Wednesday, September 3, 2014



ಗ್ರಾಮ ಪಂಚಾಯ್ತಿಗಳು ಸಬಲೀಕರಣವಾಗಬೇಕು : ಜಿ.ಪಂ.ಅಧ್ಯಕ್ಷ  ವೈ.ಹೆಚ್.ಹುಚ್ಚಯ್ಯ
ಚಿಕ್ಕನಾಯಕನಹಳ್ಳಿ,ಸೆ.01 : ಗ್ರಾಮ ಪಂಚಾಯ್ತಿಗಳು ಸಬಲೀಕರಣವಾಗದೇ  ಗ್ರಾಮಗಳು ಉದ್ಧಾರವಾಗುವುದಿಲ್ಲ ಎಂದು ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಮಾದಿಗ ದಂಡೋರ ಸಮಿತಿ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲಾ ಪಂಚಾಯ್ತಿ ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳ ಜನಪ್ರತಿನಿಧಿಗಳಿಗೆ ಅಧಿಕಾರದ ಅರಿವಿನ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗುವುದು, ಸಾಮಾಜಿಕ ನ್ಯಾಯದ ಅಡಿಯಲ್ಲಿ ಶೇ.50ರಷ್ಟು ಮಹಿಳೆಯರಿಗೆ ಮೀಸಲಾಗಿ ನೀಡಿದ್ದು ಹೊರತು ಅಕ್ಷರಸ್ಥರಿಗೆ ಮಾತ್ರ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ, ಅನಕ್ಷರಸ್ಥರುಗಳ ಕೆಲಸಗಳಾಗುತ್ತಿಲ್ಲ ಎಂದು ವಿಷಾಧಿಸಿದ ಗ್ರಾಮ ಪಂಚಾಯ್ತಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮಗೆ ಬೇಕಾದ ರೀತಿಯ ಗ್ರಾಮ ಪಂಚಾಯ್ತಿಗಳ ಅಧಿಕಾರಿಗಳನ್ನು ಹಿಡಿದಿಟ್ಟುಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ, ಅಧಿಕಾರಿಗಳ ಬಡ, ಅನಕ್ಷರಸ್ಥರ ಅಜರ್ಿಗಳನ್ನು ಕಛೇರಿಗೆ ತೆಗೆದುಕೊಂಡು ಬಂದರೆ ಅವರ ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನಿಂದ ಸ್ಪಂದಿಸದೇ ಹೋದ ಅಧಿಕಾರಿಗಳ ವಿರುದ್ದ ನಿದರ್ಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಎನ್.ಆರ್.ಇ.ಜಿ.ಎ ಯೋಜನೆ ಅಡಿಯಲ್ಲಿ ಕೋಟ್ಯಾಂತರ ರೂಪಾಯಿ ಲಾಭಕ್ಕಾಗಿ ಕೆಲಸ ಮಾಡಬೇಡಿ ಉದಾಸೀನ ಮಾಡದೆ ಸಕರ್ಾರದ ಅನುದಾನ ಸರಿಯಾಗಿ ಉಪಯೋಗಿಸಿಕೊಳ್ಳಿ ಎಂದರು. ಅಧಿಕಾರ ಶಾಶ್ವತವಲ್ಲ ಇರುವ ಅಧಿಕಾರವನ್ನು ಬಡವರ ದೀನ ದಲಿತರ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ,  ದಲಿತರ ಜನಾಂಗದಲ್ಲಿ 101 ಜಾತಿಗಳಿದ್ದು ಜನಸಂಖ್ಯೆ ಆಧಾರದ ಮೇಲೆ ವಗರ್ೀಕರಣ ಮಾಡುವಂತೆ 18ವರ್ಷಗಳ ದೀರ್ಘ ಹೋರಾಟದ ಫಲವಾಗಿ ಸಕರ್ಾರ ಎ.ಜಿ.ಸದಾಶಿವ ಆಯೋಗವನ್ನು ರಚಿಸಿ ಸಕರ್ಾರಕ್ಕೆ ವರದಿ ಸಲ್ಲಿಸಿದೆ ಆದರೂ ಸಕರ್ಾರ ಇದುವರೆವಿಗೂ ಮಾದಿಗ ಜನಾಂಗದ ಬೇಡಿಕೆಗಳಿಗೆ ಇದುವರೆವಿಗೇ ಸ್ಪಂದಿಸದೇ ಇರುವುದು ವಿಷಾಧದ ಸಂಗತಿ ಆದ್ದರಿಂದ ಕೂಡಲೇ ಎ.ಜಿ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು. 
ವಗರ್ೀಕರಣವಾಗದೇ ಹೋದರೆ ಮಾದಿಗ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಹಾಗೂ ಸಕರ್ಾರದ ಕೆಲಸ ಸಿಗದೆ ಮಾದಿಗ ಜನಾಂಗಕ್ಕೆ ಅನ್ಯಾಯವಾಗುತ್ತದೆ, ದೇಶದಲ್ಲಿ 6500 ಸಾವಿರ ಜಾತಿಗಳಿದ್ದು ಅವರದೇ ಆದ ಜಾತಿಗಳ ಹೆಸರುಗಳನ್ನು ಸೇರಿಸುತ್ತಾ ಬಂದಿದ್ದರಿಂದಲೇ ಮಾದಿಗ ಜನಾಂಗಕ್ಕೆ ಅನ್ಯಾಯವಾಗಿದೆ, ಹಾವನೂರು ವರದಿಯಲ್ಲಿ ಮಾದಿಗರಿಗೆ ಶೇ.8ರಷ್ಟು ಮೀಸಲಾತಿ ನಂತರ ಎ.ಜೆ.ಸದಾಶಿವ ಆಯೋಗ ಶೇ.6ರಷ್ಟು ಮೀಸಲಾತಿ ನೀಡಿದ್ದರೂ ಇದುವರೆವಿಗೂ ಮೀಸಲಾತಿ ವಗರ್ೀಕರಣವಾಗದೇ ಇರುವುದರಿಂದ ಶೇ1.5ರಷ್ಟು ಮೀಸಲಾತಿ ಲಭಿಸಿದ್ದು ಇದರಿಂದ ಜನಸಂಖ್ಯಾ ಆಧಾರದಲ್ಲಿ ಸ್ಥಾನಮಾನ ಸಿಕ್ಕಿದೆ ಎಂದರಲ್ಲದೆ ಸದಾಶಿವ ಆಯೋಗದ ವರದಿ  ಜಾರಿಗೆ ತರುವಂತೆ ಉರುಳುಸೇವೆ, ಅರೆಬೆತ್ತಲೆ ಸೇವೆ, ಪಂಜಿನ ಮೆರವಣಿಗೆ ಸೇರಿದಂತೆ ಹಲವು ರೀತಿಯ ಪ್ರತಿಭಟನೆ ಮಾಡಿದ್ದೇವೆ, ಸದಾಶಿವ ಆಯೋಗದ ವರದಿಯಂತೆ ವಗರ್ೀಕರಣವಾದರೆ ಎಲ್ಲರಿಗೂ ಸಮಾನ ರೀತಿಯಲ್ಲಿ ಸೌಲಭ್ಯಗಳು ಹಂಚಿಕೆಯಾಗುತ್ತವೆ ಎಂದು ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಕರ್ಾರ ಚುನಾವಣೆಯಲ್ಲಿ ಮೀಸಲಾತಿ ನೀಡಿರುವುದರಿಂದ ನಾವು ಎಲ್ಲಾ ಜನಾಂಗದವರಿಗೂ ಮೀಸಲಾತಿ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ನೀಡುತ್ತಿದ್ದು ಅದೇ ರೀತಿ ಈ ಬಾರಿ ವೈ.ಹೆಚ್.ಹುಚ್ಚಯ್ಯನವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದೇವೆ ಎಂದರು.
ರಾಜ್ಯ ಕಾರ್ಯದಶರ್ಿ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ ಸಕರ್ಾರ ಬೇರೆ ಬೇರೆ ಮಹಾಪುರುಷರ ಜಯಂತಿ ಮಾಡುತ್ತಿದ್ದು ಅದೇ ರೀತಿ ಜಾಂಬುವಂತ ಹುಟ್ಟಿದ ದಿನದಂದು ಸಕರ್ಾರ ಜಯಂತಿಯನ್ನಾಗಿ ಮಾಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ಜಿ.ಪಂ.ಸದಸ್ಯೆ ಜಾನಮ್ಮ ರಾಮಚಂದ್ರಯ್ಯ ಮಾತನಾಡಿ ಪಟ್ಟಣದಲ್ಲಿ ಮಾದಿಗ ದಂಡೋರ ಜನಾಂಗದ ಸಮುದಾಯ ಭವನಕ್ಕೆ ಜಿ.ಪಂ.ಅಧ್ಯಕ್ಷರಾದ ವೈ.ಹೆಚ್.ಹುಚ್ಚಯ್ಯನವರು ಐದು ಲಕ್ಷ ರೂಪಾಯಿ ಮಂಜೂರು ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿ.ಎಸ್.ಅಶೋಕ್, ಮಾ.ದ.ಸ.ಜಿಲ್ಲಾ ಉಪಾಧ್ಯಕ್ಷ ಈಚನೂರು ಮಹಾದೇವ್, ತಾಲ್ಲೂಕು ಅಧ್ಯಕ್ಷ ಜಯಣ್ಣ, ಎ.ಪಿ.ಎಂ.ಸಿ ಸದಸ್ಯ ರುದ್ರೇಶ್, ದ.ಸಂ.ಸ ಸಂಚಾಲಕ ಸಿ.ಎಸ್.ಲಿಂಗದೇವರು, ಮುಖಂಡ ತೀರ್ಥಪುರ ಆರ್.ಕುಮಾರ್, ಸಿ.ಎನ್.ಹನುಮಯ್ಯ, ರಾಜುಬೆಳಗೀಹಳ್ಳಿ,  ಗೋವಿಂದಯ್ಯ

ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಲ್ಲೂಕು ಮಟ್ಟದ ಚಾಂಪಿಯನ್ : ಕೆ.ಎಂ.ಎಚ್.ಪಿ.ಎಸ್ ಶಾಲಾ ವಿದ್ಯಾಥರ್ಿ ಸಿ.ಎನ್.ಮಂಜುನಾಥ್

ಚಿಕ್ಕನಾಯಕನಹಳ್ಳಿ,ಸೆ.2 : ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ವಿದ್ಯಾಥರ್ಿ ಸಿ.ಎನ್.ಮಂಜುನಾಥ್ ತಾಲ್ಲೂಕ್ ಚಾಂಪಿಯನ್ ಸ್ಥಾನ ಅಲಂಕರಿಸಿದ್ದಾರೆ.
ಸಿ.ಎನ್.ಮಂಜುನಾಥ್ 100.ಮೀ ಓಟ, ಗುಂಡು ಎಸೆತ, ಚಕ್ರ ಎಸೆತ, ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದರೆ, ಕೆ.ಎಂ.ಎಚ್.ಪಿ.ಎಸ್ ಶಾಲಾ ವಿದ್ಯಾಥರ್ಿಗಳಾದ ಸಿ.ಎನ್.ಮಂಜುನಾಥ, ಎ.ಎನ್.ಮಧುಸೂದನ, ಮದನ್, ಸಿ.ಎನ್.ಯೋಗೀಶ್, ಜೆ.ಸಿ.ನವೀನ್, ಸುಹಾಸ್.ಸಿ.ಎಸ್, ನಾಗೇಂದ್ರ.ಕೆ.ಎಸ್, ಅಬ್ದುಲ್ರುಮಾನ್, ಗಣೇಶ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಹಾಗೂ ಭರತ್.ಕೆ.ಎನ್, ಸುದೀಪ್.ಎಲ್ ಚೆಸ್ನಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಟಿ.ಕಮಲಮ್ಮ, ದೈಹಿಕ ಶಿಕ್ಷಕಿ ಜಗದಾಂಭ.ಎ.ಎನ್. ಟೀಂ ಮ್ಯಾನೇಜರ್ ಹನುಮಂತರಾಯ,ಆರ್, ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ.ಯವರು ಅಭಿನಂದಿಸಿದ್ದಾರೆ.

ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆ
ಚಿಕ್ಕನಾಯಕನಹಳ್ಳಿ,ಸೆ.2 : ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ 2014-15ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್. ರೆಡ್ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ 8ರ ಸೋಮವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣ್ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ನಿವೃತ್ತ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು ಪ್ರಾಂಶುಪಾಲ ವಿ.ವರದರಾಜು ಅಧ್ಯಕ್ಷತೆ ವಹಿಸುವರು.


No comments:

Post a Comment