ಪೋಲಿಸರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿಡಿ. : ಅಪರಾಧ ತಡೆ ಮಾಸಾಚರಣೆಯ ಹಿನ್ನೆಲೆಯಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿರವರು ಕರೆ ನೀಡಿದ ಸ್ವಚ್ಛ ಭಾರತ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಪೋಲಿಸ್ ಇಲಾಖೆ ವತಿಯಿಂದ ತಾಲ್ಲೂಕಿನ ದುಗಡಿಹಳ್ಳಿ ಗ್ರಾಮ ಪಂಚಾಯ್ತಿಯ ಹರಿಜನ ಕಾಲೋನಿಯ ಗ್ರಾಮವನ್ನು ಸ್ವಚ್ಛಗೊಳಿಸುತ್ತಿದ್ದೇವೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ತಿಳಿಸಿದರು.
ಚಿಕ್ಕನಾಯಕನಹಳ್ಳಿಯ 23ಮಂದಿ ಪೋಲಿಸ್ ಸಿಬ್ಬಂದಿ, ಗ್ರಾಮದ ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮ ಪಂಚಾಯ್ತಿಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಹಾಗೂ ಸಬ್ ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮರವರ ನೇತೃತ್ವದಲ್ಲಿ ದುಗಡಿಹಳ್ಳಿ ಗ್ರಾಮವನ್ನು ಪೋಲಿಸ್ ಸಿಬ್ಬಂದಿಗಳು ಸ್ವಪ್ರೇರಿತರಾಗಿ ಸ್ವಚ್ಛಗಳಿಸಿದರು.
ದುಗಡಿಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಪೋಲಿಸ್ ಸಿಬ್ಬಂದಿ ಮತ್ತು ಗ್ರಾಮಸ್ಥರೊಂದಿಗೆ ಗ್ರಾಮದ ಚರಂಡಿ, ದೇವಸ್ಥಾನ, ಬೀದಿಗಳಲ್ಲಿದ್ದ ಕಸವನ್ನು ತೆಗೆದು ಸ್ವಚ್ಚಗೊಳಿಸುತ್ತಿದ್ದು ಈ ಬಗ್ಗೆ ತಾಲ್ಲೂಕಿನ ಕಾರ್ಯನಿರ್ವಹಣಾಧಿಕಾರಿರವರಿಗೂ ತಿಳಿಸಿದ್ದು ಅವರೂ ಗ್ರಾಮದ ಸ್ವಚ್ಛತೆಯನ್ನು ಕಾಪಾಡುವದರ ಬಗ್ಗೆ ತಿಳಿಸಿದ್ದಾರೆ ಎಂದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಗಾಯಿತ್ರಿ, ಕಲಾವತಿ, ಮಲ್ಲಿಕಾಜರ್ುನ್, ವೆಂಕಟೇಶ್, ಬಾಲ್ಕುಮಾರ್, ಮಂಜುನಾಥ್, ನರಸಿಂಹಸ್ವಾಮಿ, ಚನ್ನೆಗೌಡ, ಕುಮಾರ್, ರಮೇಶ್, ಹೋಂ ಗಾಡರ್್ ರವಿಕುಮಾರ್, ದುಗಡಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಕೆ.ಜಿ.ಬಸವೇಗೌಡ, ಸದಸ್ಯೆ ಶಾರದಮ್ಮ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ನಿವೃತ್ತ ನೌಕರರ ದಿನಾಚಾರಣೆ
ಚಿಕ್ಕನಾಯಕನಹಳ್ಳಿ,ಡಿ.20 ; ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಿವೃತ್ತ ನೌಕರರ ಸಂಘಟನೆಯು ಬಲಿಷ್ಠವಾಗಿದ್ದು, ಸಂಘಟನೆಯು ಜನಸಾಮಾನ್ಯರ ವಿಶ್ವಾಸ ಗಳಿಸಿ ಜನಮೆಚ್ಚುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಆರ್.ಬಾಬಡೆ ಹೇಳಿದರು.
ಪಟ್ಟಣದಲ್ಲಿ ನೆಡೆದ ನಕರ ರವರ ನಿವೃತ್ತ ನೌಕರರ ದಿನಾಚಾರಣೆ ಹಾಗೂ 29ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, ನಿವೃತ್ತ ನೌಕರರು ಸಂಘಟನೆಗಳನ್ನು ಮಾಡುವುದರ ಜೊತೆಗೆ ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು, ನಿವೃತ್ತ ನೌಕರರಲ್ಲಿ ಬಹುಪಾಲು ಮಂದಿ ಶಿಕ್ಷಕರಿದ್ದು ನಿವೃತ್ತ ಶಿಕ್ಷಕರು ಕಮಿಟಿಯೊಂದನ್ನು ರಚಿಸಿ ಹಿಂದುಳಿದ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿಯ ಜನಕ್ಕೆ ಶಿಕ್ಷಣ, ಮಾರ್ಗದರ್ಶನ, ನೀಡಿ ಮಾದರಿ ಗ್ರಾಮವನ್ನಾಗಿ ಮಾಡಬೇಕೆಂದರು. ನಕರ ರವರು ನಿವೃತ್ತ ನೌಕರರ ಪಿಂಚಣೆಯ ವಿಷಯವಾಗಿ ಕೇಂದ್ರ ಸಕರ್ಾರದ ವಿರುದ್ದ ಸುಪ್ರೀಂ ಕೋಟರ್್ನಲ್ಲಿ ಹೋರಾಟ ನೆಡಸಿದರ ಪರಿಣಾಮ ನ್ಯಾಯಾಲಯವು ಸಕರ್ಾರಿ ನಿವೃತ್ತರಿಗೆ ಪಿಂಚಣಿ ಒಂದು ಹಕ್ಕು ಇದು ಪ್ರತಿಯೊಬ್ಬರಿಗೂ ಸಿಗಬೇಕೆಂದು ತೀಪರ್ು ನೀಡಿದ್ದು ಈ ತೀಪರ್ಿನ ಕೀತರ್ಿ ನಕರರವರಿಗೆ ಸಲ್ಲುತ್ತದೆ ಎಂದರಲ್ಲದೆ ಈ ಕುರುಹಾಗಿ ನಕರ ಮತ್ತು ನಿವೃತ್ತ ನೌಕರರ ದಿನಾಚಾರಣೆಯನ್ನು ನೆಡಸಲಾಗುತ್ತದೆ ಎಂದರು.
ತುಮಕೂರಿನ ಸ.ಶಿ.ಇಲಾಖೆಯ ಉಪನಿದರ್ೇಶಕರಾದ ಈಶ್ವರಪ್ಪ ಮಾತನಾಡಿ ವಯಸ್ಸು ದೇಹಕ್ಕೆ ಮತ್ರ ಮನಸಿಗೆ ಅಲ್ಲ, ನಿವೃತ್ತಿ ಹೊದಿದ್ದರು ಸಮಾಜಮುಖಿಯಾಗಿ ಕೆಲಸ ಮಾಡುವ ಹುಮ್ಮುಸ್ಸನ್ನು ನಿವೃತ್ತ ನೌಕರರು ಹೊಂದಿದ್ದಾರೆ, ಗ್ರಾಮೀಣಾ ಭಾಗದಲ್ಲಿರುವ ಪ್ರಾಥಮಿಕ ಮತ್ತು ಪ್ರೌಡಶಾಲೆಯ ಆವರಣಗಳು ಸ್ವಚ್ಛತೆಯಿಂದ ದೂರವಿದ್ದು ಆ ಭಾಗದ ಪಿ.ಡಿ.ಒ. ಮತ್ತು ಎಸ್.ಡಿ.ಎಮ್.ಸಿ. ಹಾಗೂ ಶಿಕ್ಷಕರು ಜವಾಬ್ದಾರಿ ವಹಿಸಿ ಸ್ವಚ್ಛತೆಯನ್ನು ಕಾಪಾಡಿ ಮಕ್ಕಳಿಗೆ ಸುಂದರ ಪರಿಸರವನ್ನು ರೂಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ 75ವರ್ಷ ತುಂಬಿದ ನಿವೃತ್ತ ಹಿರಿಯ ನೌಕರರಿಗೆ ಮತ್ತು ಎಸ್.ಎಸ್.ಎಲ್.ಸಿ ಹಾಗು ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾಥರ್ಿಗಳಿಗೆ ಸನ್ಮಾನಿಸಲಾಯಿತು.
ತಾ.ನಿ.ನೌ.ಸಂಘದ ಅಧ್ಯಕ್ಷ ಸಿ.ರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಎಂ.ವಿ.ನಾಗರಾಜರಾವ್, ಗುಬ್ಬಿಯ ಸಂಘದ ಅಧ್ಯಕ್ಷ ರಾಮಯ್ಯ, ಸಂಘದ ಉಪಾಧ್ಯಕ್ಷೆ ಶಾರದಮ್ಮ, ಸಹ ಕಾರ್ಯದಶರ್ಿ ರಾಜಪ್ಪ, ಕಾಸಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ , ಜಿ.ಪಂ.ಮಾಜಿ ಅಧ್ಯಕ್ಷೆ ಜಯಮ್ಮದಾನಪ್ಪ, ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು. ಕಾರ್ಯದಶರ್ಿ ಸಿ.ಡಿ.ರುದ್ರಮುನಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ರಂಗನಾಥ್ ನಿರೂಪಿಸಿದರು. ಸಿ.ಕೆ.ವಿಶ್ವೇಶ್ವರಯ್ಯ ವಂದಿಸಿದರು.
No comments:
Post a Comment