Saturday, May 21, 2011













ಸಕರ್ಾರಿ ಸವಲತ್ತುಗಳನ್ನು ಪಡೆಯಲು ಕರೆಚಿಕ್ಕನಾಯಕನಹಳ್ಳಿ,







ಮೇ.21: ಸಕರ್ಾರಿ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಕಂಬಳಿ ನೇಕಾರರು ಆಥರ್ಿಕವಾಗಿ ಅಭಿವೃದ್ದಿ ಹೊಂದುವಂತೆ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಕರೆ ನೀಡಿದರು. ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರಿ ಸಂಘ(ನಿ) ದಲ್ಲಿ ಕಂಬಳಿ ನೇಕಾರರಿಗೆ ಜವಳಿ ಮತ್ತು ಕೈಮಗ್ಗ ಇಲಾಖೆಯಿಂದ ಮಂಜೂರಾದ ಮನೆ ನಿಮರ್ಾಣದ ಸಹಾಯಧನ, ಗ್ರಾಮೀನ ಮತ್ತು ನಗರ ವ್ಯಾಪ್ತಿಯ ಕಾರ್ಯಗಾರ ಹಾಗೂ ಕಂಬಳಿ ನೇಕಾರರ ಮಕ್ಕಳಿಗೆ ವಿದ್ಯಾಥರ್ಿ ವೇತನದ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ ಸಂಘಗಳು ಏಕಮುಖಿಯಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಮತ್ತು ಉತ್ತಮವಾಗಿ ಕೆಲಸ ಮಾಡುವವರನ್ನು ಕಾಲಿಡಿದು ಎಳೆಯುವ ಪ್ರವೃತ್ತಿಯನ್ನು ಬಿಡಬೇಕು ಆಗ ಮಾತ್ರ ಸಂಘಗಳು ಅಭಿವೃದ್ದಿ ಹೊಂದುತ್ತವೆ ಎಂದು ಹೇಳಿದರು.ಸಮಾರಂಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು, ಜಿ.ಪಂ.ಸದಸ್ಯೆ ಮಂಜುಳ ಗವಿರಂಗಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಉಪಾಧ್ಯಕ್ಷ ಸಿ.ಕೆ.ಲೋಕೇಶ್, ಸಿ.ಪಿ.ಗಿರೀಶ್, ಸಿ.ಎಸ್.ದೇವರಾಜು , ಸಂಘದ ನಿದರ್ೇಶಕರುಗಳು ಹಾಜರಿದ್ದರು.

No comments:

Post a Comment