Thursday, June 16, 2011



ಪ್ಲಾಸ್ಟಿಕ್ ವಸ್ತುಗಳ ಬಳಕೆ, ಪರಿಸರ ನಾಶದ ಮೊಳಕೆ : ಟಿ.ಸಿ.ಕಾಂತಾರಾಜು
ಚಿಕ್ಕನಾಯಕನಹಳ್ಳಿ,ಜೂ.16: ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸುವಂತೆ ಜಿಲ್ಲಾಡಳಿತ ಸೂಚಿಸಿದೆ, ಆದರೂ ಮದುವೆ ಇನ್ನಿತರ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಸ್ವಚ್ಚತೆಯು ಮಲಿನಕಾರಿಯಾಗುತ್ತಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಸಭಾಂಗಣದಲ್ಲಿ ತಾಲ್ಲೂಕು ಪುರಸಭೆ, ಅರಣ್ಯ ಇಲಾಖೆ, ಸೃಜನಾ ಸಂಘ, ತಾಲ್ಲೂಕು ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ನಡೆದ ವಿಶ್ವ ಪರಿಸರ ದಿನಾಚರಣೆ-2011 ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರಿಸರದ ಬಗ್ಗೆ ಮಕ್ಕಳು ಹೆಚ್ಚು ಆಸಕ್ತಿಯಿಂದ ಮುನ್ನುಗ್ಗಿದರೆ ಅವರ ತಂದೆ-ತಾಯಿಗಳಿಗೆ ಪರಿಸರ ರಕ್ಷಿಸುವ ಕಾರ್ಯಕ್ಕೆ ಮಕ್ಕಳೇ ಶಿಕ್ಷಕರಾಗುತ್ತಾರೆ, ಪರಿಸರದ ಸ್ವಚ್ಚತಾಂದೋಲನಕ್ಕೆ ಮಕ್ಕಳ ಜೊತೆ ಪೋಷಕರು ಭಾಗವಹಿಸಿ ಪರಿಸರವನ್ನು ಉಳಿಸಿ ದೇಶವನ್ನು ರಕ್ಷಿಸಬೇಕು ಎಂದ ಅವರು ಸಾರ್ವಜನಿಕರು ಘನತ್ಯಾಜ್ಯ ವಸ್ತುಗಳನ್ನು ಒಂದು ಕಡೆ ಜಾಗವನ್ನು ಗುರುತಿಸಿ ಕಸದ ವಿಲೇವಾರಿಯನ್ನು ಒಟ್ಟುಗೂಡಿಸಿ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛಗೊಳಿಸಬೇಕೆಂದು ಕರೆ ನೀಡಿದ ಅವರು ತಮ್ಮ ತಮ್ಮ ಮನೆಯಂಗಳದಲ್ಲಿ ಗಿಡಗಳನ್ನು ನೆಟ್ಟು ಪರಿಸರ ರಕ್ಷಣೆಗೆ ತಾವೂ ತೊಡಗಬೇಕೆಂದು ಸೂಚಿಸಿದರು.
ಜಿಲ್ಲಾ ಪರಿಸರ ಅಭಿವೃದ್ದಿ ಅಧಿಕಾರಿ ಮಧುಸೂಧನ್ ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಪಟ್ಟಣ ಪರಿಸರವನ್ನು ಸ್ವಚ್ಚವಾಗಿಡಲು ಸಾಧ್ಯ ಎಂದರು.
ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣ ಮಾತನಾಡಿ ಜನತೆಯ ರಕ್ಷಣೆಗಾಗಿ ಇರುವ ಪ್ರಕೃತಿಯ ಸಂಪಪತ್ತನ್ನು ಮಿತವಾಗಿ ಬಳಸಿಕೊಳ್ಳಬೇಕು, ನಮ್ಮಲ್ಲಿರುವ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭಕ್ಕೂ ಮುನ್ನ ಶಾಲೆಯ ವಿದ್ಯಾಥರ್ಿಗಳಿಂದ ಪರಿಸರ ಜಾಗೃತಿಯ ಫಲಕದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ರವಿ(ಮೈನ್ಸ್), ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ಎಂ.ಎನ್.ಸುರೇಶ್, ದೊರೆಮುದ್ದಯ್ಯ, ರಾಜಣ್ಣ, ವರದರಾಜು, ಕೃಷ್ಣಮೂತರ್ಿ, ಕವಿತಾಚನ್ನಬಸವಯ್ಯ, ರೇಣುಕ ಗುರುಮೂತರ್ಿ, ರುಕ್ಮಿಣಮ್ಮ, ಶಿವಣ್ಣ(ಮಿಲ್ಟ್ರಿ), ರವಿಕುಮಾರ್, ಸೃಜನ ಸಂಘಟನೆಯ ಜಯಮ್ಮ, ಇಂದಿರಮ್ಮ, ಅರಣ್ಯಾಧಿಕಾರಿ ನಂಜುಂಡಪ್ಪ ಮುಂತಾದವರು ಉಪಸ್ಥಿತರಿದ್ದರು.

ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಿಗೆ ಒಂದು ದಿನದ ಸಂವಾದ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.16: ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಿಗೆ ಒಂದು ದಿನದ ಸಂವಾದ ಕಾರ್ಯಕ್ರಮವನ್ನು ಇದೇ 18ರ ಶನಿವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ದೇಶೀಯ ವಿದ್ಯಾಪೀಠ ಬಾಲಕರ ಶಾಲಾ ಆವರಣದಲ್ಲಿ ಸರ್ವ ಶಿಕ್ಷಣದ ಅಭಿಯಾನದ ವತಿಯಿಂದ ಮಾಧ್ಯಮ ಮತ್ತು ದಾಖಲೀಕರಣದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.

No comments:

Post a Comment