Wednesday, August 27, 2014



ಪುರಸಭಾ ಸದಸ್ಯರಿಗೆ ಮಾತುಗಾರಿಕೆಯ  ಬಗ್ಗೆ ಪಾಠ ಮಾಡಿದ ಜಿಲ್ಲಾಧಿಕಾರಿ.
ಚಿಕ್ಕನಾಯಕನಹಳ್ಳಿ,ಆ.27: ಮಾತು ಮಾಣಿಕ್ಯ, ಮಾತೇ ಮೃತ್ಯು, ಎಂಬ ಭಾವರ್ಥವಿರುವ ಸರ್ವಜ್ಞನ ತ್ರಿಪದಿಯನ್ನು  ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ನಿರರ್ಗಳವಾಗಿ ಹೇಳುತ್ತಾ,  ಮೇಷ್ಟ್ರು ರೀತಿ ಪಾಠ ಮಾಡುತ್ತಿದ್ದರೆ ಸಭೆಯಲ್ಲಿದ್ದ ಪುರಸಭಾ ಸದಸ್ಯರು  ಕಮಕ್ ಕಿಮಿಕ್ ಎನ್ನದೆ, ಶ್ರದ್ದಾಭಕ್ತಿಯಿಂದ ಕೇಳುವ ವಿದ್ಯಾಥರ್ಿಗಳಂತೆ ಕೇಳುತ್ತಿದ್ದ ಸನ್ನಿವೇಶ ನೋಡಿದರೆ, ಇವರೇನಾ ನಮ್ಮ ಕೌನ್ಸಿಲರ್ಗಳು...! ಸಾಮಾನ್ಯ ಸಭೆಯಲ್ಲಿ ಆರ್ಭಟಿಸುತ್ತಿದ್ದ ಪುರ ಪಿತೃಗಳು...? ಎಂಬಂತ್ತಿತ್ತು ಆ ದೃಶ್ಯ. 
ಇದು ನಡೆದಿದ್ದು ಜಿಲ್ಲಾಧಿಕಾರಿ ಸತ್ಯಮೂತರ್ಿಯವರು ದಿಢೀರನೆ ಇಲ್ಲಿನ ಪುರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುರಸಭಾ ನೌಕರರು ಹಾಗೂ ಕೌನ್ಸಿಲರ್ಗಳೊಂದಿಗೆ ಪಟ್ಟಣದ ಸಮಸ್ಯೆಗಳ ಬಗ್ಗೆ ಚಚರ್ೆಸುವ ಸಂದರ್ಭದಲ್ಲಿ ಮೇಲಿನ ಸನ್ನಿವೇಶ ನಿಮರ್ಾಣವಾಗಿತ್ತು.
ಜಿಲ್ಲಾಧಿಕಾರಿಗಳು ಆರಂಭದಲ್ಲೇ ಪುರಸಭಾ ಮುಖ್ಯಾಧಿಕಾರಿಗಳನ್ನು ಉದ್ದೇಶಿಸಿ, ಯಾರೋ ಇಲ್ಲಿನ  ವಿರೋಧ ಪಕ್ಷದ ಸದಸ್ಯರು ಜಾಸ್ತಿ ಗಲಾಟೆ ಮಾಡ್ತಾರೆ ಅಂತ  ಪತ್ರಿಕೆಗಳಲ್ಲಿ ಬರುತ್ತಲ್ಲಾ ಅವರ್ಯಾರು ಎಂದು ಕೇಳುತ್ತಿದ್ದ ಸಮಯಕ್ಕೆ ಸರಿಯಾಗಿ ಕಾಂಗ್ರೆಸ್ ಪಕ್ಷದ ಸಿ.ಪಿ.ಮಹೇಶ್ ಸಭೆಗೆ ಆಗಮಿಸಿದರು, ತಕ್ಷಣವೇ ಪಕ್ಕದಲ್ಲಿದ್ದ ಸದಸ್ಯರು ಇವರೇ ಸಾರ್, ಈಗ ನೀವು ಕೇಳಿದ್ದು ಎಂದರು. ತಕ್ಷಣವೇ ಮಹೇಶ್ ತಮ್ಮ ಪರಿಚಯ ಮಾಡಿಕೊಂಡರು ನಂತರ ಕಡತ ಪರಿಶೀಲನೆಗೆ ತೊಡಗಿದ ಡಿ.ಸಿ.ಯವರು,  ಈ ಪುರಸಭೆಗೆ ಸಂಬಂಧಿಸಿದಂತೆ ನನ್ನ ಕಛೇರಿಯಲ್ಲಿ ಯಾವ ಯಾವ ಫೈಲ್ಗಳು ಬಾಕಿ ಇವೆ ಎಂದು ಪ್ರಶ್ನೆಸಿದರು, ಮುಖ್ಯಾಧಿಕಾರಿಗಳು ಈ ಬಗ್ಗೆ ಉತ್ತರಿಸಲು ಮುಂದಾದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸದಸ್ಯರು ಬೇರೆ ವಿಷಯಗಳ ಬಗ್ಗೆ ಡಿ.ಸಿ.ಯವರನ್ನು ಕೇಳಲು ಮುಂದಾದರು, ತಕ್ಷಣವೇ ಡಿ.ಸಿ. ಮಾತನಾಡಿ, ನನ್ನನ್ನು ವಿಷಯಾಂತರಗೊಳಿಸಬೇಡಿ, ನಾನು ಕೇಳುವ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದಾರೆ, ಸ್ವಲ್ಪ ಸಮಾಧಾನವಾಗಿರಿ ಎಂದರು.
ಫೈಲ್ಗಳ ವಿಷಯ ಇನ್ನೂ ಮುಗಿದೆ ಇರಲಿಲ್ಲ ಮತ್ತೋರ್ವ ಸದಸ್ಯರು ಮಾತನಾಡಲು ಮುಂದಾದರು ಈ ಸಂದರ್ಭದಲ್ಲಿ ಸ್ವಲ್ಪ ಅಸಮಧಾನದಂತೆ ಕಂಡ ಡಿ.ಸಿ. ತಕ್ಷಣವೇ ಮಾತಿಗೆ ಸಂಬಂಧಿಸಿದ ಸರ್ವಜ್ಞರ ವಚನವನ್ನು ಪಠಿಸಿ ಅದರ ಅರ್ಥವನ್ನು ತಿಳಿಸಿ ಸರಳವಾಗಿ, ಮೃದುವಾಗಿ, ಸೌಜನ್ಯದಿಂದ ಮಾತನಾಡ ಬೇಕು, ನೀವು ಹೇಗಂದರೆ ಹಾಗೆ ಮಾತನಾಡಿದರೆ ಅದು ಆರ್ಭಟವಾಗುತ್ತದೆ ಹೊರತು ಸಭಾ ಮಯರ್ಾದೆ ಎನಿಸಿಕೊಳ್ಳುವುದಿಲ್ಲ  ಎಂದು ಪಾಠ ಶುರು ಮಾಡಿದ ತಕ್ಷಣವೇ ಸದಸ್ಯರು ಶಾಂತರಾದರು, ಪಾಠದ ಕೊನೆಯಲ್ಲಿ ಪಕ್ಕದಲ್ಲಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು ರವರ ಕಡೆ ತಿರುಗಿ ನಾನು ಹೇಳಿದ್ದು ಕರೆಕ್ಟಾ ಎಂದು ಕೇಳುವ ಮೂಲಕ ತಮ್ಮ ಪಾಠಕ್ಕೆ ಶಾಸಕರ ಅನುಮೋದನೆಯನ್ನು ಪಡೆದಿದ್ದು ಇಡೀ ಸಭೆ ಒಂದು ರೀತಿ ತರಗತಿ ಕೋಣೆಯಂತಹ ವಾತಾವರಣವನ್ನು ನಿಮರ್ಿಸಿತು.
ಎರಡು ದಿನಗಳೊಳಗೆ ಫೈಲ್ ಕ್ಲಿಯರ್ ಮಾಡಿಸಿಕೊಳ್ಳಿ:  ಪಟ್ಟಣದ ಸ್ವಚ್ಚತೆಗೆ ಸಂಬಂಧಿಸಿದಂತೆ ಹೊರಗುತ್ತಿಗೆ ನೇಮಕದ ವಿಷಯ, ಘನತ್ಯಾಜ್ಯ ನಿರ್ವಹಣೆಯ ವಾಹನಗಳಿಗೆ ಹೊರಗುತ್ತಿಗೆಯ ಮೇಲೆ ಚಾಲಕರನ್ನು ನೇಮಿಸಿಕೊಳ್ಳುವ ಕಡತಗಳು ತಮ್ಮ ಕಛೇರಿಯಲ್ಲಿ ಬಾಕಿ ಇವೆ ಎಂದು ಪರಿಸರ ಇಂಜಿನಿಯರ್ ತಿಳಿಸಿದರೆ,  ಯು.ಜಿ.ಡಿ.ಗೆ ಸಂಬಂಧಿಸಿದ ವಿಷಯವನ್ನು ಸದಸ್ಯ ಸಿ.ಎಸ್.ರಮೇಶ್ ಡಿ.ಸಿ.ಯವರ ಗಮನಕ್ಕೆ ತಂದರು,  ಆಶ್ರಯ ಸೈಟ್ಗಳ  ನಿಮರ್ಾಣಕ್ಕೆ ಸಂಬಂಧಿಸಿದ ವಿಷಯವನ್ನು ಸಿ.ಎಂ.ರಂಗಸ್ವಾಮಿ ಪ್ರಸ್ತಾಪಿಸಿದರು,   ಕಾಡೇನಹಳ್ಳಿಯ ಬಳಿ ಇರುವ ಜಮೀನನ್ನು ಕೆ.ಎಸ್.ಆರ್.ಟಿ.ಸಿ. ಡಿಪೋಕ್ಕೆ ಮಂಜೂರು ಮಾಡುವ ವಿಷಯದ ಬಗ್ಗೆ  ಸಿ.ಡಿ.ಚಂದ್ರಶೇಖರ್ ಡಿ.ಸಿ.ಯವರ ಗಮನ ಸೆಳೆದರು, ಅಲ್ಲದೆ ವಗರ್ಾವಣೆಗೊಂಡು ಆರು ತಿಂಗಳಾದರೂ  ಇಂಜಿನಿಯರ್ ಇನ್ನೂ ಚಾಚರ್್ ನೀಡದಿರುವ ಬಗ್ಗೆ ಸಿ.ಪಿ.ಮಹೇಶ್ ಮಾತನಾಡಿದರು    ಈ ಎಲ್ಲಾ ವಿಷಯಗಳನ್ನು ಶಾಂತ ಚಿತ್ತದಿಂದ ಆಲಿಸಿದ ಡಿ.ಸಿ., ಬಹುತೇಕ ವಿಷಯಗಳಿಗೆ ಸಂಬಂಧಿಸಿದ ಫೈಲ್ಗಳನ್ನು ತಕ್ಷಣವೇ ಸಿದ್ದ ಮಾಡಿಕೊಂಡಿರುವ ಬಗ್ಗೆ ತಮ್ಮ ಕಛೇರಿಯ ಆಪ್ತ ಶಾಖೆಗೆ ದೂರವಾಣಿಯ ಮೂಲಕ  ತಿಳಿಸಿದರು,  ಇನ್ನೂ ಯಾವುದಾದರೂ ಫೈಲ್ಗಳಿದ್ದರೆ ಇನ್ನೆರಡು ದಿನಗಳೊಂದಿಗೆ ಖುದ್ದು  ಕಛೇರಿಗೆ ಬಂದು ಫೈಲ್ಗಳನ್ನು ಕ್ಲಿಯರ್ ಮಾಡಿಸಿಕೊಳ್ಳುವಂತೆ ಡಿ.ಸಿ.ಸತ್ಯಮೂತರ್ಿ ಸೂಚಿಸಿದರು.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು, ಪುರಸಭಾ ಅಧ್ಯಕ್ಷೆ ಪುಷ್ಪ ಟಿ.ರಾಮಯ್ಯ, ಉಪಾಧ್ಯಕ್ಷೆ ನೇತ್ರಾವತಿ ಶಿವಕುಮಾರ್,  ಸದಸ್ಯರುಗಳಾದ ರಾಜಶೇಖರ್,  ಮಹಮದ್ ಖಲಂದರ್, ಮಲ್ಲೇಶ್, ಪ್ರೇಮಾ ದೇವರಾಜು, ರೂಪಾ, ರೇಣುಕಾ ಸತೀಶ್, ಗೀತಾ ರಮೇಶ್, ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ ಶೆಟ್ಟಿ ಸೇರಿದಂತೆ ಪುರಸಭಾ ಸಿಬ್ಬಂದಿ ಸಭೆಯಲ್ಲಿದ್ದರು. 


ಅಪ್ರಪ್ತಾ ಯುವಕರು ಓಡಿಸುತ್ತಿದ್ದ ಬೈಕ್ಗಳು ಪೊಲೀಸರ ವಶಕ್ಕೆ.
ಚಿಕ್ಕನಾಯಕನಹಳ್ಳಿ,ಆ.27 : ಪಟ್ಟಣದಲ್ಲಿ ಅಪ್ರಪ್ತಾ ಯುವಕರು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಮೂವತ್ತು ಬೈಕ್ಗಳನ್ನು ಸಿ.ಪಿ.ಐ. ಜಯಕುಮಾರ್ ನೇತೃತ್ವದ ತಂಡ ತಮ್ಮ ವಶಕ್ಕೆ ಪಡೆದುಕೊಂಡಿದೆ.
 ಪೋಲಿಸರು ಬುಧವಾರ ಮುಂಜಾನೆ 6 ಗಂಟೆಯಿಂದಲೇ ತಮ್ಮ ಕಾಯರ್ಾಚರಣೆ ಪ್ರಾರಂಭಿಸಿದ ಪೊಲೀಸರು ಅಪ್ರಾಪ್ತ ಯುವಕರು ಹಾಗೂ  ಪರವಾನಿಗೆ ಇಲ್ಲದೆ  ದ್ವಿಚಕ್ರ ವಾಹನದಲ್ಲಿ ಮನೆಪಾಠಕ್ಕೆ ತೆರಳುವ ವಿದ್ಯಾಥರ್ಿಗಳ ಬೈಕ್ಗಳನ್ನು  ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಪೋಲಿಸರು ಪಟ್ಟಣದ ನೆಹರು ಸರ್ಕಲ್, ಹೊಸ ಬಸ್ ನಿಲ್ದಾಣ, ಮತಿಘಟ್ಟ ಗೇಟ್, ಶೆಟ್ಟಿಕೆರೆ ಗೇಟ್, ಹಾಗಲವಾಡಿ ಗೇಟ್, ವೆಂಕಟರಮಣಸ್ವಾಮಿ ದೇವಸ್ಥಾನ, ಬ್ರಾಹ್ಮಣರ ಬೀದಿ, ವಿದ್ಯಾನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪೋಲಿಸ್ ಸಬ್ಇನ್ಸ್ಪೆಕ್ಟರ್, ಸಿಬ್ಬಂದಿ ಗಸ್ತು ತಿರುಗುವ ಮೂಲಕ ಪರವಾನಿಗೆ ಇಲ್ಲದೆ ಸಂಚರಿಸುತ್ತಿದ್ದ ಮೋಟಾರ್ ಸೈಕಲ್ ಸವಾರರು ಹಾಗೂ ಹದಿನೆಂಟು ವರ್ಷಕ್ಕಿಂತ ಒಳಗಿನ ಚಾಲಕರನ್ನು ಹಿಡಿದು ಅವರಿಂದ ಬೈಕ್ ವಶಪಡಿಸಿಕೊಂಡು ಪ್ರತಿಯೊಬ್ಬ ಅಪ್ರಪ್ತಾ ಬೈಕ್ ಸವಾರನ ಪೋಷಕರಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಲ್ಲೆ, ಇನ್ನು ಮುಂದೆ ಪರವಾನಿಗೆ ಪಡೆಯುವವರಿಗೆ ವಾಹನ ಚಲಾಯಿಸದಂತೆ  ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಮುಂದೆ ವಾಹನ ಚಾಲಕರು ಇದೇ ರೀತಿ ತಮ್ಮ ಬೈಕ್ಗಳು ರಸ್ತೆಗಿಳಿದರೆ  ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಚಾಲಕರಿಗೆ ತಿಳಿಸಿದ್ದಾರೆ.


ಅಭ್ಯಸಿಸಿದರೆ ಉತ್ತಮ ಫಲಿತಾಂಶ
ಚಿಕ್ಕನಾಯಕನಹಳ್ಳಿ,ಆ.27 : ವಿದ್ಯಾಥರ್ಿಗಳು ತನ್ನ ಕ್ರೀಡೆಗೆ ಸಂಬಂಧ ಪಟ್ಟಂತೆ ಪ್ರತಿ ದಿನ ಅಭ್ಯಾಸ ನಡೆಸಿದರೆ ಗೆಲುವು ಪಡೆಯಬಹುದು  ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಪಾಠದ ಜೊತೆಯಲ್ಲಿ ಆಟಗಳು ಮುಖ್ಯ ಇದರಿಂದ ಆರೋಗ್ಯದ ಜೊತೆಗೆ ಉತ್ಸಾಹವೂ ಹೆಚ್ಚುತ್ತದೆ, ಹೋಬಳಿ ಮಟ್ಟದಿಂದ ವಿಜೇತರಾಗಿ ತಾಲ್ಲೂಕು ಮಟ್ಟದಲ್ಲಿ ಭಾಗವಹಿಸಿದ ಮಕ್ಕಳು ವಿಜೇತರಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಅಲ್ಲೂ ವಿಜೇತರಾಗಿ ತಾಲ್ಲೂಕಿಗೆ ಹಾಗೂ ಶಾಲೆಗೆ ಕೀತರ್ಿ ತರುವಂತೆ ಸಲಹೆ ನೀಡಿದರಲ್ಲದೆ ವಿದ್ಯಾಥರ್ಿಗಳು ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಶಾರೀರಿಖವಾಗಿ ದೃಢಕಾಯವಾಗುವುದರ ಜೊತೆಯಲ್ಲಿ ಮನಸ್ಸು ಸದೃಢ ಮಾಡಿಕೊಳ್ಳಬಹುದು ಎಂದರು.
ಪುರಸಭಾ ಅಧ್ಯಕ್ಷೆ ಪುಷ್ಪ.ಟಿ.ರಾಮಯ್ಯ ಹಾಗೂ ದೇಶೀಯ ವಿದ್ಯಾಪೀಠ ಪ್ರೌಢಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಪಾರಿವಾಳವನ್ನು ಹಾರಿಸುವ ಮೂಲಕ ತಾಲ್ಲೂಕು ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾಲ್ಲೂಕು ಶಿಕ್ಷಕರ ಸಂಘದ ರಾಜಶೇಖರ್, ನಾಗರಾಜು, ಸಕರ್ಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ್, ದೈಹಿಕ ಶಿಕ್ಷಕರಾದ ಚಿ.ನಾ.ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.


 ಗಣಪತಿಗೆ ಡಿಮ್ಯಾಂಡ್
ಚಿಕ್ಕನಾಯಕನಹಳ್ಳಿ,ಆ.27 : ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ತಯಾರಿಸುವ ಪರಿಸರ ಸ್ನೇಹಿ ಗಣಪತಿ ಹಾಗೂ ಗೌರಮ್ಮನವರ ಪ್ರತಿಮೆಗಳನ್ನು ಪಟ್ಟಣದ ಬಿ.ಹೆಚ್.ರಸ್ತೆಯ ಅಂಗಡಿಗಳ ಮುಂಭಾಗಗಳಲ್ಲಿ ಮಾರಾಟ ಮಾಡಲು ವ್ಯಾಪಾರಸ್ಥರು ಸಿದ್ದರಾಗಿದ್ದಾರೆ.
ತಾಲ್ಲೂಕಿನ ಕುಪ್ಪೂರು, ಪಾಪನಕೊಣ ಭಾಗಗಳಲ್ಲಿನ ಗಣಪತಿ ಮೂತರ್ಿಯ ಕಲಾವಿದರು ಗಣೇಶ ಚತುಥರ್ಿಗಾಗಿ ಆರು ತಿಂಗಳ ಹಿಂದೆಯೇ ಮನೆಮಂದಿಯೆಲ್ಲಾ ಕೆರೆಗಳಲ್ಲಿನ ಜೇಡಿಮಣ್ಣನ್ನು ತೆಗೆದುಕೊಂಡು ಬಂದು ಮಕ್ಕಳಾಧಿಯಾಗಿ ಗಣಪತಿ ಹಾಗೂ ಗೌರಮ್ಮನವರ ಮೂತರ್ಿಯನ್ನು ತಯಾರಿಸಿ, ಮೂತರ್ಿಗೆ ವಿವಿಧ ರೀತಿಯ ಬಣ್ಣವನ್ನು ಲೇಪಿಸಿ ಮಾರಾಟಕ್ಕೆ ತಂದಿದ್ದಾರೆ.
ಗಣಪತಿಯ ಮೂತರ್ಿಗಳು ಅರ್ಧ ಅಡಿ ಎತ್ತರದಿಂದ ಹಿಡಿದು ನಾಲ್ಕು ಅಡಿಯವರೆಗೆ ಇರುವ ಮೂತರ್ಿಗಳು ಪಟ್ಟಣದಲ್ಲಿ ಮಾರಾಟಕ್ಕೆ ತಂದಿದ್ದು ವಿವಿಧ ಬಡಾವಣೆ ಹಾಗೂ ಗ್ರಾಮೀಣ ಭಾಗದ ಭಕ್ತರು ಪ್ರತಿಷ್ಠಾಪಿಸುವ ಗಣಪತಿ ಮೂತರ್ಿಗಳನ್ನು ಕಾಯ್ದಿರಿಸಿದ್ದು ಪ್ರತಿಷ್ಠಾಪನಾ ದಿನದಂದು ಟ್ರಾಕ್ಟರ್, ಮೂರು ಚಕ್ರದ ಆಟೋಗಳಲ್ಲಿ ತೆಗೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ. ಚಿಕ್ಕ ಗಣಪತಿ ಮೂತರ್ಿಯ ಬೆಲೆ 50ರಿಂದ 100ರೂಗಳಿದ್ದು ಎರಡು ಅಡಿ ಗಣಪತಿ ಮೂತರ್ಿಗಳು 500ರೂ ರಿಂದ ಎರಡು ಸಾವಿರದವರೆಗೆ ಮಾರಾಟವಾಗುತ್ತಿವೆ.
ಗಣಪತಿ ಹಬ್ಬದ ಪ್ರಯುಕ್ತ ಹಣ್ಣಿನ ಹಾಗೂ ಹೂವಿನ ಬೆಲೆ ಗಗನಕ್ಕೆ ಏರಿದ್ದು ಏರಿಕೆಯ ಮಧ್ಯೆಯೂ ಭಕ್ತಾಧಿಗಳು ದುಪ್ಪಟ್ಟು ಹಣ ತೆತ್ತು ವಸ್ತುಗಳನ್ನು ಕೊಂಡೊಯುತ್ತಿರುವುದು ಸವರ್ೆ ಸಾಮಾನ್ಯವಾಗಿದೆ. 

No comments:

Post a Comment