Friday, November 26, 2010



ದುರ್ಬಲ ಹಾಗೂ ತುಳಿತಕ್ಕೊಳಗಾದವರು ಕಾನೂನಿನ ನೆರವು ಪಡೆದು ಅನ್ಯಾಯದ ವಿರುದ್ದ ಧ್ವನಿ ಎತ್ತುವಂತಾಗಬೇಕು: ಡಿ.ಜೆ.
ಚಿಕ್ಕನಾಯಕನಹಳ್ಳಿ.ನ.26: ಕಾನೂನಿನ ಅಜ್ಞಾನ ಕ್ಷಮಾರ್ಹವಾದುದಲ್ಲ, ಇದರ ವಿರುದ್ದ ನಾವು ಸಮರೋಪಾದಿಯಲ್ಲ್ಲಿ ಹೋರಾಟ ಕೈಗೊಳ್ಳಬೇಕು ಅದಕ್ಕಾಗ್ತಿ ಅನಕ್ಷರಸ್ಥರನ್ನು ಅಂಧಕಾರದಿಂದ ಬೆಳಕಿನಡೆಗೆ ಸಾಗಿಸುವ ಒಂದು ಸಾಧನವೇ ಕಾನೂನು ದಿನಾಚರಣೆ ಎಂದು ಜಿಲ್ಲಾ ನ್ಯಾಯಾಧಿಶರಾದ ಜೆ.ವಿ.ಅಂಗಡಿ ಹಿರೇಮಠ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿರುವ ಬಿ.ಆರ್.ಸಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾನೂನಿನ ಅರಿವಿಲ್ಲದವರಿಗೆ ಅದರ ಅರಿವು ಅವಶ್ಯಕವಾಗಿದ್ದು ಸಮಾಜದ ದರ್ಬಲ ವರ್ಗದವರಿಗೆ ನ್ಯಾಯದ ಬಾಗಿಲು ಮುಕ್ತವಾಗಿ ತೆರೆಯಲು ಮತ್ತು ಭಾರತದ ಎಲ್ಲಾ ನಾಗರೀಕರಿಗೂ ನ್ಯಾಯ, ಸ್ವಾತಂತ್ರ್ಯದ ಸಮಾನತೆಯನ್ನು ನೀಡಲು ಕಾನೂನಿನ ಅರಿವು ಮುಖ್ಯವಾಗಿದ್ದು ಯಾವುದೇ ಶುಲ್ಕವಿಲ್ಲದೆ ಮುಫತ್ತಾಗಿ ನ್ಯಾಯ ಪಡೆಯುವಂತಾಗಬೇಕು ಎಂಬ ದೃಷ್ಠಿಯಿಂದ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾನೂನು ಸಾಕ್ಷರತೆ ಸಾಧಿಸುವುದು ಸುಲಭದ ಮಾತಾಗಿರದೆ ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗ ಈ ಮೂರು ಅಂಗಗಳು ಪೂರಕವಾಗಿ ಕಾರ್ಯ ನಿರ್ವಹಿಸುವುದು ಅವಶ್ಯಕವಾದುದು ಎಂದರು. ಜನರಿಗೆ ಕಾನೂನಿನ ಅರಿವು ಮೂಡಿಸುವುದರ ಜೊತೆಗೆ ಅವರ ಹಕ್ಕುಗಳನ್ನು ತಿಳಿಸಬೇಕು, ಕಾನೂನಿನ ಮೂಲಕ ತಮಗೆ ಬೇಕಾದ ಸೌಲಭ್ಯವನ್ನು ಪಡೆಯುಂತಹ ಶಕ್ತಿಯನ್ನೊದಗಿಸುವುದು ಈ ಕಾರ್ಯಕ್ರಮದ ಪ್ರಥಮ ಹೆಜ್ಜೆ, ನಮ್ಮ ಸಮಾಜವು ಹತ್ತು ಹಲವು ವರ್ಗಗಳನ್ನೊಳಗೊಂಡಿದ್ದು ಅವರ ಹಕ್ಕುಗಳು ದಿನನಿತ್ಯ ಚ್ಯುತಿಗೊಳ್ಳುತ್ತಿದ್ದರೂ ಅನಕ್ಷರಸ್ಥರು ಮತ್ತು ದುರ್ಬಲ ವರ್ಗದವರು ಅದರ ವಿರುದ್ದ ದನಿಯೆತ್ತುವುದಿಲ್ಲ ಎಂದು ವಿಷಾದಿಸಿದ ಅವರು, ಸಮಾಜದ ದುರ್ಬಲ ಹಾಗೂ ತುಳಿತಕ್ಕೊಳಗಾಗಿರರುವ ಜನರಲ್ಲಿ ಕಾನೂನಿನ ಅರಿವು ಮೂಡಿಸುವ ವಿಶಾಲವಾದ ಧ್ಯೇಯವನ್ನೊಳಗೊಂಡಿದ್ದು ಆ ಮೂಲಕ ಸಮಾಜದಲ್ಲಿ ಅವರ ಸ್ಥಾನ, ಹಕ್ಕುಗಳನ್ನು ಪಡೆದು ಸಮಜದಲ್ಲಿ ಕಾನೂನಿನ ಅರಿವು ಮೂಡಿಸಿ ನ್ಯಾಯ ಒದಗಿಸಿಸುವ ಉದ್ದೇಶವನ್ನು ಹೊಂದಿದೆ ಎಂದರು.
ಸಮಾರಂಭದಲ್ಲಿ ನ್ಯಾಯಾಧೀಶರುಗಳಾದ ಜಿ.ಎಂ.ಶೀನಪ್ಪ, ಎನ್.ಶೀಲಾ, ಎ.ಜಿ.ಶಿಲ್ಪ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ವಕೀಲರಾದ ಹೆಚ್.ಎಸ್.ಜ್ಞಾನಮೂತರ್ಿ, ಮಹಲಿಂಗಯ್ಯ, ಜಿ.ಎಸ್.ಚನ್ನಬಸಪ್ಪ, ಸಿ,ಕೆ.ಸೀತಾರಾಮಯ್ಯ, ಸಿ.ಪಿ.ಐ ರವಿಪ್ರಸಾದ್, ಸಹಾಯಕ ಸಕರ್ಾರಿ ಅಭಿಯೋಜಕ ಆರ್.ಟಿ.ಆಶಾ, ಎ.ಪಿ.ಡಿ.ಪಿ.ಒ ಪರಮೇಶ್ವರಪ್ಪ, ಸುಮಂಗಲ ಹಿರೇಮಠ್ ಉಪಸ್ಥಿತರಿದ್ದರು.

No comments:

Post a Comment