ಅಂಗನವಾಡಿ ಶಿಕ್ಷಕಿಯರಿಗೆ ಕೆಲಸಕ್ಕೆ ತಕ್ಕಂತೆ ಸಂಬಳ ನೀಡಿ
ಚಿಕ್ಕನಾಯಕನಹಳ್ಳಿ,ಜ.24: ಮಹಿಳೆಯರ ಮತ್ತು ಮಕ್ಕಳ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಕರ್ಾರ ಅವರ ಅಭಿವೃದ್ದಿಗೆ ಮುಂದಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ನಡೆದ ತಾಲೂಕು ಅಂಗನವಾಡಿ ಕೇಂದ್ರಗಳಿಗೆ ಸಮಾರೋಪಾದಿ ಭೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿರುವ ವ್ಯವಸ್ಥೆಯನ್ನು ಪರಿಶೀಲನೆಮಾಡಿ ಅಂಗನವಾಡಿ ಕಾರ್ಯಕರ್ತರ ಜವಬ್ದಾರಿ ಬಗ್ಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಯಾವ ರೀತಿ ನೀಡಬೇಕು ಎಂಬುದನ್ನು ಪರಿಶೀಲಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಸ್ತ್ರೀಶಕ್ತಿ ಭವನ ನಿಮರ್ಿಸಲು ಸ್ಥಳೀಯ ಅಭಿವೃದ್ಧಿ ಅನುದಾನದಲ್ಲಿ 5 ಲಕ್ಷ ರೂ ಬಿಡುಗಡೆಯಾಗಿದ್ದು ಈ ಭವನದ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ವಂತ ಕಟ್ಟಡ ನಿಮರ್ಿಸಲು ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಅಂಗನವಾಡಿ ಶಿಕ್ಷಕಿಯರಿಗೆ ಹಾಗೂ ಸಹಾಯಕರಿಗೆ ನೀಡುವ ಸಂಬಳ ಕಡಿಮೆಯಾಗಿದ್ದು, ಅವರ ಸಂಬಳವನ್ನು ಹೆಚ್ಚಿಸಬೇಕು ಎಂದರಲ್ಲದೆ, ಚಿಕ್ಕಮಕ್ಕಳನ್ನು ಪೋಷಿಸಿ ಅವರಿಗೆ ಅಕ್ಷರ ಕಲಿಸುವುದು ತುಂಬ ಕಷ್ಟದ ಕೆಲಸ ಎಂದರು.
ಸಮಾಜದ ಅಭಿವೃದ್ದಿಯಲ್ಲಿ ಸ್ತೀಯರ ಪಾತ್ರ ಬಹುಮುಖ್ಯ ಮಹಿಳೆಯರು ಮನಸ್ಸು ಮಾಡಿದರೆ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ಪಶ್ಚಿಮ ಬಂಗಾಳದಲ್ಲಿ 25ವರ್ಷ ರಾಜ್ಯವಾಳಿದ ಕಮ್ಯುನಿಷ್ಟ್ ಸಕರ್ಾರವನ್ನು ಕಿತ್ತೊಗೆಯಲು ಒಬ್ಬ ಮಹಿಳೆಯಿಂದ ಸಾಧ್ಯವಾಯಿತು, ಈ ನಿಟ್ಟಿನಲ್ಲಿ ಮಮತಾ ಬ್ಯಾನಜರ್ಿ ಯಶಸ್ವಿಯಾಗಿ ಅಲ್ಲಿನ ಮುಖ್ಯಮಂತ್ರಿಯೂ ಆದರೂ ಎಂದರಲ್ಲದೆ, ಈ ಯಶಸ್ವಿಗೆ ಅವರಲ್ಲಿದ್ದ ರೈತರ ಕಾಳಜಿ ಪ್ರಮುಖವಾಯಿತು ಎಂದರು.
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಅಂಗನವಾಡಿ ಕೇಂದ್ರಗಳು ಸಹಾಯಕವಾಗಿವೆ, ಊರಿಗೆ ಒಂದು ಅಂಗನವಾಡಿ ಕೇಂದ್ರ ಮತ್ತು ದೇವಸ್ಥಾನ ಇರುವುದು ಇಂದಿನ ದಿನಮಾನದಲ್ಲಿ ಖಡ್ಡಾಯವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ರಾಮು, ಇ.ಓ ದಯಾನಂದ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಉಪಾಧ್ಯಕ್ಷೆ ಗಾಯಿತ್ರಮ್ಮ, ತಾ.ಪಂ.ಸದಸ್ಯರಾದ ಚೇತನಗಂಗಾಧರ್, ಪುರಸಭಾ ಸದಸ್ಯೆ ರುಕ್ಮಿಣಮ್ಮ, ಸಿಡಿಪಿಓ ಅನೀಸ್ಖೈಸರ್ ಮುಂತಾದವರಿದ್ದರು.
ಚಿ.ನಾ.ಹಳ್ಳಿಯಲ್ಲಿ ಆಡಳಿತ ವೈಪಲ್ಯದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ಶೀರ್ಷಿಕೆ ಸೇರಿಸಿ |
ಚಿಕ್ಕನಾಯಕನಹಳ್ಳಿ,ಜ.24 : ರಾಜ್ಯ ಬಿಜೆಪಿ ಸಕರ್ಾರದ ವೈಪಲ್ಯಗಳ ವಿರುದ್ದ ಮತ್ತು ನಿಷ್ಕ್ರಿಯ ಆಡಳಿತದ ವಿರುದ್ದ ಆಗ್ರಹಿಸಿ ಇದೇ 30ರ ಸೋಮವಾರದಂದು ಕಾಂಗ್ರೆಸ್ ಪಕ್ಷದ ವತಿಯಿಂದ ತಹಶೀಲ್ದಾರ್ರವರ ಕಛೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದಾಗಿ ಚಿ.ನಾ.ಹಳ್ಳಿ ವಿಧಾನಸಭಾ ವ್ಯಾಪ್ತಿಯ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕರಾಗಿರುವ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದರು.
ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರತಿಭಟನೆಯನ್ನು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಹಮ್ಮಿಕೊಂಡಿದ್ದು, ಆರಂಭದಲ್ಲಿ ನೆಹರು ಸರ್ಕಲ್ನಿಂದ ತಹಶೀಲ್ದಾರ್ ಕಛೇರಿವರೆಗೂ ಮೆರವಣಿಗೆ ನಡೆಯಲಿದ್ದು, ನಂತರ ತಹಶೀಲ್ದಾರ್ ಕಛೇರಿಯ ಬಳಿ ಧರಣಿ ಕಾರ್ಯಕ್ರಮ ನಡೆಯಲಿದೆ. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಷಫಿಅಹಮದ್, ಮಾಜಿ ಲೋಕಸಭಾ ಸದಸ್ಯ ಸಿ.ಪಿ.ಮೂಡಲಗಿರಿಯಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಶಾಸಕರಾದ ಆರ್.ನಾರಾಯಣ್, ಕೆ.ನಂಜೇಗೌಡ(ಮೂತರ್ಿ), ಕೆ.ಷಡಕ್ಷರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯಿತ್ರಿರಾಜು ಹಾಗೂ ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ಯ ಪ್ರಧಾನ ಕಾರ್ಯದಶರ್ಿ ಕೆ.ಜಿ.ಕೃಷ್ಣೆಗೌಡ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಿ.ಕೆ.ಮೊಹಮದ್ ಪೀರ್ಪಾಷ, ಪ.ಜಾ.ಘಟಕ ಅಧ್ಯಕ್ಷ ಶಿವಕುಮಾರ್, ತಿಮ್ಮನಹಳ್ಳಿ ಗ್ರಾ.ಪಂ.ಸದಸ್ಯ ರಾಘವೇಂದ್ರ ಉಪಸ್ಥಿತರಿದ್ದರು.
No comments:
Post a Comment