Friday, December 3, 2010


ಗಣಿತದ ಪ್ರಮೇಯಕ್ಕೂ ರಾಗಿ ಬಳಸಿಕೊಂಡ ವಿದ್ಯಾಥರ್ಿಗಳು
ಚಿಕ್ಕನಾಯಕನಹಳ್ಳಿ,ಡಿ.03: ಗಣಿತದ ನಿಯಮಗಳು, ತತ್ವಗಳು ಹಾಗೂ ಸಿದ್ದಾಂತಗಳ ನಿರೂಪಣೆಯಲ್ಲಿ ಪ್ರಮೇಯಗಳನ್ನು ತಾಕರ್ಿಕ ವಿಧಾನಗಳ ಮೂಲಕ ಕಾರ್ಯ ಕಾರಣ ಸಂಬಂದ ಕಲ್ಪಿಸಿ ಸಾಧಿಸುವುದು ವಿದ್ಯಾಥರ್ಿಗಳ ಮೇಧಾ ಶಕ್ತಿಗೊಂದು ಸವಾಲೇ ಸರಿ.
ಆದರೆ ಪ್ರಮೇಯಗಳ ಅತಃ ಸತ್ವವನ್ನು ವಿದ್ಯಾಥರ್ಿಗಳಿಗೆ ಸರಳವಾಗಿ ಅಥರ್ೈಸುವ ನಿಟ್ಟಿನಲ್ಲಿ ಪ್ರಾಯೋಗಿಕ ಸಾಧನಾ ವಿಧಾನಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.
ಚಿಕ್ಕನಾಯಕನಹಳ್ಳಿ ಸಕರ್ಾರಿ ಪ್ರೌಡಶಾಲೆಯ ಗಣಿತ ಶಿಕ್ಷಕ ಎಂ. ಮಂಜುನಾಥಾಚಾರ್ರವರ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳು ವಿಶ್ವ ವಿಖ್ಯಾತ ಪೈಥಾಗೊರಸ್ ಪ್ರಮೇಯವನ್ನು ಸ್ಥಳೀಯ ಮುಖ್ಯ ಬೆಳೆ ಆಹಾರ ಧಾನ್ಯವಾದ ರಾಗಿ ಬಳಸಿ ಪ್ರಾಯೋಗಿಕವಾಗಿ ಸಾಧಿಸುವ ಕ್ರಿಯಾ ಶೀಲ ಮಾದರಿ ತಯಾರಿಸಿದ್ದಾಎ. ಈ ಮಾದರಿಯನ್ನು ವಿದ್ಯಾಥರ್ಿಗಳು ತಿಪಟೂರು ತಾಲೂಕು ಕೆರಗೋಡಿ ರಂಗಾಪುರದಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದಶರ್ಿಸಿ ವೀಕ್ಷಕರ ಗಮನ ಸೆಳೆದಿದ್ದಾರೆ.
ಲಂಭಕೋನ ತ್ರಿಭುಜದ ವಿಕರ್ಣದ ಮೇಲಿನ ವರ್ಗದಳತೆಯ ರಾಗಿ ಪ್ರಮಾಣ ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತದಳತೆಯ ರಾಗಿ ಪ್ರಮಾಣಕ್ಕೆ ಸರಿ ಸಮಾನಾಗಿ ತಾಳೆಯಾಗುವುದು ಈ ಮಾದರಿಯ ವಿಶೇಷ.
ಡಾ.ಹಿರಣ್ಣಯ್ಯನವರಿಂದ ರಂಗಭೂಮಿ ಅಂದು-ಇಂದು ಉಪನ್ಯಾಸ
ಚಿಕ್ಕನಾಯಕನಹಳ್ಳಿ,ಡಿ.03: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಂಗಭೂಮಿ ಅಂದು -ಇಂದು ವಿಷಯದ ಬಗ್ಗೆ ಡಾ.ಮಾಸ್ಟರ್ ಹಿರಣ್ಣಯ್ಯರವರಿಂದ ಉಪನ್ಯಾಸ ಮತ್ತು ತಹಶೀಲ್ದಾರ್ ಟಿ.ಸಿ.ಕಾಂತರಾಜುರವರಿಗೆ ಗೌರವಾಭಿನಂದನೆಯನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು ಇದೇ 5ರ ಭಾನುವಾರ ಬೆಳಿಗ್ಗೆ 11ಗಂಟೆಗೆ ಬಿ.ಆರ್.ಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಕ.ಸಾ.ಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ್ತ ಕೃಷಿ ಅಧಿಕಾರಿ ದಾನಪ್ಪ, ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್, ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ಉಪಸ್ಥಿತರಿರುವರು
ಇದೇ ಸಂದರ್ಭದಲ್ಲಿ ಎಂ.ವಿ.ನಾಗರಾಜ್ರಾವ್ರವರ ಪುನರ್ ಮಿಲನ. ನಲ್ಲ ಅಪರಾಧಿ ನಾನಲ್ಲ, ಉಲ್ಲಂಘನ, ಹಸಿರು ಹೊಲದಲ್ಲಿ ಕೆಂಪು ಹೂವು ಎಂಬ ಕಾದಂಬರಿಗಾಳನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಮೇಜರ್ ಡಿ.ಚಂದ್ರಪ್ಪ ಮತ್ತು ಬಿ.ಇ.ಓ ಸಾ.ಚಿ.ನಾಗೇಶ್ ಬಿಡುಗಡೆ ಮಾಡಲಿದ್ದಾರೆ ಎಂದು ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದ್ದಾರೆ.

ಶೆಟ್ಟೀಕೆರೆಯಲ್ಲಿ ಜನಸ್ಪಂದನ
ಚಿಕ್ಕನಾಯಕನಹಳ್ಳಿ,ಡಿ.03: ಇದೇ 4ರ ಶನಿವಾರ ಬೆಳಗ್ಗೆ 11ಕ್ಕೆ ಶೆಟ್ಟಿಕೆರ ಹೋಬಳಿಯಲ್ಲಿ ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಶೆಟ್ಟಿಕೆರೆ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಜನಸ್ಪಂದನ ಸಭೆಯನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಿಮೆ ದರದಲ್ಲಿ ಅಕ್ಕಿ ಗೋಧಿ ವಿತರಣೆ
ಚಿಕ್ಕನಾಯಕನಹಳ್ಳಿ,ಡಿ.03: ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಸಗಟು ಮಳಿಗೆಗಳ ಮೂಲಕ ರಾಜ್ಯದ ಎಲ್ಲಾ ವರ್ಗಗಳ ಜನರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯವನ್ನು ಇದೇ ತಿಂಗಳ 6ಮತ್ತು 7ರಂದು ಪಡೆಯಬಹುದಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ತಾಲೂಕಿನ ಸಕರ್ಾರಿ ನೌಕರರು, ಸಾರ್ವಜನಿಕ ಉದ್ದಿಮೆಗಳ ನೌಕರರು, ಪೌರಾಡಳಿತ ಸಂಸ್ಥೆಯ ಉದ್ಯೋಗಿಗಳು, ಖಾಸಗಿ ಅನುದಾನಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ಸೈನಿಕ, ಅರೆಸೈನಿಕ, ಪಡೆಯ ಸಿಬ್ಬಂದಿಗಳು, ಗೃಹ ರಕ್ಷಕ ದಳದ ಸಿಬ್ಬಂದಿಗಳು, ಎ.ಪಿ.ಎಲ್ ಪಡಿತರ ಚೀಟಿದಾರರು, ಸ್ವಾತಂತ್ರ ಹೋರಾಟಗಾರರು, ಅಧಿಕೃತ ಪತ್ರಕರ್ತರು, ಕಲಾವಿದರು, ಕ್ರೀಡಾಪಟುಗಳು, ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಅಂಗವಿಕಲರು ತಮ್ಮ ಸಂಸ್ಥೆಯ ಮುಖ್ಯಸ್ಥರು ನೀಡಿರುವ ಭಾವಚಿತ್ರ ಸಹಿತ ಗುರುತಿನ ಪತ್ರದ ದೃಡೀಕೃತ ಪ್ರತಿಯನ್ನು ನೀಡಿ 13ರೂ ನಂತೆ 50 ಕೆ.ಜಿ.ಅಕ್ಕಿಯನ್ನು. 9.50 ರೂ ನಂತೆ 50 ಕೆ.ಜಿ.ಗೋಧಿಯನ್ನು ಆಹಾರ ನಾಗರೀಕ ಸರಬರಾಜು ನಿಗಮ ಸಗಟು ಮಳಿಗೆಯಲ್ಲಿ ಪಡೆಯಬುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


No comments:

Post a Comment