Wednesday, June 22, 2011



ಡೇ ಹತ್ಯೆ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಲು ಒತ್ತಾಯ:ಚಿಕ್ಕನಾಯಕನಹಳ್ಳಿ,ಜೂ.22 : ಪ್ರಾಮಾಣಿಕವಾಗಿ ಸಮಾಜದ ಸೇವೆಯನ್ನು ನೆರವೇರಿಸುತ್ತಿದ್ದ ಪತ್ರಕರ್ತ ಜ್ಯೋತಿರ್ಮಯಿ ಡೇ ಯವರ ಹತ್ಯೆಯು ಹೇಯ ಕೃತ್ಯವಾಗಿದ್ದು, ಡೇಯವರ ಹತ್ಯೆಯ ಹಿಂದಿರುವ ಪಾತಕಿಗಳ ತನಿಖೆಯು ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ನಡೆದಿಲ್ಲದಿರುವುದರಿಂದ ತನಿಖೆಯನ್ನು ಸಿ.ಬಿ.ಐ ಗೆ ವಹಿಸಬೇಕೆಂದು ತಾಲ್ಲೂಕು ಪತ್ರಕರ್ತರ ಸಂಘ ಒತ್ತಾಯಿಸಿತು.ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪತ್ರಕರ್ತರ ಘಟಕದ ವತಿಯಿಂದ ಮುಂಬೈನ ಮಿಡ್ ಡೇ ಪತ್ರಿಕೆಯ ತನಿಖಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ಹಿರಿಯ ಪತ್ರಕರ್ತರಾದ ಜ್ಯೋತಿರ್ಮಯಿ ಡೇ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಸಮಾಜದಲ್ಲಿನ ನ್ಯೂನ್ಯತೆ, ಅನ್ಯಾಯ ಅಕ್ರಮ ಹಾಗೂ ಭ್ರಷ್ಠತೆಗಳ ಬಗ್ಗೆ ನಿರ್ಭಯವಾಗಿ ವರದಿ ಮಾಡುವಂತ ಪ್ರಾಮಾಣಿಕ ಪತ್ರಕರ್ತರಿಗೆ ಈ ದೇಶದಲ್ಲಿ ರಕ್ಷಣೆ ಇಲ್ಲದೇ ಹೋಗಿರುವುದು ಪ್ರಜಾತಂತ್ರದ ಅಣಕವಾಗಿದೆ, ಮುಂಬೈನ ಪಾತಕ ಜಗತ್ತಿನ ಕರಾಳತೆಯನ್ನು ಎರಡು ದಶಕಗಳಿಂದಲೂ ತಮ್ಮ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಡೇ ರವರ ಜೀವಕ್ಕೆ ಅಪಾಯದ ಮುನ್ಸೂಚನೆ ಇದ್ದರೂ ಅಲ್ಲಿನ ಸಕರ್ಾರ ರಕ್ಷಣೆ ನೀಡುವಲ್ಲಿ ವಿಪಲವಾಗಿದೆ. ಜನಪ್ರತಿನಿಧಿ ಸಕರ್ಾರಗಳು ಇಂದು ಕೆಲವೊಂದು ಮಾಫಿಯಗಳ ಕಪಿಮುಷ್ಠಿಯ ನಿಯಂತ್ರದಲ್ಲಿರುವದರಿಂದ ಡೇ ಹತ್ಯೆ ತನಿಖೆ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ನಡೆದಿಲ್ಲ, ಭವಿಷ್ಯದಲ್ಲಿ ಪ್ರಾಮಾಣಿಕ ಪತ್ರಕರ್ತರು ಈ ದೇಶದಲ್ಲಿ ನಿಭರ್ೀತಿಯಿಂದ ಕಾರ್ಯ ನಿರ್ವಹಿಸಲು ಇಂತಹ ಘಟನೆಗಳು ದೃತಿಗೆಡೆಸಲಿವೆ, ಡೇ ಹತ್ಯೆ ಪ್ರಕರಣವನ್ನು ಸಿ.ಬಿ.ಐ ಗೆ ವಹಿಸುವ ಮೂಲಕ ಈ ಕೃತ್ಯದಲ್ಲಿ ಭಾಗಿಯಾಗಿರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ಪಾತಕಿಗಳನ್ನು ಮತ್ತು ಇವರೊಂದಿಗೆ ಶಾಮೀಲಾಗಿರುವ ಈ ದೇಶದ ದುಷ್ಠ ಶಕ್ತಿಗಳನ್ನು ಬಂಧಿಸುವ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸಕರ್ಾರಕ್ಕೆ ಈ ಮನವಿ ಮೂಲಕ ಒತ್ತಾಯಿಸುತ್ತೇವೆ ಎಂದ ಅವರು ಪ್ರಾಣಾಪಯವಿರುವ ಪತ್ರಕರ್ತರಿಗೆ ಸೂಕ್ತ ಭದ್ರತೆ, ಒದಗಿಸಬೇಕು ಎಂದರು.ಜನಪರ ವೇದಿಕೆ ಸಂಘಟನೆಯ ಸಂಚಾಲಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಅಂಗವಾಗಿರುವುದು ಪತ್ರಿಕಾ ರಂಗ, ಆ ಪತ್ರಿಕಾರಂಗದ ಮೂಲಕ ಸಮಾಜದ ಸೇವೆ ಸಲ್ಲಿಸುತ್ತಿದ್ದ ಡೇಯವರನ್ನು ಹಾಡುಹಗಲೇ ಬರ್ಬರ ಹತ್ಯೆ ಮಾಡಿರುವುದು ಸಂವಿಧಾನಕ್ಕೆ ತಂದಿರುವ ಕಪ್ಪುಚುಕ್ಕೆಯಾಗಿದ್ದು ಡೇಯವರ ಹತ್ಯೆಯು ಸಿ.ಬಿ.ಐಗೆ ವಹಿಸಬೇಕೆಂದು ಒತ್ತಾಯಿಸಿದ ಅವರು ಜನಪರ ವೇದಿಕೆ ಜನಪರ ಸಂಘಟನೆಗಳಿಗೆ ಒತ್ತು ನೀಡುತ್ತದೆ ಎಂದರು.ತಾ.ಪತ್ರಕರ್ತ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮಾತನಾಡಿ, ಪತ್ರಕರ್ತರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೂಕ್ತ ರಕ್ಷಣೆ ಒದಗಿಸಬೇಕಾಗಿರುವುದು ಸಕರ್ಾರಗಳ ಜವಬ್ದಾರಿ ಎಂದರು. ಪತ್ರಕರ್ತ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ ಪತ್ರಿಕಾರಂಗದವರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಲೇಖನ ಪ್ರಕಟಿಸಿದಾಗ ಅವರ ಪ್ರಾಣ ತೆಗೆಯುತ್ತಾರೆ ಎಂದ ಅವರು ಡೇಯವರ ಹತ್ಯೆ ಮಾಡಿರುವವರನ್ನು ಶೀಘ್ರ ಬಂಧಿಸಬೇಕು ಇಲ್ಲವಾದರೆ ಈ ಪ್ರತಿಭಟನೆಯು ಮುಂದೆ ಬೇರೆ ಹಾದಿ ತುಳಿಯುತ್ತದೆ ಎಂದರು.ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಪ್ರಸ್ತುತ ಮನವಿಯನ್ನು ಜಿಲ್ಲಾಧಿಕಾರಿಗರಿಗಳ ಮುಖಾಂತರ ರಾಷ್ಟ್ರಪತಿಯವರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದಶರ್ಿ ಚಿದಾನಂದ್, ಸಹ ಕಾರ್ಯದಶರ್ಿ ಸಿ.ಬಿ.ಲೋಕೇಶ್, ಸಂಘದ ಜಿಲ್ಲಾ ಸದಸ್ಯರಾದ ರಂಗೇನಹಳ್ಳಿ ಮಹೇಶ್, ಸಿದ್ದರಾಮಣ್ಣ ಅಣೆಕಟ್ಟೆ, ಗೋವಿಂದರಾಜು, ಶಿವಣ್ಣ, ಕೋದಂಡರಾಮಯ್ಯ, ಕಿರಣ್ಕುಮಾರ್, ರವಿಕುಮಾರ್, ರಮೇಶ್, ಚೇತನ್ಪ್ರಸಾದ್ ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ ಮುಂತಾದವರು ಉಪಸ್ಥಿತರಿದ್ದರು.
ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿ ನಿಲಯದ ಪ್ರವೇಶಕ್ಕೆ ಅಜರ್ಿ ಆಹ್ವಾನಚಿಕ್ಕನಾಯಕನಹಳ್ಳಿ,ಜೂ.22 : 2011-12ನೇ ಸಾಲಿಗೆ ತಾಲ್ಲೂಕಿನ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯಕ್ಕೆ ಪ್ರವೇಶಕ್ಕಾಗಿ ಅಜರ್ಿಯನ್ನು ಆಹ್ವಾನಿಸಲಾಗಿದೆ. ವಿದ್ಯಾಥರ್ಿ ನಿಲಯಕ್ಕೆ ಪ್ರವೇಶ ಪಡೆಯ ಬಯಸುವ ವಿದ್ಯಾಥರ್ಿಗಳು ಸಕರ್ಾರಿ ಅಂಗೀಕೃತ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋಸರ್ುಗಳಾದ ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ, ಬಿ.ಇ, ಎಂಬಿಬಿಎಸ್, ಡಿಪ್ಲಮೋ, ವೃತ್ತಿಶಿಕ್ಷಣ ಕೋರ್ಸಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಪ್ರವೇಶ ನೀಡಲಾಗುವುದು, ವಿದ್ಯಾಥರ್ಿನಿಲಯಗಳು ಇರುವ ಸ್ಥಳಗಳ ಕಾಲೇಜುಗಳಿಂದ 5ಕಿ.ಮೀ.ಗಿಂತ ದೂರದ ಸ್ಥಳಗಳಿಂದ ಬರುವ ವಿದ್ಯಾಥರ್ಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಸ್ಥಳೀಯ ವಿದ್ಯಾಥರ್ಿಗಳು ಪ್ರವೇಶಕ್ಕೆ ಅನರ್ಹರಾಗಿದ್ದು ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ವರ್ಗ 2ಎ. 2ಬಿ.3ಎ. ಮತ್ತು 3ಬಿ. ವರ್ಗಗಳ ಹಿಂದುಳಿದ ವರ್ಗಗಳ ವಿದ್ಯಾಥರ್ಿಗಳ ಕುಟುಂಬದ ವಾಷರ್ಿಕ ವರಮಾನ ಮಿತಿ ರೂ 15.000/- ಹಾಗೂ ಪ್ರವರ್ಗ1, ಎಸ್ಸಿ, ಮತ್ತು ಎಸ್,ಟಿ, ವಿದ್ಯಾಥರ್ಿಗಳಿಗೆ ರೂ.50,920/-ಗಳನ್ನು ನಿಗಧಿಪಡಿಸಲಾಗಿದೆ. ವಿದ್ಯಾಥರ್ಿಯು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರದ್ದು ವಿದ್ಯಾಥರ್ಿನಿಲಯಕ್ಕೆ ಪ್ರವೇಶ ಬಯಸುವ ನವೀಕರಣ ಹಾಗೂ ಹೊಸವಿದ್ಯಾಥರ್ಿಗಳು ಅಜರ್ಿಯನ್ನು ಈ ಕಾಯರ್ಾಲಯದಿಂದ ಅಥವಾ ಸಂಬಂಧಿಸಿದ ವಿದ್ಯಾಥರ್ಿನಿಲಯದ ನಿಲಯಪಾಲಕರಿಂದ ಪಡೆದು ಜುಲೈ 19ರ ಸಂಜೆ 5.00 ಗಂಟೆಯೊಳಗಾಗಿ ಈ ಕಾಯರ್ಾಲಕ್ಕೆ ಅಥವಾ ಸಂಬಂಧಿಸಿದ ನಿಲಯ ಪಾಲಕರಿಗೆ ಸಲ್ಲಿಸತಕ್ಕದ್ದು.

No comments:

Post a Comment