Monday, April 11, 2011

ಪ್ರಥಮ ದಜರ್ೆ ಕಾಲೇಜಿನ ವಾಷರ್ಿಕೋತ್ಸವ

ಚಿಕ್ಕನಾಯಕನಹಳ್ಳಿ,ಏ.10: ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಇದೇ 15ರ ಶುಕ್ರವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ಕಾಲೇಜಿನ ಆವರಣದಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಶೇಷಾದ್ರಿಪುರಂ ಶಿಕ್ಷಣ ದತ್ತಿ ಧರ್ಮದಶರ್ಿ ಎಸ್.ವೀರಭದ್ರಯ್ಯ ಸಮಾರೋಪ ಭಾಷಣ ಮಂಡಿಸಲಿದ್ದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಭೇಡ್ಕರ್ ಮತ್ತು ಬಾಬು ಜಗಜೀವರಾಮ್ರವರ ಜನ್ಮದಿನಾಚರಣೆಚಿಕ್ಕನಾಯಕನಹಳ್ಳಿ,ಏ.10: ಡಾ.ಬಿ.ಆರ್.ಅಂಭೇಡ್ಕರ್ರವರ 120ನೇ ಜನ್ಮದಿನಾಚರಣೆ ಹಾಗೂ ಡಾ.ಬಾಬು ಜಗಜೀವನರಾಮ್ರವರ 104ನೇ ಜನ್ಮದಿನಾಚರಣೆ ಸಮಾರಂಭವನ್ನು ಇದೇ 14ರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ ಮತ್ತು ದಲಿತ ಸಂಘಟನೆ, ಹಿಂದುಳಿದ ವರ್ಗ ಅಲ್ಪ ಸಂಖ್ಯಾತರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ.ಡಾ.ಬಿ.ಆರ್.ಅಂಭೇಡ್ಕರ್ರವರ ಭಾವಚಿತ್ರವನ್ನು ಪುರಸಭಾಧ್ಯಕ್ಷ ರಾಜಣ್ಣ ಮತ್ತು ಡಾ.ಬಾಬು ಜಗಜೀವನರಾಂರವರ ಭಾವಚಿತ್ರವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಹಿತಬಾಯಿರವರ ಅನಾವರಣಗೊಳಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕಿರಣ್ಕುಮಾರ್, ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಜಾನಮ್ಮರಾಮಚಂದ್ರಯ್ಯ, ನಿಂಗಮ್ಮ, ತಾ.ಪಂ.ಉಪಾಧ್ಯಕ್ಷೆ ಬೀಬೀ ಫಾತಿಮಾ, ಪುರಸಭಾ ಉಪಾಧ್ಯಕ್ಷ ಆರ್.ರವಿ, ಬಾಪೂಜಿ ವಿದ್ಯಾ ಸಂಸ್ಥೆ ಕಾರ್ಯದಶರ್ಿಬೇವಿನಹಳ್ಳಿ ಚನ್ನಬಸವಯ್ಯ, ವಿಶೇಷ ಆಹ್ವಾನಿತರಾಗಿ ಇ.ಒ ಎನ್.ಎಂ.ದಯಾನಂದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಉಪಸ್ಥಿತರಿರುವರು. ರಾಜಕಾರಣಿಗಳು, ಅಧಿಕಾರಿಗಳಿಂದಲೇ ಭ್ರಷ್ಠತೆ

,ಏ.10: ವಿಧಾನಸಭೆ, ಲೋಕಸಭೆಗಳಲ್ಲಿರುವ ರಾಜಕಾರಣಿಗಳು, ಅಧಿಕಾರಿಗಳಿಂದಲೇ ಭ್ರಷ್ಠಾಚಾರ ಹೆಚ್ಚುತ್ತಿದ್ದು ಅವರಿಂದಲೇ ಸಾಮಾನ್ಯ ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ ಎಂದು ಬಾಳೆಕಾಯಿ ಶಿವನಂಜಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ನೆಹರು ಸರ್ಕಲ್ ಬಳಿ ತಾಲೂಕು ಜನಪರ ವೇದಿಕೆ ವತಿಯಿಂದ ಅಣ್ಣ ಹಜಾರೆರವರ ಭ್ರಷ್ಠಚಾರ ವಿರೋಧಿ ಹೋರಾಟಕ್ಕೆ ಬೆಂಬಲಿಸಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದ ಸಂದರ್ಬದಲ್ಲಿ ಮಾತನಾಡಿದ ಅವರು ಭ್ರಷ್ಠಾಚಾರಕ್ಕೆ ತೊಡಗದೆ ಪ್ರಾಮಾಣಿಕವಾಗಿ ಇರುವವರನ್ನು ತಾತ್ಸಾರವಾಗಿ ನೋಡುತ್ತಾರೆ ಇಂತಹ ದೃಷ್ಠಿ ಬದಲಾಗಬೇಕು ಅದರಲ್ಲೂ ಭ್ರಷ್ಠಾಚಾರದಲ್ಲಿ ತೊಡಗಿ ಸಿಕ್ಕಿಹಾಕೊಂಡವರಿಗೆ ಕಾನೂನು ಬದ್ದವಾಗಿ ಯಾರಿಗೂ ಶಿಕ್ಷೆಯಾಗಿಲ್ಲ ಅಂತಹವರ ವಿರುದ್ದ ಈ ಹೋರಾಟ ಸಮಂಜಸವಾಗಿದೆ.ಭ್ರಷ್ಠಾಚಾರವನ್ನು ಮೈಗೂಡಿಸಿಕೊಂಡವರೇ ಇಂದು ರಾಜಕಾರಣಿಗಳು, ಅಧಿಕಾರಿಗಳು ಉನ್ನತ ಹುದ್ದೆಗಳನ್ನು ಹೊಂದಿ ಸಾಮಾನ್ಯ ಜನರಿಗೆ ಕಾಣದೆ ಹಿಂಸಿಸುತ್ತಿದ್ದಾರೆ ಎಂದ ಅವರು ರೈತರ ಆತ್ಮಹತ್ಯೆಗಳಿಗೆ ಹೆಚ್ಚಾಗಿ ಕಾಣುತ್ತಿರುವುದು ಭ್ರಷ್ಠಾಚಾರ, ಇದನ್ನು ತಪ್ಪಿಸಲು ಭ್ರಷ್ಠ ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಿ ಉತ್ತಮೋತ್ತರಿಗೆ ಕೆಲಸ ನೀಡಬೇಕು ಎಂದರು.ಜನಪರ ವೇದಿಕೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಭಾರತ ದೇಶ ಬಹುಜನಗಳ ರಾಷ್ಟ್ರ ಇಲ್ಲಿನ ಸಂಪತ್ತು ಸರ್ವರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಆದರೆ ಇಂದು ದೇಶದ ಸಂಪತ್ತು ರಾಜಕೀಯ ಬಲ, ಜಾತಿಯ ಬಲ, ತೋಳ್ ಬಲ ಇರುವ ಭ್ರಷ್ಠಾಚಾರಿಗಳ ಪಾಲಾಗುತ್ತಿದೆ, ಇದೇ ರೀತಿ ದೇಶದಲ್ಲಿ ಸಂಪತ್ತು ಒಂದೇ ಕಡೆ ಕ್ರೂಡೀಕೃತವಾದರೆ ಭ್ರಷ್ಠಾಚಾರ ಮುಂದುವರೆದರೆ ಈ ದೇಶ ಮತ್ತು ರಾಜ್ಯ ಕೆಲವೇ ವ್ಯಕ್ತಿಗಳ ಸಾಮ್ರಾಜ್ಯವಾಗುತ್ತದೆ, ಸ್ವಾತಂತ್ರದ ಅರ್ಥ ಕಳೆದು ಹೋಗಿ ಜನರು ಗುಲಾಮಗಿರಿ ದಾಸ್ಯಕ್ಕೆ ಒಳಪಡಬೇಕಾಗುತ್ತದೆ, ಇದನ್ನು ತಪ್ಪಿಸಲು ಜನಲೋಕಪಾಲ ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ 64 ವರ್ಷಗಳಿಂದಲೂ ಭಾರತ ಭ್ರಷ್ಠಕೂಪದಿಂದ ಹೊರಬರದೇ ನರಳುತ್ತಿದ್ದು ಈ ಭ್ರಷ್ಠತೆಯನ್ನು ಹೋಗಲಾಡಿಸಲು ಗಾಂಧಿವಾದಿ ಅಣ್ಣ ಅಜಾರೆರವರು ಉಪವಾಸ ಕೈಗೊಂಡಿರುವುದಕ್ಕೆ ರಾಷ್ಟ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ಇದ್ದು ಶೀಘ್ರವಾಗಿ ಜನಲೋಕಪಾಲ ಮಸೂದೆಯನ್ನು ಸಕರ್ಾರ ಜಾರಿಗೆ ತರಬೇಕು ಎಂದರು. ಉಪವಾಸ ಸತ್ಯಾಗ್ರಹದ ನಂತರ ಜನಲೋಕಪಾಲ ಮಸೂದೆ ಜಾರಿಗೆ ಬಂದ ಸಂತಸಕ್ಕಾಗಿ ಜನಪರ ವೇದಿಕೆ, ಕನರ್ಾಟಕ ರಕ್ಷಣಾ ವೇದಿಕೆ, ಭುವನೇಶ್ವರಿ ಕಲಾ ಸಂಘ, ಹಿಂದುಳಿದ ವರ್ಗಗಲ ಜಾಗೃತಿ ವೇದಿಕೆ, ದಲಿತ ಸಂಘರ್ಷ ಸಮಿತಿ, ಪತ್ರಕರ್ತರ ಸಂಘ, ಕುಂಚಾಂಕುರ ಕಲಾ ಸಂಘ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಎಲ್ಲಾ ಪಧಾದಿಕಾರಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಉಪವಾಸ ಸತ್ಯಾಗ್ರಹದಲ್ಲಿ ಸಿ.ಎಸ್.ರೇಣುಕಮೂತರ್ಿ, ಸಿ.ಟಿ.ಗುರುಮೂತರ್ಿ, ಸುಬ್ರಮಣ್ಯ, ಲಿಂಗದೇವರು, ಸಿ.ಹೆಚ್.ಗಂಗಾಧರ್, ಸಿ.ಎನ್.ಮಂಜುನಾಥ, ಕೆ.ಜಿ.ರಾಜೀವಲೋಚನ, ಸಿ.ಬಿ.ಲೋಕೇಶ್, ರವಿಕುಮಾರ್ ಉಪಸ್ಥಿತರಿದ್ದರು. ಅಭಾವಿಪ ಪತಿಯಿಂದ ಅಣ್ಣ ಅಜಾರೆರವರ ಸತ್ಯಾಗ್ರಹಕ್ಕೆ ಬೆನ್ಬಲಚಿಕ್ಕನಾಯಕನಹಲ್ಲಿ,ಏ.09

ಅಣ್ಣ ಅಜಾರೆರವರ ಉಪವಾಸ ಸತ್ಯಾಗ್ರಹಕ್ಕೆ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಬೆಂಬಲ ಸೂಚಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ವಿದ್ಯಾಥರ್ಿಗಳ ಮೂಲಕ ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ತಾಲೂಕ್ ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಬ್ರಿಟೀಷರು ಸ್ವಾತಂತ್ರ ಪೂರ್ವದಲ್ಲಿ ನಮ್ಮ ದೇಶದ ಸಂಪನ್ಮೂಲವನ್ನು ಕೊಳ್ಳೆಹೊಡಿದರು ಆದರೆ ಇಂದು ನಮ್ಮ ದೇಶದ ಸಂಸ್ಕೃತಿಯನ್ನು ಅರಿತ ಭ್ರಷ್ಠ ರಾಜಕಾರಣಿಗಳು ಕೋಟಿ ಕೋಟಿ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಭ್ರಷ್ಠಾಚಾರ ಎಂಬ ಪಿಡುಗು ದೇಶ ವ್ಯಾಪ್ತಿ ಹರಡಿರುವುದು ಶೋಚನೀಯ, ಸಾರ್ವಜನಿಕರ ಹಣವನ್ನು ಭ್ರಷ್ಠರು ಸಿಸ್ವ್ ಬ್ಯಾಂಕ್ನಲ್ಲಿ ಬಚ್ಚಿಟ್ಟಿದ್ದಾರೆ, ಇದನ್ನು ಹೊರತರಲು ಕೇಂದ್ರ ಸಕರ್ಾರ ವಿಫಲವಾಗಿದೆ. ಯುವ ಜನತೆಯು ಭ್ರಷ್ಠಾಚಾರತೆಯ ವಿರುದ್ದ ಸಮರ ಸಾರಬೇಕು ಈ ಭ್ರಷ್ಠತೆಯನ್ನು ಹೋಗಲಾಡಿಸಲು ಅಣ್ಣ ಅಜಾರೆರವರು ಕೈಗೊಂಡಿರುವುದು ಸ್ವಾಗತಾರ್ಹ ಎಂದರು.ಈ ಸಂದರ್ಭದಲ್ಲಿ ಅಭಾವಿಪ ಹಿರಿಯ ಕಾರ್ಯಕರ್ತ ರಾಕೇಶ್ ಮಾತನಾಡಿದರು.ಅಭಾವಿಪ ಕಾರ್ಯಕರ್ತರಾದ ಮನು, ವಿಜಯ್, ಗುರು, ದರ್ಶನ್, ನಂದನ್, ವಾಸು, ರವಿ, ಸುಷ್ಮಾ, ಸುಪ್ರಿಯಾ ಈ ಸಂದರ್ಭದಲ್ಲಿ ಹಾಜರಿದ್ದರು.

No comments:

Post a Comment