Thursday, December 23, 2010





ಬೆರಳ ತುದಿಯಲ್ಲಿ ಜ್ಞಾನ ಹೊಂದಿರುವವರ ಜೊತೆ ಗ್ರಾಮೀಣ ವಿದ್ಯಾಥರ್ಿಗಳು ಸ್ಪಧರ್ಿಸಬೇಕಿದೆ.
ಚಿಕ್ಕನಾಯಕನಹಳ್ಳಿ,ಡಿ.19: ಅಕ್ಷರ ಜ್ಞಾನ ಅಹಂಕಾರವಾಗಬಾರದು, ಅಂತಃಕರಣ, ಆತ್ಮವಿಶ್ವಾಸ, ತಿಳುವಳಿಕೆಯನ್ನು ಹೆಚ್ಚಿಸುವಂತಹದಾಗಬೇಕು ಎಂದು ಸಾಹಿತಿ ಪ್ರೊ.ಮ.ಲ.ನ.ಮೂತರ್ಿ ಅಭಿಪ್ರಾಯಪಟ್ಟರು.
ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಢಶಾಲೆಯ ವಾಷರ್ಿಕೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದರು. ಜ್ಞಾನದೊಂದಿಗೆ ವಿಧೇಯತೆ, ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡಾಗ ಅಕ್ಷರ ಸಂಸ್ಕೃತಿಗೆ ಶ್ರೇಷ್ಠತೆ ಬರುತ್ತದೆ ಎಂದರು.
ಗ್ರಾಮೀಣ ವಿದ್ಯಾಥರ್ಿಗಳು ನಗರಗಳ ವಿದ್ಯಾಥರ್ಿಗಳೊಂದಿಗೆ ಸ್ಪಧರ್ೆ ಮಾಡುವಂತಹ ಸ್ಥಿತಿ ಇರುವ ಈ ಹೊತ್ತಿನೊಳಗೆ ನಗರದವರು ಬೆರಳ ತುದಿಯಲ್ಲಿ ಜ್ಞಾನ ಕೋಶವನ್ನು ಕಂಪ್ಯೂಟರ್ಗಳ ಮೂಲಕ ಕ್ಷಣಾರ್ಧದಲ್ಲಿ ಪಡೆಯುತ್ತಾರೆ, ಅದೇ ಗ್ರಾಮೀಣ ವಿದ್ಯಾಥರ್ಿಗಳು ಹತ್ತಾರು ಪುಸ್ತಕಗಳನ್ನು ಹುಡುಕಿ ಗುರುಗಳ ಕೃಪೆಗೆ ಒಳಗಾಗಿ ಪಡೆಯುವಂತಹ ಸ್ಥಿತಿ ಇದೆ, ಇದರಿಂದ ಗ್ರಾಮೀಣ ವಿದ್ಯಾಥರ್ಿಗಳು ದೃತಿಗೆಡದೆ ಇಂಟರ್ನೆಟ್ ಲೋಕವನ್ನು ತಾವು ಪರಿಚಯಿಸಿಕೊಂಡು ಜ್ಞಾನದ ದೀವಿಗೆ ನಮ್ಮ ವಿದ್ಯಾಥರ್ಿಗಳ ಕೈಬೆರಳಿಗೂ ಬರುವಂತೆ ನೋಡಿಕೊಳ್ಳುವ ಜವಬ್ದಾರಿಯನ್ನು ಪೋಷಕರು ಹಾಗೂ ಶಾಲೆಯ ಆಡಳಿತ ವರ್ಗ ಹೊಂದುವುದು ಅವಶ್ಯವಾಗಿದೆ ಎಂದರು.
ಗ್ರಾಮೀಣ ಶಿಕ್ಷಕರು ಇನ್ನು ಬೆತ್ತ ಹಿಡಿದು ಬೋಧಿಸುವದನ್ನು ಬಿಟ್ಟು ಚಿತ್ತಹಿಡಿದು ಕಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಶಾಸಕ ಹಾಗೂ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಬಿ.ಸುರೇಶ್ ಬಾಬು ಮಾತನಾಡಿ, ಪೋಷಕರು ಮಕ್ಕಳ ಓದಿನ ಕಡೆ ಹೆಚ್ಚು ಒತ್ತು ಕೊಟ್ಟಾಗ ಮಕ್ಕಳಿಗೆ ವಿದ್ಯಾಭ್ಯಾಸದ ಪ್ರಾಮುಖ್ಯತೆ ಅರಿವಾಗುತ್ತದೆ, ಆದ್ದರಿಂದ ಪೋಷಕರು ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳ ಬಗ್ಗೆಯೂ ನಿಗಾ ಇಡುವುದು ಅವಶ್ಯ, ವಾಷರ್ಿಕೋತ್ಸವದಂತಹ ಸಂದರ್ಭದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪೋಷಕರು ಆಗಮಿಸಿ ತಮ್ಮ ಮಕ್ಕಳನ್ನು ಉತ್ತೇಜಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉನ್ನತ ದಜರ್ೆಯಲ್ಲಿ ಉತ್ತೀರ್ಣರಾದ ವಿದ್ಯಾಥರ್ಿಗಳಿಗೆ ಎ.ಪಿ.ಎಂ.ಸಿ.ಅಧ್ಯಕ್ಷ ಸಿ.ಬಸವರಾಜು ಬೆಳ್ಳಿ ಪದಕ ವಿತರಿಸಿದರು. ಪ್ರತಿಭಾವಂತ ವಿದ್ಯಾಥರ್ಿಗಳಿಗೆ ವಿವಿಧ ದತ್ತಿ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಕಾರ್ಯದಶರ್ಿ ಸಿ.ಎಸ್.ನಟರಾಜ್, ಪುರಸಭಾ ಅಧ್ಯಕ್ಷ ರಾಜಣ್ಣ, ಪ್ರೊ.ಮ.ಲ.ನ.ಮೂತರ್ಿ,ಕೆ.ಜಿ.ಮಲ್ಲಿಕಾರ್ಜನಯ್ಯ, ನಿದರ್ೇಶಕರುಗಳಾದ ಜಿ.ತಿಮ್ಮಯ್ಯ, ಸಿ.ಪಿ.ಚಂದ್ರಶೇಖರ್ ಶೆಟ್ಟಿ, ಸಿ.ಎನ್.ಚಂದ್ರಶೇಖರ್ ಗುಪ್ತ, ಸಿ.ಎಂ.ರಂಗಸ್ವಾಮಿ, ಸಿ.ಬಿ.ರೇಣುಕಸ್ವಾಮಿ, ಕಣ್ಣಯ್ಯ, ರಮೇಶ್ಬಾಬು, ಪರಶಿವಮೂತರ್ಿ ಉಪಸ್ಥಿತರಿದ್ದರು.
ಶಾಲೆಯ ಎಚ್.ಎಂ, ಎಂ.ಎಲ್.ಮಲ್ಲಿಕಾರ್ಜನಯ್ಯ ಸ್ವಾಗತಿಸಿದರು, ಎಂ.ಕೆ.ಗಂಗಾಧರಯ್ಯ, ವೇಣುಗೋಪಾಲ್ ನಿರೂಪಿಸಿದರು.

ಅಳಿಯನನ್ನು ಆರಿಸುವಾಗ ನೀಡುವಷ್ಟೇ ಪ್ರಾಮುಖ್ಯತೆಯನ್ನು ಆಳುವವರನ್ನು ಆರಿಸುವಾಗಲು ನೀಡಿ: ದೊರೆಸ್ವಾಮಿ

ಚಿಕ್ಕನಾಯಕನಹಳ್ಳಿ,ಡಿ.23: ಪ್ರಜಾ ಪ್ರತಿನಿಧಿ ಪ್ರಭುತ್ವ ಎನ್ನುವುದಕ್ಕಿಂತ ಪಕ್ಷ ಪ್ರತಿನಿಧಿ ಪ್ರಭುತ್ವ ಎನ್ನುವುದು ಹೆಚ್ಚು ಸೂಕ್ತ ಎಂದು ಗಾಂಧಿವಾದಿ ಡಾ.ಎಚ್.ಎಸ್.ದೊರೆಸ್ವಾಮಿ ವಿಶ್ಲೇಷಿಸಿದರು.
ತಾಲೂಕಿನ ಕುಪ್ಪೂರು ಶ್ರೀ ಮರಳಸಿದ್ದೇಶ್ವರ ಗದ್ದಿಗೆ ಮಠದ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಜನಜಾಗೃತಿ ಭಾವೈಕ್ಯತಾ ಸಮಾರಂಭದಲ್ಲಿ 'ಶ್ರೀ ಕುಪ್ಪೂರು ಮರುಳಸಿದ್ದ ಶ್ರೀ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜನ ಸೇವೆ ಮಾಡುವ ಮೂಲಕ ಚುನಾವಣೆಗೆ ಅವಕಾಶವನ್ನು ಕೋರುವ ಕಾಲ ಒಂದಿತ್ತು ಆಗ ಪ್ರಜಾಪ್ರಭುತ್ವಕ್ಕೆ ಅರ್ಥವಿತ್ತು ಆದರೆ ಇಂದು ಈ ವ್ಯವಸ್ಥೆ ಇಲ್ಲ, ಯಾರ ಬಳಿ ಹೆಚ್ಚು ಹಣವಿದೆ ಅಂತವರಿಗೆ ಪಕ್ಷಗಳು ಮಣೆ ಹಾಕುತ್ತಿವೆ, ಪಕ್ಷಗಳು ಕಳುಹಿಸುವ ಪ್ರತಿನಿಧಿಗೆ ಮತದಾರರು ಓಟು ಹಾಕುವಂತಾಗಿದೆ ಎಂದ ಅವರು, ಕೆಲವು ರಾಜಕೀಯ ಪಕ್ಷಗಳ ನೇತಾರರು ದುಡ್ಡಿನ ಹಿಂದೆ ಬಿದ್ದು ಬಿ ಫಾರಂಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಮತದಾರರು ಬಹು ದಿನಗಳಿಗೆ ಒಮ್ಮೆ ಸಿಗುವ ಅವಕಾಶವನ್ನು ಸಮರ್ಥವಾಗಿ ಸದುಪಯೋಗ ಪಡಿಸಿಕೊಳ್ಳುವುದು ಕರ್ತವ್ಯವಾಗಿರುವುದರಿಂದ ಮತದಾನ ಮಾಡುವ ಮುಂಚೆ ತಮ್ಮ ಮಗಳಿಗೆ ವರನನ್ನು ನೋಡುವಾಗ ಪೂವರ್ಾಪರ ತಿಳಿದುಕೊಂಡು, ಯೋಚಿಸಿ ಮಗಳನ್ನು ಕೋಡುವ ರೀತಿಯಲ್ಲೇ ಮತದಾನ ಮಾಡುವಾಗಲೂ ಸಮರ್ಥವಾದ ಅಬ್ಯಾಥರ್ಿಯನ್ನೇ ಹುಡಕಿ ಮತದಾನ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಮಾತನಾಡಿ ಇಂದಿನ ಸಮಾಜದಲ್ಲಿ ನುಡಿ ವೀರರ ಸಂಖ್ಯೆಯೇ ಹೆಚ್ಚುತ್ತಿದ್ದು ನಡೆ ವೀರರು ಇಲ್ಲವಾಗುತ್ತಿದ್ದರೆ ಎಂದರಲ್ಲದೆ, ಮಠಗಳು ಜಾತಿಯ ಕೇಂದ್ರಗಳಾಗತ್ತಿವೆ ಇದರಿಂದ ಜನರಲ್ಲಿ ಭಾವನಾತ್ಮಕ ಕಂದಕಗಳು ಹೆಚ್ಚುತ್ತಿವೆ ಎಂದರು.
ಗುರು ಸನ್ಮಾರ್ಗ ತೋರ ಬೇಕು, ಭಕ್ತ ಮೋಕ್ಷವನ್ನು ಬೇಡಬೇಕು, ಆದರೆ ಇಂದು ಇದು ತಿರು-ಮುರುವಾಗುತ್ತಿದ್ದು, ಗುರು ಹಣವನ್ನು ಬೇಡುತ್ತಿದ್ದಾನೆ, ಭಕ್ತ ಗುರುವನ್ನು ಅಡ್ಡದಾರಿ ಹಿಡಿಸುತ್ತಿದ್ದಾನೆ ಎಂದರು.
ಸಮಾರಂಭದಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಧರ್ಮ ರಕ್ಷಕರಾಗಿರುವ ಗುರುಗಳು ಭಕ್ತನನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೆಪಿಸಬೇಕು, ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.
ಸಮಾರಂಭದಲ್ಲಿ ಯಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ, ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮಿ, ಯಸಳೂರು ಮಠದ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮಿ ಮಾತನಾಡಿದರು. ಶಾಸಕ ಸಿ.ಬಿ.ಸುರೇಶ್ ಬಾಬು ಹಾಜರಿದ್ದರು.
ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉಪಸ್ಥಿತರಿದ್ದರು.

No comments:

Post a Comment