Tuesday, May 3, 2011



ಚಿಕ್ಕನಾಯಕನಹಳ್ಳಿ,ಮೇ.02: ಮಾಲೀಕರ, ಕಾಮರ್ಿಕರ ಭಾಂದವ್ಯವು ಉತ್ತಮವಾಗಿದ್ದರೆ ಕಾಖರ್ಾನೆಗಳಲ್ಲಿ ಯಾವುದೇ ಆಂತರಿಕ, ಬಾಹ್ಯ ಸಮಸ್ಯೆಗಳು ಎದುರಾಗದೆ ಕಾಖರ್ಾನೆಗಳ ಕೆಲಸಗಳು ಶಾಂತಿಯುತವಾಗಿ ನಡೆಯುತ್ತವೆ ಎಂದು ಸಿವಿಲ್ ನ್ಯಾಯಾದೀಶರಾದ ಎ.ಜಿ.ಶಿಲ್ಪ ಅಭಿಪ್ರಾಯಪಟ್ಟರು.ಪಟ್ಟಣದ ಕುಶಾಲ್ ಗಾಮರ್ೆಂಟ್ಸ್ ಆವರಣದಲ್ಲಿ ನಡೆದ ಕಾಮರ್ಿಕ ದಿನಾಚರಣೆ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಖರ್ಾನೆಗಳಲ್ಲಿ ಸ್ವಚ್ಚತೆಯ ವ್ಯವಸ್ಥೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಕಾಮರ್ಿಕರು ಸಂಘಟಿತರಾಗಿ ಕಾನೂನಿನ ಹಿತರಕ್ಷಣೆ ತಿಳಿದುಕೊಂಡು ತಮ್ಮ ಹಕ್ಕುಗಳನ್ನು ಪಡೆಯಬೇಕು. ಮಹಿಳಾ ಕಾಮರ್ಿಕರು ಮಹಿಳಾ ಸಬಲೀಕರಣಕ್ಕಾಗಿ, ತಮಗೆ ಸಿಗಬೇಕಾದ ಸಮಾನ ಸ್ಥಾನಮಾನ ಅವಕಾಶಗಳನ್ನು ತಿಳಿಯಲು ಕಾನೂನಿನ ಅರಿವನ್ನು ತಿಳಿದುಕೊಳ್ಳಬೇಕು ಮತ್ತು ಕಾನೂನಿನಲ್ಲಿರುವ ವಿಷಯಗಳನ್ನು ಪ್ರತಿಯೊಬ್ಬರಿಗೂ ತಿಳಿಸುವುದೇ ಕಾನೂನು ಸೇವಾ ಸಮಿತಿಯ ಉದ್ದೇಶವಾಗಿದೆ. ಕಾನೂನು ಸೇವಾ ಸಮಿತಿಯಡಿಯಲ್ಲಿ ಮಹಿಳೆಯರು ತಮಗೆ ಆಗಿರುವ ಅನ್ಯಾಯದ ಬಗ್ಗೆ ಉಚಿತವಾಗಿ ನ್ಯಾಯ ಪಡೆಯಬಹುದು ಮತ್ತು ಸಂಸಾರದಲ್ಲಿ ಪ್ರತಿ ವಸ್ತುಗಳ ಬೆಲೆಯು ಏರಿಕೆಯಾಗುತ್ತಿರುವುದರಿಂದ ಗಂಡು-ಹೆಣ್ಣು ಖಚರ್ು, ವೆಚ್ಚಗಳಿಗೆ ಸಮಪಾಲು ನೀಡುವ ಮೂಲಕ ಮಹಿಳಾ ಕಾಮರ್ಿಕರು ಸಮಾಜಮುಖಿ ಎಂಬುದು ತಿಳಿಯಬೇಕಾಗಿದೆ ಎಂದ ಅವರು ಭಾರತ ದೇಶವು ಕಾಮರ್ಿಕರಿಂದಲೇ ಆಥರ್ಿಕವಾಗಿ ಸದೃಡವಾಗಿದ್ದು ಕಾನೂನಿನ ಚೌಕಟ್ಟಿನಲ್ಲಿರುವ ಕಾಖರ್ಾನೆಗಳು ಕಾಮರ್ಿಕರ ಹಿತದೃಷ್ಠಿಯನ್ನು ಹೊಂದಿರಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್ ಮಾತನಾಡಿ ದಿನನಿತ್ಯದ ಕೂಲಿಗಾಗಿ ಶ್ರಮಿಸುವವರೆ ಕಾಮರ್ಿಕರಾಗಿದ್ದು ಅವರಿಗೆ ಬೇಕಾಗಿರುವ ಸಾಮಾನ್ಯ ಕಾನೂನಿನ ಅರಿವು ತಿಳಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.ಸಕರ್ಾರಿ ಅಭಿಯೋಜಕಾರದ ಆರ್.ಟಿ.ಆಶಾ ಮಾತನಾಡಿ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಕಾನೂನಿನ ಅರಿವನ್ನು ತಿಳಿದುಕೊಳ್ಳಲು ಕಾನೂನಿನ ಅರಿವು ನಡೆಯುವ ಕಾರ್ಯಗಾರದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದರು.ಕುಶಾಲ್ ಗಾಮರ್ೆಂಟ್ಸ್ ಮಾಲೀಕ ಎಸ್.ಎಲ್.ಶಾಂತಕುಮಾರ್ ಮಾತನಾಡಿ ನಮ್ಮ ಕಂಪನಿಯಲ್ಲಿ ಕಾಮರ್ಿಕರ ದಿನಾಚರಣೆ ನಡೆಸಲು ಸಹಕರಿಸಿದ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದವರಿಗೆ ಧನ್ಯವಾದವನ್ನು ಅಪರ್ಿಸಿದರು.ಸಮಾರಂಭದಲ್ಲಿ ವಕೀಲರರಾದ ವೈ.ಜಿ.ಲೋಕೇಶ್ ಕಾಮರ್ಿಕರ ಕಾಯಿದೆಗಳ ಬಗ್ಗೆ , ಆರ್.ಎ.ಎಲಿಜಬೆತ್ರಾಣಿ ಮಹಿಳಾ ಕಾಮರ್ಿಕರ ಹಿತರಕ್ಷಣೆಯ ಬಗ್ಗೆ ವಿಷಯ ಮಂಡಿಸಿದರು.ಸಮಾರಂಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ವೆಂಕಟೇಶ್, ಕಾರ್ಯದಶರ್ಿ ಸಿ.ರಾಜಶೇಖರ್ ಉಪಸ್ಥಿತರಿದ್ದರು.ಸಮಾರಂಭದಲ್ಲಿ ವಕೀಲರಾದ ಚಿಕ್ಕಣ್ಣ ಸ್ವಾಗತಿಸಿದರೆ, ಹೆಚ್.ಟಿ.ಹನುಮಂತಯ್ಯ ನಿರೂಪಿಸಿ, ದಿಲೀಪ್ ವಂದಿಸಿದರು.
ನಾಟಕೋತ್ಸವದಲ್ಲಿ ವಿಚಾರ ಸಂಕಿರಣ ಮತ್ತು 10ಕಲಾವಿದರಿಗೆ ಸನ್ಮಾನಚಿಕ್ಕನಾಯಕನಹಳ್ಳಿ,ಮೇ.2: ರಾಜ್ಯ ಮಟ್ಟದ ನಾಟಕೋತ್ಸವದ ಅಂಗವಾಗಿ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭವನ್ನು ಮೇ 7ರಂದು ನಾಟಕರತ್ನ ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದು ಶ್ರೀ ರಂಗರಂಗ ಹವ್ಯಾಸಿ ಕಲಾತಂಡದ ಅಧ್ಯಕ್ಷ ಎಸ್.ನಾಗಣ್ಣ ಉದ್ಘಾಟನೆ ನೆರವೇರಿಸಲಿದ್ದು ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿ ಪುರಸ್ಕೃತ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲರಾದ ಹೊನ್ನವಳ್ಳಿ ನಟರಾಜ್, ರಾಜ್ಕುಮಾರ್ ವಿಶ್ವೇಶ್ವರಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾ ಸದಸ್ಯ ವರದರಾಜು, ಈಶ್ವರಭಾಗವತ್, ಕೃಷ್ಣಮೂತರ್ಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೀವಲೋಚನ, ಬನಶಂಕರಿ ಸೊಸೈಟಿ ಅಧ್ಯಕ್ಷ ಸಿ.ಜಿ.ಕಿರಣ್, ಸಾಹಿತಿ ಎನ್.ನಾಗಪ್ಪ, ಸಿ.ಡಿ.ಪಿ.ಓ ಅನೀಸ್ಖೈಸರ್, ತಾ.ದೇವಾಂಗ ಸಂಘದ ಅಧ್ಯಕ್ಷ ಶೇಷಪ್ಪ, ಉಪಸ್ಥಿತರಿರುವರು.ತಾಲೂಕು ಹತ್ತು ಕಲಾವಿದರಿಗೆ ಸನ್ಮಾನ: ತಾಲೂಕಿನ ಹತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಮೇ 8ರಂದು ಸಂಜೆ 6ಕ್ಕೆ ದಿ.ಕುಪ್ಪೂರು ಗೋಪಾಲರಾವ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ರಂಗಭೂಮಿಯ ಪ್ರಸಿದ್ದ ನಟ ಬಾಬು ಹಿರಣ್ಣಯ್ಯ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಂದರು ಹಾಗೂ ಒಳನಾಡು ಸಾರಿಗೆ ಸಚಿವಾಲಯದ ವಿಶೇಷಾಧಿಕಾರಿ ರಘುಶೆಟ್ಟಿಗಾರ್ ಸನ್ಮಾನಿತರಿಗೆ ಸನ್ಮಾನಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ ಕೆ.ಎಸ್.ಲೋಕೇಶ್, ತಾ.ಪಂ.ಮಾಜಿ ಅಧ್ಯಕ್ಷ ಹೆಚ್.ಎಂ.ಸುರೇಂದ್ರಯ್ಯ, ತಾ.ಪಂ.ಸದಸ್ಯ ಶಶಿಧರ್, ನಿವೃತ್ತ ಕೃಷಿ ಅಧಿಕಾರಿ ಸಿ.ಹೆಚ್.ನಾಗರಾಜು, ಪುರಸಭಾ ಸದಸ್ಯೆ ಶುಭಾ ಬಸವರಾಜು, ತಾ.ಕಸಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದಶರ್ಿ ಚಿದಾನಂದ್, ಪಿ.ಎಲ್.ಡಿ.ಟಿ ನಿದರ್ೇಶಕ ಟಿ.ಶಂಕರಲಿಂಗಪ್ಪ, ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಎಸ್.ಆರ್.ರಾಜ್ಕುಮಾರ್, ಟೌನ್ ಬ್ಯಾಂಕ್ ನಿದರ್ೇಶಕ ಶಶಿಕುಮಾರ್ ಉಪಸ್ಥಿತರಿರುವರು.

No comments:

Post a Comment