ಗುರುವಿನ ಆಶೀವರ್ಾದ ಶಿಷ್ಯನಿಗೆ ಅವಶ್ಯಕ
ಚಿಕ್ಕನಾಯಕನಹಳ್ಳಿ:ಜ.15 : ಪ್ರತಿಯೊಬ್ಬರಿಗೂ ಗುರುವಿನ ಅವಶ್ಯಕತೆ ಇದೆ, ಗುರುವಿನ ಆಶೀವರ್ಾದವು ಶಿಷ್ಯರಿಗೆ ತಲುಪಿದಾಗ ಶಿಷ್ಯನು ತಾನು ಅಂದುಕೊಂಡಿರುವ ಗುರಿಗಿಂತ ಮಹತ್ವದಾದ ಸಾಧನೆ ಮಾಡುಬಲ್ಲನು ಎಂದು ತಿಪಟೂರು ಷಡಾಕ್ಷರಿ ಮಠದ ರುದ್ರಾಮುನಿಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಮ್ಮಡಿಹಳ್ಳಿ ಮಠದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜನ ದೇಶಿ ಕೇಂದ್ರ ಸ್ವಾಮೀಜಿಯವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಹಾಗೂ ಧಾಮರ್ಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಾವು ಮಾಡುವ ಕೆಲಸ ಶಾಶ್ವತವಾಗಿರಬೇಕು, ಎಲ್ಲಾ ಮಠಧೀಶ್ವರರು ಓಗ್ಗೂಡಿ ಸಮಾಜವನ್ನು ಮುನ್ನುಡೆಸುವ ಜವಾಬ್ದಾರಿ ಇದೆ, ಲಿಂಗೈಕ್ಯ ಮಲ್ಲಿಕಾರ್ಜನದೇಶಿಕೇಂದ್ರ ಸ್ವಾಮೀಜಿಯವರ ಆಶೀವರ್ಾದ ನಮ್ಮೆಲ್ಲರಲ್ಲೂ ಇದೆ, ಸಜ್ಜನರಿಗೆಯ ಬದುಕನ್ನು ಸವೆಸಿದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜನ ದೇಶೀಕೇಂದ್ರ ಸ್ವಾಮೀಜಿಯವರ ಬದುಕು ನಮಗೆ ದಾರಿದೀಪ ಎಂದರಲ್ಲದೆ ಮಠ ಮಾನ್ಯರು ಸಮಾಜಕ್ಕಾಗಿ, ಜನಸಾಮಾನ್ಯರ ಸೇವೆಗಾಗಿ ಶ್ರಮಿಸಲು ತಮ್ಮ ಆಸೆಗಳನ್ನೆಲ್ಲ ತೊರೆದು ಬರುತ್ತಾರೆ ಅವರ ಬಗ್ಗೆ ಕೀಳರಿಮೆ ತೋರುವುದು ಸರಿಯಲ್ಲ ಎಂದು ಹೇಳಿದರು,
ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜನ ದೇಶೀಕೇಂದ್ರ ಸ್ವಾಮೀಜಿ ನಲವತ್ತು ವರ್ಷಗಳ ಹಿಂದೆ ಭಕ್ತರ ಮನೆಗಳಿಗೆ ಬಸ್ಸಿನಲ್ಲಿ ತೆರಳುತ್ತಿದ್ದರು. ಸ್ವಾಮೀಜಿಯವರಿಗೆ ಅಪಾರ ಜ್ಞಾನಭಂಡಾರವಿದ್ದು ತಮ್ಮ ಶಿಷ್ಯರಿಗೆ ಉತ್ತಮ ದಾರಿ ನೀಡುತ್ತಿದ್ದರು. ನಾಡಿನ ಗುರುಹಿರಿಯರಿಗೆ ಹಾಗೂ ಮಠಾಧೀಶ್ವರರಿಗೆ ಮಾದರಿಯಾಗಿದ್ದರು, ಸ್ವಾಮೀಜಿಗಳ ಗದ್ದಿಗೆಯಲ್ಲಿ ದೇವಾಲಯ ನಿಮರ್ಿಸಲು ಒಂದು ಕೋಟಿ ರೂ ಹಣ ವೆಚ್ಚವಾಗಲಿದ್ದು. ಭಕ್ತಾದಿಗಳ ಸಹಕಾರ ಅಗತ್ಯ ಸ್ವಾಮಿ ವಿವೇಕಾನಂದರ 150ನೇ ವರ್ಷಚಾರಣೆಯಲ್ಲಿ ಯುವ ಪೀಳಿಗೆಗೆ ಹೋರಾಟದ ಚಿಂತನೆ ಹಾಗೂ ಮಾರ್ಗದರ್ಶನ ಅಗತ್ಯ ಆದ್ದರಿಂದ ಯುವಕರು ನಿತ್ಯ ಸ್ವಾಮಿವಿವೇಕಾನಂದರ ವಾಣಿಯನ್ನು ಪ್ರತಿದಿನ ಓದಲು ಸಲಹೆ ನೀಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜನ ದೇಶೀಕೇಂದ್ರ ಸ್ವಾಮೀಜಿಯವರು ಮಠಕ್ಕೆ ಬರುವ ಭಕ್ತರನ್ನು ಬಡವ ಬಲಿಗ ಎಂಬ ಬಾವನೆ ತೋರಿಸದೆ ಎಲ್ಲರು ಒಂದೇ ಎನ್ನುವ ಭಾವನೆ ಹೊಂದಿದ್ದರು. ನಾಡಿನ ಉದ್ದಗಲಕ್ಕೂ ಸಂಚರಿಸಿ ದೇವಾಲಯಗಳ ಜೀಣರ್ೋಧ್ಧಾರ ಕಳಸ ಪ್ರತಿಷ್ಠಾಪನೆ ನೂತನ ದೇವಾಲಯಗಳ ಸ್ಥಾಪನೆ ಮಾಡಲು ಶ್ರೀಗಳನ್ನು ಆಹ್ವಾನಿಸುತ್ತಿದ್ದರು. ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಯ ಹೋರಾಟಕ್ಕೆ ಸಹಕರಿಸಿದ ಮಠಧೀಶ್ವರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ಮಂಜೂರಾತಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆಯೂ ಹಾಗೂ ಭಾರಿ ನೀರಾವರಿ ಸಚಿವ ಬಸವರಾಜು ಬೊಮ್ಮಯಿ ಹಾಗೂ ನೀರಾವರಿ ತಜ್ಞ ಪರಮಶಿವಯ್ಯ ನವರಿಗೆ ಮಾಜಿ ಶಾಸಕರು ಬೆಂಬಲ ನೀಡಿರುವುದರಿಂದ ಯೋಜನೆ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಗೋಡೇಕೆರೆಯ ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಎಂ.ಎಸ್.ಎಲ್. ಅಧ್ಯಕ್ಷ ನಂದೀಶ್, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಜಿ. ಪಂ.ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ ಹೆಚ್.ಬಿ. ಪಂಚಾಕ್ಷರಯ್ಯ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ನ್.ಶಿವಪ್ರಕಾಶ್ ಕೆ.ಜಿ.ಪಿ. ಮುಖಂಡ ಲೋಕೇಶ್ವರ, ಮಸಾಲೆ ಜಯರಾಂ ಕೆ.ಮಂಜು ತಾ.ಪಂ.ಅಧ್ಯಕ್ಷ ಎಂ.ಎಂ. ಜಗದೀಶ್, ಮಾಜಿ ತಾ.ಪಂ.ಅಧ್ಯಕ್ಷ ಎಚ್.ಎಂ.ಸುರೇಂದ್ರಯ್ಯ, ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಬಾಲಗಂಗಾಧರನಾಥಸ್ವಾಮಿಯವರಿಗೆ ಶೋಕ ಸಂತಾಪ
aPÀÌ£ÁAiÀÄPÀ£ÀºÀ½î vÁ®ÆèPÀÄ MPÀÌ°UÀgÀ £ËPÀgÀgÀ
ªÉâPÉ ºÁUÀÆ MPÀÌ°UÀ ¸ÀªÀÄÄzÁAiÀÄ D¢ZÀÄAZÀ£ÀVj ªÀÄoÀzÀ ²ªÉÊPÀå ²æÃ
¨Á®UÀAUÁzsÀgÀ£ÁxÀ¸Áé«ÄAiÀĪÀjUÉ ±ÀæzÁÝAd° C¦ð¹vÀÄ.
|
ಚಿಕ್ಕನಾಯಕನಹಳ್ಳಿ,ಜ.15 : ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥಸ್ವಾಮಿಯವರು ಶಿವೈಕ್ಯರಾಗಿದ್ದು ಅವರಿಗೆ ಶಾಸಕ ಸಿ.ಬಿ.ಸುರೇಶ್ಬಾಬು, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಎಸ್.ನಟರಾಜು, ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಡಾ.ಎಸ್.ಜಿ.ಪರಮೇಶ್ವರಪ್ಪ, ಕಾಂಗ್ರೆಸ್ ಮುಖಂಡರಾದ ಎಚ್.ಬಿ.ಎಸ್.ನಾರಾಯಣಗೌಡ, ಕೆ.ಜಿ.ಕೃಷ್ಣೆಗೌಡ ಶೋಕ ವ್ಯಕ್ತಪಡಿಸಿದ್ದಾರೆ.
No comments:
Post a Comment