Wednesday, July 20, 2011




ವಿಧವಾ ವೇತನ ಸೇರಿದಂತೆ ಎಲ್ಲಾ ಸಕರ್ಾರಿ ಪಿಂಚಣಿಗಳನ್ನು ಬ್ಯಾಂಕ್ ಖಾತೆಗೆ ಜಮಾಯಿಸಿ
ಚಿಕ್ಕನಾಯಕನಹಳ್ಳಿ,ಜು.20 : ವಿಧವಾ ವೇತನಾ, ಅಂಗವಿಕಲರ ವೇತನ ಸೇರಿದಂತೆ ಸಕರ್ಾರ ನೀಡುವ ಪಿಂಚಣಿಯ ಹಣವನ್ನು ಪ್ರತಿ ಫಲನಾಭವಿಯು ಸಕರ್ಾರದಿಂದ ನೇರಪಡೆಯುವಂತಾಗಲು ಬ್ಯಾಂಕ್ ಖಾತೆಗಳ ಮೂಲಕ ಪಡೆಯುವಂತಾಗಲು ಅಧಿಕಾರಿಗಳು ನೆರವಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಇಲಾಖಾ ಪ್ರಗತಿಯ ಬಗ್ಗೆ ಚಚರ್ಿಸಿದ ಅವರು ಸಕರ್ಾರದಿಂದ ಪಿಂಚಣಿ ಸೌಲಭ್ಯವನ್ನು ಪಡೆಯವವರು ತಮ್ಮ ಹತ್ತಿರದಲ್ಲಿರುವ ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆದು ಬ್ಯಾಂಕ್ಗಳ ಮೂಲಕ ತಮ್ಮ ಹಣವನ್ನು ಪಡೆದುಕೊಳ್ಳಬೇಕು, ಪೋಸ್ಟ್ಮ್ಯಾನ್ಗಳು ಫಲಾನುಭವಿಗಳಿಗೆ ನೀಡವ ಹಣದಲ್ಲಿ ಪ್ರತಿಯೊಬ್ಬರಿಂದ 25 ರೂ ಹಣವನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಇದನ್ನು ತಪ್ಪಿಸಲು ಖಜಾನಾಧಿಕಾರಿಗಳು ಫಲಾನುಭವಿಗಳಿಂದ ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆಸಬೇಕು ಎಂದರು.
ತಾಲ್ಲೂಕಿನ 149 ಅಂಗನವಾಡಿ ಕೇಂದ್ರಗಳಲ್ಲಿನ ಕೊಠಡಿಗಳು ದುರಸ್ತಿಯಿರುವುದರಿಂದ, ಆ ಕೊಠಡಿಗಳು ಸರಿಯಾಗುವವರೆಗೆ ಮಕ್ಕಳಿಗೆ ಭೋದನೆಯನ್ನು ಬೇರೆ ಸ್ಥಳಗಳಲ್ಲಿ ಮಾಡಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ತಾಲ್ಲೂಕಿನ ಇಲಾಖೆಗಳಲ್ಲಿನ ಅಧಿಕಾರಿಗಳು ಬೇಜವಬ್ದಾರಿತನದಿಂದ ವತರ್ಿಸುತ್ತಾ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ, ಸಣ್ಣ ಪುಟ್ಟ ಕೆಲಸಗಳನ್ನೂ ವ್ಯವಸ್ಥಿತವಾಗಿ ಮಾಡುತ್ತಿಲ್ಲ ಎಂದ ಅವರು, ಕೃಷಿ ಇಲಾಖೆಯಲ್ಲಿ ರೈತರಿಗೆ ಸೂಕ್ತಮಾರ್ಗದರ್ಶನ ದೊರೆಯುತ್ತಿಲ್ಲವೆಂದರು, ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳನ್ನು ಸರಿಯಾಗಿ ಉಪಚರಿಸುತ್ತಿಲ್ಲ, ಪಶು ಇಲಾಖಾ ಕಛೇರಿ ಅವ್ಯವಸ್ಥೆಯ ಬಗ್ಗೆ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬೀಬಿ ಪಾತೀಮ, ಚೇತನಗಂಗಾಧರ್, ಕುಮಾರರುದ್ರ, ಇ.ಓ ಎನ್.ಎಂ.ದಯಾನಂದ್, ತಾಲ್ಲೂಕಿನ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿ.ಎಸ್.ಬಿ.ಯವರು ಸಿ.ಎಂ.ರವರನ್ನು ಮೂದಲಿಸುವುದನ್ನು ಬಿಡಲಿ.
ಚಿಕ್ಕನಾಯಕನಹಳ್ಳಿ,ಜು.20: ಬಿಜೆಪಿ ನಾಮಬಲ, ಕಾರ್ಯಕರ್ತರ ಶ್ರಮದಿಂದ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿರುವ ಜಿ.ಎಸ್.ಬಸವರಾಜುರವರು ಕಾಂಗ್ರೆಸ್ನ ಸಂಸದರಂತೆ ವತರ್ಿಸುತ್ತಾ, ಮುಖ್ಯಮಂತ್ರಿಗಳು ಸೇರಿದಂತೆ ಪಕ್ಷದ ರಾಜ್ಯ ಮಟ್ಟದ ನಾಯಕರನ್ನು ಅವಹೇಳನಕಾರಿಯಾಗಿ ಟೀಕಿಸುತ್ತಿರುವುದನ್ನು ಭಾಜಪಾ ಕಾರ್ಯಕರ್ತರು ತೀವ್ರವಾಗಿ ಖಂಡಿಸುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತ ಎಂ.ಎಸ್.ರವಿಕುಮಾರ್ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಸದರಾಗಿ ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಚಿಂತಿಸುವ ಬದಲು ಪಕ್ಷದ ವರ್ಚಸ್ಸನ್ನು ಹಾಳುಮಾಡುತ್ತಿದ್ದಾರೆ, ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಈ ಉಪ ವಿಭಾಗದ ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಅಭ್ಯಥರ್ಿಯ ವಿರುದ್ದ ತಮ್ಮ ಬೆಂಬಲಿಗರಿಗೆ ಪ್ರಚಾರ ಮಾಡಿದರೆ ಗುಬ್ಬಿಯಲ್ಲಿ ತಮ್ಮ ಬೆಂಬಲಿಗನಿಗೆ ಗೆಲವು ದೊರಕಿಸಿಕೊಡಲು ಬಹಿರಂಗವಾಗಿಯೇ ಪಕ್ಷದ ಅಭ್ಯಥರ್ಿಯ ವಿರುದ್ದ ತೊಡೆ ತಟ್ಟಿದ್ದರು ಎಂದ ಅವರು ಕೇಂದ್ರದ ಕಾಂಗ್ರೆಸ್ ಸಕರ್ಾರವನ್ನು ಹೊಗಳುತ್ತಾ ರಾಜ್ಯ ಸಕರ್ಾರವನ್ನು ತೆಗಳುತ್ತಾ ತಮ್ಮ ಅನುಕೂಲಕ್ಕೆ ರಾಜ್ಯ ಸಕರ್ಾರವನ್ನು ಬಳಸಿಕೊಳ್ಳುತ್ತಾ ಪಕ್ಷ ವಿರೋದಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ
ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ.ಸದಸ್ಯ ನಾಗರಾಜು, ಭಾಜಪ ಸ್ಥಾನೀಯ ಸಮಿತಿ ಕಾರ್ಯದಶರ್ಿ ಭೈರೇಶ್, ನಗರ ಕಾರ್ಯದಶರ್ಿ ನಂದೀಶ್, ಮಂಜುನಾಥ್ ಉಪಸ್ಥಿತರಿದ್ದರು.

No comments:

Post a Comment