ನೇಪಥ್ಯಕ್ಕೆ ಸರಿದ ರಂಗಾಯಣದ ಲಿಂಗದೇವರುಚಿಕ್ಕನಾಯಕನಹಳ್ಳಿ,ಜು.08: ಭಾಷಾ ವಿಜ್ಞಾನಿ, ಅಂಕಣಕಾರ, ನಾಟಕಕಾರ, ಅಂತರರಾಷ್ಟ್ರೀಯ ಚಿಂತಕ, ಮೈಸೂರಿನ ರಂಗಾಯಣದ ನಿದರ್ೇಶಕ ಹಾಗೂ ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಪ್ರೊ.ಲಿಂಗದೇವರು ಹಳೆಮನೆ(62) ಅವರ ನಿಧನಕ್ಕೆ ತಾಲೂಕಿನ ಜನತೆಯ ಪರವಾಗಿ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ದಾಂಜಲಿ ಅಪರ್ಿಸಿದರು. ತಾಲೂಕು ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ತಾಲೂಕಿನ ಸಾಂಸ್ಕೃತಿಕ ಚೇತನವಾಗಿದ್ದ ಪ್ರೊ.ಲಿಂಗದೇವರು ಅವರು, ತಾವು ಹುಟ್ಟಿದ ನಾಡಿನ ಕೀತರ್ಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಪ್ರತಿಭಾವಂತರು ಎಂದು ಬಣ್ಣಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ಮಾತನಾಡಿ, ಸಿ.ಬಿ.ಮಲ್ಲಪ್ಪ, ಬಿ.ಕೆ.ಈಶ್ವರಪ್ಪನ ತಲೆ ಮಾರಿನ ನಂತರದಲ್ಲಿ ರಂಗಭೂಮಿಯಲ್ಲಿ ಹೆಚ್ಚು ಕೆಲಸ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಾಟಕ ಕಾರ ಪ್ರೊ.ಲಿಂಗದೇವರು ಹಳೆಮನೆಯನ್ನು ರಂಗಾಯಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರ ಪಡೆಯಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದರು. ಶಿವಮೊಗ್ಗ ಮತ್ತು ಧಾರವಾಡದಲ್ಲಿ ರಂಗಾಯಣದ ಶಾಖೆಯನ್ನು ತೆರೆಯಲು ಸಕರ್ಾರದಿಂದ ಅನುಮೋದನೆ ಪಡೆದಿದ್ದರು ಎಂದರು. ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್ ನುಡಿ ನಮನ ಸಲ್ಲಿಸಿದರು. ಜಿ.ಪಂ.ಸದಸ್ಯರಾದ ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ, ಪುರಸಭಾ ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬೀಬಿ ಫಾತಿಮಾ ತಾ.ಪಂ.ಸದಸ್ಯೆ ಹೇಮಾವತಿ, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ವರದರಾಜು, ಕೃಷ್ಣಮೂತರ್ಿ, ಸೇರಿದಂತೆ ಹಲವು ಸಂಸ್ಥೆಗಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಕಣ್ಣಯ್ಯ ನಿರೂಪಿಸಿದರು.
ಪರಿಚಯ: ಪ್ರೊ.ಲಿಂಗದೇವರು ಅವರು, 06.3.1949ರಲ್ಲಿ ಹಾಲುಗೋಣದಲ್ಲಿ ಜನ್ಮವೆತ್ತ ಶ್ರೀಯುತರು, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ತಾಯಿ ಬೋರಮ್ಮನವರ ತವರೂರಾದ ಪಂಕಜನಹಳ್ಳಿಯಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣವನ್ನು ಬಿಳಿಗಿರೆಯಲ್ಲಿ ಪೂರೈಸಿದರು, ಪಿ.ಯು.ಸಿ ಹಾಗೂ ಬಿ.ಎ. ಪದವಿಯನ್ನು ತಿಪಟೂರಿನಲ್ಲಿ ವ್ಯಾಸಂಗ ಮಾಡಿದರು. 1973ರಲ್ಲಿ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ(ಎಂ.ಎ)ಯನ್ನು ತಮಿಳು ನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಪೂರೈಸಿದ ನಂತರ ಅದೇ ವರ್ಷ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನಕ್ಕೆ ಭಾಷಾ ವಿಜ್ಞಾನಿಯಾಗಿ ಸೇರಿದರು. ಈ ಸಂಸ್ಥೆಯಲ್ಲಿ 36 ವರ್ಷ ಸೇವೆ ಸಲ್ಲಿಸಿ, 2009ರ ಮಾಚರ್ಿನಲ್ಲಿ ನಿವೃತ್ತಿ ಹೊಂದಿದ್ದರು. 1986ರಲ್ಲಿ ಮೈಸೂರ ವಿ.ವಿ.ಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪದವಿಯನ್ನು ಪ್ರಥಮ ರ್ಯಾಂಕ್ನೊಂದಿಗೆ ನಾಲ್ಕು ಚಿನ್ನದ ಪದಕಗಳನ್ನು ಪಡೆದರು. ವಯಸ್ಕರ ಶಿಕ್ಷಣದ ರಾಜ್ಯ ಸಂಪನ್ಮೂಲ ಕೇಂದ್ರದ ನಿದರ್ೇಶಕರಾಗಿದ್ದರಲ್ಲದೆ, ರಾಷ್ಟ್ರೀಯ ಸಾಕ್ಷರತಾ ಮಿಷನಿನ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯ ಸಾಹಿತ್ಯ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮಲೇಶಿಯಾ, ಜರ್ಮನಿ, ಶ್ರೀಲಂಕ ದೇಶಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಇವರಿಗೆ ಕನರ್ಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಡಾ.ಹಾ.ಮಾ.ನಾಯಕ ಅಂಕಣ ಪ್ರಶಸ್ತಿ, ಧಾರವಾಡದ ಶಿಕ್ಷಣ ಸಿರಿ ಪ್ರಶಸ್ತಿ, ಕೆ.ವಿ.ಸುಬ್ಬಣ್ಣ ನಾಟಕ ಪ್ರಶಸ್ತಿ, ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಡ್ಯದ ಜವರಪ್ಪಗೌಡ ಸಮಾಜಮುಖಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತೆ 6 ಕೃತಿಗಳು, 14 ನಾಟಕಗಳು, ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಕೃತಿಗಳನ್ನು ಇವರು ಹೊರೆತಂದಿದ್ದರು. ರಂಗಭೂಮಿಗೆ ಸಂಬಂಧಿಸಿದಂತೆ ಮೈಸೂರು ಸಮುದಾಯ ಘಟಕದ ಸ್ಥಾಪಕ ಅಧ್ಯಕ್ಷರಾಗಿದ್ದರಲ್ಲದೆ, ರಂಗಾಯಣದ ಭಾರತೀಯ ರಂಗಶಿಕ್ಷಣದ ಗೌರವ ಪ್ರಾಂಶುಪಾಲರಾಗಿ ನಾಲ್ಕು ವರ್ಷ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ರಂಗಾಯಣದ ನಿದರ್ೇಶಕರಾಗಿದ್ದ ಇವರು, ಚಿಕ್ಕನಾಯಕನಹಳ್ಳಿ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಈ ಸಮ್ಮೇಳನ ಇದೇ 10ರ ಶುಕ್ರವಾರ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಬೇಕಾಗಿತ್ತು.ಶ್ರದ್ದಾಂಜಲಿ: ಶಾಸಕ ಸಿ.ಬಿ.ಸುರೇಶ್ ಬಾಬು, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ, ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿ, ತಾಲೂಕು ವಕೀಲರ ಸಂಘ ಶ್ರದ್ದಾಂಜಲಿ ಅಪರ್ಿಸಿತು.
ತಾಲ್ಲೂಕಿನ ಸಾಹಿತ್ಯದ ಮಾಣಿಕ್ಯ ಲಿಂಗದೇವರು ಹಳೆಮನೆ : ಎಂ.ವಿ.ಎನ್ಚಿಕ್ಕನಾಯಕನಹಳ್ಳಿ,ಜೂ.08: ಸಾಹಿತಿಯಾಗಿ, ರಂಗಾಯಣದ ನಿದೇಶಕರಾಗ್ಲಿ, ಪತ್ರಕರ್ತರಾಗಿ ತಾಲ್ಲೂಕಿನ ಕೀತರ್ಿಯನ್ನು ಬೆಳಗಿಸಿದ್ದ ಲಿಂಗದೇವರು ಹಳೆಮನೆರವರ ಮರಣದಿಂದ ತಾಲ್ಲೂಕಿಗೆ ತುಂಬಲಾರದ ನಷ್ಠವುಂಟಾಗಿದೆ ಎಂದು ಸಾಹಿತಿ ಹಾಗೂ ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಹೇಳಿದರು.ಪಟ್ಟಣದ ನೆಹರು ಸರ್ಕಲ್ನಲ್ಲಿ ಲಿಂಗದೇವರು ಹಳೆಮನೆರವರ ಭಾವಚಿತ್ರಕ್ಕೆ ಶ್ರದ್ದಾಂಜಲಿ ಅಪರ್ಿಸಿ ಮಾತನಾಡಿದ ಅವರು ತಾಲ್ಲೂಕಿನ ತೀ.ನಂ.ಶ್ರೀಕಂಠಯ್ಯರವರು, ಸಾ.ಶಿ.ಮರುಳಯ್ಯರವರ ಸಾಲಿಗೆ ಸೇರುವ ಇವರು ಸಾಹಿತ್ಯಾಸಕ್ತಿ, ರಂಗಾಯಣವನ್ನು ಬೆಳಸಿದ ಕೀತರ್ಿ ಸಲ್ಲುತ್ತದೆ ಎಂದರು.ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಲಿಂಗದೇವರು ಹಳೆಮನೆರವರ ಮರಣದಿಂದಾಗಿ ನಮಗೆಲ್ಲರಿಗೂ ಆಘಾತ ಉಂಟಾಗಿದೆ, ಪಟ್ಟಣದಲ್ಲಿ ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನಕ್ಕೆ ಹಳೆಮನೆರವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಲಾಗಿದ್ದು ಆದರೆ ಅವರ ಮರಣದಿಂದಾಗಿ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಹಳೆಮನೆರವರು ಕಳೆದೆರಡು ವಾರಗಳೀಂದೀಚೆ ನಡೆದಿದ್ದ ರಾಜ್ಯಮಟ್ಟದ ನಾಟಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು, ಇನ್ನೆರಡು ದಿನಗಳಲ್ಲಿ ನಡೆಯಬೇಕಿದ್ದ ಸಮ್ಮೇಳನಕ್ಕೆ ಭಾಗವಹಿಸಲು ಸಿದ್ದರಿದ್ದ ಅವರು ಮೈಸೂರಿನಲ್ಲಿದ್ದರೂ ತಾಲ್ಲೂಕಿನ ಬಗ್ಗೆ ಅಬಿಮಾನವನ್ನು ಹೊಂದಿದ್ದರು ಎಂದರು.ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ಡಾ.ಸುರೇಶ್, ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ, ತಾ.ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಕೃಷ್ಣೆಗೌಡ ಉಪಸ್ಥಿತರಿದ್ದರು.
ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಭೆಚಿಕ್ಕನಾಯಕನಹಳ್ಳಿ,ಜೂ.08:
ತಾಲ್ಲೂಕಿನ ಎಲ್ಲಾ ಸಕರ್ಾರಿ ಅನುದಾನಿತ, ಅನುದಾನ ರಹಿತ ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಇದೇ 9ರ ಗುರುವಾರದಂದು ಮಧ್ಯಾಹ್ನ 3ಕ್ಕೆ ಬಿ.ಆರ್.ಸಿ.ಸಭಾಂಗಣದಲ್ಲಿ ಕರೆಯಲಾಗಿದೆ.ಅನ್ಯರನ್ನು ನಿಯೋಜಿಸದೆ ಎಸ್.ಎಸ್.ಎಲ್.ಸಿ ಫಲಿತಾಂಶದ ಪೂರ್ಣ ಮಾಹಿತಿಯೊಂದಿಗೆ ಮುಖ್ಯ ಶಿಕ್ಷಕರು ಖಡ್ಡಾಯವಾಗಿ ಭಾಗವಹಿಸಲು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment