ಮತ್ತೆ ಈ ರಾಜ್ಯದ ಜನತೆಯ ಸೇವೆ ಮಾಡುವ ವಿಶ್ವಾಸಿವಿದೆ: ಬಿ.ಎಸ್.ಯಡಿಯೂರಪ್ಪ
ಚಿಕ್ಕನಾಯಕನಹಳ್ಳಿ,ಡಿ.11 : ರಾಜ್ಯದ ಜನತೆಯ ಆಶೀವರ್ಾದ, ಜಗದ್ಗುರು ಕೃಪಾಶರ್ಿವಾದ ಇದ್ದರೆ ಮತ್ತೆ ರಾಜ್ಯದ ಜನತೆಯ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ನಡೆದ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಧರ್ಮಜಾಗೃತಿ ಧಾಮರ್ಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಉತ್ತಮ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸುವುದನ್ನು ಸಹಿಸದ ಅನೇಕ ರಾಜಕಾರಣಿಗಳು ಷಡ್ಯಂತ್ರಮಾಡಿ ನನ್ನನ್ನು ಕಾರಾಗೃಹಕ್ಕೆ ದೂಡಿದರು, ನಾನು ಯಾವುದೇ ಸಂದರ್ಭದಲ್ಲೂ ಬೆನ್ನು ತೋರಿಸಿ ಬೆಳದವನಲ್ಲ , ಪ್ರತಿಯೊಂದು ಸಂದರ್ಭದಲ್ಲೂ ಧೈರ್ಯವಾಗಿ ಸಮಸ್ಯೆಗಳನ್ನು ಎದುರಿಸುತ್ತಲೇ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರಾಜ್ಯದ ಜನತೆಗೆ ಜಾರಿಗೆ ತಂದವನು ಎಂದು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ಕಾರಾಗೃಹದಲ್ಲಿದ್ದಾಗ ಅಲ್ಲಿ ಸುಮಾರು ಒಂದು ಸಾವಿರ ಕಾರಾಗೃಹ ವಾಸಿಗಳು ನನ್ನನ್ನು ಸನ್ಮಾನಿಸಿದರು, ಆ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು ನನ್ನ ಮನ ಕಲಕಿದವು.
ನನ್ನ ಮೂರುವರೆ ವರ್ಷದ ಮುಖ್ಯಮಂತ್ರಿ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ, ಭಾಗ್ಯಲಕ್ಷ್ಮೀ, ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದ್ದೇನೆ, ಸಾಮಾಜಿಕ ನ್ಯಾಯದಡಿಯಲಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ನೀತಿಯಲ್ಲಿ ಕಾರ್ಯಕ್ರಮ ಯಶಸ್ವಿಗಳಿಸಿದ್ದೇನೆ ಎಂದ ಅವರು ನಾನು ಕಾರಾಗೃಹಕ್ಕೆ ಹೋದ ಸಂದರ್ಭದಲ್ಲಿ ನನ್ನ 40 ವರ್ಷಗಳ ಜೀವನದ ಬಗ್ಗೆ 24 ದಿನಗಳ ಕಾಲ ಡೈರಿಯನ್ನು ಬರೆದಿದ್ದೇನೆ ಎಂದರು.
ನಾನು ಅಟಲ್ ಬಿಹಾರಿ ವಾಜ್ಪೇಯಿಯವರ ಗರಡಿಯಲ್ಲಿ ಬೆಳದವನು ನಾನು ಮಾಡಿದ ರಾಜ್ಯದ ಯೋಜೆನೆಗಳ ಯಶಸ್ವಿಯನ್ನು ಬೇರೆಯವರು ಸಾಧಿಸದಿದ್ದರಿಂದ ನನಗೆ ಹಲವಾರು ತೊಂದರೆಗಳು ಎದುರಾಯಿತು. ನಾನು ಇಷ್ಟು ಎತ್ತರಕ್ಕೆ ಬೆಳದದ್ದೇ ನನಗೆ ಮುಳುವಾಯಿತು ಎಂದರು ಸಮಾರಂಭದಲ್ಲಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರಸ್ವಾಮಿ, ಚನ್ನಸಿದ್ದರಾಮ ಪಂಡಿತಾರಾಧ್ಯ ರಾಜದೇಶಿಕೇಂದ್ರಸ್ವಾಮಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ತಿಪಟೂರು ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ತೋಂಟದಾರ್ಯಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಸಚಿವ ವಿ.ಸೋಮಣ್ಣ, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ ಮುಂತಾದವರಿದ್ದರು.
ದರೋಡೆಕೋರರ ಉಪಟಳದಿಂದ ಇಲ್ಲಿನ ಎಸ್.ಬಿ.ಎಂ.ನ ಎ.ಟಿ.ಎಂ.ಬಂದ್
ಚಿಕ್ಕನಾಯಕನಹಳ್ಳಿ,ಡಿ.12: ದರೋಡಿಕೋರರ ಉಪಟಳದಿಂದ ಇಲ್ಲಿನ ಎಸ್.ಬಿ.ಎಂ.ನ ಎ.ಟಿ.ಎಂ. ಬಂದ್ ಆಗಿದೆ.
ಪಟ್ಟಣದ ಶೆಟ್ಟೀಕೆರೆ ಗೇಟ್ ಬಳಿ ಇರುವ ಎ.ಟಿ.ಎಂ. ಕೇಂದಕ್ಕೆ ಹೊಸದುರ್ಗ ಕಡೆಯಿಂದ ಬಂದ ಏಳ ಜನರಿರುವ ದರೋಡಿಕೋರರ ಗುಂಪೊಂದು ಇಲ್ಲಿನ ಎ.ಟಿ.ಎಂ.ಗೆ ಸೋಮವಾರ ಬೆಳಗಿನ ಜಾವದ ಸುಮಾರಿಗೆ ನುಗ್ಗಿ ಮಧು ಎಂಬುವರ ಎ.ಟಿ.ಎಂ.ಕಾಡರ್್ನಿಂದ 20 ಸಾವಿರಕ್ಕೂ ಹೆಚ್ಚಿನ ಹಣವನ್ನು ದೋಚಿಕೊಂಡು ಹೋಗಿದೆ.
ಹೊಸದುರ್ಗ ತಾಲೂಕಿನ ಹೊನ್ನೆಕೆರೆಯ ಮಧು ಭಾನುವಾರ(11) ರಾತ್ರಿ 12ರ ಸುಮಾರಿಗೆ ಹೊಸದುರ್ಗ ಪಟ್ಟಣದಲ್ಲಿ ಸಿನಿಮಾ ಮಂದಿರದಲ್ಲಿ ರಾತ್ರಿ ಎರಡನೇ ಪ್ರದರ್ಶನ ನೋಡಿಕೊಂಡು ತನ್ನ ಊರು ಹೊನ್ನೆಕೆರೆಗೆ ತನ್ನ ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಮಾರುತಿ ವ್ಯಾನೊಂದು ಮಧು ಬೈಕ್ನಿಲ್ಲಿಸಿ ಪಾವಗಡಕ್ಕೆ ಹೋಗುವ ದಾರಿ ಕೇಳಿದ್ದಾರೆ ಈ ಸಂದರ್ಭದಲ್ಲಿ ದಾರಿ ತೋರಿಸಲು ಬೈಕ್ನಿಲ್ಲಿಸಿದ ಮಧು ಮತ್ತು ಆತನ ಸ್ನೇಹಿತರಿಗೆ ಮಾರುತಿ ವ್ಯಾನನಲ್ಲಿದ್ದ ದರೋಡೆಕೋರರ ಗುಂಪು ಲಾಂಗ್, ಮಚ್ ತೋರಿಸಿ ಬೆದರಿಸಿ ಅವರ ಬಳಿ ಇರುವ ಚಿನ್ನದ ಆಭರಣಗಳನ್ನು ಕಿತ್ತುಕೊಂಡಿದೆ.
ಈ ಸಂದರ್ಭದಲ್ಲಿ ಮಧು ಜೊತೆಇದ್ದ ಸ್ನೇಹಿತರು ದರೋಡೆಕೋರರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ, ಇದರಿಂದ ಮತ್ತೂ ರೊಚ್ಚಿಗೆದ್ದ ತಂಡ ಮಧುವನ್ನು ತನ್ನ ವ್ಯಾನಿಗೆ ಎತ್ತಾಕಿಕೊಂಡು ಅವನಿಗೆ ಹಣಕ್ಕಾಗಿ ಹಿಂಸೆ ನೀಡಿದೆ, ಆ ಸಂದರ್ಭದಲ್ಲಿ ಮಧು ತನ್ನ ಬಳಿಇದ್ದ ಎ.ಟಿ.ಎಂ.ಕಾಡರ್್ಕೊಟ್ಟಿದ್ದಾನೆ, ಈ ಕಾಡರ್್ ತೆಗೆದುಕೊಂಡ ದರೋಡೆಕೋರರು ಚಿಕ್ಕನಾನಯಕನಹಳ್ಳಿಯ ಎ.ಟಿ.ಎಂ.ಕೇಂದ್ರಕ್ಕೆ ಬಂದು ಆತನ ಖಾತೆಯಿಂದ ಮೂರು ಬಾರಿ ಹಣ ತೆಗೆದುಕೊಂಡಿದ್ದಾರೆ. ನಂತರ ಮಧುವನ್ನು ಪಟ್ಟಣದ ಬಳಿಯ ತರಬೇನಹಳ್ಳಿಯ ಬಳಿ ಇಳಿಸಿ ದರೋಡೆಕೋರರು ಮುಂದೆ ಸಂಚರಿಸಿದ್ದಾರೆ.
ದರೋಡೆಗೊಳಗಾದ ಮಧು ತರಬೇನಹಳ್ಳಿಯಿಂದ ಆ ಸರಿ ರಾತ್ರಿಯಲ್ಲಿ ಬಸ್ ಹಿಡಿದು ಮತ್ತೆ ಹೊಸದುರ್ಗಕ್ಕೆ ತೆರಳಿ ಅಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಪಿ.ರವಿಪ್ರಸಾದ್ ಬಳಿ ನಡೆದ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹೊಸದುರ್ಗದ ಸಿ.ಪಿ.ಐ. ರವಿಪ್ರಸಾದ್ ಚಿ.ನಾ.ಹಳ್ಳಿಯ ಎಸ್.ಬಿ.ಎಂ.ಗೆ ಬಂದು ಎ.ಟಿ.ಎಂ.ನ ಸಿ.ಸಿ.ಕ್ಯಾಮರಾದಲ್ಲಿ ದಾಖಲಾಗಿರುವ ದರೋಡೆಕೋರರ ಛಾಯಾ ಚಿತ್ರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಗಾಗಿ ಇಲ್ಲಿನ ಎ.ಟಿ.ಎಂ.ಕೇಂದ್ರಕ್ಕೆ ಬೀಗ ಹಾಕಿಸಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಬ್ಯಾಂಕ್ನ ಉನ್ನತಾಧಿಕಾರಗಳ ಬರುವಿಕೆಗಾಗಿ ಇಲ್ಲಿನ ಬ್ಯಾಂಕ್ನ ಅಧಿಕಾರಿಗಳು ಕಾಯುತ್ತಿದ್ದಾರೆ. ಮಧುವನ್ನು ಕರೆತಂದಿರುವ ಸಿ.ಪಿ.ಐ.ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮಠಗಳು ಸಮಾಜದಲ್ಲಿ ಸಾಮರಸ್ಯ ಮತ್ತು ಸಾತ್ವಿಕತೆಯನ್ನು ನಿಮರ್ಾಣ ಮಾಡಬೇಕು.
ಚಿಕ್ಕನಾಯಕನಹಳ್ಳಿ,ಡಿ.12 : ಪಂಚಪೀಠಗಳು ಸಮಾಜದ ಸಾಮರಸ್ಯಕ್ಕೆ ಸ್ಪೂತರ್ಿ ಹಾಗೂ ಸಾತ್ವಿಕ ಸಮಾಜದ ನಿಮರ್ಾಣ ಮಾಡುತ್ತಾ ಧರ್ಮದ ಉಳಿಸುವಿಕೆಯ ಕಾರ್ಯ ನಿರ್ವಹಿಸುತ್ತಿವೆ ಎಂದು ರಂಭಾಪುರಿ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಸ್ವಾಮಿ ಹೇಳಿದರು.
ತಾಲ್ಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ನಡೆದ ಧಾಮರ್ಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಧರ್ಮರಂಗವನ್ನು ಬಿಟ್ಟು ಉಳಿದೆಲ್ಲ ರಂಗಗಳು ಕಲುಷಿತಗೊಂಡಿದೆ, ಸಜ್ಜನರಿಗಿಂತ ದುರ್ಜನರು ಹೆಚ್ಚಾಗುತ್ತಿದ್ದಾರೆ. ಇವುಗಳನ್ನು ಸರಿಪಡಿಸುವ ಜವಬ್ದಾರಿ ಮಠಾಧೀಶರ ಹಾಗೂ ಸಮಾಜದ ಚಿಂತಕರ ಮೇಲಿದೆ. ಪ್ರತಿಯೊಬ್ಬರಲ್ಲೂ ಧರ್ಮದ ವಿಚಾರದಲ್ಲಿ ಸ್ವಾಭಿಮಾನ ಹುಟ್ಟಬೇಕು ಎಂದ ಅವರು, ಧರ್ಮ ಮತ್ತು ಜಾತಿಯ ಸಂಘರ್ಷಗಳು ನಡೆಯುತ್ತಿದೆ, ರಾಷ್ಟ್ರ ಪ್ರೇಮ, ಕರ್ತವ್ಯ ನಿಷ್ಠೆ ಎಲ್ಲರಲ್ಲೂ ಬೆಳೆಯಲಿ ಎಂದರು.
ಮರುಳಸಿದ್ದೇಶ್ವರ ಕ್ಷೇತ್ರವು ಸಮಾಜಕ್ಕೆ ಒಳ್ಳೆಯ ಧಾಮರ್ಿಕ ಕೊಡುಗೆ ನೀಡುತ್ತಿದೆ ಎಂದರು. ಕಳೆದ ಅಕ್ಟೋಬರ್ ತಿಂಗಳಿಲ್ಲಿ ಉಜೈನಿ ಹಾಗೂ ಶ್ರೀ ಶೈಲ ಪೀಠಗಳ ಜಗದ್ಗುರುಗಳ ನಿಧನದಿಂದ ತುಂಬ ನೋವಾಗಿದೆ ಎಂದು ತಿಳಿಸಿದರು.
ಉಜೈನಿ ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರಸ್ವಾಮಿ ಮಾತನಾಡಿ, ಭಾರತ ದೇಶದ ಪರಂಪರೆ ಭಕ್ತಿ ಶ್ರದ್ದೆಗಳನ್ನು ಮಠಗಳಲ್ಲಿ ಕಾಣಬಹುದು, ಒಳ್ಳೆಯ ತನವನ್ನು ಬೆಳೆಸುವುದರ ಜೊತೆಗೆ ಧರ್ಮ, ಬ್ರಾತೃತ್ವ ಮತ್ತು ಸ್ನೇಹತ್ವಗಳನ್ನು ಆಚರಣೆಗೆ ತರುವುದು ಎಂದರು.
ಶ್ರೀ ಶೈಲ ಶ್ರೀ ಚನ್ನಸಿದ್ದರಾಮ ಪಂಡಿತರಾದ್ಯ ರಾಜದೇಶೀಕೇಂದ್ರ ಸ್ವಾಮಿ ಮಾತನಾಡಿ ಧರ್ಮ ಮನುಷ್ಯನಿಗೆ ಉತ್ತಮ ವಿಚಾರಗಳನ್ನು ತಿಳಿಸುತ್ತವೆ ಎಂದರು.
ಸಮಾರಂಭದಲ್ಲಿ ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ, ತಿಪಟೂರು ಷಡಕ್ಷರಮಠದ ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ಶಾಸಕ ಸಿ.ಬಿ.ಸುರೇಶ್ಬಾಬು ಮುಂತಾದವರಿದ್ದರು
ಸಮಾರಂಭದಲ್ಲಿ ದಯಾನಂದಶಾಸ್ತ್ರಿ ಪ್ರಾಥರ್ಿಸಿದರೆ, ಸವಿತ ಶಿವಕುಮಾರ್ ನಿರೂಪಸಿದರು, ದಯಾಶಂಕರ್ ವಂದಿಸಿದರು.
No comments:
Post a Comment