ಡಿ.ದೇವರಾಜು ಅರಸು ರವರ 96ನೇ ಜಯಂತಿ ಸಂಭ್ರಮೋತ್ಸವಚಿಕ್ಕನಾಯಕನಹಳ್ಳಿ,
ಆ.18 : ಡಿ.ದೇವರಾಜು ಅರಸು ರವರ 96ನೇ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣಾ ಸಮಾರಂಭವನ್ನು ಇದೇ 20ರ ಶನಿವಾರ ಬೆಳಗ್ಗೆ 11 ಕ್ಕೆ ಏರ್ಪಡಿಸಲಾಗಿದೆ. ಸಮಾರಂಭವನ್ನು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ತಾಲ್ಲೂಕಿನ ಹಂದನಕೆರೆ ಹೋಬಳಿ ಸೈಯದ್ಸಾಬ್ಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಸಾಹಿತಿ ಬಿಳಿಗೆರೆ ಕೃಷ್ಣಮೂತರ್ಿ ಉದ್ಘಾಟನೆ ನೆರವೇರಿಸಲಿದ್ದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯ ಸಂಚಾಲಕ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ನುಡಿನಮನಗಳನ್ನಾಡಲಿದ್ದು ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯ ನಿರಂಜನಮೂತರ್ಿ ಸಮವಸ್ತ್ರ ವಿತರಣೆ ಮಾಡಲಿದ್ದು ತಾ.ಕಸಾಪ ಪ್ರಧಾನ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟ್ಟಿಗೆಮನೆ , ಗ್ರಾ.ಪಂ.ಅಧ್ಯಕ್ಷ ಎಂ.ಎಸ್.ಮಹೇಶ್ ಪುಸ್ತಕ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಉಪಾಧ್ಯಕ್ಷೆ ಎಂ.ಎಸ್.ಮಹೇಶ್, ಸದಸ್ಯ ಸಿದ್ದರಾಮಯ್ಯ, ವಿಶ್ವಕರ್ಮ ಸಮಾಜದ ಯುವಮುಖಂಡ ಶ್ರೀಧರಚಾರ್, ಸವಿತಾ ಸಮಾಜದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಗ್ರಾ.ಪಂ.ಸದಸ್ಯರಾದ ತಾತಯ್ಯ, ಪರಮೇಶ್, ಅರಸು ಸಮಾಜದ ಅಧ್ಯಕ್ಷ ನಾಗರಾಜರಸು, ಶಿವಲಿಂಗಯ್ಯ, ಮಹಬೂಬ್ಸಾಬ್, ಹನುಮಂತಯ್ಯ, ಆನಂದ್ ಉಪಸ್ಥಿತರಿರುವರು.
ಮುಂದುವರೆದ ಅಣ್ಣಾ ಹಜಾರೆರವರ ಬೆಂಬಲಿಗರ ಹೋರಾಟಚಿಕ್ಕನಾಯಕನಹಳ್ಳಿ,ಆ.18 :
ಕೇಂದ್ರ ಸಕರ್ಾರ ಅಣ್ಣಾ ಹಜಾರೆರವರಿಗೆ ಉಪವಾಸ ಸತ್ಯಾಗ್ರಹ ಮಾಡಲು ಅವಕಾಶ ನೀಡದಿರುವುದು ಖಂಡನೀಯವಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ ಎಂದು ಜನಪರ ವೇದಿಕೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಖಂಡಿಸಿದರು.ಪಟ್ಟಣದಲ್ಲಿ ಜನಪರ ವೇದಿಕೆ, ಕುಂಚಾಂಕುರ ಕಲಾ ಸಂಘ, ದಿವ್ಯಜ್ಯೋತಿ ಕಲಾ ಸಂಘ, ಕರವೇ ಸಂಘಗಳು ಅಣ್ಣಾ ಹಜಾರೆರವರ ಬಂಧನ ವಿರೋಧಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾಥರ್ಿಗಳೊಂದಿಗೆ ಸೈಕಲ್ ಜಾಥದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಲ್ಲಾ ಪಕ್ಷಗಳಲ್ಲಿ ಭ್ರಷ್ಠರಿದ್ದು ಜನಲೋಕ ಪಾಲ ಮಸೂದೆ ಜಾರಿಗೆ ಬಂದರೆ ಭ್ರಷ್ಠಚಾರವನ್ನು ರಾಷ್ಟ್ರಮಟ್ಟದಲ್ಲಿ ಸ್ವಲ್ಪ ಕಡಿಮೆ ಮಾಡಬಹುದು ಇಲ್ಲದಿದ್ದರೆ ಸಂಪತ್ತು ಒಂದೇ ಕಡೆ ಕೇಂದ್ರೀಕೃತವಾಗಿ ಬಡವರು ಬಡವರಾಗಿಯೇ ಉಳಿಯುತ್ತಾರೆ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಂಚಾಂಕುರ ಕಲಾ ಸಂಘದ ಸಿ.ಹೆಚ್.ಗಂಗಾಧರ್, ಕರವೇ ನಿಂಗರಾಜು, ಸುರೇಶ್ಸಾಲ್ಕಟ್ಟೆ, ಮನ್ಸೂರ್ಪಾಷ ಮುಂತಾದವರು ಭಾಗವಹಿಸಿದ್ದರು.
ಸರಿಯಾದ ಮಾಹಿತಿ ನೀಡದ ಅಧಿಕಾರಿಗಳು, ಏಜನ್ಸಿಯವರುಚಿಕ್ಕನಾಯಕನಹಳ್ಳಿ,ಆ.18 :
ಸರಿಯಾದ ಮಾಹಿತಿ ನೀಡದ ಅಧಿಕಾರಿಗಳು, ಏಜನ್ಸಿಯವರುಚಿಕ್ಕನಾಯಕನಹಳ್ಳಿ,ಆ.18 :
el.ಪಿ.ಜೆ ಗ್ಯಾಸ್ ವಿತರಣೆಯ ವ್ಯವಸ್ಥೆಯು ಸಮಪರ್ಕವಾಗಿಲ್ಲ, ಜನಸಾಮಾನ್ಯರು ಗ್ಯಾಸ್ ಮುಗಿದು ತಿಂಗಳು ಕಳೆದರೂ ಸರಿಯಾಗಿ ಗ್ರಾಹಕರಿಗೆ ತಕ್ಷಣ ನೀಡದೆ, ಮುಂಚಿತವಾಗಿಯೇ ಗ್ಯಾಸ್ ಬುಕ್ ಮಾಡಿ 15ದಿನ ಕಳೆದು ಬನ್ನಿ ಎಂಬ ಬೇಜಾವಬ್ದಾರಿ ಸಬೂಬನ್ನು ಏಜನ್ಸಿಯವರು ನೀಡುತ್ತಾರೆಂದು ತಾ.ಪಂ.ಸದಸ್ಯ ಶಶಿಧರ್ ಆರೋಪಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಏಜನ್ಸಿಯವರು ಸಾಮಾನ್ಯ ಜನರಿಗೆ ಗ್ಯಾಸ್ ನೀಡಲು ಬೇಜಾವಬ್ದಾರಿತನ ತೋರುವುದಲ್ಲದೆ ಅವರೇ ಸುಪ್ರೀಂನಂತೆ ವತರ್ಿಸುತ್ತಾರೆ ಎಂದರು.ಆರೋಪಿಸುತ್ತಾ ಅಧಿಕಾರಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಚಚರ್ಿಸಿದ ಅವರು ಹೊನ್ನೆಬಾಗಿ ತಾಲ್ಲೂಕು ಪಂಚಾಯಿತಿ ಮೇಲನಹಳ್ಳಿ ವ್ಯಾಪ್ತಿಗೆ ಸೇರಿದ ಮಸಾಲ್ತಿಗುಡ್ಲು, ಕರಿಯಪ್ಪನಗುಡ್ಲು ಗ್ರಾಮಗಳಿಗೆ ನಗರದ ಕೊಳಚೆ ನೀರು ಹರಿದು ಅಲ್ಲಿನ ತೋಟಗಳ ಮೂಲಕ ಕೊಳವೆಬಾವಿಗಳಿಂದ ಕುಡಿಯುವ ನೀರಿಗೆ ಸೇರಿಕೊಂಡು ಇಲ್ಲದ ಕಾಯಿಲೆಗಳು ಉತ್ಪತ್ತಿಯಾಗುತ್ತಿವೆ, ಇದೇ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿವೆ ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ತಮಗೆ ಸಂಬಂಧಿಸಿಲ್ಲವೆಂದು ಇಲಾಖೆಯಿಂದ ಇಲಾಖೆಗೆ ದೂರು ನೀಡಿದ ಗ್ರಾಮಸ್ಥರನ್ನು ತಿರುಗಿಸುತ್ತಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದರು. ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರೇ ಖುದ್ದು ಸಭೆಗೆ ಅಭಿವೃದ್ದಿ ಬಗ್ಗೆ ಮಾಹಿತಿ ಕೇಳಿದರೆ ಸರಿಯಾಗಿ ಮಾಹಿತಿ ನೀಡುತ್ತಿಲ ತಾ.ಪಂ.ಸಭೆಗೆ ಕರೆದರೂ ಸರಿಯಾಗಿ ಬರುವುದಿಲ್ಲ ಎಂದು ತಾ.ಪಂ.ಸದಸ್ಯರಾದ ನಿರಂಜನ್, ಜಗದೀಶ್ ಆರೋಪಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಪಂಚಾಯಿತಿಯ ಸದಸ್ಯರು ಸವರ್ಾನುಮತದಿಂದ ತಾಲ್ಲೂಕು ಪತ್ರಕರ್ತರ ಭವನ ನಿಮರ್ಾಣಕ್ಕೆ ಹಳೆಯ ಪ್ರವಾಸಿ ಮಂದಿರದ ಪಕ್ಕದಲ್ಲಿ ನಿವೇಶನ ನೀಡಲು ಒಪ್ಪಿಗೆ ಸೂಚಿಸಿದರು. ಸಭೆಯಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿಬಿಪಾತೀಮ, ತಹಶೀಲ್ದಾರ್ ಉಮೇಶ್ಚಂದ್ರ, ಇ.ಓ ಎನ್.ಎಂ.ದಯಾನಂದ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಚೇತನಗಂಗಾಧರ್, ಹಾಗೂ ತಾ.ಪಂ.ಸದಸ್ಯರುಗಳು, ಗ್ರಾ.ಪಂ.ಅಧ್ಯಕ್ಷರುಗಳು, ಇಲಾಖಾಧಿಕಾರಿಗಳು ಹಾಜರಿದ್ದರು.
No comments:
Post a Comment