Saturday, September 6, 2014



30 ವರ್ಷ ವಯಸ್ಸು ತುಂಬಿದವರು ಲೈಸೆನ್ಸ್ನ್ನು ನವೀಕರಣ ಮಾಡಿಸಿ : ಆರ್.ಟಿ.ಓ ಮಂಜುನಾಥ್
                           

                     
ಚಿಕ್ಕನಾಯಕನಹಳ್ಳಿ,ಸೆ.06 : ವಾಹನದ ಪರವಾನಗಿ ಪಡೆಯಲು 18ವರ್ಷವಾಗಿರಬೇಕು, 30 ವರ್ಷ ವಯಸ್ಸು ತುಂಬಿದವರು ಲೈಸೆನ್ಸ್ನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ತಿಪಟೂರು ಆರ್.ಟಿ.ಓ ಮಂಜುನಾಥ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಆವರಣದಲ್ಲಿ ರೋಟರಿ ಸಂಸ್ಥೆ, ರೋಟರಾಕ್ಟ್ ಸಂಸ್ಥೆ, ತಿಪಟೂರು ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ರಸ್ತೆ ಸುರಕ್ಷತಾ ಹಾಗೂ ಸಂರಕ್ಷತಾ ವಾಹನ ಚಾಲನ ನಿಯಮಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 50ವರ್ಷ ಮೇಲ್ಪಟ್ಟ ನಾಗರೀಕರು ಪ್ರತಿ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳಬೇಕಾಗುತ್ತದೆ, ವಾಹನಗಳನ್ನು ಓಡಿಸಲು ರಿಜಿಸ್ಟ್ರೇಷನ್ ಕಡ್ಡಾಯವಾಗಿದ್ದು ವಾಹನಗಳು 40ರಿಂದ 60 ಕಿ.ಮೀ ವೇಗದಲ್ಲಿ ಚಲಿಸಿದರೆ ಮಾತ್ರ ಸುರಕ್ಷಿತವಾಗಿರುತ್ತಾರೆ, ಅತಿ ವೇಗದಿಂದ ಚಲಾಯಿಸಿದರೆ ಜೀವಕ್ಕೆ ಅಪಾಯ ಎಂದು ತಿಳಿಸಿದರು.
ವಾಹನ ಚಲಾಯಿಸುವವರು ಕುಡಿದು ಹಾಗೂ ಮೊಬೈಲ್ಗಳಲ್ಲಿ ಮಾತನಾಡುತ್ತಾ ಮತ್ತು ದ್ವಿಚಕ್ರ ವಾಹನದಲ್ಲಿ ಮೂರು ಜನ ತೆರಳುವುದು ಕಾನೂನು ಪ್ರಕಾರ ಅಪರಾಧ ಎಂದರಲ್ಲದೆ, ವಾಹನ ಚಾಲಕನು ಅಗ್ನಿಶಾಮಕದಳದ ವಾಹನಗಳು ಮತ್ತು ತುತರ್ು ಚಿಕಿತ್ಸಾ ವಾಹನ, ಪೋಲಿಸ್ ವಾಹನ, ಕೆಂಪುದೀಪ ಹೊತ್ತ ವಾಹನಗಳನ್ನು ಕಂಡಾಗ ಸಾಧ್ಯವಾದಷ್ಟು ರಸ್ತೆಯ ಎಡಪಕ್ಕದಲ್ಲಿ ನಿಂತು ಅವುಗಳಿಗೆ ಚಲಿಸಲು ಆದ್ಯತೆ ನೀಡಬೇಕು, ವಾಹನವನ್ನು ನಿಲುಗಡೆ ತಾಣದಲ್ಲೇ ನಿಲ್ಲಿಸಿ ಪ್ರತಿ ಸೂಚನ ಫಲಕವನ್ನು ಗಮನಿಸುವಂತೆ ಸಲಹೆ ನೀಡಿದರು.
ಸಿ.ಪಿ.ಐ ಜಯಕುಮಾರ್ ಮಾತನಾಡಿ ಇತ್ತೀಚೆಗೆ ಪಟ್ಟಣದಲ್ಲಿ ರೋಟರಿ ಶಾಲೆಯ ಬಾಲಕ ಅತಿ ವೇಗವಾಗಿ ಚಾಲನೆ ಮಾಡಿ ಕಂಬಕ್ಕೆ ಡಿಕ್ಕೆ ಹೊಡೆದ ಪರಿಣಾಮ ಅಪಘಾತದಲ್ಲಿ ನಿಧನ ಹೊಂದಿದ್ದರಿಂದ, ಪಟ್ಟಣದಲ್ಲಿ ಅಪ್ರಾಪ್ತರು, ವಾಹನ ಪರವಾನಿಗೆ ಪಡೆಯದವರ ವಿರುದ್ದ ದಂಡ ವಿಧಿಸಿ, ಎಚ್ಚರಿಕೆ ನೀಡಿ, ಲೈಸೆನ್ಸ್ ಪಡೆದು ವಾಹನ ಚಲಾಯಿಸಲು ಸೂಚನೆ ನೀಡಲಾಗಿದೆ. ಕಾಲೇಜು ಆವರಣದಲ್ಲಿ ಅಪರಿಚಿತರು ಹೆಣ್ಣು ಮಕ್ಕಳಿಗೆ ದ್ವಿಚಕ್ರ ವಾಹನದಲ್ಲಿ ಬಂದು ಕೀಟಲೆ ಮಾಡುತ್ತಿರುವವರ ಬಗ್ಗೆ ವಿದ್ಯಾಥರ್ಿನಿಯರು ಮಾಹಿತಿ ನೀಡಿದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ವಾಹನ ನಿಯಮ ಉಲ್ಲಂಘಿಸುತ್ತಿರುವುದರಿಂದಲೇ ದೇಶದಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತಿದ್ದು ಇದರಿಂದ ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದಾರೆ ಎಂದರು.
ವಾಹನ ಚಾಲಕರು ಮೊಬೈಲ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿರುವ ವರದಿಗಳು ಬರುತ್ತಿರುವುದರಿಂದ ಅಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದರೆ ಅವರ ವಿರುದ್ದ ಕಾನೂನು ಪ್ರಕಾರ ಪೋಸ್ಕೋ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾಥರ್ಿಗಳು ಹಾಗೂ ಶಾಲಾ ವಿದ್ಯಾಥರ್ಿಗಳು ರಸ್ತೆ ಸುರಕ್ಷತೆ ಪಾಲನೆಯ ಬಗ್ಗೆ ಪ್ರಶ್ನಿಸಿ ಆರ್.ಟಿ.ಓ ಅಧಿಕಾರಿಯಲ್ಲಿ ಮಾಹಿತಿ ಪಡೆದಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಸಿ.ಎನ್.ಮರುಳಾರಾಧ್ಯ, ಪ್ರಾಂಶುಪಾಲ ವಿ.ವರದರಾಜು, ಪಿ.ಎಸ್.ಐಗಳಾದ ಮಹಾಲಕ್ಷ್ಮಮ್ಮ ಹಾಗೂ ಸುನಿಲ್ ರೋಟರಿ ಸದಸ್ಯರಾದ ಸಿ.ಎಸ್.ಪ್ರದೀಪ್ಕುಮಾರ್, ದೇವರಾಜು ಅಶ್ವತ್ಥ್ನಾರಾಯಣ್, ಮಿಲ್ಟ್ರಿಶಿವಣ್ಣ, ದಾನಪ್ಪ ಉಪಸ್ಥಿತರಿದ್ದರು. 


ಸುಡಗಾಡು ಸಿದ್ದ ಯುವಕರ ಮೇಲೆ ಪಿ.ಎಸ್.ಐ. ಹಲ್ಲೆ: ತಹಶೀಲ್ದಾರ್ಗೆ ದೂರು.
ಚಿಕ್ಕನಾಯಕನಹಳ್ಳಿ,ಸೆ.06 : ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ವಾಸವಿರುವ ಸುಡುಗಾಡು ಸಿದ್ಧರು ಹಾಗೂ ಅಲೆಮಾರಿ ಜನಾಂಗದ ಗುಡಿಸಲುಗಳಿಗೆ  ನುಗ್ಗಿ ಅಕ್ರಮವಾಗಿ ನಾಲ್ವರನ್ನು ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ಮಾಡಿದ ಪಿ.ಎಸ್.ಐ ರವರು ಮಾನವ ಹಕ್ಕು ಉಲ್ಲಂಘನೆ ಮಾಡಿರುವುದರಿಂದ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ಕಾಮಾಕ್ಷಮ್ಮನವರಿಗೆ ಅಲೆಮಾರಿ ಬುಡಕಟ್ಟು ಮಹಾಸಭಾ ಮನವಿ ಅಪರ್ಿಸಿದರು.
ಪಟ್ಟಣದ 6ನೇ ವಾಡರ್್ನಲ್ಲಿರುವ ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸವಾಗಿರುವ ಸುಡುಗಾಡು ಸಿದ್ದ ಜನಾಂಗದ ಯುವಕರಾದ ಕುಮಾರ್, ಮಾರಣ್ಣ ನರಸಿಂಹ, ಮಂಜಣ್ಣ ಎಂಬುವವರನ್ನು ವಿನಾಕಾರಣವಾಗಿ ಬಂಧಿಸಿ ಹಲ್ಲೆ ಮಾಡಿ ಗಾಯಗೊಳಿಸಿದರು. ನಮ್ಮನ್ನು ಬಂಧಿಸಿರುವುದು ಏಕೆ ಎಂದು ಪ್ರಶ್ನಿಸಿದರೆ ನಿಮ್ಮ ಮೇಲೆ ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿರುವುದಲ್ಲದೆ ಯಾವ ಮಾಧ್ಯಮದವರಿಗೂ ತಿಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ, ಇದರಿಂದ ಕೇದಿಗೆಹಳ್ಳಿ ಗುಂಡುತೋಪಿನ ಗುಡಿಸಿಲಿನಲ್ಲಿ ಇರುವ ನಮಗೆ ಜೀವ ಬೆದರಿಕೆಯಿಂದ ಕುಟುಂಬಗಳು ಭಯಭೀತರಾಗಿದ್ದು ಯಾವಾಗ ಬಂಧಿಸುತ್ತಾರೋ ಎಂಬ ಭಯದಲ್ಲಿ ಬದುಕ ಬೇಕಾಗಿದೆ, ವೈದರ ಬಳಿ ಪೋಲಿಸ್ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ಚಿಕಿತ್ಸೆ ನೀಡಿ ವೈದ್ಯಕೀಯ ದೃಢೀಕರಣ ಪತ್ರ ನೀಡುವಂತೆ ಕೇಳಿದರೂ ವೈದ್ಯರು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ವಿನಃ ದೃಢೀಕರಣ ಪತ್ರ ಮಾತ್ರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾ ಸಭಾದ ಪದಾಧಿಕಾರಿಗಳಾದ ರಾಜಪ್ಪ, ಡಿ.ಶಾಂತಕುಮಾರ್, ವೆಂಕಟೇಶಯ್ಯ, ರಂಗನಾಥ್ ಸೇರಿದಂತೆ ಹಲವರಿದ್ದರು.


ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಸಹಕಾರಿ

ಚಿಕ್ಕನಾಯಕನಹಳ್ಳಿ,ಸೆ.06 : ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳು ಸಹಕಾರಿ ಎಂದು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಡಾ.ಅಂಭೇಡ್ಕರ್ ಪ್ರೌಢಶಾಲೆಯ ಆವರಣದಲ್ಲಿ 2014-15ನೇ ಸಾಲಿನ ಪರೌಢಶಾಲಾ ಹಂತದ ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುರಸಭಾ ಸದಸ್ಯೆ ರೇಣುಕಾ ಮಾತನಾಡಿ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿ, ತೀಪರ್ುಗಾರರು ಪ್ರಾಮಾಣಿಕವಾಗಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮುಂದೆ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂತರ್ಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕೆಂಬಾಳ್ ಸುರೇಶ್ ಸ್ವಾಗತಿಸಿದರು. ದೇವರಾಜ್ ನಿರೂಪಿಸಿದರು. ರಾಂಪ್ರಸಾದ್ ವಂದಿಸಿದರು.

No comments:

Post a Comment