Saturday, July 2, 2011

ಸಮಾಜಮುಖಿ ಕಾರ್ಯ ನೆರವೇರಿಸುವವರಿಗೆ ಆತ್ಮೋಲ್ಲಾಸ ಮುಖ್ಯ : ಕವಿತಾಕೃಷ್ಣ
ಚಿಕ್ಕನಾಯಕನಹಳ್ಳಿ,ಜು.02 : ಕಲೆ, ಸಾಹಿತ್ಯ, ಕ್ರೀಡೆ, ನೃತ್ಯ ಮುಂತಾದ ಸಮಾಜಮುಖಿ ಕಾರ್ಯ ನೆರವೇರಿಸುವವರಿಗೆ ಆತ್ಮೋಲ್ಲಾಸ ಮುಖ್ಯಾವಾಗಿದೆ, ಇದರಿಂದ ಅವರು ಹೊಂದಿರುವ ಕಾರ್ಯಗಳು ಯಶಸ್ವಿಯಾಗಿ ಮುನ್ನಡೆಯುತ್ತವೆ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಹೇಳಿದರು.
ಪಟ್ಟಣದ ಮಲ್ಲಿಕಾಜರ್ುನ ಡಿ.ಇಡಿ ಹೊಸಕಟ್ಟಡದ ಕಾಲೇಜು ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಎಸ್.ಎಂ.ಎಸ್.ಡಿ.ಇಡಿ ಕಾಲೇಜು, ಕನಕ ಗ್ರಾಮೀಣ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ರವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವಪರಿಸರ ದಿನಾಚರಣೆ, ಪುಸ್ತಕ ಬಿಡುಗಡೆ, ಟ್ರಸ್ಟ್ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಸಮಾಜಮುಖಿಯು ತಮ್ಮ ಮನಸ್ಸಿಗೆ ಸಂತೋಷವಾಗುವಂತಹ ಕೆಲಸ ಕಾರ್ಯಗಳನ್ನು ನಿರ್ವಹಿಸಿದಾಗ ಆತ್ಮ ಸಂತೃಪ್ತಿ ಮೂಲಕ ಗೆಲುವು ಸಾಧಿಸುತ್ತಾನೆ. ಮನುಷ್ಯನು ಎಂದಿಗೂ ಬೀಗಬಾರದು, ಪ್ರತಿಯೊಬ್ಬರ ಜೊತೆ ವಿನಯವಾಗಿ ಬಾಗುತ್ತಾ ಸ್ನೇಹವನ್ನು ಸಂಪಾದಿಸಬೇಕು, ಈ ಅರಿವು ಶಿಕ್ಷಣದಲ್ಲಿದೆ ಎಂದ ಅವರು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿರುವ ಹಿಂದೂ ಧರ್ಮಕ್ಕೆ ಉತ್ತಮ ಭಾವನೆಯಿದೆ, ಮಹಾತ್ಮ ಗಾಂಧೀಜಿಯವರ ತತ್ವಗಳು, ಆದರ್ಶಗಳು ಎಲ್ಲರಿಗೂ ಅಗತ್ಯವಾಗಿದೆ. ಸತ್ಯಾಗ್ರಹ ಮೂಲಕ ನ್ಯಾಯ ಪೆಡದ ಗಾಂಧೀಜಿ ಪ್ರಪಂಚದಾದ್ಯಂತ ಚಿರಪರಿಚಿತರಾಗಿದ್ದು ಅವರ ಬಗ್ಗೆ ಎಂ.ವಿ.ಎನ್ರವರು ಬರೆದಿರುವ ಗಾಂಧೀಜಿ 100 ಆದರ್ಶಗಳು ಪುಸ್ತಕದಲ್ಲಿ ಗಾಂಧೀಜಿಯವರ ಮಾನವೀಯ ಮೌಲ್ಯಗಳು ಮರುಗಟ್ಟುತ್ತವೆ ಎಂದರು.
ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರಸ್ವಾಮಿ ಆಶೀರ್ವಚನ ನೀಡಿ ದೇಶದ ಬಗ್ಗೆ ಕಾಳಜಿ, ದೇಶದ ಅಭಿವೃದ್ದಿಯಾಗಬೇಕಾದರೆ ಗಾಂಧೀಜಿಯವರ ಆದರ್ಶ ಮತ್ತು ಚಿಂತನೆ ಅಗತ್ಯವಾಗಿದೆ, ಗಾಂಧೀಜಿಯವರಂತೆ ಪ್ರತಿಯೊಂದು ಹೆಜ್ಜೆಯೂ ಛಲದಿಂದ ಕೂಡಿದ್ದು ಕಠಿಣ ಶ್ರಮವಿದಾಗ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು. ತಾಲ್ಲೂಕಿನ ಸಾಹಿತ್ಯದ ಭಾವನೆಗಳು ಕ್ರಿಯಾಶೀಲವಾಗಿ ಉತ್ತಮವಾಗಿದೆ ಎಂದ ಅವರು ಪರಿಸರ ನಾಶವಾದರೆ ಮನುಷ್ಯ ನಾಶವಾದಂತೆ, ಜೀವಿಸುವ ಪ್ರತಿಯೊಬ್ಬರು ಪರಿಸರವನ್ನು ಕಾಪಾಡಬೇಕು. 2 ಮಹಾಯುುದ್ದಗಳು ದೇಶದ ಸಾಮ್ರಾಜ್ಯ ವಿಸ್ತರಿಸಲು ನಡೆದಿತ್ತು ಈಗ 3ನೇ ಮಹಾಯುದ್ದ ನಡೆದರೆ ಅದು ನೀರು ಮತ್ತು ಆಹಾರಕ್ಕಾಗಿ ನಡೆಯುತ್ತದೆ ಆದ್ದರಿಂದ ಪರಿಸರ ರಕ್ಷಿಸಲು ಮುಂದಾಗುತ್ತ ದೇಶ ರಕ್ಷಿಸಬೇಕು ಎಂದು ಹೇಳಿದರು.
ಜಿ.ಪಂ. ಯೋಜನಾ ನಿದರ್ೇಶಕ ಕೆ.ಬಿ.ಆಂಜನಪ್ಪ ಮಾತನಾಡಿ ಶೈಕ್ಷಣಿಕ ವ್ಯವಸ್ಥೆಗೆ ರಾಜ್ಯದಲ್ಲಿನ ಮಠ-ಮಾನ್ಯಗಳು ಉತ್ತಮ ಪ್ರೇರಣೆ ನೀಡುತ್ತಿವೆ, ಬೇರೆ ರಾಜ್ಯದ ಮಠ ಮಾನ್ಯಗಳು ಈ ರೀತಿಯ ಬೆಳವಣಿಗೆ ಹೊಂದಿಲ್ಲ, ನಮ್ಮ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕಿನ ಕಂದಿಕೆರೆ ಗ್ರಾಮದಲ್ಲಿ ಸಿದ್ದಗಂಗಾ ಶಾಲೆ ಸ್ಥಾಪಿತವಾಗಿ ಗ್ರಾಮೀಣ ವಿದ್ಯಾಥರ್ಿಗಳಿಗೆ ಅನುಕೂಲವಾಯಿತು. ಅದೇ ರೀತಿ ಮಲ್ಲಿಕಾಜರ್ುನಸ್ವಾಮಿ ಕಾಲೇಜು ವಿದ್ಯಾಥರ್ಿಗಳಿಗೆ ಅನುಕೂಲ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಕಿರಿಯರಿಗೆ ಹಿರಿಯರ ಮಾರ್ಗದರ್ಶನದ ಅಗತ್ಯವಿದೆ, ಹಿರಿಯರ ಅನುಭವ, ತಿಳುವಳಿಕೆ ಮತ್ತು ಸಲಹೆಯನ್ನು ಕಿರಿಯರು ಪಾಲಿಸಬೇಕು ಎಂದ ಅವರು ಸಮುದಾಯ ಮತ್ತು ಸಕರ್ಾರ ಜೊತೆಯಾಗಿ ಕಾರ್ಯನಿರ್ವಹಿಸಿದರೆ ಶಿಕ್ಷಣವು ಉತ್ತಮವಾಗಿರುತ್ತದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಸಕರ್ಾರ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಆಧ್ಯತೆ ನೀಡಿದರೂ ಮಕ್ಕಳಲ್ಲಿ ವಿದ್ಯಾಭ್ಯಾಸ ಕ್ಷೀಣಿಸುತ್ತಿದೆ, ಪೋಷಕರು ಮಕ್ಕಳಲ್ಲಿ ಶಿಕ್ಷಣಾಸಾಕ್ತಿಯನ್ನು ಹೆಚ್ಚಿಸಿ ಸ್ನಾತಕೋತ್ತರ ಪದವಿಗಳ ಮೂಲಕ ಉನ್ನತ ಹುದ್ದೆ ಪಡೆಯಲು ಮುಂದಾಗಬೇಕು ಎಂದ ಅವರು ತಾಲ್ಲೂಕಿಗೆ ಬಂದ ನಂತರ ಸಕರ್ಾರಿ ಕಛೇರಿಗಳಲ್ಲಿ ಮಧ್ಯವತರ್ಿಗಳ ಹಾವಳಿ ತಪ್ಪಿಸಿ ಕಛೇರಿಗಳ ಕೆಲಸಗಳನ್ನು ಸಲೀಸಾಗಿ ಆಗುವಂತೆ ಮಾಡಿದ್ದೇವೆ, ಅದೇ ರೀತಿ ಪರಿಸರ ಹಾಳು ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾದರೆ ಸಮಾಜದ ಮುಂಚೂಣಿಯಲ್ಲಿರುವ ಹಲವರು ಒತ್ತಡ ಹೇರುತ್ತಾ ನಮ್ಮ ಕರ್ತವ್ಯವನ್ನು ಲೋಪವಾಗುವಂತೆ ಮಾಡುತ್ತಿರುವ ತಮಗಾಗುತ್ತಿರುವ ಕಾರ್ಯದಕ್ಷತೆಗೆ ಆಗುತ್ತಿರುವ ಅನಾನೂಕಲತೆಯನ್ನ ತೋಡಿಕೊಂಡರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಎಲ್ಲರ ಸಲಹೆ ಸಹಕಾರದಿಂದ ಉತ್ತಮ ಶಿಕ್ಷಣ ಪಡೆದು ಪ್ರತಿಭಾನ್ವಿತರಾಗಿ ಶಾಲೆಗೆ ಮತ್ತು ತಮ್ಮ ಪೋಷಕರಿಗೆ ವಿದ್ಯಾಥರ್ಿಗಳು ಕೀತರ್ಿ ತಂದುಕೊಡಬೇಕು ಎಂದ ಅವರು ಶಾಲಾ ಆವರಣದಲ್ಲಿ ಮತ್ತು ತಮ್ಮ ಮನೆಯ ಅಂಗಳದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯತೆ ವಹಿಸಿ ಮಾತನಾಡಿದರು. ಸಾಹಿತಿ ಆರ್.ಬಸವರಾಜು ಮಾತನಾಡಿದರು.
ಸಮಾರಂಭದಲ್ಲಿ 2011ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 70 ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶೃಂಗಾರ ಪ್ರಕಾಶನದವರ ವತಿಯಿಂದ ಬಿ.ಸಿ.ಎಂ.ಹೆಣ್ಣುಮಕ್ಕಳ ವಸತಿ ನಿಲಯದ ಗ್ರಂಥಾಲಯಕ್ಕೆ 10ಸಾವಿರ ರೂಗಳ ಪುಸ್ತಕ ಕೊಡಗೆಯನ್ನು ನೀಡಲಾಯಿತು.
ಸಮಾರಂಭದಲ್ಲಿ ಕನಕ ಗ್ರಾಮೀಣ ಶಿಕ್ಷಣ ಚಾರಿಟಬಲ್ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಗಾಯಿತ್ರಿದೇವಿ, ಶೃಂಗಾರ ಪ್ರಕಾಶನದ ನಾಗರತ್ನರಾವ್, ನಿವೃತ್ತ ಶಿಕ್ಷಕರಾದ ಕುಮಾರಸ್ವಾಮಿ, ಜಿ.ತಿಮ್ಮಯ್ಯ, ನಾಗರಾಜ್, ಶಿವಬಸಪ್ಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾಥರ್ಿನಿ ಎಸ್.ಆರ್.ಆಶಾರಾಣಿ ಪ್ರಾಥರ್ಿಸಿದರೆ, ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿ, ಎಂ.ವಿ.ರಾಜ್ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಿ.ಎ.ಕುಮಾರಸ್ವಾಮಿ ನಿರೂಪಿಸಿ, ಭವಾನಿಜಯರಾಂ ವಂದಿಸಿದರು.
ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸಕರ್ಾರಿ ಶಾಲೆಗಳು ಮುಚ್ಚಿದೆ: ಸಾ.ಚಿ.ನಾಗೇಶ್

ಚಿಕ್ಕನಾಯಕನಹಳ್ಳಿ,ಜು.02 : ಸಕರ್ಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಿದರೂ ವಿದ್ಯಾಥರ್ಿಗಳು ಖಾಸಗಿ ಶಾಲೆಗಳತ್ತ ಮುಖಮಾಡಿರುವ ಪರಿಣಾಮ ತಾಲ್ಲೂಕಿನಲ್ಲಿ 6ಸಕರ್ಾರಿ ಶಾಲೆಗಳು ಮುಚ್ಚುವಂತಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಹೇಳಿದರು.
ಪಟ್ಟಣದ ಕನಕ ಬವನದಲ್ಲಿ ಕನಕ ವಿದ್ಯಾಭಿವೃದ್ದಿ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿ ಸಕರ್ಾರಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದು, ಸಕರ್ಾರಿ ಶಾಲೆಗಳಲ್ಲಿ ವಿದ್ಯಾಥರ್ಿಗಳಿಗಾಗಿ ಮೂಲಭೂತ ಸೌರ್ಕರ್ಯಗಳನ್ನು ನೀಡುತ್ತಿದೆ ಆದರೂ ವಿದ್ಯಾಥರ್ಿಗಲ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ, ಪೋಷಕರು ಇದನ್ನು ತಪ್ಪಿಸಿ ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗೆ ಸೇರಿಸಲು ಮನವರಿಕೆ ಮಾಡಿದ ಅವರು ಸಕರ್ಾರ ಜುಲೈ 5ರಂದು ಹಮ್ಮಿಕೊಂಡಿರುವ ಶಾಲೆಗಾಗಿ ನಾವು ನೀವು ಎಂಬ ಕಾರ್ಯಕ್ರಮಕ್ಕೆ ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಎಲ್ಲರೂ ಭಾಗವಹಿಸಲು ಕೋರಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು ಮತ್ತು ಶಿಕ್ಷಣದ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರೋತ್ಸಾಹಿಸಲು ದಾನಿಗಳು ಮುಂದೆ ಬರಬೇಕು ಎಂದ ಅವರು ವಿದ್ಯಾಥರ್ಿಗಳು ಮುಂದೆ ಉನ್ನತ ಹುದ್ದೆ ಅಲಂಕರಿಸಿದಾಗ ಅವರೂ ಸಹ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಸಹಾಯ ಮಾಡಬೇಕು ಎಂದರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮನುಷ್ಯನಿಗೆ ಬೌಧಿಕ ಶಿಕ್ಷಣ ಮತ್ತು ಸಾಮಾಜಿಕ ಶಿಕ್ಷಣ ಬೇಕಾಗಿದೆ, ಸಂಪತ್ತು ಮತ್ತು ಶಿಕ್ಷಣ ಎರಡು ಒಂದೇ ಕಡೆ ಸೇರಿಸುವ ನಿಟ್ಟಿನಲ್ಲಿ ವಿದ್ಯಾಥರ್ಿಗಳಿಗೆ ಸಹಾಯ ಮಾಡುವುದು ಸಮಂಜಸವಾಗಿದೆ ಎಂದ ಅವರು ಕಂಬಳಿ ಸೊಸೈಟಿಯಲ್ಲೂ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ಸದ್ಯದಲ್ಲೇ ನೀಡಲಾಗುವುದು ಎಂದರು.
ಕನಕವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಶ್ರೀಕಂಠಯ್ಯ ಮಾತನಾಡಿ ಸಂಘ ಸ್ಥಾಪಿತವಾಗಿರುವುದು ಅಸಾಯಕರಿಗೆ, ಆಥರ್ಿಕವಾಗಿ ಹಿಂದುಳಿದವರಿಗೆ ಮತ್ತು ಸಮಾಜಕ್ಕೆ ಅನುಕೂಲವಾಗಲಿ ಎಂದು ಸಂಘದ ಮೂಲಕ ಸಹಾಯ ಮಾಡುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ , ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿದರು.
ಸಮಾರಂಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪ, ದಾನಿಗಳಾದ ಸಿ.ಡಿ.ರಾಮಲಿಂಗಯ್ಯ, ಡಿ.ಎನ್.ನಾಗರಾಜು, ಇಂಜನಿಯರ್ ಪ್ರಭಾಕರ್ ಮುಂತಾದವರಿದ್ದರು.
ಕಂಬಳಿ ಬಗ್ಗೆ ಅವಹೇಳನಕಾರಿ ಲೇಖನ ನೀಡಿರುವವರು ಕ್ಷಮೆ ಕೇಳಲಿ : ಸಿ.ಡಿ.ಚಂದ್ರಶೇಖರ್
ಚಿಕ್ಕನಾಯಕನಹಳ್ಳಿ,ಜು.02: ಕಂಬಳಿ ಎಂದರೆ ಉಣ್ಣೆ ಎಳೆಗಳ ಸಾಮ್ರಾಜ್ಯವಾಗಿದ್ದು ಅದರ ಮೇಲೆ ಊಟಕ್ಕೆ ಕುಳಿತರೆ ಕೂದಲು ಸಿಗುವುದು, ಕಂಬಳಿ ಬಳಸುವವರದು ದುರ್ಜನರ ಪತ್ರೀಕ, ದುಷ್ಠ ಜನರ ಸಹವಾಸ ಎಂಬ ಪದಗಳನ್ನು ಬಳಸಿ ಕಂಬಳಿ ಬಗ್ಗೆ ಈ ರೀತಿ ಪತ್ರಿಕೆ ಲೇಖನವೊಂದು ಬಿಂಬಿಸಿರುವುದು ಕಂಬಳಿ ಉದ್ಯಮಿಗಳಿಗೆ ಅವಮಾನ ಮಾಡಿದಂತಾಗಿದೆ ಎಂದು ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಆರೋಪಿಸಿದ್ದಾರೆ.
ಜುಲೈ 1ರಂದು ಸಂಯುಕ್ತ ಕನರ್ಾಟಕ ದಿನಪತ್ರಿಕೆಯ್ಲ ನ್ಯಾಯದೀಪಿಕೆ 354ನೇ ಅಂಕಣದಲ್ಲಿ ಸತ್ಸಂಗ ಬಲು ಮೇಲು ಎಂಬ ಶೀಷರ್ಿಕೆಯಡಿಯಲ್ಲಿ ಎನ್ಕೆಡಿರವರು ನೀಡಿರುವ ಲೇಖನದಲ್ಲಿ ಕಂಬಳಿ ಉದ್ಯಮದ ಬಗ್ಗೆ ಅವಮಾನ ರೀತಿಯಾಗಿ ಲೇಖನ ನೀಡಿದ್ದು ತಕ್ಷಣವೇ ಈ ಲೇಖನಕ್ಕೆ ಸಂಪಾದಕರು ಮತ್ತು ಲೇಖನ ಬರೆದಿರುವವರು ಕಂಬಳಿ ನೇಕಾರರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕಂಬಳಿ ನೇಕಾರರಾದ ಗಂಗಾಧರ್, ಗೋವಿಂದಪ್ಪ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ ಉಪಸ್ಥಿತರಿದ್ದರು.

No comments:

Post a Comment