Wednesday, August 17, 2011


ಅಣ್ಣಾ ಹಜಾರೆ ಬಂಧನ ವಿರೋಧಿಸಿ ಬೀದಿಗಳಿದ ನಾನಾ ಸಂಘಟನೆಗಳು ್ಡ ವಕೀಲರ ಸಂಘ, ಬಿ.ಜೆ.ಪಿ, ಎ.ಬಿ.ವಿ.ಪಿ. ಕರವೇ, ದಿವ್ಯಜ್ಯೋತಿ ಕಲಾ ಸಂಘ, ಕುಂಚಾಕುರ ಸಂಘ, ಜನಪರ ವೇದಿಕೆಯ ಬೆಂಬಲ್ಡ ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿದ ವಕೀಲರ ಸಂಘ್ಡ ಉಪವಾಸ ಕುಳಿತ ತಾ.ಬಿ.ಜೆ.ಪಿ. ಅಧ್ಯಕ್ಷ ಶಿವಣ್ಣ (ಮಿಲ್ಟ್ರಿ)ಚಿಕ್ಕನಾಯಕನಹಳ್ಳಿ,ಆ.17 : ಅಣ್ಣಾ ಹಜಾರೆರವರು ಒತ್ತಾಯಿಸಿರುವಂತೆ ಪ್ರಧಾನಿಗಳು ಸೇರುವಂತಹ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸಕರ್ಾರ ಹಜಾರೆರವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದವು.ಅಖಿಲಾ ಭಾರತೀಯ ವಿದ್ಯಾಥರ್ಿ ಪರಿಷತ್, ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ, ವಕೀಲರ ಸಂಘ, ಕುಂಚಾಂಕುರ ಕಲಾ ಸಂಘ, ಕನ್ನಡ ರಕ್ಷಣಾ ವೇದಿಕೆ ಹಾಗೂ ಭಾಜಾಪ ಪಕ್ಷದ ಮುಖಂಡರುಗಳು ಅಣ್ಣಾ ಹಜಾರೆರವರ ಹೋರಾಟಕ್ಕೆ ಬೆಂಬಲಿಸಿ ಕೇಂದ್ರ ಸಕರ್ಾರದ ವಿರುದ್ದ ಘೋಷಣೆಗಳನ್ನು ಕೂಗಿದರು.ವಕೀಲರ ಸಂಘ ನ್ಯಾಯಾಲಯ ಕಲಾಪವನ್ನು ಸ್ಥಗಿತಗೊಳಿಸಿ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿತು ಈ ಸಂದರ್ಭದಲ್ಲಿ ವಕೀಲ ಎಂ. ಮಹಾಲಿಂಗಯ್ಯ ಮಾತನಾಡಿ, ಮಹಾತ್ಮ ಗಾಂಧಿ ನಂತರ ದೇಶದ ಜನತೆಗೆ ಒಳ್ಳೆಯ ನಾಯಕತ್ವ ಅಣ್ಣಾ ಹಜಾರೆರವರಿಂದ ದೊರತಿದೆ, ಅವರು 2ನೇ ಗಾಂಧಿಯಾಗಿ ಜನಲೋಕಪಾಲ್ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದಾರೆ ಇದಕ್ಕೆ ದೇಶದ ಎಲ್ಲಾ ಜನತೆಯ ಬೆಂಬಲ ಅವರಿಗೆ ಬೇಕು ಎಂದು ತಿಳಿಸಿದರು. ವಕೀಲ ಬಿ.ಕೆ.ಸದಾಶಿವಯ್ಯ ಮಾತನಾಡಿ ಎಲ್ಲಾ ರಾಜಕಾರಣಿಗಳು ಭ್ರಷ್ಠಾಚಾರದಲ್ಲಿ ಭಾಗಿಯಾಗಿದ್ದಾರೆ, ಇವರ ವಿರುದ್ದ ಸಿಡಿದೆದ್ದು ಶಾಂತಿಯುತವಾಗಿ ಸತ್ಯಾಗ್ರಹ ನಡೆಸುತ್ತಿದ್ದ ಹಜಾರೆರವರ ಬಂಧನ ಕ್ರೂರವಾಗಿದೆ ಎಂದು ತಿಳಿಸಿದ ಅವರು ಅಣ್ಣಾರವರು ನ್ಯಾಯಕ್ಕಾಗಿ ಹೋರಾಡುತ್ತಿರುವುದರಿಂದ ದೇಶದ ಎಲ್ಲಾ ಸಂಘ ಸಂಸ್ಥೆಗಳು ಅಣ್ಣಾರವರಿಗೆ ಬೆಂಬಲಿಸಬೇಕು ಎಂದರು. ಅಣ್ಣಾ ಹಜಾರೆರವರ ಹೋರಾಟಕ್ಕೆ ಬೆಂಬಲಿಸಿ ಸಕರ್ಾರಕ್ಕೆ ಮನವಿ ಪತ್ರವನ್ನು ಅಪರ್ಿಸಿದರು, ಶಿರಸ್ತೆದ್ದಾರ್ ಬೊಮ್ಮಣ್ಣ ಮನವಿ ಪತ್ರ ಸ್ವೀಕರಿಸಿದರು. ಅಣ್ಣಾ ಹೋರಾಟ ಬೆಂಬಲಿಸಿ ಉಪವಾಸ: ಸಂಕೇತಕವಾಗಿ ಒಂದು ದಿನ ಉಪವಾಸ ಕುಳಿತಿರುವ ತಾ.ಬಿ.ಜೆ.ಪಿ. ಅಧ್ಯಕ್ಷ ಶಿವಣ್ಣ ಮಾತನಾಡಿ, ಅಣ್ಣಾರವರ ಜೊತೆ ಕೋಟ್ಯಂತರ ಭಾರತೀಯರು ಜನಲೋಕಪಾಲ ಮಸೂದೆ ಜಾರಿಯಾಗುವಂತೆ ಕೇಂದ್ರ ಸಕರ್ಾರದ ಮೇಲೆ ಒತ್ತಡ ಹೇರುತ್ತಿದ್ದು ಜನ ಲೋಕಪಾಲ ಮಸೂದೆ ಜಾರಿಯಾಗುವವರೆಗೆ ಎಲ್ಲಾ ಸಂಘಟನೆಗಳು ಭಾಗಿಯಾಗುವ ಮೂಲಕ ಅಣ್ಣಾ ರವರ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು. ಅಭಾವಿಪ ತಾಲ್ಲೂಕು ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಅಣ್ಣಾ ಹಜಾರೆ ಬಂಧನ ಮಾಡಿರುವ ಸಕರ್ಾರಕ್ಕೆ ದೇಶ ಹಾಳುವ ನೈತಿಕ ಹಕ್ಕಿಲ್ಲ, ಸ್ವಾತಂತ್ರ ಪೂರ್ವದಲ್ಲಿ ವಿದೇಶಿಗರೂ ದೇಶದ ಸಂಪತ್ತನ್ನು ಲೂಟಿ ಮಾಡಿದರು ಇಂದು ನಮ್ಮ ದೇಶದ ಭ್ರಷ್ಠ ರಾಜಕಾರಣಿಗಳು ಕೋಟಿ ಕೋಟಿ ಹಣ ಲೂಟಿ ಮಾಡಿ ಸ್ವಿಸ್ ಬ್ಯಾಂಕ್ನಲ್ಲಿ ಇಟ್ಟಿದ್ದಾರೆ ಇವುಗಳನ್ನೆಲ್ಲ ದೇಶಕ್ಕೆ ಹಿಂತಿರುಗಿಸಬೇಕು ಎಂದರು. ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಭ್ರಷ್ಠ ಅಧಿಕಾರಿ, ಭ್ರಷ್ಠ ರಾಜಕಾರಣಿಗಳು ಇರಬೇಕಾದ ತಿಹಾರ್ ಜೈಲಿನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆರವರನ್ನು ಬಂದಿಸಿರುವುದು ಖಂಡನೀಯವಾಗಿದ್ದು ಹಜಾರೆರವರ ಜನಲೋಕಪಾಲ್ ಮಸೂದೆ ಜಾರಿಗೆ ತರಲು ನಾವೆಲ್ಲ ಜೊತೆಯಾಗಿರುತ್ತೇವೆ ಎಂದರು. ಅಣ್ಣಾ ಹಜಾರೆರವರ ಹೋರಾಟಕ್ಕೆ ಬೆಂಬಲಿಸಿ ವಕೀಲರ ಸಂಘದ ಅಧ್ಯಕ್ಷ ಶಿವಾನಂದ್, ವಕೀಲರಾದ ಜಿ.ಎಸ್.ಚನ್ನಬಸಪ್ಪ, ಸಿ.ಕೆ.ಸೀತಾರಾಮಯ್ಯ, ವೀವೇಕಾನಂದಸ್ವಾಮಿ, ಕೆ.ಆರ್.ಚನ್ನಬಸಪ್ಪ, ವೆಂಕಟೇಶ್, ರಾಜಶೇಖರ್, ಜ್ಞಾನಮೂತರ್ಿ, ಭಾಜಪ ಮುಖಂಡರಾದ ಶ್ರೀನಿವಾಸಮೂತರ್ಿ, ರವಿಕುಮಾರ್, ಬರಗೂರು ಬಸವರಾಜು, ಕುಂಚಾಕುರ ಕಲಾ ಸಂಘದ ಸಿ.ಎಚ್. ಗಂಗಾಧರ್, ಅಭಾವಿಪ ಕಾರ್ಯಕರ್ತರಾದ ರಾಕೇಶ್, ಮನು, ರವೀಂದ್ರ, ಮಧು, ಉಮೇಶ್, ನಂದನ್, ಗುರು ಮುಂತಾದವರಿದ್ದರು.
ಕ್ರೀಡೆಗೆ ದೈಹಿಕ ಶಕ್ತಿಯೊಂದಿಗೆ ಮಾನಸಿಕ ಬಲವು ಮುಖ್ಯಚಿಕ್ಕನಾಯಕನಹಳ್ಳಿ,ಆ.17 : ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ ಅದರ ಬಗ್ಗೆ ಗಮನಿಸದೆ ಎದುರಾಳಿ ಸ್ಪಧರ್ಿ ಜೊತೆಗೆ ಒಡನಾಡಿಯಾಗಬೇಕು ಹಾಗೂ ಆಟದಲ್ಲಿ ಯಾವುದೇ ಅನ್ಯಾಯವಾದರೆ ಆ ಕ್ಷಣದಲ್ಲಿಯೇ ನ್ಯಾಯ ಸಮಿತಿಯಲ್ಲಿ ಅಫೀಲ್ ಮಾಡಿಕೊಳ್ಳಿ ಎಂದು ಬಿ.ಇ.ಓ. ಸಾ.ಚಿ.ನಾಗೇಶ್ ಸಲಹೆ ನೀಡಿದರು.ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸ್ಪಧರ್ೆ ಆರೋಗ್ಯಕರವಾಗಿರ ಬೇಕೆಂದರಲ್ಲದೆ, ಸ್ಪಧರ್ೆಗಳು ನಡೆಯುವಾಗ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡಬಾರದು, ಈ ಬಗ್ಗೆ ಟೀಂ ಮ್ಯಾನೇಜರ್ ನೇರ ಹೊಣೆಯಾಗುತ್ತಾರೆ ಎಂದರು.ಸಾಹಿತಿ ಆರ್.ಬಸವರಾಜು ಮಾತನಾಡಿ ಕ್ರಿಡೆಗೆ ದೈಹಿಕ ಶಕ್ತಿಯೊಂದಿಗೆ ಮಾನಸಿಕ ಬಲ ಮುಖ್ಯವಾಗಿದೆ ಎಂದರು. ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾಥರ್ಿಗಳು ಶಾರೀರವಾಗಿ ಹಾಗೂ ದೈಹಿಕವಾಗಿ ಸದೃಡರಾಗಬೇಕು ಅವರು ವ್ಯಾಯಾಮದ ಮೂಲಕ ದೇಹವನ್ನು ಗಟ್ಟಿಗೊಳಿಸಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲ ಹೊಂದಬೇಕು ಎಂದರು. ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ ವಿದ್ಯಾರ್ಜನೆ ಜೊತೆಗೆ ಮಕ್ಕಳಿಗೆ ಕ್ರೀಡಾ ಸ್ಪೂತರ್ಿಯನ್ನು ಪೋಷಕರು ಬೆಳೆಸಬೇಕು, ಅವರಿಗೆ ಕ್ರೀಡೆಯ ಮೂಲಕ ಪ್ರೋತ್ಸಾಹ ನೀಡಿ ಅವರ ಬೆಳವಣಿಗೆಗೆ ಸಹಕರಿಸಬೇಕು ಎಂದರು. ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ ಮಕ್ಕಳಿಗೆ ಬುದ್ದಿಶಕ್ತಿ ಜೊತೆಗೆ ದೈಹಿಕ ಶ್ರಮ ಮುಖ್ಯಾವಾಗಿದೆ ಇದರಿಂದ ಗೆಲುವು ಸಾಧಿಸಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪ್ರತಿಭೆಗಳು ಬೆಳೆಯಲಿ ಎಂದ ಆಶಿಸಿದರು. ಇ.ಓ ಎನ್.ಎಂ.ದಯಾನಂದ್, ಇ.ಸಿ.ಓ ಮರುಳಾನಾಯ್ಕ, ಶಿಕ್ಷಕರ ಸಂಘದ ಕಾರ್ಯದಶರ್ಿ ಶಶಿಧರ್ ಉಪಸ್ಥಿತರಿದ್ದರು.

No comments:

Post a Comment