Monday, January 10, 2011


ನೂತನ ಬಿ.ಸಿ.ಎಂ. ವಿಸ್ತರಣಾಧಿಕಾರಿಗಳ ಕಛೇರಿಗೆ ಚಾಲನೆ:ಚಿಕ್ಕನಾಯಕನಹಳ್ಳಿ,ಜ.10: ಪ್ರತಿ ತಾಲೂಕುಗಳಲ್ಲೂ ಬಿ.ಸಿ.ಎಂ. ಇಲಾಖೆಯ ವಿಸ್ತರಣಾಧಿಕಾರಿಗಳ ಕಛೇರಿಯನ್ನು ಪ್ರತ್ಯೇಕವಾಗಿ ಸ್ಥಾಪಿಸುವಂತೆ ಸಕರ್ಾರ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಪ್ರಥಮವಾಗಿ ಈ ತಾಲೂಕಿನಲ್ಲಿ ಕಛೇರಿ ಆರಂಭಕ್ಕೆ ಚಾಲನೆ ನೀಡಲಾಗಿದೆ ಎಂದು ಬಿ.ಸಿ.ಎಂ. ಜಿಲ್ಲಾ ಅಧಿಕಾರಿ ಸಿ.ಟಿ.ಮುದ್ದುಕುಮಾರ ತಿಳಿಸಿದರು.ಪಟ್ಟಣದ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಹಾಸ್ಟೆಲ್ನಲ್ಲಿ ತಾಲೂಕು ವಿಸ್ತರಣಾಧಿಕಾರಿಗಳ ಕಛೇರಿ ಆರಂಭದ ಅಂಗವಾಗಿ ದಿ.ದೇವರಾಜ ಅರಸ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ವಿಸ್ತರಣಾಧಿಕಾರಿಗಳ ಕಛೇರಿ ತಾ.ಪಂ.ಯ ಕಟ್ಟಡದಲ್ಲಿ ನಡೆಯುತ್ತಿದ್ದ ಈ ಕಛೇರಿ ಇನ್ನು ಮುಂದೆ ಪ್ರತ್ಯೇಕವಾದ ಕಟ್ಟಡದಲ್ಲಿ ನಡೆಯಲಿದೆ ಎಂದ ಅವರು, ನಮ್ಮ ಇಲಾಖೆಯಲ್ಲಿ ಈ ಬೇಡಿಕೆ ಕಳೆದ 20 ವರ್ಷಗಳ ಬೇಡಿಕೆಯಾಗಿತ್ತು. ಈಗ ಆ ಬೇಡಿಕೆ ಈಡೇರುವ ಕಾಲ ಬಂದಿದೆ ಎಂದರು. ಏಪ್ರಿಲ್ ತಿಂಗಳ ಆರಂಭದಿಂದ ಈ ಕಛೇರಿಗೆ ಡ್ರಾಯಿಂಗ್ ಪವರ್ ಬರಲಿದೆ. ಗುಮಾಸ್ತರು ಸೇರಿದಂತೆ ಕಛೇರಿಗೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲೂಕು ಬಿ.ಸಿ.ಎಂ.ವಿಸ್ತರಣಾಧಿಕಾರಿ ವನಮಾಲಾ ಭೂಮ್ಕರ್, ಮೆಟ್ರಿಕ್ ನಂತರ ವಿದ್ಯಾಥರ್ಿನಿಲಯದ ನಿಲಯ ಪಾಲಕಿ ಭಾನುಮತಿ, ಜೆ.ಸಿ.ಪುರ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಮೇಲ್ವಿಚಾರಕ ದೇವರಾಜಯ್ಯ, ತಾಲೂಕಿನ ವಿವಿಧ ಹಾಸ್ಟೆಲ್ಗಳ ಮೇಲ್ವಿಚಾರಕರುಗಳಾದ ಅಶ್ವತ್ಥ್ನಾರಾಯಣ, ಶಿವಮೂತರ್ಿ, ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿ.ನಾ.ಹಳ್ಳಿಯ ಜೆ.ಡಿ.ಯು.ಸಭೆಗೆ ಶರದ್ಯಾದವ್ಚಿಕ್ಕನಾಯಕನಹಳ್ಳಿ,ಜ.10: ಇಲ್ಲಿನ ಜನತಾದಳ(ಸಂಯುಕ್ತ) ಕಾರ್ಯಕರ್ತರ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶರದ್ಯಾದವ್, ರಾಜ್ಯ ಘಟಕದ ಅಧ್ಯಕ್ಷರಾದ ಎಸ್.ಪಿ. ನಾಡಗೌಡ ಅವರು ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಚಿ.ನಾ.ಹಳ್ಳಿಯ ನವೋದಯ ಪ್ರಥಮ ದಜರ್ೆ ಕಾಲೇಜ್ನ ಆವರಣದಲ್ಲಿ ಇದೇ 13ರ ಬೆಳಿಗ್ಗೆ 11.30ಕ್ಕೆ ಏರ್ಪಡಿಸಲಾಗಿರುವ ಈ ಸಭೆಯಲ್ಲಿ, ಈ ಸಲದ ಜಿ.ಪಂ ಹಾಗೂ ತಾ.ಪಂ. ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರನ್ನು ಅಭಿನಂದಿಸುವುದರ ಜೊತೆಗೆ ಜಯಶೀಲರಾದ ಸದಸ್ಯರನ್ನು ಸನ್ಮಾನಿಸಲಾಗುವುದು ಹಾಗೂ ಸ್ಪಧಿಸಿದ್ದ ಪಕ್ಷದ ಎಲ್ಲಾ ಅಭ್ಯಾಥರ್ಿಗಳು ಹಾಗೂ ತಾಲೂಕು ಮಟ್ಟದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment