ಗೋಡೆಕೆರೆ ಮಠದಲ್ಲಿ ತತ್ವಪದ, ಜಾನಪದ ನೃತ್ಯ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ಡಿ.03 : ತಾಲೂಕಿನ ಗೋಡೆಕೆರೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯವರ ಲಕ್ಷದೀಪೋತ್ಸವದ ಅಂಗವಾಗಿ ಹಾಗೂ ಗೋಡೆಕೆರೆ ಸಂಸ್ಥಾನದ ಸ್ಥಿರ ಪಟ್ಟಾಧ್ಯಕ್ಷರಾಗಿದ್ದ ಲಿಂಗೈಕ್ಯ ಚಂದ್ರಶೇಖರ ಭಾರತಿಸ್ವಾಮಿಯವರ 11ನೇ ವರ್ಷದ ಪುಣ್ಯಾರಾಧನೆಯ ಸ್ಮರಣಾರ್ಥ ಜಿಲ್ಲಾ ಮಟ್ಟದ ಧಾಮರ್ಿಕ ತತ್ವ ಪದಗಳ ಹಾಗೂ ಜಾನಪದ ನೃತ್ಯ ಸ್ಪಧರ್ೆಗಳನ್ನು ಇದೇ 10ರಂದು ಗೋಡೆಕೆರೆಯಲ್ಲಿ ಏರ್ಪಡಿಸಲಾಗಿದೆ ಎಂದು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ಶಿವಯೋಗಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಧಾಮರ್ಿಕ ತತ್ವಪದಗಳಲ್ಲಿ ಸ್ಪಧರ್ೆಯಲ್ಲಿ ಭಾಗವಹಿಸಲು ವಯೋಮಿತಿ ಇರುವುದಿಲ್ಲ, ಯಾವ ತತ್ವಪದವನ್ನಾದರೂ ಹಾಡಬಹುದಾಗಿದ್ದು ಸ್ಪಧರ್ೆಗೆ 50ರೂ ಪ್ರವೇಶ ಶುಲ್ಕವಾಗಿದೆ, ಸ್ಪಧರ್ೆಯು 5ಜನರನ್ನು ಮೀರಿರಬಾರದು, ತಮ್ಮ ಸಲಕರಣೆಗಳನ್ನು ತಾವೇತರುವುದು, ವೇಷ ಭೂಷಣಗಳಿಗೆ ಆದ್ಯತೆ ನೀಡಲಾಗುವುದು, ಪ್ರತಿ ತಂಡಕ್ಕೆ ಸಮಯವನ್ನು ನಿಗದಿ ಪಡಿಸಿದ್ದು ನಗದು ರೂಪದಲ್ಲಿ ಬಹುಮಾನ ನೀಡಲಾಗುತ್ತದೆ, ಭಾಗವಹಿಸಿದ ಪ್ರತಿ ತಂಡಕ್ಕೂ ಪ್ರಶಸ್ತಿ ಪತ್ರ ನೀಡಲಾಗುವುದು ಹಾಗೂ ಜಾನಪದ ನೃತ್ಯ ಸ್ಪಧರ್ೆಯಲ್ಲಿ ದೇವರ ನಾಮಗಳಿಗೆ ಆದ್ಯತೆ ನೀಡಿದ್ದು ವೇಷ ಭೂಷಣಗಳಿಗೆ ಆದ್ಯತೆಯಿದೆ, ಜಾನಪದ ಗೀತೆ ಹಾಡುವವರನ್ನು ಸೇರಿ 5ಜನ ಮೀರಿರಬಾರದು, ನಗದು ರೂಪದಲ್ಲಿ ಬಹುಮಾನ ನೀಡಲಿದ್ದು ಸ್ಪಧರ್ೆಗೆ ಪ್ರವೇಶ ಶುಲ್ಕ 50ರೂ ಆಗಿದೆ ಎಂದು ತಿಳಿಸಿದ ಅವರು ಹೆಚ್ಚಿನ ಮಾಹಿತಿಗಾಗಿ ಮೊ. 9448709755, 96115436678, 9986904011 ಗೆ ಸಂಪಕರ್ಿಸಲು ಕೋರಿದ್ದಾರೆ.
ಚಿ.ನಾ.ಹಳ್ಳಿ ರೋಟರಿಗೆ 'ಬೆಸ್ಟ್ ಕ್ಲಬ್'ಆವಾಡರ್್
ಚಿಕ್ಕನಾಯಕನಹಳ್ಳಿ,ಡಿ.3: ಇಲ್ಲಿನ ರೋಟರಿ ಕ್ಲಬ್, ತುಮಕೂರಿನಲ್ಲಿ ನಡೆದ ಇಂಟರ್ ಸಿಟಿ ಜನರಲ್ ಫೋರಂ ಸಮಾವೇಶದಲ್ಲಿ ಬೆಸ್ಟ್ ಕ್ಲಬ್ ಆವಾಡರ್್'' ಪ್ರಶಸ್ತಿಗೆ ಭಾಜನವಾಗಿದೆ. ಇಲ್ಲಿನ ಕ್ಲಬ್ ನಡೆಸುವ ಸರಾಸರಿ ದಿನಕ್ಕೊಂದರಂತೆ ಸೇವಾ ಕಾರ್ಯಕ್ರಮವನ್ನು ನಡೆಸುತ್ತಿರುವುದನ್ನು ಗಮನಿಸಿ ಈ ಪ್ರಶಸ್ತಿ ಫಲಕವನ್ನು ನೀಡಲಾಗಿದೆ, ಸ್ಥಳೀಯ ಕ್ಲಬ್ನ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮತ್ತು ಕಾರ್ಯದಶರ್ಿ ಎಂ.ದೇವರಾಜ್ರವರನ್ನು ರೋಟರಿ ಗವರ್ನರ್ ಆರ್.ಬದರಿ ಪ್ರಸಾದ್ ಅಭಿನಂದಿಸಿದ್ದಾರೆ. ಜಿಲ್ಲಾ 3190ರ 87 ಕ್ಲಬ್ಗಳ ಪೈಕಿ ಇಲ್ಲಿನ ಕ್ಲಬ್ ಪ್ರಶಸ್ತಿಗೆ ಭಾಜನವಾಗಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
ತಾ|ಕೃಷಿ ಬ್ಯಾಂಕ್ನಲ್ಲಿ ಲಾಕರ್, ಚಿನ್ನಾಭರಣ ಸಾಲ ಸೌಲಭ್ಯಕ್ಕೆ ಚಾಲನೆ.
ಚಿಕ್ಕನಾಯಕನಹಳ್ಳಿ,ಡಿ.03 : ಇಲ್ಲಿನ ಪ್ರಾ.ಸ.ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ನಲ್ಲಿ ನೂತನ ಲಾಕರ್ ಸೌಲಭ್ಯ, ಚಿನ್ನಾಭರಣ ಸಾಲ ಮತ್ತು ಠೇವಣಿ ಸಂಗ್ರಹಣೆಗೆ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್ ಚಾಲನೆ ನೀಡಿದರು.
ತಾಲೂಕಿನ ಎಲ್ಲಾ ರೈತಬಾಂಧವರು, ಸಾಲಗಾರರು, ಷೇರುದಾರರು ಈ ಸೌಲಭ್ಯವನ್ನು ಪಡೆಯಲು ಬ್ಯಾಂಕಿನ ವ್ಯವಸ್ಥಾಪಕರಾದ ಡಿ.ಚಿತ್ತಪ್ಪ ಮಾನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಅಹಲ್ಯ ಸಾಂಭವಮೂತರ್ಿ, ನಿದರ್ೇಶಕರಾದ ಎಂ.ಬಿ.ನಾಗರಾಜ್, ಎಂ.ಬಿ.ಆನಂದಕುಮಾರ್, ಪರಮೇಶ್ವರ, ಎಚ್.ಎಂ.ಸುರೇಂದ್ರಯ್ಯ, ಯಳ್ಳೇನಹಳ್ಳಿ ಬಸವರಾಜು ಹಾಜರಿದ್ದರು.
No comments:
Post a Comment