ಹರಿಜನರಿಗೆ ಪ್ರತ್ಯೇಕ ರಾಜ್ಯ ಕೊಡಿ: ಬೇವಿನಹಳ್ಳಿ
ಚನ್ನಬಸವಯ್ಯಚಿಕ್ಕನಾಯಕನಹಳ್ಳಿ,ಏ.14: ಅಸ್ಪೃಶ್ಯತೆ, ಅಸಮಾನತೆಯನ್ನು ನಿವಾರಿಸಲು ಸಾಧ್ಯವಾಗದ ಮೇಲೆ ಹರಿಜನರಿಗಾಗಿ ಪ್ರತ್ಯೇಕ ರಾಜ್ಯ ಕೊಡಿ ಎಂದು ಡಾ. ಅಂಬೇಡ್ಕರ್ ಅವರು ಅಂದೇ ಗಾಂಧಿಜೀಯವರನ್ನು ಕೇಳಿದ್ದರು ಎಂದು ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು. ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ, ದಲಿತ ಸಂಘಟನೆಗಳ ಹಾಗೂ ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ರವರ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು. ದಲಿತರನ್ನು ಹರಿಜನರೆಂದು ಕರೆಯುವ ಬಗ್ಗೆಯೇ ಆಕ್ಷೇಪವೆತ್ತಿದ್ದಲ್ಲದೆ, ಸಮಾನತೆಯನ್ನು ನೀಡುವ ವಿಷಯದಲ್ಲಿ ತೋರುತ್ತಿದ್ದ ಅಸಡ್ಡೆಯನ್ನು ಬಹಿರಂಗವಾಗಿ ಅಂಬೇಡ್ಕರ್ ಖಂಡಿಸುತ್ತಿದ್ದರು ಎಂದರು. ಇಡೀ ಪ್ರಪಂಚದಲ್ಲಿ ಬೃಹತ್ ಸಂವಿಧಾನವೆಂಬ ಖ್ಯಾತಿಗೆ ಒಳಗಾಗಿರುವ ನಮ್ಮ ಸಂವಿಧಾನವನ್ನು ರಚಿಸಿದ ಮುಖ್ಯಸ್ಥರಿಗೆ ಸಂವಿಧಾನದ ಆಶಯಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸುವ ಬಗ್ಗೆ ಅನುಮಾನಗಳಿದ್ದವು ಎಂದರು. ಅಂದು ಮೇಲ್ವರ್ಗದ ಜನ ತಮ್ಮ ಆಥರ್ಿಕ ಲಾಭಕ್ಕಾಗಿ ದಲಿತರನ್ನು ದುಡಿಸಿಕೊಳ್ಳುತ್ತಿದ್ದರೆ, ಇಂದು ರಾಜಕೀಯ ಲಾಭಕ್ಕಾಗಿ ನಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ ಇಂದಿಗೂ ದಲಿತರ ಕೈಗೆ ಅಧಿಕಾರ ಸಿಕ್ಕಿಲ್ಲ, ಸಿಗುವ ಲಕ್ಷಣಗಳೂ ಇಲ್ಲವೆಂದು ನಿರಾಸೆ ವ್ಯಕ್ತ ಪಡಿಸಿದರು. ಬಾಬು ಜಗಜೀವನ್ ರಾಂರವರು ಅಭಿವೃದ್ಧಿಯ ನೇತಾರರಾಗಿದ್ದರು, ಅವರು ಅಂದು ತಂದ ವಿಮಾ ಮಸೂದೆ, ವೈಮಾನಿಕ ಕ್ಷೇತ್ರದಲ್ಲಿ ತಂದ ರಾಷ್ಟ್ರೀಕರಣ ವ್ಯವಸ್ಥೆ, ಆಹಾರ ಉತ್ಪಾದನೆಯಲ್ಲಿ ಮಾಡಿದ್ದ ಕ್ಷಿಪ್ರ ಪ್ರಗತಿಯ ಕ್ರಾಂತಿ ಇವೆಲ್ಲವೂ ಅವರನ್ನು ಈ ರಾಷ್ಟ್ರ ಇಂದಿಗೂ ನೆನಪಿಸಿಕೊಳ್ಳುವಂತೆ ಮಾಡಿದೆ ಎಂದರು. ಜಲಾನಯನದ ಕಲ್ಪನೆಯನ್ನು ಆಗಲೇ ಅನುಷ್ಠಾನಕ್ಕೆ ತರುವ ಮೂಲಕ ಒಣ ಭೂಮಿಗೆ ನೀರುಣ್ಣಿಸುವ ಕಾರ್ಯವನ್ನು ಕೈಗೊಂಡಿದ್ದಲ್ಲದೆ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವಂತೆ ಮಾಡಿದ ಹರಿಕಾರ ಎಂಬ ಖ್ಯಾತಿಗೆ ಜಗಜೀವನ್ರಾಂ ಪಾತ್ರರಾದರು ಎಂದರು. ಅಂಬೇಡ್ಕರ್ರವರು ಸಂವಿಧಾನದ ಮೂಲಕ ದಲಿತರ ಏಳಿಗೆಯನ್ನು ಬಯಸಿದರೆ, ಜಗಜೀವನ್ ರಾಂ ಅಧಿಕಾರದ ಮೂಲಕ ದಲಿತರಲ್ಲಿ ಆತ್ಮವಿಶ್ವಾಸ ಮೂಡಿಸಿದವರು ಎಂದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಾಮಾಜಿಕ ಪಿಡುಗುಗಳ ಬಗ್ಗೆ ಹೋರಾಡುವ ಮೂಲಕ ಅಂಬೇಡ್ಕರ್ ಈ ದೇಶದ ನಾಯಕರಾದರು ಎಂದರಲ್ಲದೆ, ಪತ್ರಿಕೆಗಳಿಲ್ಲದ ಮುಂದಾಳು, ರೆಕ್ಕೆ ಇಲ್ಲದ ಪಕ್ಷಿಯಂತೆ. ಎಂಬುದನ್ನು ಅರಿತು ಮೂಕ ನಾಯಕ ಮತ್ತು ಸಮತಾ ಎಂಬ ಪತ್ರಿಕೆಗಳನ್ನು ಆರಂಭಿಸಿದರು ಎಂದರು. ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಮಾತನಾಡಿ, ಡಾ.ಅಂಬೇಡ್ಕರ್ ರವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದರು. ಶಾಸಕ ಸಿ.ಬಿ.ಸುರೇಶ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.ಸಮಾರಂಭದಲ್ಲಿ ಅಂಬೇಡ್ಕರ್ರವರ ಭಾವಚಿತ್ರವನ್ನು ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ ಅನಾವರಣಗೊಳಿಸಿದರೆ, ಬಾಬು ಜಗಜೀವನ್ರಾಂರವರ ಭಾವಚಿತ್ರವನ್ನು ಜಿ.ಪಂ.ಸದಸ್ಯೆ ಲೋಹಿತಬಾಯಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್ ಸನ್ಮಾನ ಸ್ವೀಕರಿಸಿ ಮಾತನಾಡಿದರು, ಮಾಜಿ ಶಾಸಕ ಬಿ.ಲಕ್ಕಪ್ಪ, ಸಿ.ಪಿ.ಐ,ಪಿ.ರವಿಪ್ರಸಾದ್ ಮಾತನಾಡಿದರು. ಸಮಾರಂಭದಲ್ಲಿ ಬಿ.ಸಿ.ಎಂ.ಕಾಲೇಜ್ ಹಾಸ್ಟೆಲ್ನ ವಿದ್ಯಾಥರ್ಿನಿಯರು ಪ್ರಾಥರ್ಿಸಿದರೆ, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಸ್ವಾಗತಿಸಿ, ಲಿಂಗದೇವರು ನಿರೂಪಿಸಿದರು.
No comments:
Post a Comment