಗ್ಗೆ 9ಕ್ಕೆ ಹಮ್ಮಿಕೊಂಡಿದೆ ಎಂದು ವೇದಿಕೆಯ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರು ಹಾಗೂ ಗಣ್ಯರು ಹಾಜರಿರುವರು ಎಂದಿದ್ದಾರೆಹೆಣ್ಣು ಮಕ್ಕಳೇ ಮುಂದಿನ ಜೀವನಕ್ಕೆ ಆಧಾರಚಿಕ್ಕನಾಯಕನಹಳ್ಳಿ,ನ.03: ಹೆಣ್ಣು ಸಂಸ್ಕಾರದ ಕಣ್ಣು ಆಗಿರುವಾಗ ಹೆಣ್ಣಿನ ಭ್ರೂಣ ಹತ್ಯೆ ಮಾಡಬಾರದು ಎಂದು ಪುರಸಭಾ ಸದಸ್ಯರಾದ ಬಾಬುಸಾಹೇಬ್ ಹೇಳಿದರು.ಪಟ್ಟಣದ ಹೊಂಬಾಳಮ್ಮ ದೇವಾಲಯದ ಆವರಣದಲ್ಲಿ ನಡೆದ ಭಾಗ್ಯಲಕ್ಷ್ಮೀ ಯೋಜನೆಯ ಸುರಕ್ಷಾ ಮತ್ತು ವಿಮಾ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತಾನಾಡಿದ ಅವರು ಲಿಂಗಭೇದ ತಾರತಮ್ಯ ಮಾಡದೆ ಎಲ್ಲರಿಗೂ ಸಮನಾದ ಹಕ್ಕನ್ನು ನೀಡಿ ಪ್ರತಿಯೊಬ್ಬರಬ್ಬುನ್ನು ಗೌರವದಿಂದ ಕಾಣಬೇಕು ಎಂದ ಅವರು 18 ವರ್ಷ ತುಂಬುವವರೆಗೆ ಯಾರಿಗೂ ವಿವಾಹದ ಪ್ರಸ್ತಾಪ ಮಾಡದೆ ಅವರ ಕನಸುಗಳಗೆ ದಾರಿದೀಪವಾಗಬೇಕು ಎಂದರಲ್ಲದೆ ಹೆಣ್ಣಿಗೆ ಉನ್ನತ ಸ್ಥಾನಮಾನ ನೀಡಿ ಸಕರ್ಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡಲು ಪ್ರೋತ್ಸಾಹಿಸಬೇಕು ಎಂದರು.ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ಪರಮೇಶ್ವರಪ್ಪ ಮಾತನಾಡಿ ಭಾಗ್ಯಲಕ್ಷ್ಮೀ ಯೋಜನೆಯು ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ 25ಸಾವಿರ ಸಕರ್ಾರ ಸೌಲಭ್ಯ ಅನುಕೂಲ ನೀಡಿದೆ ಎಂದರಲ್ಲದೆ ಪ್ರತಿಯೊಬ್ಬರು ಕನಿಷ್ಟ 8ನೇ ತರಗತಿಯವರಗೆ ವ್ಯಾಸಾಂಗ ಮಾಡಿಸಬೇಕು ಮತ್ತು ಮಕ್ಕಳಿಗೆ ರೋಗ ನಿರೋಧಕದ ಲಸಿಕೆಗಳನ್ನು ಪ್ರತಿಯೊಬ್ಬರು ಹಾಕಿಸಬೇಕು ಎಂದರು.ಸಮಾರಂಭದಲ್ಲಿ ರಂಗಧಾಮಯ್ಯ, ಹೊನ್ನೇಬಾಗಿ ಗ್ರಾ.ಪಂ. ಅಧ್ಯಕ್ಷ ಕಲ್ಪನ, ಇಲಾಖೆಯ ಮೇಲ್ವಿಚಾರಕರಾದ ನಾಗರತ್ನಮ್ಮ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ 156 ಬಾಂಡುಗಳನ್ನು ವಿತರಿಸಲಾಯಿತು