Thursday, December 11, 2014

ಆಟೋ ಚಾಲಕರು ತಮ್ಮ ವಾಹನದ ಹಿಂಭಾಗ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಹೆಸರು ನಮೂದಿಸಿ : ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್

                                
ಚಿಕ್ಕನಾಯಕನಹಳ್ಳಿ,ಡಿ.11 : ಆಟೋ ಚಾಲಕರು ತಮ್ಮ ವಾಹನದ ಹಿಂಭಾಗ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಹೆಸರು ನಮೂದಿಸಿದರೆ ಅವಸರದಲ್ಲಿ ತಮ್ಮ ವಸ್ತುಗಳನ್ನು ಬಿಟ್ಟು ಹೋಗಿದ್ದ ಪ್ರಯಾಣಿಕರು ತಮ್ಮ ವಸ್ತುಗಳನ್ನು ಹಿಂಪಡೆಯಲು ಸಹಾಯವಾಗುತ್ತದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಪೋಲಿಸ್ ಇಲಾಖೆ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಹನ ಚಾಲನೆ ಮಾಡುವವರು ಡಿ.ಎಲ್, ಇನ್ಸುರೆನ್ಸ್, ರಿಜಿಸ್ಟ್ರೇಷನ್ ಮಾಡಿಸುವುದು ಕಡ್ಡಾಯವಾಗಿದೆ ಇದರಿಂದ ವಾಹನ ಚಾಲಕರಿಗೆ ಹೆಚ್ಚಿನ ಅನುಕೂಲವಿದೆ ಎಂದರಲ್ಲದೆ, ವಾಹನ ಚಾಲನೆ ಮಾಡುವವರು ಡಿ.ಎಲ್ ಹೊಂದಿರದಿದ್ದರೆ ಆಕಸ್ಮಿಕವಾಗಿ ಅಪಘಾತವಾದಾಗ ವಾಹನ ಚಾಲನೆ ಮಾಡುತ್ತಿದ್ದವನ ಹಾಗೂ ವಾಹನದ ಮಾಲೀಕನ ಮೇಲೆ ಪ್ರಕರಣ ದಾಖಲಾಗುತ್ತದೆ ಹಾಗೂ ವಾಹನಕ್ಕೆ ಇನ್ಸುರೆನ್ಸ್ ಮತ್ತು ರಿಜಿಸ್ಟ್ರೇಷನ್ ಮಾಡಿಸಿದ್ದರೆ ಅಪಘಾತವಾದಾಗ ನೊಂದ ವ್ಯಕ್ತಿಯ ಚಿಕಿತ್ಸೆಗೆ ಇನ್ಸುರೆನ್ಸ್, ರಿಜಿಸ್ಟ್ರೇಷನ್ ಸಹಾಯವಾಗಲಿದೆ ಎಂದರು. 
ಇನ್ಸುರೆನ್ಸ್ ಮಾಡಿಸುವವರು ಪೂತರ್ಿ ಮಾಡಿಸಿದರೆ ವಾಹನವು ಜಖಂಗೊಂಡಾಗ, ಸ್ಪೋಟಗೊಂಡಾಗ  ಚಾಲಕರಿಗೆ ಇನ್ಸುರೆನ್ಸ್ ಪೂತರ್ಿ ಹಣ ದೊರಯಲಿದೆ ಅಲ್ಲದೆ ಎಲ್ಲಾ ರೀತಿಯಲ್ಲೂ  ಅನುಕೂಲವಾಗಲಿದೆ ಎಂದರಲ್ಲದೆ ಆಟೋ ಚಾಲಕರು ಶಾಲಾ ಮಕ್ಕಳನ್ನು ಆಟೋದಲ್ಲಿ ಶಾಲೆಗೆ ಕರೆದಯ್ಯುವಾಗ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಒಂದು ಬಾರಿಯಲ್ಲದಿದ್ದರೆ ಎರಡು ಬಾರಿ ಟ್ರಿಪ್ ಮಾಡಿರಿ ಆದರೆ ಮಕ್ಕಳಿಗೆ ತೊಂದರೆ ಮಾಡಬೇಡಿ ಎಂದರು.
ಆಟೋ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯಲು ಪೈಪೋಟಿ ಮಾಡದೆ ತಮ್ಮ ವಾಹನವನ್ನು ನಿಲುಗಡೆ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಿ ಒಬ್ಬರ ನಂತರ ಒಬ್ಬರಂತೆ ಪ್ರಯಾಣಿಕರನ್ನು ಕರೆದಯ್ಯಲು ಸಲಹೆ ನೀಡಿದ ಅವರು ತಾಲ್ಲೂಕು ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ತಾಲ್ಲೂಕಿನ ರಸ್ತೆಯ ಮೂಲಕ ಯಾರು ಸಂಚರಿಸುತ್ತಾರೆ ಎಂಬುದು ನಮಗೆ ತಿಳಿಯುವುದಿಲ್ಲ ಸದಾ ಸಂಚರಿಸುತ್ತಿರುವ ವಾಹನ ಚಾಲಕರು ಶಂಕಿತ ವ್ಯಕ್ತಿಗಳ ಮಾಹಿತಿಯನ್ನು ಪೋಲಿಸರಿಗೆ ನೀಡುವಂತೆ ತಿಳಿಸಿದರು.
ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪ್ರತಿ ಇಲಾಖೆಗಳಿಗೂ ಸಾರ್ವಜನಿಕರ ಸಹಾಯ ಅಗತ್ಯವಾಗಿದ್ದು ಸಾರ್ವಜನಿಕರು ಅಧಿಕಾರಿಗಳ ಜೊತೆ ಕೈಜೋಡಿಸುವ ಮೂಲಕ ಅವರ ಕರ್ತವ್ಯಕ್ಕೆ ನೆರವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಬ್ ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮ, ಪುರಸಭಾ ಸದಸ್ಯ ಸಿ.ರಾಜಶೇಖರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.


No comments:

Post a Comment