ಪೋಷಕರು ತಮ್ಮ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸಹಕರಿಸಿ
ಚಿಕ್ಕನಾಯಕನಹಳ್ಳಿ,ಸೆ.10 : ಪೋಷಕರು ತಮ್ಮ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸಹಕಾರ ನೀಡಬೇಕು, ಮಕ್ಕಳ ಪ್ರತಿಭೆಯನ್ನು ಪ್ರಾಥಮಿಕ ಹಂತದಲ್ಲೇ ಗುತರ್ಿಸಿ ಬೆಳೆಸಿದರೆ ಮುಂದೆ ಅವರಿಗೆ ಉತ್ತಮ ಭವಿಷ್ಯ ಸಿಗಲಿದೆ ಎಂದು ಪುರಸಭಾ ಸದಸ್ಯ ಸಿ.ಆರ್.ತಿಮ್ಮಪ್ಪ ಹೇಳಿದರು.
ಪಟ್ಟಣದ ಎಂ.ಪಿ.ಜಿ.ಎಸ್ ಶಾಲಾ ಆವರಣದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದ ಅವರು,
ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಲಿದ್ದು ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಾಲ್ಲೂಕಿನಿಂದ ಜಿಲ್ಲೆ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆ ಹಾಗೂ ತಂದೆ, ತಾಯಿಗೆ ಹೆಸರು ತರುವಂತೆ ಸಲಹೆ ನೀಡಿದರು.
ಪುರಸಭಾ ಸದಸ್ಯ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ, ಎಂ.ಪಿ.ಜಿ.ಎಸ್ ಶಾಲೆಯ ಎದುರಿನಲ್ಲಿರುವ ವಿದ್ಯುತ್ ಪರಿವರ್ತಕದಿಂದ ಮಕ್ಕಳ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗೆ ತೊಂದರೆಯಾಗುತ್ತಿದ್ದು ಎರಡು ಭಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಈ ಭಾಗದ ಜನರು ನನ್ನೊಂದಿಗೆ ಕೈ ಜೋಡಿಸಿದರೆ ಪರಿವರ್ತಕ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಈ ಭಾಗದಲ್ಲಿ ಎರಡು ಬಾರಿ ಪುರಸಭಾ ಸದಸ್ಯನಾಗಿದ್ದಾಗ ಶಾಲಾ ಮುಂಭಾಗದಲ್ಲಿರುವ ವಿದ್ಯುತ್ ಪರಿವರ್ತಕವನ್ನು ತೆರವುಗೊಳಿಸಲು ಮುಂದಾದರೂ ಹಲವರ ವಿರೋಧದಿಂದ ಪರಿವರ್ತಕವನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ, ಈಗ ಪಕ್ಕದ ವಾಡರ್್ನ ಸದಸ್ಯನಾಗಿದ್ದರೂ ಮಕ್ಕಳ ಹಿತದೃಷ್ಠಿಯಿಂದ ಆ ಕೆಲಸಕ್ಕೆ ಜೊತೆಯಲ್ಲಿರುವುದಾಗಿ ತಿಳಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ, ಮಕ್ಕಳ ಸುಪ್ತ ಪ್ರತಿಭೆ ಹೊರಹೊಮ್ಮಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದ್ದು ಈ ಕಾರ್ಯಕ್ರಮಗಳ ಮೂಲಕ ಸಾಹಿತ್ಯ, ಸಾಂಸ್ಕೃತಿಕ, ಕಲೆ ಮುಂತಾದ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
ಬಿ.ಆರ್.ಪಿ. ಪ್ರದೀಪ್ ಮಾತನಾಡಿ ಸಕರ್ಾರಿ ಮತ್ತು ಖಾಸಗಿ ಶಾಲೆಯವರೆಂದು ಯಾರಿಗೂ ತಾರತಮ್ಯ ಮಾಡದೆ ತೀಪರ್ುಗಾರರು ನೈಜ ತೀಪರ್ು ನೀಡಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಿ ಎಂದರಲ್ಲದೆ ಎಂ.ಪಿ.ಜಿ.ಎಸ್ ಶಾಲಾ ಮುಂಭಾಗದಲ್ಲಿರುವ ಟಿ.ಸಿ.ಯನ್ನು ತೆರವುಗೊಳಿಸುವುದು ಅವಶ್ಯಕತೆಯಿದೆ ಮತ್ತು ಶಾಲೆಗೆ ಕಾಂಪೌಂಡ್ ವ್ಯವಸ್ಥೆಯಾಗಬೇಕಿದೆ ಎಂದರು.
ಸಮಾರಂಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರೀಶ್, ಶಿಕ್ಷಕ ಶಿವಕುಮಾರ್, ಸಿ.ಆರ್.ಪಿ.ಸುರೇಶ್ ಕೆಂಬಾಳ್ ಉಪಸ್ಥಿತರಿದ್ದರು.
No comments:
Post a Comment