ಯುವಶಕ್ತಿಗೆ ಆದರ್ಶ ಪುರುಷ ಸ್ವಾಮಿವಿವೇಕಾನಂದ
ಚಿಕ್ಕನಾಯಕನಹಳ್ಳಿ,ಜ.17 : ಯುವಶಕ್ತಿಗೆ ಆದರ್ಶ ಪುರುಷನಾಗಿ ಸಾದನೆಯ ಛಲವನ್ನು ಮೈಗೂಡಿಸಿಕೊಂಡು ಯುವಕರಿಗೆ ಗೆಲುವಿನ ಉತ್ಸಾಹ ತುಂಬುತ್ತಿದ್ದ ಸ್ವಾಮಿವಿವೇಕಾನಂದರಂತಹ ಆದರ್ಶ ಪುರಷನ ಅವಶ್ಯಕತೆ ಇಂದಿಗೂ ಅಗತ್ಯವಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ವತಿಯಿಂದ ವಿವೇಕಾನಂದರ 150ನೇ ಜನ್ಮದಿನಚಾರಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿವೇಕಾನಂದರು ತಮ್ಮ ಭಾಷಣಗಳಲ್ಲಿ ಯುವಕರಿಗೆ ಸ್ಪೂತರ್ಿ ತುಂಬಿ ದೇಶವನ್ನು ಸದೃಡವಾಗಿ ಕಟ್ಟುತ್ತಿದ್ದರು ಎಂದರಲ್ಲದೆ, ಇತ್ತೀಚೆಗೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ, ಪಾಕಿಸ್ತಾನದ ಸೈನ್ಯದಿಂದ ನಡೆಯುತ್ತಿರುವ ಕೃತ್ಯಗಳನ್ನು ತಡೆಗಟ್ಟಲು ವಿವೇಕಾನಂದರ ವಾಣಿಯನ್ನು ಯುವಕರು ಅಥರ್ೈಸಿಕೊಳ್ಳಬೇಕಿದೆ ಎಂದರಲ್ಲದೆ, ಶಿಸ್ತು, ಸಂಯಮದ ಭಾವನೆಯನ್ನು ರೂಪಿಸುವುದು, ದೇಶಭಕ್ತಿ ಮೂಡಿಸುವುದರ ಜೊತೆಗೆ ಸಮಾಜ ತಿದ್ದುವಲ್ಲಿ ಯುವಶಕ್ತಿ ಮುಂದಾಗಬೇಕು ಎಂದರು. ಮಹಿಳೆ ವಿದ್ಯಾವಂತರಾದರೆ ಸಮಾಜ ತಿದ್ದುವಕಾರ್ಯ ನಡೆಯುತ್ತದೆ ಎಂದರು.
ಕಳೆದ ಬಾರಿ ನಡೆದ ಉದ್ಯೋಗಮೇಳದಲ್ಲಿ ತಾಲ್ಲೂಕಿನ 2600 ವಿದ್ಯಾವಂತರಿಗೆ ಉದ್ಯೋಗ ದೊರಕಿದ್ದು, ಈ ಬಾರಿಯೂ ಫೆ.16ರಂದು ಉದ್ಯೋಗ ಮೇಳ ನಡೆಯಲಿದೆ ನಿರುದ್ಯೋಗಿ ಯುವಕರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಅಭಾವಿಪ ಜಿಲ್ಲಾ ಸಂಘಟನಾ ಕಾರ್ಯದಶರ್ಿ ವೆಂಕಟೇಶ್ ಉಪನ್ಯಾಸ ನೀಡಿ, ಸಿಡಿಲ ಸಂತನಾಗಿ ಧಾಮರ್ಿಕ ಗುರುವಾಗಿ ಯುವಶಕ್ತಿಯನ್ನು ಎಚ್ಚರಗೊಳಿಸಿದವರು ವಿವೇಕಾನಂದರು, ಸಾಮಾನ್ಯ ಸನ್ಯಾಸಿಯಾಗಿ ಅಮೇರಿಕದ ಚಿಕಾಗೋದಲ್ಲಿ ನಡೆದ ಧಾಮರ್ಿಕ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಪಂಚವೇ ಮೆಚ್ಚುವಂತೆ ಬದಲಾದ ವಿವೇಕಾನಂದರು ಭಾರತ ದೇಶದ ಆಸ್ತಿ, ಇವರು ಇತಿಹಾಸ ಬದಲಾವಣೆ ಮಾಡಿದ ಸಂತ ಎಂದರಲ್ಲದೆ ವಿವೇಕಾನಂದರ ವಾಣಿಯಿಂದ ಸ್ವಾತಂತ್ರ ಹೋರಾಟಗಾರರಿಗೆ ಪ್ರೇರಣೆಯಾಗಿ ಸ್ವಾತಂತ್ರ್ಯಕ್ಕೆ ಧುಮುಕಿದರು, ಅಣ್ಣ ಹಜಾರೆರವರು ಭ್ರಷ್ಠಾಚಾರದ ವಿರುದ್ದ ಹೋರಾಟ ಮಾಡಿದರು, ವಿವೇಕಾನಂದರು ಯುವಶಕ್ತಿಯನ್ನು ಕಬ್ಬಿಣದ ಮಾಂಸಖಂಡ ಹಾಗೂ ಉಕ್ಕಿನ ವ್ಯಕ್ತಿಗಳಾಗುವಂತೆ ಕರೆ ನೀಡಿದ್ದರು.
ಎ.ಬಿ.ವಿ.ಪಿ. ತಾಲ್ಲೂಕು ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಯುವಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದ ವಿವೇಕಾನಂದರು ದೇಶದ ಅಭಿವೃದ್ದಿಯನ್ನು ಅವರಿಂದ ಮನಗಂಡಿದ್ದರು, ವಿವೇಕಾನಂದರು ಹೇಳುವಂತೆ ನಿಂದಿಸುವವರು ಇದ್ದರೆ ಅಭಿವೃದ್ದಿ ಸಾಧ್ಯ ಎಂಬ ಮಾತು ನಿಜವಾದದ್ದು ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ 1863ರಲ್ಲಿ ಜನಿಸಿದ ವಿವೇಕಾನಂದರು ತಮ್ಮ 39 ವರ್ಷದ ಅಲ್ಪಾವದಿಯಲ್ಲೇ ಮಹತ್ತರ ಸಾದನೆ ಮಾಡಿ ಇಂದಿಗೂ ಯುವಶಕ್ತಿಗೆ ಮಾದರಿಯಾಗಿರುವ ವಿವೇಕಾನಂದರ ವಿಚಾರಧಾರೆ ಉತ್ತಮವಾದುದು, ರಾಮಕೃಷ್ಣ ಪರಮಹಂಸರ ಶಿಷ್ಯನಾಗಿ ಉತ್ತಮ ವ್ಯಕ್ತಿಯಾಗಿ ಬದುಕಿದರು ಎಂದರು.
ಸಮಾರಂಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ತಾ.ಎ.ಬಿ.ವಿ.ಪಿ. ಅಧ್ಯಕ್ಷ ನಂದೀಶ್ಬಟ್ಲೇರಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಭಾವಿಪ ಕಾರ್ಯಕರ್ತರಾದ ರವಿ ಸ್ವಾಗತಿಸಿದರೆ, ನಗರ ಕಾರ್ಯದಶರ್ಿ ದಿಲೀಪ್ ನಿರೂಪಿಸಿದರೆ, ಲಕ್ಷ್ಮೀಶ್ ವಂದಿಸಿದರು.
ಸತ್ಯಗಣಪತಿ ಸಾರ್ವಜನಿಕ ತರುಣರ ಸಂಘದ ಸುವರ್ಣ ಸಂಚಿಕೆಯನ್ನು ಬಿಡುಗಡೆ
aPÀÌ£ÁAiÀÄPÀ£ÀºÀ½îAiÀÄ ²æà ¸ÀvÀåUÀt¥Àw ¸ÁªÀðd¤PÀgÀ vÀgÀÄtgÀ
¸ÀAWÀzÀ LªÀvÀÛ£Éà ªÀµÁðZÀgÀuÉ ¸ÀªÀiÁgÀA¨sÀzÀ°è ¸ÀAWÀzÀ K½UÉUÉ zÀÄrzÀ ¸ÀAWÀzÀ
PÁAiÀÄðzÀ²ð ¹.PÉ.«±ÉéñÀégÀAiÀÄå, gÀvÀߪÀÄ䧸ÀªÀAiÀÄå, ¹.§¸ÀªÀgÁdÄgÀªÀgÀ£ÀÄß
¸À£Á䤸À¯Á¬ÄvÀÄ. F ¸ÀAzÀ¨sÀðzÀ°è ±Á¸ÀPÀ ¹.©.¸ÀÄgÉñï¨Á§Ä, ¥ÀÄgÀ¸À¨sÁzsÀåPÀë
¹.PÉ.PÀȵÀÚªÀÄÆwð, ¸ÁÜ¬Ä ¸À«Äw CzsÀåPÀë JA.J£ï.¸ÀÄgÉñï, mË£ï ¨ÁåAPï CzsÀåPÀë
¹.J¸ï.gÀªÉÄñï, J.¦.JA.¹ ¸ÀzÀ¸Àå ¹.JªÀiï.gÀAUÀ¸Áé«Ä ºÁdjzÀÝgÀÄ.
ಚಿಕ್ಕನಾಯಕನಹಳ್ಳಿ,ಜ.17 : ಶ್ರೀ ಸತ್ಯಗಣಪತಿ ಸಾರ್ವಜನಿಕ ತರುಣರ ಸಂಘದ ವತಿಯಿಂದ 1962 ರಲ್ಲಿ ಪ್ರಾರಂಭವಾದ ಸಂಘ 50 ವರ್ಷಗಳನ್ನು ಪೂರೈಸಿದ ಸವಿ ನೆನಪಿಗಾಗಿ ಸಂಘ ಸುವರ್ಣ ಸಂಚಿಕೆಯನ್ನು ಬಿಡುಗಡೆ ಮಾಡಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಿ ಮಾತನಾಡಿ, ಕಳೆದ 50 ವರ್ಷಗಳಿಂದ ವಿಘ್ನೇಶ್ವರನನ್ನು ಪ್ರತಿ ವರ್ಷವೂ ಗಣೇಶ ಚತುಥರ್ಿಯಂದು ಪ್ರತಿಷ್ಟಾಪಿಸಿ 20 ದಿನಗಳ ವರೆಗೆ ನಡೆಯುತ್ತಿದ್ದ ಘತವೈಭವವನ್ನು ಸ್ಮರಿಸಿಕೊಂಡರಲ್ಲದೆ, ಈ ಕಾರ್ಯಕ್ಕೆ ದುಡಿದ 50 ಜನ ಹಿರಿಯ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಮ್ಮದಾನಪ್ಪ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸುವರ್ಣ ಸಂಚಿಕೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಬಿಡುಗಡೆಮಾಡಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷರಾದ ಸಿ.ಕೆ.ಕೃಷ್ಣಮೂತರ್ಿ, ಉಪಾಧ್ಯಕ್ಷೆ ಗಾಯಿತ್ರದೇವಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಸುರೇಶ್. ಪುರಸಭೆ ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಎಲ್.ದೊಡ್ಡಯ್ಯ, ಸಿ.ಟಿ.ವರದರಾಜು, ಮಹಮದ್ ಖಲಂದರ್ ಸಂಸ್ಥೆಯ ಕಾರ್ಯದಶರ್ಿ ಸಿ.ಟಿ.ವಿಶ್ವೇಶ್ವರಯ್ಯ ಸದಸ್ಯರಾದ ಚಂದ್ರಶೇಖರ ಗುಪ್ತ, ರಾಮಯ್ಯ, ಆನಂದ್, ಹಾಜರಿದ್ದರು.
ಸಮಾರಂಭದಲ್ಲಿ ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿ, ಸಿ.ಎಸ್.ನಟರಾಜ್ ನಿರೂಪಿಸಿದರೆ, ಕಣ್ಣಯ್ಯ ವಂದಿಸಿದರು.
No comments:
Post a Comment