ವಿಕಲಚೇತನರಿಗೆ ಕೃತಕ ಅಂಗ ಜೋಡಣೆ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ
ಚಿಕ್ಕನಾಯಕನಹಳ್ಳಿ,ಮಾ.06 : ಜನರು ಆಕಸ್ಮಿಕವಾಗಿ ಅಥವ ಅಪಘಾತಗಳಿಂದ ಅವಘಡಕ್ಕೊಳಗದ ಸಂದರ್ಭದಲ್ಲಿ ಅವರಿಗೆ ಕೃತಕ ದೇಹದ ಭಾಗಗಳನ್ನು ನೀಡಿದರೆ, ಅವರು ತಮಗೆ ತಾವೇ ಆತ್ಮಸ್ಥೈರ್ಯ ಕಂಡುಕೊಳ್ಳುವುದರ ಮೂಲಕ ತಮ್ಮ ಜೀವನ ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಇನ್ನರ್ವೀಲ್ ಕ್ಲಬ್ ವತಿಯಿಂದ ನಡೆದ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪಘಾತಕ್ಕೊಳಗಾದ ವ್ಯಕ್ತಿಯು ಆ ಸಂದರ್ಭದಲ್ಲಿ ತನ್ನಲ್ಲಿರುವ ನಂಬಿಕೆ, ಶಕ್ತಿಯನ್ನು ಕಳೆದುಕೊಂಡು ಮೂಲೆಗುಂಪಾಗುತ್ತಾನೆ, ಈ ಸಮಯದಲ್ಲಿ ಅವರಿಗೆ ದೇಹಕ್ಕೆ ಕೃತಕ ಭಾಗಗಳನ್ನು ನೀಡಿ ಆತ್ಮಸ್ಥೈರ್ಯ ತುಂಬಿದರೆ ಅವರು ಜೀವಿಸಲು ಸಹಕಾರಿಯಾಗುವುದು ಎಂದ ಅವರು, ಇಂತಹ ಕಾರ್ಯವನ್ನು ಇನ್ನರ್ವೀಲ್ ಕ್ಲಬ್ ಮಾಡುತ್ತಿರುವುದು ಸಂತೋಷಕರ ಮತ್ತು ಅಂಗವಿಕಲರಿಗೆ ಸಕರ್ಾರ ಹೆಚ್ಚಿನ ರೀತಿಯಲ್ಲಿ ನೆರವಾಗಬೇಕು ಹಾಗೂ ಅವರಿಗೆ ಶಾಶ್ವತ ಪರಿಹಾರ ನೀಡಬೇಕೆಂದರು.
ಇನ್ನರ್ವೀಲ್ ಕ್ಲಬ್ ಜಿಲ್ಲಾ ವೈಸ್ ಛೇರಮನ್ ಮೀನಾ ಅಂಬ್ಲಿ ಮಾತನಾಡಿ ಕೃತಕ ಕಾಲು ಜೋಡಣಾ ಶಿಬಿರವನ್ನು ಕ್ಲಬ್ ಹಲವು ವರ್ಷಗಳಿಂದ ಹಮ್ಮಿಕೊಂಡು ಬರುತ್ತಿರುವುದಾಗಿ ತಿಳಿಸಿದರು.
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಇನ್ನರ್ವೀಲ್ ಸಂಸ್ಥೆ ಹಮ್ಮಿಕೊಂಡಿರುವ ಕೃತಕ ಕಾಲು ಜೋಡಣಾ ಶಿಬಿರವನ್ನು ಬಡ ಜನರು ಸದುಪಯೋಗ ಪಡೆದುಕೊಳ್ಳಬೇಕು, ಅಲ್ಲದೆ ಇಂತಹ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಹಳ್ಳಿಯಲ್ಲೂ ಹಮ್ಮಿಕೊಂಡ ಅಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸಮಾರಂಭದಲ್ಲಿ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ವೀಣಾಶಂಕರ್, ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್.ಚನ್ನಬಸವಯ್ಯ, ತಾ.ಪಂ.ಸದಸ್ಯರಾದ ಚೇತನಗಂಗಾಧರ್, ಲತಾ, ಟೌನ್ ಬ್ಯಾಂಕ್ ಅದ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಉಪಾದ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಪುರಸಭಾ ಸದಸ್ಯರಾದ ಸಿ.ಎಸ್.ರಮೇಶ್, ಕವಿತಾಚನ್ನಬಸವಯ್ಯ, ಮಹಾವೀರ್ಜೈನ್ನ ಡಾ.ಮುರುಳಿ, ವೈದ್ಯಾಧಿಕಾರಿ ಡಾ.ಶಿವಕುಮಾರ್, ಸಿ.ಡಿ.ಪಿ.ಓ ಅನೀಸ್ಖೈಸರ್ ಸೇರಿದಂತೆ ಮುಂತಾದವರಿದ್ದರು.
ಸಮಾರಂಭದಲ್ಲಿ ಇನ್ನರ್ವೀಲ್ ಕ್ಲಬ್ಮ ಚಂದ್ರಿಕಾಮೂತರ್ಿ ಪ್ರಾಥರ್ಿಸಿದರೆ, ವೀಣಾಶಂಕರ್ ಸ್ವಾಗತಿಸಿ, ಭವಾನಿಜಯರಾಂ ನಿರೂಪಿಸಿದರು.
ಹೇಗೆ ನಡೆದುಕೊಳ್ಳಬೇಕೆಂಬದನ್ನು ಅರಿತರೆ ಜಗಳ ಇಲ್ಲವಾಗುತ್ತದೆ
ಚಿಕ್ಕನಾಯಕನಹಳ್ಳಿ,ಮಾ.06 : ಜಗಳಮಾಡಿಕೊಂಡು ಜೀವನದಲ್ಲಿ ಅಶಾಂತಿ ಉಂಟುಮಾಡಿಕೊಳ್ಳುತ್ತಾ ನ್ಯಾಯಾಲಯಗಳಿಗೆ ಆಗಮಿಸಿ ಸುಮ್ಮನೆ ತಮ್ಮ ಸಮಯ ಹಾಗೂ ಹಣವನ್ನು ಹಾಳು ಮಾಡಿಕೊಳ್ಳುವುದನ್ನು ಬಿಟ್ಟು ಶಾಂತಿಯುತವಾಗಿ ಜೀವನ ನಡೆಸಿ, ತಮ್ಮ ಸುತ್ತಮುತ್ತಲಿನ ಸಮಾಜವನ್ನು ಪರಿವರ್ತನೆ ಮಾಡಿ ಎಂದು ನ್ಯಾಯಾಧೀಶರಾದ ನಿರ್ಮಲ ಹೇಳಿದರು.
ಪಟ್ಟಣದ ಡಿ.ವಿ.ಪಿ ಶಾಲೆಯ ಆವರಣದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ನ್ಯಾಯಾಲಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಂತಿಯುತ ಜೀವನ ನಡೆಸಲು ವಿದ್ಯಾವಂತರೇ ಆಗಬೇಕೆಂದೇನಿಲ್ಲ, ಯಾರೇ ಆಗಲಿ ನಾವು ಎಲ್ಲಿ, ಯಾವಾಗ, ಯಾವ ರೀತಿ ನಡೆದುಕೊಳ್ಳಬೇಕೆಂಬುದೇನು ಅರಿತವನಿಗೆ ಮುಂದೇನಾಗಬಹುದು ಎಂಬ ಗ್ರಹಿಸುವಿಕೆ ಮುಖ್ಯ ಎಂದ ಅವರು, ಇದರಿಂದಲೇ ಅರ್ಧ ಸಮಸ್ಯೆಗಳು ತಪ್ಪುತ್ತವೆ ಎಂದರು, ಮಕ್ಕಳು ತಮ್ಮ ವ್ತಕ್ತಿತ್ವ ವಿಕಾಸನ ಮಾಡಿಕೊಳ್ಳಬೇಕು ಅದಕ್ಕೆ ಪೋಷಕರು ಸಹಕರಿಸಬೇಕು ಮತ್ತು ಹಲವು ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ನ್ಯಾಯಾಧೀಶರಾದ ಎ.ಜಿ.ಶಿಲ್ಪ ಮಾತನಾಡಿ ನಾವು ಮಾಡಿದ ರೀತಿಯೇ ಸರಿ ಎಂಬ ಯೋಚನೆಗಳು ಮಕ್ಕಳಲ್ಲಿ ಹಲವು ಕೃತ್ಯಗಳನ್ನು ಎಸಗುತ್ತಾರೆ ಆ ಆಲೋಚನೆಯಲ್ಲಿ ತಪ್ಪುಗಳನ್ನು ಮಾಡುತ್ತಾರೆ ಆ ಮೂಲಕ ಅವರು ಬಾಲಪರಾಧಿಗಳಾಗುತ್ತಾರೆ ಇದರ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ಎಂದ ಅವರು ಬಾಲಪರಾಧಿಗಳಿಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯಗಳಿವೆ ಅಲ್ಲಿ ಅವರ ತಪ್ಪುಗಳನ್ನು ವಿಶೇಷವಾಗಿ ಚಚರ್ಿಸಿ ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಡಿ.ವಿ.ಪಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು ಮಾತನಾಡಿದರು. ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕ ಜಿ.ತಿಮ್ಮಯ್ಯ, ಶಿಕ್ಷಕ ನಾಗರಾಜು ಉಪಸ್ಥಿತರಿದ್ದರು
ಚಿಕ್ಕನಾಯಕನಹಳ್ಳಿ,ಮಾ08 : ತಾಲ್ಲೂಕು ಬೋರನಕಣಿವೆಯ ಸೇವಾ ಚೇತನದಲ್ಲಿ ಮಾ.14 ಮತ್ತು 15ರಂದು ವಿಶೇಷ ಘಟಕ ಮತ್ತು ಗಿರಿಜನ ಯೋಜನೆಯಡಿ ಯುವ ಕವಿಗಳಿಗೆ ಕಾವ್ಯ ಕಮ್ಮಟ ಏರ್ಪಡಿಸಲಾಗಿದೆ.
ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಬೋರನಕಣಿವೆ ಸೇವಾ ಚೇತನಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಈ ಕಾವ್ಯ ಕಮ್ಮಟದ ಉದ್ಘಾಟನಾ ಸಮಾರಂಭ ಮಾ.14ರ ಬೆಳಗ್ಗೆ 11ಕ್ಕೆ ಜರುಗಲಿದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ.ಮನುಬಳಿಗಾರ್ ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಕವಿ ಹೆಚ್.ಗೋವಿಂದಯ್ಯ ಮುಖ್ಯ ಅತಿಥಿಗಳಾಗಿ ಕೈಗಾರಿಕೋದ್ಯಮಿ ಬಿ.ಎ.ಚಿದಂಬರಯ್ಯ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಮದ್ಯಾಹ್ನ 2.30 ಗಂಟೆಗೆ ಕವಿ, ಪ್ರೊ.ಕೆ.ಬಿ.ಸಿದ್ದಯ್ಯ ಅವರೊಂದಿಗೆ ಸಂವಾದ ಸಂಜೆ 6ಕ್ಕೆ ಬಿಳಿಗೆರೆ ಕೃಷ್ಣಮೂತರ್ಿ ಅವರಿಂದ ತತ್ವಪದಗಳ ಗಾಯನ ಜರುಗಲಿದೆ, ಮಾ.15ರಂದು ಮದ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಬ ಜರುಗಲಿದ್ದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಮಾರೋಪದ ಅದ್ಯಕ್ಷತೆ ವಹಿಸಲಿದ್ದಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿದರ್ೇಶಕ ಕಾ.ತ.ಚಿಕ್ಕಣ್ಣ ಸಮಾರೋಪ ಭಾಷಣ ಮಾಡಲಿದ್ದಾರೆ, ರುದ್ರಪ್ಪ ಅನಗವಾಡಿ ಎಸ್.ಆರ್.ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಂಸತ್ತಿಗೂ ಹಾಗೂ ವಿದಾನಸಭೆಗೆ ಶೇ.50ರಷ್ಟು ಮಹಿಳೆಯರಿಗೆ ಮೀಸಲಿಡಬೇಕೆ
ಚಿಕ್ಕನಾಯಕನಹಳ್ಳಿ,ಮಾ.08 : ಸಂಸತ್ತಿಗೂ ಹಾಗೂ ವಿದಾನಸಭೆಗೆ ಶೇ.50ರಷ್ಟು ಮಹಿಳೆಯರಿಗೆ ಮೀಸಲಿಡಬೇಕೆಂದು ಜಿ.ಪಂ.ಸದಸ್ಯೆ ಲೋಹಿತಾಬಾಯಿ ಸಕರ್ಾರವನ್ನು ಒತ್ತಾಯಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸೃಜನ ಮಹಿಳಾ ಸಂಘದ ವತಿಯಿಂದ ನಡೆದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ ಪ್ರಪಂಚದಲ್ಲಿ ಶೇ.50ರಷ್ಟು ಮಹಿಳೆಯರು ಇರುವುದರಿಂದ ಸಕರ್ಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು, ಮಹಿಳೆಯರಿಗೆ ಸಮಾಜದಲ್ಲಿ ಸಕರ್ಾರಿ ಕೆಲಸ ಕುಟುಂಬ ಪಾಲನೆಯಲ್ಲಿ ಅವಕಾಶ ನೀಡಿದರೆ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಾಳೆ, ಮಹಿಳೆಯರು ಹಾಗೂ ಶಿಕ್ಷಿತರಾದರೆ ಮಾತ್ರ ಸಮಾಜ ಜಾಗೃತರಾಗಲು ಸಾಧ್ಯ, ಆ ಸಂದರ್ಭದಲ್ಲಿ ಅವರಿಗೆ ಅವಕಾಶಗಳು ತಾವಾಗೇ ಬರುತ್ತವೆ, ಸಕರ್ಾರ ಮಹಿಳೆಯರ ಬಗ್ಗೆ ಕಾನೂನುಗಳಿದ್ದರೂ ಸಮಾಜದಲ್ಲಿ ವರದಕ್ಷಿಣೆ ಕಿರುಕುಳ ಲೈಂಗಿಕ, ದೌರ್ಜನ್ಯಗಳು ನಡೆಯುತ್ತಲೇ ಇದೆ, ಇದರ ಬಗ್ಗೆ ಮಹಿಳೆಯರೆಲರಿಗೂ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎಂದರು, ಮಹಿಳಾ ದಿನಾಚರಣೆಯಂದು ಸಕರ್ಾರ ರಜಾ ಘೋಷಿಸುವಂತೆ ಒತ್ತಾಯಿಸಿದರು.
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ರಾತ್ರಿ ನಿಭರ್ೀತಿಯಿಂದ ಸಂಚರಿಸಿದಾಗ ದೇಶ ರಾಮ ರಾಜ್ಯವಾಗುವುದರಲ್ಲಿ ಅನುಮಾನವಿಲ್ಲ ಎಂಬುದನ್ನು ಗಾಂಧೀಜಿಯವರ ಕನಸು ಕಂಡಿದ್ದರು, ಮಹಿಳೆಯರು ಸಕರ್ಾರ ನೀಡುವ ಸವಲತ್ತುಗಳೂ ಸರಿಯಾಗಿ ಉಪಯೋಗಿಸಿಕೊಂಡು ಆಥರ್ಿಕವಾಗಿ ಮುಂದೆ ಬರಬೇಕು, ಸ್ತ್ರೀಯರ ಮೇಲಿನ ದೌರ್ಜನ್ಯ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿನ ದೌರ್ಜನ್ಯಗಳನ್ನು ತಡೆಯುವುದು ಸಮಾಜದ ಎಲ್ಲಾ ನಾಗರೀಕರ ಕರ್ತವ್ಯ ಎಂದರು.
ಸಮಾರಂಭಕ್ಕೂ ಮುನ್ನ ಆಂಜನೇಯಸ್ವಾಮಿ ದೇವಸ್ಥಾನದಿಂದ ಕನ್ನಡ ಸಂಘದವರೆಗೆ ಮೆರವಣಿಗೆ ನಡೆಸಲಾಯಿತು. ನೆಹರು ಸರ್ಕಲ್ನಲ್ಲಿ ಮಾನವ ಸರಪಳಿ ನಿಮರ್ಿಸಿ, ಜನರಲ್ಲಿ ಮಹಿಳೆಯರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ತಾ.ಪಂ.ಸಸದಸ್ಯರಾದ ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿದೇವಿ, ಪುರಸಭಾ ಸದಸ್ಯರಾದ ರೇಣುಕಗುರುಮೂತರ್ಿ, ರುಕ್ಮಿಣಮ್ಮ, ಶಿವಣ್ಣ, ಕವತಾಚನ್ನಬಸವಯ್ಯ, ಸುಮಿತ್ರಕಣ್ಣಯ್ಯ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ವೀಣಾಶಂಕರ್ ಮುಂತಾದವರಿದ್ದರು.
No comments:
Post a Comment